ವೇದಸಾರ-ವರುಣಸ್ತೋತ್ರಮ್ ೫

(೨) ಋಗ್ವೇದಸಂಹಿತೋದ್ಧೃತಮ್


(ಋ.ಸಂ.೧.೧೫೧.೬— “ಆ ವಾಮೃತಾಯ ಕೇಶಿನೀರನೂಷತ ಮಿತ್ರ ಯತ್ರ ವರುಣ ಗಾತುಮರ್ಚಥಃ | ಅವ ತ್ಮನಾ ಸೃಜತಂ ಪಿನ್ವತಂ ಧಿಯೋ ಯುವಂ ವಿಪ್ರಸ್ಯ ಮನ್ಮನಾಮಿ ರಜ್ಯಥಃ ||” ಸಾಯಣಭಾಷ್ಯಮ್— ಹೇ ಮಿತ್ರಾವರುಣೌ! ಕೇಶಿನೀಃ ಕೇಶವತ್ಯಃ, ಅಗ್ನೇಃ ಜ್ವಾಲಾಃ, ವಾಂ ಯುವಾಮ್, ಋತಾಯ ಯಜ್ಞಾರ್ಥಮ್ ಆನೂಷತ | ಹವಿಃಸಮರ್ಪಣೇನ ಅಭಿಪೂಜಯಂತಿ ಇತಿ ಅರ್ಥಃ | ಕುತ್ರ ಇತಿ ತದ್ ಉಚ್ಯತೇ | ಹೇ ಮಿತ್ರ! ಹೇ ವರುಣ! ಯುವಾಮ್ ಉಭೌ ಯತ್ರ ಯಾಗೇ ಗಾತುಂ ಗಮನಂ ದೇವಯಜನದೇಶಂ ವಾ | ಗಾತುಃ ಇತಿ ಪೃಥಿವೀನಾಮ ಗಾತುಃ ಪೂಷ-ಇತಿ ಉಕ್ತತ್ವಾತ್ | ಅರ್ಚಥಃ ಪೂಜಯಥಃ | ಸ್ವೀಕುರುಥ ಇತಿ ಅರ್ಥಃ | ಆಗತ್ಯ ಚ ತ್ಮನಾ ಆತ್ಮನಾ ಏವ ಅವಸೃಜತಂ ವೃಷ್ಟಿಮ್ ಅವಾಙ್ಮುಖಂ ವಿಸೃಜತಮ್ | ತಥಾ ಕೃತ್ವಾ ಧಿಯಃ, ಅಸ್ಮದೀಯಾನಿ ಕರ್ಮಾಣಿ ಪಿನ್ವತಮ್ | ವರ್ಧಯತಮ್ ಇತಿ ಅರ್ಥಃ | ಏವಂ ಕೃತ್ವಾ ವಿಪ್ರಸ್ಯ ಮೇಧಾವಿನಃ ಯಜಮಾನಸ್ಯ ಮನ್ಮನಾಂ ಮನನವತೀನಾಂ ಸ್ತುತೀನಾಂ ಯುವಂ ಯುವಾಮ್ ಇರಜ್ಯಥಃ | ಈಶ್ವರೌ ಸ್ವಾಮಿನೌ ಭವಥಃ | ಇರಜ್ಯತಿಃ ಐಶ್ವರ್ಯಕರ್ಮಾ ಇರಜ್ಯತಿ ಪತ್ಯತ ಇತಿ ತನ್ನಾಮಸೂಕ್ತತ್ವಾತ್ || )

ಹೇ ಮಿತ್ರ ವರುಣಾऽऽನೂಷ|
ತ ಪೂಜಯಂತಿ ಕೇಶಿನೀಃ |
ಯಜ್ಞಾರ್ಥಂ ತು ಋತಾಯ-ಇತಿ |
ಜ್ವಾಲಾ ಅಗ್ನೇರ್ಯುವಾಮಥ || ೫೦ ||
ಹವಿಃಸಮರ್ಪಣೇನೇತಿ
ವಾಂ ಕೇಶವತ್ಯ ಇತ್ಯಪಿ || ೫೧ ||

ಹೇ ಮಿತ್ರನೆ! ಹೇ ವರುಣನೆ!! ಯಜ್ಞಾಗ್ನಿಯ ಜ್ವಾಲೆಯನ್ನೇ / ಕೆನ್ನಾಲಿಗೆಯನ್ನೇ ಕೇಶರಾಶಿಯಾಗುಳ್ಳ ಹೇ ಮಿತ್ರಾವರುಣರೆ !!! ನಿಮ್ಮನ್ನು ಋತ-ಸತ್ಯಸ್ವರೂಪಿಯಾದ ಯಜ್ಞಫಲದ ಸಾಕ್ಷಾತ್ಕಾರಕ್ಕಾಗಿ ಅನುದಿನವೂ ಹವಿಃಪ್ರದಾನದ ಮೂಲಕ ಭಕ್ತರು, ಋತ್ವಿಜರು ಪೂಜಿಸುತ್ತಾರೆ.

ಕುತ್ರೇತಿ ಚೇದ್-ಯತ್ರ ಗಾತುಂ
ಭೂಮಿರ್ಯೋಗ್ಯಾ ಕ್ರತೋರಿತಿ || ೫೨ ||

ಎಲ್ಲಿ ಹವಿಸ್ಸಮರ್ಪಣೆಯನ್ನು ಮಾಡುತ್ತಾರೆಂದರೆ, ಯಜ್ಞಯೋಗ್ಯವಾದ ಭೂಮಿಯು ಎಲ್ಲಿದೆಯೋ ಅಂಥಲ್ಲಿ ಯಜ್ಞಮುಖೇನ ಮಿತ್ರಾವರುಣರಿಗೆ ಹವಿಸ್ಸನ್ನು ಸಮರ್ಪಿಸಲಾಗುತ್ತದೆ.

ಯಥಾ-ಅರ್ಚಥಃ-ತಥೈವೇತಿ ಯುವಾಂ ಸ್ವೀಕುರುಥಃ ಪ್ರಭೂ || ೫೩ ||

ಹೇಗೆ ನಿಮ್ಮನ್ನು ಶ್ರದ್ಧಾಭಕ್ತಿಗಳಿಂದ ಭಕ್ತಜನರು ಅರ್ಚಿಸುವರೋ, ಅಂತೆಯೇ ಒಡೆಯರಾದ ನೀವು ಆ ಅರ್ಚನೆಯನ್ನೂ, ಹವಿಸ್ಸನ್ನೂ ಸ್ವೀಕರಿಸಿರಿ.

ಗಾತುರ್ನಾಮ ಮಹೀ ಚೈವ ಗಾತುಂ ಗಮನಮಿತ್ಯಪಿ |
ತಯೋರ್ಗಮನದೇಶೇ ವಾ ಯಾಗಭೂಮಾವಿತೀರಿತಃ || ೫೪ ||

“ಗಾತುಃ” ಎಂದರೆ ಮಹೀ / ಭೂಮಿ ಅಥವಾ ಗಮನ / ಹೋಗುವಿಕೆ ಎಂದರ್ಥ. ಆ ಮಿತ್ರ-ವರುಣರ ಸಂಚಾರವಿರುವ ಪ್ರದೇಶ ಅಥವಾ ಅವರಿಗೆ ಆಹುತಿಯನ್ನರ್ಪಿಸುವ ಯಾಗವು ನಡೆಯುವ ಭೂಭಾಗವೆಂದರ್ಥ.

ಅವ ತ್ಮನಾऽऽತ್ಮನಾऽऽಗತ್ಯ ಸೃಜತಂ ವೃಷ್ಟಿಮಿತ್ಯಪಿ |
ಅವಾಙ್ಮುಖಂ ಕೃಪಾವರ್ಷಂ ಯೂಯಂ ವಿಸೃಜತಂ ತಥಾ || ೫೫ ||

ಮಿತ್ರಾವರುಣರಾದ ನೀವೇ ಸ್ವತಃ ಆಗಮಿಸಿ ವೃಷ್ಟಿಯನ್ನು (ಮಳೆಯನ್ನು) ಸೃಜಿಸಿ / ಉಂಟುಮಾಡಿ ನಮ್ಮನ್ನು ರಕ್ಷಿಸಿ. ಹಾಗೆಯೇ, ಗಗನದಿಂದ ಅಧೋಮುಖವಾಗಿ ನಿಮ್ಮದಾದ ಕೃಪಾವರ್ಷಧಾರೆಯನ್ನು ಈ ಭೂಲೋಕದ ಜನರ ಮೇಲೆ ಸುರಿಸಿರಿ.

ಇತ್ಥಂ ಕರ್ಮಾಣಿ ಚಾಸ್ಮಾಕಂ ಪಿನ್ವತಂ ಧಿಯ ಇತ್ಯಪಿ |
ವರ್ಧಯತಂ ಮನೀಷಾಂ ಚ ಯುವಂ ಯುವಾಂ ತಥೈವ ಚ || ೫೬ ||

ಹೀಗೆ ನಮ್ಮ ಅರ್ಚನೆಯಿಂದ ಪ್ರಸನ್ನರಾಗಿ ನಮ್ಮ ಬುದ್ಧಿ-ಕರ್ಮಗಳನ್ನು ಶುದ್ಧಿಗೊಳಿಸಿ ಪ್ರವರ್ಧಿಸುವಂತೆ ನೀವೀರ್ವರು ಅನುಗ್ರಹಿಸಿ.

ವೇದಾಧ್ಯಯನಶೀಲಸ್ಯ ವಿಪ್ರಸ್ಯ ಜ್ಞಾನಿನಸ್ತಥಾ |
ಸ್ತುತೀನಾಂ ಮನನೈರ್ಯುಕ್ತಾ|ನಾಂ ಮನ್ಮನಾಂ-ಇರಜ್ಯಥಃ || ೫೭ ||

ವೇದಾಧ್ಯಯನಶೀಲನಾಗಿ ಹಾಗೂ ಜ್ಞಾನಿಯಾಗಿ ವಿಪ್ರನೆನಿಸಿದವನ ಮನನಪೂರ್ವಕವಾದ ಸ್ತುತಿಗಳ ಪ್ರತಿಪಾದ್ಯರಾದ,

ಈಶ್ವರೌ ಸ್ವಾಮಿನೌ ತಾಸಾಂ ಭವಥಃ ಪ್ರಾರ್ಥಯಾಮಹೇ |
ಇರಜ್ಯತಿಸ್ತು ಚೈಶ್ವರ್ಯ|ಕರ್ಮಾ ಚ ಪತ್ಯತೇ ತಥಾ || ೫೮ ||

ಒಡೆಯರೆನಿಸಿ, ಕೃಪೆಮಾಡಿ, ಪ್ರಸನ್ನರಾಗಿ ಎಂಬುದಾಗಿ ನಾವೆಲ್ಲರೂ ಒಕ್ಕೊರಳಿನಿಂದ / ಏಕಕಂಠದಿಂದ ಪ್ರಾರ್ಥಿಸುತ್ತಿರುವೆವು. “ಇರಜ್ಯತಿಃ” ಎಂದರೆ ರಾಜಕಾರ್ಯಕಾರಕನು, ಈಶ್ವರೀಯಕರ್ಮಿಯು, ಪರಮಾತ್ಮೀಯ ಕರ್ಮವನ್ನು ಆಚರಿಸಬಲ್ಲವರು. “ಪತ್ಯತೇ” ಎಂದರೆ ಪತಿಯಂತಹ / ಒಡೆಯನಂತಹ ಕರ್ಮವನ್ನು ಮಾಡುವವನು ಅರ್ಥಾತ್ ಸರ್ವಶಕ್ತನು.

Comments

Post a Comment

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪