ರುದ್ರಭಾಷ್ಯಸಮುಚ್ಚಯಪೀಠಿಕಾ ೧
ಶ್ರೀಭಗವತ್ತತ್ತ್ವರತ್ನಾಕರ ಭಾಗ ೩ ರುದ್ರಭಾಷ್ಯಸಮುಚ್ಚಯಃ ೧ ಪೀಠಿಕಾ (ಏಕವಿಂಶತ್ಯಕ್ಷರಾ ವೃತ್ತಿಃ— ಪ್ರಕೃತಿಶ್ಛನ್ದೋಜಾತಂ ಸ್ರಗ್ಧರಾವೃತ್ತಮ್— "ಮ್ರಭ್ನೈರ್ಯಾನಾಂ ತ್ರಯೇಣ ತ್ರಿಮುನಿಯತಿಯುತಾ ಸ್ರಗ್ಧರಾ ಕೀರ್ತಿತೇಯಮ್") ವನ್ದೇ ಶ್ರೀರುದ್ರಸೂನುಂ ಗಜಮುಖಮಮಲಂ ಸರ್ವವಿಘ್ನಾಪಹತ್ಯೈ ವನ್ದೇ ವಾಣೀಮಜಾಂ ತಾಂ ಸಕಲಜನನುತಾಂ ಸರ್ವವಿದ್ಯಾಪ್ರಸಿದ್ಧ್ಯೈ | ವನ್ದೇ ಚಾಚಾರ್ಯವೃನ್ದಂ ಜನನಮರಣವಿ- -ಚ್ಛೇದದಕ್ಷಂ ಕೃಪಾಯೈ ವನ್ದೇ ಮನ್ದಾರಗೌರಂ ಹರಿಯುತಗಿರಿಶಂ ರುದ್ರಮನ್ತ್ರಾರ್ಥಸಿದ್ಧ್ಯೈ || (ಸರ್ವವಿಘ್ನಾಪಹತ್ಯೈ) ಸರ್ವವಿಘ್ನಾಪಹಾರಕ್ಕಾಗಿ, (ಅಮಲಮ್) ಅಮಲನೂ, (ಶ್ರೀರುದ್ರಸೂನುಮ್) ಶಿವ-ಶಕ್ತಿಯರ ಸುತನೂ ಆದ, (ಗಜಮುಖಮ್) ಗಜಮುಖ ಗಣಪತಿಯನ್ನು, (ವನ್ದೇ) ವಂದಿಸುತ್ತೇನೆ. (ಸಕಲಜನನುತಾಮ್) ಸಕಲಜನರಿಂದ ನುತಿಗೈಯಲ್ಪಡುವವಳೂ, (ಅಜಾಂ ತಾಮ್) ಅಜನ ಪತ್ನಿಯಾಗಿರುವವಳಾದ, (ವಾಣೀಮ್) ವಾಣಿಯನ್ನು, (ಸರ್ವವಿದ್ಯಾಪ್ರಸಿದ್ಧ್ಯೈ) ಸರ್ವವಿದ್ಯೆಗಳ ಪ್ರಕೃಷ್ಟವಾದ ಸಿದ್ಧಿಗಾಗಿ, (ವನ್ದೇ) ವಂದಿಸುತ್ತೇನೆ. (ಚ) ಹಾಗೆಯೇ, (ಜನನ-ಮರಣ-ವಿಚ್ಛೇದ-ದಕ್ಷಮ್) ಜನನ-ಮರಣವೆಂಬ ಸಂಸಾರಚಕ್ರದಿಂದ ವಿಚ್ಛೇದ / ಬಿಡುಗಡೆ / ಮುಕ್ತಿಯನ್ನು ಉಂಟುಮಾಡಲು ಸಮರ್ಥವಾದ, (ಆಚಾರ್ಯವೃನ್ದಮ್) ಆಚಾರ್ಯಪರಂಪರೆಗಳ ಸಮೂಹವನ್ನು, (ಕೃಪಾಯೈ ವನ್ದೇ) ಗುರುಕೃಪಾರ್ಥವಾಗಿ ವಂದಿಸುತ್ತೇನೆ. (ಮನ್ದಾರಗೌರಮ್) ಮಂದಾರಪುಷ್ಪದಂತಹ ಗೌರವರ್ಣದಿಂದ ಶೋಭಿತನಾದ, (ಹರಿಯು...