ಉಪನಿಷದ್ಭಾಷ್ಯಾರ್ಥಸಮುಚ್ಚಯಃ ೧
ಉಪನಿಷದ್ಭಾಷ್ಯಾರ್ಥಸಮುಚ್ಚಯಃ ೧
ಡಾ || ಕೃಷ್ಣಮೂರ್ತಿಶಾಸ್ತ್ರೀ, ದಂಬೆ-ಪುಣಚ
೧. ಪ್ರಸ್ತಾವನೆ
“ಅನಂತಾ ವೈ ವೇದಾಃ” - ವೇದಗಳು ಅಂತವಿಲ್ಲದವು, ಕೊನೆಯಿಲ್ಲದವು. ಸುಮಾರು ಕ್ರಿ.ಪೂ.೨ನೆಯ ಶತಮಾನದಲ್ಲಿದ್ದ ವ್ಯಾಕರಣಮಹಾಭಾಷ್ಯಕಾರ ಪತಂಜಲಿಯು ತನ್ನ ಕಾಲದಲ್ಲಿದ್ದ ವೇದಶಾಖೆಗಳನ್ನು ಹೀಗೆ ವಿವರಿಸಿದ್ದಾನೆ -
“ಸಪ್ತದ್ವೀಪಾ ವಸುಮತೀ ತ್ರಯೋ ಲೋಕಾಃ ಚತ್ವಾರೋ ವೇದಾಃ ಸಾಂಗಾಃ ಸರಹಸ್ಯಾಃ ಬಹುಧಾಃ ವಿಭಿನ್ನಾಃ ಏಕಶತಮ್ ಅಧ್ವರ್ಯುಶಾಖಾಃ, ಸಹಸ್ರವರ್ತ್ಮಾ ಸಾಮವೇದಃ, ಏಕವಿಂಶತಿಧಾ ಬಾಹ್ವೃಚ್ಯಂ, ನವಧಾ ಆಥರ್ವಣೋ ವೇದಃ……”
(ವಸುಂಧರೆಯಾದ/ಸಂಪದ್ಭರಿತೆಯಾದ ಭೂಮಿಯು ೭ ದ್ವೀಪಗಳಿಂದ ಕೂಡಿದೆ. ಊರ್ಧ್ವ-ಮಧ್ಯ-ಅಧಃ ಎಂಬ ೩ ಲೋಕಗಳಿವೆ. ಷಡಂಗಸಹಿತ, ನಾನಾ ವಿಧವಾದ ರಹಸ್ಯಾರ್ಥವುಳ್ಳ, ಒಂದರಿಂದೊಂದು ವಿಭಿನ್ನವಾದ ೧೦೧ ಶಾಖೆಗಳು ಅಧ್ವರ/ಯಜ್ಞ ಪ್ರಧಾನವಾದ ಯಜುರ್ವೇದದಲ್ಲಿವೆ. ಸಾಮವೇದವು ೧,೦೦೦ ತೆರನಾಗಿದೆ. ಋಗ್ವೇದವು ೨೧ ಶಾಖೆಗಳಿಂದ ಕೂಡಿದೆ. ಅಥರ್ವವೇದವು ೯ ಬಗೆಯದು….)
ಆದ್ದರಿಂದ, ಸಂಪೂರ್ಣ ವೇದಾಧ್ಯಯನವು ದೂರದ ಮಾತು. ಕೇವಲ ಸ್ವಶಾಖೆಯ ಭಾಷ್ಯ, ಅಷ್ಟವಿಕೃತಿ, ಷಡಂಗಗಳು, ಸಲಕ್ಷಣ ಸಹಿತ ಅಧ್ಯಯನವೂ ಈ ಕಾಲಘಟ್ಟದಲ್ಲಿ ಬಹು ಕಷ್ಟಸಾಧ್ಯ. ಅಷ್ಟಲ್ಲದೆ, ವೇದಗಳ ಸಂಹಿತಾ/ಮಂತ್ರಭಾಗ ಹಾಗೂ ಬ್ರಾಹ್ಮಣಭಾಗಗಳು ಕರ್ಮಪ್ರಧಾನ. ಇವುಗಳ ವಿಧಿವದನುಷ್ಠಾನ ಈ ಕಾಲದಲ್ಲಿ ಬಹು ವಿರಳ. ಆರಣ್ಯಕ ಹಾಗೂ ಉಪನಿಷದ್ಭಾಗಗಳು ತತ್ತ್ವಜ್ಞಾನಪ್ರಧಾನ. ಇಡಿಯ ವೇದಸಾರವು ವೇದಾಂತವೆನಿಸಿದ ಉಪನಿಷತ್ತುಗಳಲ್ಲಿದೆ.
“ಉಪನಿಷದ್ಯತೇ ಪ್ರಾಪ್ಯತೇ ಬ್ರಹ್ಮವಿದ್ಯಾ ಅನಯಾ ಇತಿ ಉಪನಿಷತ್ ||”
“ಯಾವುದನ್ನರಿತರೆ ಎಲ್ಲವನ್ನೂ ತಿಳಿದಂತೆಯೋ ಅಂತಹ ಬ್ರಹ್ಮವಿದ್ಯೆಯು ಇದರಿಂದ ಪ್ರಾಪ್ತವಾಗುತ್ತದೆ ಎಂಬುದರಿಂದಾಗಿ ಉಪನಿಷತ್” ಎನ್ನಲ್ಪಟ್ಟಿದೆ.
“ಉಪನಿಷೀದತಿ ಪ್ರಾಪ್ನೋತಿ ಬ್ರಹ್ಮಾತ್ಮಭಾವಂ ಅನಯಾ ಇತಿ ಉಪನಿಷತ್ ||”
“ಬ್ರಹ್ಮವೇ ತಾನು, ಆತ್ಮವೇ ಬ್ರಹ್ಮ ಎಂಬ ಭಾವವನ್ನು ಇದರಿಂದ ಪಡೆಯುತ್ತಾನೆ ಎಂಬುದರಿಂದ ಉಪನಿಷತ್” ಎನ್ನಲಾಗಿದೆ.
ಆದ್ದರಿಂದ, ಇವುಗಳನ್ನು ಅಧ್ಯಯನ ಮಾಡಿದರೆ ಸಮಸ್ತವನ್ನು ಅರಿತಂತೆ. ಇವು ಋಷಿಗಳ ದರ್ಶನಾನುಭವ, ಅನುಭಾವಗಳ ತವನಿಧಿ.
ಮೇದಿನೀಕೋಶವು “ನಿರ್ಜನವಾದ ಪ್ರದೇಶ” ಎಂಬರ್ಥವನ್ನೂ ಕೊಟ್ಟಿದೆ. ವೇದದ ಶಿರೋಭಾಗವೇ ಉಪನಿಷತ್. ಬ್ರಹ್ಮವಿದ್ಯೆಯೇ ಉಪನಿಷತ್ತೆಂದೂ ಕರೆಯಲ್ಪಟ್ಟಿದೆ. ಉಪನಿಷತ್ತೆಂದರೆ ತತ್ತ್ವ. ದ್ವಿಜರ ವ್ರತಗಳಲ್ಲೊಂದು. ಆಶ್ವಲಾಯನಗೃಹ್ಯಕಾರಿಕೆಯಲ್ಲಿ—
“ ಪ್ರಥಮಂ ಸ್ಯಾತ್ ಮಹಾನಾಮ್ನೀ ದ್ವಿತೀಯಂ ಚ ಮಹಾವ್ರತಮ್ |
ತೃತೀಯಂ ಸ್ಯಾತ್-ಉಪನಿಷದ್ ಗೋದಾನಂ ಚ ತತಃ ಪರಮ್ ||”
“ಬ್ರಾಹ್ಮ-ಕ್ಷಾತ್ರ-ವೈಶ್ಯ ಎಂಬ ೩ ವರ್ಣಗಳ ದ್ವಿಜರು ಆಚರಿಸಬೇಕಾದ ವ್ರತಗಳಲ್ಲಿ ಮಹಾನಾಮ್ನೀ ಎಂಬುದು ಮೊದಲನೆಯದು. ಮಹಾವ್ರತವು ೨ನೆಯದು. ೩ನೆಯದು ಉಪನಿಷದ್ ವ್ರತ. ಅನಂತರ, ೪ನೆಯದೇ ಗೋದಾನ.”
ಮಹಾವಾಕ್ಯ-ಚತುಷ್ಟಯಮ್
(ಉಪನಿಷತ್ತಿನ ೪ ಮಹಾವಾಕ್ಯಗಳು)
೧. “ಪ್ರಜ್ಞಾನಂ ಬ್ರಹ್ಮ” ||
(ಋಗ್ವೇದದ ಐತರೇಯೋಪನಿಷತ್ತು; ಲಕ್ಷಣವಾಕ್ಯ)
"ಸದಾ ಪ್ರಜ್ಞಾ ಪೂರ್ವಕವಾಗಿರುವಿಕೆಯ ತಿಳುವಳಿಕೆಯೇ ಬ್ರಹ್ಮ".
ಓಂ ಯೇನೇಕ್ಷತೇ ಶೃಣೋತೀದಂ ಜಿಘ್ರತಿ ವ್ಯಾಕರೋತಿ ಚ |
ಸ್ವಾದ್ವಸ್ವಾದು ವಿಜಾನಾತಿ ತತ್ ಪ್ರಜ್ಞಾನಮುದೀರಿತಮ್ ||
ಯಾವುದರಿಂದಾಗಿ ಈ ಬ್ರಹ್ಮವನ್ನು ಮಾನವನು (ಯೇನ ಇದಂ), ನೋಡುತ್ತಾನೋ (ಈಕ್ಷತೇ), ಕೇಳುತ್ತಾನೋ (ಶೃಣೋತಿ), ಆಘ್ರಾಣಿಸುತ್ತಾನೋ (ಜಿಘ್ರತಿ), ವಿಸ್ತರಿಸಿ ವಿವರಿಸುತ್ತಾನೋ (ವ್ಯಾಕರೋತಿ), ಮತ್ತು (ಚ), ರುಚಿ-ಅರುಚಿಗಳನ್ನು ವಿಶೇಷವಾಗಿ / ಚೆನ್ನಾಗಿ ತಿಳಿಯುತ್ತಾನೋ (ಸ್ವಾದು-ಅಸ್ವಾದು ವಿಜಾನಾತಿ), ಅದು (ತತ್), ಪ್ರಜ್ಞಾನವೆಂದು (ಪ್ರಜ್ಞಾನಮ್), ಹೇಳಲ್ಪಟ್ಟಿದೆ (ಉದೀರಿತಮ್).
ಚತುರ್ಮುಖೇನ್ದ್ರದೇವೇಷು ಮನುಷ್ಯಾಶ್ವಗವಾದಿಷು |
ಚೈತನ್ಯಮೇಕಂ ಬ್ರಹ್ಮಾತಃ ಪ್ರಜ್ಞಾನಂ ಬ್ರಹ್ಮ ಮಯ್ಯಪಿ ||
ಸೃಷ್ಟಿಕರ್ತ ನಾಲ್ಮೊಗದ ಬ್ರಹ್ಮಾ(ಚತುರ್ಮುಖ-), ಸುಮನಸರೊಡೆಯ ದೇವೇಂದ್ರಾದಿ ದೇವತಾವರ್ಗಗಳಲ್ಲಿ(-ಇನ್ದ್ರದೇವೇಷು), ಮನುಷ್ಯ-ಕುದುರೆ-ಗೋವುಗಳೇ ಮುಂತಾದ ಜೀವರುಗಳಲ್ಲಿ / ಪ್ರಾಣವಂತರಲ್ಲಿ (ಮನುಷ್ಯ-ಅಶ್ವ-ಗವಾದಿಷು), ಏಕಮೇವವಾದ (ಏಕಂ) ಬ್ರಹ್ಮಸ್ವರೂಪೀ (ಬ್ರಹ್ಮ) ಚೈತನ್ಯವಿದೆಯಾದ್ದರಿಂದ (ಚೈತನ್ಯಮ್, ಅತಃ), ಮನುಷ್ಯನಾದ ನನ್ನಲ್ಲೂ(ಮಯಿ) ಸಹ(ಅಪಿ) ಅಂತಹ ಪ್ರಜ್ಞಾನರೂಪಿಯಾದ ಬ್ರಹ್ಮವೇ ಇರುವುದು(ಪ್ರಜ್ಞಾನಂ ಬ್ರಹ್ಮ).
೨. “ಅಹಂ ಬ್ರಹ್ಮಾऽಸ್ಮಿ” ||
(ಯಜುರ್ವೇದದ ಬೃಹದಾರಣ್ಯಕೋಪನಿಷತ್; ಸ್ವಾನುಭವ ವಚನ)
"ಬ್ರಹ್ಮವೇ ನಾನಾಗಿರುವೆ".
ಪರಿಪೂರ್ಣಃ ಪರಾತ್ಮಾऽಸ್ಮಿನ್ ದೇಹೇ ವಿದ್ಯಾಧಿಕಾರಿಣಿ |
ಬುದ್ಧೇಸ್ಸಾಕ್ಷಿತಯಾ ಸ್ಥಿತ್ವಾ ಸ್ಫುರನ್ನಹಮಿತೀರ್ಯತೇ ||
ಬ್ರಹ್ಮವಿದ್ಯೆಗೆ ಅರ್ಹವಾದ (ವಿದ್ಯಾಧಿಕಾರಿಣಿ), ಈ ದೇಹದಲ್ಲಿ (ಅಸ್ಮಿನ್ ದೇಹೇ), ಪರಿಪೂರ್ಣನಾದ (ಪರಿಪೂರ್ಣಃ), ಪರಮಾತ್ಮನು (ಪರಾತ್ಮಾ ), ಬುದ್ಧಿಗೆ ಸಾಕ್ಷೀರೂಪನಾಗಿದ್ದುಕೊಂಡು (ಬುದ್ಧೇಃ ಸಾಕ್ಷಿತಯಾ ಸ್ಥಿತ್ವಾ), ವಿದ್ಯುತ್ ಹಾಗೂ ಕಾಂತಶಕ್ತಿಗಳಿಂದ ನರಮಂಡಲಾದಿಗಳಲ್ಲಿ ಪ್ರಕಾಶಿಸುತ್ತಿರುವವನಾಗಿ (ಸ್ಫುರನ್), “ನಾನು” ಎಂದು (ಅಹಮ್ ಇತಿ), ಕರೆಸಲ್ಪಡುತ್ತಾನೆ (ಈರ್ಯತೇ |).
ಸ್ವತಃ ಪೂರ್ಣಃ ಪರಾತ್ಮಾऽತ್ರ ಬ್ರಹ್ಮಶಬ್ದೇನ ವರ್ಣಿತಃ |
ಅಸ್ಮೀತ್ಯೈಕಪರಾಮರ್ಶಸ್ತೇನ ಬ್ರಹ್ಮ ಭವಾಮ್ಯಹಮ್ ||
ಈ ದೇಹದಲ್ಲಿ (ಅತ್ರ), ಸ್ವಯಂ ಪರಿಪೂರ್ಣನಾದ (ಸ್ವತಃ ಪೂರ್ಣಃ), ಬ್ರಹ್ಮ ಎಂಬ ಶಬ್ದದಿಂದ ವರ್ಣಿತನಾದ (ಬ್ರಹ್ಮಶಬ್ದೇನ ವರ್ಣಿತಃ), ಪರಮಾತ್ಮನು (ಪರಾತ್ಮಾ), ನಾನಾಗಿದ್ದೇನೆ ಎಂಬ ಒಂದು ದೃಢವಾದ ನಿರಂತರವಿವೇಚನೆಯಿಂದ (ಅಸ್ಮಿ ಇತಿ ಏಕ ಪರಾಮರ್ಶಃ; ತೇನ), ನಾನು (ಅಹಂ), ಬ್ರಹ್ಮನೇ ಆಗುತ್ತೇನೆ (ಬ್ರಹ್ಮ ಭವಾಮಿ).
೩. “ತತ್ತ್ವಮಸಿ” ||
(ಸಾಮವೇದದ ಛಾನ್ದೋಗ್ಯೋಪನಿಷತ್; ಉಪದೇಶವಾಕ್ಯ)
"ನೀನು ಅದೇ (ಆ ಬ್ರಹ್ಮವಸ್ತುವೇ) ಆಗಿರುವಿ".
ಏಕಮೇವಾऽದ್ವಿತೀಯಂ ಸನ್ನಾಮರೂಪವರ್ಜಿತಮ್ |
ಸೃಷ್ಟೇಃ ಪುರಾऽಧುನಾऽಪ್ಯಸ್ಯ ತಾದೃಕ್ತ್ವಂ ತದಿತೀರ್ಯತೇ ||
ಈ ಸೃಷ್ಟಿಗೆ ಪೂರ್ವದಲ್ಲಿ (ಅಸ್ಯ ಸೃಷ್ಟೇಃ ಪುರಾ), ಈಗಲೂ / ಸೃಷ್ಟಿಯ ಅನಂತರವೂ (ಅಧುನಾ ಅಪಿ), ಇರುವುದಾದ (ಸತ್), ನಾಮರೂಪಗಳಿಲ್ಲದ (ನಾಮರೂಪವರ್ಜಿತಮ್), ಒಂದೇ ಆಗಿರುವ, ಎರಡನೆಯದು ಎಂಬುದಿಲ್ಲದ (ಏಕಮ್ ಏವ ಅದ್ವಿತೀಯಂ), ಅಂತಹ “ನೀನು” ಎನಿಸಿರುವ ಪರಬ್ರಹ್ಮವು (ತಾದೃಕ್ ತ್ವಂ), “ಅದು” ಎಂದು ಕರೆಯಲ್ಪಡುತ್ತದೆ (ತದ್ ಇತಿ ಈರ್ಯತೇ).
ಶ್ರೋತುರ್ದೇಹೇನ್ದ್ರಿಯಾತೀತಂ ವಸ್ತುತಸ್ತ್ವಂ (ವಸ್ತ್ವತ್ರ ತ್ವಂ) ಪದೇರಿತಮ್ |
ಏಕತಾಗ್ರಾಹ್ಯತೇऽಸೀತಿ ತದೈಕ್ಯಮನುಭೂಯತಾಮ್ ||
ವ್ಯಕ್ತಿಯ ದೇಹ-ಇಂದ್ರಿಯಗಳಿಗೆ ನಿಲುಕದ (ಶ್ರೋತುಃ ದೇಹೇನ್ದ್ರಿಯಾತೀತಂ), ಪರಬ್ರಹ್ಮವಸ್ತುವು ವಸ್ತುತಃ “ತ್ವಮ್” ಪದದಿಂದ ಕರೆಯಲ್ಪಟ್ಟಿರುವುದು (ವಸ್ತುತಃ ತ್ವಂ ಪದ+ಈರಿತಮ್) / ಪರವಸ್ತುವು ಇಲ್ಲಿ “ತ್ವಮ್”ಪದದಿಂದ ಕರೆಯಲ್ಪಟ್ಟಿರುವುದಾಗಿದೆ (ವಸ್ತು ಅತ್ರ ತ್ವಂ ಪದ+ಈರಿತಮ್). ಇದರೊಂದಿಗೆ “ತದ್” “ಅಸಿ”— ಇವುಗಳನ್ನು ಒಂದೆಡೆ ಸೇರಿಸಿ ತಾದಾತ್ಮ್ಯಭಾವದಿಂದ ಇವುಗಳ ಐಕ್ಯವನ್ನು ಅನುಭವಿಸಬೇಕು (ತದ್ ಅಸಿ ಇತಿ ಏಕತಾ ಗ್ರಾಹ್ಯತೇ; ಐಕ್ಯಮ್ ಅನುಭೂಯತಾಮ್) / ಒಂದೇ ಕಡೆ ಇರುವುದೆಂದು ಗ್ರಹಿಸಲಾಗದ್ದಾದರೂ, ಎಲ್ಲೆಡೆಯಲ್ಲೂ ಇರುವ ಏಕತ್ವವಾಗಿರುವೆ ಎಂದು ಆ ತತ್ತ್ವದೊಂದಿಗೆ ತನ್ನ ಅಭೇದವನ್ನು / ಐಕ್ಯವನ್ನು ಅನುಭವಿಸಿ ಆನಂದಪಡಬೇಕು (ಏಕತಾ ಅಗ್ರಾಹ್ಯತೇ; ತದ್ ಅಸಿ ಇತಿ ಐಕ್ಯಮ್ ಅನುಭೂಯತಾಮ್).
೪. “ಅಯಮಾತ್ಮಾ ಬ್ರಹ್ಮ” ||
(ಅಥರ್ವವೇದದ ಮಾಂಡೂಕ್ಯೋಪನಿಷತ್; ಸಾಕ್ಷಾತ್ಕಾರವಾಕ್ಯ)
"ಈ ಆತ್ಮನೇ ಬ್ರಹ್ಮವು".
ಸ್ವಪ್ರಕಾಶಾऽಪರೋಕ್ಷತ್ವಮಯಮಿತ್ಯುಕ್ತಿತೋ ಮತಮ್ |
ಅಹಂಕಾರಾದಿ ದೇಹಾನ್ತಂ ಪ್ರತ್ಯಗಾತ್ಮೇತಿ ಗೀಯತೇ ||
ಸ್ವಯಂಪ್ರಕಾಶವುಳ್ಳ , ಇಂದ್ರಿಯಗಳಿಗೆ ಪ್ರತ್ಯಕ್ಷಗೋಚರವಲ್ಲದ (ಸ್ವಪ್ರಕಾಶ-ಅಪರೋಕ್ಷತ್ವಮ್), “ಇದು” ಎಂಬ ಶಬ್ದವಾಚ್ಯವಾಗಿರುವನು ಈ ಜೀವಾತ್ಮನು ಎಂದು ಅಭಿಪ್ರಾಯಪಡಲಾಗಿದೆ (ಅಯಮ್ ಇತಿ ಉಕ್ತಿತಃ ಮತಮ್). ಈ ಪ್ರತ್ಯೇಕದೇಹಗಳೊಳಗಿರುವ ಜೀವಾತ್ಮನು (ಪ್ರತ್ಯಕ್-ಆತ್ಮಾ), ನಾನೆಂಬ ಮಮಕಾರವೇ ಮುಂತಾದ ಭಾವನೆಗಳಿಗೆ ಕಾರಣನಾಗಿ, ದೇಹದ ಅಂತರ್ಯಾಮಿಯಾಗಿದ್ದಾನೆಂದು (ಅಹಂಕಾರಾದಿ ದೇಹಾನ್ತಂ ಇತಿ), ಸ್ತುತಿಸಲ್ಪಡುತ್ತಾನೆ (ಗೀಯತೇ).
ದೃಶ್ಯಮಾನಸ್ಯ ಸರ್ವಸ್ಯ ಜಗತಸ್ತತ್ತ್ವಮೀರ್ಯತೇ |
ಬ್ರಹ್ಮಶಬ್ದೇನ ತದ್ಬ್ರಹ್ಮ ಸ್ವಪ್ರಕಾಶಾತ್ಮರೂಪಕಮ್ ||
ಸ್ವಯಂ ಪ್ರಕಾಶಾತ್ಮರೂಪಿಯಾದ (ಸ್ವಪ್ರಕಾಶಾತ್ಮರೂಪಕಂ) ಆ ಬ್ರಹ್ಮವು (ತದ್ ಬ್ರಹ್ಮ), ಕಾಣಿಸುತ್ತಿರುವ (ದೃಶ್ಯಮಾನಸ್ಯ), ಈ ಸಮಸ್ತ (ಸರ್ವಸ್ಯ), ಜಗತ್ತಿನ (ಜಗತಃ), ಮೂಲತತ್ತ್ವವಾದ (ತತ್-ತ್ವಂ), ಪರಬ್ರಹ್ಮವೆಂಬ ಶಬ್ದದಿಂದ (ಬ್ರಹ್ಮಶಬ್ದೇನ), ಕರೆಯಲ್ಪಡುತ್ತದೆ (ಈರ್ಯತೇ).
ಉಪನಿಷತ್ತುಗಳ ಪಂಚಶಾಂತಿಮಂತ್ರಗಳು
(ಇವುಗಳನ್ನು ಆಯಾ ಉಪನಿಷತ್ತುಗಳ ಆದ್ಯಂತಗಳಲ್ಲಿ ಉಚ್ಚರಿಸಬೇಕು)
೧) ಋಗ್ವೇದೀಯ (ಐತರೇಯಾದಿ) ಉಪನಿಷತ್ತುಗಳಿಗೆ—
ಓಂ ವಾಙ್ಮೇ ಮನಸಿ ಪ್ರತಿಷ್ಠಿತಾ | ಮನೋ ಮೇ ವಾಚಿ ಪ್ರತಿಷ್ಠಿತಮ್ | ಆವಿರಾವೀರ್ಮ ಏಧಿ | ವೇದಸ್ಯ ಮ ಆಣೀಸ್ಥಃ | ಶ್ರುತಂ ಮೇ ಮಾ ಪ್ರಹಾಸೀಃ | ಅನೇನಾಧೀತೇನಾಹೋರಾತ್ರಾನ್ ಸನ್ದಧಾಮಿ | ಋತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ | ತನ್ಮಾಮವತು | ತದ್ವಕ್ತಾರಮವತು | ಅವತು ಮಾಮ್ | ಅವತು ವಕ್ತಾರಮವತು ವಕ್ತಾರಮ್ ||
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||
(ವಾಕ್) ಶಾಸ್ತ್ರ ಹಾಗೂ ಗುರುವಾಕ್ಯಗಳು, (ಮೇ) ನನ್ನ, (ಮನಸಿ) ಮನಸ್ಸಿನಲ್ಲಿ, (ಪ್ರತಿಷ್ಠಿತಾ) ಸ್ಥಿರವಾಗಿ ಸದಾ ನೆಲೆಸಲಿ. ನನ್ನ ಮಾತು ನನ್ನ ಮನಸ್ಸಿನಲ್ಲಿ ಮೊದಲು ಸ್ಥಿರವಾಗಲಿ. ನನ್ನ ಮಾತು ಬಳಿಕ ಶ್ರೋತೃಗಳ ಮನದಲ್ಲೂ ಸುಸ್ಥಿರವಾಗಲಿ. (ಮೇ) ನನ್ನ, (ಮನಃ) ಮನಸ್ಸು, (ವಾಚಿ) ಗುರು ಹಾಗೂ ಶಾಸ್ತ್ರವಾಕ್ಯದಲ್ಲಿ ನಿರಂತರವೂ, (ಪ್ರತಿಷ್ಠಿತಮ್) ಸುಸ್ಥಿರವಾಗಿ ಮಗ್ನವಾಗಲಿ. ನನ್ನ ಮನದಲ್ಲಿ ನನ್ನ ಮಾತು ಸದಾ ನೆನಪಿನಲ್ಲಿರಲಿ. ಬಳಿಕ, ನನ್ನ ಮಾತಿನಲ್ಲಿ ಶ್ರೋತೃಗಳ / ಶಿಷ್ಯರ ಮನವೂ ನಿರಂತರವಾಗಿ ಸಂಲಗ್ನವಾಗಿರಲಿ. ಹಾಗೆಯೇ, ನನ್ನ ಮನ ಹಾಗೂ ಮಾತುಗಳು ಸದಾ ಸ್ಥಿರವಾಗಿರಲಿ, ಎಂದಿಗೂ ವಿಚಲಿತವಾಗದಿರಲಿ. ಮಾತಿನಂತೆಯೇ ನಿಷ್ಕಲ್ಮಷ ಮನವಿರಲಿ, ಮನದಂತೆಯೇ ನಿಷ್ಕಪಟ ಮಾತಿರಲಿ. ಮಾತು, ಮನಗಳೆರಡೂ ಪರಿಶುದ್ಧವೂ, ಕಳಂಕರಹಿತವೂ ಆಗಿರಲಿ. ಶುದ್ಧವಾದ ಬ್ರಹ್ಮಾತ್ಮಜ್ಞಾನವು, (ಮೇ) ನನಗೆ, (ಏಧಿ) ಉಂಟಾಗಲಿ. (ಆವಿಃ ಆವೀಃ) ಅಜ್ಞಾನತಮವು ಜ್ಞಾನಪ್ರಕಾಶದಿಂದ ತೊಲಗಿ ಸುಜ್ಞಾನವು ಸ್ಫುಟವಾಗಿ ಪ್ರಕಾಶಿಸಲಿ, ಆವಿರ್ಭವಿಸಲಿ, ಬಲಿಯಲಿ, ವರ್ಧಿಸಲಿ, ಅನುಭವವೇದ್ಯವಾಗಲಿ. (ವೇದಸ್ಯ ಮೇ, ಆಣೀಸ್ಥಃ) ಸಮಸ್ತ ವೇದರಾಶಿಯ ಜ್ಞಾನಸಾರವನ್ನು ತಿಳಿಯುವಂತಾಗಲಿ. ಓ ಶ್ರುತಿವಾಕ್ಯಗಳೇ! ನನಗೆ ವಿ-ಜ್ಞಾನವನ್ನುಂಟುಮಾಡಲು ಸಮರ್ಥರಾಗಿ. (ಶ್ರುತಂ ಮೇ) ನಾನು ಕೇಳಿದ / ಶ್ರವಣಮಾಡಿದ ಶಾಸ್ತ್ರಾಚಾರ್ಯವಾಕ್ಯಗಳು ನನ್ನನ್ನು, (ಮಾ ಪ್ರಹಾಸೀಃ) ಬಿಟ್ಟಗಲದಿರಲಿ. ಸದಾ ನನ್ನ ಮನದ್ಲಿ ಸ್ಥಿರವಾಗಿ ಉಳಿದು ಅನುಭವಕ್ಕೆ ಬರಲಿ. ಕೇವಲ ತಾತ್ಕಾಲಿಕ ಹುಸಿತೋರಿಕೆ ಮಾತ್ರವಾಗದಿರಲಿ. (ಅನೇನ ಅಧೀತೇನ) ಹೀಗೆ ಅಧ್ಯಯನ ಮಾಡಿದ್ದನ್ನು, (ಅಹೋರಾತ್ರಾನ್) ಹಗಲಿರುಳೂ, (ಸಂ-ದಧಾಮಿ) ಚೆನ್ನಾಗಿ ಮನನ, ನಿದಿಧ್ಯಾಸ ಮಾಡುತ್ತೇನೆ. ಈ ಮೂಲಕ ಮರೆತುಹೋಗದಂತಾಗಲಿ. (ಋತಂ ವದಿಷ್ಯಾಮಿ) ಯಥಾರ್ಥ ವಸ್ತುವಾಚಕ ದೈವೀ ನಿಯಮವನ್ನು ಮನನ ಮಾಡುತ್ತಾ ಹೇಳುತ್ತೇನೆ. (ಸತ್ಯಂ ವದಿಷ್ಯಾಮಿ) ಅಂತಹ ಮನಸಿನೊಳಗಣ ಸತ್ಯವನ್ನು ವಾಕ್ಕಿನ ಮೂಲಕವೂ ಅಂತೆಯೇ ಹೇಳುತ್ತೇನೆ. (ತತ್) ಹಾಗಾದ್ದರಿಂದ, ನಾನು ಅಂತಹ ಸತ್ಯನಿಷ್ಠನಾಗಿರುವುದರಿಂದ, ಬ್ರಹ್ಮಾತ್ಮಜಿಜ್ಞಾಸುವಾದ್ದರಿಂದ, ಆ ಪರಮಾತ್ಮನು / ಬ್ರಹ್ಮವಸ್ತುವು, (ಮಾಮ್) ನನ್ನನ್ನು, (ಅವತು) ರಕ್ಷಿಸಲಿ. (ತತ್) ಅದು / ಅವನು, (ವಕ್ತಾರಮ್ ಅವತು) ನನ್ನ ಗುರುವನ್ನು, ಬೋಧಕನನ್ನು, ಉಪದೇಶಕನನ್ನು, ನನಗೆ ಹೇಳಿಕೊಡುವವನ್ನು ರಕ್ಷಿಸಲಿ. (ಮಾಮ್) ನನ್ನನ್ನು (ಅವತು) ಕಾಪಾಡಲಿ. (ವಕ್ತಾರಮ್ ಅವತು ವಕ್ತಾರಮ್ ಅವತು) ಆಚಾರ್ಯನನ್ನು ರಕ್ಷಿಸಲಿ, ಆಚಾರ್ಯನನ್ನು ಕಾಪಾಡಲಿ. (ಓಮ್) ಹೇ ಭಗವಂತನೆ!! (ಶಾನ್ತಿಃ ಶಾನ್ತಿಃ ಶಾನ್ತಿಃ) ಆಧಿಭೌತಿಕ, ಆಧಿದೈವಿಕ ಹಾಗೂ ಆಧ್ಯಾತ್ಮಿಕ ತಾಪತ್ರಯವೂ ಶಮನವಾಗಲಿ.
೨) ಶುಕ್ಲಯಜುರ್ವೇದೀಯ (ಈಶಾವಾಸ್ಯಾದಿ) ಉಪನಿಷತ್ತುಗಳಿಗೆ—
ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ ||
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||
(ಅದಃ) ಅಪ್ರತ್ಯಕ್ಷವಾದ ಅವ್ಯಕ್ತವಾದ ಅದೃಶ್ಯವಾದ ಅದೂ / ಬ್ರಹ್ಮವೂ, (ಪೂರ್ಣಮ್) ಪೂರ್ಣವೆ. (ಇದಮ್ ಪೂರ್ಣಮ್) ಪ್ರತ್ಯಕ್ಷವಾದ ವ್ಯಕ್ತವಾದ ದೃಶ್ಯವಾದ ಇದೂ / ಪ್ರಪಂಚವೂ ಪೂರ್ಣವೆ. (ಪೂರ್ಣಾತ್) ಆ ಪರಿಪೂರ್ಣವಾದ ಬ್ರಹ್ಮದಿಂದ, (ಪೂರ್ಣಮ್) ಪರಿಪೂರ್ಣವಾದ ಈ ಜಗತ್ತು, (ಉತ್-ಅಚ್ಯತೇ) ಒಡಮೂಡುತ್ತದೆ. {ಉತ್— ಮೇಲಕ್ಕೆ, ಅಚಿ ಗತೌ— ಗಮನ, ಬರುವುದು.} (ಪೂರ್ಣಸ್ಯ ಪೂರ್ಣಮ್ ಆದಾಯ) ಪೂರ್ಣವಾದ ಬ್ರಹ್ಮದಿಂದ ಪೂರ್ಣವಾದ ಜಗತ್ತನ್ನು ತೆಗೆದರೂ, (ಪೂರ್ಣಮ್ ಏವ ಅವಶಿಷ್ಯತೇ) —ಸಾಗರದಿಂದ ಎಷ್ಟು ನೀರನ್ನು ತೆಗೆದರೂ ಅದು ಹಾಗೇ ಇರುವಂತೆಯೇ, ಆಕಾಶದಿಂದ ಎಷ್ಟು ಭಾಗವನ್ನು ಪ್ರತ್ಯೇಕಿಸಿದರೂ ಆಕಾಶಕ್ಕೆ ಕುಂದಾಗದಂತೆಯೇ— ಬ್ರಹ್ಮವು ಯಾವ ಕುಂದಿಲ್ಲದೆ ಪೂರ್ಣವಾಗಿಯೇ ಉಳಿದುಕೊಳ್ಳುತ್ತದೆ. (ಓಂ ಶಾಂತಿಃ ಶಾಂತಿಃ ಶಾಂತಿಃ) ಓ ಏಕ-ಅಕ್ಷರ ಬ್ರಹ್ಮವೆ! ನಮ್ಮ ತ್ರಿವಿಧ ತಾಪಗಳು ಶಾಂತಿಯನ್ನೈದಲಿ.
೩) ಕೃಷ್ಣಯಜುರ್ವೇದೀಯ (ಕಠ, ತೈತ್ತಿರೀಯಾದಿ) ಉಪನಿಷತ್ತುಗಳಿಗೆ—
ಓಂ ಸಹ ನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ||
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||
(ನೌ / ಆವಾಮ್) ಗುರು-ಶಿಷ್ಯರಾದ ನಮ್ಮೀರ್ವರನ್ನೂ ಕೂಡ, (ಸಹ) ಜೊತೆಯಾಗಿಯೇ, (ಅವತು) ಪರಮಾತ್ಮನು ರಕ್ಷಿಸಲಿ. (ನೌ ಸಹ ಭುನಕ್ತು) ನಮ್ಮೀರ್ವರನ್ನೂ ಒಟ್ಟಿಗೆ ಆತನು ಭೋಜನಾದಿಗಳಿಂದಲೂ, ಜ್ಞಾನಭಕ್ತ್ಯಾದಿಗಳಿಂದಲೂ ಪೋಷಿಸಲಿ. (ಸಹ) ನಾವಿಬ್ಬರೂ, (ವೀರ್ಯಂ ಕರವಾವಹೈ) ವೀರ್ಯ-ಶೌರ್ಯ-ಪರಾಕ್ರಮ-ಸಾಮರ್ಥ್ಯಗಳಿಂದ ಕೂಡಿರುವಂತಾಗಲಿ. (ಅಧೀತಮ್) ನಾವು ಅಧ್ಯಯನ ಮಾಡಿರುವ ವಿದ್ಯೆಯು, (ತೇಜಸ್ವಿನೌ) ನಮ್ಮನ್ನು ತೇಜಸ್ವಿಗಳಾಗಿರುವಂತೆ, (ಅಸ್ತು) ಮಾಡಲಿ. ಆ ವಿದ್ಯೆಯೂ ತೇಜಸ್ವಂತವೂ, ಶುದ್ಧವೂ ಆಗಲಿ. (ಮಾ ವಿದ್ವಿಷಾವಹೈ) ನಾವೀರ್ವರು ಪರಸ್ಪರ ದ್ವೇಷಿಸದಂತಾಗಲಿ. (ಓಂ ಶಾಂತಿಃ ಶಾಂತಿಃ ಶಾಂತಿಃ) ಓ ಪ್ರಣವಬ್ರಹ್ಮವೆ! ನಮ್ಮ ತಾಪತ್ರಯವೆಲ್ಲ ಉಪಶಮನಹೊಂದಲಿ.
ಓಂ ಶಂ ನೋ ಮಿತ್ರಃ ಶಂ ವರುಣಃ | ಶಂ ನೋ ಭವತ್ವರ್ಯಮಾ | ಶಂ ನ ಇನ್ದ್ರೋ ಬೃಹಸ್ಪತಿಃ | ಶಂ ನೋ ವಿಷ್ಣುರುರುಕ್ರಮಃ | ನಮೋ ಬ್ರಹ್ಮಣೇ | ನಮಸ್ತೇ ವಾಯೋ | ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ | ತ್ವಾಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ | ಋತಂ ವದಿಷ್ಯಾಮಿ | ಸತ್ಯಂ ವದಿಷ್ಯಾಮಿ | ತನ್ಮಾಮವತು | ತದ್ವಕ್ತಾರಮವತು | ಅವತು ಮಾಮ್ | ಅವತು ವಕ್ತಾರಮ್ ||
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||
(ಮಿತ್ರಃ)ಸೂರ್ಯನು, (ನಃ / ಅಸ್ಮಭ್ಯಮ್) ನಮಗೆ, (ಶಮ್) ಶುಭ ತರಲಿ. (ವರುಣಃ) ವರುಣದೇವನೂ, (ಶಮ್) ಮಂಗಳವನ್ನುಂಟುಮಾಡಲಿ. (ಅರ್ಯಮಾ) ಪಿತೃದೇವತೆಯಾದ ಅರ್ಯಮನೂ, (ನಃ) ನಮಗೆ, (ಶಂ ಭವತು) ಕಲ್ಯಾಣಕಾರಿಯಾಗಲಿ. (ಇಂದ್ರಃ, ಬೃಹಸ್ಪತಿಃ) ಇಂದ್ರ-ಬೃಹಸ್ಪತಿಗಳು, (ನಃ) ನಮಗೆ, (ಶಮ್) ಒಳಿತನ್ನು ಮಾಡಲಿ. (ಉರು-ಕ್ರಮಃ) ವಿಶಾಲವಾಗಿ ಕ್ರಮಿಸಬಲ್ಲ ತ್ರಿವಿಕ್ರಮನಾದ, (ವಿಷ್ಣುಃ) ವಿಷ್ಣುವೂ, (ನಃ) ನಮಗೆ, (ಶಮ್) ಹಿತಕರನಾಗಲಿ. ಮಿತ್ರ-ವರುಣ-ಅರ್ಯಮ-ಇಂದ್ರ-ಬೃಹಸ್ಪತಿ-ವಿಷ್ಣುಗಳು ಅನುಕ್ರಮವಾಗಿ ನಮ್ಮ ಪ್ರಾಣ-ಅಪಾನ-ನೇತ್ರ-ಬಲ-ವಾಗ್ಬುದ್ಧಿ-ಪಾದಗಳಲ್ಲಿ ನೆಲೆಯಾಗಿ ಬ್ರಹ್ಮವಿದ್ಯಾ ಶ್ರವಣ-ಧಾರಣ-ಸಮರ್ಥರಾಗುವಂತೆ ಅನುಕೂಲರಾಗಿರಿ. (ಬ್ರಹ್ಮಣೇ ನಮಃ) ಪರಬ್ರಹ್ಮನಿಗೆ ನಮಸ್ಕಾರ. (ವಾಯೋ! ತೇ ನಮಃ) ಹೇ ವಾಯುದೇವನೆ! ನಿನಗೆ ನಮನ. (ತ್ವಮ್ ಏವ) ನೀನೇ, (ಪ್ರತ್ಯಕ್ಷಂ ಬ್ರಹ್ಮ ಅಸಿ) ಪ್ರತ್ಯಕ್ಷವಾದ ಬ್ರಹ್ಮವಾಗಿರುವೆ. (ತ್ವಾಮ್ ಏವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ) ನಿಶ್ಚಯವಾಗಿಯೂ ನಿನ್ನನ್ನೇ ಪ್ರತ್ಯಕ್ಷಾನುಭೂತವಾದ ಬ್ರಹ್ಮವೆಂದು ಹೇಳುವೆನು. (ಋತಂ ವದಿಷ್ಯಾಮಿ, ಸತ್ಯಂ ವದಿಷ್ಯಾಮಿ) ಮನಸಾ ವಾಚಾ ಋತ-ಸತ್ಯಗಳನ್ನೇ ಹೇಳುವೆನು. (ತತ್ ಮಾಮ್ ಅವತು) ಅಂತಹ ನೀನು ನನ್ನನ್ನು ರಕ್ಷಿಸು. (ತದ್ ವಕ್ತಾರಮ್ ಅವತು) ಆ ನೀನು ಆಚಾರ್ಯನನ್ನು ಕಾಪಾಡು. (ಅವತು ಮಾಮ್) ಪಾಲಿಸು ನನ್ನನ್ನು. (ಅವತು ವಕ್ತಾರಮ್) ರಕ್ಷಿಸು ವಕ್ತಾರನನ್ನು / ಬೋಧಕನನ್ನು. (ಓಂ ಶಾಂತಿಃ ಶಾಂತಿಃ ಶಾಂತಿಃ) ಓ ನಾದಬ್ರಹ್ಮವೆ! ನಮ್ಮ ಅಧಿಭೌತಿಕ, ಅಧಿದೈವಿಕ, ಅಧ್ಯಾತ್ಮಿಕ ತಾಪತ್ರಯವೆಲ್ಲವನ್ನೂ ಶಮನಗೊಳಿಸು.
೪) ಸಾಮವೇದೀಯ (ಕೇನ, ಛಾಂದೋಗ್ಯಾದಿ) ಉಪನಿಷತ್ತುಗಳಿಗೆ—
ಓಂ ಆಪ್ಯಾಯನ್ತು ಮಮಾಙ್ಗಾನಿ ವಾಕ್-ಪ್ರಾಣಶ್ಚಕ್ಷುಶ್ಶ್ರೋತ್ರಮಥೋ ಬಲಮಿನ್ದ್ರಿಯಾಣಿ ಚ ಸರ್ವಾಣಿ |
ಸರ್ವಂ ಬ್ರಹ್ಮೌಪನಿಷದಂ ಮಾಹಂ ಬ್ರಹ್ಮ ನಿರಾಕುರ್ಯಾಂ ಮಾ ಮಾ ಬ್ರಹ್ಮ ನಿರಾಕರೋದನಿರಾಕರಣಮಸ್ತ್ವನಿರಾಕರಣಂ ಮೇऽಸ್ತು |
ತದಾತ್ಮನಿ ನಿರತೇ ಯ ಉಪನಿಷತ್ಸು ಧರ್ಮಾಸ್ತೇ ಮಯಿ ಸನ್ತು ತೇ ಮಯಿ ಸನ್ತು ||
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||
(ಮಮ) ನನ್ನ, (ವಾಕ್-ಪ್ರಾಣಃ-ಚಕ್ಷುಃ-ಶ್ರೋತ್ರಮ್) ವಾಕ್, ಪಂಚಪ್ರಾಣಗಳು, ಕಣ್ಣುಗಳು, ಕಿವಿಗಳು, (ಅಥೋ) ಹಾಗೆಯೇ, (ಬಲಮ್ ಇನ್ದ್ರಿಯಾಣಿ ಚ ಸರ್ವಾಣಿ) ಬಲ ಮತ್ತು ಇಂದ್ರಿಯಶಕ್ತಿಗಳು ಮುಂತಾದ ಎಲ್ಲ, (ಅಙ್ಗಾನಿ) ಅಂಗಗಳೂ, (ಆಪ್ಯಾಯನ್ತು) ಪರಿಪುಷ್ಟವಾಗಿ ನನ್ನ ಸಹಾಯಕರಾಗಿರಲಿ, ನನಗೆ ಆಪ್ಯಾಯಮಾನವಾಗಿರಲಿ. (ಸರ್ವಮ್) ಸಮಸ್ತ ವ್ಯಕ್ತಾವ್ಯಕ್ತಪ್ರಪಂಚವೂ, (ಔಪನಿಷದಂ ಬ್ರಹ್ಮ) ಉಪನಿಷತ್-ಪ್ರತಿಪಾದಿತವಾದ ಔಪನಿಷದಬ್ರಹ್ಮವೇ ಆಗಿರುವುದು. (ಅಹಮ್) ನಾನು, (ಬ್ರಹ್ಮ) ಅಂತಹ ಸರ್ವಾತ್ಮವನ್ನು ಎಂದೆಂದಿಗೂ, (ಮಾ ನಿರಾಕುರ್ಯಾಮ್) ತಿರಸ್ಕರಿಸದಂತಾಗಲಿ, ನಿರಾಕರಿಸದಂತಾಗಲಿ, ಅಲ್ಲಗಳೆಯದಂತಾಗಲಿ. ಹಾಗೆಯೇ, (ಬ್ರಹ್ಮ) ಆ ಬ್ರಹ್ಮವಸ್ತುವೂ, (ಮಾ ಮಾ ನಿರಾಕರೋತ್) ನನ್ನನ್ನು ನಿರಾಕರಿಸದಿರಲಿ, ಅನಾದರಿಸಿ ಅವಜ್ಞೆ ಮಾಡದಿರಲಿ. (ಅನಿರಾಕರಣಮ್ ಅಸ್ತು, ಅನಿರಾಕರಣಂ ಮೇ ಅಸ್ತು) ಹೀಗೆ ಬ್ರಹ್ಮಕ್ಕೂ ನನಗೂ ಒಬ್ಬರನ್ನಗಲಿ ಮತ್ತೊಬ್ಬರಿರಲಾಗದಂತಹ ಅವಿನಾಭಾವ ಸಂಬಂಧವು ಸದಾ ಉಳಿಯಲಿ. (ತದ್-ಆತ್ಮನಿ ನಿರತೇ ಉಪನಿಷತ್ಸು)ಅಂತಹ ತದ್ ವಾಚ್ಯವಾದ ಆತ್ಮವಸ್ತುವಿನ ವಿಚಾರದಲ್ಲೇ ನಿರತವಾದ ಉಪನಿಷತ್ತುಗಳಲ್ಲಿ, (ಯೇ ಧರ್ಮಾಃ) ಯಾವ ಗುಣಧರ್ಮಗಳನ್ನು ಹೇಳಿವೆಯೋ, (ತೇ ಮಯಿ ಸನ್ತು, ತೇ ಮಯಿ ಸನ್ತು) ಅವೆಲ್ಲವೂ ನನ್ನಲ್ಲಿ ಸದಾಕಾಲವೂ ಸುಸ್ಥಿರವಾಗಿ ನೆಲೆಸಿರಲಿ. (ಓಂ ಶಾಂತಿಃ ಶಾಂತಿಃ ಶಾಂತಿಃ) ಹೇ ಪರಮ ಆತ್ಮನೇ! ತ್ರಿತಯತಾಪಗಳ ನಿವಾರಣೆಯಾಗಲಿ.
ಓಂ ಸಹ ನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ||
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||
(ಈ ಶಾಂತಿಮಂತ್ರವೂ ಸಾಮವೇದೀಯ ಉಪನಿಷತ್ತುಗಳಲ್ಲಿ ಬಳಕೆಯಲ್ಲಿದೆ. ಇದರ ಅರ್ಥವನ್ನು ಹಿಂದೆಯೇ ಹೇಳಿದೆ)
೫) ಅಥರ್ವವೇದೀಯ (ಪ್ರಶ್ನ, ಮುಂಡಕ, ಮಾಂಡೂಕ್ಯಾದಿ) ಉಪನಿಷತ್ತುಗಳಿಗೆ—
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ |
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ |
ಸ್ಥಿರೈರಙ್ಗೈಸ್ತುಷ್ಟುವಾಗ್ಂಸಸ್ತನೂಭಿಃ |
ವ್ಯಶೇಮ ದೇವಹಿತಂ ಯದಾಯುಃ ||
(ದೇವಾಃ) ಹೇ ದೇವತೆಗಳೇ! ಜ್ಞಾನಜ್ಯೋತಿಗಳಾಗಿ, (ವಯಮ್) ನಾವು, (ಕರ್ಣೇಭಿಃ) ಕಿವಿಗಳಿಂದ ಸದಾ, (ಭದ್ರಮ್) ಮಂಗಳವಾದುದನ್ನೇ, (ಶೃಣುಯಾಮ) ಕೇಳುವಂತಾಗಲಿ / ಕೇಳೋಣ. (ಯಜತ್ರಾಃ) ಯಜನಶೀಲರಾಗಿದ್ದು, (ಭದ್ರಮ್) ಶುಭವಾದುದನ್ನೇ, (ಅಕ್ಷಭಿಃ) ಕಣ್ಣುಗಳಿಂದ, (ಪಶ್ಯೇಮ) ನೋಡುವಂತಾಗಲಿ / ನೋಡೋಣ. (ಸ್ಥಿರೈಃ ಅಙ್ಗೈಃ ತನೂಭಿಃ) ಸುಸ್ಥಿರವೂ ದೃಢವೂ ಶಕ್ತಿಯುತವೂ ಆದ ಅವಯವಗಳಿಂದ ಕೂಡಿದ ದೇಹಗಳಿಂದ, (ತುಷ್ಟುವಾಂಸಃ) ಸಂತುಷ್ಟರಾಗಿದ್ದು ನಿಮ್ಮನ್ನೂ ಸ್ತುತಿಸುತ್ತಾ ತೋಷಪಡಿಸುವವರಾಗಿ, (ಯದಾಯುಃ) ಆಯುಷ್ಯವಿರುವವರೆಗೂ, (ದೇವಹಿತಂ ವ್ಯಶೇಮ) ಧರ್ಮಪೂರಕವಾದ ದೇವತಾಕಾರ್ಯಗಳನ್ನು ಆಚರಿಸುತ್ತಾ, ಜ್ಞಾನನಿಷ್ಠರಾಗಿ ಬದುಕುವಂತಾಗಲಿ / ಬದುಕೋಣ.
ಸ್ವಸ್ತಿ ನ ಇನ್ದ್ರೋ ವೃದ್ಧಶ್ರವಾಃ |
ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿಃ |
ಸ್ವಸ್ತಿ ನೋ ಬೃಹಸ್ಪತಿರ್ದಧಾತು ||
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ||
(ವೃದ್ಧಶ್ರವಾಃ) ಹೆಚ್ಚಿನ ಕೀರ್ತಿಯುಳ್ಳವನೂ, ಪುರಾತನನೂ, ಜ್ಞಾನವೃದ್ಧರಿಂದ ಕೀರ್ತಿತನಾದವನೂ, ಪ್ರಸಿದ್ಧನೂ ಆದ, (ಇನ್ದ್ರಃ ಸ್ವಸ್ತಿ) ಇಂದ್ರಿಯಾಭಿಮಾನಿದೇವತೆಗಳ ಅಧಿಪತಿಯೂ, ಪರಮೈಶ್ವರ್ಯಯುತನೂ (ಇಂದ ಪರಮೈಶ್ವರ್ಯೇ ಧಾತುಃ) ಆದ ಇಂದ್ರನಿಗೆ ಜಯವಾಗಲಿ. (ನಃ) ಆತನು ನಮಗೆ ಶುಭವನ್ನೀಯಲಿ. (ವಿಶ್ವವೇದಾಃ) ಸರ್ವಸಾಕ್ಷಿಯಾಗಿ ಸಕಲವನ್ನರಿತಿರುವ, (ಪೂಷಾ) ನಮ್ಮನ್ನೆಲ್ಲ ಪೋಷಿಸುವುದರಿಂದ ಪೂಷನ್ ಎನಿಸಿರುವ ಸೂರ್ಯದೇವನು (ಪೂಷ ವೃದ್ಧೌ ಧಾತುಃ), (ನಃ ಸ್ವಸ್ತಿ) ನಮಗೆ ಸ್ವಸ್ತಿಕಾರಕನಾಗಲಿ. ಆತನಿಗೂ ಜಯವಾಗಲಿ. (ಅರಿಷ್ಟನೇಮಿಃ) ಸಕಲ ಅನಿಷ್ಟಗಳನ್ನೂ, ಸಂಕಟಗಳನ್ನೂ ನಿಯಂತ್ರಿಸಬಲ್ಲ, (ತಾರ್ಕ್ಷ್ಯಃ) "ತರ್ಕ್ಷಸ್ಯ ಕಶ್ಯಪಸ್ಯ ಅಪತ್ಯಂ ಪುಮಾನ್ ತಾರ್ಕ್ಷ್ಯಃ— ತರ್ಕ್ಷನೆಂಬ ಹೆಸರುಳ್ಳ ಕಶ್ಯಪನ ಮಗನೇ ತಾರ್ಕ್ಷ್ಯನೆನ್ನಲ್ಪಟ್ಟ ಗರುಡನು, (ನಃ ಸ್ವಸ್ತಿ) ನಮಗೆ ಮಂಗಲವನ್ನು ತರಲಿ. ಆತನಿಗೂ ಜಯವಾಗಲಿ. (ಬೃಹಸ್ಪತಿಃ) ನಮ್ಮಲ್ಲಿನ ಧೀಶಕ್ತಿಯನ್ನು ರಕ್ಷಿಸುವ ದೇವಗುರು ಬೃಹಸ್ಪತಿಯು, (ನಃ) ನಮಗೆ, (ಸ್ವಸ್ತಿ ದಧಾತು) ಶುಭವನ್ನು ಉಂಟುಮಾಡಲಿ. ಇವರೆಲ್ಲರೂ ನಮಗೆ ಉತ್ತಮ ಬುದ್ಧಿ-ಕೌಶಲ್ಯ-ಗ್ರಹಣಶಕ್ತಿಗಳನ್ನೂ, ಅವನ್ನು ಅನುಷ್ಠಾನಿಸುವ ಧೈರ್ಯವನ್ನೂ ನೀಡಿ ಅನುಗ್ರಹಿಸಲಿ. (ಓಂ ಶಾನ್ತಿಃ ಶಾನ್ತಿಃ ಶಾನ್ತಿಃ) ಸಕಲ ಚರಾಚರಗಳಿಂದಲೂ ಪಂಚಭೂತಗಳಿಂದಲೂ ಬರಬಹುದಾದ ಕ್ರೂರ ಜಂತು ಸಿಡಿಲು ಪ್ರವಾಹ ಮುಂತಾದ ಆಧಿಭೌತಿಕ ತೊಂದರೆಗಳು, ನಮ್ಮ ಪೂರ್ವಕರ್ಮಾರ್ಜಿತಫಲಸ್ವರೂಪವಾಗಿ ವಿಧಿರೂಪದಿಂದ ಗ್ರಹ-ದೇವತೆಗಳಿಂದ ಬರಬಹುದಾದ ಗ್ರಹಚಾರಾದಿ ಆಧಿದೈವಿಕ ಆಪತ್ತುಗಳು ಹಾಗೂ ಮಾನಸಿಕ-ದೈಹಿಕ ಆಧಿ-ವ್ಯಾಧಿಗಳೇ ಮುಂತಾದ ಆಧ್ಯಾತ್ಮಿಕ ವಿಪತ್ತುಗಳು— ನಮ್ಮ ಈ ಮೂರು ಬಗೆಯ ಸಂಕಟಗಳೂ ಪರಮಾತ್ಮಾನುಗ್ರಹದಿಂದ ಉಪಶಮನವಾಗಲಿ.
ಉಪನಿಷತ್ತುಗಳ ವರ್ಗೀಕರಣ
(೧) ವೇದಮೂಲಾಧಾರಿತ—
ನಾಲ್ಕೂ ವೇದಗಳಿಗೆ ಸಂಬಂಧಿಸಿ ಒಟ್ಟು ೧,೧೮೦ ಉಪನಿಷತ್ತುಗಳಿವೆ ಎಂಬುದು ಒಂದು ಅಭಿಪ್ರಾಯ. ಅವುಗಳಲ್ಲಿ—
ಋಗ್ವೇದೀಯ— ೨೧
ಯಜುರ್ವೇದೀಯ— ೧೦೯
ಸಾಮವೇದೀಯ— ೧,೦೦೦
ಆಥರ್ವಣವೇದೀಯ— ೫೦.
ಮುಕ್ತಿಕೋಪನಿಷತ್ನಲ್ಲಿ ಒಟ್ಟು ೧೦೮ ಉಪನಿಷತ್ತುಗಳ ಪ್ರಸ್ತಾಪವಿದೆ.
“ಈಶ-ಕೇನ-ಕಠ-ಪ್ರಶ್ನ-ಮುಣ್ಡ-ಮಾಣ್ಡೂಕ್ಯ-ತಿತ್ತಿರಿಃ || ೭ ||
ಐತರೇಯಂ ಚ ಛಾನ್ದೋಗ್ಯಂ ಬೃಹದಾರಣ್ಯಕಂ ತಥಾ || ೧೦ ||
ಬ್ರಹ್ಮ-ಕೈವಲ್ಯ-ಜಾಬಾಲ-ಶ್ವೇತಾಶ್ವಾಃ - ಹಂಸಃ - ಆರುಣಿಃ || ೧೬ ||
ಗರ್ಭೋ ನಾರಾಯಣೋ ಹಂಸೋ ಬಿನ್ದುಃ-ನಾದಃ-ಶಿರಃ ಶಿಖಾ || ೨೩ ||
ಮೈತ್ರಾಯಣೀ ಕೌಷೀತಕೀ ಬೃಹಜ್ಜಾಬಾಲ-ತಾಪಿನೀ || ೨೭ ||
ಕಾಲಾಗ್ನಿರುದ್ರ-ಮೈತ್ರೇಯೀ ಸುಬಾಲ-ಕ್ಷುರಿ-ಮಾನ್ತ್ರಿಕಾಃ || ೩೨ ||
ಸರ್ವಸಾರಂ ನಿರಾಲಮ್ಬಂ ರಹಸ್ಯಂ ವಜ್ರಸೂಚಿಕಮ್ || ೩೬ ||
ತೇಜೋ ನಾದೋ ಧ್ಯಾನ-ವಿದ್ಯಾ-ಯೋಗತತ್ತ್ವ-ಆತ್ಮಬೋಧಕಮ್ || ೪೨ ||
ಪರಿವ್ರಾಟ್ ತ್ರಿಶಿಖೀ ಸೀತಾ ಚೂಡಾ ನಿರ್ವಾಣ-ಮಣ್ಡಲಮ್ ||೪೮ ||
ದಕ್ಷಿಣಾ ಶರಭಂ ಸ್ಕಾನ್ದಂ ಮಹಾನಾರಾಯಣ-ಅದ್ವಯಮ್ || ೫೩ ||
ರಹಸ್ಯಂ ರಾಮತಪನಂ ವಾಸುದೇವಂ ಚ ಮುದ್ಗಲಮ್ || ೫೭ ||
ಶಾಣ್ಡಿಲ್ಯಂ ಪೈಙ್ಗಲಂ ಭಿಕ್ಷುಃ ಮಹತ್-ಶಾರೀರಕಂ ಶಿಖಾ || ೬೩ ||
ತುರೀಯಾತೀತ-ಸಂನ್ಯಾಸ-ಪರಿವ್ರಾಜ-ಅಕ್ಷಮಾಲಿಕಾ || ೬೭ ||
ಅವ್ಯಕ್ತ-ಏಕಾಕ್ಷರಂ ಪೂರ್ಣಾ ಸೂರ್ಯ-ಅಕ್ಷ್ಯ-ಅಧ್ಯಾತ್ಮ-ಕುಣ್ಡಿಕಾ || ೭೪ ||
ಸಾವಿತ್ರೀ-ಆತ್ಮಾ ಪಾಶುಪತಂ ಪರಬ್ರಹ್ಮ-ಅವಧೂತಕಮ್ || ೭೯ ||
ತ್ರಿಪುರಾತಾಪನಂ ದೇವೀ ತ್ರಿಪುರಾ ಕಠ-ಭಾವನಾ || ೮೪ ||
ಹೃದಯಂ ಕುಣ್ಡಲೀ ಭಸ್ಮ-ರುದ್ರಾಕ್ಷ-ಗಣ-ದರ್ಶನಮ್ || ೯೦ ||
ತಾರಸಾರ-ಮಹಾವಾಕ್ಯ-ಪಂಚಬ್ರಹ್ಮ-ಅಗ್ನಿಹೋತ್ರಕಮ್ || ೯೪ ||
ಗೋಪಾಲತಾಪನಂ ಕೃಷ್ಣಂ ಯಾಜ್ಞವಲ್ಕ್ಯಂ ವರಾಹಕಮ್ || ೯೮ ||
ಶಾಟ್ಯಾಯನೀ ಹಯಗ್ರೀವಂ ದತ್ತಾತ್ರೇಯಂ ಚ ಗಾರುಡಮ್ || ೧೦೨ ||
ಕಾಲ-ಜಾಬಾಲಿ-ಸೌಭಾಗ್ಯ-ರಹಸ್ಯ-ಋಚ-ಮುಕ್ತಿಕಾಃ || ೧೦೮ ||
(ಮುಕ್ತಿಕೋಪನಿಷತ್)
ಇಲ್ಲಿ, ಹಂಸ ಎಂದರೆ ಪರಮಹಂಸ, ಬಿನ್ದು— ಅಮೃತಬಿನ್ದು, ನಾದ— ಅಮೃತನಾದ, ಶಿರ— ಅಥರ್ವಶಿರ, ಶಿಖಾ— ಅಥರ್ವಶಿಖಾ, ತಾಪನೀ— ನೃಸಿಂಹತಾಪನೀ, ರಹಸ್ಯ— ಶುಕರಹಸ್ಯ, ತೇಜ— ತೇಜೋಬಿನ್ದು, ನಾದ— ನಾದಬಿನ್ದು, ಧ್ಯಾನ— ಧ್ಯಾನಬಿನ್ದು, ವಿದ್ಯಾ— ಬ್ರಹ್ಮವಿದ್ಯಾ, ಪರಿವ್ರಾಟ್— ನಾರದಪರಿವ್ರಾಟ್, ತ್ರಿಶಿಖೀ— ತ್ರಿಶಿಖೀಬ್ರಾಹ್ಮಣ, ಚೂಡಾ— ಯೋಗಚೂಡಾಮಣಿ, ಮಣ್ಡಲ— ಮಣ್ಡಲಬ್ರಾಹ್ಮಣ, ದಕ್ಷಿಣಾ— ದಕ್ಷಿಣಾಮೂರ್ತಿ, ಅದ್ವಯ— ಅದ್ವಯತಾರಕ, ರಹಸ್ಯ— ರಾಮರಹಸ್ಯ, ಮಹತ್— ಮಹೋಪನಿಷತ್, ಶಿಖಾ— ಯೋಗಶಿಖಾ, ಪರಿವ್ರಾಜ— ಪರಮಹಂಸಪರಿವ್ರಾಜಕ, ಪೂರ್ಣಾ— ಅನ್ನಪೂರ್ಣಾ, ಕಠ— ಕಠರುದ್ರ, ಕುಂಡಲೀ— ಯೋಗಕುಂಡಲೀ, ಭಸ್ಮ— ಭಸ್ಮಜಾಬಾಲ, ಗಣ— ಗಣಪತಿ, ದರ್ಶನ— ಜಾಬಾಲದರ್ಶನ, ಅಗ್ನಿಹೋತ್ರಕ— ಪ್ರಾಣಾಗ್ನಿಹೋತ್ರ, ಕಲಿ— ಕಲಿಸಂತರಣ, ರಹಸ್ಯ— ಸರಸ್ವತೀರಹಸ್ಯ ಉಪನಿಷತ್— ಎಂಬುದಾಗಿ ತಿಳಿಯಬೇಕು.
ಇದರ ಪ್ರಕಾರ—
೧. ಋಗ್ವೇದೀಯ— ೧೦
(೧)ಐತರೇಯಂ (೨)ನಾದಬಿನ್ದುಃ -(೩) ಆತ್ಮಬೋಧಃ -(೪)ಅಕ್ಷಮಾಲಿಕಾ |
(೫)ಕೌಷೀತಕೀಬ್ರಾಹ್ಮಣಂ (೬)ನಿರ್ | ವಾಣ-(೭)ಮುದ್ಗಲ-(೮)ಬಹ್ವೃಚಾಃ || ೧ ||
(೯)ಸೌಭಾಗ್ಯಂ ಚ ಸಲಕ್ಷ್ಮೀಕಂ (೧೦)ತ್ರಿಪುರಂ ಚೇತಿ ಮುಕ್ತಿಕೇ |
ಋಗ್ವೇದೀಯಾ ದಶ ಪ್ರೋಕ್ತಾ ವೇದಾನ್ತಾ ಬ್ರಹ್ಮಬೋಧಕಾಃ || ೨ ||
೨. ಶುಕ್ಲಯಜುರ್ವೇದೀಯ— ೧೯
(೧)ಈಶಾವಾಸ್ಯಂ (೨)ನಿರಾಲಮ್ಬಂ (೩)ಬೃಹದಾರಣ್ಯಕಂ ತಥಾ |
(೪)ಜಾಬಾಲಂ ಚ (೫)ಸುಬಾಲಂ ಚ (೬)ಮಾನ್ತ್ರಿಕಂ (೭)ಹಂಸ ಏವ ಚ || ೧ ||
(೮)ಪರಮಹಂಸ(೯)ಪೈಙ್ಗಲೌ ಚ (೧೦)ತ್ರಿಶಿಖಿಬ್ರಾಹ್ಮಣಂ ತಥಾ |
(೧೧)ಮಂಡಲಬ್ರಾಹ್ಮಣಂ (೧೨)ತಾರಸಾರ-(೧೩)ಮುಕ್ತಿಕ-(೧೪)ಭಿಕ್ಷುಕಾಃ || ೨ ||
(೧೫)ತುರೀಯಾತೀತಮ್ (೧೬)ಅಧ್ಯಾತ್ಮಂ (೧೭)ಶಾಟ್ಯಾಯನಿಸ್ತಥೈವ ಚ |
(೧೮)ಯಾಜ್ಞವಲ್ಕ್ಯಂ ಚ ವೇದಾನ್ತಾಃ - ತಥಾ ಚ -(೧೯) ಅದ್ವಯತಾರಕಮ್ || ೩ ||
ಮುಕ್ತಿಕೋಪನಿಷತ್-ಪ್ರೋಕ್ತಾ ಬ್ರಹ್ಮವಿದ್ಯಾಪ್ರದಾಯಕಾಃ |
ಏಕೋನವಿಂಶತೀತಿ ಪ್ರ|ಸಿದ್ಧಾ ವೈ ಶುಕ್ಲಯಾಜುಷಾಃ || ೪ ||
೩. ಕೃಷ್ಣಯಜುರ್ವೇದೀಯ— ೩೨
ತೈತ್ತಿರೀಯಂ ಸರ್ವಸಾರಂ ನಾರಾಯಣಂ ತಥೈವ ಚ |
ಕಠವಲ್ಲೀ ಚ ಕೈವಲ್ಯಂ ಬ್ರಹ್ಮ-ಗರ್ಭೌ ತಥಾ ಚ ವೈ || ೧ ||
ಶ್ವೇತಾಶ್ವತರಮ್ ಅಕ್ಷಿಶ್ಚ ಕಾಲಾಗ್ನಿರುದ್ರನಾಮಕಃ |
ಅಮೃತಬಿನ್ದುಃ - ಏಕಾಕ್ಷ |ರ-ಅಮೃತನಾದ ಏವ ಚ ||೨ ||
ಕ್ಷುರಿಕಂ ಧ್ಯಾನಬಿನ್ದುಶ್ಚ ಶುಕರಹಸ್ಯನಾಮಕಃ |
ತೇಜೋಬಿನ್ದುಃ - ಬ್ರಹ್ಮವಿದ್ಯಾ ಯೋಗತತ್ತ್ವ - ಅವಧೂತಕಃ || ೩ ||
ದಕ್ಷಿಣಾಮೂರ್ತಿ-ಪಂಚಬ್ರ | ಹ್ಮ-ಶಾರೀರಕನಾಮಕಾಃ |
ಸ್ಕನ್ದಂ ಯೋಗಶಿಖಾ ರುದ್ರ- | -ಹೃದಯಂ ಕಠರುದ್ರಕಃ || ೪ ||
ಯೋಗಕುಂಡಲಿನೀ ಚೈವ ಪ್ರಾಣಾಗ್ನಿಹೋತ್ರನಾಮಕಃ |
ಸರಸ್ವತೀರಹಸ್ಯಂ - ಚ ಕಲಿಸನ್ತಾರಣಂ ತಥಾ || ೫ ||
ವರಾಹೋಪನಿಷಚ್ಚೇತಿ ದ್ವಾತ್ರಿಂಶತ್ ಕೃಷ್ಣಯಾಜುಷಃ |
ಉಪನಿಷತ್ಸಮೂಹಸ್ತು ಮುಕ್ತಿಕೋಪನಿಷನ್ಮತಮ್ || ೬ ||
೪. ಸಾಮವೇದೀಯ— ೧೬
ಕೇನ -ಚ್ಛಾನ್ದೋಗ್ಯ-ಮೈತ್ರೇಯೀ-ಮೈತ್ರಾಯಣೀ-ಮಹತ್ ತಥಾ |
ಆರುಣಿಕಂ ಚ ಸಾವಿತ್ರೀ ಯೋಗಚೂಡಾಮಣಿಃ ತಥಾ || ೧ ||
ವಾಸುದೇವಂ ಚ ಸಂನ್ಯಾಸಂ ವಜ್ರಸೂಚಿಕಮೇವ ಚ |
ಅವ್ಯಕ್ತಂ ಕುಣ್ಡಿಕಂ ರುದ್ರಾ | ಕ್ಷಜಾಬಾಲಂ ತಥೈವ ಚ || ೨ ||
ಜಾಬಾಲದರ್ಶನಂ ಚೈವ ಜಾಬಾಲ್ಯುಪನಿಷತ್ ಚ ವೈ |
ಷೋಡಶೈತಾಸ್ತು ಸಾಮೋಪ | ನಿಷದೇತಿ ತು ಮುಕ್ತಿಕೇ || ೩ ||
೫. ಅಥರ್ವವೇದೀಯ— ೩೧
ಪ್ರಶ್ನ-ಅಥರ್ವಶಿರೋ -ಅಥರ್ವ -|- ಶಿಖಂ ಮಾಂಡೂಕ್ಯ-ಮುಂಡಕೌ |
ಬೃಹಜ್ಜಾಬಾಲ-ಜಾಬಾಲೌ(ಶರಭೌ) ನೃಸಿಂಹತಾಪಿನೀ ತಥಾ || ೧ ||
ಗೋಪಾಲತಾಪಿನೀ-ಕೃಷ್ಣೌ ಹಯಗ್ರೀವಂ ಚ ಗಾರುಡಮ್ |
ದತ್ತಾತ್ರೇಯಂ ಮಹಾವಾಕ್ಯಂ ಭಸ್ಮಜಾಬಾಲ-ಭಾವನೌ || ೨ ||
ನಾರದಂ ಸಪರಿವ್ರಾಜ- | -ಕಂ ಸೀತಾ-ರಾಮತಾಪಿನೀ |
ಪರಿವ್ರಾಜಕನಾಮಂ ತು ಪರಮಹಂಸಪೂರ್ವಕಮ್ || ೩ ||
ಮಹಾನಾರಾಯಣಂ ದೇವೀ ಸೂರ್ಯ-ಆತ್ಮಾ ಚ-ಅನ್ನಪೂರ್ಣಕೌ |
ರಾಮರಹಸ್ಯ-ಶಾಣ್ಡಿಲ್ಯೌ ತ್ರಿಪುರತಾಪಿನೀ ತಥಾ || ೪ ||
ಇತ್ಥಂ ಪಾಶುಪತಬ್ರಹ್ಮ ಪರಬ್ರಹ್ಮ ತು ಮುಕ್ತಿಕೇ |
ಗಣಪತ್ಯೇಕತ್ರಿಂಶಚ್ಚ-|-ಅಥರ್ವೋಪನಿಷದಾಂ ಗಣಃ || ೫ ||
(೨) ವೇದಭಾಗಾಧಾರಿತ—
ವೇದದ ಸಂಹಿತೆ / ಮಂತ್ರಭಾಗದಲ್ಲಿ ಬರುವವು ಸಂಹಿತೋಪನಿಷತ್ತುಗಳೆಂದೂ, ಬ್ರಾಹ್ಮಣಭಾಗದಲ್ಲಿರುವುವು ಬ್ರಾಹ್ಮಣೋಪನಿಷತ್ತುಗಳೆಂದೂ, ಆರಣ್ಯಕಭಾಗದಲ್ಲಿರುವವು ಆರಣ್ಯಕೋಪನಿಷತ್ತುಗಳೆಂದೂ ಉಪನಿಷತ್ತುಗಳನ್ನು ವರ್ಗೀಕರಿಸಬಹುದು. ಅದರಂತೆ—
೧. ಸಂಹಿತೋಪನಿಷತ್ತುಗಳು— ಈಶಾವಾಸ್ಯ
೨. ಬ್ರಾಹ್ಮಣೋಪನಿಷತ್ತುಗಳು— ಕೌಷೀತಕೀಬ್ರಾಹ್ಮಣ, ಮಂಡಲಬ್ರಾಹ್ಮಣ
೩. ಆರಣ್ಯಕೋಪನಿಷತ್ತುಗಳು— ಬೃಹದಾರಣ್ಯಕ, ತೈತ್ತಿರೀಯ, ಐತರೇಯ, ಛಾನ್ದೋಗ್ಯ
(೩) ವಿಷಯಾಧಾರಿತ / ತತ್ತ್ವಾಧಾರಿತ—
೧. ಸಂನ್ಯಾಸಪ್ರಧಾನ—
- ಆರುಣಿಕೋಪನಿಷತ್
- ಸಂನ್ಯಾಸೋಪನಿಷತ್
- ಕಠರುದ್ರೋಪನಿಷತ್
- ಕುಣ್ಡಿಕೋಪನಿಷತ್
- ಪರಮಹಂಸೋಪನಿಷತ್
- ಮೈತ್ರೇಯೋಪನಿಷತ್
- ಬ್ರಹ್ಮೋಪನಿಷತ್
- ಜಾಬಾಲೋಪನಿಷತ್
- ನಾರದಪರಿವ್ರಾಜಕೋಪನಿಷತ್
- ನಿರ್ವಾಣೋಪನಿಷತ್
- ಭಿಕ್ಷುಕೋಪನಿಷತ್
- ತುರೀಯಾತೀತೋಪನಿಷತ್
- ಪರಮಹಂಸ-ಪರಿವ್ರಾಜಕೋಪನಿಷತ್
- ಪರಬ್ರಹ್ಮೋಪನಿಷತ್
- ಅವಧೂತೋಪನಿಷತ್
- ಯಾಜ್ಞವಲ್ಕ್ಯೋಪನಿಷತ್
- ಶಾಟ್ಯಾಯನೀಯೋಪನಿಷತ್
೨. ಯೋಗವಿದ್ಯಾಪ್ರಧಾನ—
- ಅದ್ವಯತಾರಕೋಪನಿಷತ್
- ಅಮೃತನಾದೋಪನಿಷತ್
- ಕ್ಷುರಿಕೋಪನಿಷತ್
- ತೇಜೋಬಿನ್ದೂಪನಿಷತ್
- ತ್ರಿಶಿಖಿಬ್ರಹ್ಮೋಪನಿಷತ್
- ದರ್ಶನೋಪನಿಷತ್
- ಧ್ಯಾನಬಿನ್ದೂಪನಿಷತ್
- ನಾದಬಿನ್ದೂಪನಿಷತ್
- ಬ್ರಹ್ಮವಿದ್ಯೋಪನಿಷತ್
- ಮಣ್ಡಲಬ್ರಾಹ್ಮಣೋಪನಿಷತ್
- ಯೋಗಕುಣ್ಡಲ್ಯುಪನಿಷತ್
- ಯೋಗಚೂಡಾಮಣ್ಯುಪನಿಷತ್
- ಯೋಗತತ್ತ್ವೋಪನಿಷತ್
- ಯೋಗಶಿಖೋಪನಿಷತ್
- ವರಾಹೋಪನಿಷತ್
- ಶಾಣ್ಡಿಲ್ಯೋಪನಿಷತ್
- ಹಂಸೋಪನಿಷತ್
- ಅಮೃತಬಿನ್ದೂಪನಿಷತ್
- ಪಾಶುಪತಬ್ರಹ್ಮೋಪನಿಷತ್
- ಮಹಾವಾಕ್ಯೋಪನಿಷತ್
೩. ವೇದಾಂತವಿಜ್ಞಾನಪ್ರಧಾನ—
- ಅಕ್ಷ್ಯುಪನಿಷತ್
- ಅಧ್ಯಾತ್ಮೋಪನಿಷತ್
- ಅನ್ನಪೂರ್ಣೋಪನಿಷತ್;
- ಆತ್ಮ
- ಆತ್ಮಬೋಧ
- ಏಕಾಕ್ಷರ
- ಕೌಷೀತಕೀಬ್ರಾಹ್ಮಣ
- ಗರ್ಭ
- ನಿರಾಲಂಬ
- ಪೈಂಗಲ
- ಪ್ರಾಣಾಗ್ನಿಹೋತ್ರ
- ಮಾಂತ್ರಿಕ
- ಮಹತ್
- ಮುಕ್ತಿಕ
- ಮುದ್ಗಲ
- ಮೈತ್ರಾಯಣೀ
- ವಜ್ರಸೂಚಿಕಾ
- ಶಾರೀರಕ
- ಶುಕರಹಸ್ಯ
- ಸರ್ವಸಾರ
- ಸಾವಿತ್ರೀ
- ಸುಬಾಲ
- ಸೂರ್ಯ
- ಸ್ಕನ್ದ— ಉಪನಿಷತ್ತುಗಳು
೪. ವೈಷ್ಣವ—
- ಅವ್ಯಕ್ತ
- ಕಲಿಸಂತಾರಣ
- ಕೃಷ್ಣ
- ಗಾರುಡ
- ಗೋಪಾಲತಾಪಿನೀ
- ತಾರಸಾರ
- ಮಹಾನಾರಾಯಣ
- ದತ್ತಾತ್ರೇಯ
- ನಾರಾಯಣ
- ನೃಸಿಂಹತಾಪಿನೀ
- ರಾಮತಾಪಿನೀ
- ರಾಮರಹಸ್ಯ
- ವಾಸುದೇವ
- ಹಯಗ್ರೀವ
೫. ಶೈವ—
- ಅಕ್ಷಮಾಲಿಕಾ
- ಅಥರ್ವಶಿರ
- ಕಾಲಾಗ್ನಿರುದ್ರ
- ಅಥರ್ವಶಿಖಾ
- ಕೈವಲ್ಯ
- ಗಣಪತಿ
- ಜಾಬಾಲೀ
- ದಕ್ಷಿಣಾಮೂರ್ತಿ
- ಪಂಚಬ್ರಹ್ಮ
- ಬೃಹಜ್ಜಾಬಾಲ
- ಭಸ್ಮಜಾಬಾಲ
- ರುದ್ರಹೃದಯ
- ರುದ್ರಾಕ್ಷಜಾಬಾಲ
- ಶ್ವೇತಾಶ್ವತರ
೬. ಶಾಕ್ತ—
- ತ್ರಿಪುರ
- ತ್ರಿಪುರತಾಪಿನೀ
- ದೇವೀ
- ಬಹ್ವೃಚ
- ಭಾವನಾ
- ಸರಸ್ವತೀರಹಸ್ಯ
- ಸೀತಾ
- ಸೌಭಾಗ್ಯಲಕ್ಷ್ಮೀ
ಅವುಗಳಲ್ಲಿ ಕೆಲವಕ್ಕೆ ಆಚಾರ್ಯ ಶಂಕರರು ಅದ್ವೈತಪರ ಹಾಗೂ ಮಧ್ವರು ದ್ವೈತಪರ ಭಾಷ್ಯ ಬರೆದಿದ್ದಾರೆ. #ವಾರ್ತಿಕಕಾರರೆಂದೇ ಪ್ರಸಿದ್ಧರಾದ ಶಂಕರಶಿಷ್ಯರಾದ ಸುರೇಶ್ವಾಚಾರ್ಯರು ತಮ್ಮ ಗುರು ಶಂಕರಾಚಾರ್ಯರು ಬರೆದ ಕೆಲವಾರು ಉಪನಿಷದ್ಭಾಷ್ಯಗಳಿಗೆ ಬಹು ಸುಂದರವಾದ ವಾರ್ತಿಕಗಳನ್ನೂ ಬರೆದಿದ್ದಾರೆ. ಆದರೆ, ವಿಶಿಷ್ಟಾದ್ವೈತಿ ರಾಮಾನುಜಾಚಾರ್ಯರು ಗೀತೆ ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ರಚಿಸಿದ್ದು, ಉಪನಿಷತ್ತುಗಳಿಗೆ ಪ್ರತ್ಯೇಕವಾಗಿ ರಚಿಸದೇ, “ವೇದಾನ್ತಸಂಗ್ರಹಃ” , “ವೇದಾನ್ತಸಾರಃ” ಎಂಬಿತ್ಯಾದಿ ಗ್ರಂಥಗಳನ್ನು ರಚಿಸಿರುವರು. ಅಲ್ಲದೆ, ಉಪನಿಷದ್ ಬ್ರಹ್ಮ ಯೋಗಿನ್ ಎಂಬವರು ೧೦೮ ಉಪನಿಷತ್ತುಗಳಿಗೂ ಭಾಷ್ಯ ರಚಿಸಿದ್ದಾರೆ. ಪ್ರಸಿದ್ಧ ಚತುರ್ವೇದಭಾಷ್ಯಕಾರ ಮಹರ್ಷಿ ಸಾಯಣಮಾಧವರು ಕೆಲವಕ್ಕೆ (ವೇದದ ಸಂಹಿತೆ, ಬ್ರಾಹ್ಮಣ, ಆರಣ್ಯಕಗಳಲ್ಲಿ ಬರುವ ಈಶ ಮೊದಲಾದ ಸಂಹಿತೋಪನಿಷತ್ತುಗಳಿಗೆ, ಬ್ರಾಹ್ಮಣೋಪನಿಷತ್ತುಗಳಿಗೆ, ಬೃಹದಾರಣ್ಯಕವೇ ಮುಂತಾದ ಆರಣ್ಯಕೋಪನಿಷತ್ತುಗಳಿಗೆ) ಭಾಷ್ಯ ಬರೆದಿರುವರು. ಅಲ್ಲದೆ, ಇತ್ತೀಚೆಗಿನ ಹಲವಾರು ಜ್ಞಾನಿಗಳು ಉಪನಿಷತ್ತುಗಳ ಮೇಲೆ ತಮ್ಮ ತಮ್ಮ ವಿಚಾರಧಾರೆ, ವಿಮರ್ಶೆ, ಚಿಂತನೆ ಮುಂತಾದವುಗಳ ರೂಪದಲ್ಲಿ ಬೆಳಕು ಚೆಲ್ಲಿದ್ದಾರೆ. ಈ ಉಪನಿಷತ್ತುಗಳ ವಿವಿಧಭಾಷ್ಯ-ಚಿಂತನೆಗಳನ್ನು ಇತರ ವಿವಿಧಮೂಲಗಳ ಆಧಾರಗಳೊಂದಿಗೆ, ಸ್ವಚಿಂತನೆಯನ್ನೂ ಸೇರಿಸಿ ಒಂದೊಂದಾಗಿ ತುಲನಾತ್ಮಕವಾಗಿ ವಿಮರ್ಶಿಸೋಣ.
# ವಾರ್ತಿಕ ಎಂದರೆ ಯಾವುದೇ ಶಾಸ್ತ್ರದ ಭಾಷ್ಯಕ್ಕೆ ಬರೆದ ಪುನರ್ವಿವರಣೆ. ಇದರ ಲಕ್ಷಣ ಹೀಗಿದೆ—
“ಉಕ್ತಾನುಕ್ತದುರುಕ್ತಾರ್ಥ-ಚಿನ್ತಾ( /ವ್ಯಕ್ತ )-ಕಾರಿ ತು ವಾರ್ತಿಕಮ್ ||”
(ಹೇಮಚಂದ್ರ)
ಯಾವುದೇ ಸೂತ್ರಗ್ರಂಥ / ಶಾಸ್ತ್ರಗ್ರಂಥ / ಭಾಷ್ಯಗ್ರಂಥದಲ್ಲಿ ಹೇಳಿದ ಅಂಶಗಳ (ಉಕ್ತ), ಹೇಳದೆ ಉಳಿದ ಅಗತ್ಯ ಪೂರಕ ಅಂಶಗಳ (ಅನುಕ್ತ), ಹಾಗೂ ವಾಸ್ತವಕ್ಕೆ ವಿರುದ್ಧವಾಗಿ ಹೇಳಿದ ಅಂಶಗಳ (ದುರುಕ್ತ) ಅರ್ಥವನ್ನು ಅಭಿವ್ಯಕ್ತಿಸುವ / ಪ್ರದರ್ಶಿಸುವ / ಸ್ಪಷ್ಟಪಡಿಸುವ / ಆ ಬಗ್ಗೆ ವಿಮರ್ಶಿಸುವ ಕೃತಿಯೇ ವಾರ್ತಿಕ.
Comments
Post a Comment