ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೨

ದ್ವಿತೀಯೋऽನುವಾಕ:

ಯಜ್ಞಸ್ಯ ಘೋಷದಸಿ ಪ್ರತ್ಯುಷ್ಟಗ್ಂ ರಕ್ಷಃ ಪ್ರತ್ಯುಷ್ಟಾ ಅರಾತಯಃ ಪ್ರೇಯಮಗಾದ್ಧಿಷಣಾ ಬರ್ಹಿರಚ್ಛ ಮನುನಾ ಕೃತಾ ಸ್ವಧಯಾ ವಿತಷ್ಟಾ ತ ಆವಹನ್ತಿ ಕವಯಃ ಪುರಸ್ತಾದ್ದೇವೇಭ್ಯೋ ಜುಷ್ಟಮಿಹ ಬರ್ಹಿರಾಸದೇ ದೇವಾನಾಂ ಪರಿಷೂತಮಸಿ ವರ್ಷವೃದ್ಧಮಸಿ ದೇವಬರ್ಹಿರ್ಮಾ ತ್ವಾऽನ್ವಙ್ಮಾ ತಿರ್ಯಕ್ ಪರ್ವ ತೇ ರಾಧ್ಯಾಸಮಾಚ್ಛೇತ್ತಾ ತೇ ಮಾ ರಿಷಂ ದೇವಬರ್ಹಿಃ ಶತವಲ್ಶಂ ವಿರೋಹ ಸಹಸ್ರವಲ್ಶಾ ವಿ ವಯಗ್ಂ ರುಹೇಮ ಪೃಥಿವ್ಯಾಃ ಸಂಪೃಚಃ ಪಾಹಿ ಸುಸಂಭೃತಾ ತ್ವಾ ಸಂ ಭರಾಮ್ಯದಿತ್ಯೈ ರಾಸ್ನಾऽಸೀಂದ್ರಾಣ್ಯೈ ಸಂನಹನಂ ಪೂಷಾ ತೇ ಗ್ರನ್ಥಿಂ ಗ್ರಥ್ನಾತು ಸ ತೇ ಮಾऽऽಸ್ಥಾದಿಂದ್ರಸ್ಯ ತ್ವಾ ಬಾಹುಭ್ಯಾಮುದ್ಯಚ್ಛೇ ಬೃಹಸ್ಪತೇರ್ಮೂರ್ಧ್ನಾ ಹರಾಮ್ಯುರ್ವನ್ತರಿಕ್ಷಮನ್ವಿಹಿ ದೇವಂಗಮಮಸಿ || ೨ ||
ಪದಚ್ಛೇದಃ— ಯಜ್ಞಸ್ಯ ಘೋಷತ್ ಅಸಿ ಪ್ರತಿ-ಉಷ್ಟಂ ರಕ್ಷಃ ಪ್ರತಿ-ಉಷ್ಟಾಃ ಅರಾತಯಃ ಪ್ರ ಇಯಮ್ ಅಗಾತ್ ಧಿಷಣಾ ಬರ್ಹಿಃ ಅಚ್ಛ ಮನುನಾ ಕೃತಾ ಸ್ವಧಯಾ ವಿ-ತಷ್ಟಾ ತೇ ಆ ವಹನ್ತಿ ಕವಯಃ ಪುರಸ್ತಾತ್ ದೇವೇಭ್ಯಃ ಜುಷ್ಟಮ್ ಇಹ ಬರ್ಹಿಃ ಆ-ಸದೇ ದೇವಾನಾಂ ಪರಿ-ಸೂತಮ್ ಅಸಿ ವರ್ಷ-ವೃದ್ಧಮ್ ಅಸಿ ದೇವ-ಬರ್ಹಿಃ ಮಾ ತ್ವಾ ಅನ್ವಕ್ ಮಾ ತಿರ್ಯಕ್ ಪರ್ವ ತೇ ರಾಧ್ಯಾಸಮ್ ಆ-ಛೇತ್ತಾ ತೇ ಮಾ ರಿಷಂ ದೇವ-ಬರ್ಹಿಃ ಶತ-ವಲ್ಶಂ ವಿ-ರೋಹ ಸಹಸ್ರ-ವಲ್ಶಾಃ ವಿ ವಯಂ ರುಹೇಮ ಪೃಥಿವ್ಯಾಃ ಸಂ-ಪೃಚಃ ಪಾಹಿ ಸು-ಸಂಭೃತಾ ತ್ವಾ ಸಂ ಭರಾಮಿ ಅದಿತ್ಯೈ ರಾಸ್ನಾ ಅಸಿ ಇನ್ದ್ರಾಣ್ಯೈ ಸಂ-ನಹನಂ ಪೂಷಾ ತೇ ಗ್ರನ್ಥಿಂ ಗ್ರಥ್ನಾತು ಸಃ ತೇ ಮಾ ಆ-ಸ್ಥಾತ್ ಇನ್ದ್ರಸ್ಯ ತ್ವಾ ಬಾಹುಭ್ಯಾಮ್ ಉತ್-ಯಚ್ಛೇ ಬೃಹಸ್ಪತೇಃ ಮೂರ್ಧ್ನಾ ಹರಾಮಿ ಉರು-ಅನ್ತರಿಕ್ಷಮ್ ಅನು-ಇಹಿ ದೇವಂ-ಗಮಮ್ ಅಸಿ ||
ಅನ್ವಯಾರ್ಥಃ— ಎಲೈ, ದರ್ಭೆಕೊಯ್ಯುವ ಆಯುಧವೆ! / ಗೃಹಪತಿಯ ಗೃಹದಲ್ಲಿರುವ ಗಾರ್ಹಪತ್ಯಾಗ್ನಿಯೆ! / ದೇವತೆಗಳಿಗಾಗಿರುವ ಮಂತ್ರರೂಪೀ ಆಸನವೇ!  ನೀನು (ಯಜ್ಞಸ್ಯ ಘೋಷತ್ ಅಸಿ) (ಯಜ್ಞಸ್ಯ=) ಯಜ್ಞಕ್ಕೆ ಬೇಕಾದ ದರ್ಭೆ ಮುಂತಾದ ಹವಿರ್ದ್ರವ್ಯ ಸಂಪಾದನೆಗೆ (ಘೋಷತ್ ಅಸಿ=) ಮೂಲ ಸಾಧನಸಂಪತ್ತು-ಸಲಕರಣೆಯಾಗಿರುವಿ. / ಯಜ್ಞದ ಆಹವನೀಯಾಗ್ನಿಗೆ ಮೂಲವಾಗಿರುವಿ. / ದೇವಯಜ್ಞಕ್ಕೆ ಆಹ್ವಾನಿತರಾದ ದೇವತೆಗಳಿಗೆ ಕುಳಿತುಕೊಳ್ಳಲು ಆಧಾರವಾಗಿರುವಿ. / ಯಜ್ಞಾರಂಭವನ್ನು ಘೋಷಿಸುತ್ತಾ ಅಥವಾ ಸಾರುತ್ತಾ ದೇವತೆಗಳಿಗೆ ವಿಶ್ರಮಿಸಲು ಮಂತ್ರರೂಪೀ ಆಸನವಾಗಿರುವೆ.
(ಪ್ರತ್ಯುಷ್ಟಂ ರಕ್ಷಃ ಪ್ರತ್ಯುಷ್ಟಾಃ ಅರಾತಯಃ) ದೇವಯಜ್ಞವಿರೋಧಿ ಶಕ್ತಿಗಳಾದ (ರಕ್ಷಃ=) ರಾಕ್ಷಸರು (ಪ್ರತ್ಯುಷ್ಟಮ್=) ದಹಿಸಿ ಹೋಗಲಿ. (ಅರಾತಯಃ=) ದೇವಶತ್ರುಗಳು ನಾಶವಾಗಲಿ. / ದುಷ್ಟಶಕ್ತಿಗಳು ನಾಶವಾಗಿವೆ, ಯಜ್ಞಾಗ್ನಿಯಲ್ಲಿ (ಪ್ರತ್ಯುಷ್ಟಾಃ=) ದಹಿಸಿ ಹೋಗಿವೆ.
(ಪ್ರೇಯಮ್ ಅಗಾತ್ ಧಿಷಣಾ ಬರ್ಹಿಃ ಅಚ್ಛ) (ಧಿಷಣಾ=)ನಮ್ಮ ಧೀಶಕ್ತಿ ಅಥವಾ ಪ್ರಜ್ಞಾಶಕ್ತಿಯಿಂದ ಸೂಕ್ತ ದಿಕ್ಕಿನ, ಪ್ರಶಸ್ತ ಸ್ಥಳದ, ಸೂಕ್ತ ರೀತಿಯ (ಅಚ್ಛ ಬರ್ಹಿಃ=) ಸ್ವಚ್ಛವಾದ ಬರ್ಹಿ ಅಥವಾ ದರ್ಭೆಯನ್ನು ಸೂಕ್ತ ಕಾಲದಲ್ಲಿ ಸಂಗ್ರಹಿಸಿ ಅದರಿಂದ ಮಾಡಿದ ಯಜ್ಞದಿಂದ ದೇವತೆಗಳು (ಪ್ರೇಯಮ್=) ತಮಗಿಷ್ಟವಾದ ಅಥವಾ ಪ್ರಿಯವಾದ ಹವಿಸ್ಸನ್ನು (ಅಗಾತ್=) ಹೊಂದಲಿ. ಅಥವಾ ನಮ್ಮ ಬುದ್ಧಿಯು ಕಳಂಕರಹಿತವಾದ, ಧರ್ಮಯುಕ್ತವಾದ ಮಾರ್ಗದಲ್ಲಿ ಸಂಪಾದಿಸಿದ ಲೌಕಿಕ ಭೋಗ / ಪ್ರೇಯಸ್ಸನ್ನು ಪಡೆಯಲಿ.
(ಮನುನಾ ಕೃತಾ ಸ್ವಧಯಾ ವಿತಷ್ಟಾ) ಪ್ರಜಾಪತಿಯಾದ ಮನುವಿನಿಂದ, ದರ್ಭಾಹರಣದ ಆಯುಧವು / ಕುದುರೆ ಬೆನ್ನ ಪಕ್ಕೆಲುಬಿನಿಂದ ಮಾಡಿದ ಅಶ್ವಪರಶು / ಅಶ್ವಪರ್ಶುವು ರಚನೆಯಾಗಿದೆ. ಯಾಕೆಂದರೆ ಸಕಲರನ್ನು ಅವನೇ ಸೃಷ್ಟಿಸುವುದರಿಂದ, ಕುದುರೆಯ ಪಕ್ಕೆಲುಬಿನ ವಿನ್ಯಾಸಕಾರನೂ ಅವನೇ. ಕುದುರೆಯು ತಿಂದ ಆಹಾರದಿಂದ ಬೆಳವಣಿಗೆಯಾದ ಪಕ್ಕೆಲುಬು, ಆ ಅನ್ನದಲ್ಲಿನ ಸ್ವಧಾಶಕ್ತಿಯಿಂದ ಚೆನ್ನಾಗಿ ಹರಿತವಾಗಿ ಬೆಳೆದಿದೆ / ಹರಿತಗೊಳಿಸಲ್ಪಟ್ಟಿದೆ. ಅಥವಾ— ಮಂತ್ರಪೂರ್ವಕವಾಗಿ ರಚಿತವಾದ ಈ ಮಂತ್ರಾಸನವನ್ನು ಪಾಠಕನು ತನ್ನ / ಸ್ವ-ಧಾರಣಾಶಕ್ತಿಯ ಬಲದ ಮಟ್ಟದ ಆಧಾರದಲ್ಲಿ ಸುಂದರಗೊಳಿಸಿರುವನು.
(ತೇ ಆವಹನ್ತಿ ಕವಯಃ ಪುರಸ್ತಾತ್ ದೇವೇಭ್ಯಃ ಜುಷ್ಟಮ್ ಇಹ ಬರ್ಹಿಃ ಆಸದೇ) ತೇ(ಆ), ಕವಯಃ (ವೇದವಿದರು), ಪುರಸ್ತಾತ್(ಯಜ್ಞದ ಆರಂಭದಲ್ಲಿ ಸ್ವಾಗತರೂಪವಾಗಿ ಪೂರ್ವದಿಕ್ಕಿನಲ್ಲಿ), ದೇವೇಭ್ಯಃ (ದೇವತೆಗಳಿಗೆ), ಜುಷ್ಟಮ್(ಪ್ರಿಯವಾದ), ಬರ್ಹಿಃ(ಅಗ್ನಿಯಷ್ಟು ಪವಿತ್ರವಾದ, ಸುಗಂಧಯುಕ್ತವಾದ, ದರ್ಭಾಸನ/ಮಂತ್ರಾಸನವನ್ನು),  ಇಹ (ಇಲ್ಲಿ/ಯಜ್ಞವೇದಿಯ ಬಳಿ), ಆಸದೇ(ಹಾಸುತ್ತಾರೆ.) |
(ದೇವಾನಾಂ ಪರಿ-ಸೂತಮ್ ಅಸಿ ವರ್ಷ-ವೃದ್ಧಮ್ ಅಸಿ) ಹೇ ದರ್ಭೆಯೆ! ನೀನು ದೇವತೆಗಳಿಗಾಗಿ ಪರಿಗ್ರಹಿಸಲ್ಪಟ್ಟಿರುವಿ / ಸಂಗ್ರಹಿಸಲ್ಪಟ್ಟಿರುವಿ / ಹುಟ್ಟಿರುವಿ. ಕಡಿದರೂ ೧ ವರ್ಷಕಾಲದಲ್ಲಿ ಪುನಃ ಹಿಂದಿನಂತೆ ವೃದ್ಧಿಹೊಂದುವಿ / ಮಳೆಯಿಂದ ವರ್ಧಿಸುವಿ, ಬೆಳೆಯುವಿ.  ಅಥವಾ— ಎಲೈ ದರ್ಭಾಸನ / ಮಂತ್ರಾಸನವೆ! ನೀನು ಅಪೌರುಷೇಯವೂ, ದೈವಿಕವೂ ಆಗಿದ್ದು ದೇವತೆಗಳಿಂದಾಗಿ ನಿರ್ಮಿಸಲ್ಪಟ್ಟಿರುವಿ / ಪ್ರೇರಿಸಲ್ಪಟ್ಟಿರುವಿ. ದೈವೀಕೃಪಾವರ್ಷದಿಂದ ಋಷಿಗಳಿಗೆ ಹೆಚ್ಚು ಹೆಚ್ಚು ಮಂತ್ರಗಳು ಗೋಚರಿಸಿ ವೃದ್ಧಿಹೊಂದುವಿ.
(ದೇವ-ಬರ್ಹಿಃ ಮಾ ತ್ವಾ ಅನ್ವಕ್ ಮಾ ತಿರ್ಯಕ್ ಪರ್ವ ತೇ ರಾಧ್ಯಾಸಮ್) (ಹೇ ದೇವಬರ್ಹಿಃ!) ಎಲೈ ದೇವತಾಕಾರ್ಯಾರ್ಥವಾದ ದರ್ಭೆಯೇ!, (ತ್ವಾ / ತ್ವಾಮ್) ನಿನ್ನನ್ನು, (ಅನ್ವಕ್ ಮಾ ತೇ ಪರ್ವ) ಉದ್ದುದ್ದವಾಗಿಯಾಗಲೀ, ನಿನ್ನ ಬೆಳವಣಿಗೆಗೆ ಪೂರಕವಾದ ಗಂಟು/ಬೇರು/ಗಡ್ಡೆಗೆ ಗಾಯವಾಗುವಂತೆ, (ತಿರ್ಯಕ್) ಅಡ್ಡಡ್ಡವಾಗಿಯಾಗಲೀ ಕೊಯ್ದು ಹಿಂಸಿಸಿ, (ಮಾ ರಾಧ್ಯಾಸಮ್) ಸಂಗ್ರಹಣೆ ಮಾಡದಿರಲಿ. (ರಾಧ - ಸಿದ್ಧೌ, ರಾಧನಂ - ಪ್ರಾಪ್ತಿ:) ಅಥವಾ—
ಹೇ ದೈವೀ ಆಸನರೂಪೀ ಮಂತ್ರಸಮೂಹವೆ! ನಿನ್ನನ್ನು ಉದ್ದುದ್ದವಾಗಿ ತುಂಡರಿಸದಿರಲಿ / ನಿನ್ನ ಉಚ್ಚಾರವು ಇಡಿಯಾಗಿರಲಿ. ವಾಕ್ಯ / ಮಂತ್ರಗಳು ಬಿಟ್ಟುಹೋಗದಿರಲಿ. ನಿನ್ನನ್ನು ಅಡ್ಡಡ್ಡವಾಗಿ ತುಂಡರಿಸದಿರಲಿ / ಮಂತ್ರೋಚ್ಚಾರವು, ಒಂದೇರೀತಿಯ ಪದಗಳು ಮರುಕಳಿಸುವಂಥ ಕವಲುಗಳಲ್ಲಿ ತಪ್ಪಿಹೋಗಿ ಅಡ್ಡದಾರಿ ಹಿಡಿಯದಿರಲಿ. ನಿನ್ನ ಗಂಟುಗಳನ್ನು ಮಾತ್ರ ಬೇರ್ಪಡಿಸಿ ಆರಾಧನೆಗೆ ಬಳಸುತ್ತೇವೆ / ವಿವಿಧ ಮಂತ್ರಗಳ ಸೂಕ್ತ ಜೋಡಣೆಗಳೇ ಗಂಟುಗಳು. ಇಂಥ ಜೋಡಣೆಗಳಲ್ಲಿ ಮಾತ್ರ ಪ್ರತ್ಯೇಕಿಸಿ ಪೂಜಾ-ಯಜ್ಞಾದಿ ಉಪಾಸನೆಗಳಿಗೆ ಬಳಸಬೇಕೇ ಹೊರತು ಮಂತ್ರಗಳನ್ನು ಅರ್ಧದಿಂದ ತುಂಡರಿಸಿ ಅನರ್ಥಕ್ಕೆಡೆಮಾಡಿಕೊಡಬಾರದು.
(ತೇ / ತವ ಆಚ್ಛೇತ್ತಾ ಮಾ ರಿಷಮ್) ನಿನ್ನನ್ನು ಛೇದನ ಮಾಡುವವನಾದರೂ / ಕತ್ತರಿಸುವವನಾದರೂ ನಾನು ಬೇಕಾಬಿಟ್ಟಿ ಕೊಚ್ಚಿ ಕೊಚ್ಚಿ ಹಾಕಿ ನಿನಗೆ ಚಿತ್ರಹಿಂಸೆ ಕೊಡುವುದಿಲ್ಲ. / ನಿನ್ನನ್ನು ಬೇರ್ಪಡಿಸುವವನು ಅನರ್ಥಕರವಾಗಿ ವಿಂಗಡಿಸಿ, ಮೂಲ ಆಶಯಕ್ಕೆ ವಿರೋಧವಾಗದಿರಲಿ.
(ದೇವ-ಬರ್ಹಿಃ ಶತವಲ್ಶಂ ವಿ-ರೋಹ) ಹೇ ದೇವಕಾರ್ಯಾರ್ಥವಾದ ದರ್ಭೆಯೆ! ನೀನು ನೂರಾರು ಶಾಖೆಗಳಾಗಿ / ಸಂತತಿಗಳಾಗಿ ವಿ-ಸ್ತಾರವಾಗಿ ಮೇಲಕ್ಕೆ ಆರೋಹಿಸಿ / ಏರಿ ಬೆಳೆ.
ಹೇ ದೈವೀ ಮಂತ್ರರೂಪೀ ದರ್ಭಾಸನವೆ! ನೀನು / ವೇದವು ಅನಂತಶಾಖೆಗಳಾಗಿ ವರ್ಧಿಸು / ಹಬ್ಬಲಿ.
(ಸಹಸ್ರವಲ್ಶಾಃ ವಯಂ ವಿ-ರುಹೇಮ) ಸಾವಿರಶಾಖೆಗಳಾಗಿ ನಾವು ಉನ್ನತೋನ್ನತವಾಗಿ / ಮೇಲುಮೇಲಕ್ಕೆ ವರ್ಧಿಸೋಣ. / ನಾವು ವೇದವನ್ನು ಸಾವಿರಾರು ಶಾಖೆಗಳಾಗಿ ವಿಶೇಷಪ್ರಯತ್ನದಿಂದ ಬೆಳೆಸೋಣ.
(ಪೃಥಿವ್ಯಾಃ ಸಂಪೃಚಃ ಪಾಹಿ) ಭೂಮಿಯ ಸಂಪರ್ಕಹೊಂದಿ ದರ್ಭೆಯು ಹಾಳಾಗದಂತೆ ರಕ್ಷಿಸು. / ಭೂಮಿಯೊಡನಿರುವ ನಮ್ಮ ಸಂಪರ್ಕವನ್ನು (ನಮ್ಮ ಭೌತಿಕಶರೀರವನ್ನು) ಸಂರಕ್ಷಿಸು.
(ಸು-ಸಂಭೃತಾ ತ್ವಾ / ತ್ವಾಂ ಸಂಭರಾಮಿ, ಅದಿತ್ಯೈ ರಾಸ್ನಾ ಅಸಿ) ಉತ್ತಮವಾದ ಹಗ್ಗದಿಂದ ನಿನ್ನನ್ನು ಕಟ್ಟಿ ಜಾಗ್ರತೆಯಿಂದ ತುಂಬಿಡುವೆನು. ನೀನು / ದರ್ಭೆಯು ಅದಿತೀದೇವಿಗೆ / ಅಖಂಡಭೂಮಿಗೆ / ಜಗತ್ತಿಗೆ ಸೊಂಟಪಟ್ಟಿಯಂತೆ ಆಧಾರಭೂತವಾಗಿರುವಿ. (ಅ-ದಿತಿ— ದಿತಿ ಅಂದರೆ ಛೇದಿಸಲ್ಪಟ್ಟ. ಅದಿತಿ— ಛೇದಿಸದ ಅ-ಖಂಡ, ಸಮಗ್ರ) ಅಥವಾ—
ಮಂತ್ರಸಮೂಹವನ್ನು ಸಂಭ್ರಮಾದರಗಳಿಂದ ಸಂಗ್ರಹಿಸುತ್ತೇನೆ. ನೀನು ಅನಂತಪರಬ್ರಹ್ಮದ ಶಕ್ತಿಸ್ವರೂಪೆಯಾದ ಅದಿತಿಯ ನಡುಪಟ್ಟಿಯಾಗಿರುವೆ.
(ಇನ್ದ್ರಾಣ್ಯೈ ಸಂನಹನಮ್) ಹಿಂದೆ ಇಂದ್ರಪತ್ನಿಗೆ ಇಂದ್ರನೊಂದಿಗೆ ಯಾಗದೀಕ್ಷಿತೆಯಾಗಿದ್ದಾಗ ಸೊಂಟಪಟ್ಟಿಯಾಗಿದ್ದಿ ನೀನು / ದರ್ಭೆಯ ಹಗ್ಗವು. / ಗಂಟುಹಾಕುವುದಕ್ಕಾಗಿ ದರ್ಭೆಗಳ ತುದಿಗಳನ್ನು ಸರಿಪಡಿಸಲಾಗುತ್ತದೆ. ಚೆನ್ನಾಗಿ ದರ್ಭೆಯನ್ನು ಕಟ್ಟಿ ಜೋಪಾನ ಮಾಡಿದರೆ, ಆ ಮನೆಯ ತಾಯಂದಿರ ಗರ್ಭವೂ  ಸಾಂಗೋಪಾಂಗ ಪರಿಪೂರ್ಣತೆಯುಳ್ಳದ್ದಾಗಿಯೂ, ಗರ್ಭಪತನವಾಗದೆ ಸ್ಥಿರವಾಗಿಯೂ ಇರುವುದೆಂಬುದಕ್ಕೆ ಸಂಕೇತವೂ ಹೌದು. ಅಥವಾ—
ನೀನು ಪ್ರತಿಯೊಬ್ಬರನ್ನೂ ಸ್ವ-ನಿಯಂತ್ರಿತಗೊಳಿಸುವ ಇಂದ್ರಾಣಿಯ ಶಕ್ತಿ / ಇಂದ್ರಿಯನಿಗ್ರಾಹಕ ಮನಃಶಕ್ತಿ.
(ಪೂಷಾ ತೇ / ತವ ಗ್ರನ್ಥಿಂ ಗ್ರಥ್ನಾತು) ಯಜ್ಞಕರ್ತೃವಿಗೆ ಪುಷ್ಟಿಯನ್ನುಂಟುಮಾಡುವ ಪೂಷನ್ / ಆದಿತ್ಯ ದೇವನು ದರ್ಭೆಯ ಹಗ್ಗದ ಗಂಟನ್ನು ಕಟ್ಟಲಿ. ಪೂಷನ್ನ / ಸವಿತೃವು ನಿನ್ನನ್ನು / ಇಂದ್ರಿಯಸಮೂಹವನ್ನು ನಿಯಂತ್ರಿಸುವಂತೆ ಗಂಟುಹಾಕಿ ಬಂಧಿಸಲಿ / ಈ ಮಂತ್ರಸಮೂಹವನ್ನು ದೇವತೆಗಳ ಆಸನರೂಪದಲ್ಲಿ ಬಂಧಿಸಲಿ.
(ಸಃ ತೇ ಮಾ ಆ-ಸ್ಥಾತ್) ನಿನ್ನ ದರ್ಭರಜ್ಜುವಿನ ಗಂಟು ಜಾರಿ ಬೇರೆಡೆಗೆ ಹೋಗದಿರಲಿ / ಬಿಚ್ಚದಿರಲಿ. / ಪೂಷನ್ನನು ನನ್ನ ಇಂದ್ರಿಯಗಳನ್ನು ನಿಯಂತ್ರಿಸಿ ನಿನಗೆ / ಪರಮಾತ್ಮನೊಂದಿಗೆ ನನ್ನನ್ನು / ನನ್ನ ಚಿತ್ತವನ್ನು ತಪೋ-ಧ್ಯಾನ-ಮಂತ್ರ-ಸ್ಮರಣಾದಿಗಳ ಮೂಲಕ ವಿಚಲಿತವಾಗದಂತೆ ಸದಾ ಬಂಧಿಸಿ ನಿಲ್ಲಿಸಲಿ. / ಮಂತ್ರಾಸನದ ಗಂಟುಗಳು / ಮಂತ್ರಾನುಕ್ರಮ ಸಂಯೋಜನೆಯು ಪಠಣದ ವೇಳೆ ಶಿಥಿಲವಾಗದಂತೆ ಬಿಗಿಹಿಡಿಯಲಿ.
(ಇನ್ದ್ರಸ್ಯ ತ್ವಾ ಬಾಹುಭ್ಯಾಮ್ ಉದ್-ಯಚ್ಛೇ) ನನಗಾಗಿ ಅಲ್ಲ. ಇಂದ್ರನಿಗಾಗಿ, ಇಂದ್ರನ ಕೈಗಳಿಗೆ ನಿನ್ನನ್ನು ಸಮರ್ಪಿಸುತ್ತೇನೆ. / ಮಂತ್ರಾಸನವಾದ ನಿನ್ನನ್ನು ಇಂದ್ರನ ಬಾಹುಗಳಿಗೆ ದೇವತೆಗಳಿಗೆ ಕುಳಿತುಕೊಳ್ಳಲು ಸಮರ್ಪಿಸುವೆ.
(ಬೃಹಸ್ಪತೇಃ ಮೂರ್ಧ್ನಾ ಹರಾಮಿ) ದೇವಗುರು ಬೃಹಸ್ಪತಿಯ / ಪರಬ್ರಹ್ಮಾತ್ಮಕ ಜಗತ್ತಿನ ಪ್ರಧಾನಭಾಗವಾದ ಶಿರದಂತಿರುವ ಪೂರ್ವೋತ್ತರ ದಿಕ್ಕಿನ ಪವಿತ್ರಭಾಗದಿಂದ ದರ್ಭೆಯನ್ನು ಸಂಗ್ರಹಿಸುತ್ತೇನೆ. / ದೇವಗುರು ಬೃಹಸ್ಪತಿಯ ಮಸ್ತಕದ ಮಾಧ್ಯಮದಿಂದ ಮಂತ್ರಾಸನವನ್ನು ಸಂಗ್ರಹಿಸುವೆ.
(ಉರು-ಅನ್ತರಿಕ್ಷಮ್ ಅನು-ಇಹಿ) ಹೇ ದರ್ಭೆಯೆ! ನೀನು ಜಗದ ಉದ್ದಗಲಗಳಲ್ಲಿ ವಿಸ್ತಾರವಾಗಿಯೂ, ಅಂತರಿಕ್ಷದೆಡೆಗೆ ಮೇಲಕ್ಕೂ ಸುಗಮವಾಗಿ ಬೆಳೆದು ಬಾ. / ಅಂತರಿಕ್ಷದೆಲ್ಲೆಡೆ ಮಂತ್ರಾಸನವನ್ನು ಹೊತ್ತು ಮೆರೆಸುವೆ.
(ದೇವಂ-ಗಮಮ್ ಅಸಿ) ನೀನು ಯಜ್ಞದಲ್ಲಿ ಹವಿಸ್ಸಿನೊಂದಿಗೆ ದೇವನೆಡೆಗೆ ಹೋಗುವವನಾಗಿದ್ದಿ. ಸಂಗ್ರಹಿಸಿಡುವಾಗ ನೆಲಕ್ಕೆ ತಾಗದಂತೆ ಮೇಲಿಡಬೇಕು ದರ್ಭೆಯನ್ನು, ಎಂಬುದರ ಸೂಚಕ. / ನೀನು (ಮಂತ್ರಾಸನವು) ದೇವತೆಗಳೆಡೆಗೆ ಗಮಿಸುವವನಾಗಿರುವೆ.

ಸಾಯಣಭಾಷ್ಯ
(ಬರ್ಹಿರಾಹರಣಮ್/ದರ್ಭೆ ಸಂಗ್ರಹ)
೧) ಯಜ್ಞಸ್ಯ ಘೋಷದಸಿ -
      ಅಶ್ವಪರ್ಶು-ಅಭಿಮಂತ್ರಣೇ ಪ್ರಥಮಮಂತ್ರಂ ವಿನಿಯುಂಕ್ತೇ ಬೌಧಾಯನ: - ‘ಆದಾಯ ಅಭಿಮಂತ್ರಯತೇ ಯಜ್ಞಸ್ಯ ಘೋಷದಸಿ ಇತಿ’ ಇತಿ |
(ಅಮಾವಾಸ್ಯೆಯಂದು ಯಜ್ಞಕರ್ಮಕ್ಕಾಗಿ ದರ್ಭೆ ಕೊಯ್ಯಲು) ಕುದುರೆಯ ಪಕ್ಕೆಲುಬಿನಿಂದ ಮಾಡಿದ ಕೊಡಲಿಯನ್ನು ಮಂತ್ರಿಸಲು ಪ್ರಥಮ ಮಂತ್ರವನ್ನು ಬೌಧಾಯನನು ವಿನಿಯೋಗಿಸುತ್ತಾನೆ -
    ‘ಕೊಡಲಿಯನ್ನು/ಪರಶುವನ್ನು ತಂದು ಯಜ್ಞಸ್ಯ ಘೋಷದಸಿ ಎಂದು ಅದರ ಎದುರು ಮಂತ್ರೋಚ್ಚಾರ ಮಾಡುತ್ತಾನೆ’ ಎಂಬುದಾಗಿ.
     ಆಪಸ್ತಂಬಸ್ತು ಬ್ರೂತೇ - ‘ಯಜ್ಞಸ್ಯ ಘೋಷದಸಿ ಇತಿ ಗಾರ್ಹಪತ್ಯಮ್ ಅಭಿಮಂತ್ರ್ಯ’ ಇತಿ |
    ಆಪಸ್ತಂಬರು ಹೇಳುತ್ತಾರೆ - ‘ಯಜ್ಞಸ್ಯ ಘೋಷದಸಿ ಎಂದು ಗಾರ್ಹಪತ್ಯಾಗ್ನಿಯನ್ನು ಅಭಿಮಂತ್ರಿಸಿ’ ಎಂದು.
   ಘೋಷತ್ ಎಂದರೆ ಧನದ ಹೆಸರು. ‘ಎಲೈ ಅಶ್ವಪರಶುವೇ! ಎಲೈ ಗಾರ್ಹಪತ್ಯಾಗ್ನಿಯೇ! ನೀನು ಯಜ್ಞದ ಸಾಧನದ್ರವ್ಯವಾಗಿದ್ದಿ. ಇಲ್ಲಿ ಬ್ರಾಹ್ಮಣವು ಹೇಳುತ್ತದೆ - ‘ಯಜ್ಞಸ್ಯ ಘೋಷದಸಿ ಇತಿ ಆಹ | ಯಜಮಾನ: ಏವ ರಯಿಂ ದಧಾತಿ’- ‘ಯಜಮಾನನೇ/ಯಜ್ಞಮಾಡುವವನೇ ಧನವನ್ನು ಇಡುತ್ತಾನೆ/ಕೊಡುತ್ತಾನೆ/ಹಿಡಿದುಕೊಳ್ಳುತ್ತಾನೆ.
೨) ಪ್ರತ್ಯುಷ್ಟಗ್ಂ ರಕ್ಷ: ಪ್ರತ್ಯುಷ್ಟಾ: ಅರಾತಯ: -
     ಬೌಧಾಯನ: - ‘ಗಾರ್ಹಪತ್ಯೇ ಪ್ರತಿತಪತಿ ಪ್ರತ್ಯುಷ್ಟಗ್ಂ ರಕ್ಷ: ಪ್ರತ್ಯುಷ್ಟಾ: ಅರಾತಯ:’ ಇತಿ |
    ಬೌಧಾಯನರು ಹೇಳುತ್ತಾರೆ - ‘ಗಾರ್ಹಪತ್ಯಾಗ್ನಿಯಲ್ಲಿ ದರ್ಭೆ ಕೊಯ್ಯುವ ಶಸ್ತ್ರವನ್ನು ಬಿಸಿಮಾಡುತ್ತಾನೆ ಈ ಮಂತ್ರದಿಂದ.’
    ಆಪಸ್ತಂಬಸ್ತು, ‘ಪ್ರತ್ಯುಷ್ಟಗ್ಂ ರಕ್ಷ: ಪ್ರತ್ಯುಷ್ಟಾ: ಅರಾತಯ:- ಇತಿ ಆಹವನೀಯೇ ಗಾರ್ಹಪತ್ಯೇ ವಾ ಅಸಿದಂ ಪ್ರತಿತಪತಿ ನ ಪರ್ಶುಮ್’ ಇತಿ |
     ಆಪಸ್ತಂಬರಾದರೋ ‘ಈ ಮಂತ್ರದಿಂದ ಆಹವನೀಯಾಗ್ನಿ (ಹವನ ಮಾಡಲು, ಹವಿಸ್ಸನ್ನರ್ಪಿಸಲು ಬಳಸುವ ಅಗ್ನಿ) ಯಲ್ಲೋ, ಗಾರ್ಹಪತ್ಯಾಗ್ನಿ (ಗೃಹಪತಿ/ಯಜಮಾನನು ಸ್ಥಾಪಿಸಿ ನಿತ್ಯವೂ ಸಂರಕ್ಷಿಸಿರುವ ಅಗ್ನಿ) ಯಲ್ಲೋ, ಕತ್ತಿಯಂತಹ ಆಯುಧವನ್ನು ಬಿಸಿಮಾಡುತ್ತಾನೆ, ಆದರೆ ಪರಶುವನ್ನಲ್ಲ’ ಎನ್ನುತ್ತಾರೆ.
      ‘ಅಸ್ಮಿನ್ ಲವನಸಾಧನೇ ನಿಗೂಢಂ ರಕ್ಷಸಾಮ್ ಅಥ ವೈರಿಣಾಂ ಚ ಸ್ವರೂಪಮ್ ಅತ್ಯಂತಂ ದಗ್ಧಂ ಭವತು |’
      ಈ ಕತ್ತರಿಸುವ ಸಾಧನದಲ್ಲಿ (ಲವನ - ಲೂಞ್ ಛೇದನೇ ಭಾವೇ ‘ಲ್ಯುಟ್’) ಅಡಗಿರುವ ರಾಕ್ಷಸರನ್ನೂ, ವೈರಿಗಳನ್ನೂ ನಾಮಾವಶೇಷ ಮಾಡುವಂತೆ ಯಜ್ಞಾಗ್ನಿಯು ಉರಿಯಲಿ. ಅವರ ಅಂತ್ಯವಾಗುವಂತೆ ದಹಿಸಲಿ.
೩) ಪ್ರೇಯಮ್ ಅಗಾತ್ ಧಿಷಣಾ ಬರ್ಹಿ: ಅಚ್ಛ ಮನುನಾ ಕೃತಾ ಸ್ವಧಯಾ ವಿತಷ್ಟಾ ತೇ ಆವಹಂತಿ ಕವಯ: ಪುರಸ್ತಾತ್ ದೇವೇಭ್ಯ: ಜುಷ್ಟಮ್ ಇಹ ಬರ್ಹಿ: ಆಸದೇ -
      ಬೌಧಾಯನ: - ‘ಆಹವನೀಯಮ್ ಅಭಿಪ್ರೈತಿ ಪ್ರೇಯಮಗಾ……..ಜುಷ್ಟಮ್ ಇತಿ’ ಇತಿ | ಸ: ಏವ ಮಂತ್ರಶೇಷಂ ಪೃಥಗ್ ವಿನಿಯುಂಕ್ತೇ - ‘ಇಹ ಬರ್ಹಿ: ಆಸದೇ - ಇತಿ ವೇದಿಂ ಪ್ರತ್ಯವೇಕ್ಷತೇ’ ಇತಿ ||
      ಬೌಧಾಯನರು ಹೇಳುತ್ತಾರೆ - ‘ಈ ಮಂತ್ರದಿಂದ ಆಹವನೀಯಾಗ್ನಿಯನ್ನು ಉದ್ದೇಶಿಸುತ್ತಾನೆ/ ಆಹವನೀಯಾಗ್ನಿಯ ಎದುರಿಗೆ ಅಥವಾ ಸಮೀಪಕ್ಕೆ ಬರುತ್ತಾನೆ. ಉಳಿದ ಮಂತ್ರಭಾಗವನ್ನು ಪ್ರತ್ಯೇಕವಾಗಿ ವಿನಿಯೋಗಿಸುತ್ತಾರೆ - ‘ಇಹ ಬರ್ಹಿ: ಆಸದೇ - ಎಂದು ಯಜ್ಞಕುಂಡವನ್ನು ನೋಡುತ್ತಾನೆ’ ಎಂದು.
     ಆಪಸ್ತಂಬರಾದರೋ ಈ ಇಡಿಯ ಮಂತ್ರಕ್ಕೆ ಒಂದೇ ವಿನಿಯೋಗವನ್ನು ಹೇಳಿದ್ದಾರೆ - ‘ಪ್ರಾಚೀಮ್ ಉದೀಚೀಂ ವಾ ದಿಶಮ್ ಅಭಿಪ್ರವೃಜ್ಯ ಯತ: ಕುತಶ್ಚಿದ್ ದರ್ಭಮಯಂ ಬರ್ಹಿ: ಆಹರತಿ ||’
      ದರ್ಭೆ ಸಾಕಷ್ಟಿರುವ ಪೂರ್ವ/ಉತ್ತರ ದಿಕ್ಕಿಗೆ ಅಭಿಮುಖವಾಗಿ ನಡೆದು, ಎಲ್ಲಿಂದಲಾದರೂ ದರ್ಭೆಯನ್ನು ಸಂಗ್ರಹಿಸಿ ತರುತ್ತಾನೆ.
      ಅಸ್ಯ ಮಂತ್ರಸ್ಯ ಪ್ರಥಮಭಾಗೇ ಪದಾರ್ಥಂ ತಾತ್ಪರ್ಯಂ ಚ ಆಹ - ‘ಪ್ರೇಯಮಗಾದ್ಧಿಷಣಾ ಬರ್ಹಿರಚ್ಛ ಇತಿ ಆಹ | ವಿದ್ಯಾ ವೈ ಧಿಷಣಾ | ವಿದ್ಯಯಾ ಏವ ಏನತ್ ಅಚ್ಛ ಏತಿ’ (ತೈ.ಬ್ರಾ.) ಇತಿ ||
       ಈ ಮಂತ್ರದ ಪ್ರಥಮಭಾಗದಲ್ಲಿನ ಪದಗಳ ಅರ್ಥ ಹಾಗೂ ತಾತ್ಪರ್ಯವನ್ನು ತೈ.ಬ್ರಾ. ಹೀಗೆ ಹೇಳಿದೆ - ‘ಪ್ರೇಯಮಗಾದ್ಧಿಷಣಾ ಬರ್ಹಿರಚ್ಛ’ ಎಂದು ಹೇಳಿದೆ. ವಿದ್ಯೆಯೇ ಧಿಷಣಾ. ವಿದ್ಯೆಯಿಂದಲೇ ಇದು (ದರ್ಭೆ) ಶುದ್ಧತೆಯನ್ನು ಹೊಂದುತ್ತದೆ. ಯಾವಾಗ, ಎಲ್ಲಿಂದ, ಹೇಗೆ, ಯಾವ ಸಾಧನ ಬಳಸಿ ದರ್ಭಾಹರಣ ಮಾಡಬೇಕೆಂಬ ಜ್ಞಾನದಿಂದಲೇ ಯಜ್ಞಕ್ಕೆ ಬೇಕಾದ ದರ್ಭೆಯು ಪವಿತ್ರವಾದುದಾಗುತ್ತದೆಯೇ ಹೊರತು ಇಲ್ಲವಾದರೆ ಶ್ರೇಷ್ಠವಾಗಲಾರದು.  ‘ಅತಿಶಯೇನ ಪ್ರಿಯ:, ಪ್ರೇಯ:, ತಾಮ್ ಪ್ರೇಯಮ್ ಅಗಾತ್’, - ಬಹುಪ್ರಿಯವಾದುದು ಪ್ರೇಯ. ಅದನ್ನು ಹೊಂದಲಿ. ದರ್ಭಾದಿಗಳಿಂದ ನಡೆಸಿದ ಹವನದಿಂದ ದೇವತೆಗಳು ಅವರಿಗೆ ಬಲು ಪ್ರಿಯವಾದ ಹವಿಸ್ಸನ್ನು ಪಡೆಯಲಿ. ‘ಇಯಮ್ ಅಶ್ವಪರ್ಶು: ವಿದ್ಯಾರೂಪತ್ವೇನ ಅಭಿಜ್ಞಾನವತೀ ಬರ್ಹಿ: ಆಪ್ತುಂ ಗಚ್ಛತಿ |’
ಈ ಅಶ್ವದ ಪಕ್ಕೆಲುಬಿನಿಂದ(scapula) ಮಾಡಿದ ಪರಶುವು ದರ್ಭಾಹರಣದ ವಿಧಿ-ವಿಧಾನದ ತಿಳುವಳಿಕೆಯುಳ್ಳದುದಾಗಿ, ದರ್ಭೆಹುಲ್ಲನ್ನು ಪಡೆಯಲು ಹೋಗುತ್ತದೆ. ಅರ್ಥಾತ್, ಅದನ್ನು ಹಿಡಿದವನಿಗೆ ಆ ಮಾಹಿತಿ ಇರಬೇಕು. ಇದರಿಂದ, ಶ್ರೇಷ್ಠ ದರ್ಭೆಯು ಪ್ರಾಪ್ತವಾಗುವುದು. ತನ್ಮೂಲಕ ದೇವತೆಗಳಿಗತಿಪ್ರಿಯವಾದ ಉತ್ತಮ ಹವಿಸ್ಸು ಸಿಗಲಿ.
    ದ್ವಿತೀಯಭಾಗಸ್ಯಾರ್ಥೇ ಶ್ರುತ್ಯಂತರಪ್ರಸಿದ್ಧಿಮ್ ಅನುಮಾನಪ್ರಸಿದ್ಧಿಂ ಚ ಆಹ - ‘ಮನುನಾ ಕೃತಾ ಸ್ವಧಯಾ ವಿತಷ್ಟಾ ಇತಿ ಆಹ | ಮಾನವೀ ಹಿ ಪರ್ಶು: ಸ್ವಧಾಕೃತಾ | (ತೈ.ಬ್ರಾ.)’ ಇತಿ | ಕೀದೃಶೀ ಸಾ?  ಅನ್ನೇನ ಅಸ್ಥ್ಯಾದಿ-ಉಪಚಯ: ಅನ್ವಯ-ವ್ಯತಿರೇಕಸಿದ್ಧ: | ಪ್ರಜಾಪತಿರೂಪೇಣ ಮನುನಾ ಸ್ವಚಕ್ಷುಷ: ನಿರ್ಮಿತಾ | ಅಶ್ವಭಕ್ಷಿತ-ಅನ್ನಲಕ್ಷಣಯಾ ಸ್ವಧಯಾ ವಿಶೇಷೇಣ ತೀಕ್ಷ್ಣೀಕೃತಾ ||
     ಎರಡನೇ ಭಾಗದ ಅರ್ಥದಲ್ಲಿ, ಇನ್ನೊಂದು ಶ್ರುತಿಸಿದ್ಧವಾದ ಹಾಗೂ ಅನುಮಾನದಿಂದ ಮಾಡಬಹುದಾದ ಸಮರ್ಥನೆಯನ್ನು ಹೇಳಿದನು - ‘ಮನ್ವಂತರಾಧಿಪತಿಯಿಂದ ನಿರ್ಮಿಸಲ್ಪಟ್ಟು, ಸ್ವಧಾದೇವಿಯಿಂದ(ಸ್ವದ ಆಸ್ವಾದನೇ + ಆ, ಸ್ವದ್ಯತೇ ಅನೇನ ಇತಿ ಸ್ವಧಾ, ಪಿತೃದೇವತೆಗಳಿಗೆ ಹವಿಸ್ಸನ್ನೊಯ್ಯುವವಳು) ಹರಿತಗೊಳಿಸಲ್ಪಡುತ್ತದೆ ಈ ದರ್ಭಾಹರಣ ಸಾಧನವಾದ ಅಶ್ವಪರಶು ಎಂದು ಹೇಳಿದನು. ಮನುಸೃಷ್ಟ ಪರಶುವು ಸ್ವಧಾದೇವಿಯಿಂದ ಸಂಸ್ಕರಿಸಲ್ಪಟ್ಟಿದೆ (ತೈ.ಬ್ರಾ.) ಎಂಬುದಾಗಿ. ಪರಶುವು ಹೇಗಿದೆ? ಆಹಾರದಿಂದ ಅಸ್ಥಿ / ಮೂಳೆ ಮುಂತಾದ ದೇಹಭಾಗಗಳು ವೃದ್ಧಿಯಾಗುತ್ತವೆ ಎಂಬುದು ಪರಸ್ಪರ ಸಂಬಂಧ(ಅನ್ವಯ, ಪೂರಕ, ಒಂದಿದ್ದರೇ ಇನ್ನೊಂದು ಇರಬಲ್ಲದು) ಹಾಗೂ ಅಭಾವ (ವ್ಯತಿರೇಕ, ಒಂದಿಲ್ಲದಿದ್ದರೆ ಇನ್ನೊಂದಿಲ್ಲ, ಆಹಾರವಿಲ್ಲದೆ ದೇಹವಿರದು, ದೇಹವಿರದೆ ಆಹಾರಸೇವನೆ ಅಸಾಧ್ಯ) ನ್ಯಾಯದಿಂದ ಸಾಧಿತವಾದುದು. ಪ್ರಜಾಪತಿರೂಪನಾದ ಮನುವಿನಿಂದ ತನ್ನ ಕಣ್ಣಿನಿಂದ ನಿರ್ಮಿಸಲ್ಪಟ್ಟಿದೆ ಈ ದರ್ಭೆ ಕೊಯ್ಯುವ ಅಶ್ವದ ಪಕ್ಕೆಲುಬು. ಯಾಕೆಂದರೆ ಸಮಗ್ರಸೃಷ್ಟಿಯು ಅವನಿಂದಲೇ ಅಲ್ಲವೇ? ಅಶ್ವದಿಂದ ಭಕ್ಷಿತವಾದ ಆಹಾರವೆಂಬ ಸ್ವಧಾಶಕ್ತಿಯಿಂದ ಇದು ವಿಶೇಷವಾಗಿ ಹರಿತಗೊಳಿಸಲ್ಪಟ್ಟಿದೆ.
     ತೃತೀಯಭಾಗೇ ಪದಾರ್ಥಂ ಪುರಸ್ತಾತ್-ಶಬ್ದತಾತ್ಪರ್ಯಂ ಚ ಆಹ - ‘ತೇ ಆವಹಂತಿ ಕವಯ: ಪುರಸ್ತಾತ್ ಇತ್ಯಾಹ | ಶುಶ್ರುವಾಗ್ಂಸ: ವೈ ಕವಯ: | ಯಜ್ಞ: ಪುರಸ್ತಾತ್ | ಮುಖತ: ಏವ ಯಜ್ಞಮ್ ಆರಭತೇ’ (ತೈ.ಬ್ರಾ.) ಇತಿ | ಹೋಮಾಧಾರಸ್ಯ ಆಹವನೀಯಸ್ಯ ಪೂರ್ವದಿಕ್ಥತ್ವಾತ್ ಯಜ್ಞ: ಪುರಸ್ತಾತ್ ವರ್ತತೇ ಇತ್ಯುಚ್ಯತೇ | ತತ್-ಶಬ್ದಪಾಠೇನ ಪುರಸ್ತಾತ್ ಏವ ಯಜ್ಞ: ಆರಬ್ಧ: ಭವತಿ | ಅಪಿ ಚ ತತ್-ಪಾಠೇ (ಸತಿ) ದಿಗಂತರಪ್ರಯುಕ್ತಂ ವೈಕಲ್ಯಂ ನಾಸ್ತಿ ಇತಿ ಆಹ - ‘ಅಥ: ಯತ್-ಏತತ್-ಉಕ್ತ್ವಾ ಯತ: ಕುತ: ಚ ಆಹರತಿ | (ಅತ:)ತತ್ ಪ್ರಾಚ್ಯಾ ಏವ ದಿಶ: ಭವತಿ(ತೈ.ಬ್ರಾ.)’ ಇತಿ | ಯಸ್ಮಾತ್ ತೇ ಪೂರ್ವೇ ಕವಯ: ವಿದ್ವಾಂಸ: ಅನುಷ್ಠಾತಾರ: ಪೂರ್ವಸ್ಯಾ: ದಿಶ: ಬರ್ಹಿ: ಆನಯಂತಿ ತಸ್ಮಾತ್ ಇಯಂ ಪ್ರಾಕ್ ಗಚ್ಛತಿ ||
      ಮೂರನೇ ಭಾಗದಲ್ಲಿ ಪದಶ: ಅರ್ಥವನ್ನು ಮತ್ತು ಪುರಸ್ತಾತ್ ಶಬ್ದದ ತಾತ್ಪರ್ಯವನ್ನು ಹೇಳಿರುತ್ತಾನೆ - ಆ ಪೂರ್ವಸೂರಿಗಳು ಎದುರಿನಿಂದ/ಪೂರ್ವದಿಕ್ಕಿನಿಂದ (ದರ್ಭೆಯನ್ನು) ತರುತ್ತಾರೆ ಎಂದು ಹೇಳುತ್ತಾನೆ. ಕವಿಗಳೆಂದರೆ ವೈದಿಕಕರ್ಮಾದಿ ದೇವತಾಸೇವೆಯನ್ನು ನಿಶ್ಚಯವಾಗಿಯೂ ಮಾಡುವವರು. ಯಜ್ಞವು ಮುಂದಿನಿಂದ (ಆರಂಭಿಸಲ್ಪಡುವುದು). ಎದುರುಭಾಗದಿಂದಲೇ ಯಜ್ಞವನ್ನು ಆರಂಭಿಸುತ್ತಾನೆ (ತೈ.ಬ್ರಾ.) ಎಂದು. ಹೋಮದ ಆಧಾರವಾದ ಆಹವನೀಯಾಗ್ನಿಯ ಇರುವಿಕೆ ಪೂರ್ವದಿಕ್ಕಾದುದರಿಂದ ಯಜ್ಞವು ಎದುರಿಗಿದೆಯೆಂದು ಹೇಳಲ್ಪಡುವುದು. ಆ (ಪುರಸ್ತಾತ್/ತತ್/ತೇ) ಶಬ್ದೋಚ್ಚಾರದಿಂದ ಮುಂದುಗಡೆಯಿಂದಲೇ ಯಜ್ಞವು ಆರಂಭಿಸಲ್ಪಡುವುದಾಗುತ್ತದೆ. ಅಲ್ಲದೆ, ಅದರ ಪ್ರಯೋಗವಿರಲಾಗಿ, ಬೇರೆ ದಿಕ್ಕಿನಿಂದ ತೊಡಗುವ ಪ್ರಮಾದದ ಸಾಧ್ಯತೆ ಇಲ್ಲ ಎಂದು ಹೇಳಿದೆ - ‘ನಂತರ ಯಾವ ಇದನ್ನುಚ್ಚರಿಸಿ, ಎಲ್ಲಿಂದಾದರೂ (ದರ್ಭೆಯನ್ನು) ತರುತ್ತಾನೆ. (ಆದ್ದರಿಂದ) ಅದು ಪೂರ್ವದಿಕ್ಕಿಂದಲೇ ಆಗುತ್ತದೆ (ತೈ.ಬ್ರಾ.) ‘ ಎಂಬುದಾಗಿ. ಯಾವ ಕಾರಣದಿಂದ ನಿನಗಿಂತ ಮೊದಲೇ (ತವ/ತೇ/ಯಜ್ಞಸ್ಯ)/ಯಜ್ಞದ ಮೊದಲು ಯಾಜ್ಞಿಕರು ಪೂರ್ವದಿಕ್ಕಿನಿಂದ ದರ್ಭೆಯನ್ನು ತರುತ್ತಾರೋ ಅದರಿಂದಾಗಿ, ಇದು(ಪರಶು)(ಅವರ ಕೈಯ ಆಯುಧವಾಗಿ ಅವರೊಂದಿಗೆ) ಪೂರ್ವಕ್ಕೆ ಹೋಗುವುದು.
     ಚತುರ್ಥಭಾಗೇ ‘ಆಸದೇ’ ಇತ್ಯಸ್ಯ ತಾತ್ಪರ್ಯಮ್ ಆಹ - ‘ದೇವೇಭ್ಯೋ ಜುಷ್ಟಮಿಹ ಬರ್ಹಿರಾಸದ ಇತ್ಯಾಹ | ಬರ್ಹಿಷ: ಸಮೃದ್ಧ್ಯೈ | ಕರ್ಮಣೋऽನಪರಾಧಾಯ ‘ (ತೈ.ಬ್ರಾ.) ಇತಿ | ಹವಿರ್ಭುಗ್ಭ್ಯ: (ದೇವೇಭ್ಯ:) ಪ್ರಿಯಂ ಬರ್ಹಿ: ಇಹ ವೇದ್ಯಾಮ್ ಆಸಾದಯಿತವ್ಯಮ್ | ಆಸಾದಯಿತವ್ಯಮಿತ್ಯುಕ್ತೇ ಯಾವತ್ (ಯಜ್ಞ)ವೇದ್ಯಾ: ತರಣಸ್ಯ ಯುಕ್ತಂ ಪರ್ಯಾಪ್ತಂ ತಾವತ: ಸೂಚಿತತ್ವಾತ್ ಏತತ್ ಪದೋಚ್ಚಾರಣಂ ಸಮೃದ್ಧ್ಯೈ ಸಂಪದ್ಯತೇ | ತತ: ನ್ಯೂನತ್ವಲಕ್ಷಣ: ಕರ್ಮಣ: ಅಪರಾಧ: ನ ಭವಿಷ್ಯತಿ ||
     ನಾಲ್ಕನೇ ಮಂತ್ರಭಾಗದಲ್ಲಿ ‘ಆಸದೇ’ ಎಂಬುದರ ತಾತ್ಪರ್ಯವನ್ನು ಹೇಳಿದೆ - ‘ದೇವತೆಗಳಿಗೆ ಸಾಕಷ್ಟು ದರ್ಭೆಯನ್ನು ಸಂಗ್ರಹಿಸಿ ಇಲ್ಲಿಗೆ ತರಬೇಕು ಎಂದು ಹೇಳಿದೆ. ದರ್ಭೆಯ ಸಮೃದ್ಧಿಸೂಚಕವಾಗಿ.  ಯಜ್ಞಕರ್ಮದ ಲೋಪವಾಗದಂತೆ. (ತೈ.ಬ್ರಾ.). ಹವಿಸ್ಸುಣ್ಣುವ (ದೇವತೆಗಳಿಗೆ) ಪ್ರಿಯವಾದ ದರ್ಭೆಯನ್ನು ಇಲ್ಲಿ ಯಜ್ಞವೇದಿಯಲ್ಲಿ ತರಿಸಿಡಬೇಕು. ತರಿಸಬೇಕೆಂದರೆ, ಯಜ್ಞವೇದಿಕೆಯ ಉಪಸ್ತರಣಕ್ಕೆ(ಹತ್ತಿರ ಹರಡಲು) ವಿಧ್ಯುಕ್ತವಾಗಿ ಎಷ್ಟು ಬೇಕೋ ಅಷ್ಟನ್ನು ಸೂಚಿಸಲು ಈ ಪದಪ್ರಯೋಗವು ಸಾಕಷ್ಟು ಎಂಬರ್ಥದಲ್ಲಿ ಬಂದಿದೆ. ಅದಕ್ಕಿಂತ ಕಡಿಮೆಯಾದರೆ ಆಗಬಹುದಾದ ಪ್ರಮಾದ/ಕರ್ಮಲೋಪವು ಆಗಲಾರದು(ಈ ಸಾಕಷ್ಟು ಎಂಬ ಅರ್ಥಕವಾದ ಆಸದೇ ಪದದಿಂದಾಗಿ.).
೪) ದೇವಾನಾಂ ಪರಿಷೂತಮ್ ಅಸಿ ವರ್ಷವೃದ್ಧಮ್ ಅಸಿ -
  ಬೌಧಾಯನ: - ‘ದರ್ಭಸ್ತಂಬಂ ಗೃಹ್ಣೀತೇ ಯಾವನ್ತಮ್ ಅಲಂ ಪ್ರಸ್ತರಣಾಯ ಮನ್ಯತೇ ದೇವಾನಾಂ ಪರಿಷೂತಮಸಿ ಇತಿ ಅಥ ಏನಮ್ ಊರ್ಧ್ವಮ್ ಉನ್ಮಾರ್ಷ್ಟಿ ವರ್ಷವೃದ್ಧಮಸಿ ಇತಿ’ ಇತಿ |
    
ಬೌಧಾಯನರು - “ದೇವಾನಾಂ ಪರಿಷೂತಮಸಿ ಎಂದು ಯಜ್ಞವೇದಿಯ ಸುತ್ತ ಹರಡಲು/ಪ್ರಸ್ತರಣೆಗೆ ಎಷ್ಟು ಸಾಕೆಂದು ತಿಳಿಯಲ್ಪಡುತ್ತದೋ ಅಷ್ಟು ದೊಡ್ಡ ದರ್ಭೆಕಟ್ಟನ್ನು ಹಿಡಿದುಕೊಳ್ಳುತ್ತಾನೆ; ಅನಂತರ ಅದನ್ನು ವರ್ಷವೃದ್ಧಮಸಿ ಎಂದು ತುದಿಗಳನ್ನು ಸೇರಿಸಿ ಹಿಡಿದು ಸ್ವಚ್ಛಗೊಳಿಸುತ್ತಾನೆ” ಎಂದು ವಿನಿಯೋಗವನ್ನು ಹೇಳುತ್ತಾರೆ.
ಆಪಸ್ತಂಬಸ್ತು ದ್ವಯೋ: ಏಕಮಂತ್ರತ್ವಮ್ ಅಭಿಪ್ರೇತ್ಯ ಏಕಮ್ ಏವ ವಿನಿಯೋಗಮ್ ಆಹ- “ದೇವಾನಾಂ ಪರಿಷೂತಮ್ ಅಸಿ ವರ್ಷವೃದ್ಧಮ್ ಅಸಿ ಇತಿ ದರ್ಭಾನ್ ಪರಿಷೌತಿ” ಇತಿ |
ಆಪಸ್ತಂಬರಾದರೋ ಎರಡನ್ನೂ ಒಂದೇ ಮಂತ್ರವಾಗಿ ಪರಿಗಣಿಸಿ ಒಂದೇ ವಿನಿಯೋಗವನ್ನು ಹೇಳಿದರು- “ಈ ಮಂತ್ರದಿಂದ ದರ್ಭೆಗಳನ್ನು ತುದಿಸೇರಿಸಿ ಒಟ್ಟುಮಾಡಿ ಹಿಡಿದುಕೊಳ್ಳುತ್ತಾನೆ” ಎಂಬುದಾಗಿ.
       ಭೋ ದರ್ಭಜಾತ! ತ್ವಂ ದೇವಾನಾಮ್ ಅರ್ಥೇ ಪರಿಗೃಹೀತಮ್ ಅಸಿ, ನ ತು ಮಯಾ ಸ್ವಗೃಹಾಚ್ಛಾದನಾದ್ಯರ್ಥಮ್, ಅತ: ನ ಮೇ ಲವನದೋಷ: ಅಸ್ತಿ | ವರ್ಷೇಣ ಪುನರ್ವೃದ್ಧಿಸಂಭವಾತ್ ತವ ಅಪಿ ನ ಹಾನಿ: | ಪರಿಗೃಹೀತಸ್ಯ ಸರ್ವಸ್ಯ ದೇವಾರ್ಥತ್ವಂ ನ ತು ಏಕದೇಶಸ್ಯ ಇತಿ ಏವಂ ಮಂತ್ರಾಭಿಪ್ರಾಯಂ ದರ್ಶಯತಿ - “ದೇವಾನಾಂ ಪರಿಷೂತಮಸಿ ಇತಿ ಆಹ | ಯದ್ ವಾ ಇದಂ ಕಿಂ ಚ | ತದ್ ದೇವಾನಾಂ ಪರಿಷೂತಮ್”(ತೈ.ಬ್ರಾ.) ಇತಿ ||
ಎಲೈ ದರ್ಭೆಯಾಗಿ ಹುಟ್ಟಿದವನೇ(ದರ್ಭೆಯೇ)! ನೀನು ದೇವತೆಗಳಿಗೋಸ್ಕರವಾಗಿ ನನ್ನಿಂದ ಪರಿಗ್ರಹಿಸಲ್ಪಟ್ಟಿರುವೆಯೇ ಹೊರತು, ನನ್ನ ಮನೆಯೇ ಮುಂತಾದೆಡೆ ಹಾಸಲು ಸ್ವಂತಕ್ಕಾಗಿ ಅಲ್ಲ; ಆದ್ದರಿಂದ ನನಗೆ ನಿನ್ನನ್ನು ಕೊಯ್ದ ದೋಷವಿಲ್ಲ. ಒಂದು ವರ್ಷದಲ್ಲಿ ಪುನ: ನೀನು ಮೊದಲಿನಂತೆಯೇ ಬೆಳೆಯುವುದರಿಂದ ನಿನಗೂ ತೊಂದರೆಯಾಗದು. ಪರಿಗ್ರಹಿಸಿದ ಎಲ್ಲ ದರ್ಭೆಯು ದೇವತೆಗಳಿಗೆಯೇ ಹೊರತು ಸ್ವಂತ/ವೈಯಕ್ತಿಕ ನೆಲೆಯಾದ ವಾಸದ ಮನೆಯಂತಹ ಒಂದು ಸೀಮಿತ ಪ್ರದೇಶಕ್ಕಾಗಿ ಅಲ್ಲ ಎಂಬುದು ಈ ಮಂತ್ರದ ಅಭಿಪ್ರಾಯವೆಂದು ತೈ.ಬ್ರಾಹ್ಮಣವು ತೋರಿಕೊಡುತ್ತದೆ - “ದೇವತೆಗಳಿಗಾಗಿ ಸರಿಪಡಿಸಲ್ಪಟ್ಟವನಾಗಿದ್ದಿ ಎಂದು ಹೇಳಿದನು. ಸಂಗ್ರಹೀತವಾದ ಈ ಎಲ್ಲ ದರ್ಭೆಯೂ ಸಹ. ಅದು ದೇವತೆಗಳಿಗಾಗಿ ತುದಿಹಿಡಿಯಲ್ಪಟ್ಟಿದೆ” ಎಂದು.

ಅಪಿ ಚ ಯಥಾ ಲೋಕೇ ಕಶ್ಚಿತ್ ಭೃತ್ಯ: ರಾಜನಿಯೋಗಾತ್ ಗ್ರಾಮೇಷು ಗತ್ವಾ ಬಲಾತ್ ಗೃಹ್ಯಮಾಣಂ ದಧಿಕ್ಷೀರಾದಿದ್ರವ್ಯಂ ವಸುಮತ್ತಮಾಯ ರಾಜ್ಞೇ ನ ತು ಮದರ್ಥಮ್ ಇತಿ ಪ್ರಜಾನಾಮ್ ಅಗ್ರೇ ಪ್ರತಿಪ್ರೋಚ್ಯ ನಿರ್ಭಯ: ಸರ್ವಥಾ ಇದಂ ಹರಿಷ್ಯಾಮಿ ಇತಿ ಬ್ರೂತೇ ತದ್ವತ್ ಇದಮ್ ಇತಿ ಅಭಿಪ್ರಾಯಾಂತರಮ್ ಆಹ - “ಅಥ: ಯಥಾ ವಸ್ಯಸೇ ಪ್ರತಿಪ್ರೋಚ್ಯ ಆಹ ಇದಂ ಕರಿಷ್ಯಾಮಿ ಇತಿ | ಏವಮ್ ಏವ ತದಧ್ವರ್ಯು: ದೇವೇಭ್ಯ: ಪ್ರತಿಪ್ರೋಚ್ಯ ಬರ್ಹಿ: ದಾತಿ | ಆತ್ಮನ: ಅಹಿಗ್ಂಸಾಯೈ(ಅಹಿಂಸಾಯೈ)” (ತೈ.ಬ್ರಾ.)ಇತಿ ||

ಅಂತೆಯೇ, ಹೇಗೆ ಲೌಕಿಕವಾಗಿ ರಾಜನಿಂದ ನಿಯೋಜಿತನಾದ ಯಾವನೋ ಸೇವಕನು ಗ್ರಾಮಗಳಲ್ಲಿ ಹೋಗಿ ಬಲವಂತವಾಗಿ ಕೊಂಡೊಯ್ಯುವ ಮೊಸರು, ಹಾಲು ಇತ್ಯಾದಿ ದ್ರವ್ಯಗಳನ್ನು ಸಂಪತ್ತುಳ್ಳವರಲ್ಲಿ(ವಸುಮಾನ್) ಶ್ರೇಷ್ಠನಾದ(ತಮ) ರಾಜನಿಗೇ ಹೊರತು ನನಗಲ್ಲ ಎಂದು ಪ್ರಜೆಗಳ ಮುಂದೆ ಹೇಳಿ ಯಾವುದೇ ಹೆದರಿಕೆಯಿಲ್ಲದೆ ಖಂಡಿತವಾಗಿಯೂ ಹೇಗಾದರೂ(ಶತಾಯ ಗತಾಯ) ಇದನ್ನು ಕೊಂಡೊಯ್ಯುವೆನೆಂದು ಹೇಳುತ್ತಾನೋ, ಅದರಂತೆಯೇ ಇದು ಎಂದು ಇನ್ನೊಂದು ಅಭಿಪ್ರಾಯ (ದೃಷ್ಟಾಂತ) ವನ್ನು ಹೇಳಿದನು - “ಅನಂತರ, ಹೇಗೆ ರಾಜನಿಗಾಗಿ ಇದನ್ನು ಮಾಡುತ್ತೇನೆಂದು ಪ್ರಜೆಗಳ ಮುಂದೆ ಹೇಳುತ್ತಾನೋ, ಹಾಗೆಯೇ ಆ ಅಧ್ವರ್ಯುವು ದೇವತೆಗಳಿಗಾಗಿ ಎಂದು ಹೇಳಿ ದರ್ಭೆ ತರುತ್ತಾನೆ. ದರ್ಭೆ ಕೊಯ್ಯುವ ಮೂಲಕ ತಾನು ತನಗಾಗಿ ಹಿಂಸೆ ಮಾಡಿಲ್ಲ” ಎಂಬುದಾಗಿ ಬ್ರಾಹ್ಮಣವು ಹೇಳಿದೆ.

ಸ್ತಂಬಸ್ಯ ಸ್ವೀಕಾರ್ಯಸ್ಯ ಏಕತ್ವಂ ಕೃತ್ಸ್ನಲವನಂ ಚ ವಿಧತ್ತೇ - “ಯಾವತ: ಸ್ತಂಬಾನ್ ಪರಿದಿಶೇತ್ | ಯತ್ ತೇಷಾಮ್ ಉಚ್ಛಿಗ್ಂಷ್ಯಾತ್ (ಉಚ್ಛಿಂಸ್ಯಾತ್) | ಅತಿ ತದ್ಯಜ್ಞಸ್ಯ ರೇಚಯೇತ್ | ಏಕಗ್ಂ (ಏಕಂ) ಸ್ತಂಬಂ ಪರಿದಿಶೇತ್ | ತಗ್ಂ (ತಂ) ಸರ್ವಂ ದಾಯಾತ್ | ಯಜ್ಞಸ್ಯ ಅನತಿರೇಕಾಯ” (ತೈ.ಬ್ರಾ.) ಇತಿ | ಯಜ್ಞಸ್ಯ ಸಂಬಂಧಿ: ಯತ್ ಹವ್ಯಂ ತಸ್ಯ ಯಜ್ಞಾತ್ ಬಹಿರ್ಭಾವೇ ಅತಿರೇಕ: ಸ: ತು ಅಯುಕ್ತ: ||

ದರ್ಭೆ ಕಟ್ಟಿನ ಪರಿಗ್ರಹಣ ಒಂದೇ ಉದ್ದೇಶಕ್ಕೆ (ಯಜ್ಞಕ್ಕೆ) (ಅಥವಾ ದರ್ಭೆಯೆಲ್ಲವನ್ನೂ ಒಂದೇ ಕಟ್ಟು ಮಾಡಬೇಕು) ಮತ್ತು ದರ್ಭೆ ಉಳಿಸದೆ ಎಲ್ಲವನ್ನೂ ಕತ್ತರಿಸಬೇಕೆಂದು (ಅಥವಾ ಇಡಿಯ ದರ್ಭೆಯನ್ನು ಉದ್ದವಿದ್ದಷ್ಟನ್ನೂ ಪೂರ್ಣವಾಗಿ ಕತ್ತರಿಸಬೇಕೇ ಹೊರತು ಮಧ್ಯದಿಂದ ತುಂಡರಿಸಬಾರದೆಂದು) ವಿಧಿಸುತ್ತಾನೆ - “ಎಲ್ಲಿಂದ, ಯಾವ ನೆಲದಿಂದ, ದರ್ಭೆಹುಲ್ಲುಗಳು ಹುಟ್ಟಿದೆಯೋ ಆ ಬುಡದಿಂದಲೇ ಅವುಗಳನ್ನು ಕತ್ತರಿಸಬೇಕು. ಅಥವಾ, ಸಂಗ್ರಹಿಸಿದ ದರ್ಭೆಯೆಷ್ಟಿದೆಯೋ ಅದನ್ನೆಲ್ಲ ತುದಿ ಹಿಡಿಯಬೇಕು. ಅವುಗಳಲ್ಲಿ ಯಾವುವು ಬುಡದಲ್ಲಿ ಉದ್ದ ಹೆಚ್ಚಿವೆಯೋ ಅವನ್ನು ಬೇರ್ಪಡಿಸಿ ಎಸೆಯಬೇಕು. ಒಂದು ಕಟ್ಟನ್ನು ಮಾಡಿ ತುದಿ ಸರಿಹೊಂದಿಸಬೇಕು. ಅದೆಲ್ಲವನ್ನು ಯಜ್ಞಾರ್ಥವಾಗಿ ಕೊಡಬೇಕು. ಅದು ಯಜ್ಞಕ್ಕೆ ಹೆಚ್ಚಾಗದು” ಎಂಬುದು ತೈ.ಬ್ರಾ. ನಿರ್ವಚನ. ಯಜ್ಞಕ್ಕೆ ಸಂಬಂಧಿಸಿದ ಯಾವ ಹವಿಸ್ಸಿದೆಯೋ, ಅದನ್ನು ಯಜ್ಞಕ್ಕೆ ನೀಡದೆ ಹೊರಗಿಡುವುದಾದರೋ ಯೋಗ್ಯವಲ್ಲ.

ಅಕೃಷ್ಟಪಚ್ಯಾದೀನಾಂ ದರ್ಭಾದೀನಾಂ ತಟಾಕಾದಿ-ಉದಕಮ್ ಅನಪೇಕ್ಷ್ಯ ವರ್ಷೇಣ ವೃದ್ಧಿ: ಪ್ರಸಿದ್ಧ: ಇತಿ ಆಹ - “ವರ್ಷವೃದ್ಧಮಸೀತ್ಯಾಹ | ವರ್ಷವೃದ್ಧಾ: ವಾ ಓಷಧಯ:” ಇತಿ ||(ತೈ.ಬ್ರಾ.)

ಕೃಷಿಮಾಡದೇ ತಾನೇ ತಾನಾಗಿ ಬೆಳೆಯುವ ದರ್ಭೆ ಮುಂತಾದವುಗಳಿಗೆ ಕೆರೆ-ತಟಾಕಾದಿ ಜಲಮೂಲವನ್ನು ಬಯಸದೇ ೧ ವರ್ಷದಲ್ಲಿ ಬೆಳವಣಿಗೆಯಾಗುವುದೆಂಬುದು ಪ್ರಸಿದ್ಧವೆಂದು ಹೇಳುತ್ತಾನೆ - “ವರ್ಷದಲ್ಲೇ ಅಥವಾ ಮಳೆಯಾಧಾರದಲ್ಲೇ ಬೆಳೆಯುವೆ ಎಂದು ಹೇಳಿದೆ. ಓಷಧಿಗಳು (ವರ್ಷಬೆಳೆಗಳು) ವರ್ಷವೊಂದರಲ್ಲೇ ವರ್ಧಿಸುವುವು” ಎಂದು ಬ್ರಾಹ್ಮಣವು ಹೇಳಿದೆ.

೫) ದೇವಬರ್ಹಿರ್ಮಾ ತ್ವಾऽನ್ವಙ್ಮಾ ತಿರ್ಯಕ್ಪರ್ವ ತೇ ರಾಧ್ಯಾಸಮ್ -

>ಪದವಿಭಾಗ:-
ದೇವಬರ್ಹಿ: ಮಾ ತ್ವಾ ಅನ್ವಕ್ ಮಾ ತಿರ್ಯಕ್ ಪರ್ವ ತೇ ರಾಧ್ಯಾಸಮ್ |
>ಅನ್ವಯ:-
(ಹೇ)ದೇವಬರ್ಹಿ:! ತ್ವಾ(ತ್ವಾಮ್) ಮಾ ಅನ್ವಕ್, ತೇ ಪರ್ವ ಮಾ ತಿರ್ಯಕ್ ರಾಧ್ಯಾಸಮ್ |
>ಅರ್ಥ:-
ಎಲೈ ದೇವತಾಕಾರ್ಯಾರ್ಥವಾದ ದರ್ಭೆಯೇ! ನಿನ್ನನ್ನು ಉದ್ದುದ್ದವಾಗಿಯಾಗಲೀ, ನಿನ್ನ ಬೆಳವಣಿಗೆಗೆ ಪೂರಕವಾದ ಗಂಟು/ಬೇರು/ಗಡ್ಡೆಗೆ ಗಾಯವಾಗುವಂತೆ ಅಡ್ಡಡ್ಡವಾಗಿಯಾಗಲೀ ಕೊಯ್ದು ಹಿಂಸಿಸಿ ಸಂಗ್ರಹಣೆ ಮಾಡದಿರಲಿ. (ರಾಧ - ಸಿದ್ಧೌ, ರಾಧನಂ - ಪ್ರಾಪ್ತಿ:)

ಬೌಧಾಯನ: - “ಅಸಿದೇನ ಉಪಯಚ್ಛತಿ ದೇವಬರ್ಹಿ: ಮಾ ತ್ವಾ ಅನ್ವಕ್ ಮಾ ತಿರ್ಯಕ್ ಪರ್ವ ತೇ ರಾಧ್ಯಾಸಮ್ ಇತಿ” ಇತಿ ||
ಕತ್ತಿಯೊಂದಿಗೆ ದೇವತೋದ್ದೇಶಿತ ದರ್ಭೆಯನ್ನು ನೀಡುತ್ತಾನೆ ಎಂಬ ವಿನಿಯೋಗವನ್ನು ಬೌಧಾಯನರು ಈ ಮಂತ್ರಕ್ಕೆ ಹೇಳಿದ್ದಾರೆ.

ವಿನಿಯೋಗದ್ವಯಮ್ ಆಹ ಆಪಸ್ತಂಬ: - “ದೇವಬರ್ಹಿ: ಮಾ ತ್ವಾ ಅನ್ವಕ್ ಮಾ ತಿರ್ಯಕ್ ಇತಿ ಸಂಯಚ್ಛತಿ, ಪರ್ವ ತೇ ರಾಧ್ಯಾಸಮ್ ಇತಿ ಅಸಿದಮ್ ಅಧಿ-ನಿದಧಾತಿ” ಇತಿ ||
ಆಪಸ್ತಂಬರು ವಿನಿಯೋಗಗಳೆರಡನ್ನು ಹೇಳಿದ್ದಾರೆ - “ದೇವಬರ್ಹಿ:......ತಿರ್ಯಕ್ ಎಂದು ದರ್ಭೆಯನ್ನು ವಿಧ್ಯುಕ್ತವಾಗಿ ಪ್ರದಾನ ಮಾಡುತ್ತಾನೆ; ಪರ್ವ ತೇ ರಾಧ್ಯಾಸಮ್ ಎಂದು ಕತ್ತಿಯನ್ನು ಅದರೊಂದಿಗೆ ಸಮರ್ಪಿಸುತ್ತಾನೆ.

೬) ಆಚ್ಛೇತ್ತಾ ತೇ ಮಾ ರಿಷಮ್ -

>ಪದವಿಭಾಗ: ಸಾನ್ವಯ: -
(ಅಹಂ) ತೇ (ತವ) ಆ+ಛೇತ್ತಾ (ಅಪಿ), (ಮಂತ್ರಸಾಮರ್ಥ್ಯಾತ್) ಮಾ (ನ) ರಿಷಮ್ (ಹಿಂಸಿಷಮ್) |

>ಅರ್ಥ:-
ನಾನು ನಿನ್ನ (ನ್ನು) (ದರ್ಬೆಯನ್ನು) ಛೇದಕ (ಕತ್ತರಿಸುವವ/ಕೊಯ್ಯುವವನಾದರೂ); (ಮಂತ್ರಶಕ್ತ್ಯಾದಿಗಳಿಂದ ನಿನ್ನನ್ನು) ಹಿಂಸಿಸುವುದಿಲ್ಲ.

>ವಿನಿಯೋಗ: -
ಬೌಧಾಯನ: ಆಪಸ್ತಂಬ: ಚ - ‘ಆಚ್ಛಿನತ್ತಿ ಆಚ್ಛೇತ್ತಾ ತೇ ಮಾ ರಿಷಮಿತಿ’ ಇತಿ | ಈ ಮಂತ್ರದಿಂದ ತಂದ ದರ್ಭೆಯನ್ನು ಸೂಕ್ತವಾಗಿ ಕತ್ತರಿಸುತ್ತಾನೆ.

೭) ದೇವಬರ್ಹಿ: ಶತವಲ್ ಶಂ ವಿರೋಹ -

>ಅರ್ಥ: -
ಹೇ ದೇವಕಾರ್ಯಾರ್ಥವಾದ ದರ್ಭೆಯೇ! (ನೀನು) ಅನಂತ ಶಾಖೆಗಳಾಗಿ ವರ್ಧಿಸು, ಮೇಲೆ ಬಾ, ಬೆಳೆ (ವಿ-ರೋಹ, ಆ-ರೋಹಣ).
>ವಿನಿಯೋಗ: -
ಕಲ್ಪಸೂತ್ರಮ್ - ‘ದೇವಬರ್ಹಿ: ಶತವಲ್ಶಂ ವಿರೋಹ ಇತಿ ಆಲವಾನ್ ಅಭಿಮೃಶತಿ’ ಇತಿ | ಲೂನ-ಅವವಿಷ್ಟಮೂಲಾನಿ ಆಲವಾ: | ಬರ್ಹಿಷ: ಪುತ್ರಾದಿವತ್ ಉಪಕಾರಕತ್ವಾತ್ ತತ್ ಪ್ರರೋಹಾರ್ಥಂ ಯತ್ನ:, ಪುತ್ರೋತ್ಪತ್ತ್ಯೈ ಭವತಿ ಇತಿ ವ್ಯಾಚಷ್ಟೇ - ‘ದೇವಬರ್ಹಿ: ಶತವಲ್ಶಂ ವಿರೋಹೇತ್ಯಾಹ |ಪ್ರಜಾ ವೈ ಬರ್ಹಿ: | ಪ್ರಜಾನಾಂ ಪ್ರಜನನಾಯ’ (ತೈ.ಬ್ರಾ.) ಇತಿ ||
ಈ ಮಂತ್ರದಿಂದ ತುಂಡಾಗಿ ಉಳಿದ ದರ್ಭೆಯ ಬುಡವನ್ನು ಸ್ಪರ್ಶಿಸುತ್ತಾನೆ. ದರ್ಭೆಯು ಮಕ್ಕಳಂತೆ ಉಪಕಾರಕವಾದುದರಿಂದ, ಅದರ ವರ್ಧನೆಗಾಗಿನ ಪ್ರಯತ್ನವು ಸಂತಾನಪ್ರಾಪ್ತಿಕರವಾಗುವುದೆಂದು ತೈ.ಬ್ರಾಹ್ಮಣವು ಹೇಳಿದೆ.

೮) ಸಹಸ್ರವಲ್ಶಾ ವಿ ವಯಗ್ಂ ರುಹೇಮ -
>ಪದವಿಭಾಗ: ಅನ್ವಯ: ಚ -
ವಯಂ ಸಹಸ್ರವಲ್ಶಾ:  ವಿರುಹೇಮ |
>ಅರ್ಥ: -
ನಾವು ಸಾವಿರಾರು ಸಂತತಿ-ಶಾಖೆಗಳಾಗಿ ವರ್ಧಿಸೋಣ.
>ವಿವರಣೆ -
ಮಂತ್ರಸ್ಯ ಆಶೀ:ಪರತ್ವಂ ಸ್ಪಷ್ಟಮ್ ಇತ್ಯಾಹ - ‘ಸಹಸ್ರವಲ್ಶಾ ವಿ ವಯಗ್ಂ ರುಹೇಮೇತ್ಯಾಹ |ಆಶಿಷಮ್ ಏವ ಏತಾಮ್ ಆಶಾಸ್ತೇ’ (ತೈ.ಬ್ರಾ.) ಇತಿ |
ಮಂತ್ರದ ಆಶೀರ್ವಾದಪರತೆಯು ಸ್ಪಷ್ಟವಾಗಿದೆ ಎಂದು ತೈ.ಬ್ರಾಹ್ಮಣವು ಹೇಳಿದೆ.
>ವಿನಿಯೋಗ: -
ಕಲ್ಪ: - ‘ಸಹಸ್ರವಲ್ಶಾ ವಿ ವಯಗ್ಂ ರುಹೇಮ ಇತಿ ಆತ್ಮಾನಂ ಪ್ರತ್ಯಭಿಮೃಶತಿ’ ಇತಿ ||
ಈ ಮಂತ್ರದಿಂದ ತನ್ನನ್ನು ಸ್ಪರ್ಶಿಸಿಕೊಳ್ಳುತ್ತಾನೆ.

೯) ಪೃಥಿವ್ಯಾ: ಸಂಪೃಚ: ಪಾಹಿ -
>ಅರ್ಥ: -
ನೆಲದ ಸಂಪರ್ಕದಿಂದ ದರ್ಭೆಯು ಹಾಳಾಗದಂತೆ ರಕ್ಷಿಸು.
>ವಿನಿಯೋಗ: -
ಕಲ್ಪಸೂತ್ರದ ಪ್ರಕಾರ, ಈ ಮಂತ್ರದಿಂದ ದರ್ಭೆಯನ್ನು ನೆಲದ ಸಂಪರ್ಕವಾಗದಂತೆ ಆಧಾರಪೀಠ (ಮಣೆ ಇತ್ಯಾದಿ) ದ ಮೇಲಿಡುತ್ತಾನೆ.

೧೦) ಸುಸಂಭೃತಾ ತ್ವಾ ಸಂಭರಾಮ್ಯದಿತ್ಯೈ ರಾಸ್ನಾऽಸಿ -
>ಪ್ರತಿಪದಾರ್ಥ: -
ಸು-ಸಂಭೃತಾ - (ನೀನು/ದರ್ಭೆಯು) ಚೆನ್ನಾಗಿ ಹಗ್ಗದಿಂದ ಕಟ್ಟಲ್ಪಟ್ಟಿರುವೆ.
ತ್ವಾ - ನಿನ್ನನ್ನು (ತ್ವಾಮ್),
ಸಂ-ಭರಾಮಿ - ಒಳ್ಳೆಯ ರೀತಿಯಿಂದ ಸಂಗ್ರಹಿಸುತ್ತೇನೆ.
ಅದಿತ್ಯೈ  - (ನೀನು ದೇವಮಾತೆಯಾದ) ಅದಿತಿಗೆ,
ರಾಸ್ನಾ ಅಸಿ - ಸೊಂಟಪಟ್ಟಿ/ಕಾಂಚೀದಾಮವಾಗಿರುವೆ.
>ವಿನಿಯೋಗ: -
(೧) ಈ ಮಂತ್ರದಿಂದ ದರ್ಭೆಯ ಹಗ್ಗವನ್ನು ಮಾಡುತ್ತಾನೆ. (ತೈ.ಬ್ರಾ.)
(೨) ‘ಅದಿತ್ಯೈ ರಾಸ್ನಾऽಸಿ’ ಎಂದು ದರ್ಭೆಯ ತುದಿಹಿಡಿದು, ‘ಸುಸಂಭೃತಾ ತ್ವಾ ಸಂಭರಾಮಿ’ ಎಂದು ಹಗ್ಗದಲ್ಲಿ ಅದನ್ನು ಕಟ್ಟಿಡುತ್ತಾನೆ. (ಕಲ್ಪಸೂತ್ರ)

೧೧) ಇಂದ್ರಾಣ್ಯೈ ಸಂನಹನಮ್ -
>ವಿನಿಯೋಗ: -
ಈ ಮಂತ್ರದಿಂದ ಯಜಮಾನನು ತನ್ನ ಪತ್ನಿಗೆ ದರ್ಭಮಯವಾದ ಮೇಖಲೆ(ನಡುಪಟ್ಟಿ)ಯನ್ನು ಕಟ್ಟುತ್ತಾನೆ.
>ವಿವರಣೆ -
ಶುಲ್ಬಮೂಲ-ಅಗ್ರಯೋ: ಮೇಖಲಾರೂಪಂ ಬಂಧನಂ ಸಂನಹನಮ್ | ತಸ್ಯ ಇಂದ್ರಾಣೀಪ್ರಿಯತ್ವಂ ವಿಶದಯತಿ - ‘ಇಂದ್ರಾಣೀ ವಾ ಅಗ್ರೇ ದೇವತಾನಾಗ್ಂ ಸಮನಹ್ಯತ | ಸಾऽऽರ್ಧ್ನೋತ್ ಋದ್ಧ್ಯೈ ಸಂನಹ್ಯತಿ’ (ತೈ.ಬ್ರಾ.) ಇತಿ | ಯಾ ಇಯಮ್ ಇದಾನೀಮ್ ಇಂದ್ರಾಣೀ ಇಂದ್ರಪತ್ನೀ ದೇವತಾನಾಂ ಮಧ್ಯೇ ಶ್ರೇಷ್ಠಾ ವರ್ತತೇ ಸಾ ಪೂರ್ವಸ್ಮಿನ್ ಜನ್ಮನಿ ಶತಸಂಖ್ಯಾಕಾನ್ ಕ್ರತೂನ್ ಅನುಷ್ಠಿತಾ ಯಜಮಾನೇನ ತತ್-ತತ್-ಕ್ರತೌ ಯೋಕ್ತ್ರೇಣ ಬದ್ಧಾ ಅಭೂತ್, ಬಂಧನಸಾಮರ್ಥ್ಯಾತ್ ಇಂದ್ರಾಣೀತ್ವರೂಪಾಂ ಸಮೃದ್ಧಿಂ ಪ್ರಾಪ್ತವತೀ | ತಸ್ಮಾತ್ ಸಮೃದ್ಧ್ಯರ್ಥಮ್ ಏವ ಅಧ್ವರ್ಯು: ದರ್ಭೈ: ಸಂನಹ್ಯೇತ್ | ಕಿಂ ಚ ಬರ್ಹಿಷ: ಪ್ರಜಾರೂಪತ್ವಾತ್ ಇದಂ ಸಂನಹನಂ ಪ್ರಜಾನಾಮ್ ಅಪರಾವಾಪಾಯ (ಸಂಹತ್ಯೈ=ಚೆಲ್ಲಾಪಿಲ್ಲಿಯಾಗದೆ ಒಗ್ಗಟ್ಟಿನಲ್ಲಿರಲು) ಭವತಿ | ತಸ್ಮಾತ್ ಬ್ರಹ್ಮಸೃಷ್ಟೌ ಅಪಿ ಪ್ರಜಾ: ಧಮನೀಭಿ: ವ್ಯಾಪ್ತಾ: ಜಾಯಂತೇ ಇತಿ ಆಹ - ‘ಪ್ರಜಾ ವೈ ಬರ್ಹಿ: | ಪ್ರಜಾನಾಮ್ ಅಪರಾವಾಪಾಯ | ತಸ್ಮಾತ್ ಸ್ನಾವಸಂತತಾ: ಪ್ರಜಾ: ಜಾಯಂತೇ’(ತೈ.ಬ್ರಾ.) ಇತಿ ||

ಹಗ್ಗದ ಬುಡ-ತುದಿಗಳ ಸೊಂಟಪಟ್ಟಿಯ ರೂಪದ ಕಟ್ಟುವಿಕೆಯೇ ಸಂನಹನ ವು. ಅದನ್ನು ಇಂದ್ರಾಣಿಯು ಇಷ್ಟಪಡುತ್ತಾಳೆಂಬುದನ್ನು ತೈ.ಬ್ರಾಹ್ಮಣವು ವಿವರಿಸುತ್ತದೆ -  ಈಗ ಇಂದ್ರನ ಪತ್ನಿಯಾಗಿ ಇಂದ್ರಾಣಿಯೆಂದೆನಿಸಿಕೊಂಡು ದೇವತೆಗಳಲ್ಲಿ ಶ್ರೇಷ್ಠಳೆನಿಸಿಕೊಂಡಿರುವ ಯಾವ ಈ ‘ಶಚಿ’ಯಿದ್ದಾಳೋ ಅವಳು, ಪೂರ್ವಜನ್ಮದಲ್ಲಿ ನೂರು ಅಶ್ವಮೇಧಯಾಗಗಳನ್ನು ಅನುಷ್ಠಾನ ಮಾಡಿದ ಯಜಮಾನ(ಯಜನ/ಯಜ್ಞ-ಮಾಡುತ್ತಿರುವ; ಪಠಮಾನ:=ಓದುತ್ತಿರುವ ಎಂಬಂತೆ)ನಿಂದ ಆಯಾಯ(ಪ್ರತಿಯೊಂದು)ಯಜ್ಞದಲ್ಲಿ ದರ್ಭಮಯವಾದ ಹಗ್ಗದಿಂದ ಕಟಿಬಂಧನ ಮಾಡಲ್ಪಟ್ಟಳೋ, ಅದರಿಂದಾಗಿ ತಾನು ಇಂದ್ರಾಣಿತ್ವವನ್ನೂ, ಸಮೃದ್ಧಿಯನ್ನೂ ಪಡೆದವಳಾದಳು. ಆದುದರಿಂದಲೇ, ಸಮೃದ್ಧಿಗಾಗಿಯೇ ಅಧ್ವರ್ಯುವು ದರ್ಭೆಗಳಿಂದ ಕಟಿಬಂಧ ಮಾಡಬೇಕು. ಅಲ್ಲದೆ, ದರ್ಭೆಯು ಸಂತಾನರೂಪಿಯಾದುದರಿಂದ, ಈ ಕಟ್ಟುವಿಕೆಯು ಮಕ್ಕಳ ಏಕತೆಗೆ ಕಾರಣವಾಗುತ್ತದೆ ಅಥವಾ ಸಂತಾನವು ಅಂಗವೈಕಲ್ಯರಹಿತವಾಗಿ(ಆಯಾ ಅಂಗಗಳು ಆಯಕಟ್ಟಿನ ಜಾಗದಲ್ಲೇ, ಸೂಕ್ತ ಗಾತ್ರ-ಗುಣಮಟ್ಟಗಳಿಂದ ಕೂಡಿದ್ದು, ಅಸ್ತವ್ಯಸ್ತವಾಗದಂತೆ) ಆರೋಗ್ಯಯುತವಾಗುತ್ತದೆ. ಇದರಿಂದಾಗಿ, ಬ್ರಹ್ಮಸೃಷ್ಟಿಯಾದ ಶಿಶುಗಳು ನರನಾಡಿಗಳ, ಸ್ನಾಯು ಮುಂತಾದವುಗಳ ವ್ಯೂಹದಿಂದೊಡಗೂಡಿ(ದರ್ಭೆಗಳು ಸೇರಿಸಲ್ಪಟ್ಟಂತೆ) ಜನಿಸುವುವು ಎಂದು ಬ್ರಾಹ್ಮಣವು ಹೇಳಿದೆ.

೧೨) ಪೂಷಾ ತೇ ಗ್ರಂಥಿಂ ಗ್ರಥ್ನಾತು -
>ವಿನಿಯೋಗ: -
ಕಲ್ಪಸೂತ್ರದ ಪ್ರಕಾರ ಈ ಮಂತ್ರದಿಂದ ದರ್ಭರಜ್ಜುವನ್ನು (ರಜ್ಜು- ಹಗ್ಗ) ಸೊಂಟಕ್ಕೆ ಸುತ್ತುಗಟ್ಟಿ ಗಂಟು ಹಾಕುತ್ತಾನೆ. (ಗ್ರಂಥಿ- ಗಂಟು)
>ಅನ್ವಯಾರ್ಥ-ವಿವರಣೆ -
ತೇ (ತವ) ಗ್ರಂಥಿಂ ಪೂಷಾ ಗ್ರಥ್ನಾತು | ಹೇ ಸಂನದ್ಧರಜ್ಜೋ! ತವ ಗ್ರಂಥಿಂ ಪೋಷಕೋ ದೇವ: ಕರೋತು | ‘ಹೇ ದರ್ಭ’ ಇತಿ ವಾ ಯೋಜ್ಯಮ್ | ದೇವತಾವಿವಕ್ಷಾಯಾಂ ಪೂಷಶಬ್ದಸ್ಯೈವ ಪ್ರಯೋಗೇ ಅಭಿಪ್ರಾಯಮ್ ಆಹ - ‘ಪುಷ್ಟಿಮೇವ ಯಜಮಾನೇ ದಧಾತಿ’ (ತೈ.ಬ್ರಾ.) ಇತಿ ||

ಹೇ ಸಿದ್ಧಪಡಿಸಲಾಗಿರುವ ದರ್ಭರಜ್ಜುವೇ! ನಿನ್ನ ಗಂಟನ್ನು ಪೋಷಕ/ಪುಷ್ಟಿದಾಯಕನೂ ಪುಷ್ಟಿವರ್ಧಕನೂ ಆದ ದೇವನು ಕಟ್ಟಲಿ. ‘ಹೇ ದರ್ಭೆಯೇ’ ಎಂಬುದಾಗಿಯೂ ಕಟ್ಟಬೇಕು. ದೇವತೆಯನ್ನು ಹೇಳಲಿಚ್ಛಿಸುವಲ್ಲಿ (ವಕ್ತುಮ್ ಇಚ್ಛಾ ವಿವಕ್ಷಾ - ಹೇಳುವ ಇಚ್ಛೆಯೇ ವಿವಕ್ಷೆ) ಪೂಷಶಬ್ದವನ್ನೇ ಪ್ರಯೋಗಿಸಿದ ಬಗ್ಗೆ ಅಭಿಪ್ರಾಯವನ್ನು ತೈ.ಬ್ರಾಹ್ಮಣವು ಹೀಗೆ ಹೇಳಿದೆ -‘ಯಜ್ಞಮಾಡುವವನಿಗೆ
ಪುಷ್ಟಿಯನ್ನೇ ಉಂಟುಮಾಡುತ್ತದೆ’.

೧೩) ಸ ತೇ ಮಾऽऽಸ್ಥಾತ್ -
>ವಿನಿಯೋಗ: -
ಕಲ್ಪ: -‘ಸ ತೇ ಮಾऽऽಸ್ಥಾತ್ ಇತಿ ಪುರಸ್ತಾತ್ ಪ್ರತ್ಯಞ್ಚಂ (ಪ್ರತ್ಯಂಚಂ) ಗ್ರಂಥಿಮ್ ಉಪಗೂಹತಿ ಪಶ್ಚಾತ್ ಪ್ರಾಞ್ಚಂ (ಪ್ರಾಂಚಂ) ವಾ’ ಇತಿ |
ಈ ಮಂತ್ರೋಚ್ಚಾರಪೂರ್ವಕ, ಯಜಮಾನನು ಪತ್ನಿಯ ಮುಂದಿನಿಂದ ದರ್ಭರಜ್ಜುವಿನ ಹಿಂದಿನ ಗಂಟನ್ನು ಒಳಕ್ಕೆ ತಿರುಗಿಸಿ ಅಡಗಿಸುತ್ತಾನೆ; ಅನಂತರ ಮುಂದಿನ ಗಂಟನ್ನೂ ಅಂತರ್ಮುಖಿಯಾಗಿಸುತ್ತಾನೆ.
>ಅರ್ಥ-ವಿವರಣೆ -
ಹೇ ದರ್ಭ! ತವ ನಿರ್ಬಂಧಕಾರೀ ಸ: ರಜ್ಜುಗ್ರಂಥಿ: ಚಿರಂ ಮಾ ತಿಷ್ಠತು | ದರ್ಭೋಪದ್ರವ-ಪರಿಹಾರರೂಪ-ನಿಷೇಧಫಲಮ್ ಆಹ -‘ಸ ತೇ ಮಾऽऽಸ್ಥಾತ್ ಇತಿ ಆಹ ಅಹಿಗ್ಂಸಾಯೈ (ಅಹಿಂಸಾಯೈ)’(ತೈ.ಬ್ರಾ.) ಇತಿ |
ಎಲೈ ದರ್ಭೆಯೇ! ನಿನ್ನ ಬೆಳವಣಿಗೆಗೆ ತಡೆಯಾಗಿರುವ ಆ ಹಗ್ಗದ ಗಂಟು ದೀರ್ಘಾವಧಿ ಇರದಿರಲಿ. ದರ್ಭೆಗೆ ಆಗುವ ಉಪದ್ರವ(ತೊಂದರೆ)ದ ಪರಿಹಾರರೂಪವಾದ ನಿಷೇಧಫಲವನ್ನು ತೈ.ಬ್ರಾಹ್ಮಣವು ಹೇಳಿದೆ - ‘ಈ ಮಂತ್ರವನ್ನು ದರ್ಭೆಗಾಗುವ ಹಿಂಸೆಯ ನಿವಾರಣೆಗೆ (ಅ-ಹಿಂಸೆಗಾಗಿ) ಹೇಳಿದೆ’ ಎಂದು.
ಗೂಹನಂ ವಿಧತ್ತೇ - ‘ಪಶ್ಚಾತ್ ಪ್ರಾಞ್ಚಾಮ್ ಉಪಗೂಹತಿ | ಪಶ್ಚಾತ್ ವೈ ಪ್ರಾಚೀನಗ್ಂ ರೇತೋ ಧೀಯತೇ | ಪಶ್ಚಾತ್ ಏವ ಅಸ್ಮೈ ಪ್ರಾಚೀನಗ್ಂ ರೇತೋ ದಧಾತಿ’(ತೈ.ಬ್ರಾ.) ಇತಿ | ತಂ ಗ್ರಂಥಿವಿಶೇಷಂ ರಜ್ಜೋ: ಅಗ್ರತ: ದ್ವಿಗುಣೀಕೃತ್ಯ ರಜ್ಜುವೇಷ್ಟನ-ಸ್ಥಾನಾತ್ ಪಶ್ಚಾತ್ ಆಕೃಷ್ಯ ಯಥಾ ಪ್ರಾಕ್ ಅಗ್ರಂ ಭವತಿ ತಥಾ ಉಪಗೂಹೇತ್ | ಪುರುಷ: ಅಪಿ ಪಶ್ಚಾತ್ ಅವಸ್ಥಾಯ ಪ್ರಾಚೀನಗ್ಂ(ಪ್ರಾಚೀನಂ) ರೇತ: ಸಿಂಚತಿ | ತಸ್ಮಾತ್ ಈದೃಷಂ ಗೂಹನಮ್ ಅಪತ್ಯಾರ್ಥಿ-ಯಜಮಾನಾರ್ಥಂ ರೇತಸ್ಸಿಂಚನರೂಪೇಣ ಪರ್ಯವಸ್ಯತಿ ||
ಹುದುಗಿ(ಅಡಗಿ)ಸುವುದನ್ನು ವಿಧಿಸುತ್ತಾನೆ - ‘ಅನಂತರ ಮುಂದಿನ ಗಂಟನ್ನು ಒಳಕ್ಕೆ ಮಾಡುತ್ತಾನೆ. ಅನಂತರವೇ ಅಲ್ಲವೇ ಮುಂದಿನಿಂದ ಹಿಂದಕ್ಕೆ ರೇತಸ್ಸನ್ನು(ಪುರುಷವೀರ್ಯವನ್ನು) ಪತ್ನಿಯಲ್ಲಿ ಇಡಲಾಗುತ್ತದೆ? ಅನಂತರವೇ ಹೌದು’(ತೈ.ಬ್ರಾಹ್ಮಣ). ಆ ದರ್ಭೆಯ ಹಗ್ಗದ ತುದಿಯಿಂದ ೨ ಬಾರಿ ಗಂಟನ್ನು  ಬಿಗಿದು, ಕಟ್ಟಿದ ಜಾಗದಿಂದ ಹಿಂದಕ್ಕೆ ಎಳೆದು, ದರ್ಭೆಯ ತುದಿಯು ಎದುರಿಗೆ ಬರುವಂತೆ ಮಾಡಿ ಗಂಟನ್ನು ಒಳಮುಖವಾಗಿ ಮಾಡಿ ಮುಚ್ಚಬೇಕು. ಪುರುಷನೂ ಸಹ ಪತ್ನಿಯು ಮಲಗಿದ ನಂತರ ಮುಂದಿನಿಂದ ರೇತಸ್ಸನ್ನು ಪತ್ನಿಯ ಗುಪ್ತಾಂಗದೊಳಕ್ಕೆ ಸಿಂಚನಮಾಡುತ್ತಾನೆ. ಆದ್ದರಿಂದ, ಇಂತಹ ಅಡಗಿಸುವಿಕೆಯು ಸಂತಾನಾರ್ಥಿಯಾದ ಯಜಮಾನನಿಗಾಗಿ ರೇತಸ್ಸಿಂಚನರೂಪವಾಗಿ ಕೊನೆಗೊಳ್ಳುವುದು. (ಉಪಗೂಹನಮ್ ಎಂದರೆ ಅಪ್ಪಿಕೊಳ್ಳುವಿಕೆ, ಕುಚಮರ್ದನ ಎಂದೂ ಅರ್ಥವಿದೆ. ಇದು ಗುಪ್ತವಾಗಿ ಮಾಡಬೇಕಾದುದರಿಂದಲೂ ಅತಿ ಸಾಮೀಪ್ಯದಿಂದ ಮಾತ್ರ ಸಾಧ್ಯವಾದುದರಿಂದಲೂ ಈ ಪದಪ್ರಯೋಗವು ಅನ್ವರ್ಥಕವಾಗುತ್ತದೆ. ಉಪ- ಹತ್ತಿರ, ಗೂಹನ- ಗುಪ್ತ. ಕಾಮಶಾಸ್ತ್ರದ ೧ ಮೂಲವನ್ನು ಇಲ್ಲಿ ಕಾಣಬಹುದು. ಮೈಥುನಕ್ರಿಯೆಯ ಮೊದಲು ಮುನ್ನಲಿವು/ sexual foreplay ಯ ಮಹತ್ವದ ಸೂಚನೆ ಇದಾಗಿರಬಹುದು. ಇನ್ನೊಂದು ಆಯಾಮದಲ್ಲಿ, ದರ್ಭರಜ್ಜುವಿನ ಗಂಟನ್ನು ಒಳಮುಖವಾಗಿಸುವುದು ಹಗ್ಗ ಹಾಗೂ ಧರಿಸಿದ ವಸ್ತ್ರವನ್ನು ಬಿಚ್ಚದಂತೆ ದೃಢವಾಗಿಸುವ ತಂತ್ರವೂ ಹೌದು. ಮಗದೊಂದು ಮುಖದಲ್ಲಿ ನೋಡಿದರೆ, ಅಜ್ಞಾನಗ್ರಂಥಿಯನ್ನಡಗಿಸುವ ಮೂಲಕ ಜ್ಞಾನೋದಯಕ್ಕೆ ದಾರಿಮಾಡಿಕೊಡುವ ಪ್ರಕ್ರಿಯೆಯಾಗಿಯೂ ಕಂಡುಬರಬಹುದು.)

೧೪) ಇಂದ್ರಸ್ಯ ತ್ವಾ ಬಾಹುಭ್ಯಾಮ್ ಉದ್ಯಚ್ಛ -
>ಅನ್ವಯಾರ್ಥ: -
ತ್ವಾ (ತ್ವಾಮ್/ದರ್ಭಮ್) ಇಂದ್ರಸ್ಯ ಬಾಹುಭ್ಯಾಮ್ ಉದ್ಯಚ್ಛ
ನಿನ್ನನ್ನು (ದರ್ಭೆಯೇ! ನಿನ್ನನ್ನು) ಇಂದ್ರದತ್ತವಾದ ಬಾಹುಗಳ ಶಕ್ತಿಯಿಂದ ಬೆಳೆಸಿ ನೀನು ಮೇಲೆ ಬರುವಂತೆ ಆಗಲಿ.
>ವಿವರಣೆ -
ಇಂದ್ರಶಬ್ದಪ್ರಯೋಗೇಣ ಇಂದ್ರದತ್ತಸ್ಯ ಸಾಮರ್ಥ್ಯಸ್ಯ ಸಿದ್ಧಿಂ ದರ್ಶಯತಿ - ‘ಇಂದ್ರಿಯಮೇವ ಯಜಮಾನೇ ದಧಾತಿ’(ತೈ.ಬ್ರಾ.) ಇತಿ ||
“ಇಂದ್ರ” ಪದಪ್ರಯೋಗದಿಂದ ಇಂದ್ರನಿಂದ ನೀಡಲ್ಪಟ್ಟ ಸಾಮರ್ಥ್ಯದ ಸಿದ್ಧಿಯಾಗುವಿಕೆಯನ್ನು ತೈತ್ತಿರೀಯ ಬ್ರಾಹ್ಮಣದಲ್ಲಿ ತೋರಿಸುತ್ತಾನೆ - “ಈ ಮಂತ್ರವು ಇಂದ್ರಿಯಶಕ್ತಿಯನ್ನೇ ಯಜಮಾನನಲ್ಲಿ ಇಡುತ್ತದೆ” ಎಂಬುದಾಗಿ.
>ವಿನಿಯೋಗ: -
ಕಲ್ಪ: - “ಇಂದ್ರಸ್ಯ ತ್ವಾ ಬಾಹುಭ್ಯಾಮ್ ಉದ್ಯಚ್ಛ ಇತಿ ಉದ್ಯಚ್ಛತೇ ||”
ಬೌಧಾಯನಕಲ್ಪಸೂತ್ರದ ಪ್ರಕಾರ ಈ ಮಂತ್ರದಿಂದ ದರ್ಭೆಯನ್ನು ಬೆಳೆಸುತ್ತಾನೆ/ ನೀಡುತ್ತಾನೆ.

೧೫) ಬೃಹಸ್ಪತೇರ್ಮೂರ್ಧ್ನಾ ಹರಾಮಿ -
>ವಿನಿಯೋಗ: -
ಕಲ್ಪ: - “ಬೃಹಸ್ಪತೇರ್ಮೂರ್ಧ್ನಾ ಹರಾಮಿ ಇತಿ ಶೀರ್ಷಂ ಅಧಿನಿಧತ್ತೇ |”
ಈ ಮಂತ್ರದಿಂದ ತಲೆಯನ್ನು ಬಾಗಿಸುತ್ತಾನೆ ಅಥವಾ ಗಮನಿಸುತ್ತಾನೆ ಎಂದು ಕಲ್ಪಸೂತ್ರವು ಹೇಳಿದೆ.
>ಪ್ರತಿಪದಾರ್ಥ: -
ಬೃಹಸ್ಪತೇ: - ಬೃಹಸ್ಪತಿ/ಪರಬ್ರಹ್ಮನ,
ಮೂರ್ಧ್ನಾ - ಕಿರೀಟ/ಶಿರಸ್ಸಿನಿಂದ,
ಹರಾಮಿ - (ದರ್ಭೆಯನ್ನು) ಕೊಯ್ದು ಸಂಗ್ರಹಿಸುತ್ತೇನೆ.
>ತಾತ್ಪರ್ಯಮ್ -
ದರ್ಭೆ ಬೆಳೆದ ನೆಲ/ಭೂಮಿಯು ಬೃಹಸ್ಪತಿ/ಪರಬ್ರಹ್ಮನ ಕಿರೀಟ/ಶಿರವಿದ್ದಂತೆ  ಪರಮ ಪವಿತ್ರ. ದರ್ಭೆಯು ಆ ಪರಮಾತ್ಮನ ಕೇಶದಂತೆ ಪುಣ್ಯತಮವಾದುದು. ಅಂತಹ ದರ್ಭೆಯನ್ನು ಅತಿಜಾಗರೂಕತೆಯಿಂದ, ನೋವಾಗದಂತೆ ಕತ್ತರಿಸಿ ಜೋಪಾನವಾಗಿ ತೆಗೆದಿಡುತ್ತೇನೆ.
>ವಿವರಣಮ್/ವ್ಯಾಖ್ಯಾ -
ಪ್ರಾಶಸ್ತ್ಯಾತ್ ಬ್ರಹ್ಮತ್ವೇನ ಬೃಹಸ್ಪತಿಂ ಸ್ತೌತಿ - “ಬ್ರಹ್ಮ ವೈ ದೇವಾನಾಂ ಬೃಹಸ್ಪತಿ: | ಬ್ರಹ್ಮಣಾ ಏವ ಏನತ್ ಹರತಿ |” ಇತಿ (ತೈ.ಬ್ರಾ.) |
ಬೃಹಸ್ಪತಿಯನ್ನು ಅವನ ಯೋಗ್ಯತೆಯಿಂದಾಗಿ ಪರಬ್ರಹ್ಮನೇ ಎಂಬುದಾಗಿ ತೈ.ಬ್ರಾಹ್ಮಣವು ಸ್ತುತಿಸುತ್ತದೆ - “ದೇವತೆಗಳಿಗೆ ದೇವಗುರು ಬೃಹಸ್ಪತಿಯೇ ಪರಬ್ರಹ್ಮಸ್ವರೂಪನು. ಅಂತಹ ಪರಬ್ರಹ್ಮನ ಶಕ್ತಿಯಿಂದಲೇ ಇದನ್ನು(ದರ್ಭೆಯನ್ನು) ಸಂಗ್ರಹಿಸುತ್ತಾನೆ”.

೧೬) ಉರ್ವಂತರಿಕ್ಷಮನ್ವಿಹಿ -
>ವಿನಿಯೋಗ: -
ಕಲ್ಪ: - “ಏತಿ ಉರ್ವಂತರಿಕ್ಷಮ್ ಅನ್ವಿಹಿ  ಇತಿ” ಇತಿ |
ಬೌಧಾಯನಕಲ್ಪಸೂತ್ರದ ಪ್ರಕಾರ  ಈ ಮಂತ್ರದಿಂದ ತಲೆಬಾಗಿದ/ಶಿರಧ್ಯಾನನಿರತನಾದ ಯಜಮಾನನು ಪುನ: ತಲೆಯೆತ್ತಿ ಧ್ಯಾನದಿಂದ ಬಹಿರ್ಮುಖನಾಗುತ್ತಾನೆ.
>ಪದ-ವಿಭಾಗ: ಅನ್ವಯ: ಚ -  ಉರು ಅಂತರಿಕ್ಷಮ್ ಅನ್ವಿಹಿ |
ಉರು- ಅತ್ಯುತ್ತವಾಗಿ, ವಿಸ್ತಾರವಾಗಿ, ಹುಲುಸಾಗಿ;
ಅಂತರಿಕ್ಷಮ್- ನೆಲದಿಂದ ಮೇಲು ಮೇಲಕ್ಕೆ;
ಅನ್ವಿಹಿ- ಬೆಳೆದು ಬಾ (ಹೇ ದರ್ಭೆಯೇ!).
>ಅರ್ಥ-ವಿವರಣಮ್ -
ಏತಿ ಆಗಚ್ಛೇತ್ ಇತ್ಯರ್ಥ: | ಹೇ ದರ್ಭ! ವಿಸ್ತೀರ್ಣತ್ವಾತ್ ಅಂತರಿಕ್ಷಂ ಗಮನಾಯ ಅನುಕೂಲಮ್ ಅತ: ತ್ವಂ ಗಚ್ಛ | ಇಹಿ ಇತಿ ಅಸ್ಯ ಶಬ್ದಸ್ಯ ವಿವಕ್ಷಾಂ ದರ್ಶಯತಿ- “ಉರ್ವಂತರಿಕ್ಷಮನ್ವಿಹಿ ಇತಿ ಆಹ ಗತ್ಯೈ”(ತೈ.ಬ್ರಾ.) ಇತಿ |
‘ಏತಿ’ ಅಂದರೆ ಬರಲಿ ಎಂಬ ಅರ್ಥವನ್ನು ಕೊಡುತ್ತದೆ. ಎಲೈ ದರ್ಭೆಯೇ! ವಿಸ್ತಾರವಾಗಿ ವಿಶಾಲವಾದ ಭೂಪ್ರದೇಶದಲ್ಲಿ ನೀನು ಹಬ್ಬಿದರೆ ಮೇಲೆ ಆಕಾಶಕ್ಕೆ ಹಬ್ಬಲು ನಿನಗೆ ಯಥೇಚ್ಛವಾದ ಗಾಳಿ-ಬೆಳಕು ಸಿಗಲು ಅನುಕೂಲವೇ ಹೊರತು, ಒಂದೇ ಕಡೆ ಒತ್ತೊತ್ತಾಗಿ ಬೆಳೆದರೆ ಈ ಅವಕಾಶವಿರದು. ಆದ್ದರಿಂದ ನೀನು ಹೋಗು, ಎಲ್ಲೆಡೆ ಹಬ್ಬು.  ‘ಅನ್ವಿಹಿ’ (ಅನು+ಇಹಿ) ಎಂಬಲ್ಲಿನ ‘ಇಹಿ’ - ಈ ಶಬ್ದವು ಏನನ್ನು ಹೇಳಬಯಸುತ್ತದೆಂದು (ವಕ್ತುಮ್ ಇಚ್ಛಾ ವಿವಕ್ಷಾ, ಹೇಳಲು ಇಚ್ಛೆ- ವಿವಕ್ಷೆ) ತೋರಿಸುತ್ತಾನೆ - ‘ಹೀಗೆ ಹೇಳಿರುವುದು ಗತಿ/ಚಲನೆಯ ದ್ಯೋತಕವಾಗಿ’ ಎಂದು.

೧೭) ದೇವಂಗಮಮಸಿ -
>ವಿನಿಯೋಗ: -
ಕಲ್ಪ: - “ಏತಿ ಉತ್ತರೇಣ ಗಾರ್ಹಪತ್ಯಮ್ ಅನಧ: ಸಾದಯತಿ ದೇವಂಗಮಮ್  ಅಸಿ ಇತಿ” ಇತಿ |
ಯಜಮಾನನು ಉತ್ತರದಿಕ್ಕಿನಿಂದ ಹತ್ತಿರ ಬರುತ್ತಾನೆ; ಅನಂತರ ಗಾರ್ಹಪತ್ಯಾಗ್ನಿದ್ಯೋತಕವಾದ ದರ್ಭೌಪಾಸನಾ ದಂಡವನ್ನು ಬರಿಯ ನೆಲದಲ್ಲಿಡದೆ ಮಣೆಯಂತಹ ಪೀಠದಲ್ಲಿಡುತ್ತಾನೆ. (ಅನ್+ ಅಧ:, ಕೆಳಗೆ ಅಲ್ಲ)
>ಅರ್ಥ-ವಿವರಣೆ - (ತೈ.ಬ್ರಾ.)
“ದೇವಾನ್ ಏವ ಏನತ್(ಏತತ್) ಗಮಯತಿ”-
ಇದು (ದರ್ಭೆಯು) ನಮ್ಮನ್ನು ದೇವತೆಗಳಲ್ಲಿಗೇ ಕೊಂಡೊಯ್ಯುತ್ತದೆ. ದರ್ಭೆಯನ್ನೂ ಪಲಾಶದಂತೆ ಏಕೆ ಕೆಳಗಿಡಬಾರದೆಂದರೆ- “ಗರ್ಭಾಣಾಂ ಧೃತ್ಯಾ ಅಪ್ರಪಾದಾಯ” , ಧೃತಿಯೆಂದರೆ ಇಷ್ಟಿ, ಅರ್ಥಾತ್ ಕಾಮ್ಯ ಯಜ್ಞ, ಇಷ್ಟಾರ್ಥಪೂರೈಕೆಗಾಗಿ ಮಾಡುವಂಥದ್ದು. ಇದರಿಂದ (ಧೃತ್ಯಾ) ಗರ್ಭವು ಪತನವಾಗದಂತೆ ರಕ್ಷಿತವಾಗುತ್ತದೆ. ಅದಕ್ಕಾಗಿ, ಸಂಜ್ಞಾರೂಪವಾಗಿ ದರ್ಭೆಯನ್ನೂ ಕೆಳಗೆ ಪತನವಾಗದಂತೆ ಮೇಲಿಡಬೇಕು. “ತಸ್ಮಾತ್ ಗರ್ಭಾ: ಪ್ರಜಾನಾಮ್ ಅಪ್ರಪಾದುಕಾ:”- ಅದರಿಂದಾಗಿ ಸಂತಾನರೂಪೀ ಗರ್ಭಗಳು ಪತನವಾಗದವುಗಳಾಗುತ್ತವೆ (ಸ್ಥಿರವಾಗುತ್ತವೆ). “ಉಪರಿ ಇವ ಹಿ ಸುವರ್ಗ: ಲೋಕ: | ಸುವರ್ಗಸ್ಯ ಲೋಕಸ್ಯ ಸಮಷ್ಟ್ಯೈ ||”- ಉತ್ತಮ ಸಮಾಜವು ಮೇಲ್ಮಟ್ಟದಲ್ಲಿರುತ್ತದೆಯಲ್ಲವೇ? ಅಂತಹ ಉತ್ತಮ ಸಮಾಜದಿಂದ ಕೂಡಿದ ಜಗತ್ತಿನ ನಿರ್ಮಾಣಕ್ಕೋಸ್ಕರ, ಸತ್ಸಂತಾನಪ್ರಾಪ್ತಿಯ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ.

ಅತ್ರ ವಿನಿಯೋಗಸಂಗ್ರಹಃ-
ಯಜ್ಞಸ್ಯೇತ್ಯಗ್ನಿಮಾಮಂತ್ರ್ಯ ಪ್ರತ್ಯು ದಾತ್ರಸ್ಯ ತಾಪನಮ್ |
ಪ್ರೇಯಂ ಜಪತಿ ದೇವಾನಾಂ ದರ್ಭಸೀಮಾऽಥ ಮುಷ್ಟಿತಃ ||
ದೇವೇತಿ ದರ್ಭಾನ್ಸಂಯಮ್ಯ ಪರ್ವ ಸಂಸ್ಥಾಪ್ಯ ದಾತ್ರಕಮ್ |
ಆಚ್ಛೇಚ್ಛಿಂದ್ಯಾದ್ದೇವ ಮೂಲಂ ಸ್ಪೃಶೇತ್ಸ್ವಂ ಚ ಸಹೇತ್ಯತಃ ||
ಪೃಥಿವ್ಯುಪರ್ಯವಸ್ಥಾಪ್ಯಾದಿತ್ಯೈ ರಜ್ಜುಂ ಪ್ರಸಾರಯೇತ್ |
ಸುಸಂಭೃದ್ದರ್ಭಾಃ ಸಂಭಾರ್ಯಾ ಇಂದ್ರಾಣ್ಯಾ ಇತಿ ಬಂಧನಮ್ ||
ಪೂಷಾ ಗ್ರಂಥಿಃ ಸ ತೇ ಗೂಹ ಇಂದ್ರೋದ್ಯಮ್ಯ ಬೃಹಸ್ಪತೇಃ |
ಮೂರ್ಧ್ನ್ಯಾಧಾಯೋರ್ವೇತ್ಯ ಚೋರ್ಧ್ವಂ ಸ್ಥಾಪಯೇದ್ದೇವಮಿತ್ಯತಃ |
ಅನುವಾಕೇ ದ್ವಿತೀಯೇऽಸ್ಮಿನ್ನುಕ್ತಾ ಏಕೋನವಿಂಶತಿಃ ||

ದ್ವಿತೀಯಾನುವಾಕದ ಭಟ್ಟಭಾಸ್ಕರಭಾಷ್ಯ

೧) ಯಜ್ಞಸ್ಯ ಘೋಷದಸಿ -
ಅಶ್ವಪರ್ಶುಮ್ ಅಸಿದಂ ವಾ ಅಭಿಮಂತ್ರಯತೇ - ಯಜ್ಞಸ್ಯ ಇತಿ || “ಚತುರ್ಥ್ಯರ್ಥೇ ಬಹುಲಂ ಛಂದಸಿ” ಇತಿ ತಾದರ್ಥ್ಯೇ ಷಷ್ಠೀ | ಬರ್ಹಿರ್-ಲವನ-ದ್ವಾರೇಣ ಮಯಾ ಏವ ಶೀಘ್ರಂ ಯಜ್ಞಂ ಸಂಪಾದಯಸ್ವ ಇತಿ ಯಜ್ಞಾರ್ಥಮ್ ಅಘೋಷಯತ್ | ಅಸಿ ಇತಿ ಸ್ತುತಿ: | ಘೋಷತ್ ಇತಿ ಧನ-ನಾಮ ಇತಿ ಕೇಚಿತ್ ||
ಈ ಮಂತ್ರದಿಂದ ಅಶ್ವಪಕ್ಕೆಲುಬಿನ ಪರಶುವನ್ನು ಅಥವಾ ಕತ್ತಿಯನ್ನು ಅಭಿಮುಖವಾಗಿ ಮಂತ್ರಿಸುತ್ತಾನೆ. ಇಲ್ಲಿ ಯಜ್ಞಸ್ಯ ಎಂದು ಷಷ್ಠೀವಿಭಕ್ತಿ ಬಂದಿರುವುದು ಯಜ್ಞಾಯ (ಯಜ್ಞಕ್ಕಾಗಿ) ಎಂಬ ಚತುರ್ಥೀವಿಭಕ್ತಿಯ ಅರ್ಥಕವಾಗಿ ಎಂದು “ಚತುರ್ಥ್ಯರ್ಥೇ ಬಹುಲಂ ಛಂದಸಿ” ಎಂಬ ಸೂತ್ರದ ಪ್ರಕಾರ ತಿಳಿಯಬಹುದು. ಬಹುಲಂ ಎಂದರೆ ಬಹೂನ್ ಅರ್ಥಾನ್ ಲಾತಿ, ಪ್ರಚುರ/ಸರ್ವವಿದಿತ/ಸಾಮಾನ್ಯ ಎಂದರ್ಥ. ಛಂದಸಿ ಎಂದರೆ ವೇದದಲ್ಲಿ ಎಂದರ್ಥ. ಯಜಮಾನನು “ನನ್ನಿಂದಲೇ ದರ್ಭೆಕತ್ತರಿಸುವ ಮೂಲಕ ಶೀಘ್ರವಾಗಿ ಯಜ್ಞವನ್ನು ನಡೆಸುವಂತೆ ಮಾಡು” ಎಂದು ಯಜ್ಞಾರ್ಥವಾಗಿ ಘೋಷಿಸಿದನು. ಅಸಿ ಎಂದರೆ ನೀನೇ ಯಜ್ಞಸಿದ್ಧಿಗೆ ಕಾರಣವಾಗಿದ್ದಿ ಎಂಬ ಆಯುಧದ ಪ್ರಶಂಸೆ. ಘೋಷತ್ ಎಂದರೆ ಸಂಪತ್ತಿನ ಹೆಸರೆಂದೂ ಕೆಲವರು ಅಭಿಪ್ರಾಯ ಪಡುತ್ತಾರೆ.
೨) ಪ್ರತ್ಯುಷ್ಟಗ್ಂ ರಕ್ಷ: ಪ್ರತ್ಯುಷ್ಟಾ ಅರಾತಯ: -
ಗಾರ್ಹಪತ್ಯೇ ಪ್ರತಿತಪತಿ - ಪ್ರತ್ಯುಷ್ಟಮ್ ಇತಿ ಗಾಯತ್ರ್ಯೇಕಪದಾ॥ ಯತ್ ಅತ್ರ ಛಿದ್ರಾನ್ವೇಷಿ-ರಕ್ಷ: ತತ್ ಅನೇನ ಪ್ರತಿತಪನೇನ ಪ್ರತ್ಯುಷ್ಟಂ ಪ್ರತಿಮುಖೀಕೃತ್ಯ ದಗ್ಧಮಸ್ತು | ಉಷ ದಾಹೇ | ಕಿಂ ಚ ಅರಾತಯೋsಪಿ ಪ್ರತ್ಯುಷ್ಟಾ: ಸಂತು | ರಾತಯ: ಧನಸ್ಯ ದಾತಾರ: ಸುಹೃದ: | ಅತ: ಅನ್ಯೇ ಅರಾತಯ: ॥
ಈ ಏಕಪದಾಗಾಯತ್ರೀಚ್ಛಂದೋಮಂತ್ರದಿಂದ ಗಾರ್ಹಪತ್ಯಾಗ್ನಿಯಲ್ಲಿ (ಕತ್ತಿಯನ್ನು ) ಬಿಸಿಮಾಡುತ್ತಾನೆ. ಇಲ್ಲಿ ಯಾವ ದುರ್ಬಲ ಕ್ಷೇತ್ರವನ್ನು ಹುಡುಕಿ ದುಷ್ಟಶಕ್ತಿಗಳು ಒಳಬರಲು ಯತ್ನಿಸುವುವೋ, ಅವೆಲ್ಲಾ ಈ ತಾಪದೆಡೆಗೆ ಸಿಲುಕಿ ಉರಿಯಲಿ. ಪ್ರತ್ಯುಷ್ಟ ಎಂಬಲ್ಲಿನ (ಪ್ರತಿ+ಉಷ್ಟ) ಉಷ ಧಾತುವು ದಹನಾರ್ಥಕವಾದದ್ದು. ಅಂತೆಯೇ, ದುಷ್ಟರೂ ಶತ್ರುಗಳೂ ಕೂಡ ದಹಿಸಿ ಹೋಗಲಿ. ರಾತಯಃ ಎಂದರೆ ಧನದ ದಾನಿಗಳು, ಸಹೃದಯೀಮಿತ್ರರು. ಇದಲ್ಲದವರು “ಅರಾತಯಃ”.
೩) ಪ್ರ ಇಯಮ್ ಅಗಾತ್ ಧಿಷಣಾ ಬರ್ಹಿ: ಅಚ್ಛ ಮನುನಾ ಕೃತಾ ಸ್ವಧಯಾ ವಿತಷ್ಟಾ ತೇ ಆವಹಂತಿ ಕವಯ: ಪುರಸ್ತಾತ್ ದೇವೇಭ್ಯ: ಜುಷ್ಟಮ್ ಇಹ ಬರ್ಹಿ: ಆಸದೇ -
ಗಾರ್ಹಪತ್ಯಪ್ರದೇಶಾತ್ ಆಹವನೀಯಂ ಗಚ್ಛತಿ - ಪ್ರೇಯಮ್ ಇತಿ ತ್ರಿಷ್ಟುಭಾ || ಇಯಮ್ ಅಶ್ವಪರ್ಶುಃ ಪ್ರಾಗಾತ್ ಪ್ರಾಚೀಂ ಗಚ್ಛತಿ | “ಛನ್ದಸಿ ಲುಙ್-ಲಙ್-ಲಿಟ:” ಇತಿ ಲುಙ್ | ಧಿಷಣಾ ಧೃಷ್ಟಾ ಲವನೇ ಸಮರ್ಥಾ | ಬರ್ಹಿಃ ಅಚ್ಛ ಆಪ್ತುಂ ಮನುನಾ ಪ್ರಜಾಪತಿನಾ ಸರ್ವಸ್ಯ ಕರ್ತ್ರಾ ಕೃತಾ | ಸ್ವಧಯಾ ಅನ್ನೇನ ಮಾಂಸ (ಸಾನ್ನಾಯ್ಯ) ಲಕ್ಷಣೇನ ಕರಣೇನ ಮನುನಾ ಕರ್ತ್ರಾ ಕೃತಾ | ವಿತಷ್ಟಾ ವಿಶೇಷೇಣ ತನೂಕೃತಾ ಅತಿನಿಶಿತಾ | ಕಸ್ಮಾತ್ ಪುನಃ ಇಯಂ ಪ್ರಾಚೀಂ ಗಚ್ಛತಿ ಇತಿ ಆಹ - “ತೇ ಇತಿ | ತೇ ಖಲು ಕವಯಃ ಮೇಧಾವಿನಃ ಯಜ್ಞಕರ್ಮವಿದಃ ಪುರಸ್ತಾತ್ ಪೂರ್ವಸ್ಯಾಃ ದಿಶಃ ಬರ್ಹಿಃ ಆವಹನ್ತಿ | ದೇವೇಭ್ಯಃ ಜುಷ್ಟಂ , ಏವಂ ಹಿ ಕ್ರಿಯಮಾಣೇ ದೇವಾನಾಂ ಪ್ರಿಯಂ ಭವತಿ ಇತಿ ||
ಈ ತ್ರಿಷ್ಟುಪ್ ಛಂದಸ್ಸಿನ ಮಂತ್ರದಿಂದ ಗಾರ್ಹಪತ್ಯಾಗ್ನಿ (ಗೃಹಪತಿಯ ಅಗ್ನಿಯ ನಿತ್ಯಾನುಷ್ಠಾನ ಮಾಡುವ ಸ್ಥಳ)ಯಿದ್ದಲ್ಲಿಂದ ಆಹವನೀಯಾಗ್ನಿ (ನೈಮಿತ್ತಿಕ ಹವನದ ಸ್ಥಳ)ಯೆಡೆಗೆ (ದರ್ಭೆ ಕೊಯ್ಯುವ ಆಯುಧವು) ಹೋಗುತ್ತದೆ (ಒಯ್ಯಲ್ಪಡುತ್ತದೆ). ಈ ಅಶ್ವಪಕ್ಕೆಯ ಆಯುಧವು ದರ್ಭಾಹರಣಕ್ಕಾಗಿ ಯಜ್ಞವೇದಿಯ ಮುಂಭಾಗದಿಂದ ಪೂರ್ವೋತ್ತರದ ಅವಾಂತರದಿಕ್ಕಿನೆಡೆಗೆ ಹೋಗುತ್ತದೆ. “ಛನ್ದಸಿ ಲುಙ್-ಲಙ್-ಲಿಟ:” ಎಂಬ ನಿಯಮದಂತೆ “ಅಗಾತ್” (ಹೋಗಿತ್ತು) ಎಂದು ಲುಙ್ ಲಕಾರ ಪ್ರಯೋಗವಾಗಿದೆ. (ಛನ್ದಸಿ - ವೇದದಲ್ಲಿ). ಧಿಷಣಾ = ಧೃಷ್ಟಾ, ಕತ್ತರಿಸುವುದರಲ್ಲಿ ಸಮರ್ಥವಾದುದು. ಇದು ದರ್ಭೆಯನ್ನು ಪಡೆಯಲೋಸುಗ, ಸರ್ವವನ್ನೂ ಸೃಷ್ಟಿಸುವ ಪ್ರಜಾ-ಪತಿಯಾದ, ಮನ್ವಂತರಾಧಿಪನಾದ ಮನುವಿನಿಂದ ವಿನಿರ್ಮಿತವಾದದ್ದು. ವಿತಷ್ಟಾ = ವಿಶೇಷವಾದ ಆಕಾರವುಳ್ಳದ್ದೂ, ಬಹುತೀಕ್ಷ್ಣ/ಹರಿತವಾದುದು. ಯಾಕಾಗಿ ಪುನಃ ಇದು ಪೂರ್ವಕ್ಕೆ ಹೋಗುತ್ತದೆ? ಎಂದು ಹೇಳಿದೆ - “ತೇ = ಕವಿಗಳೂ, ಮೇಧಾವಿಗಳೂ, ಯಜ್ಞಕರ್ಮವನ್ನು ಬಲ್ಲವರೂ ಆದಂಥವರು ಪೂರ್ವದಿಕ್ಕಿನಿಂದ ದರ್ಭೆಯನ್ನು ತರುತ್ತಾರೆ. ಹೀಗೆ ಮಾಡುವುದರಿಂದ ದೇವತೆಗಳಿಗೆ ಆಪ್ಯಾಯಮಾನವಾಗುತ್ತದೆ; ಅವರು ಪ್ರಸನ್ನರೂ, ವರದರೂ ಆಗುವರು” ಎಂದು.

ವೇದಿಂ ಪ್ರತ್ಯವೇಕ್ಷಮಾಣಃ ಮನ್ತ್ರಶೇಷಂ ಬ್ರವೀತಿ - ಇಹ ಅಸ್ಯಾಂ ಖಲು ವೇದ್ಯಾಂ , ತತ್ ಲವಿಷ್ಯಮಾಣಂ ಬರ್ಹಿಃ , ಆಸದೇ ಆಸಾದಯಿತವ್ಯಮ್ | ಏವಮ್ ಇದಮ್ ಅರ್ಹತಿ ||

“ಇಹ ಬರ್ಹಿರಾಸದೇ” - ಯಜ್ಞಕ್ಕಾಗಿ ವಿಶೇಷವಾಗಿ ಸಿದ್ಧಪಡಿಸಿದ, ಪವಿತ್ರಿತ ಭೂಮಿ(ಯಜ್ಞವೇದಿ)ಯ ಕಡೆಗೆ ನೋಡುತ್ತಾ , ಉಳಿದಿರುವ ಈ ಮಂತ್ರವನ್ನು ಪಠಿಸುತ್ತಾನೆ - ಇಹ= ಈ ಯಜ್ಞವೇದಿಯಲ್ಲಾದರೋ, ಆ ಕತ್ತರಿಸಲ್ಪಡುವ ದರ್ಭೆಯು, ಸಾಕಷ್ಟು ತರಿಸಿಡಲ್ಪಡಬೇಕು; ಹೀಗೆ, ಇದು (ದರ್ಭೆಯು) ಯಜ್ಞಕ್ಕೆ (ಪ್ರಮಾಣ ಹಾಗೂ ಗುಣಮಟ್ಟಗಳೆರಡರಲ್ಲೂ) ಯೋಗ್ಯವಾದುದಾಗುತ್ತದೆ.
೪) ದೇವಾನಾಂ ಪರಿಷೂತಮ್ ಅಸಿ -
ಪ್ರಸ್ತರಾರ್ಥಾನ್ ದರ್ಭಾನ್ ಪ್ರತಿಗೃಹ್ಣಾತಿ - ದೇವಾನಾಂ ಪರಿಷೂತಮ್ ಅಸಿ ಇತಿ || ಚತುರ್ಥ್ಯರ್ಥೇ ಷಷ್ಠೀ | ದೇವಾರ್ಥಂ ಪರಿಷೂತಂ ಪರಿಗೃಹೀತಮ್ ಅಸಿ , ನ ಆತ್ಮಾರ್ಥಮ್ | ಅತಃ ಮಾಮ್ ಅಯಂ ವೃಥಾ ಏವ ಹನಿಷ್ಯತಿ ಇತಿ ನ ಉದ್ವೇಜಿತವ್ಯಮ್ (ಉದ್ವಿಜಿತವ್ಯಮ್) ||
ಈ ಮಂತ್ರದಿಂದ ಪ್ರಸ್ತರಣಕ್ಕೆ / ಉಪಸ್ತರಣಕ್ಕೆ ಬೇಕಾದ ದರ್ಭೆಗಳನ್ನು ಪಡೆಯುತ್ತಾನೆ. ಚತುರ್ಥೀವಿಭಕ್ತಿಯ ಅರ್ಥ(ಇಗೆ, ದೇವರಿಗೆ)ದಲ್ಲಿ ಷಷ್ಠೀ(ಅ, ದೇವರ) ಪ್ರಯೋಗವಾಗಿದೆ. ದೇವರಿಗಾಗಿ ನೀನು (ದರ್ಭೆಯು) ಪರಿಗೃಹೀತವಾಗಿರುವೆ, ನನಗಾಗಿ ಅಲ್ಲ. ಆದ್ದರಿಂದ, ‘ ನನ್ನನ್ನು ಇವನು ಸುಮ್ಮನೇ ಹಿಂಸಿಸುವನು ’ ಎಂದು (ನೀನು/ದರ್ಭೆಯು) ಉದ್ವೇಗಕ್ಕೊಳಗಾಗಬಾರದು.
೫) ವರ್ಷವೃದ್ಧಮ್ ಅಸಿ -
ದರ್ಭಸ್ತಂಬಮ್ ಉನ್ಮಾರ್ಷ್ಟಿ - ವರ್ಷವೃದ್ಧಮಸಿ ಇತಿ || ವರ್ಷೇಣ ವರ್ಧಿತಮ್ ಅಸಿ ||
ಈ ಮಂತ್ರದಿಂದ ದರ್ಭೆಕಟ್ಟನ್ನು , ದರ್ಭೆಗಳೆಲ್ಲದರ ತುದಿಗಳನ್ನು ಸೇರಿಸಿ ಹಿಡಿದು ಸರಿಪಡಿಸುತ್ತಾನೆ. (ಹೇ ದರ್ಭೆಯೇ! ನೀನು ಹಿಂದಿನ ತೀರ್ಥಾಮಾವಾಸ್ಯೆಯಂದು ಕೊಯ್ಯಲ್ಪಟ್ಟರೂ) ಒಂದು ವರ್ಷದಲ್ಲೇ (ಪುನ: ಮೊದಲಿನಂತೆಯೇ) ಬೆಳೆದಿರುವಿ.
೬) ದೇವಬರ್ಹಿಃ ಮಾ ತ್ವಾ ಅನ್ವಕ್ ಮಾ ತಿರ್ಯಕ್ ಪರ್ವ ತೇ ರಾಧ್ಯಾಸಮ್ -
ಅಸಿದಾದಿನಾ ಬರ್ಹಿಃ ಸಂಶ್ಲೇಷಯತಿ - ದೇವಬರ್ಹಿಃ ಇತಿ ॥ ದೇವಾನಾಂ ಬರ್ಹಿಃ ತಲ್ಪಭೂತಮ್ | ಅನ್ವಕ್ ಪರ್ವಣಃ ಅಧಸ್ತಾತ್ | ತಿರ್ಯಕ್ ತಿರಶ್ಚೀನಮ್ | ಯತ್ರ ಕ್ವಾಪಿ ಏವಂ ತ್ವಾ ಮಾ ಅಚ್ಛಿದಮ್ | ‘ ಅಹಿಂಸಾಯೈ ’ ಇತಿ ಬ್ರಾಹ್ಮಣದರ್ಶನಾತ್ , ‘ಆಚ್ಛೇತ್ತಾ’ ಇತಿ ವಕ್ಷ್ಯಮಾಣತ್ವಾತ್ ಚ ಮಾ-ಶಬ್ದೇನ ಛೇದನಂ ನಿಷಿಧ್ಯತೇ ಇತಿ ವೇದಿತವ್ಯಮ್ | ಕಸ್ಮಾತ್ ಪುನಃ ಅನ್ವಕ್-ಛೇದಾದಿ ವರ್ಜ್ಯತೇ ಇತಿ ಆಹ - ಪರ್ವ-ಇತ್ಯಾದಿ | ತೇ ತವ ಖಲು ಪರ್ವ ಪ್ರರೋಹಸ್ಥಾನಂ ರಾಧ್ಯಾಸಂ ,ಪುನಃ ಅಪಿ ಪ್ರರೋಹಾರ್ಥಮ್ ಅವಿನಷ್ಟಂ ಸ್ಥಾಪಯಾಮಿ ಇತಿ ಇಯಮ್ ಆಶೀಃ ॥
ಈ ಮಂತ್ರದಿಂದ , (ತುದಿಹಿಡಿದ) ದರ್ಭೆಯನ್ನು ಶಸ್ತ್ರಾದಿಗಳಿಂದ ಕತ್ತರಿಸಿ ಸರಿಪಡಿಸುತ್ತಾನೆ. ದರ್ಭೆಯು ದೇವತೆಗಳ ಹಾಸಿಗೆಯೆನಿಸಿದೆ. ದರ್ಭೆಯ ಗಂಟಿನ ಅಧೋಭಾಗದಿಂದ (ಅನ್ವಕ್=)ಉದ್ದುದ್ದವಾಗಿಯಾಗಲೀ, (ತಿರ್ಯಕ್=)ಅಡ್ಡಡ್ಡ/ವಕ್ರವಾಗಿಯಾಗಲೀ ಎಲ್ಲೆಂದರಲ್ಲಿ - ಈ ತರಹ ನಿನ್ನನ್ನು ಛೇದಿಸಲಾರೆ. ‘ ಅಹಿಂಸೆಗಾಗಿ ’ ಎಂದು ಬ್ರಾಹ್ಮಣದಲ್ಲಿ ಕಂಡುಬರುವುದರಿಂದ ಮತ್ತು ‘ಛೇದಿಸಬಾರದ’ ಎಂಬ ಹೇಳಿಕೆಯಿಂದ, ಮಾ-ಶಬ್ದಪ್ರಯೋಗದಿಂದ ಛೇದನವು ನಿಷೇಧಿಸಲ್ಪಡುತ್ತದೆ ಎಂದು ತಿಳಿಯಲ್ಪಡಬೇಕು. ಯಾಕಾಗಿ ಪುನಃ ಗಂಟಿನ ಉದ್ದಸೀಳುವಿಕೆ ಇತ್ಯಾದಿಗಳು ವರ್ಜ್ಯ ಮುಂತಾಗಿ ಹೇಳುತ್ತಾನೆ? ನಿನ್ನ ಗಂಟು/ಗಿಣ್ಣನ್ನು ಪುನಃ ಬೆಳೆಯಲೋಸುಗ ನಾಶವಾಗದಂತೆ ಉಳಿಸುತ್ತೇನೆಂದು ಈ ಹಾರೈಕೆ.
೭) ಆಚ್ಛೇತ್ತಾ ತೇ ಮಾ ರಿಷಮ್ -
ಆಚ್ಛಿನತ್ತಿ - ಆಚ್ಛೇತ್ತಾ ಇತಿ ॥ ಯಸ್ಮಾತ್ ಅಹಂ ವಿಧಾನೇನ ತವ ಛೇತ್ತಾ , ನ ತು ವೃಥಾ , ತಸ್ಮಾತ್ ಅಹಂ ಮಾ ರಿಷಂ, ವಿನಾಶಂ ಮಾ ಗಾಮ್ ॥
ಈ ಮಂತ್ರದಿಂದ (ದರ್ಭೆಯನ್ನು) ಕತ್ತರಿಸುತ್ತಾನೆ. ಯಾವ ವಿಧಿಯಂತೆ ನಾನು ನಿನ್ನನ್ನು ಕತ್ತರಿಸುತ್ತೇನೋ, ಅದರ ಹೊರತು ಸುಮ್ಮನೆ ಅಕಾರಣವಾಗಿ ಅಲ್ಲವೋ, ಆದ್ದರಿಂದ ನಾನು ವಿನಾಶವನ್ನು ಹೊಂದದೆ ಇರುವಂತಾಗಲಿ.
೮) ದೇವಬರ್ಹಿಃ ಶತವಲ್-ಶಂ ವಿರೋಹ -
ಆಚ್ಛಿನ್ನಾನ್ ಅಭಿಮೃಷತಿ - ದೇವಬರ್ಹಿಃ ಇತಿ ॥ ಹೇ ದೇವಾನಾಂ ಬರ್ಹಿಃ! ಶತವಲ್-ಶಮ್ ಅನೇಕಪ್ರರೋಹಣಂ ಯಥಾ ತಥಾ ವಿರೋಹ ॥
ತುಂಡರಿಸಿದ ದರ್ಭೆಗಳನ್ನು ಸ್ಪರ್ಶಿಸುತ್ತಾನೆ ಈ ಮಂತ್ರದಿಂದ. ಎಲೈ ದೇವಕಾರ್ಯಾರ್ಥವಾದ ದರ್ಭೆಯೇ! ನೂರಾರು ಶಾಖೆಗಳಾಗಿ ಅನೇಕವಾಗಿ ಅನಂತವಾಗಿ ಹೇಗೆಯೋ ಹಾಗೆ ಮೇಲೆದ್ದು ಬಾ, ಹುಲುಸಾಗಿ ಬೆಳೆ.
೯) ಸಹಸ್ರವಲ್ಶಾಃ ವಿ ವಯಗ್ಂ ರುಹೇಮ -
ಆತ್ಮಾನಂ ಪ್ರತಿ ಅಭಿಮೃಷತಿ - ‛ಸಹಸ್ರವಲ್ಶಾಃ ’ ಇತಿ ತ್ರಿಷ್ಟುಭೈಕಪದಯಾ ॥ ವಯಮಪಿ ಸಹಸ್ರವಲ್ಶಾಃ ಪುತ್ರಪೌತ್ರಾದ್ಯನೇಕಪ್ರರೋಹವನ್ತಃ ವಿರುಹೇಮ ವಿರೂಢಾ ಭೂಯಾಸ್ಮ ॥
‘ಸಹಸ್ರವಲ್ಶಾಃ ’ ಎಂಬ ತ್ರಿಷ್ಟುಭೈಕಪದ (ತ್ರಿಷ್ಟುಭ್+ಏಕಪದ) ಛಂದಸ್ಸಿನ ಮಂತ್ರದಿಂದ ತನ್ನನ್ನು ಮುಂದಿನಿಂದ ಸ್ಪರ್ಶಿಸಿಕೊಳ್ಳುತ್ತಾನೆ. ನಾವೂ ಕೂಡ (ವಯಮ್ ಅಪಿ) ಸಾವಿರಾರು ಶಾಖೆ/ಕವಲುಗಳಾಗಿ, ಮಕ್ಕಳು-ಮೊಮ್ಮಕ್ಕಳಾಗಿ ಅನೇಕ ಸಂತತಿಗಳಾಗಿ ವಿಶೇಷವಾಗಿ ಬೆಳೆಯುತ್ತೇವೆ/ರೂಢಮೂಲರಾಗುತ್ತೇವೆ/ಬೇರೂರುತ್ತೇವೆ/ತಳವೂರುತ್ತೇವೆ/ನೆಲೆನಿಲ್ಲುತ್ತೇವೆ.
೧೦) ಪೃಥಿವ್ಯಾಃ ಸಂಪೃಚಃ ಪಾಹಿ -
ಪ್ರಸ್ತರಂ ನಿದಧಾತಿ - ‘ಪೃಥಿವ್ಯಾಃ’- ಇತಿ ॥ ಸಂಪೃಚನ್ತೀತಿ ಸಂಪೃಚಃ | ಪೃಥಿವೀಸಂಪೃಕ್ತಾನ್ ಅಸ್ಮಾನ್ ಪಾಹಿ ದಿವಿಷ್ಠಃ (ದಿವಿ+ಸ್ಥಃ) ತ್ವಮ್ , ಉಪರಿ ನಿಧಾನಾತ್ ॥
ಈ ಮಂತ್ರದಿಂದ ವೇದಿಯ ಸುತ್ತ ದರ್ಭೆಯ ಪರಿಸ್ತರಣ (ಇಡುವಿಕೆ) ವನ್ನು ಮಾಡುತ್ತಾನೆ/ಇಡುತ್ತಾನೆ. ಸಂಪೃಚಃ - ಒಂದನ್ನೊಂದು ಆತುಕೊಂಡಿರುವ/ತಾಗಿಕೊಂಡಿರುವ/ಹೊಂದಿಕೊಂಡಿರುವ/ಅವಲಂಬಿಸಿರುವ. ಭೂಮಿಯ ಮೇಲಿರುವ ನಮ್ಮನ್ನು ರಕ್ಷಿಸು, ಮೇಲಿರುವ ನೀನು (ದರ್ಭೆಯು); ನಿನ್ನನ್ನು ಗೌರವಪೂರ್ವಕ ಹಾಗೂ ಹಾಳಾಗದಂತೆ ಮೇಲಿಡುವುದರಿಂದಾಗಿ ನಮ್ಮನ್ನು ರಕ್ಷಿಸು.
೧೧) ಸುಸಂಭೃತಾ ತ್ವಾ ಸಂಭರಾಮಿ -
ಸಂಭರತಿ - ಸುಸಂಭೃತೇತಿ ॥ ಸುಷ್ಠು ಸಂಭ್ರಿಯತೇ ಅನಯಾ ಇತಿ ಸುಸಂಭೃತ್ | ತಾದೃಶ್ಯಾ ರಜ್ಜ್ವಾ ತ್ವಾ ತ್ವಾಂ ಸಂಭರಾಮಿ, ಇತರಮುಷ್ಟಿಭಿಃ ಸಹ ಭರಾಮಿ (ಭೃಞ್ ಭರಣೇ; to carry) ॥
ಈ ಮಂತ್ರದಿಂದ ಕಟ್ಟುತ್ತಾನೆ. ಚೆನ್ನಾಗಿ ಹಿಡಿದಿಡಲ್ಪಡುತ್ತದೆ ಇದರಿಂದ -ಎಂಬುದರಿಂದಾಗಿ (ಹಗ್ಗವು) ಸುಸಂಭೃತ್ ಎನ್ನಲ್ಪಟ್ಟಿದೆ. ತಯಾ, ಸುಸಂಭೃತಾ | ಅದರಿಂದ, ಚೆನ್ನಾಗಿ ಬಿಗಿಹಿಡಿಯುವ (ದಾರದಿಂದ) | ಅಂತಹ ಹಗ್ಗದಿಂದ ನಿನ್ನನ್ನು (ದರ್ಭೆಯನ್ನು) ಸರಿಯಾಗಿ ಕಟ್ಟುತ್ತೇನೆ; ಬಿಗಿಯಾಗಿ ಮುಷ್ಟಿ ಹಿಡಿದು ಕಟ್ಟುತ್ತೇನೆ.
೧೨) ಅದಿತ್ಯೈ ರಾಸ್ನಾ ಅಸಿ -
      ರಾಸ್ನಾಂ ಕರೋತಿ - “ ಅದಿತ್ಯೈ ” ಇತಿ ॥ ಅಖಂಡನೀಯಾ ಪೃಥಿವೀ ಅದಿತಿಃ | ರಾಸ್ನಾ ಶುಲ್ಬಂ ಅದಿತ್ಯಾಃ ರಾಸ್ನಾ ತ್ವಮ್ ಅಸಿ, ಯಾಮ್ ಅದಿತಿಃ ಅಕರೋತ್ ಇತಿ ಸ್ತುತಿಃ | ಸಾಮರ್ಥ್ಯಾತ್ ಚ ಅಯಂ ಮಂತ್ರಃ ಸಂಭರಣಮಂತ್ರಾತ್ ಪೂರ್ವಃ ದ್ರಷ್ಟವ್ಯಃ ॥
ಈ ಮಂತ್ರದಿಂದ (ದರ್ಭೆಯ) ಸೊಂಟಪಟ್ಟಿಯನ್ನು ತಯಾರಿಸುತ್ತಾನೆ. ಭೇದಿಸಬಾರದ/ಖಂಡ ಮಾಡಬಾರದ/ತುಂಡರಿಸಬಾರದ/ಅಖಂಡವಾಗಿರಬೇಕಾದ ಪೃಥಿವಿಯೇ ಅದಿತಿ. ಅದಿತಿಯ/ಪೃಥ್ವಿಯ ಆಧಾರ-ಕಟಿಸೂತ್ರ ನೀನಾಗಿರುವೆ, ಯಾವ ಇದನ್ನು ಅದಿತಿಯು ( ತನ್ನ ಸೊಂಟಪಟ್ಟಿಯಾಗಿ) ಮಾಡಿಕೊಂಡಳೆಂದು (ದರ್ಭೆಯ) ಪ್ರಶಂಸೆ ( ಇದಾಗಿದೆ ). ಈ ಮಂತ್ರವು ಅದರ ಶಕ್ತಿ/ಅರ್ಥ/ವಿನಿಯೋಗದ ಆಧಾರದಲ್ಲಿ ಹಿಂದಿನ ಮಂತ್ರ (ಸಂಭರಣ ಮಂತ್ರ/೧೧ನೆಯದು)ಕ್ಕಿಂತ ಮೊದಲೇ ನೋಡಲ್ಪಡಬೇಕು (ಪರಿಗಣಿಸಲ್ಪಡಬೇಕು).  
೧೩) ಇಂದ್ರಾಣ್ಯೈ ಸನ್ನಹನಮ್ -
ಸನ್ನಹ್ಯತಿ - ‘ಇಂದ್ರಾಣ್ಯೈ’ ಇತಿ ॥ ಇಂದ್ರಸ್ಯ ಪತ್ನ್ಯಾಃ ಸನ್ನಹನಂ ಸಂಯಮನಮ್ ಅಸಿ ಇತಿ ಸ್ತುತಿಃ | ‘ಇಂದ್ರಾಣೀ ವಾ ಅಗ್ರೇ ದೇವತಾನಾಂ ಸಮನಹ್ಯತ’ ಇತಿ ಬ್ರಾಹ್ಮಣಮ್ | ಸನ್ನಹನಂ ಚ ಶುಲ್ಬಾಂತಯೋಃ ಸಂಶ್ಲೇಷಣಮ್ ; ಗ್ರಂಥಿಕರಣಸ್ಯ ವಿಧಾಸ್ಯಮಾನತ್ವಾತ್ ॥
ಈ ಮಂತ್ರದಿಂದ (ದರ್ಭೆಯ) ತುದಿಗಳನ್ನು ಸರಿಪಡಿಸುತ್ತಾನೆ. ಇಂದ್ರನ ಪತ್ನಿಯ ಸೊಂಟಪಟ್ಟಿ /ಕಟಿಯಲ್ಲಿ ಕಟ್ಟುವ ಹಗ್ಗ (ನೀನು/ದರ್ಭೆ) ಆಗಿರುವೆ ಎಂದು (ದರ್ಭೆಯನ್ನು ) ಸ್ತುತಿ (ಮಾಡಲಾಗಿದೆ). ‘ದೇವತೆಗಳ ಇಂದ್ರನೆನಿಸಿದವನ ಪತ್ನಿಯು ಹಿಂದೆ (ಪೂರ್ವಜನ್ಮದಲ್ಲಿ) (ದರ್ಭೆಯ ಹಗ್ಗವನ್ನು ತನ್ನ) ಕಟಿಸೂತ್ರವನ್ನಾಗಿ ಕಟ್ಟಿಕೊಂಡಳು’ ಎಂದು ಬ್ರಾಹ್ಮಣವು (ಹೇಳುತ್ತದೆ). ಹಗ್ಗದ ತುದಿಗಳ ಸರಿಪಡಿಸುವಿಕೆಯೇ ಸನ್ನಹನ; ಗಂಟುಹಾಕಲಿರುವುದರಿಂದಾಗಿ.
೧೪) ಪೂಷಾ ತೇ ಗ್ರಂಥಿಂ ಗ್ರಥ್ನಾತು -
ಗ್ರಂಥಿಂ ಕರೋತಿ -ಪೂಷಾ ಇತಿ ॥ ಪೂಷಾ ಆದಿತ್ಯಃ, ಸಃ ತೇ ತವ, ಗ್ರಂಥಿಂ ಗ್ರಥ್ನಾತು ಕರೋತು | ಸಾಮಾನ್ಯಗ್ರಂಥೇಃ ವಿಶೇಷಗ್ರಂಥಿಃ ಕರ್ಮ ॥
ಈ ಮಂತ್ರದೊಂದಿಗೆ ದರ್ಭೆಯ ಕಟಿಸೂತ್ರಕ್ಕೆ ಗಂಟು ಹಾಕುತ್ತಾನೆ. ಪೂಷಾ = ಆದಿತ್ಯ, ಸೂರ್ಯ. ಅವನು ನಿನ್ನ (ದರ್ಭರಜ್ಜುವಿನ), ಗಂಟು ಬಿಗಿಯಲಿ. ಮೊದಲು ಹಾಕಿದ ಸರಳಗಂಟಿಗೆ ಇನ್ನೊಂದು/ಇನ್ನಷ್ಟು ಸಂಕೀರ್ಣವಾದ, ಸುಲಭವಾಗಿ ಬಿಚ್ಚದ, ಬಿಗಿಯಾದ ವಿಶೇಷಗಂಟು ಹಾಕುವ ಕರ್ಮಕ್ಕೆ ಈ ಮಂತ್ರವು ವಿನಿಯೋಗವಾಗುವುದು.
೧೫) ಸಃ ತೇ ಮಾ ಆ-ಸ್ಥಾತ್ -
ಶುಲ್ಬಾಂತಮ್ ಉಪಗೂಹತಿ - ಸ ತೇ ಇತಿ ॥ ಸಃ ತೇ ತವ ಗ್ರಂಥಿಃ ಮಾ ಸ್ಥಾತ್ , ಮಾ ಪ್ರದೇಶಾಂತರಮ್ ಆತಿಷ್ಠತು , ಯಾವತ್ ವಿಮೋಕಂ ಶಿಥಿಲಃ ಮಾ ಭೂತ್ ॥

ಈ‌ ಮಂತ್ರಪೂರ್ವಕವಾಗಿ ದರ್ಭೆಯ ಹಗ್ಗದ ತುದಿಯನ್ನು ಸಮೀಪದಲ್ಲೇ ಹೂತಿಡುತ್ತಾನೆ. ಆ ನಿನ್ನ (ದರ್ಭರಜ್ಜುವಿನ) ಗಂಟು ಜಾರಿ ಬೇರೆಡೆಗೆ ಹೋಗದಿರಲಿ, ಸಡಿಲವಾಗಿ ಬಿಚ್ಚಿಕೊಳ್ಳದಿರಲಿ.

೧೬) ಇಂದ್ರಸ್ಯ ತ್ವಾ ಬಾಹುಭ್ಯಾಮ್ ಉದ್ಯಚ್ಛೇ -
ಬರ್ಹಿಃ ಉದ್ಯಚ್ಛತೇ - ಇಂದ್ರಸ್ಯ ಇತಿ ॥ ಇಂದ್ರಸ್ಯ ಬಾಹುಭ್ಯಾಂ ತ್ವಾ ತ್ವಾಮ್ ಉದ್ಯಚ್ಛೇ ಉತ್-ಕ್ಷಿಪಾಮಿ , ನ ಆತ್ಮೀಯಾಭ್ಯಾಮ್ ಇತಿ ಸ್ತುತಿಃ ॥
ಈ ಮಂತ್ರವು ದರ್ಭೆಯನ್ನು ಇಂದ್ರನಿಗರ್ಪಿಸಲು ವಿನಿಯೋಗವಾಗುತ್ತದೆ. ಇಂದ್ರನ ಬಾಹುಗಳಿಗೆ ನಿನ್ನನ್ನು(ದರ್ಭೆಯನ್ನು) ಅರ್ಪಿಸುತ್ತೇನೆ; ನನಗಾಗಿ ಅಲ್ಲ, ನನ್ನ ಆತ್ಮೀಯ ಬಂಧುಮಿತ್ರರಿಗಾಗಿ ಅಲ್ಲ ಎಂದು ದರ್ಭೆಯ ಮಹತ್ತ್ವವನ್ನು ಸ್ತುತಿಸಲಾಗಿದೆ.
೧೭) ಬೃಹಸ್ಪತೇಃ ಮೂರ್ಧ್ನಾ ಹರಾಮಿ -
ಶೀರ್ಷಂ ಅಧಿನಿಧತ್ತೇ - ಬೃಹಸ್ಪತೇಃ ಇತಿ ॥ ಬೃಹಸ್ಪತೇಃ ಏವ ಮೂರ್ಧ್ನಾ ತ್ವಾಂ ಹರಾಮಿ, ನ ಆತ್ಮೀಯೇನ ಇತಿ ಸ್ತುತಿಃ |
ಪ್ರಸ್ತುತ ಮಂತ್ರದಿಂದ ಯಜಮಾನನು ಶಿರಸ್ಸನ್ನು ಬಾಗಿಸುತ್ತಾನೆ/ ಗಮನಿಸುತ್ತಾನೆ. ಬೃಹಸ್ಪತಿಯ (ದೇವಗುರು) / ಪರಬ್ರಹ್ಮನ ಪ್ರಧಾನಭಾಗವಾದ ತಲೆಯಂತೆ, ಪೂರ್ವೋತ್ತರ ದಿಕ್ಕಿನ ಶ್ರೇಷ್ಠವಾದ ಪವಿತ್ರವಾದ ಸ್ಥಳದಿಂದ ನಿನ್ನನ್ನು(ದರ್ಭೆಯನ್ನು) ಸಂಗ್ರಹಿಸುತ್ತೇನೆ; ನನ್ನ / ಆತ್ಮೀಯರ ಯಾವುದೋ ಅಪವಿತ್ರಸ್ಥಳದಿಂದಲ್ಲ ಎಂದೂ ದರ್ಭೆಯ ಪಾವಿತ್ರ್ಯವನ್ನು ಹೊಗಳಲಾಗಿದೆ.

೧೮) ಉರ್ವಂತರಿಕ್ಷಮ್ ಅನ್ವಿಹಿ -
ಪ್ರತ್ಯಾಗಚ್ಛತಿ - ಉರು ಇತಿ ಗಾಯತ್ರ್ಯೈಕಪದಯಾ ॥ ಉರು ವಿಸ್ತೀರ್ಣಮ್ ಅನ್ತರಿಕ್ಷಮ್ ಅನ್ವಿಹಿ ಅನುಗಚ್ಛ | ಮಹಾನ್ ಪನ್ಥಾಃ , ಸುಖೇನ ಗಚ್ಛ ಇತಿ ಭಾವಃ ॥
ಈ ಏಕಪದಾಗಾಯತ್ರೀ ಛಂದೋಬದ್ಧ ಮಂತ್ರದಿಂದ ಯಜ್ಞಕರ್ತೃವು ಶಿರೋಧ್ಯಾನದಿಂದ ಬಹಿರ್ಮುಖನಾಗುತ್ತಾನೆ/ ಬಾಗಿದ ತಲೆಯನ್ನು ಯಥಾಸ್ಥಿತಿಗೆ ತರುತ್ತಾನೆ. ಹೇ ದರ್ಭೆಯೇ! ನೀನು ಚೆನ್ನಾಗಿ ಹಬ್ಬಿ, ವಿಸ್ತಾರವಾಗಿ ಮೇಲಕ್ಕೆ ಬೆಳೆದು ಬಾ. ನಿನ್ನ ಬೆಳವಣಿಗೆಯ ಹಾದಿ ವಿಸ್ತಾರವಾಗಿಯೂ, ಸುಗಮವಾಗಿಯೂ ಇರಲಿ ಎಂಬ ಧ್ವನಿ ಇಲ್ಲಿದೆ.
೧೯) ದೇವಂಗಮಮ್ ಅಸಿ -
ಉಪರಿ ಸಾದಯತಿ - ದೇವಂಗಮಮಸಿ ಇತಿ ॥ ದೇವಾನ್ ಗಚ್ಛತಿ ಇತಿ ದೇವಂಗಮಮ್ । ಶ್ವಃ ದೇವಗಾಮಿ ಅಸಿ, ಭವಿತಾ ಅಸಿ । ತತ್ರ ಹವಿಷಃ ಧಾರಣಾತ್ ಬರ್ಹಿಷಃ ದೇವಂಗಮತ್ವಂ ಭವಿತಾ ; ಪ್ರಸ್ತರಸ್ಯ ತು ಅಗ್ನೌ ಪ್ರಹರಿಷ್ಯಮಾಣತ್ವಾತ್ । “ದಿವಂ ಗಚ್ಛ ” ಇತಿ ಮಂತ್ರಲಿಂಗಮ್ । ‘ಅನಧಃ ಸಾದಯತಿ ’ ಇತಿ ಬ್ರಾಹ್ಮಣಮ್ ॥
ಈ ಮಂತ್ರದಿಂದ ದರ್ಭೆಯನ್ನು ನೆಲಕ್ಕೆ ತಾಗದಂತೆ ಮೇಲಿಡುತ್ತಾನೆ. ದೇವಂಗಮಮ್  — ಎಂದರೆ ದೇವರನ್ನು ಹೊಂದುತ್ತದೆ, ದೇವರಿದ್ದಲ್ಲಿಗೆ ಹೋಗುತ್ತದೆ ಎಂದರ್ಥ. ನಾಳೆ/ಸದ್ಯೋಭವಿಷ್ಯದಲ್ಲಿ ನೀನು (ದರ್ಭೆಯು) ದೇವನೆಡೆಗೆ ಹೋಗುವವನಾಗಿದ್ದಿ. ಅಲ್ಲಿ (ಯಜ್ಞದಲ್ಲಿ) ಘೃತರೂಪೀ ಹವಿಸ್ಸನ್ನು ಧರಿಸುವುದರಿಂದ ದರ್ಭೆಗೆ ದೇವಂಗಮತ್ವವು ಉಂಟಾಗುವುದು ; ದರ್ಭಪ್ರಸ್ತಾರವು ಅಗ್ನಿಯ ಮೂಲಕ ಒಯ್ಯಲ್ಪಡುವುದರಿಂದಾಗಿ. “ದಿವಂ ಗಚ್ಛ ”- ದೇವಲೋಕಕ್ಕೆ ಹೋಗು- ಎಂಬುದು ಸಂಹಿತೆಯ ಸೂಚನೆ. ನೆಲಕ್ಕೆ ತಾಗದಂತೆ ಮೇಲಿಡುತ್ತಾನೆ- ಎಂಬುದು ಬ್ರಾಹ್ಮಣೋಕ್ತಿ.

ಆಧ್ಯಾತ್ಮಿಕ ಭಾಷ್ಯ (ಕಾಂಡ1.ಪ್ರಪಾಠಕ1.ಅನುವಾಕ2)

ದೇವತೆಗಳಿಗಾಗಿ ಮಂತ್ರದಿಂದ ರೂಪಿಸಿದ ಆಸನ

(ಇದರಲ್ಲಿ, ಮಂತ್ರ ೧,೨,೪,೫,೬,೭,೮,೯,೧೦,೧೧,೧೨,೧೩,೧೪,೧೫,೧೬,೧೭,೧೯— ಇವು ಯಜುರ್ ಗದ್ಯಮಂತ್ರಗಳು. ಹೀಗೆ ಒಟ್ಟು ೧೬ ಯಜುಸ್ ಗಳು. ಉಳಿದ ೩ ಋಕ್ಕುಗಳು— ೩ನೆಯದು ತ್ರಿಷ್ಟುಪ್, ೮ನೆಯದು ಏಕಪದಾ ತ್ರಿಷ್ಟುಪ್, ಹಾಗೂ ೧೮ನೆಯದು ಏಕಪದಾ ಗಾಯತ್ರೀಚ್ಛನ್ದಸ್ಸಿನಲ್ಲಿವೆ.)

1. ಯಜ್ಞಸ್ಯ ಘೋಷದಸಿ - ಯಜ್ಞಾರಂಭವನ್ನು ಸಾರುತ್ತ, (ಹೇ ಮಂತ್ರವೇ!)  ನೀನು (ದೇವತೆಗಳ ಆಸನ) ಆಗು.
2. ಪ್ರತ್ಯುಷ್ಟಗ್ಂ ರಕ್ಷ: ಪ್ರತ್ಯುಷ್ಟಾ ಅರಾತಯ: - ರಾಕ್ಷಸನು ದಹಿಸಲ್ಪಟ್ಟಿದ್ದಾನೆ ; ಶತ್ರು (ದುಷ್ಟ ಶಕ್ತಿ) ಗಳೂ ದಹಿಸಲ್ಪಟ್ಟಿವೆ.
3. ಪ್ರೇಯಮಗಾದ್ಧಿಷಣಾ ಬರ್ಹಿರಚ್ಛ1 ಮನುನಾ ಕೃತಾ ಸ್ವಧಯಾ ವಿತಷ್ಟಾ2 ತ ಆವಹಂತಿ ಕವಯ: ಪುರಸ್ತಾದ್ದೇವೇಭ್ಯೋ ಜುಷ್ಟಮಿಹ ಬರ್ಹಿರಾಸದೇ3 -
1(1) ಪದಚ್ಛೇದ- ಪ್ರ ಇಯಮ್ ಅಗಾತ್ ಧಿಷಣಾ ಬರ್ಹಿಃ ಅಚ್ಛ  |
ಅನ್ವಯ- ಇಯಮ್ ಧಿಷಣಾ ಅಚ್ಛ ಬರ್ಹಿಃ ಪ್ರಾಗಾತ್ (ಪ್ರ+ಅಗಾತ್) |
ಈ ಬುದ್ಧಿಯು ಶುಭ್ರವಾದ ಬೆಳಕಿನೆಡೆಗೆ ಗಮಿಸಲಿ. ಮಾಯೆಯ ಆವರಣವನ್ನು ತೊರೆದು ಶುದ್ಧಜ್ಞಾನವನ್ನು ಹೊಂದಲಿ.
(2) ಪದಚ್ಛೇದ- ಪ್ರೇಯಮ್ ಅಗಾತ್  ಧಿಷಣಾ ಬರ್ಹಿಃ ಅಚ್ಛ  |
ಅನ್ವಯ- ಧಿಷಣಾ  ಅಚ್ಛ ಬರ್ಹಿಃ  ಪ್ರೇಯಮ್ ಅಗಾತ್  |
ಬುದ್ಧಿಯು ನಿಷ್ಕಳಂಕವಾದ ಐಹಿಕ ಪ್ರೇಯಸ್ಸನ್ನು ಹೊಂದುವತ್ತ ಹರಿಯಲಿ.
(3) ಅರಿವಿನ ಶಕ್ತಿ, ಧಿಷಣಾ, ಪವಿತ್ರವಾದ ಆಸನವನ್ನು ಸ್ವೀಕರಿಸಿದೆ.
2ಮಂತ್ರಕ್ಕೆ ಸಂಬಂಧಿಸಿದ್ದು ಮನು. ಮಂತ್ರಪೂರ್ವಕವಾಗಿ ವಿರಚಿತವಾದ ಆಸನವಿದು. ಸ್ವಧಾಕ್ಕನುಸಾರ ರಚನೆಗೊಂಡಿದೆ. ಸ್ವ-ಧಾ ಎಂದರೆ ತನ್ನ ಧಾರಣಾಶಕ್ತಿ. ಮಂತ್ರಪಾಠಕನು ತನ್ನ ಧಾರಣಾಶಕ್ತಿಗನುಸಾರ ಮಂತ್ರವನ್ನು ಪಠಿಸಿ ನಿರ್ಮಿಸಿದ ಮಂತ್ರಾಸನವಿದು. ಆದ್ದರಿಂದ, ಈ ಆಸನದಲ್ಲಿ ಪ್ರತಿಷ್ಠಿತವಾಗಿರುವುದು ಪಾಠಕನ ಧಿಷಣಾ/ಧೀಶಕ್ತಿ.
3ಪದಚ್ಛೇದ- ತೇ ಆವಹಂತಿ ಕವಯ: ಪುರಸ್ತಾತ್ ದೇವೇಭ್ಯಃ ಜುಷ್ಟಮ್ ಇಹ ಬರ್ಹಿಃ ಆಸದೇ |
ಅನ್ವಯಾರ್ಥ- ತೇ(ಆ), ಕವಯಃ (ವೇದವಿದರು), ಪುರಸ್ತಾತ್(ಯಜ್ಞದ ಆರಂಭದಲ್ಲಿ ಸ್ವಾಗತರೂಪವಾಗಿ ಪೂರ್ವದಿಕ್ಕಿನಲ್ಲಿ), ದೇವೇಭ್ಯಃ (ದೇವತೆಗಳಿಗೆ), ಜುಷ್ಟಮ್(ಪ್ರಿಯವಾದ), ಬರ್ಹಿಃ(ಅಗ್ನಿಯಷ್ಟು ಪವಿತ್ರವಾದ, ಸುಗಂಧಯುಕ್ತವಾದ, ದರ್ಭಾಸನ/ಮಂತ್ರಾಸನವನ್ನು),  ಇಹ (ಇಲ್ಲಿ/ಯಜ್ಞವೇದಿಯ ಬಳಿ), ಆಸದೇ(ಹಾಸುತ್ತಾರೆ.) |
4. ದೇವಾನಾಂ ಪರಿಷೂತಮಸಿ ವರ್ಷವೃದ್ಧಮಸಿ -
ಪದಚ್ಛೇದ-ಅನ್ವಯಾರ್ಥ-
ದೇವಾನಾಂ- ನೀನು (ಮಂತ್ರಾಸನರೂಪೀ ದೈವೀದರ್ಭೆ/ ಮಂತ್ರಸಮೂಹವಾದ ನೀನು), ದೇವತೆಗಳಿಂದಾಗಿ,
ಪರಿ ಸೂತಮ್ ಅಸಿ- ಅಸ್ತಿತ್ವಪಡೆದವನಾಗಿದ್ದಿ/ ಪ್ರಸೂತನಾಗಿದ್ದಿ / ಪ್ರೇರಿತನಾಗಿದ್ದಿ. (ವೇದಮಂತ್ರಗಳು ದೈವೀಸೃಷ್ಟಿಯಷ್ಟೆ? ಅಪೌರುಷೇಯವಲ್ಲವೆ?)
ವರ್ಷವೃದ್ಧಮ್ ಅಸಿ - ಅವರ ದೈವೀಕೃಪಾವರ್ಷದ ಸಿಂಚನದಿಂದ ಅಭಿವೃದ್ಧಿಹೊಂದುವವನಾಗಿರುವಿ. (ಋಷಿಗಳ ತಪಸ್ಸಿನಿಂದ ದೇವತೆಗಳು ಪ್ರಸನ್ನರಾಗಿ ಮತ್ತಷ್ಟು ಛಂದಸ್ಸು / ವೇದಮಂತ್ರಗಳ ದರ್ಶನ ಮಾಡಿಸುವರು.)
5. ದೇವಬರ್ಹಿರ್ಮಾ ತ್ವಾನ್ವಙ್ ಮಾ ತಿರ್ಯಕ್ -
ದೇವಬರ್ಹಿಃ - ಹೇ ದೈವೀದರ್ಭೆ / ದೈವೀ ಆಸನರೂಪೀ ಮಂತ್ರಸಮೂಹವೇ!,
ತ್ವಾ (ತ್ವಾಮ್)- ನಿನ್ನನ್ನು,
ಅನ್ವಕ್ ಮಾ- ಉದ್ದುದ್ದವಾಗಿ ತುಂಡರಿಸದಿರಲಿ (ಮಂತ್ರೋಚ್ಚಾರವು ಇಡಿಯಾಗಿರಲಿ, ವಾಕ್ಯ / ಮಂತ್ರಗಳು ಬಿಟ್ಟುಹೋಗದಿರಲಿ).
ತಿರ್ಯಕ್  ಮಾ - ಅಡ್ಡಡ್ಡವಾಗಿ ತುಂಡರಿಸದಿರಲಿ (ಮಂತ್ರೋಚ್ಚಾರವು ಒಂದೇ ರೀತಿಯ ಪದಪ್ರಯೋಗಗಳು ಮರುಕಳಿಸುವಂಥ ಕವಲುಗಳಲ್ಲಿ ತಪ್ಪಿಹೋಗಿ ಅಡ್ಡದಾರಿ ಹಿಡಿಯದಿರಲಿ).
6. ಪರ್ವ ತೇ ರಾಧ್ಯಾಸಮ್ -
ತೇ(ತವ) - ನಿನ್ನ,
ಪರ್ವ - ಗಂಟು(ಗಳನ್ನು ಮಾತ್ರ ಬೇರ್ಪಡಿಸಿ),
ರಾಧ್ಯಾಸಮ್ - ಆರಾಧನೆಗೆ ಬಳಸುತ್ತೇನೆ.
    ವಿವಿಧ ಮಂತ್ರಗಳ ಜೋಡಣೆಗಳೇ ಗಂಟುಗಳು. ಇಂಥ ಜೋಡಣೆಗಳನ್ನು ಮಾತ್ರ ಪ್ರತ್ಯೇಕಿಸಿ, ಪೂಜಾ-ಯಜ್ಞಾದಿ ದೇವತಾ ಉಪಾಸನೆಗಳಿಗೆ ಬಳಸಬೇಕೇ ಹೊರತು, ಮಂತ್ರಗಳನ್ನು ಅರ್ಧದಿಂದ ತುಂಡರಿಸಿ, ಅನರ್ಥಕ್ಕೆಡೆಮಾಡಿಕೊಡಬಾರದು.
7. ಆಚ್ಛೇತ್ತಾ ತೇ ಮಾ ರಿಷಮ್ -
ತೇ(ತವ)- ನಿನ್ನ,
ಆಚ್ಛೇತ್ತಾ - ಛೇದಕನು,
ಮಾ ರಿಷಮ್ - ಘಾಸಿಗೊಳಿಸದಿರಲಿ.
       ಮಂತ್ರಗಳನ್ನು ವಿವಿಧ ಪ್ರಯೋಗಗಳಿಗಾಗಿ ವಿಂಗಡಿಸುವವನು ಅನರ್ಥಕರವಾಗಿ ಬೇರ್ಪಡಿಸದಿರಲಿ. ಆ ಮೂಲಕ ನಿನ್ನ ಮೂಲ ಆಶಯಕ್ಕೆ ವಿರೋಧವಾಗಿ  ವೇದಪುರುಷನಾದ/ ಮಂತ್ರರೂಪೀ ಶಕ್ತಿಯಾದ ನಿನಗೆ ನೋವಾಗದಿರಲಿ.
8. ದೇವಬರ್ಹಿಃ ಶತವಲ್ಶಂ ವಿರೋಹ - ಹೇ ದೈವೀಮಂತ್ರರೂಪೀ ದರ್ಭಾಸನವೇ! ನೀನು ನೂರಾರು ಶಾಖೆಗಳಾಗಿ ಆರೋಹಿಸು/ ವರ್ಧಿಸು/ ಬೆಳೆ. ವೇದವು ಅನಂತಶಾಖೆಗಳಾಗಿ ಹಬ್ಬಲಿ ಎಂಬ ತಾತ್ಪರ್ಯ.
9. ಸಹಸ್ರವಲ್ಶಾ ವಿ ವಯಗ್ಂ ರುಹೇಮ-
ವಯಗ್ಂ (ವಯಂ)- ನಾವು,
ಸಹಸ್ರವಲ್ಶಾ - (ವೇದವನ್ನು)ಸಾವಿರಾರು ಶಾಖೆಗಳಾಗಿ ,
ವಿ-ರುಹೇಮ- ವಿಶೇಷ ಪ್ರಯತ್ನದಿಂದ ಬೆಳೆಸೋಣ.
10. ಪೃಥಿವ್ಯಾಃ ಸಂಪೃಚಃ ಪಾಹಿ - ಭೂಮಿಯೊಡನಿರುವ ನಮ್ಮ ಸಂಪರ್ಕವನ್ನು (ಭೌತಿಕ ಶರೀರವನ್ನು) ಸಂರಕ್ಷಿಸು.
11. ಸುಸಂಭೃತಾ ತ್ವಾ ಸಂಭರಾಮಿ - ನಿನ್ನನ್ನು (ಮಂತ್ರಾಸನದ ಮಂತ್ರಸಮೂಹವನ್ನು)ಸಂಭ್ರಮಾದರಗಳಿಂದ ಸಂಗ್ರಹಿಸುತ್ತೇನೆ.
12. ಅದಿತ್ಯೈ ರಾಸ್ನಾऽಸಿ - ನೀನು (ಮಂತ್ರಾಸನದ ಮಂತ್ರಸಮೂಹ) ಅನಂತಪರಬ್ರಹ್ಮದ ಶಕ್ತಿಸ್ವರೂಪೆಯಾದ ಅದಿತಿಯ ನಡುಪಟ್ಟಿಯಾಗಿರುವೆ.
13. ಇಂದ್ರಾಣ್ಯೈ ಸಂನಹನಮ್ - ನೀನು ಪ್ರತಿಯೊಬ್ಬರನ್ನೂ ಸ್ವ-ನಿಯಂತ್ರಿತಗೊಳಿಸುವ ಇಂದ್ರಾಣಿಯ ಶಕ್ತಿ / ಇಂದ್ರಿಯನಿಗ್ರಾಹಕ ಮನಃಶಕ್ತಿ.
14. ಪೂಷಾ ತೇ ಗ್ರಂಥಿಂ ಗ್ರಥ್ನಾತು - ಪೂಷನ್ನನು/ ಸವಿತೃವು ನಿನ್ನನ್ನು / ಇಂದ್ರಿಯಸಮೂಹವನ್ನು ,ನಿಯಂತ್ರಿಸುವಂತೆ ಗಂಟು ಹಾಕಿ ಬಂಧಿಸಲಿ / ಈ ಮಂತ್ರಸಮೂಹವನ್ನು ಆಸನರೂಪದಲ್ಲಿ ಬಂಧಿಸಲಿ.
15. ಸ ತೇ ಮಾ ಆ-ಸ್ಥಾತ್ -
(1) ಸಃ - ಅವನು (ಪೂಷನ್ನನು ನನ್ನ ಇಂದ್ರಿಯನಿಯಂತ್ರಣದ್ವಾರಾ),
ತೇ - ನಿನಗೆ (ಪರಮಾತ್ಮನಿಗೆ),
ಮಾ (ಮಾಮ್) - ನನ್ನನ್ನು (ನನ್ನ ಚಿತ್ತವನ್ನು),
ಸ್ಥಾತ್ - (ತಪೋ-ಧ್ಯಾನ-ಮಂತ್ರಾದಿದ್ವಾರಾ) ವಿಚಲಿತವಾಗದಂತೆ ಬಂಧಿಸಿ ನಿಲ್ಲಿಸಲಿ.
(2) ಸಃ - ಅವನು (ಪೂಷನ್ನನು),
ತೇ (ತವ) - ನಿನ್ನ (ಮಂತ್ರಾಸನದ ಗಂಟುಗಳನ್ನು),
ಮಾ ಸ್ಥಾತ್ - ಸಡಿಲವಾಗದಂತೆ ಬಿಗಿಹಿಡಿಯಲಿ.
ಮಂತ್ರಾನುಕ್ರಮ ಸಂಯೋಜನೆಯು ಪಠಣದ ವೇಳೆ ತಪ್ಪದಿರಲಿ.
16. ಇಂದ್ರಸ್ಯ ತ್ವಾ ಬಾಹುಭ್ಯಾಮುದ್ಯಚ್ಛೇ -
ತ್ವಾ (ತ್ವಾಮ್) - (ನಾನು) ನಿನ್ನನ್ನು (ದೈವೀದರ್ಭೆ/ಮಂತ್ರಾಸನವನ್ನು),
ಇಂದ್ರಸ್ಯ ಬಾಹುಭ್ಯಾಮ್ - ಇಂದ್ರನ ಬಾಹುಗಳಿಗೆ,
ಉದ್ಯಚ್ಛೇ (ಉತ್+ಯಚ್ಛೇ) - ಸಮರ್ಪಿಸುವೆ. (ದೇವತೆಗಳಿಗೆ ಕುಳಿತುಕೊಳ್ಳಲು).
17. ಬೃಹಸ್ಪತೇರ್ಮೂರ್ಧ್ನಾ ಹರಾಮಿ -
ದೇವಗುರು ಬೃಹಸ್ಪತಿಯ ಮಸ್ತಕದ ಮಾಧ್ಯಮದಿಂದ ಮಂತ್ರಾಸನವನ್ನು ಸಂಗ್ರಹಿಸುವೆ.
18. ಉರ್ವಂತರಿಕ್ಷಮನ್ವಿಹಿ -
ಅಂತರಿಕ್ಷದೆಲ್ಲೆಡೆ ಮಂತ್ರಾಸನವನ್ನು ಹೊತ್ತು ಮೆರೆಸುವೆ.
19. ದೇವಂಗಮಮಸಿ -
ನೀನು (ಮಂತ್ರಾಸನವು) ದೇವತೆಗಳೆಡೆಗೆ ಗಮಿಸುವವನಾಗಿರುವೆ.

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪