ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪
*ತೈತ್ತಿರೀಯ ಕೃಷ್ಣಯಜುರ್ವೇದಭಾಷ್ಯ ೪*
_(ಅಷ್ಟಕ ೧, ಪ್ರಪಾಠಕ ೧, ಅನುವಾಕ ೪)_
*ಕರ್ಮಣೇ ವಾಂ ದೇವೇಭ್ಯಃ ಶಕೇಯಂ ವೇಷಾಯ ತ್ವಾ ಪ್ರತ್ಯುಷ್ಟಗ್ಂ ರಕ್ಷಃ ಪ್ರತ್ಯುಷ್ಟಾ ಅರಾತಯೋ ಧೂರಸಿ ಧೂರ್ವ ಧೂರ್ವಂತಂ ಧೂರ್ವ ತಂ ಯೋऽಸ್ಮಾನ್ ಧೂರ್ವತಿ ತಂ ಧೂರ್ವಯಂ ವಯಂ ಧೂರ್ವಾಮಸ್ತ್ವಂ ದೇವಾನಾಮಸಿ ಸಸ್ನಿತಮಂ ಪಪ್ರಿತಮಂ ಜುಷ್ಟತಮಂ ವಹ್ನಿತಮಂ ದೇವಹೂತಮಮಹ್ರುತಮಸಿ ಹವಿರ್ಧಾನಂ ದೃಗ್ಂಹಸ್ವ ಮಾ ಹ್ವಾರ್ಮಿತ್ರಸ್ಯ ತ್ವಾ ಚಕ್ಷುಷಾ ಪ್ರೇಕ್ಷೇ ಮಾ ಭೇರ್ಮಾ ಸಂ ವಿಕ್ಥಾ ಮಾ ತ್ವಾ (೧) ಹಿಗ್ಂಸಿಷಮುರು ವಾತಾಯ ದೇವಸ್ಯ ತ್ವಾ ಸವಿತುಃ ಪ್ರಸವೇऽಶ್ವಿನೋರ್ಬಾಹುಭ್ಯಾಂ ಪೂಷ್ಣೋ ಹಸ್ತಾಭ್ಯಾಮಗ್ನಯೇ ಜುಷ್ಟಂ ನಿರ್ವಪಾಮ್ಯಗ್ನೀಷೋಮಾಭ್ಯಾಮಿದಂ ದೇವಾನಾಮಿದಮು ನಃ ಸಹ ಸ್ಫಾತ್ಯೈ ತ್ವಾ ನಾರಾತ್ಯೈ ಸುವರಭಿ ವಿ ಖ್ಯೇಷಂ ವೈಶ್ವಾನರಂ ಜ್ಯೋತಿರ್ದೃಗ್ಂಹನ್ತಾಂ ದುರ್ಯಾ ದ್ಯಾವಾಪೃಥಿವ್ಯೋರುರ್ವನ್ತರಿಕ್ಷಮನ್ವಿಹ್ಯದಿತ್ಯಾಸ್ತ್ವೋಪಸ್ಥೇ ಸಾದಯಾಮ್ಯಗ್ನೇ ಹವ್ಯಗ್ಂ ರಕ್ಷಸ್ವ (೨) ||*
- _*ಪದಚ್ಛೇದಃ—*_ _ಕರ್ಮಣೇ, ವಾಮ್, ದೇವೇಭ್ಯಃ, ಶಕೇಯಮ್, ವೇಷಾಯ, ತ್ವಾ, ಪ್ರತಿ-ಉಷ್ಟಮ್, ರಕ್ಷಃ, ಪ್ರತಿ-ಉಷ್ಟಾಃ, ಅರಾತಯಃ, ಧೂಃ, ಅಸಿ, ಧೂರ್ವ, ಧೂರ್ವನ್ತಮ್, ಧೂರ್ವ, ತಮ್, ಯಃ, ಅಸ್ಮಾನ್, ಧೂರ್ವತಿ, ತಮ್, ಧೂರ್ವ, ಯಮ್, ವಯಮ್, ಧೂರ್ವಾಮಃ, ತ್ವಮ್, ದೇವಾನಾಮ್, ಅಸಿ, ಸಸ್ನಿ-ತಮಮ್, ಪಪ್ರಿ-ತಮಮ್, ಜುಷ್ಟ-ತಮಮ್, ವಹ್ನಿ-ತಮಮ್, ದೇವ-ಹೂತಮಮ್, ಅಹ್ರುತಮ್, ಅಸಿ, ಹವಿಃ-ಧಾನಮ್, ದೃಂಹಸ್ವ, ಮಾ, ಹ್ವಾಃ, ಮಿತ್ರಸ್ಯ, ತ್ವಾ, ಚಕ್ಷುಷಾ, ಪ್ರ, ಈಕ್ಷೇ, ಮಾ, ಭೇಃ, ಮಾ, ಸಮ್, ವಿಕ್ಥಾಃ, ಮಾ, ತ್ವಾ (೧), ಹಿಂಸಿಷಮ್, ಉರು, ವಾತಾಯ, ದೇವಸ್ಯ, ತ್ವಾ, ಸವಿತುಃ, ಪ್ರ-ಸವೇ, ಅಶ್ವಿನೋಃ, ಬಾಹು-ಭ್ಯಾಮ್, ಪೂಷ್ಣಃ, ಹಸ್ತಾಭ್ಯಾಮ್, ಅಗ್ನಯೇ, ಜುಷ್ಟಮ್, ನಿಃ, ವಪಾಮಿ, ಅಗ್ನೀ-ಸೋಮಾಭ್ಯಾಮ್, ಇದಮ್, ದೇವಾನಾಮ್, ಇದಮ್, ಉ, ನಃ, ಸಹ, ಸ್ಫಾತ್ಯೈ, ತ್ವಾ, ನ, ಅರಾತ್ಯೈ, ಸುವಃ, ಅಭಿ, ವಿ, ಖ್ಯೇಷಮ್, ವೈಶ್ವಾನರಮ್, ಜ್ಯೋತಿಃ, ದೃಂಹನ್ತಾಮ್, ದುರ್ಯಾಃ, ದ್ಯಾವಾ-ಪೃಥಿವ್ಯೋಃ, ಉರು, ಅನ್ತರಿಕ್ಷಮ್, ಅನು, ಇಹಿ, ಅದಿತ್ಯಾಃ, ತ್ವಾ, ಉಪ-ಸ್ಥೇ, ಸಾದಯಾಮಿ, ಅಗ್ನೇ, ಹವ್ಯಮ್, ರಕ್ಷಸ್ವ (೨) ||_
*೧) ಕರ್ಮಣೇ ವಾಂ ದೇವೇಭ್ಯಃ ಶಕೇಯಮ್—*
ಕರ್ಮಣೇ ವಾಂ ದೇವೇಭ್ಯಃ ಶಕೇಯಮ್-- ಸಾಯಣ, ಭಟ್ಟಭಾಸ್ಕರ ಹಾಗೂ ಕಶ್ಯಪ ಭಾಷ್ಯ
*ಸಾಯಣಭಾಷ್ಯ*
ಹಿಂದಿನ ಮೂರು ಅನುವಾಕಗಳಲ್ಲಿ, ಯಜ್ಞಕ್ಕಾಗಿ, ಅಮಾವಾಸ್ಯೆಯ ದಿನ ಹಗಲಿನ ಆಚರಣೆಗಳಾದ ವತ್ಸಾಪಾಕರಣದ (ಕರುವನ್ನು ಹಸುವಿನಿಂದ ಬೇರೆ ಮಾಡುವುದರ, ಗೋವುಗಳನ್ನು ಮೇಯಲು ಕಳುಹಿಸುವುದರ) ಬಗ್ಗೆ ೧ ನೆಯ ಅನುವಾಕದಲ್ಲೂ, ಬರ್ಹಿರಾಹರಣ (ದರ್ಭೆ ಸಂಗ್ರಹ)ದ ಕುರಿತು ೨ ನೆಯ ಅನುವಾಕದಲ್ಲೂ ಹೇಳಿದ್ದು, ೩ ನೆಯ ಅನುವಾಕದಲ್ಲಿ ಅಮಾವಾಸ್ಯಾ ಪರ್ವದ ರಾತ್ರಿ ಮಾಡುವ, ಹವಿಸ್ಸಿಗೆ ಅಗತ್ಯವಾದ ದನದ ಹಾಲು ಕರೆಯುವ, ದೋಹನಾರ್ಥ ಮಂತ್ರಗಳು ಉಕ್ತವಾಗಿವೆ. ಹೀಗೆ, ಮೊದಲ ೩ ರಲ್ಲಿ ಅಮಾವಾಸ್ಯೆಯ ದಿನ ಮಾಡಬೇಕಾದದ್ದನ್ನು ಹೇಳಿ, ಈಗ ೪ ರಿಂದ ೧೩ ನೆಯ ಅನುವಾಕಗಳ ವರೆಗಿನ ಒಟ್ಟು ಹತ್ತು ಅನುವಾಕಗಳಲ್ಲಿ ಅಮಾವಾಸ್ಯೆಯ ಮರುದಿನ ಅರ್ಥಾತ್ ಪ್ರತಿಪದೆ / ಪ್ರಥಮಾ ತಿಥಿ / ಪಾಡ್ಯದಂದು ಮಾಡಬೇಕಾದವುಗಳ ಬಗ್ಗೆ ಹೇಳಲಾಗಿದೆ.
ಅದರಲ್ಲೂ ಈ ೪ ನೆಯ ಅನುವಾಕದಲ್ಲಿ ಹವಿರ್ನಿರ್ವಾಪ (ಹವಿಸ್ಸಿನ ದಾನ) ದ ಕುರಿತು ಹೇಳಲಾಗಿದೆ.
_*ವಿನಿಯೋಗ—*_
*ಬೌಧಾಯನಃ—* _“ಅಥ ಪ್ರಾತರ್ಹುತೇ ಅಗ್ನಿಹೋತ್ರೇ ಹಸ್ತೌ ಸಂಮೃಶತೇ ಕರ್ಮಣೇ ವಾಂ ದೇವೇಭ್ಯಃ ಶಕೇಯಮ್ ಇತಿ” ||_ (ಬೌ.ಶ್ರೌತಸೂತ್ರ.೧.೪)
*ಆಪಸ್ತಂಬಃ—* _“ಕರ್ಮಣೇ ವಾಂ ದೇವೇಭ್ಯಃ ಶಕೇಯಮ್ ಇತಿ ಹಸ್ತೌ ಅವನಿಜ್ಯ” ||_ (ಆ.ಶ್ರೌ.ಸೂ.೧.೧೫.೪)
ಬೌಧಾಯನರು ಹೇಳುತ್ತಾರೆ— “ಈ ಮಂತ್ರವನ್ನುಚ್ಚರಿಸುತ್ತಾ ಪ್ರಾತರಗ್ನಿಹೋತ್ರದಲ್ಲಿ ಕೈಗಳನ್ನು ಅಗ್ನಿಗೆ ಚೆನ್ನಾಗಿ ಸ್ಪರ್ಶಿಸಿ ಅದರ ಶಾಖದ ಅನುಭವವನ್ನು ಪಡೆಯಲಾಗುತ್ತದೆ.” ಸಮ್ + ಮೃಶತೇ— ಸಮ್ಯಕ್ / ಚೆನ್ನಾಗಿ, ಮೃಶ ಆಮರ್ಶನೇ (ಸ್ಪರ್ಶೇ ಸ್ಪರ್ಶನೇ ವಾ) ಪ್ರಣಿಧಾನೇ (ಪ್ರಯತ್ನೇ ಸಮಾಧೌ ಪ್ರವೇಶನೇ ಅಭಿನಿವೇಶೇ ಭಕ್ತಿವಿಶೇಷೇ ಅರ್ಪಣೇ ಮನಸೋ ವಿಷಯಾನ್ತರಸಂಚಾರಾಭಾವರೂಪೇ ಐಕಾಗ್ರ್ಯೇ ವಾ) ವಾ— “ಮೃಶತೇ” ಅಂದರೆ ಸ್ಪರ್ಶಿಸುವುದು, ಮುಟ್ಟುವುದು, ಪ್ರಯತ್ನಿಸುವುದು, ಸಮಾಧಿ / ತನ್ಮಯತೆ, ಪ್ರವೇಶಿಸುವುದು, ಇಡುವುದು, ಭಕ್ತಿಯ ಒಂದು ವಿಧ, ಸಮರ್ಪಣೆ, ಅನ್ಯವಿಚಾರಗಳಿಗೆ ಹೋಗದಂತೆ ಮನಸ್ಸನ್ನು ಒಂದು ಉದ್ದಿಷ್ಟ ವಿಚಾರದಲ್ಲೇ ಏಕಾಗ್ರಗೊಳಿಸುವುದು— ಮುಂತಾಗಿ ಅರ್ಥಗಳಿವೆ. ಹೀಗಾಗಿ, ಇಲ್ಲಿ ಹಸ್ತಗಳನ್ನು ಯಜ್ಞಕರ್ತೃವು ಯಜ್ಞಾಗ್ನಿಗೆ ಸ್ಪರ್ಶಿಸುವುದು, ಒಡ್ಡುವುದು, ಸ್ವರ್ಶಿಸಲು ಪ್ರಯತ್ನಿಸುವುದು, ತಲ್ಲೀನ ಚಿತ್ತವಾಗಿರುವುದು, ಅಗ್ನಿಗೆ ಹಸ್ತಗಳನ್ನು ಪ್ರವೇಶಿಸುವಂತೆ ಮಾಡುವುದು, ಅಗ್ನಿಯಲ್ಲಿ ಹಸ್ತಗಳನ್ನಿಡುವಿಕೆ, ಅಗ್ನಿದೇವನಲ್ಲಿ ವಿಶೇಷವಾದ ಭಕ್ತಿಯಿಂದ ಮುಟ್ಟಿ ಭಜಿಸುವುದು, ಅಗ್ನಿಗೆ ಹಸ್ತಗಳ ತಾತ್ಕಾಲಿಕ ಸಮರ್ಪಣೆ, ಚಿತ್ತೈಕಾಗ್ರದಿಂದ ಅಗ್ನಿಯಲ್ಲೇ ಮನವಿಟ್ಟು ಸ್ಪರ್ಶಿಸುವುದು— ಎಂದು ಮುಂತಾಗಿ ಅರ್ಥೈಸಬಹುದು.
ಆಪಸ್ತಂಬರ ಅಭಿಪ್ರಾಯ— “ಈ ಮಂತ್ರಪಠಣದ ಮೂಲಕ ಹಸ್ತಗಳನ್ನು ಪ್ರಾತರಗ್ನಿಹೋತ್ರದ ಅಗ್ನಿಗೊಡ್ಡಿ ಪವಿತ್ರೀಕರಿಸಿ, ಅಗ್ನಿಯ ಶಕ್ತಿಯನ್ನು ಸ್ವೀಕಾರ ಮಾಡುವುದು.” _(ಅವ-ನಿಜ್ಯ— ನಿಜ್ ಧಾತುಃ ಶೌಚಪೋಷಣಯೋಃ; ಶುಚಿಗೊಳಿಸುವಿಕೆ ಹಾಗೂ ಪೋಷಣಾರ್ಥಕ ನಿಜ್ ಧಾತು)_
_*ಭಾಷ್ಯ—*_
*(ಹೇ ಹಸ್ತೌ !)* ಎಲೈ ನನ್ನ ಹಸ್ತ / ಅಂಗೈ ಗಳೇ !, *(ದೇವಾನಾಂ ಸಂಬಂಧಿನೇ ಕರ್ಮಣೇ)* ದೇವತೆಗಳಿಗೆ ಸಂಬಂಧಿಸಿದ ವೇದೋಕ್ತಕರ್ಮಗಳಿಗಾಗಿ, *(ಪ್ರಕ್ಷಾಲಿತೌ ಯುವಾಂ)* ಪ್ರಕ್ಷಾಲನೆ ಮಾಡಿದ / ತೊಳೆದ ನಿಮ್ಮಿಬ್ಬರನ್ನು / ೨ ಹಸ್ತಗಳನ್ನು, *(ಪ್ರಯೋಕ್ತುಂ ಶಕ್ತೋ ಭೂಯಾಸಮ್ ||)* ಪ್ರಯೋಗಿಸಲು / ಬಳಸಲು / ಉಪಯೋಗಿಸಲು (ನಾನು) ಶಕ್ತನಾಗುವಂತೆ ಆಗಲಿ. *(ವಿನಾ ಅಪಿ ಪ್ರಕ್ಷಾಲನಂ ಲೌಕಿಕಶಕ್ತೇಃ)* ತೊಳೆಯದ ಹೊರತೂ / ತೊಳೆಯದಿದ್ದರೂ ಸಹಜವಾಗಿ ಹಸ್ತಗಳು ಲೌಕಿಕಶಕ್ತಿಯುಳ್ಳವುಗಳಾದರೂ, *(ಸದ್ಭಾವಾತ್ ಶಾಸ್ತ್ರೀಯ-ಶಕ್ತ್ಯರ್ಥಃ)* ಉತ್ತಮ ಭಾವನೆಯಿಂದ / ಸದ್ಭಾವಪೂರ್ಣವಾಗಿ ವೇದಶಾಸ್ತ್ರೋಕ್ತರೀತ್ಯಾ ದೇವತಾಕರ್ಮವನ್ನು ಆಚರಿಸಲು ಬೇಕಾದ ವಿಶೇಷವಾದ ಇಚ್ಛಾ-ಜ್ಞಾನ-ಕ್ರಿಯಾಶಕ್ತಿತ್ರಯಕ್ಕಾಗಿ, *(ಅಯಂ ಮನ್ತ್ರಃ ಪ್ರಕ್ಷಾಲನಹೇತುಃ ಇತಿ ಅಭಿಪ್ರೇತ್ಯ ಆಹ— )* ಈ ಮಂತ್ರವು ಪ್ರಕ್ಷಾಲನೆಗಾಗಿ / ವಿಶೇಷವಾಗಿ ತೊಳೆಯುವುದಕ್ಕಾಗಿ ಎಂದು ಅಭಿಪ್ರಾಯಿಸಿ / ಅಭಿಪ್ರಾಯಪಟ್ಟು ಹೇಳುತ್ತಾನೆ— *(“ಕರ್ಮಣೇ ವಾಂ ದೇವೇಭ್ಯಃ ಶಕೇಯಮ್ ಇತಿ ಆಹ ಶಕ್ತ್ಯೈ” (ತೈ.ಬ್ರಾ. ೩.೨.೪) ಇತಿ |)* “ದೇವತಾಕರ್ಮಕ್ಕಾಗಿ ನಿಮ್ಮಿಬ್ಬರನ್ನು / ಹಸ್ತಗಳೆರಡನ್ನು ಬಳಸಲು ಶಕ್ತನಾಗುವಂತೆ ಆಗಲಿ ಎಂದು ವಿಶೇಷಶಕ್ತಿಗಾಗಿ ಹೇಳಿರುವನು” ಎಂದಿದೆ ತೈತ್ತಿರೀಯ ಬ್ರಾಹ್ಮಣ.
*(ಕಂಚಿತ್ ಮನ್ತ್ರಮ್ ಉತ್ಪಾದ್ಯ)* ಇನ್ನಾವುದೋ ಮಂತ್ರವನ್ನು ದರ್ಶಿಸಿ / ಕಂಡು / ಅನ್ವೇಷಿಸಿ, *(ತೃಣ-ಆಸ್ತರಣೇ ವಿನಿಯುಙ್ಕ್ತೇ)* ಹುಲ್ಲು ಹಾಸಲು ವಿನಿಯೋಗಿಸುತ್ತಾನೆ— *(“ಯಜ್ಞಸ್ಯ ವೈ ಸಂತತಿಮ್ ಅನು ಪ್ರಜಾಃ ಪಶವಃ ಯಜಮಾನಸ್ಯ ಸಂತಾಯನ್ತೇ |) ಯಜ್ಞದ ಪರಂಪರೆಯ ವಿಸ್ತಾರದೊಂದಿಗೆ / ವಿಸ್ತಾರವನ್ನು ಅನುಸರಿಸಿ, ಯಜಮಾನನೆನಿಸಿದ ಯಜ್ಞಕರ್ತೃವಿನ ಪುತ್ರಾದಿಸಂತತಿ ಹಾಗೂ ಗೋವು ಮುಂತಾದ ಪಶುಸಂಪತ್ತೂ ವಿಸ್ತರಿಸಲ್ಪಡುವುವು / ಮುಂದುವರೆಸಲ್ಪಡುವುವು ಹಾಗೂ ವೃದ್ಧಿಸಲ್ಪಡುವುವು. *(ಯಜ್ಞಸ್ಯ ವಿಚ್ಛಿತ್ತಿಮ್ ಅನು ಪ್ರಜಾಃ ಪಶವಃ ಯಜಮಾನಸ್ಯ ವಿಚ್ಛಿದ್ಯನ್ತೇ |)* ಯಜ್ಞಪರಂಪರೆಯ ವಿಚ್ಛಿನ್ನತೆಯನ್ನು / ತುಂಡಾಗುವಿಕೆಯನ್ನು ಅನುಸರಿಸಿ, ಯಜಮಾನನ ಪ್ರಜಾಸಂಪತ್ತು ಹಾಗೂ ಪಶುಸಂಪತ್ತೂ ಸಹ ವಿಚ್ಛಿನ್ನಗೊಳ್ಳುತ್ತವೆ. ಯಜ್ಞವೆಂದರೆ ಸೇವೆ, ದಾನ ಮುಂತಾಗಿಯೂ ಅರ್ಥಗಳಿವೆ. ದ್ರವ್ಯಯಜ್ಞ / ಹೋಮ-ಹವನ, ತಪೋಯಜ್ಞ, ಯೋಗಯಜ್ಞ, ಜ್ಞಾನಯಜ್ಞ, ಸ್ವಾಧ್ಯಾಯಯಜ್ಞ ಮುಂತಾಗಿ ಯಜ್ಞಭೇದಗಳಿವೆಯೆಂಬುದು ಗೀತಾಚಾರ್ಯೋಕ್ತಿ. ಇಂತಹ ಯಜ್ಞಪರಂಪರೆಯನ್ನು ಅವಿಚ್ಛಿನ್ನವಾಗಿ ಮುಂದುವರಿಸಬೇಕೆಂಬುದು ಈ ಬ್ರಾಹ್ಮಣದ ಸಂದೇಶ. (“ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾऽಪರೇ | ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ ||”)
*(ಯಜ್ಞಸ್ಯ ಸಂತತಿಃ ಅಸಿ ಯಜ್ಞಸ್ಯ ತ್ವಾ ಸಂತತ್ಯೈ ಸ್ತೃಣಾಮಿ ಸಂತತ್ಯೈ ತ್ವಾ ಯಜ್ಞಸ್ಯ ಇತಿ ಆಹವನೀಯಾತ್ ಸಂತನೋತಿ |)* ನೀನು ಮುಂದಿನಯಜ್ಞದ ಮೂಲವೂ ಹಿಂದಿನ / ಇಂದಿನಯಜ್ಞದ ಶೇಷವೂ / ಸಂತತಿಯೂ ಆಗಿರುವೆ ಎಂದೂ, ಯಜ್ಞದ ವಿಸ್ತಾರಕ್ಕಾಗಿ, ಉಳಿವಿಗಾಗಿ ನಿನ್ನನ್ನು ಪರಿಸ್ತರಣಮಾಡಿ ಯಜ್ಞವೇದಿಯ ಸುತ್ತಲೂ ಹಾಸುವೆನು ಎಂದು ಆಹವನೀಯಾಗ್ನಿಯ ಸುತ್ತಲೂ ಹುಲ್ಲನ್ನು ಹಾಸುತ್ತಾನೆ. *{ಯಜಮಾನಸ್ಯ ಪ್ರಜಾಯೈ ಪಶೂನಾಗ್ಂ ಸಂತತ್ಯೈ” (ತೈ.ಬ್ರಾ.೩.೨.೪) ಇತಿ |}* ಯಜಮಾನನ ವಂಶಾಭಿವೃದ್ಧಿ ಹಾಗೂ ಪಶುಸಂತತಿವೃದ್ಧಿಗಾಗಿ ಇದನ್ನು ಮಾಡಲಾಗುತ್ತದೆ ಎನ್ನುತ್ತದೆ ತೈತ್ತಿರೀಯಬ್ರಾಹ್ಮಣ. *(‘ಯಜ್ಞಸ್ಯ ತ್ವಾ ಸಂತತ್ಯೈ’’ ಇತಿ-ಏಷಾಂ ಪದಾನಾಮ್ ಆದರಾರ್ಥೇನ ದ್ವಿಃ-ಅಭ್ಯಾಸೇನ ಭೂಮಿಃ ಯಥಾ ನ ದೃಶ್ಯತೇ ತಥಾ ಸ್ತರಣೀಯಮ್ ಇತಿ ಸೂಚ್ಯತೇ |)* “ಯಜ್ಞಸ್ಯ ತ್ವಾ ಸಂತತ್ಯೈ” ಎಂಬ ಪದಗಳನ್ನು ಆದರಾರ್ಥವಾಗಿ ೨ ಬಾರಿ ಪಠಿಸಿ ಯಾಗಭೂಮಿಯು ಕಾಣದಷ್ಟು ದಪ್ಪವಾಗಿ ಹುಲ್ಲುಹಾಸನ್ನು ಹಾಸಬೇಕೆಂದು ಸೂಚಿತವಾಗಿದೆ. *(ಅತಃ, ಏವ ಅನ್ಯತ್ರ ಆಮ್ನಾತಮ್— “ಅನತಿದೃಶ್ನಗ್ಂ ಸ್ತೃಣಾತಿ” (ತೈ.ಸಂ.೨.೬.೫) ಇತಿ |)* ಹೀಗಾಗಿಯೇ, ಬೇರೆಡೆ ತೈತ್ತಿರೀಯಸಂಹಿತೆಯಲ್ಲೂ ಹೇಳಿದೆ— ಅತಿಯಾಗಿ / ಹೆಚ್ಚು ಭೂಭಾಗದ ದರ್ಶನವಾಗದಂತೆ ಹುಲ್ಲಹಾಸನ್ನು ಹಾಸುವನು ಎಂದು. *(ಸ್ತರಣಪ್ರದೇಶಸ್ಯ ಆದ್ಯನ್ತೌ ಕಲ್ಪೇ ದರ್ಶಿತೌ— “ಗಾರ್ಹಪತ್ಯಾತ್ ಪ್ರಕ್ರಮ್ಯ ಸಂತತಾಮ್ ಉಲಪರಾಜೀಗ್ಂ ಸ್ತೃಣಾತಿ ಆಹವನೀಯಾತ್ ” (ಆಪ.ಶ್ರೌ.ಸೂ.೧.೧೫.೪) ಇತಿ |)* ಹುಲ್ಲುಹಾಸುವ ಜಾಗದ ಆದಿ-ಅಂತಗಳು ಆಪಸ್ತಂಬಕಲ್ಪಸೂತ್ರದಲ್ಲಿ ತೋರಿಸಲ್ಪಟ್ಟಿವೆ— ಗೃಹಪತಿಯ ಗೃಹದೊಳಗಿನ ಅಗ್ನಿಯಾದ ಗಾರ್ಹಪತ್ಯಾಗ್ನಿ ಇರುವಲ್ಲಿಂದ ತೊಡಗಿ / ಉಪಕ್ರಮಿಸಿ / ಆರಂಭಿಸಿ, ಮಧ್ಯೆ ಎಲ್ಲೂ ಅಂತರವಿಲ್ಲದಂತೆ ನಿರಂತರವಾಗಿಯೂ, ಚೆನ್ನಾಗಿ ವಿಸ್ತೃತವಾಗಿಯೂ (ಸಮ್ಯಕ್ ತತಾಮ್— ಸಂತತಾಮ್), ಯಾಗಭೂಮಿಯಲ್ಲಿನ ಆಹವನೀಯಾಗ್ನಿಯಲ್ಲಿಯವರೆಗೆ ಉಲಪರಾಜಿ / ಮೆತ್ತನೆಯ ಹುಲ್ಲಿನ ಸಮೂಹ / ಕಂತೆ ಗಳನ್ನು ಹರಡುತ್ತಾನೆ ಎಂದು. *(ಉಲಪರಾಜಿಃ ತೃಣ ( / ಸ್ತರಣ— ಸ್ತೃ ಆಚ್ಛಾದನೇ)ವಿಶೇಷಃ |)* ಉಲಪವೆಂದರೆ ವೀರುತ್ ಎಂಬ ಗುಲ್ಮಜಾತಿಯ ಸಸ್ಯ ಅಥವಾ ಒಂದು ಜಾತಿಯ ಮೆತ್ತನೆಯ ಹುಲ್ಲು ಅಥವಾ ನೆಲಕ್ಕೆ ಹಾಸುವಂಥ ಹುಲ್ಲಿನ ಒಂದು ಪ್ರಭೇದ.
*(ಪ್ರಣಯನಂ ವಿಧತ್ತೇ— “ಅಪಃ ಪ್ರಣಯತಿ” (ತೈ.ಬ್ರಾ.೩.೨.೪) ಇತಿ |)* ತೈತ್ತಿರೀಯ ಬ್ರಾಹ್ಮಣದಲ್ಲಿ ವಿಧಿವತ್ತಾಗಿ (ನೀರು)ತರುವುದನ್ನು (ಪ್ರ-ನಯನಂ, ನೀ ಪ್ರಾಪಣೇ ಧಾತುಃ, ನಯತಿ, ಆನಯತಿ ಇತ್ಯಾದಿ) ಅಥವಾ ಪ್ರಣಯನವಿಧಿಯನ್ನು ವಿಧಿಸುತ್ತಾನೆ― “ನೀರನ್ನು ತರುತ್ತಾನೆ” ಎಂಬುದಾಗಿ. *(ತತ್-ಪ್ರಕಾರಃ ಕಲ್ಪೇ ದರ್ಶಿತಃ—)* ಅದರ ವಿಧಾನವು ಬೌಧಾಯನಕಲ್ಪಸೂತ್ರದಲ್ಲಿ ತೋರಿಸಲ್ಪಟ್ಟಿದೆ— *(“ಅಥ ಉತ್ತರೇಣ ಗಾರ್ಹಪತ್ಯಮ್ ಉಪವಿಶ್ಯ ಕಗ್ಂಸಂ (ಕಂಸಂ) ವಾ ಚಮಸಂ ವಾ ಪ್ರಣೀತಾಪ್ರಣಯನಮ್ ಆನೀಯ)* ಬಳಿಕ, ಮನೆಯ ಬಳಿಗೆ ಹೋಗಿ ಉತ್ತರದಿಕ್ಕಿನ ದ್ವಾರದಿಂದ ಒಳಕ್ಕೆ ಪ್ರವೇಶಿಸಿ (ಉಪವಿಶ್ಯ―> ಉಪ― ಸಮೀಪೇ, ವಿಷ್ಟ್ವಾ / ಪ್ರವಿಶ್ಯ―ವಿಶ ಪ್ರವೇಶನೇ. ಕ್ರಿಯಾಪದಕ್ಕೆ ಉಪಸರ್ಗವು ಸೇರಿದಾಗ ಕ್ತ್ವಾನ್ತಾವ್ಯಯವು ಲ್ಯಬನ್ತಾವ್ಯಯವಾಗುತ್ತದೆ. ಹೀಗಾಗಿ ಇಲ್ಲಿ ವಿಷ್ಟ್ವಾ ಎಂಬುದು ಉಪ ಎಂಬ ಉಪಸರ್ಗದಿಂದ ಉಪವಿಶ್ಯ ಎಂದಾಗಿದೆ.), ಜಲಮೂಲದಿಂದ ತಂದ (ಪ್ರಣೀತಾ) ಜಲವನ್ನು ಯಾಗವೇದಿಯ ಬಳಿತರುವುದಕ್ಕೆ ಬೇಕಾದ (ಪ್ರಣಯನಮ್―> ಪ್ರ-ನಯನಮ್― ಇಲ್ಲಿ ಪ್ರ ಶಬ್ದದ ರೇಫ / ರಕಾರದಿಂದಾಗಿ ನತ್ವವು ಣತ್ವವಾಗಿದೆ) ಕಂಸ ಅಥವಾ ಚಮಸವೆಂಬ ಯಜ್ಞಪಾತ್ರವಿಶೇಷವನ್ನು ತಂದು (ಆನೀಯ— ನೀತ್ವಾ),
*(ತಸ್ಮಿನ್, ತಿರಃಪವಿತ್ರಮ್ ಅಪಃ, ಆನಯನ್ ಆಹ)* ಅದರಲ್ಲಿ / ಆ ಪಾತ್ರೆಯಲ್ಲಿ ಊರ್ಧ್ವಮುಖವಾದ ದರ್ಭಾಪವಿತ್ರಸಹಿತವಾದ ನೀರನ್ನು ತರುತ್ತಾ (ಆ-ನಯನ್― ಪಠನ್, ಶೃಣ್ವನ್ ಎಂಬಂತೆ) ಹೇಳುತ್ತಾನೆ, *(‘ಬ್ರಹ್ಮನ್ ! ಅಪಃ ಪ್ರಣೇಷ್ಯಾಮಿ, ಯಜಮಾನ ! ವಾಚಂ ಯಚ್ಛ’ ಇತಿ”)* ‘ಬ್ರಹ್ಮವಿದನೆ! ನೀರನ್ನು ತರುವೆನು. ಯಜ್ಞಕರ್ತೃವೆ! ವಾಗ್ದಾನಮಾಡು / ಮಾತು ಕೊಡು’ ಎಂಬುದಾಗಿ, *(ಪ್ರಸೂತಃ ಸಮಂ ಪ್ರಾಣೈಃ ಧಾರಯಮಾಣಃ ವಿಷಿಞ್ಚನ್ ಹೃತ್ವಾ ಉತ್ತರೇಣ ಆಹವನೀಯಂ ದರ್ಭೇಷು ಸಾದಯಿತ್ವಾ ” ಇತಿ |)* ಪಂಚಪ್ರಾಣೋಪಪ್ರಾಣಗಳೊಂದಿಗೆ ಪ್ರೇರಿತಬುದ್ಧಿಯುಳ್ಳವನಾಗಿ ಜಲಸೇಚನೆಯನ್ನು ಮಾಡುತ್ತಾ ಉತ್ತರದಿಕ್ಕಿನಿಂದ ಆಹವನೀಯಾಗ್ನಿಯನ್ನು ದರ್ಭೆಗಳಲ್ಲಿಟ್ಟು” ಎಂದು.
*(ಪ್ರಣಯನವಿಧೇಃ ಅರ್ಥವಾದಮ್ ಆಹ— “ಶ್ರದ್ಧಾ ವಾ ಆಪಃ | ಶ್ರದ್ಧಾಮ್ ಏವ ಆರಭ್ಯ ಪ್ರಣೀಯ ಪ್ರಚರತಿ ” (ತೈ.ಬ್ರಾ.೩.೨.೪) ಇತಿ |)* ಪ್ರಣಯನವಿಧಿಯ / ನೀರು ತರುವುದರ ಅಂತರಾರ್ಥವನ್ನು ಹೇಳುತ್ತಾನೆ― “ಶ್ರದ್ಧೆಯೇ ನೀರು. ಶ್ರದ್ಧೆಯಿಂದಲೇ ಯಜ್ಞಕರ್ಮದಲ್ಲಿ ತೊಡಗಿ, ಶ್ರದ್ಧೆಯಿಂದಲೇ ನಡೆಸಿ, ಆಚರಿಸುತ್ತಾನೆ” ಎಂದಿದೆ ತೈತ್ತಿರೀಯ ಬ್ರಾಹ್ಮಣ. *(ಅಪಾಂ ಶ್ರದ್ಧಾಜನಕತ್ವೇನ ಶ್ರದ್ಧಾರೂಪತ್ವಮ್ ಉಪಚರ್ಯತೇ |)* ನೀರಿನ ಶ್ರದ್ಧಾಜನಕತ್ವದಿಂದ, ನೀರನ್ನು ಶ್ರದ್ಧಾರೂಪವಾಗಿ ಉಪಚರಿಸಲಾಗುತ್ತದೆ. ನೀರಿನಿಂದ / ಸ್ನಾನಾಚಮನಾದಿಗಳಲ್ಲಿ ನೀರಿನ ಬಳಕೆಯಿಂದ ಕರ್ಮಶ್ರದ್ಧೆಯುಂಟಾಗುವುದರಿಂದ, ನೀರು ಶ್ರದ್ಧಾರೂಪಿಯೆನ್ನಲಾಗಿದೆ. *(ತತ್-ಜನಕತ್ವಂ ಚ ಶ್ರುತ್ಯನ್ತರೇ ಸಮಾಮ್ನಾತಮ್—)* ನೀರು ಹೇಗೆ ಶ್ರದ್ಧೆಯುಂಟುಮಾಡುವುದೆಂಬ ಬಗ್ಗೆ ಬೇರೆ ಶ್ರುತಿ / ವೇದಭಾಗದಲ್ಲಿ ಉಪದಿಷ್ಟವಾಗಿದೆ― *(“ಆಪೋ ಹ ಅಸ್ಮೈ ಶ್ರದ್ಧಾಂ ಸಂನಮನ್ತೇ ಪುಣ್ಯಾಯ ಕರ್ಮಣೇ” ಇತಿ |)* “ಮಾನವನಿಗೆ / ಯಜಮಾನನಿಗೆ ನೀರು ಪುಣ್ಯಕರ್ಮಾಚರಣೆ ಮಾಡಲು ಶ್ರದ್ಧೆಯನ್ನು ರೂಪಿಸುತ್ತದೆ” ಎಂಬುದಾಗಿ. *(ದೃಶ್ಯತೇ ಚ ಸ್ನಾನ-ಆಚಮನ-ಉಪೇತಸ್ಯ ಶ್ರದ್ಧಾ-ಅತಿಶಯಃ |)* ಸ್ನಾನ, ಆಚಮನಗಳನ್ನು ಆಚರಿಸಿದ ವ್ಯಕ್ತಿಗೆ ವೇದೋಕ್ತ / ಪುಣ್ಯ ಕರ್ಮಗಳಲ್ಲಿ ಅತಿಶಯವಾದ ಶ್ರದ್ಧೆಯುಂಟಾಗುವುದು ಕಂಡುಬರುತ್ತದೆಯಲ್ಲವೆ?
*ಪೂರ್ವೋಕ್ತಮೇವ ಪ್ರಣಯನವಿಧಿಂ ಪುನಃ ಪುನಃ ಅನೂದ್ಯ ಬಹುಧಾ ಸ್ತೌತಿ —*
_ಹಿಂದೆಯೇ ಹೇಳಿದ ಜಲಪ್ರಣಯನವಿಧಿ / ನೀರು ತರುವ ವಿಧಾನ ವನ್ನು ಮತ್ತೆ ಮತ್ತೆ ಅನು-ವಾದಿಸಿ (ಅನುಸರಿಸಿ ಹೇಳಿ) ಬಹುವಿಧವಾಗಿ ಸ್ತುತಿಸುತ್ತಾನೆ―_
*“ಅಪಃ ಪ್ರಣಯತಿ | ಯಜ್ಞೋ ವಾ ಆಪಃ | ಯಜ್ಞಮ್ ಏವ ಆರಭ್ಯ ಪ್ರಣೀಯ ಪ್ರಚರತಿ |*
_ನೀರನ್ನು ತರುತ್ತಾನೆ. ಜಲರಾಶಿಯೇ ಯಜ್ಞ ಅಥವಾ ಯಜ್ಞದಷ್ಟು ಪವಿತ್ರ. (‘ಪ’ಕಾರಾಂತ ಸ್ತ್ರೀಲಿಂಗ ‘ಅಪ್ ’ ಶಬ್ದವು ನಿತ್ಯಬಹುವಚನಾಂತ. ಏಕ, ದ್ವಿ ವಚನರೂಪಗಳಿಲ್ಲ. ಇದರ ಪ್ರಥಮಾದಿ ಸಂಬೋಧನಾಂತ ೭ ವಿಭಕ್ತಿಯ ರೂಪಗಳು― ಆಪಃ, ಅಪಃ, ಅಬ್ಭಿಃ, ಅಬ್ಭ್ಯಃ, ಅಪಾಮ್, ಅಪ್ಸು, ಹೇ ಆಪಃ). ನೀರು ತರುವುದೆಂದರೆ ಯಜ್ಞವನ್ನಾರಂಭಿಸಿ ಮುಂದುವರಿಸಿ ಆಚರಿಸುವಷ್ಟೇ ಪವಿತ್ರವಾದುದು. ನೀರಿನ ಪ್ರಯೋಜನ ಯಜ್ಞಫಲದಷ್ಟೇ ಪಾವನಕಾರಿಯಾದುದು._
*ಅಪಃ ಪ್ರಣಯತಿ | ವಜ್ರೋ ವಾ ಆಪಃ | ವಜ್ರಮ್ ಏವ ಭ್ರಾತೃವ್ಯೇಭ್ಯಃ ಪ್ರಹತ್ಯ ಪ್ರಣೀಯ ಪ್ರಚರತಿ |*
_ನೀರನ್ನು ತರುತ್ತಾನೆ. ವಜ್ರಾಯುಧವೇ ನೀರು / ನೀರೇ ವಜ್ರಾಯುಧದಷ್ಟು ಶಕ್ತಿಶಾಲಿ. ಅಂತಹ ಮಂತ್ರಿತ ಜಲವೆಂಬ ವಜ್ರಾಯುಧವನ್ನೇ ತಂದು ಶತ್ರುಗಳನ್ನು ಹತರನ್ನಾಗಿಸಿ ಮುನ್ನಡೆಯುತ್ತಾನೆ; ತನ್ನ ಕರ್ಮವನ್ನು ಸುಸೂತ್ರವಾಗಿ, ನಿರ್ವಿಘ್ನವಾಗಿ ಮುನ್ನಡೆಸುತ್ತಾನೆ._
*ಅಪಃ ಪ್ರಣಯತಿ | ಆಪೋ ವೈ ರಕ್ಷೋಘ್ನೀಃ | ರಕ್ಷಸಾಮ್ ಅಪಹತ್ಯೈ |*
_ನೀರನ್ನು ತರುತ್ತಾನೆ. ಜಲವು ವಿಘ್ನಕಾರಿ ರಕ್ಷೋಗಣದ / ರಾಕ್ಷಸೀಶಕ್ತಿಯ / ಆಸುರೀಬುದ್ಧಿಯ ನಾಶಕಾರಕ. ಹಾಗಾಗಿ, ದುಷ್ಟತನದ ನಿವಾರಣೆಗಾಗಿ (ನೀರನ್ನು ತರುತ್ತಾನೆ)._
*ಅಪಃ ಪ್ರಣಯತಿ | ಆಪೋ ವೈ ದೇವಾನಾಂ ಪ್ರಿಯಂ ಧಾಮ | ದೇವಾನಾಮ್ ಏವ ಪ್ರಿಯಂ ಧಾಮ ಪ್ರಣೀಯ ಪ್ರಚರತಿ |*
_ನೀರನ್ನು ತರುತ್ತಾನೆ. ಜಲರಾಶಿಯೇ ದೇವತೆಗಳ ಪ್ರಿಯವಾದ ಧಾಮವಷ್ಟೆ? (ಜಲದಲ್ಲೇ ವಿಷ್ಣು, ವರುಣಾದಿ ಸಕಲದೇವತೆಗಳೂ ನೆಲೆಸಿರುವರು.) ಹೀಗೆ, ದೇವರುಗಳ ಪ್ರಿಯವಾದ ಮನೆಯೆನಿಸಿದ ಜಲವನ್ನೇ ತಂದು ಯಜ್ಞಾದಿ ಸಕಲ ಪವಿತ್ರಕರ್ಮಗಳನ್ನೂ ಆಚರಿಸುತ್ತಾನೆ._
*ಅಪಃ ಪ್ರಣಯತಿ | ಆಪೋ ವೈ ಸರ್ವಾಃ, ದೇವತಾಃ | ದೇವತಾಃ, ಏವ ಆರಭ್ಯ ಪ್ರಣೀಯ ಪ್ರಚರತಿ” (ತೈ.ಬ್ರಾ.೩.೨.೪) ಇತಿ |*
_ನೀರನ್ನು ತರುತ್ತಾನೆ. ಜಲಕಣಗಳೇ ಎಲ್ಲ ದೇವತೆಗಳ ಸ್ವರೂಪವೇ ಆಗಿವೆ. ನೀರಿನ ಹನಿಹನಿಗಳಲ್ಲೂ ಸಕಲದೇವತಾತತ್ತ್ವಗಳೂ ಅಡಗಿವೆ. ಹೀಗಾದ್ದರಿಂದ, ಸರ್ವದೇವತಾಸ್ವರೂಪವಾದ ಜಲವನ್ನು ತರುವ ಮೂಲಕ ಯಜ್ಞಕರ್ಮವನ್ನಾರಂಭಿಸಿ, ಮುಂದುವರಿಸಿ ಪರಿಪೂರ್ಣವಾಗಿ ಆಚರಿಸುತ್ತಾನೆ / ನಡೆಸುತ್ತಾನೆ— ಎಂದಿದೆ ತೈತ್ತಿರೀಯ ಬ್ರಾಹ್ಮಣ._
*ಯಜ್ಞಃ ಯಥಾ ಅಭೀಷ್ಟಸ್ವರ್ಗಸಾಧನಂ ತದ್ವತ್ ಅಪಾಮ್ ಅಭೀಷ್ಟಪ್ರೀತ್ಯಾದಿಸಾಧನತ್ವಾತ್, ಯಜ್ಞತ್ವಮ್ |*
_ಯಜ್ಞವು ಹೇಗೆ (ನಾವು) ಬಯಸಿದ ಸ್ವರ್ಗಾದಿಸುಖಗಳ ಸಾಧನವೋ ಹಾಗೆಯೇ ನೀರಿಗೆ (ನಮ್ಮ) ಅಭೀಷ್ಟಗಳು ಹಾಗೂ ಪ್ರಿಯವಾದವುಗಳನ್ನು ಸಾಧಿಸುವ ಗುಣವಿರುವುದರಿಂದ ಅದಕ್ಕೆ ಯಜ್ಞಸಮಾನತೆ / ಯಜ್ಞಸಾದೃಶ್ಯವು ಇರುವುದು._
*ಪ್ರಣೀತಾಭಿಃ ಅದ್ಭಿಃ ಪಿಷ್ಟಸ್ಯ ಸಂಯವನಂ ಪ್ರಚರಣಮ್ |*
_ಹಾಗೆ ತಂದ ನೀರಿನಿಂದ ಧಾನ್ಯದ ಹುಡಿಯನ್ನು ಮಿಶ್ರಣ ಮಾಡುವುದೇ / ಬೆರೆಸುವುದೇ ಪ್ರಚರಣವು._
*ಯಥಾ ವಜ್ರೋ ವೈರಿಣಂ ವಾರಯತಿ ತದ್ವತ್ ಆಪಃ ಶತ್ರುಂ ವಾರಯನ್ತಿ | ರಕ್ಷೋಘ್ನೀತ್ವಂ ಪುರಾ ಏವ ಉಕ್ತಮ್ |*
_ಹೇಗೆ ವಜ್ರಾಯುಧವು ವೈರಿಯನ್ನು ನಿವಾರಿಸುತ್ತದೋ ಹಾಗೆಯೇ ನೀರು ಶತ್ರುವನ್ನು ನಿವಾರಿಸುತ್ತದೆ. ದುಷ್ಟಶಕ್ತಿಗಳ ನಾಶಪಡಿಸುವ ನೀರಿನ ಗುಣವು ಈ ಮೊದಲೇ ಹೇಳಲ್ಪಟ್ಟಿದೆ._
*ವೃಷ್ಟಿ-ಉದಕಸ್ಯ ದೇವಪ್ರಿಯಧಾಮ್ನಃ ದ್ಯುಲೋಕಾತ್ ಉತ್ಪನ್ನತ್ವಾತ್ ಅಪಾಂ ತತ್-ಧಾಮತ್ವಮ್ |*
_ಮಳೆನೀರಿನ ದೇವತಾಪ್ರಿಯಲೋಕವಾದ ಅಂತರಿಕ್ಷ / ದೇವಲೋಕದಿಂದ ಹುಟ್ಟುವಿಕೆಯಿಂದಾಗಿ ನೀರಿಗೆ ಆ ಲೋಕದ್ದೆಂಬ ಪ್ರತೀತಿ ಇದೆ._
*ದೇವಾಃ ತಾವತ್ ಅಗ್ನಿಂ ಪ್ರವಿಶ್ಯ ತದ್ಭಾವಂ ಪ್ರಾಪ್ತಾಃ | ತಥಾ ಚ ಶ್ರೂಯತೇ—*
_ದೇವತೆಗಳಾದರೋ ಅಗ್ನಿಯನ್ನು ಪ್ರವೇಶಿಸಿ ಅಗ್ನಿತ್ವವನ್ನೇ ಹೊಂದಿದರು. ಹಾಗೆಯೇ ಶ್ರುತಿಯು ಹೇಳಿದೆ—_
*(“ದೇವ-ಅಸುರಾಃ ಸಂಯತ್ತಾ ಆಸನ್ |)* ದೇವತೆಗಳೂ ರಾಕ್ಷಸರೂ ಯುದ್ಧನಿರತರಾಗಿದ್ದರು. (ಸಂಯಮ್ಯತೇ ಅತ್ರ ಇತಿ ಸಂಯತ್— ಯಮ್ ಉಪರಮೇ ಧಾತುವಿನ ವೈದಿಕರೂಪವಾದ ಸಂಯತ್ತಾಃ ಎಂದರೆ ತೊಡಗಿಸಿಕೊಂಡವರು, ನಿರತರಾದವರು ಎಂದರ್ಥ). *(ತೇ ದೇವಾಃ, ಬಿಭ್ಯತಃ ಅಗ್ನಿಂ ಪ್ರಾವಿಶನ್ |)* ಆ ದೇವತೆಗಳು ಭೀತರಾಗಿ ಅಗ್ನಿಯನ್ನು ಪ್ರವೇಶಿಸಿದರು. *(ತಸ್ಮಾತ್ ಆಹುಃ ಅಗ್ನಿಃ ಸರ್ವಾಃ ದೇವತಾಃ, ಇತಿ” ಇತಿ |)* ಹಾಗಾಗಿಯೇ ಹೇಳುವರು ಅಗ್ನಿಯೇ ಎಲ್ಲ ದೇವತೆಗಳ ಸ್ವರೂಪನೆಂದು― ಎಂಬುದಾಗಿ. *(ಸ ಚ ಅಗ್ನಿಃ ಅಪ್ಸು ಪ್ರವಿಷ್ಟಃ |)* ಮತ್ತು ಆ ಅಗ್ನಿಯು ಜಲರಾಶಿಯಲ್ಲಿ ಪ್ರವೇಶಿತನಾದನು. *(“ಸ ನಿಲಾಯತ | ಸಃ ಅಪಃ ಪ್ರಾವಿಶತ್” ಇತಿ ಶ್ರುತೇಃ |)* ಆತನು ಜಲದಲ್ಲೇ ವಿಲೀನನಾದನು / ಅದನ್ನೇ ತನ್ನ ನಿಲಯವನ್ನಾಗಿಸಿದನು. *(ತಸ್ಮಾತ್ ಅಪಾಂ ಸರ್ವದೇವತಾತ್ವಮ್ |)* ಹೀಗಾಗಿಯೇ ಜಲರಾಶಿಗೆ / ನೀರಿಗೆ ಸರ್ವದೇವತಾಸಾನ್ನಿಧ್ಯವು. *(ಬ್ರಾಹ್ಮಣಾನ್ತರಾತ್ ವಾ ತಥಾತ್ವಂ ದ್ರಷ್ಟವ್ಯಮ್ ||)* ಬೇರೆ ಬ್ರಾಹ್ಮಣಗಳಿಂದಲೂ ನೀರಿನ ಸರ್ವದೇವತಾತ್ಮಕತೆಯು ತಿಳಿಯಲ್ಪಡಬೇಕು (ಬೇರೆ ಆಧಾರಗಳೂ ಇವೆಯೆಂದರ್ಥ).
ಭಟ್ಟಭಾಸ್ಕರಭಾಷ್ಯ
*(ಯಾಗದಿವಸೇ ಕರ್ಮಾರಮ್ಭೇ ಹಸ್ತೌ ಸಮ್ಮೃಶತಿ— ಕರ್ಮಣೇ ವಾಮ್ ಇತಿ ||)* “ಕರ್ಮಣೇ ವಾಂ ದೇವೇಭ್ಯಃ ಶಕೇಯಮ್” ಎಂಬ ಮಂತ್ರದಿಂದ ಯಾಗದ ದಿನ ಯಾಗಕರ್ಮದ ಮೊದಲಿಗೆ ತನ್ನ ಅಂಗೈಗಳನ್ನು (ಅಗ್ನಿಗೊಡ್ಡಿ ಬಿಸಿಮಾಡಿ ಪವಿತ್ರೀಕರಿಸುತ್ತಾನೆ) ಚೆನ್ನಾಗಿ ಸ್ಪರ್ಶಿಸಿ ತಿಕ್ಕಿ ಶಾಖವನ್ನುತ್ಪಾದಿಸುತ್ತಾನೆ. *(ದೇವೇಭ್ಯಃ, ಇತಿ ಷಷ್ಠ್ಯರ್ಥೇ ಚತುರ್ಥೀ |)* ದೇವತೆಗಳಿಗೆ ಎಂಬ ಚತುರ್ಥೀವಿಭಕ್ತಿಪ್ರಯೋಗವು ಇಲ್ಲಿ ದೇವತೆಗಳ (ದೇವತೆಗಳ ಯಜ್ಞಾದಿ ಕರ್ಮಕ್ಕಾಗಿ)ಎಂಬ ಷಷ್ಟೀವಿಭಕ್ತ್ಯರ್ಥವಾಗಿದೆ. *(ಹೇ ಹಸ್ತೌ ! ದೇವಾನಾಂ ಸಮ್ಬನ್ಧಿನೇ ಕರ್ಮಣೇ ತತ್-ಸಿದ್ಧ್ಯರ್ಥಂ ವಾಂ ಯುವಯೋಃ ಶಕೇಯಂ ಯುವಾಂ ವಿನಿಯೋಕ್ತುಂ ಸಮರ್ಥೋ ಭೂಯಾಸಮ್ |......)* ಎಲೈ ಹಸ್ತಗಳೇ ! ದೇವತೆಗಳಿಗೆ ಸಂಬಂಧಿಸಿದ ಕರ್ಮದಲ್ಲಿ, ಆ ಕರ್ಮಸಿದ್ಧಿಗಾಗಿ ನಿಮ್ಮ ಶಕ್ತಿಯು ಬೇಕಾದಷ್ಟಿರಲಿ. ನಿಮ್ಮನ್ನು ದೇವತಾಕಾರ್ಯಗಳಿಗೆ ವಿನಿಯೋಗಿಸಲು / ಬಳಸಲು ನೀವು ಸಮರ್ಥರಾಗುವಂತಾಗಲಿ.
ಆಧ್ಯಾತ್ಮಿಕಭಾಷ್ಯ
ಸಂಹಿತೆ-ಬ್ರಾಹ್ಮಣಗಳು ಮಿಶ್ರವಾಗಿದ್ದು ಕೃಷ್ಣಯಜುರ್ವೇದವೆನಿಸಿದ ತೈತ್ತಿರೀಯ ಸಂಹಿತೆಯ ಪ್ರಥಮಕಾಂಡದ ಪ್ರಥಮ ಪ್ರಪಾಠಕ / ಪ್ರಶ್ನದ ೧,೨,೩,೪ನೆಯ ಅನುವಾಕಗಳು ಸಂಹಿತಾ / ಮಂತ್ರ ರೂಪಗಳಾಗಿವೆ. ಈ ೪ನೆಯ ಅನುವಾಕವು ಸಾಂಪ್ರದಾಯಿಕಮತದಲ್ಲಿ *ಹವಿರ್ನಿರ್ವಾಪಾರ್ಥ ಮಂತ್ರಗಳು* ಎನಿಸಿದರೆ, ಆಧ್ಯಾತ್ಮಿಕಭಾಷ್ಯದಲ್ಲಿ *ಅಗ್ನಿ ಹಾಗೂ ಸೋಮ, ಕ್ರಮವಾಗಿ ಸಂಕಲ್ಪಶಕ್ತಿ ಹಾಗೂ ಆನಂದಗಳ ಅಧಿದೇವತೆಯರು* ಎಂಬ ಶೀರ್ಷಿಕೆಯನ್ನು ಹೊಂದಿದೆ. ಇದರಲ್ಲಿ ೧೯ ಯಜುಸ್ಸುಗಳಿವೆಯೆಂಬುದು (ಯಜುಸ್ ಎಂದರೆ ಛಂದೋಬದ್ಧವಲ್ಲದ ಗದ್ಯಮಂತ್ರ, ಋಕ್ ಎಂದರೆ ಛಂದೋಬದ್ಧ ಪದ್ಯಮಂತ್ರ) ಸಾಯಣ ಹಾಗೂ ಆಧ್ಯಾತ್ಮಿಕರ ಮತವಾದರೆ, ಭಟ್ಟಭಾಸ್ಕರರು ೧೭ ಯಜುರ್ಮಂತ್ರವಿನಿಯೋಗವನ್ನು ಹೇಳಿದ್ದಾರೆ. ಇದರಲ್ಲಿ ಋಕ್ಕುಗಳಿಲ್ಲ.
ಈಗ ಈ ೪ನೆಯ ಅನುವಾಕದ ಮೊದಲ ಮಂತ್ರವಾದ *ಕರ್ಮಣೇ ವಾಂ ದೇವೇಭ್ಯಃ ಶಕೇಯಂ* ಎಂಬುದರ ಆಧ್ಯಾತ್ಮಿಕಾರ್ಥವನ್ನು ಮನನ ಮಾಡೋಣ.
*ಕರ್ಮಣೇ —* ವೇದೋಕ್ತ ದೇವತಾಕರ್ಮಾನುಷ್ಠಾನಕ್ಕಾಗಿ,
*ವಾಂ—* ( /ಯುವಾಮ್) ನಿಮ್ಮಿಬ್ಬರನ್ನು / ಅಗ್ನಿ-ಸೋಮರನ್ನು (ಆಹ್ವಾನಿಸುತ್ತೇನೆ).
*ದೇವೇಭ್ಯಃ—* ದೇವಕಾರ್ಯಕ್ಕಾಗಿ / ದೇವತಾಕರ್ಮಾನುಷ್ಠಾನಕ್ಕಾಗಿ,
*ಶಕೇಯಂ—* ನಾನು ಶಕ್ತನಾಗುವಂತಾಗಲಿ / ಸಾಕಷ್ಟು ಸಮರ್ಥನಾಗಲಿ, ಯೋಗ್ಯನಾಗಲಿ. ನನ್ನಿಂದ ದೇವತಾಕಾರ್ಯವು ನಡೆಯುವಂತೆ ನನ್ನನ್ನು ಅದಕ್ಕೆ ಅರ್ಹನನ್ನಾಗಿಯೂ, ಪರ್ಯಾಪ್ತಬಲಶಾಲಿಯನ್ನಾಗಿಯೂ ಮಾಡಿರಿ. ಅಗ್ನಿ-ಸೋಮರಿಂದ / ದೇವತೆಗಳ ಕೃಪೆಯಿಂದ ನಾನು ದೇವಕರ್ಮಾಚರಣೆಗೆ ಸಮರ್ಥನಾಗುವಂತೆ ಆಗಲಿ.
*೨) ವೇಷಾಯ ತ್ವಾ—*
ಸಾಯಣಭಾಷ್ಯ
*ಬೌಧಾಯನಶ್ರೌತಸೂತ್ರೇ (೧.೪)— “ಆದತ್ತೇ ದಕ್ಷಿಣೇನಾಗ್ನಿಹೋತ್ರಹವಣೀಗ್ಂ ಸವ್ಯೇನ ಶೂರ್ಪಂ ವೇಷಾಯ ತ್ವಾ-ಇತಿ” ಇತಿ |*
_ಬೌಧಾಯನಕಲ್ಪಸೂತ್ರದಲ್ಲಿ— “ವೇಷಾಯ ತ್ವಾ ಎಂಬ ಮಂತ್ರವನ್ನುಚ್ಚರಿಸುತ್ತಾ, ಬಲಹಸ್ತದಿಂದ ಅಗ್ನಿಹೋತ್ರಹವಣಿಯೆಂಬ ಹಾಗೂ ಎಡಗೈಯಿಂದ ಶೂರ್ಪ / ಮೊರವೆಂಬ ಯಜ್ಞಪಾತ್ರೆವಿಶೇಷಗಳನ್ನು ತೆಗೆದುಕೊಳ್ಳುತ್ತಾನೆ ಎಂದು” ಎಂದು (ಹೇಳಿದೆ).
ತದೇತದುಭಯಂ ಯಜ್ಞಾಯುಧಮಧ್ಯಪಾತಿ |
ಹಾಗಾಗಿ (ತದ್— ತಸ್ಮಾತ್), ಇವೆರಡೂ ಯಜ್ಞಾಯುಧಗಳನ್ನೂ (ಏತದ್ ಉಭಯಂ ಯಜ್ಞಾಯುಧಮ್), ಆಶ್ರಯಸಿ / ಅವಲಂಬಿಸಿ (ಅಧಿ), ಹವಿಸ್ಸನ್ನು ಯಜ್ಞಾಗ್ನಿಗೆ ಪತನಗೊಳಿಸುತ್ತಾನೆ / ಬೀಳಿಸುತ್ತಾನೆ / ಪಾನಮಾಡಿಸುತ್ತಾನೆ / ಸಮರ್ಪಿಸುತ್ತಾನೆ (ಅಪಾತಿ).
ತಾನಿ ಯಜ್ಞಾಯುಧಾನಿ ಅನ್ಯತ್ರ ಏವಮ್ ಆಮ್ನಾತಾನಿ— “ಸ್ಫ್ಯಃ ಚ ಕಪಾಲಾನಿ ಚ ಅಗ್ನಿಹೋತ್ರಹವಣೀ ಚ ಶೂರ್ಪಂ ಚ ಕೃಷ್ಣಾಜಿನಂ ಚ ಶಮ್ಯಾ ಚ ಉಲೂಖಲಂ ಚ ಮುಸಲಂ ಚ ದೃಷತ್ ಚ ಉಪಲಾ ಚ ಏತಾನಿ ವೈ ದಶ ಯಜ್ಞ-ಆಯುಧಾನಿ” (ತೈ.ಸಂ. ೧.೬.೮) ಇತಿ |
ಆ ಯಜ್ಞಾಯುಧಗಳು ಬೇರೆಡೆ ಹೀಗೆ ಹೇಳಲ್ಪಟ್ಟಿವೆ— “ಸ್ಫ್ಯಃ (ಖಡ್ಗಾಕಾರದ ಯಜ್ಞಾರ್ಥವಾದ ಕಾಷ್ಠಭೇದ— ಕತ್ತಿಯ ಆಕಾರದ ಯಜ್ಞಕ್ಕಾಗಿನ ಕಟ್ಟಿಗೆಯ ಪ್ರಭೇದ), ಕಪಾಲಗಳು (ಮಣ್ಣಿನ ಮಡಕೆಯ ತಲೆಬುರುಡೆಯಾಕಾರದ ಚೂರುಗಳು / ಭಾಗಗಳು), ಅಗ್ನಿಹೋತ್ರಹವಣೀ (ಅಗ್ನಿಹೋತ್ರದ ಹವಿಸ್ಸನ್ನು ಸಂಗ್ರಹಿಸಿಡುವ, ಹೋಮಿಸುವ ಪಾತ್ರೆ), ಶೂರ್ಪಮ್ (ಮೊರದಾಕೃತಿಯದ್ದು), ಕೃಷ್ಣಾಜಿನಮ್ (ಕೃಷ್ಣಮೃಗದ ಅಜಿನ / ಚರ್ಮ ದಿಂದ ಮಾಡಿದ್ದು), ಶಮ್ಯಾ (೩೬ ಅಂಗುಲದ ಅಳತೆಗೋಲು / ನೊಗದ ಕೀಲು / ಹೆದರಿಸಿ ಪಶುಗಳನ್ನು ಶಮನಗೊಳಿಸಲು ಬಳಸುವ ಕೋಲು), ಉಲೂಖಲಮ್ (ಊರ್ಧ್ವಂ ಖಂ ಉಲೂಖಮ್ ಪೃಷೋದರಾದೀನ್ ವಾ ಲಾತಿ ಗೃಹ್ಣಾತಿ ಇತಿ ಉಲೂಖಲಮ್— ಧಾನ್ಯದ ಕವಚವನ್ನು ಕುಟ್ಟಿ ಬೇರ್ಪಡಿಸಲು ಧಾನ್ಯವನ್ನು ಹಾಕಲು ಬಳಸುವ ಮರದ / ಕಲ್ಲಿನ ಪಾತ್ರೆ ಅಥವಾ ಸೋಮಲತೆಯನ್ನು ಹಾಕಿ ಜಜ್ಜಲಿರುವ ಮರದ ಪಾತ್ರೆ), ಮುಸಲಮ್ (ಒನಕೆ / ಧಾನ್ಯಾದಿಗಳನ್ನು ಕುಟ್ಟುವ ಮರದ ಸಾಧನ), ದೃಷತ್ (ಪೇಷಣಶಿಲಾ / ಧಾನ್ಯವನ್ನು ಹುಡಿಮಾಡುವ ಒರಳುಕಲ್ಲಿನ ಕೆಳಗಿನ ಅರ್ಧಭಾಗ), ಉಪಲಾ (ದೃಷತ್ ನ ಮೇಲಿನ ಅರ್ಧಭಾಗದ ಅರೆಯುವ ಕಲ್ಲು)— ಇವು ಹತ್ತು ಯಜ್ಞಾಯುಧಗಳು” ಎಂದಿದೆ ತೈತ್ತಿರೀಯಸಂಹಿತೆಯ ೧ನೇ ಕಾಂಡದ ೬ನೇ ಪ್ರಪಾಠಕ / ಪ್ರಶ್ನ ದ ೮ನೇ ಅನುವಾಕ.
(ತೇಷಾಂ ಪ್ರಯೋಗ-ಪ್ರಕಾರಃ ಸೂತ್ರೇ ದರ್ಶಿತಃ— "ಉತ್ತರೇಣ ಗಾರ್ಹಪತ್ಯ-ಆಹವನೀಯೌ ದರ್ಭಾನ್ ಸಗ್ಂಸ್ತೀರ್ಯ ದ್ವನ್ದ್ವಂ ನ್ಯಞ್ಚಿ ಪಾತ್ರಾಣಿ ಪ್ರಯುನಕ್ತಿ ದಶ-ಅಪರಾಣಿ ದಶ ಪೂರ್ವಾಣಿ | ಸ್ಫ್ಯಃ ಚ ಕಪಾಲಾನಿ ಚ ಇತಿ ಯಥಾ ಸಮಾಮ್ನಾತಮ್ ಅಪರಾಣಿ ಪ್ರಯುಜ್ಯ ಸ್ರುವಂ ಜುಹೂಮ್ ಉಪಭೃತಂ ಧ್ರುವಾಂ ವೇದಂ ಪಾತ್ರೀಮ್ ಆಜ್ಯಸ್ಥಾಲೀಂ ಪ್ರಾಶಿತ್ರಹರಣಮ್ ಇಡಾಪಾತ್ರಂ ಪ್ರಣೀತಾ-ಪ್ರಣಯನಮ್ ಇತಿ ಪೂರ್ವಾಣಿ | ತಾನಿ ಉತ್ತರೇಣ ಅವಶಿಷ್ಟಾನಿ ಅನ್ವಾಹಾರ್ಯ-ಸ್ಥಾಲೀಮ್ ಅಶ್ಮಾನಮ್ ಉಪವೇಷಂ ಪ್ರಾತರ್-ದೋಹಪಾತ್ರಾಣಿ ಇತಿ | ಪ್ರಣೀತಾ-ಪ್ರಣಯನಂ ಪಾತ್ರಸಂಸಾದನಾತ್ ಪೂರ್ವಮ್ ಏಕೇ ಸಮ್-ಆಮನನ್ತಿ" (ಆಪಸ್ತಂಬ ಶ್ರೌತಸೂತ್ರಮ್ ೧.೧೫.೬-೯) ಇತಿ |)
(ಅವುಗಳ (ಯಜ್ಞಾಯುಧಗಳ) ಪ್ರಯೋಗವಿಧಿಯು (ಉಪಯೋಗದ ವಿಧಾನವು) ಆಪಸ್ತಂಬ ಶ್ರೌತಸೂತ್ರದಲ್ಲಿ (೧.೧೫.೬-೯) ತೋರಿಸಲ್ಪಟ್ಟಿದೆ— "ಉತ್ತರದಿಂದ ಗಾರ್ಹಪತ್ಯಾಗ್ನಿ ಹಾಗೂ ಆಹವನೀಯಾಗ್ನಿಗಳು……..)
ತತ್ರ ಅಗ್ನಿಹೋತ್ರ-ಹವಣೀ-ಆದಾನೇ ಶಾಖಾನ್ತರ-ಮನ್ತ್ರಃ, ಉದಾಹೃತಃ— "ವಾನಸ್ಪತ್ಯಾऽಸಿ ದಕ್ಷಾಯ ತ್ವೇತ್ಯಗ್ನಿಹೋತ್ರಹವಣೀಮಾದತ್ತೇ" (ಆಪ.ಶ್ರೌ.ಸೂ. ೧.೧೭.೧) ಇತಿ | (ಅದರಲ್ಲಿ ಅಗ್ನಿಹೋತ್ರಹವಣಿಯ ಆದಾನ (ಕೊಡು-ಕೊಳ್ಳುವಿಕೆ)ಯಲ್ಲಿ ಬೇರೆ ಶಾಖೆಯ ಮಂತ್ರವು ಉದಾಹರಿಸಲ್ಪಟ್ಟಿದೆ— "ವಾನಸ್ಪತ್ಯಾऽಸಿ ದಕ್ಷಾಯ ತ್ವಾ" ಎಂದು ಉಚ್ಚರಿಸುತ್ತಾ ಅಗ್ನಿಹೋತ್ರಹವಣಿಯನ್ನು ನೀಡುತ್ತಾನೆ ಎಂದಿದೆ ಆಪಸ್ತಂಬಶ್ರೌತಸೂತ್ರ.) ತಸ್ಮಾತ್ 'ವೇಷಾಯ ತ್ವಾ' ಇತಿ ಮನ್ತ್ರೇಣ ಶೂರ್ಪಮ್ ಆದತ್ತೇ | (ಹಾಗಾದ್ದರಿಂದ, 'ವೇಷಾಯ ತ್ವಾ' ಎಂಬ ಮಂತ್ರದಿಂದ ಶೂರ್ಪ / ಮೊರ ವನ್ನು ಕೊಡುತ್ತಾನೆ.) ವೇಷೋ ವ್ಯಾಪ್ತಿಮಾನ್ ಯಜ್ಞಃ, ತದರ್ಥಂ ಭೋಃ ಶೂರ್ಪ! ತ್ವಮ್ ಆದದೇ || (ವೇಷವೆಂದರೆ ಸರ್ವತ್ರವ್ಯಾಪ್ತಿಯುಳ್ಳ, ವಿಶ್ವವ್ಯಾಪಕವಾದ ಯಜ್ಞವು, ಅದಕ್ಕಾಗಿ ಅಯ್ಯಾ ಶೂರ್ಪವೆ! ನೀನು ಹವಿಸ್ಸನ್ನು ಯಜ್ಞಕ್ಕೆ ಅರ್ಪಿಸು.) ಅತ್ರ ಅರ್ಥ-ಅವಬೋಧಕಾಲೇ, ಏವ ವಾಕ್ಯಪೂರ್ತಯೇ ಪದ-ಅಧ್ಯಾಹಾರಃ | ಅನುಷ್ಠಾನಕಾಲೇ ತು ನ ಲೌಕಿಕಂ ಪದಮ್ ಅಧ್ಯಾಹರ್ತವ್ಯಮ್ | ಅನಾಮ್ನಾತಸ್ಯ ಊಹಾ-ಆದಿವತ್ ಅಮನ್ತ್ರತ್ವಾತ್ | ಅವಬುದ್ಧಸ್ಯ ಅರ್ಥಸ್ಯ ವಾಕ್ಯ-ಏಕದೇಶೇನ ಅಪಿ ಸಂಸ್ಕಾರ-ಉದ್ಬೋಧೇ ಸತಿ ಸ್ಮೃತಿ-ಉತ್ಪತ್ತೇಃ | ಅಮನ್ತ್ರತ್ವಾತ್ ಏವ ತದ್-ದ್ವಾರಕ-ಸ್ಮೃತ್ಯಾ ನಾಸ್ತಿ ಅದೃಷ್ಟಂ ಕಿಂಚಿತ್ | 'ಸೂರ್ಯಾಯ ಜುಷ್ಟಂ ನಿರ್ವಪಾಮಿ' ಇತಿ ಊಹಾದೀನ್ ಅಮನ್ತ್ರಾನ್ ಅಪಿ ಪ್ರಯುಞ್ಜೀತ | ಅನ್ಯಥಾ 'ಅಗ್ನಯೇ ಜುಷ್ಟಮ್' ಇತ್ಯೇವಮ್ ಆಮ್ನಾತಸ್ಯ ಏವ ಪ್ರಯೋಗೇ ಸೌರ್ಯ-ಕರ್ಮ-ಸಮವೇತಸ್ಯ ಅರ್ಥಸ್ಯ ಸ್ಮೃತಿ-ಅಭಾವ-ಪ್ರಸಙ್ಗಾತ್ || ಶೂರ್ಪಸ್ಯ ಯಜ್ಞಾರ್ಥತ್ವಂ ನಿರ್ವಾಪ-ಅವಘಾತ-ಆದೌ ಪ್ರಸಿದ್ಧಮ್ ಇತಿ ಆಹ— "ವೇಷಾಯ ತ್ವಾ ಇತಿ ಆಹ | ವೇಷಾಯ ಹಿ ಏನತ್ ಆದತ್ತೇ " (ತೈ.ಬ್ರಾ.೩.೨.೪) ಇತಿ || (ಇಲ್ಲಿ ಮಂತ್ರದಲ್ಲಿಲ್ಲದ ಶೂರ್ಪವೆಂಬ ಅಮಂತ್ರ ಪದವನ್ನು ಅಧ್ಯಾಹಾರ ಮಾಡದಿದ್ದರೆ ಯಥಾರ್ಥದರ್ಶನವಾಗದು. ಹೇಗೆ ಅಗ್ನಿದೇವತಾಕ ಕರ್ಮದಲ್ಲಿ ಸೌರಕರ್ಮವೂ ಅಂತರ್ಗತವಾಗುವುದರಿಂದ, 'ಅಗ್ನಯೇ ಜುಷ್ಟಮ್ ' ಎಂಬಲ್ಲಿ 'ಸೂರ್ಯಾಯ ಜುಷ್ಟಮ್ ' ಎಂದೂ ಹೇಳದಿದ್ದರೆ ಸೌರ್ಯಕರ್ಮದ ವಿಸ್ಮೃತಿಯಾಗುವ ಸಂಭವವಿದೆಯೋ ಹಾಗೆಯೇ ಇಲ್ಲೂ ಅಧ್ಯಾಹಾರ ಮಾಡಿಕೊಳ್ಳಬೇಕೆಂದು ತಾತ್ಪರ್ಯ.)
ಭಟ್ಟಭಾಸ್ಕಭಾಷ್ಯ
ಶೂರ್ಪಮ್ ಆದತ್ತೇ— 'ವೇಷಾಯ ತ್ವಾ' ಇತಿ || ವ್ಯಾಪ್ನೋತಿ ಇತಿ ವೇಷಃ ವಿಷ್ಣುಃ ಯಜ್ಞಃ, ಇತಿ ಪರ್ಯಾಯಾಃ | ಪಚಾದಿ-ಅಜನ್ತಃ | …| ಸರ್ವವ್ಯಾಪಿನೇ ವಿಷ್ಣ್ವಾತ್ಮನೇ ಯಜ್ಞಾಯ ತ್ವಾಮ್ 'ಆದದೇ' ಇತಿ ಶೇಷಃ ||
ಶೂರ್ಪವನ್ನು / ಮೊರವನ್ನು ನೀಡುತ್ತಾನೆ— 'ವೇಷಾಯ ತ್ವಾ' ಎಂದು ಹೇಳುತ್ತಾ. ವ್ಯಾಪಿಸುತ್ತಾನೆಂಬುದರಿಂದ ವೇಷನು. ವಿಷ್ಣು, ಯಜ್ಞ ಎಂದು ಪರ್ಯಾಯಪದಗಳು ಇದಕ್ಕೆ. "ವಿಷ / ವಿಷ್ಲೃ ವ್ಯಾಪ್ತೌ +ಘಞ್ " ಎಂಬ ಧಾತುಜನ್ಯ ಪದ. ವ್ಯಾಪ್ತಿಯೆಂದರ್ಥ. ಸರ್ವವ್ಯಾಪಿಯಾದ ವಿಷ್ಣ್ವಾತ್ಮನಾದ, ಪರಮಾತ್ಮನಾದ ಯಜ್ಞನಿಗಾಗಿ ನಿನ್ನನ್ನು (ಶೂರ್ಪವನ್ನು) ಕೊಡುತ್ತೇನೆ ಎಂದರ್ಥ.
ಆಧ್ಯಾತ್ಮಿಕಭಾಷ್ಯ
ನೀನು ಸರ್ವಾಂತರ್ಯಾಮಿಯ (ವಿಷ್ಣು) ರೂಪವನ್ನು ಪಡೆಯುವಂತಾಗಲಿ.
"ವೇಷಾಯ ತ್ವಾ (ತ್ವಾಮ್)"— ಯಜ್ಞರೂಪಿಯಾದ ಪರಮಾತ್ಮನಿಗಾಗಿ ಹವಿಸ್ಸನ್ನು ಪರಿವೇಷನಮಾಡಲು (ಉಣಬಡಿಸಲು) ಈ ಮೊರದಂತಹ ಯಜ್ಞಪಾತ್ರೆಯನ್ನು ನೀಡುತ್ತಿರುವೆ.
ವಿಶ್ವವ್ಯಾಪಕನಾದ ಯಜ್ಞರೂಪೀ ಶ್ರೀಮನ್ನಾರಾಯಣನಿಗಾಗಿ ಇದೋ ಸಮರ್ಪಣೆ.
ದೇವದೇವನಾದ ಪರಮೇಶ್ವರನನ್ನು ಸುಂದರ ವೇಷದಿಂದ ಅಲಂಕರಿಸಲು ನಮ್ಮನ್ನು ಸಮರ್ಥರನ್ನಾಗಿ ಮಾಡು. ("...ಶಕೇಯಂ..)
ಪವಿತ್ರವೂ, ಲೋಕಹಿತಕಾರಕವೂ ಆದ ಯಜ್ಞವನ್ನೂ, ಯಜ್ಞತುಲ್ಯ ಪವಿತ್ರಕರ್ಮಗಳನ್ನೂ ವಿಶ್ವಾದ್ಯಂತ ಪಸರಿಸುವುದಕ್ಕಾಗಿ, ಹೇ ಭಗವಂತನೇ! ನಿನಗಿದೋ ಈ ಸಮರ್ಪಣೆ. ತನ್ಮೂಲಕ ಭೂಮಿಯನ್ನು ಸ್ವರ್ಗವನ್ನಾಗಿಸು. ಸಕಲ ಜೀವರನ್ನೂ ಸುಖವಾಗಿಡು ಹೇ ದೇವಾಧಿದೇವನೆ!!
ಆದಿಶಂಕರರು ವಿಷ್ಣುತ್ವವು ಪ್ರಾಪ್ತಿಯಾಗಬೇಕಿದ್ದರೆ ಸಮಚಿತ್ತತ್ವವು ಸಿದ್ಧಿಸಬೇಕೆಂದಿರುವರು. ಹಾಗಾಗಿ "ವೇಷಾಯ ತ್ವಾ " ಎಂದರೆ ನಿನಗೆ ವಿಷ್ಣುತ್ವ / ಸಮಚಿತ್ತತ್ವವು ಸಿದ್ಧಿಸಲಿ. ಅದಕ್ಕೋಸ್ಕರ ದೇವತಾ ಉಪಾಸನಾದಿಗಳನ್ನು ಮಾಡಿ ಚಿತ್ತಶುದ್ಧಿ ಹಾಗೂ ತನ್ಮೂಲಕ ನಿತ್ಯಾನಿತ್ಯವಿವೇಕವೇ ಮುಂತಾದ ಸಾಧನಚತುಷ್ಟಯಸಂಪನ್ನತೆಯು ಹಾಗೂ ಬ್ರಹ್ಮಾತ್ಮಜ್ಞಾನವು ಸಿದ್ಧಿಸಲು ಶಕ್ತರಾಗುವಂತಾಗಲಿ (ಶಕೇಯಂ). ಹೀಗೆ, ಚಿತ್ತಶುದ್ಧಿ ಹಾಗೂ ನಿತ್ಯಾನಿತ್ಯವಿವೇಕ, ಇಹಾಮುತ್ರಫಲಭೋಗವಿರಾಗ, ಶಮ-ದಮ-ಶ್ರದ್ಧಾ-ಉಪರತಿ-ತಿತಿಕ್ಷಾ-ಸಮಾಧಾನವೆಂಬ ಷಟ್ ಸಂಪತ್ತಿ ಮತ್ತು ಮುಮುಕ್ಷುತ್ವವೆಂಬ ಸಾಧನಚತುಷ್ಟಯ ಸಂಪನ್ನತೆಗಳ ಸಿದ್ಧಿ ಹಾಗೂ ತನ್ಮೂಲಕ ಸರ್ವಸಮಭಾವ, ದ್ವಂದ್ವಾತೀತಬುದ್ಧಿ, ಸ್ಥಿತಪ್ರಜ್ಞತೆಗಳುಂಟಾಗಿ, ವಿಷ್ಣುತ್ವವು ಪ್ರಾಪ್ತಿಯಾಗಲಿ. ("ದೇವೇಭ್ಯಃ ಶಕೇಯಂ ವೇಷಾಯ ತ್ವಾ")
ವಿಶ್ವವ್ಯಾಪಕನಾದ ಯಜ್ಞರೂಪೀ ಶ್ರೀಮನ್ನಾರಾಯಣನಿಗಾಗಿ ಇದೋ ಸಮರ್ಪಣೆ.
ದೇವದೇವನಾದ ಪರಮೇಶ್ವರನನ್ನು ಸುಂದರ ವೇಷದಿಂದ ಅಲಂಕರಿಸಲು ನಮ್ಮನ್ನು ಸಮರ್ಥರನ್ನಾಗಿ ಮಾಡು. ("...ಶಕೇಯಂ..)
ಪವಿತ್ರವೂ, ಲೋಕಹಿತಕಾರಕವೂ ಆದ ಯಜ್ಞವನ್ನೂ, ಯಜ್ಞತುಲ್ಯ ಪವಿತ್ರಕರ್ಮಗಳನ್ನೂ ವಿಶ್ವಾದ್ಯಂತ ಪಸರಿಸುವುದಕ್ಕಾಗಿ, ಹೇ ಭಗವಂತನೇ! ನಿನಗಿದೋ ಈ ಸಮರ್ಪಣೆ. ತನ್ಮೂಲಕ ಭೂಮಿಯನ್ನು ಸ್ವರ್ಗವನ್ನಾಗಿಸು. ಸಕಲ ಜೀವರನ್ನೂ ಸುಖವಾಗಿಡು ಹೇ ದೇವಾಧಿದೇವನೆ!!
ಆದಿಶಂಕರರು ವಿಷ್ಣುತ್ವವು ಪ್ರಾಪ್ತಿಯಾಗಬೇಕಿದ್ದರೆ ಸಮಚಿತ್ತತ್ವವು ಸಿದ್ಧಿಸಬೇಕೆಂದಿರುವರು. ಹಾಗಾಗಿ "ವೇಷಾಯ ತ್ವಾ " ಎಂದರೆ ನಿನಗೆ ವಿಷ್ಣುತ್ವ / ಸಮಚಿತ್ತತ್ವವು ಸಿದ್ಧಿಸಲಿ. ಅದಕ್ಕೋಸ್ಕರ ದೇವತಾ ಉಪಾಸನಾದಿಗಳನ್ನು ಮಾಡಿ ಚಿತ್ತಶುದ್ಧಿ ಹಾಗೂ ತನ್ಮೂಲಕ ನಿತ್ಯಾನಿತ್ಯವಿವೇಕವೇ ಮುಂತಾದ ಸಾಧನಚತುಷ್ಟಯಸಂಪನ್ನತೆಯು ಹಾಗೂ ಬ್ರಹ್ಮಾತ್ಮಜ್ಞಾನವು ಸಿದ್ಧಿಸಲು ಶಕ್ತರಾಗುವಂತಾಗಲಿ (ಶಕೇಯಂ). ಹೀಗೆ, ಚಿತ್ತಶುದ್ಧಿ ಹಾಗೂ ನಿತ್ಯಾನಿತ್ಯವಿವೇಕ, ಇಹಾಮುತ್ರಫಲಭೋಗವಿರಾಗ, ಶಮ-ದಮ-ಶ್ರದ್ಧಾ-ಉಪರತಿ-ತಿತಿಕ್ಷಾ-ಸಮಾಧಾನವೆಂಬ ಷಟ್ ಸಂಪತ್ತಿ ಮತ್ತು ಮುಮುಕ್ಷುತ್ವವೆಂಬ ಸಾಧನಚತುಷ್ಟಯ ಸಂಪನ್ನತೆಗಳ ಸಿದ್ಧಿ ಹಾಗೂ ತನ್ಮೂಲಕ ಸರ್ವಸಮಭಾವ, ದ್ವಂದ್ವಾತೀತಬುದ್ಧಿ, ಸ್ಥಿತಪ್ರಜ್ಞತೆಗಳುಂಟಾಗಿ, ವಿಷ್ಣುತ್ವವು ಪ್ರಾಪ್ತಿಯಾಗಲಿ. ("ದೇವೇಭ್ಯಃ ಶಕೇಯಂ ವೇಷಾಯ ತ್ವಾ")
३. प्रत्युष्टग्ं रक्षः प्रत्युष्टा अरातयः—
सायण-भाष्यम्
प्रत्युष्टम् इति ॥ कल्पः— "प्रत्युष्टग्ं रक्षः प्रत्युष्टा अरातयः, इति आहवनीये गार्हपत्ये वा प्रतितप्य " (आपस्तम्ब-श्रौतसूत्रम् १-१७-१) इति । व्याचष्टे— "प्रत्युष्टग्ं रक्षः प्रत्युष्टा अरातयः, इति आह । रक्षसाम् अपहत्यै " (तैत्तिरीय-ब्राह्मणम् ३-२-४) इति ॥
ಪ್ರತ್ಯುಷ್ಟಮ್ ಎಂಬುದಾಗಿ. ಆಪಸ್ತಂಬ ಶ್ರೌತಸೂತ್ರವು (೧.೧೭.೧) ಈ ವಿನಿಯೋಗವನ್ನು ಹೇಳಿದೆ— "ಪ್ರತ್ಯುಷ್ಟಗ್ಂ ರಕ್ಷಃ ಪ್ರತ್ಯುಷ್ಟಾ ಅರಾತಯಃ, ಎಂದು ಆಹವನೀಯಾಗ್ನಿ (ಹೋಮಾಗ್ನಿ) ಅಥವಾ ಗಾರ್ಹಪತ್ಯಾಗ್ನಿ (ಗೃಹಪತಿಯ / ಯಜಮಾನನ ನಿತ್ಯಾಗ್ನಿ) ಯಲ್ಲಿ ಬಿಸಿಮಾಡಿ, ಕಾಯಿಸಿ, ಸುಟ್ಟುಹಾಕಿ…" ಎಂಬುದಾಗಿ. ತೈತ್ತಿರೀಯ ಸಂಹಿತೆ (೩.೨.೪) ಹೇಳಿದೆ— " ಪ್ರತ್ಯುಷ್ಟಗ್ಂ ರಕ್ಷಃ ಪ್ರತ್ಯುಷ್ಟಾಃ, ಅರಾತಯಃ, ಎಂದು ಹೇಳಿದೆ. ರಕ್ಷೋಗಣಗಳ, ದುಷ್ಟಶಕ್ತಿಸಮೂಹದ, ವಿಘ್ನಗಳ ನಿವಾರಣೆಗಾಗಿ, ನಾಶಕ್ಕಾಗಿ " ಎಂಬುದಾಗಿ.
भट्टभास्कर-भाष्यम्
' प्रत्युष्टम् ' इति प्रतितपनमन्त्रो व्याख्यातः (तै.सं १-१-२) ॥
(तत्र उक्तम्— गार्हपत्ये प्रतितपति - प्रत्युष्टं इति गायत्र्यैकपदा ॥ यद् अत्र छिद्र-अन्वेषि-रक्षः तद् अनेन प्रतितपनेन प्रत्युष्टं प्रतिमुखीकृत्य दग्धम् अस्तु । उष दाहे । किं च अरातयः, अपि प्रत्युष्टाः सन्तु । रातयः धनस्य दातारः सुहृदः । अतः, अन्ये अरातयः ॥)
'ಪ್ರತ್ಯುಷ್ಟಮ್ ' ಎಂಬ ಪ್ರತಿ-ತಪನ (ವಿರುದ್ಧಶಕ್ತಿಗಳ ದಾಹಕ) ಮಂತ್ರವು ಹಿಂದೆ "ಯಜ್ಞಸ್ಯ ಘೋಷದಸಿ ಪ್ರತ್ಯುಷ್ಟಗ್ಂ ರಕ್ಷಃ ಪ್ರತ್ಯುಷ್ಟಾ ಅರಾತಯಃ ಪ್ರೇಯಮಗಾದ್ಧಿಷಣಾ ಬರ್ಹಿರಚ್ಛ ಮನುನಾ ಕೃತಾ…" ಎಂಬ ಬರ್ಹಿರಾಹರಣ (ದರ್ಭೆ ಸಂಗ್ರಹ) ವಿಧಿಯನ್ನು ಹೇಳುವ ತೈತ್ತಿರೀಯಸಂಹಿತೆಯ ೧.೧.೨ನೇ ಮಂತ್ರದ ಭಾಷ್ಯದಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ.
(ಅಲ್ಲಿ ಹೇಳಿದೆ— ಈ ಏಕಪದಾಗಾಯತ್ರೀಚ್ಛಂದೋಮಂತ್ರದಿಂದ ಗಾರ್ಹಪತ್ಯಾಗ್ನಿಯಲ್ಲಿ (ದರ್ಭೆಕೊಯ್ಯುವ ಕತ್ತಿಯನ್ನು ) ಬಿಸಿಮಾಡುತ್ತಾನೆ. ಇಲ್ಲಿ ಯಾವ ದುರ್ಬಲ ಕ್ಷೇತ್ರವನ್ನು ಹುಡುಕಿ ದುಷ್ಟಶಕ್ತಿಗಳು ಒಳಬರಲು ಯತ್ನಿಸುವುವೋ, ಅವೆಲ್ಲಾ ಈ ತಾಪದೆಡೆಗೆ ಸಿಲುಕಿ ಉರಿಯಲಿ. ಪ್ರತ್ಯುಷ್ಟ ಎಂಬಲ್ಲಿನ (प्रति+उष्ट) उष धातुः, दहनार्थकः । ಅಂತೆಯೇ, ದುಷ್ಟರೂ ಶತ್ರುಗಳೂ ಕೂಡ ದಹಿಸಿ ಹೋಗಲಿ. ರಾತಯಃ ಎಂದರೆ ಧನದ ದಾನಿಗಳು, ಸಹೃದಯೀಮಿತ್ರರು. ಇದಲ್ಲದವರು “ಅರಾತಯಃ”, ಶತ್ರುಗಳು.)
ಆಧ್ಯಾತ್ಮಿಕಭಾಷ್ಯ
ರಾಕ್ಷಸನು ದಹನ ಹೊಂದಿರುವನು, ದುಷ್ಟಶಕ್ತಿಗಳು (ಶತ್ರುಗಳು) ದಹನ ಹೊಂದಿವೆ. (ಆರ್.ಯಲ್.ಕಶ್ಯಪ)
" ಪ್ರತ್ಯುಷ್ಟಂ, ರಕ್ಷಃ "— ರಾಕ್ಷಸನು ಸುಡಲ್ಪಟ್ಟಿರುವನು. ರಕ್ಷಃ, ರಕ್ಷಸೀ, ರಕ್ಷಾಂಸಿ ಎಂಬಂತೆ ನಡೆಯುವ ಸಕಾರಾಂತ ನಪುಂಸಕಲಿಂಗ ಶಬ್ದ ರಕ್ಷಸ್. " रक्ष्यते हविः, अस्माद्, इति रक्षः "— " ಇವನ ಕೈಗೆ ಸಿಗದಂತೆ ಯಜ್ಞಹವಿಸ್ಸು ಯಾಜ್ಞಿಕರಿಂದ ರಕ್ಷಿಸಲ್ಪಡುತ್ತದೆಂಬುದರಿಂದ ಯಜ್ಞಶತ್ರುವೇ ರಕ್ಷಸ್ ".
"ಪ್ರತ್ಯುಷ್ಟಾಃ, ಅರಾತಯಃ"— ಶತ್ರುಗಳು ಉರಿಸಲ್ಪಟ್ಟಿವೆ. ಅರಾತಿಃ, ಅರಾತೀ, ಅರಾತಯಃ ಎಂಬಂತೆ ನಡೆಯುವ ಇಕಾರಾಂತ ಪುಲ್ಲಿಂಗ ಶಬ್ದ ಅರಾತಿಃ. " न राति ददाति सुखं इति अरातिः " (नञ्-समासः)— "ಸುಖವನ್ನು ಕೊಡದವನು ಅರಾತಿಯು, ಶತ್ರುವು".
ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿ-ಷಡ್-ವರ್ಗ (೬ ಶತ್ರುಗಳ ಸಮೂಹ), ಅಹಂತೆ (ನಾನು)—ಮಮತ್ವ (ನನ್ನದು) ಭಾವಗಳು, ಚಿತ್ತದ ಸಂಚಿತ ಪುಣ್ಯಪಾಪಕರ್ಮರಾಶಿ, ಮನಸ್ಸಿನ ಕೆಟ್ಟ ಯೋಚನೆಗಳು, ಕೆಟ್ಟ ಮಾತುಗಳು, ಕೆಟ್ಟ ಕರ್ಮಗಳು, ಕೆಟ್ಟ ಬುದ್ಧಿ— ಎಂಬೀ ಅಂತಃಕರಣ ಚತುಷ್ಟಯದ ಮಾಲಿನ್ಯ, ದೇಹವೇ ನಾನು / ಆತ್ಮ ಎಂಬ ಭ್ರಮೆ (ದೇಹಾತ್ಮಭಾವ), ಆತ್ಮಾನಾತ್ಮ / ನಿತ್ಯಾನಿತ್ಯ ವಿವೇಕರಾಹಿತ್ಯ— ಮುಂತಾದುವೇ ನಮ್ಮ ನಿಜವಾದ ಶತ್ರುಗಳು.
"ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ |
ನಾಸ್ತ್ಯುದ್ಯಮಸಮೋ ಬನ್ಧುಃ ಕುರ್ವಾಣೋ ನಾವಸೀದತಿ ||"
ಎಂಬ ಸುಭಾಷಿತದಂತೆ, ನಮ್ಮೊಳಗಿನ, ನಮ್ಮ ಶರೀರದಲ್ಲೇ ಇರುವ ಆಲಸ್ಯ / ಸೋಮಾರಿತನವೇ ನಮ್ಮ ದೊಡ್ಜ ಶತ್ರು. ಸದಾ ಕರ್ತವ್ಯಶೀಲತೆಯಿಂದ (ಮಾಡಬೇಕಾದ ಅನಿಂದ್ಯಕರ್ಮವನ್ನು ಮಾಡುತ್ತಿರುವುದರಿಂದ) ಮನುಷ್ಯನು ಪತನಹೊಂದಲಾರನು.
ಹೀಗೆ ಇಂತಹ ಅಂತರಂಗದ ಶತ್ರುಗಳನ್ನೆಲ್ಲ, ಹಾಗೆಯೇ ಅವಿದ್ಯೆ / ಅಜ್ಞಾನ, ಅವಿವೇಕಗಳನ್ನೆಲ್ಲ ಜ್ಞಾನಾಗ್ನಿಯು ಸುಡಲಿ. ಸನ್ಮಾರ್ಗಗಾಮಿಗೆ ಬರಬಹುದಾದ ಹೊರಗಿನ ಶತ್ರುಗಳನ್ನೂ ಪರಮಾತ್ಮನು ನಾಶಪಡಿಸಲಿ.
ತೈ.ಸಂಹಿತೆಯ ಪ್ರಥಮಕಾಂಡದ ಪ್ರಥಮ ಪ್ರಪಾಠಕದ ನಾಲ್ಕನೆಯ ಅನುವಾಕದ ಮೊದಲ ಮೂರು ಮಂತ್ರಗಳ ಅರ್ಥವನ್ನು ಜೊತೆಜೊತೆಗೆ ಅವಲೋಕಿಸಿದರೆ ಹೀಗಾಗುವುದು—
"ಕರ್ಮಣೇ ವಾಂ ದೇವೇಭ್ಯಃ ಶಕೇಯಂ (1), ವೇಷಾಯ ತ್ವಾ (2), ಪ್ರತ್ಯುಷ್ಟಗ್ಂ ರಕ್ಷಃ ಪ್ರತ್ಯುಷ್ಟಾ ಅರಾತಯಃ (3)"
"ಸಮತ್ವಬುದ್ಧಿ / ಸ್ಥಿತಪ್ರಜ್ಞತೆ / ವಿಷ್ಣುತ್ವದ ಸಿದ್ಧಿಗಾಗಿ ದೇವತಾ ಉಪಾಸನಾದಿ ಕರ್ಮಗಳನ್ನಾಚರಿಸಲು ನಿಮ್ಮನ್ನು ಪರಮಾತ್ಮನು ಸಶಕ್ತರನ್ನಾಗಿಸಲಿ. ಈ ಸಾಧನೆಗೆ ಬರಬಹುದಾದ ಸಾಧಕನ ಅಂತರಂಗ-ಬಹಿರಂಗ ಶತ್ರುಗಳು ಬ್ರಹ್ಮಾತ್ಮಜ್ಞಾನವೆಂಬ ಅಗ್ನಿಯಿಂದ ಸುಟ್ಟುಹೋಗಲಿ."
४. धूरसि धूर्व धूर्वन्तं धूर्व तं योऽस्मान् धूर्वति तं धूर्व यं वयं धूर्वामः—
पदच्छेदः—
धूः, असि, धूर्व, धूर्वन्तम्, धूर्व, तम्, यः, अस्मान्, धूर्वति, तम्, धूर्व, यम्, वयम्, धूर्वामः
अन्वयार्थः भाष्यं च—
धूः असि— हे अग्ने! परमेश्वर! धुर्य! (धुरीण! नायक! धुरं वहति इति, धुर्वहे वृषादौ, कार्यनिर्वाहके, जगद्भारवाहके, श्रेष्ठे, महाविष्णौ "स्कन्दः स्कन्दधरो धुर्यः" इति विष्णुसहस्रनामे महाभारते; समस्त-जन्तु-जन्मादि-लक्षण-कार्य-निर्वाहकत्वात् तस्य तथात्वम् । "एष वै धुर्योऽग्निः" इति तै.ब्राह्मणम् ३.२.४) त्वं हिंसकः असि । (हिंसां करोतीति हिंसकः, हिनस्ति तत्-शीलः हिंसकः, 'धुर्वी हिंसायाम् ' धातुः) दुष्टानां सिंहस्वप्नोऽसि । त्वं देवतानामग्रणीः अपि असि । (धूरित्यग्रम्— शब्दकल्पद्रुमः)अतः अग्निनामासि । अग्रे नयत्यस्मानिति अग्निः । त्वं भारभूतः, कृष्यर्थं हलमिव (धुरम्— हलम्) देवताहविस्समर्पणार्थं प्रधानमाध्यमः असि । त्वं सदा ज्वालारूपेण कम्पमानः, विधूनशीलः, भस्मीकर्ता वा असि । (धू विधूनने, कम्पने वा)
ಹೇ ಅಗ್ನಿಯೆ! ಪರಮೇಶ್ವರನೆ! ಧುರ್ಯನೆ (ಧುರೀಣನೆ! ನಾಯಕನೆ! ಧುರವನ್ನು / ನೇಗಿಲನ್ನು / ನೊಗವನ್ನು ವಹಿಸುತ್ತಾನೆ, ಹೊರುತ್ತಾನೆ, ಒಯ್ಯುತ್ತಾನಾದ್ದರಿಂದ ನೊಗವನ್ನು ಆಧರಿಸುವ ಎತ್ತು ಮೊದಲಾದವುಗಳಲ್ಲಿ, ಕಾರ್ಯನಿರ್ವಾಹಕನಲ್ಲಿ, ಜಗದ್ಭಾರವಾಹಕನಲ್ಲಿ, ಶ್ರೇಷ್ಠನಲ್ಲಿ, ಮಹಾವಿಷ್ಣುವಿನಲ್ಲಿ ತಾತ್ಪರ್ಯವು. "ಸ್ಕನ್ದಃ ಸ್ಕನ್ದಧರೋ ಧುರ್ಯಃ" ಎಂದು ಮಹಾಭಾರತದ ವಿಷ್ಣುಸಹಸ್ರನಾಮದಲ್ಲಿದೆ; ಸಕಲ ಜಂತುಗಳ ಜನ್ಮವೇ ಮೊದಲಾದ ಲಕ್ಷಣವುಳ್ಳ ಕಾರ್ಯಗಳನ್ನು ನಿರ್ವಹಿಸುವುದರಿಂದ ಆ ಪರಮೇಶ್ವರ ಪರಬ್ರಹ್ಮನಿಗೆ ಅಂತಹ ಹೆಸರು. "ಇವನೇ / ಪರಬ್ರಹ್ಮನೇ ಲೋಕವನ್ನು ಮುನ್ನಡೆಸಬಲ್ಲ ಧುರ್ಯನೂ, ದುಷ್ಟರನ್ನು ಸುಡಬಲ್ಲ ಅಗ್ನಿಯೂ ಆಗಿರುವನು" ಎಂದು ತೈತ್ತಿರೀಯಬ್ರಾಹ್ಮಣ ೩.೨.೪ ರಲ್ಲಿ ಹೇಳಿದೆ.) ನೀನು ಹಿಂಸಕನಾಗಿದ್ದಿ. (ಹಿಂಸೆಯನ್ನು ಮಾಡುತ್ತಾನಾದ್ದರಿಂದ ಹಿಂಸಕನು, ಹಿಂಸಿಸುತ್ತಾನೆ, ಎಂಬ ಆ ಗುಣವುಳ್ಳವನು ಹಿಂಸಕನು, 'ಧುರ್ವೀ ಹಿಂಸಾಯಾಮ್ ' ಧಾತು.) ದುಷ್ಟರಿಗೆ ಸಿಂಹಸ್ವಪ್ನನಾಗಿರುವಿ. ನೀನು ದೇವತೆಗಳಲ್ಲಿ ಮೊದಲಿನವನಾಗಿರುವಿ. (ಧೂಃ ಎಂದರೆ ಅಗ್ರಮ್ / ಮುಂದು ಎಂದು ಶಬ್ದಕಲ್ಪದ್ರುಮವು ಹೇಳಿದೆ.) ಆದ್ದರಿಂದ ಅಗ್ನಿನಾಮಕನಾಗಿರುವಿ. ಮುಂದಕ್ಕೆ ಕರೆದೊಯ್ಯುತ್ತಾನೆ ನಮ್ಮನ್ನು ಎಂಬುದರಿಂದಾಗಿ ಅಗ್ನಿಯು. ನೀನು ಭಾರವುಳ್ಳವನು, ಉಳುಮೆಗೆ ನೊಗದಂತೆ (ಧುರಮ್— ಹಲಮ್, ನೇಗಿಲು) ದೇವತಾಹವಿಸ್ಸಮರ್ಪಣೆಗೆ ಪ್ರಧಾನ ಮಾಧ್ಯಮವಾಗಿರುವೆ. ನೀನು ಸದಾ ಜ್ವಾಲಾರೂಪಿಯಾಗಿ ಕಂಪನಶೀಲನಾಗಿರುವೆ, ಎಲ್ಲವನ್ನೂ ಭಸ್ಮಗೊಳಿಸಬಲ್ಲವನಾಗಿರುವೆ. (ಧೂ ವಿಧೂನನೇ ಅಥವಾ ಕಂಪನೇ ಧಾತು.)
धूर्वन्तम् धूर्व— त्वं हिंसकं राक्षसादिकं दुष्टं विनाशय ।
ನೀನು ಹಿಂಸಕನಾದ ರಾಕ್ಷಸಾದಿಯಾದ ದುಷ್ಟನನ್ನು ನಾಶಪಡಿಸು.
यः अस्मान् धूर्वति तं धूर्व— यो व्यक्तिः पशुर्वा, या शक्तिः अस्मान् याजकान्, शिष्टान्, धर्मनिरतान् सज्जनान् जिघांसति घातयति हन्ति वा, तादृशं व्यक्तिं पशुं वा, तादृशीं शक्तिं विनाशय । अन्तरङ्गशत्रून् काम-क्रोधाद्यरिषड्वर्गं, आलस्यादीन्, चित्तमालिन्यञ्च अपाकुरु ।
ಯಾವ ಹೊರಗಿನ ವ್ಯಕ್ತಿ, ಪಶು ಅಥವಾ ಶಕ್ತಿಯು, ಯಜ್ಞಕರ್ತೃಗಳೂ, ಶಿಷ್ಟರೂ, ಧರ್ಮನಿಷ್ಠರೂ, ಸಜ್ಜನರೂ ಆದ ನಮ್ಮನ್ನು ಹಿಂಸಿಸುತ್ತಾನೋ / ಹಿಂಸಿಸುತ್ತದೋ, ಅಂತಹ ವ್ಯಕ್ತಿ, ಪಶು ಅಥವಾ ಶಕ್ತಿಯನ್ನು ನಾಶಮಾಡು. ಅಂತರಂಗಶತ್ರುಗಳಾದ ಕಾಮ, ಕ್ರೋಧಾದಿ ಅರಿಷಡ್ವರ್ಗವನ್ನೂ, ಆಲಸ್ಯಾದಿಗಳನ್ನೂ, ಚಿತ್ತಮಾಲಿನ್ಯವನ್ನೂ ದೂರಮಾಡು.
यं वयं धूर्वामः, तं धूर्व— यं दुष्टं यज्ञवैरिणं अधर्मिणं वयं नाशयामः, तादृशं शत्रुं त्वमपि निवारय, निवारणे सहकारी भव । "द्वौ वाव पुरुषौ । यं चैव धूर्वति । यश्चैनं धूर्वति । तावुभौ शुचाऽर्पयति " इति तै.ब्राह्मणम् (३.२.४) । देवदेवः साधकस्य, भक्तस्य, प्रपन्नस्य अन्तरङ्गशत्रून् बहिरङ्गशत्रूंश्च शोकेन योजयति, निवारयति इत्यर्थः ॥
ಯಾವ ಯಜ್ಞವಿರೋಧಿಯೂ, ಅಧರ್ಮಿಯೂ ಆದ ದುಷ್ಟನನ್ನು ನಾವು ನಾಶಮಾಡುತ್ತೇವೆಯೋ ಅಂತಹ ಶತ್ರುವನ್ನು ನೀನೂ ಸಹ ನಿವಾರಿಸು, ನಿವಾರಣೆಯಲ್ಲಿ ಸಹಕಾರಿಯಾಗು. "ಇಬ್ಬರೇ ಪುರುಷರು / ವ್ಯಕ್ತಿಗಳು. ಅಗ್ನಿಯು ಯಾವನನ್ನು ನಾಶಮಾಡುತ್ತಾನೋ ಅವನು ಒಬ್ಬ ಹಾಗೂ ಯಾವನು ಇವನನ್ನು / ಯಜ್ಞಾಗ್ನಿಯನ್ನು / ಯಜಮಾನನ್ನು ಹಿಂಸಿಸುತ್ತಾನೋ ಅವನು ಮತ್ತೊಬ್ಬ. ಅವರೀರ್ವರನ್ನೂ ಶೋಕತಪ್ತರನ್ನಾಗಿಸುತ್ತಾನೆ ಎಂದಿದೆ ತೈತ್ತಿರೀಯಬ್ರಾಹ್ಮಣ ೩.೨.೪. ದೇವದೇವನು ಸಾಧಕನ (ಅದ್ವೈತ), ಭಕ್ತನ (ದ್ವೈತ), ಶರಣಾಗತನ (ವಿಶಿಷ್ಟಾದ್ವೈತ) ಹೊರಗಿನ ಶತ್ರುಗಳನ್ನೂ, ಒಳಗಿನ ಶತ್ರುಗಳನ್ನೂ ದುಃಖಕ್ಕೀಡುಮಾಡುತ್ತಾನೆ, ಇಲ್ಲವಾಗಿಸುತ್ತಾನೆ ಎಂದರ್ಥ.
५. त्वं देवानामसि सस्नितमं पप्रितमं जुष्टतमं वह्नितमं देवहूतममह्रुतमसि हविर्धानं दृग्ंहस्व मा ह्वाः—
೫. ತ್ವಂ ದೇವಾನಾಮಸಿ ಸಸ್ನಿತಮಂ ಪಪ್ರಿತಮಂ ಜುಷ್ಟತಮಂ ವಹ್ನಿತಮಂ ದೇವಹೂತಮಮಹ್ರುತಮಸಿ ಹವಿರ್ಧಾನಂ ದೃಗ್ಂಹಸ್ವ ಮಾ ಹ್ವಾಃ—
पदच्छेदः—
त्वम्, देवानाम्, असि, सस्नि-तमम्, पप्रि-तमम्, जुष्ट-तमम्, वह्नि-तमम्, देव-हू-तमम्, अह्रुतम्, असि, हविः-धानम्, दृंहस्व, मा, ह्वाः
ಪದಚ್ಛೇದಃ—
ತ್ವಮ್, ದೇವಾನಾಮ್, ಅಸಿ, ಸಸ್ನಿ-ತಮಮ್, ಪಪ್ರಿ-ತಮಮ್, ಜುಷ್ಟ-ತಮಮ್, ವಹ್ನಿ-ತಮಮ್, ದೇವ-ಹೂ-ತಮಮ್, ಅಹ್ರುತಮ್, ಅಸಿ, ಹವಿಃ-ಧಾನಮ್, ದೃಂಹಸ್ವ, ಮಾ, ಹ್ವಾಃ
अन्वयार्थः भाष्यं च—
त्वं देवानाम् असि— (कर्मपरम्—) हे देवता-हवि-र्वाहक-हव्यवाहन! अग्ने!! त्वं देवानाम् असि । त्वं देवार्थं यज्ञे हविर्धारणेन हविर्वहनेन च देवसम्बन्धी भवसि ॥
ತ್ವಂ ದೇವಾನಾಮ್ ಅಸಿ— (ಕರ್ಮಪರ—) ಹೇ ದೇವತೆಗಳಿಗೆ ಹವಿಸ್ಸನ್ನೊಯ್ಯುವ ಹವ್ಯವಾಹನನೆ! ಅಗ್ನಿಯೆ! ನೀನು ದೇವತೆಗಳವನಾಗಿರುವಿ. ನೀನು ದೇವತೆಗಳಿಗಾಗಿ ಯಜ್ಞದಲ್ಲಿ ಹವಿಸ್ಸನ್ನು ಧರಿಸುವುದರಿಂದ, ಹವಿಸ್ಸನ್ನೊಯ್ಯುವುದರಿಂದಲೂ ದೇವತೆಗಳಿಗೆ ಸಂಬಂಧಿಸಿದವನೇ ಆಗುವಿ.
(ज्ञानपरम्—) भोः परमेश्वर! भगवन्!! परमात्मन्!!! परब्रह्मन्! भवान् समस्तदेवानां योनिः कारणो वा असि ॥
(ಜ್ಞಾನಪರ—) ಅಯ್ಯಾ ಪರಮೇಶ್ವರನೆ! ಭಗವಂತನೆ!! ಪರಮಾತ್ಮನೆ!!! ಪರಬ್ರಹ್ಮವೆ! ತಾವು (ನೀನು) ಸಮಸ್ತ ದೇವತೆಗಳ ಜನ್ಮಸ್ಥಾನ ಅಥವಾ ಕಾರಣವೇ ಆಗಿರುವಿ(ರಿ).
सस्नितमम्— अत एव त्वं (देवानां) शुद्धतमं (ष्णा शौचे— स्नाति— स्नानं करोति, स्नात्वा शुचिर्भूतः), परिशुद्धः पावकः (पुनाति इति, पू शोधे, पवने वा), स्नेहपूर्णः स्नेहगुणसहितो (स्निह प्रीतौ, स्निट् स्नेहने, स्नेह् स्नेहने) वा असि सर्वचराचराणाम् ॥
ಸಸ್ನಿತಮಮ್— ಆದ್ದರಿಂದಲೇ ನೀನು (ದೇವತೆಗಳಲ್ಲಿ) ಶುದ್ಧತಮನು (ಷ್ಣಾ ಶೌಚೇ— ಸ್ನಾತಿ— ಮೀಯು, ಸ್ನಾನಮಾಡು, ಮಿಂದು ಶುಚಿರ್ಭೂತನಾಗು), ಪರಿಶುದ್ಧನಾದ ಪಾವಕನು / ಅಗ್ನಿಯು (ಪುನಾತಿ ಇತಿ, ಪೂ ಶೋಧೇ, ಪವನೇ ವಾ), ಸ್ನೇಹಪೂರ್ಣನು ಅಥವಾ ಸ್ನೇಹಗುಣಸಹಿತನು (ಸ್ನಿಹ ಪ್ರೀತೌ, ಸ್ನಿಟ್ ಸ್ನೇಹನೇ, ಸ್ನೇಹ್ ಸ್ನೇಹನೇ ಧಾತುವು) ಆಗಿರುವಿ ಸಕಲ ಚರಾಚರಗಳಿಗೂ.
पप्रितमम्— त्वं पूर्णतमं (प्रा पूरणे) व्रीह्यादिभिः, परिपूर्णो (" पूर्णमदः पूर्णमिदं पूर्णात् पूर्णमुदच्यते । पूर्णस्य पूर्णमादाय पूर्णमेवावशिष्यते ॥"— श्रुतिः) जगद्व्यापी वा असि (देवानां मध्ये) विष्णुत्वात् ("विश्वं व्याप्नोति प्रविशति च इति विष्णुः"), पुरुषोत्तमत्वाद्वा परमपुरुषत्वाद्वा (पृ पालन-पूरण-प्रीति-व्यायाम / पौरुषेषु) । भगवान् सर्वान् पालयति, सर्वेभ्यः शक्तिं पूरयति, सर्वान् प्रीत्या पश्यति, सर्वशक्तः, अपरिमित-पौरुष-पराक्रमवान् अस्ति । अतः, सः परिपूर्णः सन्, " पप्रितमम् " इति स्मृतः ॥
ಪಪ್ರಿತಮಮ್— ನೀನು (ಯಜ್ಞಾಗ್ನಿಯು / ಪರಮೇಶ್ವರನು) ಪೂರ್ಣತಮನೂ (ಪ್ರಾ ಪೂರಣೇ ಧಾತುವು) ಧಾನ್ಯಾದಿಗಳಿಂದ ತುಂಬಿರುವವನೂ, ಪರಿಪೂರ್ಣನೂ ("ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||"— "ಅದೂ ಪೂರ್ಣವೇ, ಇದೂ ಪೂರ್ಣವೇ. ಅದೂ ತುಂಬಿದೆ, ಇದೂ ತುಂಬಿದೆ. ಪೂರ್ಣದಿಂದಲೇ ಪೂರ್ಣವು ಉಂಟಾಗುತ್ತದೆ. ಪೂರ್ಣದಿಂದ ಪೂರ್ಣವನ್ನು ತೆಗೆದಾಗ ಪೂರ್ಣವೇ ಉಳಿದುಕೊಳ್ಳುವುದು."— ಶ್ರುತಿ) ಅಥವಾ ಜಗದ್ವಾಪಿಯೂ ಆಗಿರುವಿ (ದೇವತೆಗಳ ನಡುವೆ), ನೀನು ವಿಷ್ಣುವಾಗಿರುವುದರಿಂದಾಗಿ / ನಿನ್ನ ವಿಷ್ಣುತ್ವದಿಂದಾಗಿ ("ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ"— "ವಿಶ್ವವನ್ನು / ಸರ್ವವನ್ನು ವ್ಯಾಪಿಸುತ್ತಾನೆ ಹಾಗೂ ಪ್ರವೇಶಿಸುತ್ತಾನೆ ಎಂಬುದರಿಂದ ವಿಷ್ಣುವು"), ನಿನ್ನ ಪುರುಷೋತ್ತಮತ್ವದಿಂದಾಗಿ / ನೀನು ಪುರುಷೋತ್ತಮ / ಪರಮಪುರುಷನಾಗಿರುವುದರಿಂದಾಗಿ (ಪೃ ಪಾಲನ-ಪೂರಣ-ಪ್ರೀತಿ-ವ್ಯಾಯಾಮ/ಪೌರುಷೇಷು ಧಾತುವು). ಭಗವಂತನು ಎಲ್ಲರನ್ನೂ ಪಾಲಿಸುತ್ತಾನೆ, ಎಲ್ಲರಿಗೂ ಶಕ್ತಿಯನ್ನು ಪೂರೈಸುತ್ತಾನೆ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾನೆ, ಸರ್ವಶಕ್ತನೂ ಅಪರಿಮಿತ ಪೌರುಷ-ಪರಾಕ್ರಮವುಳ್ಳವನೂ ಆಗಿರುವನು. ಆದ್ದರಿಂದ ಆತನು ಪರಿಪೂರ್ಣನಾಗಿದ್ದು, " ಪಪ್ರಿತಮಮ್ " ಎನಿಸಿರುವನು.
जुष्टतमम्— हे अग्निरूपेऽपि वर्तमान परमात्मन्!! त्वं प्रियतमं (देवानां) सेव्यतमं परितर्पणीयतमं परितर्कणीयतमं ध्येयतमं च असि (जुष प्रीतौ सेवने परितर्पणे परितर्कणे वा) ॥
ಜುಷ್ಟತಮಮ್— ಹೇ ಅಗ್ನಿರೂಪಿಯಾಗಿಯೂ ಇರುವ ಪರಮಾತ್ಮನೆ!! ನೀನು ಪ್ರಿಯರಲ್ಲಿ ಹೆಚ್ಚಿನವನೂ, (ದೇವತೆಗಳಲ್ಲಿ) ಸೇವೆಗೆ ಯೋಗ್ಯರಾದವರಲ್ಲಿ ಹೆಚ್ಚಿನವನೂ, ಯಾರನ್ನೆಲ್ಲ ಧ್ಯಾನಿಸಲು ಯೋಗ್ಯರೋ ಅಂಥವರಲ್ಲಿ ಶ್ರೇಷ್ಠನೂ ಆಗಿರುವಿ (ಜುಷ ಪ್ರೀತೌ ಸೇವನೇ ಪರಿತರ್ಪಣೇ ಪರಿತರ್ಕಣೇ ವಾ ಧಾತುವು).
हे परमात्मन्! त्वं सकलचराचराणामन्तरात्मा भूत्वा तेषां सर्वेषां श्रेष्ठः, आश्रयणीयः असि । तेषां सर्वेषामपि सर्वविषयेष्वपि उत्तमम् आश्रयस्थानम् असि॥
ಹೇ ಪರಮಾತ್ಮನೆ!! ನೀನು ಸಕಲ ಚರಾಚರಗಳ ಅಂತರಾತ್ಮನಾಗಿದ್ದು, ಅವರೆಲ್ಲರಿಗೆ ಶ್ರೇಷ್ಠನಾದ ಆಶ್ರಯಣೀಯನಾಗಿರುವಿ. ಅವರೆಲ್ಲರಿಗೂ ಎಲ್ಲವಿಷಯಕ್ಕೂ ಉತ್ತಮವಾದ ಆಶ್ರಯಸ್ಥಾನವಾಗಿರುವಿ.
वह्नितमम्— हे अग्ने! त्वं हविषो वाहकतमम्, हविषां वोढृतमम् (अपि) असि । त्वं देवानां हविःप्रापयितृषु वाहकेषु वाहनेषु वा श्रेष्ठतमम् असि ॥
ವಹ್ನಿತಮಮ್— ಹೇ ಅಗ್ನಿಯೆ! ನೀನು ಹವಿಸ್ಸನ್ನು ಒಯ್ಯುವವರಲ್ಲಿ ಉತ್ತಮನೂ, ಹವಿಸ್ಸುಗಳ ಸಾಗಣೆಮಾಡುವವರಲ್ಲಿ ಶ್ರೇಷ್ಠನೂ (ಕೂಡ) ಆಗಿರುವಿ. ನೀನು ದೇವತೆಗಳಿಗೆ ಹವಿಸ್ಸನ್ನು ತಲುಪಿಸುವ ವಾಹಕಗಳಲ್ಲಿ ಅಥವಾ ವಾಹನಗಳಲ್ಲಿ ಶ್ರೇಷ್ಠತಮನಾಗಿರುವಿ.
हे परमेश्वर! त्वं देवदेवोऽसि । देवदेवस्य तव हविष्यान्नस्य प्रापकः श्रेष्ठतमः माध्यमोऽपि त्वमेवासि अग्निरूपेण ॥
ಹೇ ಪರಮೇಶ್ವರನೆ! ನೀನು ದೇವದೇವನಾಗಿರುವೆ. ದೇವದೇವನಾದ ನಿನಗೆ, ಹವಿಷ್ಯಾನ್ನದ ಪ್ರಾಪ್ತಿಮಾಡಿಸುವ ಶ್ರೇಷ್ಠತಮವಾದ / ಉತ್ತಮೋತ್ತಮವಾದ ಮಾಧ್ಯಮವೂ ಸಹ ನೀನೇ ಆಗಿರುವಿ ಅಗ್ನಿರೂಪದಿಂದ.
देवहूतमम्— हे अग्ने! त्वं देवानाम् आह्वातृतमम् (इव / अपि) असि (हविर्धारणेन) च । त्वं देवानाम् आह्वानकर्तृषु वरीयान् गरीयान् वा असि ॥
ದೇವಹೂತಮಮ್— ಹೇ ಅಗ್ನಿಯೆ! ನೀನು ದೇವತೆಗಳ ಆಹ್ವಾತೃಗಳ (ಆಮಂತ್ರಕರ)ಲ್ಲಿ ಶ್ರೇಷ್ಠ (ನಂತೆ / ನೂ) ಆಗಿರುವಿ / ಇರುವಿ ಹವಿಸ್ಸನ್ನು ಧರಿಸಿಕೊಂಡಿರುವುದರಿಂದ. ನೀನು ದೇವತೆಗಳ ಆಹ್ವಾನಕರ್ತೃಗಳಲ್ಲಿ (ದೇವತೆಗಳನ್ನು ಕರೆಯುವವರಲ್ಲಿ) ವರಿಷ್ಠನು ಅಥವಾ ಗರಿಷ್ಠನು ಆಗಿರುವಿ.
हे सर्वान्तर्यामिन्! परमात्मन्!! त्वं सर्वभूतस्थः सन्, सर्वभूतस्थमात्मानं परमात्मानं वा आह्वातृषु , ध्यातृषु श्रेष्ठोऽसि (उपरतः, आत्मरतः) ध्येयध्यातृध्यानत्रितयैकत्वादद्वैतात्मस्वरूपत्वाद्वा ॥
ಹೇ ಸರ್ವಾಂತರ್ಯಾಮಿಯೆ (ಎಲ್ಲರೊಳಗಿದ್ದು ನಿಯಂತ್ರಿಸುವವನೆ)! ಪರಮಾತ್ಮನೆ!! ನೀನು ಎಲ್ಲ ಚರಾಚರಗಳೊಳಗಿರುವವನಾಗಿ, ಎಲ್ಲರೊಳಗಿರುವ ಆತ್ಮನನ್ನು / ತನ್ನನ್ನು ಅಥವಾ ಪರಮಾತ್ಮನನ್ನು ಆಹ್ವಾನಿಸುವವರಲ್ಲಿ, ಧ್ಯಾನಿಸುವವರಲ್ಲಿ ಶ್ರೇಷ್ಠನಾಗಿರುವಿ (ಉಪರತನು, ಆತ್ಮರತನು) ಧ್ಯೇಯ (ಧ್ಯಾನಯೋಗ್ಯವಸ್ತು)- ಧ್ಯಾತೃ (ಧ್ಯಾನಕರ್ತೃ)- ಧ್ಯಾನ (ಧ್ಯಾನಮಾಡುವಿಕೆ)— ಈ ಮೂರರ ಏಕತ್ವದಿಂದ / ಅಭೇದದಿಂದ ಅಥವಾ ಅದ್ವೈತವಾಗಿರುವ ಆತ್ಮಸ್ವರೂಪತ್ವದಿಂದಾಗಿ.
५. त्वं देवानामसि सस्नितमं पप्रितमं जुष्टतमं वह्नितमं देवहूतममह्रुतमसि हविर्धानं दृग्ंहस्व मा ह्वाः—
೫. ತ್ವಂ ದೇವಾನಾಮಸಿ ಸಸ್ನಿತಮಂ ಪಪ್ರಿತಮಂ ಜುಷ್ಟತಮಂ ವಹ್ನಿತಮಂ ದೇವಹೂತಮಮಹ್ರುತಮಸಿ ಹವಿರ್ಧಾನಂ ದೃಗ್ಂಹಸ್ವ ಮಾ ಹ್ವಾಃ—
पदच्छेदः—
त्वम्, देवानाम्, असि, सस्नि-तमम्, पप्रि-तमम्, जुष्ट-तमम्, वह्नि-तमम्, देव-हू-तमम्, अह्रुतम्, असि, हविः-धानम्, दृंहस्व, मा, ह्वाः
ಪದಚ್ಛೇದಃ—
ತ್ವಮ್, ದೇವಾನಾಮ್, ಅಸಿ, ಸಸ್ನಿ-ತಮಮ್, ಪಪ್ರಿ-ತಮಮ್, ಜುಷ್ಟ-ತಮಮ್, ವಹ್ನಿ-ತಮಮ್, ದೇವ-ಹೂ-ತಮಮ್, ಅಹ್ರುತಮ್, ಅಸಿ, ಹವಿಃ-ಧಾನಮ್, ದೃಂಹಸ್ವ, ಮಾ, ಹ್ವಾಃ
अन्वयार्थः भाष्यं च—
त्वं देवानाम् असि— (कर्मपरम्—) हे देवता-हवि-र्वाहक-हव्यवाहन! अग्ने!! त्वं देवानाम् असि । त्वं देवार्थं यज्ञे हविर्धारणेन हविर्वहनेन च देवसम्बन्धी भवसि ॥
ತ್ವಂ ದೇವಾನಾಮ್ ಅಸಿ— (ಕರ್ಮಪರ—) ಹೇ ದೇವತೆಗಳಿಗೆ ಹವಿಸ್ಸನ್ನೊಯ್ಯುವ ಹವ್ಯವಾಹನನೆ! ಅಗ್ನಿಯೆ! ನೀನು ದೇವತೆಗಳವನಾಗಿರುವಿ. ನೀನು ದೇವತೆಗಳಿಗಾಗಿ ಯಜ್ಞದಲ್ಲಿ ಹವಿಸ್ಸನ್ನು ಧರಿಸುವುದರಿಂದ, ಹವಿಸ್ಸನ್ನೊಯ್ಯುವುದರಿಂದಲೂ ದೇವತೆಗಳಿಗೆ ಸಂಬಂಧಿಸಿದವನೇ ಆಗುವಿ.
(ज्ञानपरम्—) भोः परमेश्वर! भगवन्!! परमात्मन्!!! परब्रह्मन्! भवान् समस्तदेवानां योनिः कारणो वा असि ॥
(ಜ್ಞಾನಪರ—) ಅಯ್ಯಾ ಪರಮೇಶ್ವರನೆ! ಭಗವಂತನೆ!! ಪರಮಾತ್ಮನೆ!!! ಪರಬ್ರಹ್ಮವೆ! ತಾವು (ನೀನು) ಸಮಸ್ತ ದೇವತೆಗಳ ಜನ್ಮಸ್ಥಾನ ಅಥವಾ ಕಾರಣವೇ ಆಗಿರುವಿ(ರಿ).
सस्नितमम्— अत एव त्वं (देवानां) शुद्धतमं (ष्णा शौचे— स्नाति— स्नानं करोति, स्नात्वा शुचिर्भूतः), परिशुद्धः पावकः (पुनाति इति, पू शोधे, पवने वा), स्नेहपूर्णः स्नेहगुणसहितो (स्निह प्रीतौ, स्निट् स्नेहने, स्नेह् स्नेहने) वा असि सर्वचराचराणाम् ॥
ಸಸ್ನಿತಮಮ್— ಆದ್ದರಿಂದಲೇ ನೀನು (ದೇವತೆಗಳಲ್ಲಿ) ಶುದ್ಧತಮನು (ಷ್ಣಾ ಶೌಚೇ— ಸ್ನಾತಿ— ಮೀಯು, ಸ್ನಾನಮಾಡು, ಮಿಂದು ಶುಚಿರ್ಭೂತನಾಗು), ಪರಿಶುದ್ಧನಾದ ಪಾವಕನು / ಅಗ್ನಿಯು (ಪುನಾತಿ ಇತಿ, ಪೂ ಶೋಧೇ, ಪವನೇ ವಾ), ಸ್ನೇಹಪೂರ್ಣನು ಅಥವಾ ಸ್ನೇಹಗುಣಸಹಿತನು (ಸ್ನಿಹ ಪ್ರೀತೌ, ಸ್ನಿಟ್ ಸ್ನೇಹನೇ, ಸ್ನೇಹ್ ಸ್ನೇಹನೇ ಧಾತುವು) ಆಗಿರುವಿ ಸಕಲ ಚರಾಚರಗಳಿಗೂ.
पप्रितमम्— त्वं पूर्णतमं (प्रा पूरणे) व्रीह्यादिभिः, परिपूर्णो (" पूर्णमदः पूर्णमिदं पूर्णात् पूर्णमुदच्यते । पूर्णस्य पूर्णमादाय पूर्णमेवावशिष्यते ॥"— श्रुतिः) जगद्व्यापी वा असि (देवानां मध्ये) विष्णुत्वात् ("विश्वं व्याप्नोति प्रविशति च इति विष्णुः"), पुरुषोत्तमत्वाद्वा परमपुरुषत्वाद्वा (पृ पालन-पूरण-प्रीति-व्यायाम / पौरुषेषु) । भगवान् सर्वान् पालयति, सर्वेभ्यः शक्तिं पूरयति, सर्वान् प्रीत्या पश्यति, सर्वशक्तः, अपरिमित-पौरुष-पराक्रमवान् अस्ति । अतः, सः परिपूर्णः सन्, " पप्रितमम् " इति स्मृतः ॥
ಪಪ್ರಿತಮಮ್— ನೀನು (ಯಜ್ಞಾಗ್ನಿಯು / ಪರಮೇಶ್ವರನು) ಪೂರ್ಣತಮನೂ (ಪ್ರಾ ಪೂರಣೇ ಧಾತುವು) ಧಾನ್ಯಾದಿಗಳಿಂದ ತುಂಬಿರುವವನೂ, ಪರಿಪೂರ್ಣನೂ ("ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||"— "ಅದೂ ಪೂರ್ಣವೇ, ಇದೂ ಪೂರ್ಣವೇ. ಅದೂ ತುಂಬಿದೆ, ಇದೂ ತುಂಬಿದೆ. ಪೂರ್ಣದಿಂದಲೇ ಪೂರ್ಣವು ಉಂಟಾಗುತ್ತದೆ. ಪೂರ್ಣದಿಂದ ಪೂರ್ಣವನ್ನು ತೆಗೆದಾಗ ಪೂರ್ಣವೇ ಉಳಿದುಕೊಳ್ಳುವುದು."— ಶ್ರುತಿ) ಅಥವಾ ಜಗದ್ವಾಪಿಯೂ ಆಗಿರುವಿ (ದೇವತೆಗಳ ನಡುವೆ), ನೀನು ವಿಷ್ಣುವಾಗಿರುವುದರಿಂದಾಗಿ / ನಿನ್ನ ವಿಷ್ಣುತ್ವದಿಂದಾಗಿ ("ವಿಶ್ವಂ ವ್ಯಾಪ್ನೋತಿ ಪ್ರವಿಶತಿ ಚ ಇತಿ ವಿಷ್ಣುಃ"— "ವಿಶ್ವವನ್ನು / ಸರ್ವವನ್ನು ವ್ಯಾಪಿಸುತ್ತಾನೆ ಹಾಗೂ ಪ್ರವೇಶಿಸುತ್ತಾನೆ ಎಂಬುದರಿಂದ ವಿಷ್ಣುವು"), ನಿನ್ನ ಪುರುಷೋತ್ತಮತ್ವದಿಂದಾಗಿ / ನೀನು ಪುರುಷೋತ್ತಮ / ಪರಮಪುರುಷನಾಗಿರುವುದರಿಂದಾಗಿ (ಪೃ ಪಾಲನ-ಪೂರಣ-ಪ್ರೀತಿ-ವ್ಯಾಯಾಮ/ಪೌರುಷೇಷು ಧಾತುವು). ಭಗವಂತನು ಎಲ್ಲರನ್ನೂ ಪಾಲಿಸುತ್ತಾನೆ, ಎಲ್ಲರಿಗೂ ಶಕ್ತಿಯನ್ನು ಪೂರೈಸುತ್ತಾನೆ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾನೆ, ಸರ್ವಶಕ್ತನೂ ಅಪರಿಮಿತ ಪೌರುಷ-ಪರಾಕ್ರಮವುಳ್ಳವನೂ ಆಗಿರುವನು. ಆದ್ದರಿಂದ ಆತನು ಪರಿಪೂರ್ಣನಾಗಿದ್ದು, " ಪಪ್ರಿತಮಮ್ " ಎನಿಸಿರುವನು.
जुष्टतमम्— हे अग्निरूपेऽपि वर्तमान परमात्मन्!! त्वं प्रियतमं (देवानां) सेव्यतमं परितर्पणीयतमं परितर्कणीयतमं ध्येयतमं च असि (जुष प्रीतौ सेवने परितर्पणे परितर्कणे वा) ॥
ಜುಷ್ಟತಮಮ್— ಹೇ ಅಗ್ನಿರೂಪಿಯಾಗಿಯೂ ಇರುವ ಪರಮಾತ್ಮನೆ!! ನೀನು ಪ್ರಿಯರಲ್ಲಿ ಹೆಚ್ಚಿನವನೂ, (ದೇವತೆಗಳಲ್ಲಿ) ಸೇವೆಗೆ ಯೋಗ್ಯರಾದವರಲ್ಲಿ ಹೆಚ್ಚಿನವನೂ, ಯಾರನ್ನೆಲ್ಲ ಧ್ಯಾನಿಸಲು ಯೋಗ್ಯರೋ ಅಂಥವರಲ್ಲಿ ಶ್ರೇಷ್ಠನೂ ಆಗಿರುವಿ (ಜುಷ ಪ್ರೀತೌ ಸೇವನೇ ಪರಿತರ್ಪಣೇ ಪರಿತರ್ಕಣೇ ವಾ ಧಾತುವು).
हे परमात्मन्! त्वं सकलचराचराणामन्तरात्मा भूत्वा तेषां सर्वेषां श्रेष्ठः, आश्रयणीयः असि । तेषां सर्वेषामपि सर्वविषयेष्वपि उत्तमम् आश्रयस्थानम् असि॥
ಹೇ ಪರಮಾತ್ಮನೆ!! ನೀನು ಸಕಲ ಚರಾಚರಗಳ ಅಂತರಾತ್ಮನಾಗಿದ್ದು, ಅವರೆಲ್ಲರಿಗೆ ಶ್ರೇಷ್ಠನಾದ ಆಶ್ರಯಣೀಯನಾಗಿರುವಿ. ಅವರೆಲ್ಲರಿಗೂ ಎಲ್ಲವಿಷಯಕ್ಕೂ ಉತ್ತಮವಾದ ಆಶ್ರಯಸ್ಥಾನವಾಗಿರುವಿ.
वह्नितमम्— हे अग्ने! त्वं हविषो वाहकतमम्, हविषां वोढृतमम् (अपि) असि । त्वं देवानां हविःप्रापयितृषु वाहकेषु वाहनेषु वा श्रेष्ठतमम् असि ॥
ವಹ್ನಿತಮಮ್— ಹೇ ಅಗ್ನಿಯೆ! ನೀನು ಹವಿಸ್ಸನ್ನು ಒಯ್ಯುವವರಲ್ಲಿ ಉತ್ತಮನೂ, ಹವಿಸ್ಸುಗಳ ಸಾಗಣೆಮಾಡುವವರಲ್ಲಿ ಶ್ರೇಷ್ಠನೂ (ಕೂಡ) ಆಗಿರುವಿ. ನೀನು ದೇವತೆಗಳಿಗೆ ಹವಿಸ್ಸನ್ನು ತಲುಪಿಸುವ ವಾಹಕಗಳಲ್ಲಿ ಅಥವಾ ವಾಹನಗಳಲ್ಲಿ ಶ್ರೇಷ್ಠತಮನಾಗಿರುವಿ.
हे परमेश्वर! त्वं देवदेवोऽसि । देवदेवस्य तव हविष्यान्नस्य प्रापकः श्रेष्ठतमः माध्यमोऽपि त्वमेवासि अग्निरूपेण ॥
ಹೇ ಪರಮೇಶ್ವರನೆ! ನೀನು ದೇವದೇವನಾಗಿರುವೆ. ದೇವದೇವನಾದ ನಿನಗೆ, ಹವಿಷ್ಯಾನ್ನದ ಪ್ರಾಪ್ತಿಮಾಡಿಸುವ ಶ್ರೇಷ್ಠತಮವಾದ / ಉತ್ತಮೋತ್ತಮವಾದ ಮಾಧ್ಯಮವೂ ಸಹ ನೀನೇ ಆಗಿರುವಿ ಅಗ್ನಿರೂಪದಿಂದ.
देवहूतमम्— हे अग्ने! त्वं देवानाम् आह्वातृतमम् (इव / अपि) असि (हविर्धारणेन) च । त्वं देवानाम् आह्वानकर्तृषु वरीयान् गरीयान् वा असि ॥
ದೇವಹೂತಮಮ್— ಹೇ ಅಗ್ನಿಯೆ! ನೀನು ದೇವತೆಗಳ ಆಹ್ವಾತೃಗಳ (ಆಮಂತ್ರಕರ)ಲ್ಲಿ ಶ್ರೇಷ್ಠ (ನಂತೆ / ನೂ) ಆಗಿರುವಿ / ಇರುವಿ ಹವಿಸ್ಸನ್ನು ಧರಿಸಿಕೊಂಡಿರುವುದರಿಂದ. ನೀನು ದೇವತೆಗಳ ಆಹ್ವಾನಕರ್ತೃಗಳಲ್ಲಿ (ದೇವತೆಗಳನ್ನು ಕರೆಯುವವರಲ್ಲಿ) ವರಿಷ್ಠನು ಅಥವಾ ಗರಿಷ್ಠನು ಆಗಿರುವಿ.
हे सर्वान्तर्यामिन्! परमात्मन्!! त्वं सर्वभूतस्थः सन्, सर्वभूतस्थमात्मानं परमात्मानं वा आह्वातृषु , ध्यातृषु श्रेष्ठोऽसि (उपरतः, आत्मरतः) ध्येयध्यातृध्यानत्रितयैकत्वादद्वैतात्मस्वरूपत्वाद्वा ॥
ಹೇ ಸರ್ವಾಂತರ್ಯಾಮಿಯೆ (ಎಲ್ಲರೊಳಗಿದ್ದು ನಿಯಂತ್ರಿಸುವವನೆ)! ಪರಮಾತ್ಮನೆ!! ನೀನು ಎಲ್ಲ ಚರಾಚರಗಳೊಳಗಿರುವವನಾಗಿ, ಎಲ್ಲರೊಳಗಿರುವ ಆತ್ಮನನ್ನು / ತನ್ನನ್ನು ಅಥವಾ ಪರಮಾತ್ಮನನ್ನು ಆಹ್ವಾನಿಸುವವರಲ್ಲಿ, ಧ್ಯಾನಿಸುವವರಲ್ಲಿ ಶ್ರೇಷ್ಠನಾಗಿರುವಿ (ಉಪರತನು, ಆತ್ಮರತನು) ಧ್ಯೇಯ (ಧ್ಯಾನಯೋಗ್ಯವಸ್ತು)- ಧ್ಯಾತೃ (ಧ್ಯಾನಕರ್ತೃ)- ಧ್ಯಾನ (ಧ್ಯಾನಮಾಡುವಿಕೆ)— ಈ ಮೂರರ ಏಕತ್ವದಿಂದ / ಅಭೇದದಿಂದ ಅಥವಾ ಅದ್ವೈತವಾಗಿರುವ ಆತ್ಮಸ್ವರೂಪತ್ವದಿಂದಾಗಿ.
अ-ह्रुतम् असि— हे अग्ने! त्वं अकुटिलं कुटिलगतिरहितम् अवक्रं वक्रत्वरहितं ऋजुर्वा असि धृतिमत्तया । त्वं व्रीहिभारापादित-वक्रत्वरहितं हविषो धारकम् असि ॥ (ह्वृ कौटिल्ये संवरणे वा)
ಅ-ಹ್ರುತಮ್ ಅಸಿ— ಹೇ ಅಗ್ನಿಯೆ! ನೀನು ಅಕುಟಿಲನು / ಕುಟಿಲಗತಿರಹಿತನು, ಅವಕ್ರನು, ವಕ್ರತ್ವರಹಿತನು, ಅಥವಾ ಋಜುಗತಿಯುಳ್ಳವನು / ನೇರನಡೆಯುಳ್ಳವನು ಆಗಿರುವಿ ಧೃತಿ / ಹವಿರ್ಧಾರಣಾಶಕ್ತಿಯಿರುವಿಕೆಯಿಂದಾಗಿ. ನೀನು ಹವಿಷ್ಯಾನ್ನದ ಭಾರದಿಂದ ಬಾಗದೆ, ಹವಿಸ್ಸನ್ನು ಧರಿಸಿದವನಾಗಿರುವಿ. (ಹ್ವೃ ಕೌಟಿಲ್ಯೇ / ಕುಟಿಲತ್ವೇ ಸಂವರಣೇ ವಾ ಧಾತುವು)
हे परमेश्वर! त्वं ऋतसत्ययुग्ममसि । त्वं ऋजुमार्गप्रियमप्यसि । त्वं मायया कौटिल्येन कुटिलतया वा असंवरणम् अनावृतम् अलिप्तम् अस्पृश्यम् आत्मतत्त्वम् असि । त्वमकुटिलमसि ॥
ಹೇ ಪರಮೇಶ್ವರನೆ! ನೀನು ಋತ-ಸತ್ಯಗಳ ಸಂಗಮವಾಗಿರುವಿ. ನೀನು ಋಜುಮಾರ್ಗವನ್ನು / ಮೋಸರಹಿತ ನೇರಮಾರ್ಗವನ್ನು ಇಷ್ಟಪಡುವವನಾಗಿರುವಿ. ನೀನು ಮಾಯೆಯಿಂದ, ಕೌಟಿಲ್ಯ / ಕುಟಿಲತೆಯಿಂದ ಆವರಿಸಲ್ಪಡದವನು, ಅಸಂವರಣನೂ, ಅನಾವೃತನೂ, ಅಲಿಪ್ತನೂ, ಅಸ್ಪೃಶ್ಯನೂ ಆದ ಆತ್ಮತತ್ತ್ವವೇ ಆಗಿರುವಿ. ನೀನು ಮಾಯಾರಹಿತಸ್ವರೂಪನಾಗಿರುವಿ.
हविर्धानं दृंहस्व, मा ह्वाः— हे अग्ने! त्वं हविर्धारकोऽसि । हविर्भूताः, व्रीह्यादयः, निधीयन्ते अस्मिन् इति हविर्धानम् । तादृशः त्वम् अस्मात् कारणात् दृढं भव, वर्धस्व, भग्नं मा भूः, कुटिलं मा भूः ॥
ಹವಿರ್ಧಾನಂ ದೃಂಹಸ್ವ, ಮಾ ಹ್ವಾಃ— ಹೇ ಅಗ್ನಿಯೆ! ನೀನು ಹವಿಸ್ಸನ್ನು ಧರಿಸಿದವನಾಗಿರುವಿ. ಹವಿಸ್ಸಾದ ಧಾನ್ಯಾದಿಗಳು ಇಡಲ್ಪಡುತ್ತವೆ ಇವನಲ್ಲಿ ಎಂಬುದರಿಂದ ಅಗ್ನಿಯು ಹವಿರ್ಧಾನನು. ಅಂತಹ ಅಗ್ನಿಯಾದ ನೀನು ಈ ಕಾರಣದಿಂದ ದೃಢವಾಗಿರು, ವರ್ಧಿಸು, ಪ್ರಜ್ವಲಿಸು, ಭಗ್ನನಾಗಬೇಡ, ವಕ್ರತೆಯನ್ನು ಹೊಂದಬೇಡ.
हे परमात्मन्! त्वं हविर्धारकाग्निरूपोऽप्यसि । अतस्त्वं वर्धस्व, विद्यां धर्मं च वर्धस्व, अविद्याम् अधर्मं च निवर्तस्व, न्यूनं कुरु । कृपां कुरु, त्वद्भक्तिं, वेदधर्मश्रद्धां च अभिवर्धस्व । मायामोहं मा प्रदर्शय । ब्रह्मात्माभेदसत्यज्ञानं तनोतु अस्मासु । इत्थं परमार्थदर्शनं, जीवन्मुक्तिं शाश्वतानान्दं तनोतु ॥
ಹೇ ಪರಮಾತ್ಮನೆ! ನೀನು ಹವಿಸ್ಸನ್ನು ಧರಿಸುವ ಯಜ್ಞಾಗ್ನಿಸ್ವರೂಪನೂ ಆಗಿರುವಿ. ಹಾಗಾಗಿ ನೀನು ವರ್ಧಿಸು, ವಿದ್ಯೆಯನ್ನು ಹಾಗೂ ಧರ್ಮವನ್ನು ಹೆಚ್ಚಿಸು, ಅವಿದ್ಯೆಯನ್ನು ಹಾಗೂ ಅಧರ್ಮವನ್ನು ಹಿಂದಿರುಗಿಸು, ಕಡಿಮೆ ಮಾಡು. ಕೃಪೆದೋರು, ನಿನ್ನಲ್ಲಿ ಭಕ್ತಿಯನ್ನು ಹಾಗೂ ವೇದ-ಧರ್ಮಗಳಲ್ಲಿ ಶ್ರದ್ಧೆಯನ್ನು ಹೆಚ್ಚುಮಾಡು / ಅಭಿವರ್ಧಿಸು. ಮಾಯಾಮೋಹವನ್ನು ಪ್ರದರ್ಶಿಸಬೇಡ. (ಮಾಯೆಯ ಬಲೆಯನ್ನು ಬೀಸಬೇಡ) ಬ್ರಹ್ಮ-ಆತ್ಮಗಳಿಗೆ ಭೇದವಿಲ್ಲವೆಂಬ ಸತ್ಯಜ್ಞಾನವನ್ನು ನಮ್ಮಲ್ಲಿ ಉಂಟುಮಾಡು. ಹೀಗೆ, ಪರಮಾರ್ಥದ ದರ್ಶನವನ್ನೂ, ಜೀವನ್ಮುಕ್ತಿಯನ್ನೂ, ಶಾಶ್ವತಾನಂದವನ್ನೂ ಉಂಟುಮಾಡು.
विवरणम्—
(कर्मपरम्—) मन्त्रस्य प्रथमभागे स्पष्टार्थत्वं दर्शयति— "त्वं देवानाम् असि सस्नितमं पप्रितमं जुष्टतमं वह्नितमं देवहूतमम् इति आह । यथायजुः एव एतत् " (तैत्तिरीयब्राह्मणम् ३.२.४) इति । मन्त्रपदैः यः अर्थः यथा प्रतीयते, स तथा एव, न तु अत्र क्वचित् अन्यो विवक्षाविशेषो अस्ति ॥
ವಿವರಣೆ—
(ಕರ್ಮಪರ—) ಮಂತ್ರದ ಪ್ರಥಮಭಾಗದಲ್ಲಿ ಸ್ಪಷ್ಟಾರ್ಥತೆಯನ್ನು ತೋರಿಸುತ್ತಾನೆ— "ನೀನು ದೇವತೆಗಳಲ್ಲಿ ಆಗಿರುವಿ ಅತ್ಯಂತ ಶುದ್ಧಾತ್ಮನು, ಪರಿಪೂರ್ಣತಮ ಪರಮಪುರುಷೋತ್ತಮನು, ಅತ್ಯಂತ ಆತ್ಮೀಯ ಪ್ರಿಯತಮನು, ದೇವತೆಗಳಿಗೆ ಹವಿಸ್ಸನ್ನು ಕೊಂಡೊಯ್ಯುವವರಲ್ಲಿ ಶ್ರೇಷ್ಠವಾದ ವಾಹಕನು, ಹವಿಸ್ಸನ್ನು ಧಾರಣೆ ಮಾಡಿರುವುದರಿಂದ ದೇವತೆಗಳನ್ನು ಆಹ್ವಾನಿಸುವವರಲ್ಲಿ / ಆಕರ್ಷಿಸುವವರಲ್ಲಿ ಉತ್ತಮನು ಎಂದು ಹೇಳಿದೆ. ಯಜುರ್ಮಂತ್ರಪದಗಳು ಹೇಗಿವೆಯೋ ಅದೇ ನೇರ ಅರ್ಥ " (ತೈತ್ತಿರೀಯಬ್ರಾಹ್ಮಣಮ್ ೩.೨.೪) ಎಂದು. ಈ ಮಂತ್ರದ ಪದಗಳಿಂದ ಯಾವ ಅರ್ಥವು ಹೇಗೆ ಮೇಲ್ನೋಟಕ್ಕೆ ತೋರುವುದೋ, ಅದು ಹಾಗೆಯೇ; ಇಲ್ಲಿ ಬೇರಾವುದೇ ವಿಶೇಷಾರ್ಥವಿಲ್ಲ.
(ज्ञानपरम्—) निर्विशेषस्य निर्गुणस्य ब्रह्मात्मनः सगुणोपासनापरत्वेन विशेषस्तुतिः क्रियते तत्प्रसादार्थं, तदनुग्रहार्थं, तज्ज्ञानार्थं, तत्त्वाप्त्यर्थं च " ब्रह्मविद् ब्रह्मैव भवति " इति श्रुतेः॥
(ಜ್ಞಾನಪರ—) ನಿರ್ವಿಶೇಷನೂ ನಿರ್ಗುಣನೂ ಆದ ಬ್ರಹ್ಮಸ್ವರೂಪೀ ಆತ್ಮನ ಸಗುಣೋಪಾಸನಾಪರವಾದ ವಿಶೇಷಸ್ತುತಿಯು ಮಾಡಲ್ಪಡುತ್ತದೆ ಆತನ ಪ್ರಸನ್ನತೆಗಾಗಿ, ಆತನ ಅನುಗ್ರಹಕ್ಕಾಗಿ, ಆತನ ಕುರಿತಾದ ಜ್ಞಾನಕ್ಕಾಗಿ ಹಾಗೂ ತಾನು ಆತನೇ ಆಗುವುದಕ್ಕಾಗಿ (ತತ್-ತ್ವ-ಆಪ್ತಿ-ಅರ್ಥಮ್) "ಬ್ರಹ್ಮವನ್ನರಿತವನು ಬ್ರಹ್ಮವೇ ತಾನಾಗಿಬಿಡುವನು" ಎಂಬ ಶ್ರುತಿವಚನ / ಉಪನಿಷದ್ವಾಕ್ಯಪ್ರಮಾಣದಿಂದಾಗಿ.
(कर्म—) द्वितीयभागे व्रीहिभारप्रयुक्तं शैथिल्यं वार्यते, इति आह— "अ-ह्रुतम् असि हविर्धानम् इति आह अनार्त्यै " (तै.ब्रा. ३.२.४) इति । (ज्ञान—) भवसागरतरणस्य भगवन्मायारूपप्रत्यूहं निवार्यते अनेन याजुषप्रार्थनया ॥
(ಕರ್ಮ—) ಮಂತ್ರದ ಎರಡನೇ ಭಾಗವಾದ "ಅಹ್ರುತಮಸಿ ಹವಿರ್ಧಾನಮ್ " ಎಂಬಲ್ಲಿ ಧಾನ್ಯ-ಪುರೋಡಾಶಾದಿ ಯಜ್ಞಹವಿರ್ದ್ರವ್ಯಗಳ ಭಾರಹೊರುವಿಕೆಯಿಂದಾದ ಅಗ್ನಿಯ ನಂದುವಿಕೆ / ಆರಿಹೋಗುವಿಕೆ / ಶೈಥಿಲ್ಯ / ಶಿಥಿಲತೆಯು ನಿವಾರಿಸಲ್ಪಡುತ್ತದೆ, ಎಂದು ಹೇಳಿದೆ ತೈತ್ತಿರೀಯ ಬ್ರಾಹ್ಮಣ ೩.೨.೪— "ಅ-ಹ್ರುತಮ್ ಅಸಿ ಹವಿರ್-ಧಾನಮ್ ಎಂದು ಹೇಳಿದೆ ಆರ್ತಿ / ದುಃಖ / ಕಷ್ಟ / ಆರ್ತತೆಯಿಲ್ಲದಿರುವಿಕೆಗಾಗಿ " ಎಂಬುದಾಗಿ.
(ಜ್ಞಾನ—) ಭವಸಾಗರವನ್ನು ದಾಟಲು ಅಡ್ಡಿಯಾಗಿರುವ ಭಗವಂತನ ಮಾಯಾರೂಪದ ವಿಘ್ನವು ನಿವಾರಿಸಲ್ಪಡುತ್ತದೆ ಈ ಪ್ರಾರ್ಥನಾರೂಪವಾದ ಯಜುರ್ಮಂತ್ರದಿಂದ.
(कर्म—) तृतीयभागे स्वयम् अपि आरोढुं शकटस्य धैर्यं सम्पाद्यते, इति आह— " दृग्ंहस्व मा ह्वाः, इति आह धृत्यै " (तै.ब्रा. ३.२.४) इति ॥
(ಕರ್ಮ—) ಮೂರನೇ ಭಾಗದಲ್ಲಿ ತಾನೇ ಸ್ವತಃ ಮೇಲೇರಲು ಹವಿರ್ವಾಹನ (ಗಾಡಿ, ಶಕಟ) ಕ್ಕೆ / ಯಜ್ಞಾಗ್ನಿಗೆ ಧೈರ್ಯವನ್ನು ತುಂಬಲಾಗುತ್ತದೆ, ಎಂದು ತೈ.ಬ್ರಾಹ್ಮಣ ೩.೨.೪ ಹೇಳಿದೆ— " ದೃಗ್ಂಹಸ್ವ ಮಾ ಹ್ವಾಃ, ಎಂದು ಹೇಳಿದೆ ಧೃತಿ / ಧೈರ್ಯ / ಧಾರಣಾಶಕ್ತಿಗಾಗಿ " ಎಂದು.
(ज्ञान—) ब्रह्मात्मज्ञाननौकां समारोढुं भवसागरतः जीवन्मुक्तिप्राप्त्यर्थं च गुरुवाक्यरूपेण अभयं प्रदर्श्यतेऽत्र— गुरूपदेश एव एकैकालम्बः, ब्रह्मज्ञानैव अद्वितीय-नित्य-परमानन्ददम्, तदर्थं हे जीव! त्वमुत्तिष्ठ, जाग्रत, प्राप्यवरान्निबोधत, तज्ज्ञानप्राप्तिपर्यन्तं साधनचतुष्टयसम्पन्नः सन् अध्यात्ममार्गे, अचलो भव, निर्भयो भव, चञ्चलो मा भूः इति ॥
(ಜ್ಞಾನ—) ಬ್ರಹ್ಮಾತ್ಮಜ್ಞಾನವೆಂಬ ನೌಕೆಯನ್ನು ಹತ್ತಲು ಹಾಗೂ ಭವಸಾಗರದಿಂದ ಬದುಕಿದ್ದಾಗಲೇ ಮುಕ್ತಿಯನ್ನು ಹೊಂದಲು (ಜೀವನ್-ಮುಕ್ತರಾಗಲು) ಗುರುವಾಕ್ಯರೂಪವಾದ ಅಭಯವು ಇಲ್ಲಿ ಹೇಳಲ್ಪಟ್ಟಿದೆ— ಗುರುಗಳ ಉಪದೇಶವೊಂದೇ ಅವಲಂಬಿಸಬೇಕಾದ ಆಧಾರವು, ಬ್ರಹ್ಮಜ್ಞಾನವೇ ಅದ್ವಿತೀಯವೂ ನಿತ್ಯವೂ ಪರಮಾನಂದವನ್ನು ಕೊಡುವುದೂ ಆಗಿರುವುದು, ಹಾಗಾಗಿ ಎಲೆ ಜೀವನೆ! ನೀನು ಮೇಲೆದ್ದು ನಿಲ್ಲು, ಸದಾ ಎಚ್ಚರವಾಗಿರು, ಗುರಿ / ವರವನ್ನು ಪಡೆದ ಬಳಿಕವೇ ವಿರಮಿಸು, ಆ ಪರತತ್ತ್ವಜ್ಞಾನದ ಪ್ರಾಪ್ತಿಯಾಗುವವರೆಗೂ ನಿತ್ಯಾನಿತ್ಯವಿವೇಕ-ಇಹಾಮುತ್ರಫಲಭೋಗವಿರಾಗ-ಶಮದಮಾದಿಷಟ್ಸಂಪತ್ತಿ (ಶಮ, ದಮ, ಶ್ರದ್ಧಾ, ತಿತಿಕ್ಷಾ, ಉಪರತಿ, ಸಮಾಧಾನ)-ಮುಮುಕ್ಷುತ್ವಗಳೆಂಬ ೪ ಸಾಧನಸಂಪತ್ತುಗಳುಳ್ಳವನಾಗಿದ್ದು, ಅಧ್ಯಾತ್ಮಮಾರ್ಗದಲ್ಲಿ ಅಚಲವಾಗಿ ವಿಚಲಿತನಾಗದೆ ನೆಲೆನಿಲ್ಲು, ನಿರ್ಭೀತನಾಗು, ಚಂಚಲತೆಯನ್ನು ಹೊಂದಬೇಡ ಎಂಬುದಾಗಿ.
" निन्दन्तु नीतिनिपुणा यदि वा स्तुवन्तु
लक्ष्मीः समाविशतु गच्छतु वा यथेष्टम् ।
अद्यैव वा मरणमस्तु युगान्तरे वा
न्याय्यात् पथः प्रविचलन्ति पदं न धीराः ॥ "
" ನಿಂದಿಸಲಿ ಕೋವಿದರು ಪೊಗಳಲಿ
ಇಂದಿರೆಯು ಬಂದಿರಲಿ ಪೋಗಲಿ
ಇಂದು ಸಾಯದೆ ಇರಲಿ ಸಾಯಲಿ ಸತ್ಯಪಥವಿರಲಿ |
ಎಂದು ಬದುಕುವ ಧೀರ ಮನುಜರು
ಮಂದಗಮನೆಯ ಮರುಳು ಮಾತಿಗೆ
ಬಂಧಿಯಾಗದೆ ಇಹರು ವಂದಿಪೆನಾ ಮಹಾತ್ಮರಿಗೆ ||"
Comments
Post a Comment