ಪುರುಷಸೂಕ್ತಭಾಷ್ಯಮ್ ೩

ಪುರುಷಸೂಕ್ತಭಾಷ್ಯಮ್ ೩ (ನಾರಾಯಣಾನುವಾಕಭಾಷ್ಯಮ್ ೩)


ಓಂ ಸಹಸ್ರಶೀರ್-ಷಾ ಪುರುಷಃ | ಸಹಸ್ರಾಕ್ಷಸ್ಸಹಸ್ರಪಾತ್ |
ಸ ಭೂಮಿಂ ವಿಶ್ವತೋ ವೃತ್ವಾ | ಅತ್ಯತಿಷ್ಠದ್ದಶಾಙ್ಗುಲಮ್ || ೧ ||

ಪ್ರತಿಪದಾರ್ಥ— ಸಹಸ್ರಶೀರ್ಷಾ— ಸಹಸ್ರಶಿರೋಭಿರ್ಯುಕ್ತಃ — ಸಾವಿರ (ಅನಂತ, ಅಸಂಖ್ಯ, ಅಗಣಿತ) ತಲೆಗಳಿಂದ ಕೂಡಿದ,
ಪುರುಷಃ — ಪರಮಪುರುಷಃ  — ಪರಮಪುರುಷನು / ಪುರುಷೋತ್ತಮನು,
ಸಹಸ್ರಾಕ್ಷಃ  — ಸಹಸ್ರನೇತ್ರಯುಕ್ತಃ  — ಸಾವಿರ (ಅನಂತ) ಕಣ್ಣುಗಳುಳ್ಳವನೂ, ಸಹಸ್ರಪಾತ್  — ಸಹಸ್ರಚರಣೋಪೇತಃ — ಸಾವಿರ (ಅನಂತ)ಪಾದಗಳುಳ್ಳವನು.
ಸಃ — ಪುರುಷಃ  — ಅವನು (ಅಂತಹ ಪುರುಷನು),
ಭೂಮಿಮ್  — ಪೃಥಿವೀಮ್  — ಧರೆಯನ್ನು,
ವಿಶ್ವತಃ  — ಸರ್ವತ್ರ  — ಎಲ್ಲೆಡೆಯಿಂದಲೂ,
ವೃತ್ವಾ  — ವ್ಯಾಪ್ಯ  — ವ್ಯಾಪಿಸಿ (ಹಬ್ಬಿ, ತುಂಬಿ, ಹರಡಿಕೊಂಡು),
ದಶಾಙ್ಗುಲಮ್  — ದಶ-ಅಙ್ಗುಲದೂರಂ ಯಥಾ ತಥಾ  — ಹತ್ತು ಅಂಗುಲಗಳಷ್ಟು ದೂರ ( ಹೇಗೆಯೋ ಹಾಗೆ,
ಅತ್ಯತಿಷ್ಠತ್  — (ಅತಿ-ಅತಿಷ್ಠತ್) ಅತೀತ್ಯ ವರ್ತತೇ  — ಮೀರಿ ನಿಂತಿರುವನು.

ತಾತ್ಪರ್ಯ—

ಸಹಸ್ರಶೀರ್ಷಾ ಇತಿ | ಶಿರಃ ಶಬ್ದಸ್ಯ ಶೀರ್ಷಶ್ಛನ್ದಸಿ (ಪಾಣಿನಿಸೂತ್ರ ೬.೧.೬೦) ಇತಿ ಸೂತ್ರೇಣ ಶೀರ್ಷನ್-ಆದೇಶಃ | ಸಹಸ್ರಶಬ್ದಃ ಅನನ್ತವಾಚೀ | ತಥಾ ಚ ಉಕ್ತಂ ಕೂರ್ಮಪುರಾಣೇ—
“ಸಹಸ್ರಮೂರ್ಧಾನಮನನ್ತಶಕ್ತಿಂ
ಸಹಸ್ರಬಾಹುಂ ಪುರುಷಂ ಪುರಾಣಮ್ |
ಶಯಾನಮಬ್ಧೌ ಸಲಿಲೇ ತವೈವ
ನಾರಾಯಣಾಖ್ಯಂ ಪ್ರಣತೋऽಸ್ಮಿ ರೂಪಮ್ ||”
ಇತಿ |

"ಸಹಸ್ರಶೀರ್ಷಾ" ಎಂಬ ಮಂತ್ರ. "ಶಿರಃ" ಶಬ್ದಕ್ಕೆ, "ವೇದಗಳಲ್ಲಿ ಶೀರ್ಷಃ" ಎಂಬ ಪಾಣಿನೀಯಸೂತ್ರದಿಂದ " ಶೀರ್ಷನ್ ಆದೇಶವಾಗಿ ಬಂದಿದೆ. "ಸಹಸ್ರ" ಶಬ್ದವು ಅನಂತವನ್ನು ಹೇಳುವಂಥದ್ದು. ಹೀಗಾಗಿಯೇ ಕೂರ್ಮಪುರಾಣದಲ್ಲಿ ಹೇಳಲಾಗಿದೆ—
"ಸಾಸಿರಮೊಗವುಳ್ಳ ಅಂತವಿಲ್ಲದ ಶಕ್ತಿ
ಸಾಸಿರತೋಳುಗಳ ಪುರಾಣಪುರುಷ |
ಸಾಗರವು ನಿನ್ನದೇ ಮಲಗಿರುವಿ ಅದರಲ್ಲಿ
ನಾರಾಯಣನೆ ನಿನ್ನ ನಮಿಸಿಹೆನು ನಾನು ||"
ಎಂಬುದಾಗಿ.

ಪುರುಷಃ ಪೂರ್ಣತ್ವಾತ್ ಪುರುಷಃ |
“ಮಹತಃ ಪರಮವ್ಯಕ್ತಮ್
ಅವ್ಯಕ್ತಾತ್ ಪುರುಷಃ ಪರಃ |
ಪುರುಷಾನ್ನ ಪರಂ ಕಿಞ್ಚಿತ್
ಸಾ ಕಾಷ್ಠಾ ಸಾ ಪರಾ ಗತಿಃ ||"
(ಕಠೋಪನಿಷತ್ ೩.೧೧)
“ತಥಾ ವಿದ್ವಾನ್ ನಾಮರೂಪಾದ್ ವಿಮುಕ್ತಃ
ಪರಾತ್ಪರಂ ಪುರುಷಮುಪೈತಿ ದಿವ್ಯಮ್ |”
(ಮುಣ್ಡಕೋಪನಿಷತ್ ೩.೮) ಇತ್ಯಾದಿ ಪುರುಷಶಬ್ದಾರ್ಥೋ ವರ್ಣಿತಃ ||

ಪುರುಷನೆಂದರೆ ಪೂರ್ಣನು. ಪೂರ್ಣತ್ವದಿಂದಾಗಿ ಪುರುಷತ್ವವು.
"ಮಹತ್ತತ್ತ್ವಕ್ಕಿಂತ ಮಿಗಿಲಹುದು ಅವ್ಯಕ್ತ
ತೋರದಿಹುದಕ್ಕಿಂತ ಪುರುಷ ಮೇಲು |
ಪುರುಷತತ್ತ್ವಕ್ಕಿಂತ ಮಿಗಿಲಿಲ್ಲ ಜಗದೊಳಗೆ
ಅದುವೆ ಬೆಳಕದುವೆ ಪರಗತಿಯಹುದು ದಿಟವು ||"
ಎನ್ನುತ್ತದೆ ಕಠೋಪನಿಷತ್. "ಕಾಷ್ಠಾ— ಕಾಶತೇ ದೀಪ್ಯತೇ ಅನೇನ ಇತಿ ಕಾಶೃ ದೀಪ್ತೌ ಧಾತುಃ "— ಕಾಷ್ಠಾ ಎಂದರೆ ಸ್ವಯಂ ಬೆಳಗುವಂತಹ ಪ್ರಕಾಶವುಳ್ಳದ್ದು, ಪರಂಜ್ಯೋತಿ, ಎಲ್ಲ ಬೆಳಕುಗಳ ಮೂಲಾಧಾರಜ್ಯೋತಿ. "ತಮೇವ ಭಾನ್ತಮನುಭಾತಿ ಸರ್ವಂ ತಸ್ಯ ಭಾಸಾ ಸರ್ವಮಿದಂ ವಿಭಾತಿ" ಎಂಬ ಇನ್ನೊಂದು ಉಪನಿಷದ್ವಾಣಿಯಂತೆ ಬೆಳಗುತ್ತಿರುವ ಆ ಪರತತ್ತ್ವವನ್ನನುಸರಿಸಿಯೇ ಇವೆಲ್ಲವೂ ಬೆಳಗುತ್ತವೆ; ಅದರ ಬೆಳಕಿನಿಂದಲೇ ಇದೆಲ್ಲವೂ ವಿಶೇಷವಾಗಿ ಪ್ರಕಾಶಿಸುತ್ತದೆ, ತೋರುತ್ತದೆ".

ಹೀಗೆ ತಿಳಿದ ಜ್ಞಾನಿಯು / ವಿದ್ವಾಂಸನು ನಾಮರೂಪಾದಿ (ಹೆಸರು, ಆಕಾರ ಮುಂತಾದ) ಉಪಾಧಿಗಳನ್ನು / ಪ್ರತ್ಯೇಕತೆಯಿಂದ ವಿಮುಕ್ತನಾಗಿ, ಬೆಳಗುತ್ತಿರುವ ದಿವ್ಯವಾದ (ದಿವಿ ಭವಃ ದಿವ್ಯಃ— ದೇವಲೋಕ / ಬೆಳಕಿನ ಲೋಕದಲ್ಲಿರುವ / ದಿವು ದ್ಯುತೌ— ಬೆಳಗುವ) ಶ್ರೇಷ್ಠಾತಿಶ್ರೇಷ್ಠನಾದ ಪರಮಪುರುಷ ಪರಬ್ರಹ್ಮನನ್ನು ಹೊಂದುತ್ತಾನೆ ಎಂದಿದೆ ಮುಂಡಕೋಪನಿಷತ್. (ಉಪೈತಿ— ಉಪ ಏತಿ— ಉಪ ಸಮೀಪೇ, ಹತ್ತಿರಕ್ಕೆ ಹೋಗುತ್ತಾನೆ) ಹೀಗೆ ಬಹುವಿಧವಾಗಿ "ಪುರುಷ" ಶಬ್ದವು ವರ್ಣಿಸಲ್ಪಟ್ಟಿದೆ.

ಯಃ ಅಯಂ ಸಹಸ್ರಶೀರ್ಷಾ ಸಃ ಪುರುಷಃ ಸಹಸ್ರಾಕ್ಷಃ, ಸಹಸ್ರಪಾತ್ ಚ | ಸಃ ಭೂಮಿ-ಆದಿ-ಲೋಕ-ಜಾತಂ ವಿಶ್ವತೋ ವ್ಯಾಪ್ಯ ದಶಾಙ್ಗುಲಮ್ ಅತಿಕ್ರಮ್ಯ ಅತಿಷ್ಠತ್ | ಅತ್ರ ದಶಾಙ್ಗುಲ-ಶಬ್ದಾರ್ಥಃ, ಉಚ್ಯತೇ— ದಶಸಙ್ಖ್ಯಾಕ-ಅಙ್ಗುಲಿ-ಪರಿಮಿತಿ-ವಚನಃ, ನ | ಕಿನ್ತು ಅಪರಿಚ್ಛಿನ್ನಸ್ಯ ಪುರುಷಸ್ಯ ಪರಿಚ್ಛೇದಪ್ರಸಙ್ಗಾತ್ | ತರ್ಹಿ ದಶಾಙ್ಗುಲಶಬ್ದಃ, ಅನನ್ತಯೋಜನ-ವಚನಃ | ಪ್ರಪಞ್ಚಾದ್ ಊರ್ಧ್ವಮ್ ಅನನ್ತಯೋಜನಾನಿ ಅತೀತ್ಯ ಅತಿಷ್ಠದ್ ಇತಿ ಅರ್ಥಃ ||

ಯಾವ ಈ ಸಾಸಿರತಲೆಗಳವನು (ಅಗಣಿತಶಿರಗಳವನು), ಪುರುಷನು, ಅನಂತನೇತ್ರನು ಮತ್ತು ಅಸಂಖ್ಯಪಾದನು. ಆತನು ಭೂಮಿಯೇ ಮೊದಲಾದ ಸಮಸ್ತ (ಚತುರ್ದಶ / ೧೪— ಊರ್ಧ್ವ / ಮೇಲಿನ ೭—  ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯಮ್ ಹಾಗೂ ಅಧಃ / ಕೆಳಗಿನ ೭— ಅತಲ, ವಿತಲ, ಸುತಲ, ತಲಾತಲ, ಮಹಾತಲ, ರಸಾತಲ ಮತ್ತು ಪಾತಾಲ) ಲೋಕಗಳನ್ನೂ ಅವುಗಳಲ್ಲಿ ಜನಿಸಿದ ಚರಾಚರಗಳನ್ನೂ ಎಲ್ಲೆಡೆಯಿಂದ ವ್ಯಾಪಿಸಿ, ಈ ಸಮಸ್ತ ಬ್ರಹ್ಮಾಂಡದಾಚೆಗೂ ಅತಿಕ್ರಮಿಸಿ / ಮೀರಿ ನಿಂತಿರುವನು / ನೆಲೆಸಿರುವನು. ಇಲ್ಲಿ ದಶಾಂಗುಲವೆಂದರೆ ೧೦ ಬೆರಳುಗಳ ಅಂತರವಲ್ಲ / ಪರಿಮಿತಿಯಲ್ಲ. ಆದರೆ, ಅಖಂಡವಾದ ಪುರುಷನ ಸೃಷ್ಟಿಯೆಂಬ ಆಂಶಿಕಸೃಷ್ಟಿ / ಅಂಶಾವತರಣವೆಂಬ ಪರಿಚ್ಛೇದ / ವಿಭಾಗದಿಂದಾಗಿ. ಉಳಿದ ಶಕ್ತಿಯು ಬ್ರಹ್ಮಾಂಡದಾಚೆಗೂ ಅನಂತಯೋಜನಗಳವರೆಗೆ ವ್ಯಾಪಿಸಿ, ಮೀರಿ ನಿಂತಿರುವನು ಎಂದರ್ಥ.

“ದಶಾಙ್ಗುಲಮ್ ಇತಿ ಬ್ರಹ್ಮಾಣ್ಡ-ಹೃದಯಯೋಃ ಉಪಲಕ್ಷಣಮ್ | ಅಙ್ಗುಲಮ್ ಇತಿ ಅವಯವ-ಉಪಲಕ್ಷಣೇನ ಮಿತಸ್ಯ ಜಗತಃ ಅತ್ರ ಗ್ರಹಣಂ ಭವತಿ | ಪಞ್ಚ ಸ್ಥೂಲಭೂತಾನಿ ಪಞ್ಚ ಸೂಕ್ಷ್ಮಾಣಿ ಚ ಏತದ್-ಉಭಯಂ ಮಿಲಿತ್ವಾ ದಶ-ಅವಯವಾಖ್ಯಂ ಸಕಲಂ ಜಗದ್ ಅಸ್ತಿ | ಅನ್ಯತ್ ಚ ಪಞ್ಚ ಪ್ರಾಣಾಃ ಸೇನ್ದ್ರಿಯಂ ಚ ಚತುಷ್ಟಯಮ್ ಅನ್ತಃಕರಣಂ ದಶಮೋ ಜೀವಶ್ಚ |” ಇತಿ ಸಾಯಣ-ಋಗ್ಭಾಷ್ಯಭೂಮಿಕಾಯಾಮ್ ||

ದಶಾಂಗುಲವೆಂದರೆ ಬ್ರಹ್ಮಾಂಡ ಹಾಗೂ ಹೃದಯಗಳ ಸೂಚಕ. ಅಂಗುಲವೆಂಬ ಅಂಗವಾಚ್ಯ ಶಬ್ದದಿಂದ ಮಿತವಾದ ಜಗತ್ತೆಂಬರ್ಥವು ಸ್ವೀಕಾರವಾಗುತ್ತದೆ. ಬ್ರಹ್ಮಾಂಡದಲ್ಲಿನ ೫ ಸ್ಥೂಲಭೂತಗಳು (ಪೃಥಿವೀ, ಅಪ್, ತೇಜ, ವಾಯು, ಆಕಾಶ) ಹಾಗೂ ಪಿಂಡಾಂಡ / ಜೀವಿದೇಹ ದೊಳಗಿನ ತ್ವಕ್-ಮಾಂಸ-ರುಧಿರಾದಿಗಳ ಜನಕವಾದ ೫ ಸೂಕ್ಷ್ಮಭೂತಗಳು— ಇವೆರಡೂ ಸೇರಿ ೧೦ ಅವಯವಗಳುಳ್ಳದ್ದೇ ಸಕಲ ಜಗತ್ತಾಗಿರುವುದು. ಇನ್ನೊಂದು ಪಕ್ಷದಲ್ಲಿ— ಇಂದ್ರಿಯಸಹಿತವಾದ ೫ ಪ್ರಾಣಗಳು ಹಾಗೂ ಮನಸ್-ಚಿತ್ತ-ಬುದ್ಧಿ-ಅಹಂ ಎಂಬ ೪ ಅಂತಃಕರಣಚತುಷ್ಟಯ ಮತ್ತು ಹತ್ತನೆಯದಾದ ಜೀವ— ಹೀಗೆ ಒಟ್ಟು ೧೦ ಎಂದು ಸಾಯಣರ ಋಗ್ಭಾಷ್ಯಭೂಮಿಕೆಯಲ್ಲಿದೆ.


ಸಾಯಣಋಗ್ಭಾಷ್ಯದಿಂದ—


ಯಸ್ಯ ನಿಃಶ್ವಸಿತಂ ವೇದಾಃ
ಯೋ ವೇದೇಭ್ಯೋऽಖಿಲಂ ಜಗತ್ |
ನಿರ್ಮಮೇ ತಮಹಂ ವನ್ದೇ
ವಿದ್ಯಾತೀರ್ಥಮಹೇಶ್ವರಮ್ ||


ಸಕಲ ವೇದಗಳೂ ಯಾವನ ನಿಃಶ್ವಾಸದ ಮೂಲಕ ಹೊರಬಂದವೋ, ಯಾವನು ಇಂತಹ ವೇದಜ್ಞಾನದ ಶಕ್ತಿಯಿಂದಲೇ ಅಖಿಲ ಜಗತ್ತನ್ನು ನಿರ್ಮಿಸಿದನೋ, ಅಂತಹ ವಿದ್ಯಾತೀರ್ಥಸ್ವರೂಪೀ ಮಹೇಶ್ವರನನ್ನು (ಸಾಯಣರ ಗುರುಗಳೂ ವಿದ್ಯಾತೀರ್ಥರು) ನಾನು ವಂದಿಸುತ್ತೇನೆ.


ಸಹಸ್ರಶೀರ್ಷ ಇತಿ ಷೋಡಶರ್ಚಂ ಸೂಕ್ತಮ್ | ನಾರಾಯಣೋ ನಾಮ ಋಷಿಃ, ಅನ್ತ್ಯಾ ತ್ರಿಷ್ಟುಪ್, ಶಿಷ್ಟಾ ಅನುಷ್ಟುಭಃ | ಅವ್ಯಕ್ತಮಹದಾದಿವಿಲಕ್ಷಣಃ ಚೇತನೋ ಯಃ ಪುರುಷಃ ‘ಪುರುಷಾತ್ ನ ಪರಂ ಕಿಂಚಿತ್’ (ಕಠೋಪನಿಷತ್ ೩.೧೧) ಇತ್ಯಾದಿಶ್ರುತಿಷು ಪ್ರಸಿದ್ಧಃ ಸ ದೇವತಾ | ತಥಾ ಚ ಅನುಕ್ರಾನ್ತಮ್— “ಸಹಸ್ರಶೀರ್ಷಾ ಷೋಳಶಃ, ನಾರಾಯಣಃ ಪೌರುಷಮ್ ಆನುಷ್ಟುಭಂ ತ್ರಿಷ್ಟುಬ್-ಅನ್ತಂ ತು” ಇತಿ |


ಸಹಸ್ರಶೀರ್ಷವೆಂಬುದು ಋಗ್ವೇದಸಂಹಿತೆಯಲ್ಲಿ ೧೬ ಋಚೆಗಳುಳ್ಳ (ಋಕ್ಕುಗಳುಳ್ಳ) ಸೂಕ್ತವು. ನಾರಾಯಣನೆಂಬವನೇ ಋಷಿಯು, ಕೊನೆಯ ಋಕ್ಕು ತ್ರಿಷ್ಟುಪ್, ಉಳಿದವೆಲ್ಲ ಅನುಷ್ಟುಪ್ ಛಂದೋಬದ್ಧವಾದುವು. ಅವ್ಯಕ್ತತತ್ತ್ವ, ಮಹತ್ತತ್ತ್ವ ಮುಂತಾದವುಗಳಿಗಿಂತ ವಿಲಕ್ಷಣ / ವಿಭಿನ್ನ / ಬೇರೆಯ ದಾದ ಚೇತನಸ್ವರೂಪನಾದ, "ಪುರುಷನಿಗಿಂತ ಶ್ರೇಷ್ಠವಾದುದಾವುದೂ ಇಲ್ಲ" ಎಂಬ ಕಠೋಪನಿಷತ್ತೇ ಮುಂತಾದ ವೇದೋಪನಿಷತ್ತುಗಳಲ್ಲಿ ಪ್ರಸಿದ್ಧನಾದ, ಯಾವ ಪುರುಷನಿರುವನೋ, ಅವನೇ ದೇವತೆಯು. ಹೀಗಾಗಿಯೇ ಹೇಳಿದೆ— "ಸಹಸ್ರಶೀರ್ಷಾ ಷೋಡಶರ್ಚಸೂಕ್ತವು, ನಾರಾಯಣ ಋಷಿಯು, ಪುರುಷನಾಮಕ ನಾರಾಯಣನೇ ದೇವತೆಯು, ಅನುಷ್ಟುಪ್ ಛಂದಸ್ಸು, ಕೊನೆಯ ಋಕ್ಕಾದರೋ ತ್ರಿಷ್ಟುಪ್ ಛಂದಸ್ಸು" ಎಂಬುದಾಗಿ.


ಸರ್ವಪ್ರಾಣಿಸಮಷ್ಟಿರೂಪೋ ಬ್ರಹ್ಮಾಣ್ಡದೇಹೋ ಯಃ ಪುರುಷಃ ಸೋऽಯಂ ಸಹಸ್ರಶೀರ್ಷಾ | ಸಹಸ್ರಶಬ್ದಸ್ಯ ಉಪಲಕ್ಷಣತ್ವಾತ್ ಅನನ್ತೈಃ ಶಿರೋಭಿಃ ಯುಕ್ತಃ ಇತಿ ಅರ್ಥಃ | ಯಾನಿ ಸರ್ವಪ್ರಾಣಿನಾಂ ಶಿರಾಂಸಿ ತಾನಿ ಸರ್ವಾಣಿ ತದ್-ದೇಹಾನ್ತಃಪಾತಿತ್ವಾತ್ ತದೀಯಾನಿ ಏವ ಇತಿ ಸಹಸ್ರಶೀರ್ಷತ್ವಮ್ | ಏವಂ ಸಹಸ್ರ-ಅಕ್ಷಿತ್ವಂ ಸಹಸ್ರಪಾದತ್ವಂ ಚ | ಸಃ - ಪುರುಷಃ ಭೂಮಿಂ - ಬ್ರಹ್ಮಾಣ್ಡ-ಗೋಲಕರೂಪಾಂ ವಿಶ್ವತಃ - ಸರ್ವತಃ ವೃತ್ವಾ - ಪರಿವೇಷ್ಟ್ಯ ದಶಾಙ್ಗುಲಂ - ದಶಾಙ್ಗುಲಪರಿಮಿತಂ ದೇಶಮ್ ಅತ್ಯತಿಷ್ಠತ್ - ಅತಿಕ್ರಮ್ಯ ವ್ಯವಸ್ಥಿತಃ | ದಶಾಙ್ಗುಲಮ್ ಇತಿ ಉಪಲಕ್ಷಣಮ್ | ಬ್ರಹ್ಮಾಣ್ಡಾದ್ ಬಹಿಃ ಅಪಿ ಸರ್ವತೋ ವ್ಯಾಪ್ಯ ಅವಸ್ಥಿತಃ, ಇತಿ ಅರ್ಥಃ || ೧ ||


ಸಹಸ್ರಶೀರ್ಷಾ ಪುರುಷಃ— ಬ್ರಹ್ಮಾಂಡದ ಎಲ್ಲ ಪ್ರಾಣವಂತರ ಸಮಷ್ಟಿ / ಸಂಯುಕ್ತ ರೂಪನಾದ, ಇಡೀ ಸೃಷ್ಟಿ / ಬ್ರಹ್ಮಾಂಡವೇ ತನ್ನ ದೇಹವಾಗಿರುವ, ಯಾವ ಪರಮಪುರುಷನಿರುವನೋ ಅವನೇ ಈ ಸೂಕ್ತಪ್ರತಿಪಾದ್ಯನಾದ ಸಾವಿರ / ಅನಂತ ಶಿರಗಳ ಪುರುಷದೇವತೆಯು. ಸಹಸ್ರ-ಶಬ್ದದ ಉಪಲಕ್ಷಣ / ಸೂಚ್ಯಾರ್ಥ (ವಾಚ್ಯಾರ್ಥ ಸಾವಿರ ಎಂಬುದು) ದಿಂದಾಗಿ ಅಂತವಿಲ್ಲದಷ್ಟು / ಕೊನೆಯಿಲ್ಲದಷ್ಟು / ಲೆಕ್ಕವಿಲ್ಲದಷ್ಟು ತಲೆಗಳಿಂದ ಕೂಡಿರುವವನು ಎಂದರ್ಥ. ಯಾವುವು ಸರ್ವಪ್ರಾಣವಂತರ ತಲೆಗಳೋ ಅವೆಲ್ಲವೂ, ಅವೆಲ್ಲವುಗಳ ದೇಹಗಳೊಳಗೆ ಪುರುಷನಿರುವುದರಿಂದಾಗಿ, ಆತನವೇ ಎಂಬುದರಿಂದ ಪುರುಷನಿಗೆ ಸಹಸ್ರಶೀರ್ಷತ್ವವು. ಸಹಸ್ರಾಕ್ಷಃ ಸಹಸ್ರಪಾತ್— ಹೀಗೆಯೇ, ಸಹಸ್ರಾಕ್ಷಿತ್ವ (ಅನಂತ ಕಣ್ಣುಗಳಿರುವಿಕೆ) ಹಾಗೂ ಸಹಸ್ರಪಾದತ್ವವು (ಅನಂತ ಪಾದಗಳಿರುವಿಕೆ). ಸಃ— ಅಂತಹ ಪುರುಷನು, ಭೂಮಿಮ್—  ಭೂಮಿಯನ್ನು ಅರ್ಥಾತ್ ಬ್ರಹ್ಮಾಂಡವೆಂಬ ಗೋಳವನ್ನು, ವಿಶ್ವತಃ— ಎಲ್ಲೆಡೆಯಿಂದಲೂ, ವೃತ್ವಾ—  ಆವರಿಸಿ, ದಶಾಙ್ಗುಲಮ್— ಹತ್ತು ಬೆರಳು (ಅಂಗುಲಿ) ಗಳಷ್ಟು ಪ್ರದೇಶವನ್ನು, ಅತ್ಯತಿಷ್ಠತ್— ಬ್ರಹ್ಮಾಂಡದ ಹೊರಕ್ಕೆ ಅತಿಕ್ರಮಿಸಿ / ಮೀರಿ ನೆಲೆಸಿರುವನು. ದಶಾಂಗುಲವೆಂಬುದೂ ಉಪಲಕ್ಷಣಾರ್ಥ / ಸೂಚ್ಯಾರ್ಥ ಉಳ್ಳದ್ದು. ಬ್ರಹ್ಮಾಂಡದ ಹೊರಗೂ ಸಹ ಎಲ್ಲೆಡೆ ಅನಂತವಾಗಿ ಅಪರಿಮಿತವಾಗಿ ಅಸೀಮವಾಗಿ ಗಡಿ-ಗುರುತುಗಳಿಲ್ಲದಂತೆ ವ್ಯಾಪಿಸಿರುವನು ಎಂದರ್ಥ. || ೧ ||


ಸಾಯಣ-ಶುಕ್ಲಯಜುರ್ವೇದೀಯ-ಭಾಷ್ಯದಿಂದ —


ಪೂರ್ವಸ್ಮಿನ್ ಅಧ್ಯಾಯೇ ಪಶು-ಉಪ-ಆಕರಣ-ಹೋಮಾರ್ಥಾಃ ಮನ್ತ್ರಾಃ ಪಶವಃ ಚ ಉಕ್ತಾಃ | ಅಸ್ಮಿನ್ ಅಪಿ ಪೌರುಷಮೇಧಿಕಾಃ ಮನ್ತ್ರಾಃ, ಉಚ್ಯನ್ತೇ | ಕಾತ್ಯಾಯನಃ — “ನಿಯುಕ್ತಾನ್ ಬ್ರಹ್ಮಾ ಅಭಿ-ಸ್ತೌತಿ ಹೋತೃವದ್ ಅನುವಾಕೇನ ಸಹಸ್ರಶೀರ್ಷಾ-ಇತಿ” (ಕಾತ್ಯಾಯನ-ಶ್ರೌತಸೂತ್ರ ೨೧.೧.೧೧) | ‘ಸಹಸ್ರಶೀರ್ಷಾ’ ಇತಿ-ಅನೇನ ಷೋಡಶ-ಋಚೇನ ಸೂಕ್ತೇನ ನಿಯುಕ್ತಾನ್ ಬ್ರಾಹ್ಮಣಾದೀನ್ ಪುರುಷಪಶೂನ್ ದಕ್ಷಿಣತಃ ಬ್ರಹ್ಮಾ (ಹೋತೃ-ಅಧ್ವರ್ಯು-ಉದ್ಗಾತೃ-ಬ್ರಹ್ಮಸು ಅನ್ಯತಮಃ-ಋತ್ವಿಕ್) ಅಭಿಷ್ಟೌತಿ (ಅಭಿ-ಸ್ತೌತಿ) ಅಭಿಷ್ಟುಯಾತ್ (ಅಭಿ-ಸ್ತುಯಾತ್) ಇತಿ ಅರ್ಥಃ | ತಥಾ ಚ ಬ್ರಾಹ್ಮಣಮ್— “ನಿಯುಕ್ತಾನ್ ಪುರುಷಾನ್ ಬ್ರಹ್ಮಾ ದಕ್ಷಿಣೇ ತಾನ್ ಪುರುಷೇಣ ನಾರಾಯಣೇನ ಅಭಿಷ್ಟೌತಿ | ಸಹಸ್ರಶೀರ್ಷಾಪುರುಷಸ್ಸಹಸ್ರಾಕ್ಷಸ್ಸಹಸ್ರಪಾತ್-ಇತಿ-ಅನೇನ ಷೋಡಶರ್ಚೇನ ಷೋಡಶಕಲಂ ವಾ ಇದಗ್ಂ ಸರ್ವಪುರುಷಮೇಧಃ ಸರ್ವಸ್ಯ ಆಪ್ತ್ಯೈ ಸರ್ವಸ್ಯ ಅವರುಧ್ಯೈ” ಇತಿ (ಶತಪಥಬ್ರಾಹ್ಮಣ ೧೩.೬.೨.೧೨) |


(ಶುಕ್ಲಯಜುರ್ವೇದದ) ಹಿಂದಿನ ಅಧ್ಯಾಯದಲ್ಲಿ ಪಶುವನ್ನು / ಪಶುಗಳನ್ನು ಸಮೀಪ ಕರೆತರುವ ಹೋಮಕ್ಕಾಗಿನ, ಮಂತ್ರಗಳು ಹಾಗೂ ಪಶುಗಳ ಬಗ್ಗೆ ಹೇಳಿದೆ. ಇದರಲ್ಲೂ (ಈ ಅಧ್ಯಾಯದಲ್ಲೂ) ಪುರುಷಮೇಧದ ಮಂತ್ರಗಳು ಹೇಳಲ್ಪಡುತ್ತವೆ. ಕಾತ್ಯಾಯನನ ಶ್ರೌತಸೂತ್ರದಲ್ಲಿ ಹೀಗಿದೆ— "ಹೋಮಕ್ಕೆ ನಿಯುಕ್ತರಾದ (ನಿಯೋಜಿತರಾದ) ಋತ್ವಿಜರನ್ನು ಬ್ರಹ್ಮನಾಮಕ ಋತ್ವಿಜನು ಮುಂದಿನಿಂದಲೇ ಪ್ರಶಂಸಿಸುತ್ತಾನೆ -ದೇವತೆಗಳನ್ನು ಪ್ರಶಂಸಿಸುವ ಹೋತೃವಿನಂತೆ- ಸಹಸ್ರಶೀರ್ಷಾ ಎಂಬೀ ಅನುವಾಕದಿಂದ". "ಸಹಸ್ರಶೀರ್ಷಾ" ಎಂಬೀ ೧೬ ಋಕ್ಕುಗಳ ಸೂಕ್ತದಿಂದ, ನಿಯೋಜಿತರಾದ ಋತ್ವಿಗ್ರೂಪೀ ಬ್ರಾಹ್ಮಣಾದಿ ಪುರುಷಮೇಧದ ಪುರುಷಪಶುಗಳನ್ನು ಬಲಭಾಗದಿಂದ (ದಕ್ಷಿಣದಿಕ್ಕಿನಿಂದ) ಬ್ರಹ್ಮಸ್ಥಾನೀಯ ಋತ್ವಿಜನು (ಹೋತೃ-ಅದ್ವರ್ಯು-ಉದ್ಗಾತೃ-ಬ್ರಹ್ಮಾ ಎಂಬ ನಾಲ್ಕುವಿಧದ ಯಾಗಋತ್ವಿಜರಲ್ಲೊಬ್ಬ) ಅಭಿಮುಖವಾಗಿ / ಎಲ್ಲರೀತಿಯಿಂದ (ಅಭಿ— ಆಭಿಮುಖ್ಯಮ್, ಸಮನ್ತಾತ್) ಹೊಗಳುತ್ತಾನೆ / ಹೊಗಳಬೇಕು ಎಂದರ್ಥ. ಹಾಗೆಯೇ ಶತಪಥಬ್ರಾಹ್ಮಣವು ಹೀಗಿದೆ— "ನಿಯೋಜಿಸಲ್ಪಟ್ಟ ಯಜ್ಞಪಶುಗಳಾದ ಆ ಪುರುಷರನ್ನು ಬ್ರಹ್ಮತ್ವವಹಿಸಿದವನು ಪುರುಷಸೂಕ್ತ / ನಾರಾಯಣಾನುವಾಕ ದಿಂದ ಸರ್ವರೀತಿಯಿಂದ ಸಮ್ಮುಖದಲ್ಲೇ ಸ್ತುತಿಸುತ್ತಾನೆ—ಸಹಸ್ರಶೀರ್ಷಾ ಪುರುಷಸ್ಸಹಸ್ರಾಕ್ಷಸ್ಸಹಸ್ರಪಾತ್... ಎಂಬೀ ಷೋಡಶ ಋಚೆಗಳಿಂದ ಕೂಡಿದ ಸೂಕ್ತದಿಂದ. ಷೋಡಶ-ಕಲೆಗಳಿಂದ ಕೂಡಿದ ಈ ಸರ್ವಪುರುಷ ಮೇಧವು / ಯಜ್ಞವು ಎಲ್ಲ ಇಷ್ಟಾರ್ಥಗಳ ಪ್ರಾಪ್ತಿಗಾಗಿ, ಎಲ್ಲ ಅನಿಷ್ಟಗಳ ತಡೆಗಟ್ಟುವಿಕೆಗಾಗಿ" ಎಂದು.


ತತ್ರ ಪ್ರಥಮಾಮ್ (ಋಚಮ್) ಆಹ—


ಅಲ್ಲಿ (೧೬ ಋಕ್ಕುಗಳಲ್ಲಿ) ಮೊದಲನೆಯ (ಋಕ್ಕನ್ನು / ಋಚೆಯನ್ನು) ಹೇಳುತ್ತಾನೆ—


ಸಹಸ್ರಶೀರ್ಷಾ ಪುರುಷಸ್ಸಹಸ್ರಾಕ್ಷಸ್ಸಹಸ್ರಪಾತ್ |
ಸ ಭೂಮಿಂ ಸರ್ವತಸ್ಪೃತ್ವಾತ್ಯತಿಷ್ಠದ್ದಶಾಙ್ಗುಲಮ್ || ೧ ||


ಸಹಸ್ರಶೀರ್ಷಾ — ಋಗ್ಭಾಷ್ಯವದ್ ಏವ | ಪುರುಷಃ — ಬ್ರಹ್ಮಾಣ್ಡರೂಪೇ ಪುರೇ ಶೇತೇ- ಇತಿ ಸರ್ವಪ್ರಾಣಿಸಮಷ್ಟಿರೂಪಃ ಬ್ರಹ್ಮಾಣ್ಡದೇಹಃ ವಿರಾಡಾಖ್ಯಃ ಪುರುಷಃ, ಇತಿ ಅರ್ಥಃ | ತಥಾ ಚ ಬ್ರಾಹ್ಮಣಂ ಪುರುಷಶಬ್ದಂ ನಿರವೋಚತ್— “ಇಮೇ ವೈ ಲೋಕಾಃ ಪೂಃ | ಅಯಮ್ ಏವ ಪುರುಷೋ ಯಃ ಅಯಂ ಪವತೇ ಸಃ ಅಸ್ಯಾಂ ಪುರಿ ಶೇತೇ, ತಸ್ಮಾತ್ ಪುರುಷಃ” ಇತಿ (ಶತಪಥಬ್ರಾಹ್ಮಣಮ್ ೧೩.೬.೨.೧). ಯಃ ಏವಮ್ ಉಕ್ತಃ ಪುರುಷಃ ಭೂಮಿಂ ಶೋಭನರೂಪಾಂ ಸರ್ವತಃ ಸ್ಪೃತ್ವಾ ಸಂಸ್ಪೃಶ್ಯ - ಆವೃತ್ಯ ದಶಾಙ್ಗುಲಂ ದಶಾಙ್ಗುಲಪರಿಮಿತಂ ದೇಶಮ್ ಅತ್ಯತಿಷ್ಠತ್ - ಅತಿಕ್ರಮ್ಯ ಅವಸ್ಥಿತಃ | ದಶಾಙ್ಗುಲಮ್ ಇತಿ ಉಪಲಕ್ಷಣಮ್, ಬ್ರಹ್ಮಾಣ್ಡಾದ್ ಬಹಿಃ ಅಪಿ ಸರ್ವತಃ ವ್ಯಾಪ್ಯ ಅವಸ್ಥಿತಃ, ಇತ್ಯರ್ಥಃ (ಇತಿ ಅರ್ಥಃ) || ೧ ||


ಸಹಸ್ರಶೀರ್ಷಾ— ಸಾಯಣಋಗ್ಭಾಷ್ಯದಲ್ಲಿರುವಂತೆಯೇ.

ಪುರುಷಃ— ಬ್ರಹ್ಮಾಂಡರೂಪವಾದ ಪುರದಲ್ಲಿ / ಪಟ್ಟಣದಲ್ಲಿ / ದೇಹದಲ್ಲಿ ಶಯನಮಾಡುತ್ತಾನೆ / ಗೂಢವಾಗಿ ನೆಲೆಸಿದ್ದಾನೆ— ಎಂಬಂತೆ, ಸಕಲಪ್ರಾಣವಂತರ ಸಮಷ್ಟಿರೂಪನೂ, ಬ್ರಹ್ಮಾಂಡದೇಹಿಯೂ ಆದ ವಿರಾಟ್ ನಾಮಕ ಪುರುಷನು ಎಂದರ್ಥ. ಅಂತೆಯೇ ಶತಪಥಬ್ರಾಹ್ಮಣವು ಪುರುಷಶಬ್ದವನ್ನು ನಿರ್ವಚಿಸಿತು— "ಈ ಲೋಕಗಳೇ ಪೂಃ - ಎನಿಸಿವೆ. ಇವನೇ ಪುರುಷನು ಯಾವ ಇವನು ಶುದ್ಧೀಕರಿಸುತ್ತಾನೋ, ಬೀಸುತ್ತಾನೋ (ಪವಮಾನ, ವಾಯುದೇವ, ಮುಖ್ಯಪ್ರಾಣ), ಸಂಚರಿಸುತ್ತಾನೋ (ಅತ ಸಾತತ್ಯಗಮನೇ ಆತ್ಮಾ— ಸತತವೂ ಗಮನಶೀಲನಾದವನೇ ಆತ್ಮನು), ಒಣಗಿಸುತ್ತಾನೋ, ಪಾವನಗೊಳಿಸುತ್ತಾನೋ, ಉಸಿರಾಗಿರುತ್ತಾನೋ ಅವನು ಈ ದೇಹದಲ್ಲಿ ನೆಲೆಸುತ್ತಾನೆಂಬುದರಿಂದಾಗಿ ಪುರುಷನು" ಎಂದು. ಸಃ ಭೂಮಿಮ್— ಯಾವ ಈ ರೀತಿಯಾಗಿ ಕರೆಯಲ್ಪಟ್ಟ ಪುರುಷನು, ಶೋಭಾಯಮಾನವಾದ / ಸುಂದರವಾದ ಸೃಷ್ಟಿ / ಭೂಮಿ ಯನ್ನು, ಸರ್ವತಃ ಸ್ಪೃತ್ವಾ— ಎಲ್ಲೆಡೆಯಿಂದ ಸ್ಪರ್ಶಿಸಿ, ಆವರಿಸಿ, ದಶಾಙ್ಗುಲಮ್— ಹತ್ತಂಗುಲದಷ್ಟು ಜಾಗವನ್ನು, ಅತ್ಯತಿಷ್ಠತ್— ಬ್ರಹ್ಮಾಂಡವನ್ನು ಮೀರಿ ಹೊರಕ್ಕೆ ನಿಂತಿರುವನು. ಹತ್ತಂಗುಲವೆಂಬುದೊಂದು ಸೂಚ್ಯಾರ್ಥವುಳ್ಳದ್ದು. ಬ್ರಹ್ಮಾಂಡದ ಹೊರಗೂ ಸಹ ಅನಂತವಾಗಿ ಸರ್ವತ್ರ ವ್ಯಾಪಿಸಿ ನೆಲೆಸಿರುವನೆಂದರ್ಥ. || ೧ ||


ಉವಟ-ಶುಕ್ಲಯಜುರ್ವೇದಭಾಷ್ಯದಿಂದ—


ಪರಮಾತ್ಮವಿಜ್ಞಾನ-ಆನನ್ದ-ಆದಿ-ಗುಣ-ಅಧ್ಯಾತ್ಮನಿ ಪ್ರಭೂತಃ ಪುರುಷಮೇಧೋ ಯಜ್ಞಃ ಪ್ರಜಾಪತಿಃ ಲೋಕಕಾಲಾಗ್ನಿ-ಆದಿ-ವಪುಃ ಪುರುಷೋತ್ಪತ್ತಿ-ಸ್ಥಿತಿ-ಸಂಹೃತೀನಾಂ ಹೇತುಃ ಸ್ವರ್ಗ-ಅಪವರ್ಗ-ಐಶ್ವರ್ಯ-ಮೋಕ್ಷದೋ ಜ್ಞಾನ-ಕರ್ಮ-ಸಮುಚ್ಚಯ-ಕಾರಣಂ ಶರೀರಂ “ಯಜ್ಞೋ ವಾ ಅಸ್ಯ ಆತ್ಮಾ ಭವತಿ” ಇತಿ ಶ್ರುತಿಃ |


ಪರಮಾತ್ಮನ ಕುರಿತಾದ ವಿಶೇಷವಾದ ಜ್ಞಾನ, ಆನಂದವೇ ಮುಂತಾದ ಗುಣಗಳು ಹಾಗೂ ಅಧ್ಯಾತ್ಮದಲ್ಲಿ ಪರಿಪ್ಲುತವಾದ ಪುರುಷಮೇಧವೆಂಬ ಯಜ್ಞಸ್ವರೂಪೀ ಪ್ರಜಾಪತಿಯು, ಲೋಕ / ಬ್ರಹ್ಮಾಂಡಶರೀರಿಯೂ, ಕಾಲಪುರುಷನೂ, ಅಗ್ನಿ / ತೇಜೋಮಯ ಶರೀರಿಯೂ ಎಂದು ಮುಂತಾದ ಪುರುಷನ ವಿರಾಟ್ ರೂಪವೂ, ಪಿಂಡಾಂಡ (ಜೀವ)ದೊಳಗಂತರ್ಯಾಮಿಯಾಗಿ ಪುರುಷರ / ಜೀವರ ಉತ್ಪತ್ತಿ-ಸ್ಥಿತಿ-ಸಂಹಾರಗಳ ಕಾರಣನೂ, ಸ್ವರ್ಗ-ಪರಗತಿ-ಐಶ್ವರ್ಯ / ಈಶ್ವರತ್ವ-ಮೋಕ್ಷಪ್ರದನೂ, ಜ್ಞಾನ-ಕರ್ಮ ಸಮುಚ್ಚಯವಾದ / ಜೊತೆಗೂಡಿರುವ, ಸಕಲಜೀವಾಂತರ್ಗತ ಕಾರಣಶರೀರನೂ (ಸ್ಥೂಲ, ಸೂಕ್ಷ್ಮ, ಕಾರಣವೆಂದು ಶರೀರವು ತ್ರಿವಿಧವಾಗಿದೆ. ಸ್ಥೂಲ— ಹೊರಮೈ, ಸೂಕ್ಷ್ಮ— ಅಂತರಿಂದ್ರಿಯ-ಬಹಿರಿಂದ್ರಿಯಶಕ್ತಿಸ್ವರೂಪಿ ಲಿಂಗಶರೀರ, ಕಾರಣ— ಜೀವಾತ್ಮ / ಪರಮಾತ್ಮ) ಆಗಿರುವನು ಎಂಬುದಾಗಿ "ಯಜ್ಞವೇ ಇವನ ಆತ್ಮವಾಗುತ್ತದೆ" ಎಂಬ ವೇದವಚನವೂ ಪುಷ್ಟೀಕರಿಸುತ್ತದೆ.

ಸಹಸ್ರಶೀರ್ಷಾ ಪುರುಷಃ - ಇತ್ಯನುವಾಕೇನ ಷೋಡಶರ್ಚೇನ ಅನುಷ್ಟುಭೇನ ತ್ರಿಷ್ಟುಬನ್ತ್ಯೇನ ಬ್ರಹ್ಮಣೇ ಬ್ರಾಹ್ಮಣಮ್ ಇತ್ಯಾದಿ-ಅವಯವಭೂತ-ಪುರುಷದ್ವಾರೇಣ ಅವಯವೀ ಸ್ತೂಯತೇ | ಇದಾನೀಂ ಸ್ತುತ್ಯರ್ಥಂ ನಿರ್ವಚನದ್ವಾರೇಣ ದ್ರಢಯಿತುಮ್ ಆಹ | “ ಅಥ ಯಸ್ಮಾತ್ ಪುರುಷಮೇಧೇನ ಅನೇನ ಇಮೇ ವೈ ಲೋಕಾಃ ಪೂರಯಮ್ ಏವ ಪುರುಷೋ ಯೋ ಅಯಂ ಪವತೇ ಸೋ ಅಸ್ಯಾಂ ಪುರಿ ಶೇತೇ ತಸ್ಮಾತ್ ಪುರುಷಃ | ತಸ್ಯ ಯದ್ ಏಷು ಲೋಕೇಷು ಅನ್ನಂ ತದ್ ಅಸ್ಯ ಅನ್ನಂ ಮೇಧಃ ತದ್ ಅಸ್ಯ ಏತದ್ ಅನ್ನಂ ಮೇಧಃ, ತಸ್ಮಾತ್ ಪುರುಷಮೇಧಃ |” (ಶತಪಥಬ್ರಾಹ್ಮಣೇ ೧೩.೬.೨.೧).

ಸಹಸ್ರಶೀರ್ಷಾ ಪುರುಷಃ— ಎಂಬ ತ್ರಿಷ್ಟುಬಂತವಾದ (ಅಂತ್ಯದ ೧೬ನೆಯ ಋಕ್ ತ್ರಿಷ್ಟುಪ್ ಛಂದಸ್ಸಿನಲ್ಲಿರುವ) ಅನುಷ್ಟುಪ್ ಛಂದಸ್ಸಿನ ೧೬ ಋಕ್ಕುಗಳ ಅನುವಾಕದಿಂದ ಪರಬ್ರಹ್ಮನಿಗೆ, ಬ್ರಾಹ್ಮಣಾದಿ ಅಂಗಗಳುಳ್ಳ ಪುರುಷನ ಮೂಲಕ ಅಂಗಿಯು (ಅಂಗಗಳುಳ್ಳ ಪರಮಪುರುಷನು) ಸ್ತುತಿಸಲ್ಪಡುತ್ತಾನೆ. ಈಗ ಸ್ತುತಿಗಾಗಿ ಪುರುಷಶಬ್ದದ ನಿರ್ವಚನದ ಮೂಲಕ ದೃಢೀಕರಿಸಲು / ಸಮರ್ಥಿಸಲು ಶತಪಥಬ್ರಾಹ್ಮಣದಲ್ಲಿ ಹೇಳುತ್ತಾನೆ— "ಅನಂತರ, ಯಾವ ಈ ಪುರುಷಮೇಧವೆಂಬ ಯಜ್ಞದ ದೆಸೆಯಿಂದ, ಈ ಲೋಕಗಳನ್ನೆಲ್ಲಾ ತುಂಬುತ್ತಾ, ಪರಿಪೂರ್ಣಗೊಳಿಸುತ್ತಾ ಯಾವ ಈ ಪುರುಷನು ಸಂಚರಿಸುತ್ತಾನೋ (ಪಾವನಗೊಳಿಸುತ್ತಾನೋ, ವಿಶ್ವಾತ್ಮರೂಪದಿಂದ ವ್ಯಾಪಿಸುತ್ತಾನೋ, ವಿಶ್ವಪ್ರಾಣವಾಯುರೂಪದಿಂದ ಬೀಸುತ್ತಾನೋ) ಅವನು ಈ ಬ್ರಹ್ಮಾಂಡ-ಪಿಂಡಾಂಡಪುರಗಳಲ್ಲಿ ಶಯನಗೈದಿರುವನು / ನಿವಾಸಗೈದಿರುವನೆಂಬುದರಿಂದಾಗಿ ಪುರುಷನು. ಈ ೧೪ ಲೋಕಗಳಲ್ಲಿ ಯಾವ ಈ ಪುರುಷಮೇಧವೆಂಬ ಪುರುಷಸೂಕ್ತಹವನವೇ ಆತನ ಅನ್ನವೋ (ಆಹಾರವು, ತೃಪ್ತಿಪಡಿಸುವುದು), ಇದರಿಂದಾಗಿಯೇ ಇದು ಪುರುಷಮೇಧವೆನಿಸಿದೆ. (ಈ ಯಜ್ಞಮುಖೇನ ಸಮರ್ಪಿತವಾದ ಹವಿಸ್ಸೇ ಆ ವಿರಾಟ್ಪುರುಷನನ್ನು, ಪರಮಪುರುಷನನ್ನು ಪ್ರಸನ್ನಗೊಳಿಸುವುದು)."

ಪುರುಷಸೂಕ್ತಸ್ಯ ನಾರಾಯಣ-ಋಷಿಃ, ಪುರುಷೋ ದೇವತಾ, ಅನುಷ್ಟುಪ್ ಛನ್ದಃ, ಅನ್ತ್ಯಾ ತ್ರಿಷ್ಟುಪ್, ಮೋಕ್ಷೇ ವಿನಿಯೋಗಃ | ಅಸ್ಯ ಭಾಷ್ಯಂ ಶೌನಕೋ ನಾಮ ಋಷಿಃ ಅಕರೋತ್ | ಪ್ರಥಮಂ ವಿಚ್ಛೇದಃ ಕ್ರಿಯಾಕಾರಕಸಂಬನ್ಧಃ ಸಮಾಸಃ ಪ್ರಮೇಯಾರ್ಥವ್ಯಾಖ್ಯಾ ಇತಿ ಸರ್ವಮ್ ಏತತ್ ಜನಕಾಯ ಮೋಕ್ಷಾರ್ಥಂ ಕಥಯಾಮಾಸ ಇತಿ | ಸಃ ಪುರುಷಃ ನಾರಾಯಣಾಖ್ಯಃ, ಸರ್ವತಃ ಭುವನಕೋಶಸ್ಯ ಭೂಮಿಂ ಸ್ಪೃತ್ವಾ - ವ್ಯಾಪ್ಯ ದಶಾಙ್ಗುಲಮ್ ಅತ್ಯತಿಷ್ಠತ್ | ದಶ ಚ ತಾನಿ ಅಙ್ಗುಲಾನಿ, ದಶಾಙ್ಗುಲಾನಿ ಇನ್ದ್ರಿಯಾಣಿ | ಕೇಚಿತ್ ಅನ್ಯಥಾ ರೋಚಯನ್ತಿ ದಶಾಙ್ಗುಲಪ್ರಮಾಣಂ ಹೃದಯಸ್ಥಾನಮ್ | ಅಪರೇ ತು ನಾಸಿಕಾಗ್ರಂ ದಶಾಙ್ಗುಲಮ್ ಇತಿ | ಕಿಂ-ಭೂತೋ ಅಸೌ ಸಹಸ್ರಶೀರ್ಷಾ? ಅನೇಕಪರ್ಯಾಯಃ ಸಹಸ್ರಶಬ್ದಃ | ಅನೇಕಾನಿ ಶಿರಾಂಸಿ ಯಸ್ಯ ಸಃ, ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ - ಸಹಸ್ರಾಣಿ ಅಕ್ಷೀಣಿ ನೇತ್ರಾಣಿ ಯಸ್ಯ ಅಸೌ ಸಹಸ್ರಾಕ್ಷಃ | ಸಹಸ್ರಪಾತ್ - ಪಾದಾನಾಮ್ ಅಙ್ಗಾನಾಂ ಸಹಸ್ರಾಣಿ ಯಸ್ಯ ಸಃ ಸಹಸ್ರಪಾತ್ | ಏತತ್ ಗುಣಃ ಪುರುಷಃ ತದ್ ವ್ಯಾಪ್ಯ ಅತಿಕ್ರಮ್ಯ ಸ್ಥಿತಃ, ಇತಿ || ೧ ||

ಪುರುಷಸೂಕ್ತಕ್ಕೆ ನಾರಾಯಣನು ಋಷಿಯು, ಪುರುಷನೇ ದೇವತೆಯು, ಅನುಷ್ಟುಪ್ ಛಂದಸ್ಸು, ಕೊನೆಯ ಋಕ್ಕಿಗೆ ತ್ರಿಷ್ಟುಪ್ ಛಂದಸ್ಸು, ಮೋಕ್ಷದಲ್ಲಿ / ಮೋಕ್ಷಪ್ರಾಪ್ತಿಗಾಗಿ ಇದರ ವಿನಿಯೋಗ / ಬಳಕೆ. ಇದರ ಭಾಷ್ಯವನ್ನು ಶೌನಕರೆಂಬ ಮಹರ್ಷಿಗಳು ರಚಿಸಿದರು. ಮೊದಲಿಗೆ ಮಂತ್ರಗಳ ಪದಚ್ಛೇದ (ಪದ ವಿಭಾಗ), ಕ್ರಿಯಾಪದಗಳ ಹಾಗೂ ಕರ್ತೃ-ಕರ್ಮ-ಕರಣ-ಸಂಪ್ರದಾನ-ಅಪಾದಾನ-ಸಂಬಂಧ-ಅಧಿಕರಣಗಳೆಂಬ ಸಪ್ತವಿಭಕ್ತಿಕಾರಕಪದಗಳ ನಡುವಿನ ಸಂಬಂಧ, ಸಮಾಸಗಳು, ಪ್ರಮೇಯಗಳ ಅರ್ಥ-ವ್ಯಾಖ್ಯಾನ— ಹೀಗೆ ಇವೆಲ್ಲವನ್ನೂ ಜನಕನಿಗೆ (ರಾಜರ್ಷಿಯೆನಿಸಿದ ಸೀತಾಪಿತ ಜನಕಮಹಾರಾಜನಿಗೆ), ಮೋಕ್ಷಪ್ರಾಪ್ತಿಗೋಸ್ಕರ ಹೇಳಿದ್ದನೆಂಬುದಾಗಿ. ಆ ನಾರಾಯಣನೆಂಬ ಪರಮಪುರುಷನು ಭುವನಕೋಶ / ಬ್ರಹ್ಮಾಂಡ ದ ನೆಲೆಯನ್ನು ಸರ್ವತ್ರ ವ್ಯಾಪಿಸಿ ಹತ್ತಂಗುಲದಷ್ಟು ಅದಕ್ಕೂ ಹೊರಭಾಗದಲ್ಲಿ ಚಾಚಿ / ಹಬ್ಬಿ ನೆಲೆಸಿದನು. ಹತ್ತು ಅಂಗುಲಗಳೆಂದರೆ ೫ ಜ್ಞಾನೇಂದ್ರಿಯಗಳು (ಕಿವಿ, ಕಣ್ಣು, ಮೂಗು, ನಾಲಿಗೆ/ರಸನಾ, ಚರ್ಮ) ಹಾಗೂ ೫ ಕರ್ಮೇಂದ್ರಿಯಗಳು (ವಾಕ್/ಮಾತು/ಜಿಹ್ವೆ/ನಾಲಗೆ, ಪಾಣಿ/ಕೈ, ಪಾದ, ಪಾಯು/ಗುದ, ಉಪಸ್ಥ/ಗುಹ್ಯ/ಲಿಂಗ)— ಹೀಗೆ ಒಟ್ಟು ೧೦ ಇಂದ್ರಿಯಗಳಲ್ಲೂ (ಹೃಷೀಕಗಳಲ್ಲೂ) ಅವುಗಳ ನಿಯಾಮಕನಾಗಿ ನೆಲೆಸಿ ಹೃಷೀಕೇಶನೆನಿಸಿರುವನು. ಕೆಲವರು ಬೇರೆ ರೀತಿಯಲ್ಲಿ ಹೇಳಲು ಬಯಸುತ್ತಾರೆ— ೧೦ ಅಂಗುಲಪ್ರಮಾಣವು ಹೃದಯದ ಸ್ಥಾನವು ಎಂದು. ಇನ್ನಿತರರು ನಾಸಿಕಾಗ್ರವನ್ನು (ಮೂಗಿನ ತುದಿಯನ್ನು) ದಶಾಂಗುಲವೆನ್ನುವರು. ಈ ಸಹಸ್ರಶೀರ್ಷನು ಏನಾಗಿರುವನು / ಎಂಥವನಾಗಿರುವನು / ಹೇಗಿರುವನು? ಸಹಸ್ರ-ಶಬ್ದವು ಅನೇಕ ಎಂಬುದಕ್ಕೆ ಪರ್ಯಾಯಪದ. ಅನೇಕ ಶಿರಸ್ಸುಗಳು ಯಾವನಿಗೋ ಅವನು ಸಹಸ್ರಶೀರ್ಷನಾದ ಪುರುಷನು. ಹೀಗೆಯೇ, ಸಾವಿರಾರು / ಅನೇಕ ಕಣ್ಣುಗಳು ಯಾವನಿಗೋ ಅವನು ಸಹಸ್ರಾಕ್ಷನು. ಸಾವಿರಾರು ಪಾದಗಳುಳ್ಳವನು ಸಹಸ್ರಪಾದನು. ಈ ಗುಣಗಳಿರುವ ಪರಮಪುರುಷನು ಈ ವಿಶ್ವವನ್ನೆಲ್ಲ ವ್ಯಾಪಿಸಿ, ಅದನ್ನೂ ಮೀರಿ ಹೊರಕ್ಕೆ ವ್ಯಾಪಿಸಿಯೂ ಸ್ಥಿತನಾಗಿರುವನು ಎಂಬುದಾಗಿ.

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪