Posts

Showing posts from April, 2019

ಉಪನಿಷದ್ಭಾಷ್ಯಾರ್ಥಸಮುಚ್ಚಯಃ ೨— ತೈತ್ತಿರೀಯೋಪನಿಷತ್ ೧

 ತೈತ್ತಿರೀಯ ಉಪನಿಷತ್ತು ಪೀಠಿಕಾಭಾಗ  ಇದು ಕೃಷ್ಣಯಜುರ್ವೇದದ ತೈತ್ತಿರೀಯಸಂಹಿತೆಯ ವೇದಾಂತಭಾಗವಾಗಿದ್ದು, ತೈತ್ತಿರೀಯ ಆರಣ್ಯಕದ ೭,೮,೯ನೇ ಅಧ್ಯಾಯಗಳೇ ಅನುಕ್ರಮವಾಗಿ ಇದರ ೩ ಭಾಗಗಳಾಗಿ— ಶೀಕ್ಷಾವಲ್ಲೀ, ಬ್ರಹ್ಮಾನಂದವಲ್ಲೀ ಹಾಗೂ ಭೃಗುವಲ್ಲೀ ಎಂಬುದಾಗಿ— ವಿಸ್ತೃತವಾಗಿದೆ. ಇದು ಬ್ರಹ್ಮಚರ್ಯಾಶ್ರಮದಿಂ(ವಿದ್ಯಾರ್ಥಿದೆಸೆಯಿಂ)ದ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವ ಮೋಕ್ಷಾರ್ಥೀ ಬ್ರಹ್ಮಜಿಜ್ಞಾಸುಗಳಿಗೆ, ಸರಳವಾಗಿ ಅನುಷ್ಠಾನಕ್ಕೆ ತಂದು ಸಾಧನೆ ಮಾಡಬಹುದಾದ ಬಹಳಷ್ಟು ಮಹತ್ತ್ವಪೂರ್ಣ ವಿಚಾರಧಾರೆಗಳನ್ನೊಳಗೊಂಡಿದೆ.      ಮೊದಲನೆಯ ಶೀಕ್ಷಾವಲ್ಲೀ / ಶಿಕ್ಷಾವಲ್ಲಿಯು ೧೨ ಅನುವಾಕಗಳಿಂದ ಕೂಡಿದ್ದು, ‘ಏನೇನು ಕಲಿಯಬೇಕು, ವೇದೋಚ್ಚಾರಣಾಕ್ರಮ, ಅಧ್ಯಯನ ಮತ್ತು ನೀತಿಬೋಧಕವಿಚಾರ-ನಿಯಮಗಳ ಸಹಿತ ಮೂಲಭೂತ ಜ್ಞಾನದ ತಳಹದಿಯಾಗಿದೆ.             ಎರಡನೆಯದಾದ ಆನಂದವಲ್ಲಿ / ಬ್ರಹ್ಮಾನಂದವಲ್ಲಿಯು ‘ಬ್ರಹ್ಮವು ಆನಂದಸ್ವರೂಪ’ ಎಂಬುದನ್ನು ೯ ಅನುವಾಕಗಳಲ್ಲಿ ವಿವರಿಸುತ್ತದೆ.         ಮೂರನೆಯ / ಕೊನೆಯದಾದ ಭೃಗುವಲ್ಲಿಯು ಬ್ರಹ್ಮಾನಂದವನ್ನು ಪಡೆಯಬೇಕಾದರೆ ತಪಸ್ಸು ಮಾಡಬೇಕೆಂದು ಹೇಳುವುದು. ಇದರಲ್ಲೇ ವರುಣನು ತನ್ನ ಮಗ ಭೃಗುವಿಗೆ ವಾರುಣೀ ವಿದ್ಯೆಯನ್ನು ಉಪದೇಶಿಸಿದ ಕುರಿತು...