Posts

Showing posts from July, 2020

ತೈತ್ತಿರೀಯೋಪನಿಷತ್-ಸುರೇಶ್ವರವಾರ್ತಿಕ ೧

ತೈತ್ತಿರೀಯೋಪನಿಷತ್-ಸುರೇಶ್ವರವಾರ್ತಿಕ ೧ ಸತ್ಯಂ ಜ್ಞಾನಮನನ್ತಮೇಕಮಮಲಂ ಧ್ವಸ್ತಾಂಧಕಾರಂ ಪರಂ ನಿರ್ದ್ವೈತಂ ಹೃದಿ ಪದ್ಮಮಧ್ಯನಿಲಯಂ ನಿಃಶೇಷಧೀಸಾಕ್ಷಿಣಮ್ | ವೇದಾನ್ತೋಪನಿವಿಷ್ಟಬೋಧವಿಷಯಂ ಪ್ರತ್ಯಕ್ತಯಾ ಯೋಗಿನಾಂ ಭಕ್ತ್ಯಾ ತಂ ಪ್ರಣಿಪತ್ಯ ವೇದಶಿರಸೋ ವಕ್ಷ್ಯಾಮಿ ಸದ್ವಾರ್ತಿಕಮ್ || ೧ ||           ಸತ್ಯ-ಜ್ಞಾನ-ಅನಂತನೂ, ಏಕನೂ, ಅಮಲ (ನಿರ್ಮಲ/ನಿಷ್ಕಲ್ಮಷ)ನೂ, ಅಜ್ಞಾನಾಂಧಕಾರವನ್ನು ಹೋಗಲಾಡಿಸುವವನೂ, ಪರ (ಶ್ರೇಷ್ಠ)ನೂ, ಎರಡಿಲ್ಲದ ಏಕಮೇವ ಅದ್ವೈತಸ್ವರೂಪನೂ, ಸಕಲಜೀವರ ಹೃದಯಕಮಲಮಧ್ಯವಾಸಿಯೂ, ಸರ್ವರ ಬುದ್ಧಿಯ ಪ್ರವೃತ್ತಿಗಳಿಗೂ (ಕರ್ಮಸಾಕ್ಷಿಯಾದ ಸೂರ್ಯನಂತೆ) ಸಾಕ್ಷಿರೂಪನಾದ, ವೇದಸಾರರೂಪವಾದ ವೇದಾಂತ / ಉಪನಿಷತ್ತುಗಳು ಬೋಧಿಸುವ ವಿಷಯಗಳಿಗೆ ಬಹುಸಾಮೀಪ್ಯನಾಗಿ, ಅವುಗಳಲ್ಲೇ ಅಂತರ್ಗತನೂ ಆಗಿರುವ, ಯೋಗಿಗಳ ಒಮ್ಮುಖವಾದ ಧ್ಯಾನಕ್ಕೆ ಗೋಚರನಾದ, ಆ ಪರಮಾತ್ಮನನ್ನು ಅತಿಭಕುತಿಯಿಂದ ನಮಸ್ಕರಿಸಿ, (ಕೃಷ್ಣಯಜುರ್) ವೇದಕ್ಕೆ ಶಿರೋಪ್ರಾಯವಾದ (ತೈತ್ತಿರೀಯ) ಉಪನಿಷತ್ತಿಗೆ ಉತ್ತಮವಾದ ವಾರ್ತಿಕವನ್ನು (ಸ್ಪಷ್ಟಾರ್ಥವನ್ನು) ಹೇಳುವೆನು. ಯಸ್ಯೇದಂ ಸಕಲಾಮಲೇನ್ದುಕಿರಣಪ್ರಖ್ಯೈರ್ಯಶೋರಶ್ಮಿಭಿಃ ವ್ಯಾಪ್ತಂ ಯಶ್ಚ ಕೃಪಾಲುತಾಪರವಶಶ್ಚಕ್ರೇ ಹಿತಂ ದುಃಖಿನಾಮ್ | ಯದ್ವಾಣೀಕುಲಿಶಾವರುಗ್ಣಮತಯಃ ಪೇತುರ್ದಿಶಸ್ತಾರ್ಕಿಕಾಃ ಭಕ್ತ್ಯಾ ಪೂಜ್ಯತಮಂ ಪ್ರಣಮ್ಯ ತಮಹಂ ತದ್ಭಾಷ್ಯನೀತೌ ಯ...