Posts

Showing posts from November, 2019

ರುದ್ರಭಾಷ್ಯಸಮುಚ್ಚಯಪೀಠಿಕಾ ೩

ರುದ್ರಭಾಷ್ಯಸಮುಚ್ಚಯಪೀಠಿಕಾ ೩ ಆರ್. ಯಲ್. ಕಶ್ಯಪರ ಅರವಿಂದವಿಚಾರಾಧಾರಿತ ಆಧ್ಯಾತ್ಮಿಕಭಾಷ್ಯದ ಭೂಮಿಕೆಯಿಂದ ಶಿವ-ರುದ್ರ ನಮಕ ಸೂಕ್ತ  (೧೩೩ ಯಜುಸ್ ಮಂತ್ರಗಳು, ೩೦ ಋಕ್ ಮಂತ್ರಗಳು ಮತ್ತು  ಋಗ್ವೇದದಲ್ಲೂ ಇರುವ ೭ ಋಕ್ ಮಂತ್ರಗಳು) ಪ್ರಸಿದ್ಧವಾದ ಪುರುಷಸೂಕ್ತ ಹಾಗೂ ಗಾಯತ್ರೀಮಂತ್ರಗಳ ಬಳಿಕ ನಾಲ್ಕು ವೇದಗಳಲ್ಲೂ ಅತ್ಯಂತ ಪ್ರಸಿದ್ಧವಾಗಿರುವ ಭಾಗವೆಂದರೆ ಬಹುಶಃ ರುದ್ರಾಧ್ಯಾಯವೇ. ಕೆಲವರು ಇದನ್ನು ಪ್ರತಿನಿತ್ಯ ಪಠಿಸುತ್ತಾರೆ. ಬಹುಮಂದಿ ಕನಿಷ್ಠಪಕ್ಷ ವರ್ಷಕ್ಕೊಮ್ಮೆಯೋ, ಶಿವರಾತ್ರಿಯಂದೋ ಸಾಮೂಹಿಕ / ವೈಯಕ್ತಿಕವಾಗಿ ಪಠಿಸುತ್ತಾರೆ. ಸಪ್ತ(೭)ಕಾಂಡಾತ್ಮಕವಾದ ತೈತ್ತಿರೀಯಕೃಷ್ಣಯಜುಸ್ಸಂಹಿತೆಯ ೪ನೇ ಕಾಂಡದಲ್ಲಿ ಬರುವ ೧೧ ಅನುವಾಕಗಳಿಂದ ಕೂಡಿದ ಈ ರುದ್ರಪ್ರಶ್ನವನ್ನು ಶತರುದ್ರೀಯಹವನಕ್ಕೂ, ಪ್ರಸ್ತುತ ಹೆಚ್ಚಾಗಿ ಪ್ರಚಲಿತದಲ್ಲಿರುವ ರುದ್ರಾಭಿಷೇಕಕ್ಕೂ ವಿನಿಯೋಗಿಸುತ್ತಾರೆ. ಈ ರುದ್ರಾಭಿಷೇಕದಲ್ಲಿ ಮೊದಲು ಲಘುನ್ಯಾಸ / ಮಹಾನ್ಯಾಸ, ಬಳಿಕ ರುದ್ರಾಧ್ಯಾಯ ಹಾಗೂ ಸರ್ವೋ ವೈ ರುದ್ರ / ತ್ವರಿತ ರುದ್ರ ಮತ್ತು ಕೊನೆಗೆ ಚಮಕಪ್ರಶ್ನ (ತೈ.ಸಂ.ಕಾಂಡ ೪. ಪ್ರಪಾಠಕ ೭)— ಇವುಗಳನ್ನು ಪಠಿಸಲಾಗುತ್ತದೆ.  { ಲಘುನ್ಯಾಸಮಂತ್ರದ ವಿಸ್ತೃತವಾದ ವಿವರಣೆಯನ್ನು ಪ್ರಸ್ತುತ ಕೃತಿಯ ಲೇಖಕ-ಸಂಪಾದಕರಾದ ಡಾ || ಕೃಷ್ಣಮೂರ್ತಿಶಾಸ್ತ್ರೀ, ದಂಬೆ-ಪುಣಚ— ಇವರದೇ ಇನ್ನೊಂದು ಕೃತಿಯಾದ "ಲಘುನ್ಯಾಸಮಂತ್ರಾರ್ಥವಿಸ್ತಾರಃ" ದಲ್ಲಿ ನೋಡಬಹುದು. ...