ರುದ್ರಭಾಷ್ಯಸಮುಚ್ಚಯಪೀಠಿಕಾ ೨
ರುದ್ರಭಾಷ್ಯಸಮುಚ್ಚಯಪೀಠಿಕಾ ೨ ವಿಷ್ಣುಸೂರಿಭಾಷ್ಯಮ್ (ಆಧ್ಯಾತ್ಮಿಕಮ್) ಶಂಕರಶಾಸ್ತ್ರೀ-ಭಾರದ್ವಾಜ-ಮಾರುಲಕರ್-ವಿರಚಿತ-ಭೂಮಿಕಾ "ಪಾಯಾದಪಾಯಾಜ್ಜಗದೀಶ್ವರೋ ನಃ" "ಪಾಲಿಸಲಿ ಅಪಾಯದಿಂದ ಜಗದೀಶ್ವರನು ನಮ್ಮನ್ನು" ದಧಾನಮೇಕಾದಶಧಾ ವಿಭಕ್ತ- -ದೇಹಂ ವಿಶುದ್ಧಸ್ಫಟಿಕಪ್ರಕಾಶನಮ್ | ತೇಜೋನಿಧಿಂ ಶೂಲಿನಮಿನ್ದುಮೌಲಿಂ ವಿಚಿನ್ತಯೇತ್ ತತ್ರ ಸದೈವ ರುದ್ರಮ್ || ಹನ್ನೊಂದು ರೂಪಗಳಾಗಿ ವಿಭಾಗಿಸಿಕೊಂಡ ದೇಹವನ್ನು ಧರಿಸಿದ, ಶುಭ್ರವಾದ ಸ್ಫಟಿಕದಂತೆ ಕಂಗೊಳಿಸುವ, ತೇಜಸ್ಸಿನ ನಿಧಿಯಾದ, ತ್ರಿಶೂಲಧಾರಿಯಾದ, ಚಂದ್ರಮೌಳಿಯಾದ ರುದ್ರದೇವನನ್ನು ಚಿತ್ತದಲ್ಲಿ ಯಾವಾಗಲೂ ಧ್ಯಾನಿಸಬೇಕು. ರುದ್ರಂ ಸಂಸಾರರುದ್ರಂ ಶೋಕಂ ದ್ರಾವಯತಿ ಇತಿ ರುದ್ರಃ ಚರಾಚರಗುರುಃ ಮಹೇಶ್ವರಃ ತತ್-ಸ್ತಾವಕೋ ಅಧ್ಯಾಯಃ, ಏಕಾರ್ಥಕ-ವಿಷಯ-ಸಮಾಪ್ತಿ-ದ್ಯೋತಕೋ ಭಾಗವಿಶೇಷಃ, ಇತಿ ವ್ಯುತ್ಪತ್ತೇಃ ಕೃಷ್ಣಯಜುರ್ವೇದೀಯ-ತೈತ್ತಿರೀಯ-ಸಂಹಿತಾಯಾಂ ಚತುರ್ಥಕಾಣ್ಡೇ ಪಞ್ಚಮಃ ಪ್ರಪಾಠಕಃ "ನಮಸ್ತೇ ರುದ್ರ ಮನ್ಯವೇ" ಇತಿ ಆರಭ್ಯ "ಜಮ್ಭೇ ದಧಾಮಿ" ಇತಿ ಏತದ್-ಅನ್ತಃ, ಏಕಾದಶ-ಅನುವಾಕಾತ್ಮಕೋ ರುದ್ರಾಧ್ಯಾಯಃ, ಇತಿ ಉಚ್ಯತೇ | ರುದ್ರವೆಂದರೆ ಸಂಸಾರರುದ್ರ ಅಥವಾ ಸಂಸಾರದುಃಖವನ್ನು ದ್ರವಿಸುವಂತೆ ಕರಗುವಂತೆ ಮಾಡುವವನೆಂಬುದರಿಂದ ರುದ್ರನು, ಚರ-ಅಚರ / ಸ್ಥಾವರಜಂಗಮಾತ್ಮಕವಾದ ಸಮಸ್ತ ಸೃಷ್ಟಿಗೇ ಗುರುವು / ತಂದೆಯು / ಜ್ಞಾನಪ...