ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೧
ಅಥ ತೈತ್ತಿರೀಯಕೃಷ್ಣಯಜುರ್ವೇದಭಾಷ್ಯಾರಂಭ: |
||ಪ್ರಥಮ-ಅಷ್ಟಕ / ಕಾಂಡದ, ಪ್ರಥಮ- ಪ್ರಪಾಠಕದ / ಪ್ರಶ್ನದ ಪ್ರಥಮ ಅನುವಾಕವು||
ಹರಿ: ಓಮ್
ಇಷೇ ತ್ವೋ1 ರ್ಜೇತ್ವಾ೧2 ವಾಯವಃ ಸ್ಥೋಪಾಯವಃ ಸ್ಥ೨3 ದೇವೋ ವ: ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣ4 ಆ ಪ್ಯಾಯಧ್ವಮಘ್ನಿಯಾ ದೇವಭಾಗಮೂರ್ಜಸ್ವತೀ: ಪಯಸ್ವತೀ: ಪ್ರಜಾವತೀರನಮೀವಾ ಅಯಕ್ಷ್ಮಾ ಮಾ ವ: ಸ್ತೇನ ಈಶತ ಮಾऽಘಶಗ್ಂಸೋ5 ರುದ್ರಸ್ಯ ಹೇತಿ: ಪರಿ ವೋ ವೃಣಕ್ತು೩6 ಧ್ರುವಾ ಅಸ್ಮಿನ್ಗೋಪತೌ ಸ್ಯಾತ ಬಹ್ವೀರ್೪7 ಯಜಮಾನಸ್ಯ ಪಶೂನ್ಪಾಹಿ೫8 ||೧||
(ಬೌಧಾಯನ ಮತದಂತೆ ಈ ಅನುವಾಕದಲ್ಲಿ ಒಟ್ಟು ೫ ಮಂತ್ರಗಳೂ, ಆಪಸ್ತಂಬೀಯ ಮತದಂತೆ 8 ಮಂತ್ರಗಳೂ ಇವೆ.)
ಪದ-ವಿಭಾಗಃ— ಇಷೇ ತ್ವಾ ಊರ್ಜೇ ತ್ವಾ ವಾಯವಃ ಸ್ಥ ಉಪಾಯವಃ ಸ್ಥ ದೇವಃ ವಃ ಸವಿತಾ ಪ್ರ-ಅರ್ಪಯತು ಶ್ರೇಷ್ಠ-ತಮಾಯ ಕರ್ಮಣೇ ಆಪ್ಯಾಯಧ್ವಮ್ ಅಘ್ನಿಯಾಃ ದೇವಭಾಗಮ್ ಊರ್ಜಸ್ವತೀಃ ಪಯಸ್ವತೀಃ ಪ್ರಜಾವತೀಃ ಅನಮೀವಾಃ ಅಯಕ್ಷ್ಮಾಃ ಮಾ ವಃ ಸ್ತೇನ ಈಶತ ಮಾ ಅಘಶಂಸಃ ರುದ್ರಸ್ಯ ಹೇತಿಃ ಪರಿ ವಃ ವೃಣಕ್ತು ಧ್ರುವಾಃ ಅಸ್ಮಿನ್ ಗೋಪತೌ ಸ್ಯಾತ ಬಹ್ವೀಃ ಯಜಮಾನಸ್ಯ ಪಶೂನ್ ಪಾಹಿ ||
ಅನ್ವಯಾರ್ಥಃ— (ಹೇ ಪಲಾಶಶಾಖೇ!) ಎಲೈ ಪಲಾಶವೃಕ್ಷದ ಗೆಲ್ಲೆ! / ಟೊಂಗೆಯೆ!, (ಇಷೇ— ದೇವಾನಾಂ ಹವಿರ್ಭಾಗರೂಪದಧ್ಯರ್ಥಂ) ಇಂದ್ರಾದಿ ದೇವತೆಗಳಿಗತಿಪ್ರಿಯವಾದ ಯಜ್ಞದ ಹವಿರ್ಭಾಗರೂಪವಾದ ದಧಿ / ಮೊಸರಿನಂಥ ಹವಿಸ್ಸನ್ನು ಪಡೆಯುವುದಕ್ಕಾಗಿ, (ತ್ವಾ / ತ್ವಾಮ್) ನಿನ್ನನ್ನು, (ಆಚ್ಛಿನದ್ಮಿ) ಕತ್ತರಿಸುತ್ತೇನೆ. ತನ್ಮೂಲಕ ಹಸು-ಕರುಗಳನ್ನು ಕಾಡಿಗೆ ಕಳುಹಿಸಲಾಗುತ್ತದೆ. (ಊರ್ಜೇ) ಊರ್ಜಾ / ಶಕ್ತಿ-ಪ್ರದವಾದ ರಸಪ್ರಾಪ್ತಿಗಾಗಿ, (ತ್ವಾ / ತ್ವಾಮ್) ನಿನ್ನನ್ನು / ಪಲಾಶಶಾಖೆಯನ್ನು ಕತ್ತರಿಸಲಾಗುತ್ತದೆ. ಆ ಶಾಖೆಯ ಸಹಾಯದಿಂದ ಹಸುಕರುಗಳನ್ನು ಕಾಡಿಗಟ್ಟಿ, ಅವು ಸಮೃದ್ಧವಾಗಿ ಹೊಟ್ಟೆ ತುಂಬಿಕೊಳ್ಳುವುದರಿಂದ ಸಿಗುವ ಪೌಷ್ಟಿಕ ವನಸ್ಪತಿಯುಕ್ತ ಬಲಪ್ರದ ಹಾಲು ದೇವಯಜ್ಞದ ಹವಿಸ್ಸಿಗೆ ಅಗತ್ಯ. (ವಾಯವಃ) ಹೇ ಗೋವುಗಳೇ! ನೀವು ಅಂತರಿಕ್ಷದ ಅಧಿದೇವತೆಯಾದ ವಾಯುವಿನ ಸುಪರ್ದಿ / ರಕ್ಷಣೆಯಲ್ಲಿ ಕಾಡಿಗೆ ಹೋಗುವವುಗಳು, (ಸ್ಥ) ಆಗಿರಿ. (ಉಪಾಯವಃ ಸ್ಥ) ಪುನಃ ಸಂಜೆ ನಮ್ಮ ಬಳಿ (ಉಪ ಸಮೀಪೇ) ಬರುವವುಗಳಾಗಿರಿ. (ವಃ / ಯುಷ್ಮಾನ್) ನಿಮ್ಮನ್ನು, (ದೇವಃ ಸವಿತಾ) ಸ್ವಯಂ ಜ್ಯೋತಿರೂಪವಾಗಿರುವ (ದೀವ್ಯತಿ ಇತಿ ದೇವಃ) ಲೋಕದ ಪ್ರಸವಕ್ಕೆ / ಜನನಕ್ಕೆ / ಸೃಷ್ಟಿಗೆ ಕಾರಣನಾದ (ಪ್ರಸವಿತಾ ಸವಿತಾ) ದೇವದೇವನು ಅಥವಾ ಪ್ರತ್ಯಕ್ಷಗೋಚರನಾದ ಸವಿತೃಸೂರ್ಯನಾರಾಯಣನು, (ಶ್ರೇಷ್ಠತಮಾಯ ಕರ್ಮಣೇ) ಯಜ್ಞದಂಥ ಶ್ರೇಷ್ಠಾತಿಶ್ರೇಷ್ಠವಾದ ಕರ್ಮ ನಡೆಸಲು ಬೇಕಾದ ಹವಿಃಪದಾರ್ಥಗಳ ಹೇರಳವಾದ ಸರಬರಾಜಿಗೆ ಬೇಕಾದ ದೊಡ್ಡಪ್ರಮಾಣದ ಗೋಕ್ಷೀರ / ಹಾಲು ಮುಂತಾದ ಸುವಸ್ತುಗಳ ಪ್ರಾಪ್ತಿಯಾಗಲು ಚೆನ್ನಾಗಿ ಮೇಯಲು ಪ್ರೇರೇಪಿಸಲಿ / ಪ್ರಚೋದಿಸಲಿ. ಗೋವುಗಳ ಮಲ-ಮೂತ್ರ / ಗೋಮಯ-ಗೋಮೂತ್ರಗಳೂ ಪಂಚಗವ್ಯ, ಯಜ್ಞಸ್ಥಳ ಶುದ್ಧಿ ಮುಂತಾದವುಗಳಿಗೆ ಅಗತ್ಯ. ಅಲ್ಲದೆ ಇವುಗಳಿಂದ ಫಲವತ್ತಾದ ಕಾಡಿನ ಮಣ್ಣಿನಲ್ಲಿ ವನಸ್ಪತಿಗಳು ಹುಲುಸಾಗಿ ಬೆಳೆಯುವುವು. ಗೋಷ್ಪದ / ಗೋವುಗಳ ಕಾಲಿನ ಗೊರಸುಗಳಿಂದಾಗಿ ನೆಲವೂ ಉಳುಮೆಯಾದಂತಾಗಿ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗಿ, ಯಜ್ಞ ಸಮಿಧೆಗಳು ಸಾಕಷ್ಟು ಬೆಳೆಯುವುವು.
(ಆಪ್ಯಾಯಧ್ವಮ್) ಎಲೈ ಮಾನವರೇ! ನಿಮ್ಮ ಶ್ರೇಯಸ್ಸಿಗೆ (ಪಾರಲೌಕಿಕ) ಹಾಗೂ ಪ್ರೇಯಸ್ಸಿಗೆ (ಲೌಕಿಕ) ದೇವತಾನುಗ್ರಹ ಅತ್ಯಗತ್ಯ. ದೇವತಾಪ್ರಸನ್ನತೆಯು ಪೂಜಾಯಜ್ಞಾದಿಗಳಿಂದ ಸಾಧ್ಯ. ಅದಕ್ಕೆ ಬೇಕಾದ ಹವಿರ್ದ್ರವ್ಯಗಳಿಗೆ ಗೋವುಗಳು ಆಧಾರವೆಂದು ಮೇಲೆ ಚರ್ಚಿಸಿದೆವು. ಹಾಗಾಗಿ ಗೋವುಗಳನ್ನು ಆಪ್ಯಾಯಮಾನತೆಯಿಂದ / ಪ್ರೀತಿಯಿಂದ ಕಾಣಿರಿ, ಸಾಕಿ ಸಲಹಿರಿ. ಯಾಕೆಂದರೆ, ಗೋಪಾಲನೆಯಲ್ಲೇ ನಮ್ಮ ಉದ್ಧಾರ ಅಡಗಿದೆ. (ಅ-ಘ್ನಿಯಾಃ) ಗೋವುಗಳನ್ನು ಹಾಗಾಗಿ ಹಿಂಸಿಸಬಾರದು, ಕೊಲ್ಲಬಾರದು. ಗೋವುಗಳು ಅಹಿಂಸ್ಯ, ಅವಧ್ಯ. (ದೇವಭಾಗಮ್) ಅವು ಇಂದ್ರಾದಿ ದೇವತೆಗಳ ಹವಿರ್ಭಾಗವನ್ನು ಒದಗಿಸುತ್ತಾ ನಮ್ಮ ಉದ್ಧಾರದ ಕೀಲಿಕೈಗಳಾಗಿವೆ. (ಊರ್ಜಸ್ವತೀಃ) ಊರ್ಜಾಯುತರಾಗಲಿ, ಶಕ್ತಿಯುತರಾಗಲಿ, ಬಲಿಷ್ಠರಾಗಲಿ ಅಂತಹ ಗೋವುಗಳು. (ಪಯಸ್ವತೀಃ) ಅಧಿಕಾಧಿಕ ಹಾಲು ಕೊಡುವವುಗಳಾಗಲಿ. (ಪಯಸ್=ಹಾಲು). (ಪ್ರಜಾವತೀಃ) ಸಾಕಷ್ಟು ಸಂಖ್ಯೆಯ ಪ್ರಜಾಸಂಪತ್ತು / ಸಂತತಿ / ಕರುಗಳನ್ನು ಹಡೆಯಲಿ. (ಅನಮೀವಾಃ) ಕರುಗಳೂ, ಗೋಮಾತೆಯರೂ, ಗೋವೃಷಭಗಳೂ ರೋಗರಹಿತರಾಗಲಿ. (ಅಮ=ರೋಗ, ಅಮೀವಾಃ=ರೋಗಿಷ್ಠರು, ಅನ್+ಅಮೀವಾಃ=ರೋಗರಹಿತರು). (ಅಯಕ್ಷ್ಮಾಃ) ರಾಜಯಕ್ಷ್ಮ, ಕ್ಷಯಾದಿರೋಗಗಳಿಲ್ಲದಿರಲಿ. ಗೋವುಗಳು ಶರೀರಕ್ಷಯದಿಂದ ದುರ್ಬಲರಾಗದಿರಲಿ. (ವಃ / ಯುಷ್ಮಾನ್) ಹೇ ಗೋವುಗಳೆ! ನಿಮ್ಮನ್ನು, (ಸ್ತೇನಃ) ಚೋರನು / ಕಳ್ಳನು (“ಸ್ತೇನಯತಿ ಇತಿ ಸ್ತೇನಃ”— ಕದಿಯುತ್ತಾನೆಂಬುದರಿಂದ ಕಳ್ಳ), (ಮಾ ಈಶತ) ಆಳದಿರಲಿ / ಕದಿಯಲು ಸಮರ್ಥನಾಗದಿರಲಿ / ಶಕ್ತನಾಗದಿರಲಿ. ಕಳ್ಳನು ನಿಮ್ಮ ಈಶ್ವರ / ಒಡೆಯನಾಗದಿರಲಿ. (ಅಘಶಂಸಃ ಮಾ) ಪಾಪಿಗಳು / ಪಾಪಕಾರ್ಯವನ್ನು ಪ್ರಶಂಸಿಸುವವರು / ಅದನ್ನೇ ಚರ್ಚಿಸುವವರು ಸಹ ನಿಮ್ಮನ್ನು ಹೊಂದದಿರಲಿ. ಪಾಪಿಗಳ ಕೈವಶವಾಗದಿರಿ ಹೇ ಗೋವುಗಳೆ! (ರುದ್ರಸ್ಯ ಹೇತಿಃ) ರುದ್ರದೇವನ ಆಯುಧವು (“ಹನ್ಯತೇ ಅನಯಾ ಇತಿ ಹೇತಿಃ”— ಇದರಿಂದ ಕೊಲ್ಲಲ್ಪಪಡುತ್ತದೆಂಬುದರಿಂದ ಹೇತಿ— ಶಸ್ತ್ರ, ಆಯುಧ), (ವಃ / ಯುಷ್ಮಾನ್) ಗೋವುಗಳಾದ ನಿಮ್ಮನ್ನು, (ಪರಿ-ವೃಣಕ್ತು) ಸುತ್ತಮುತ್ತ ಎಲ್ಲೆಡೆಯಿಂದ (ಪರಿತಃ) ರಕ್ಷಿಸಲಿ (ವೃಞ್ / ವೃ ವರಣೇ ಸಂಭಕ್ತೌ ಆವರಣೇ ಧಾತುಃ— ಆಯ್ಕೆ, ಉಪಚಾರ, ಆವರಿಸುವಿಕೆ ಎಂಬರ್ಥ) / ದುಷ್ಟನಿಗ್ರಹಕ್ಕಾಗಿರುವ ತನ್ನ ಆಯುಧಕ್ಕೆ ರುದ್ರನು ಗೋವುಗಳನ್ನು ಗುರಿಯಾಗಿ ಆಯ್ಕೆ ಮಾಡದಿರಲಿ. (ಅಸ್ಮಿನ್ ಗೋಪತೌ) ಈ ಗೋಪಾಲಕ / ಗೋಪತಿ / ಯಜಮಾನನಲ್ಲಿ, (ಧ್ರುವಾಃ ಬಹ್ವೀಃ ಸ್ಯಾತ) ಶಾಶ್ವತವಾಗಿ (“ಧ್ರುವತಿ ಸ್ಥಿರೀಭವತಿ ಇತಿ ಧ್ರುವಮ್”) ಬಹುಸಂಖ್ಯೆಯಲ್ಲಿ ಬೆಳೆದು ನೆಲೆಸಿರಲಿ. (ಯಜಮಾನಸ್ಯ ಪಶೂನ್ ಪಾಹಿ) ಯಜಮಾನನ / ಯಜ್ಞಕರ್ತೃವಿನ ಗೋವುಗಳನ್ನು / ಪಶುಗಳನ್ನು ರಕ್ಷಿಸು ಹೇ ಪರಮಾತ್ಮನೆ! / ಹೇ ಪಲಾಶಶಾಖೆಯೆ! ಎಂದು ಕತ್ತರಿಸಿದ ಪಲಾಶಗೆಲ್ಲನ್ನು ಮಣ್ಣಿನಲ್ಲಿ ಹೂತಿಡಲಾಗುತ್ತದೆ. ಇದು ನಮ್ಮ ಮಹರ್ಷಿಗಳ ಪರಿಸರಪ್ರೇಮ, ವೃಕ್ಷಪ್ರೇಮ, ಪ್ರಾಣಿದಯೆ, ಗೋಭಕ್ತಿ ಮುಂತಾದವುಗಳನ್ನು ತಿಳಿಸುತ್ತದೆ. ಕಡಿದ ಪಲಾಶದ ಗೆಲ್ಲು ವ್ಯರ್ಥವಾಗದಿರಲೆಂದು ಅದನ್ನು ನೆಟ್ಟು ಪುನಃ ಚಿಗುರಿ ಮತ್ತೊಂದು ಪಲಾಶವೃಕ್ಷ ಬೆಳೆಯುವಂತೆ ಮಾಡುವ ಈ ವೈದಿಕ ಪ್ರಕ್ರಿಯೆ ನಮ್ಮ ಪೂರ್ವಜರ ಆ ಕಾಲದಲ್ಲೇ ಇದ್ದ ಪ್ರಕೃತಿಸಂರಕ್ಷಣೆಯ ಪ್ರಜ್ಞೆಯ ಮಟ್ಟ ಎಷ್ಟು ಉನ್ನತವಾಗಿತ್ತೆಂದು ತೋರಿಸುತ್ತದೆ.
ಆಧ್ಯಾತ್ಮಿಕ ಅರ್ಥ—
ಹೇ ವಾಯುವೇ(ಜೀವಶಕ್ತಿಗಳೇ)! ಪ್ರೇರಣೆಗಾಗಿ (ಇಷೇ) ಹಾಗೂ ವರ್ಧಮಾನಶಕ್ತಿಗಾಗಿ (ಊರ್ಜೇ) ನಿನ್ನನ್ನು(ನಿಮ್ಮನ್ನು) ಆವಾಹಿಸುತ್ತೇವೆ. ನೀನು(ನೀವು) ಮನುಷ್ಯರಿಗಾಗಿ ಇದ್ದೀಯೆ(ಇದ್ದೀರಿ). ಸವಿತೃದೇವನು ಅತ್ಯುತ್ಕೃಷ್ಟಕಾರ್ಯಗಳನ್ನು ಮಾಡಲು ನಿಮ್ಮನ್ನು(ಜನರನ್ನು) ಪ್ರೇರೇಪಿಸುವಂತಾಗಲಿ. ಓ ಅವಧ್ಯನೇ! ದೇವತೆಗಳ ಪಾಲನ್ನು ಹೆಚ್ಚಿಸು. ಬಲಭರಿತನೇ, ಪ್ರೀತಿಭರಿತನೇ, ಸಂತಾನಭರಿತನೇ, ದುಃಖರಹಿತನೇ, ಸೀಮಾತೀತನೇ! ಚೋರರೂ ಪಾಪಿಗಳೂ ನಿನ್ನನ್ನು ನಿಯಂತ್ರಿಸದಿರಲಿ. ರುದ್ರನ ಈಟಿಯು ನಿಮ್ಮನ್ನು(ಜನರನ್ನು) ಇರಿಯುವಂತೆ ಆಗದಿರಲಿ (ಜ್ಞಾನಕಿರಣಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ರುದ್ರನ ಶಕ್ತಿಯು ಸಂರಕ್ಷಿಸುತ್ತದೆ). ಬಹುಮುಖನಾದ ನೀನು ಈ ಜ್ಞಾನದ ಅಧಿದೇವತೆಯೊಂದಿಗೆ ಸದಾ ನೆಲೆಸು. ಯಜ್ಞಕರ್ತೃವಿನ ಜ್ಞಾನವನ್ನು (ಜ್ಯೋತಿರ್ಗೋವುಗಳನ್ನು) ಸಂರಕ್ಷಿಸು.
ಸಾಯಣಭಾಷ್ಯಾರ್ಥ( ಸಾ.ಭಾ.)-
ಇಷೇ ತ್ವಾ - ದರ್ಶಯಾಗಮಾಡಲಿಚ್ಛಿಸುವವನು ಅಮಾವಾಸ್ಯೆಯಲ್ಲಿ ಪ್ರಾತರಗ್ನಿಯನ್ನು ಹೋಮಿಸಿ, ದರ್ಶಯಾಗಕ್ಕಾಗಿ ‘ಮಮಾಗ್ರೇ ವರ್ಚ:’ ಇತ್ಯಾದಿ ಮಂತ್ರಗಳಿಂದ ಅಗ್ನಿಯಲ್ಲಿ ಸಮಿತ್ತುಗಳನ್ನರ್ಪಿಸುವ ಮೂಲಕ ಅಗ್ನಿಯನ್ನು ಸ್ಥಿರಗೊಳಿಸಿ, ವತ್ಸಾಪಾಕರಣಾರ್ಥಮಂತ್ರದಿಂದ ಪಲಾಶವೃಕ್ಷದ ಗೆಲ್ಲನ್ನು ಕತ್ತರಿಸಬೇಕು. ಬೋಧಾಯನರ ಪ್ರಕಾರ, “ತಾಮ್ ಆಚ್ಛಿನತ್ತಿ ಇಷೇ ತ್ವಾ ಊರ್ಜೇ ತ್ವಾ” - “ಇಷೇ ತ್ವೋರ್ಜೇ ತ್ವಾ” ಎಂಬ ಮಂತ್ರದಿಂದ ಆ ಪಲಾಶದ ಗೆಲ್ಲನ್ನು ಕತ್ತರಿಸುತ್ತಾನೆ.
ಊರ್ಜೇ ತ್ವಾ - ಆಪಸ್ತಂಬರ ಪ್ರಕಾರ, “ಇಷೇ ತ್ವೋರ್ಜೇ ತ್ವೇತಿ ತಾಮ್ ಆಚ್ಛಿನತ್ತಿ ಅಪಿ ವಾ ಇಷೇ ತ್ವಾ ಇತಿ ಆಚ್ಛಿನತ್ತಿ ಊರ್ಜೇ ತ್ವಾ ಇತಿ ಸಂನಮಯತಿ ಅನುಮಾರ್ಷ್ಟಿ ವಾ” - “ಇಷೇ ತ್ವಾ” ಎಂದು ಕತ್ತರಿಸುತ್ತಾನೆ ಮತ್ತು “ಊರ್ಜೇ ತ್ವಾ” ಎಂದು ಕತ್ತರಿಸಿದ ಪಲಾಶಶಾಖೆಯನ್ನು ಕೆತ್ತಿ, ಕತ್ತರಿಸಿ ಸರಿಪಡಿಸುತ್ತಾನೆ ಅಥವಾ ಕತ್ತರಿಸಿದ ಅನಂತರ ಅದನ್ನು ಚೆನ್ನಾಗಿ ತೊಳೆದು, ಧೂಳು,ಕೊಳೆ ಇತ್ಯಾದಿಗಳನ್ನು ಹೋಗಲಾಡಿಸುತ್ತಾನೆ. “ಸಂನಮನಂ ಋಜುಕರಣಮ್ | ಅನುಮಾರ್ಜನಮ್ ಆನುಲೋಮ್ಯೇನ ಸಂಲಗ್ನಧೂಲ್ಯಾದಿ-ಅಪನಯನಮ್ ||”
“ಇಡ್ ಇತಿ ಅನ್ನಂ ಸರ್ವೈ: ಪ್ರಾಣಿಭಿ: ಇಷ್ಯಮಾಣತ್ವಾತ್ | ಊರ್ಕ್ ಬಲಹೇತು:, ರಸ: | ಊರ್ಜ ಬಲಪ್ರಾಣನಯೋ: ಇತಿ ಧಾತು: | ಊರ್ಜ್ಯತೇ ಬಲಂ ಸಂಪಾದ್ಯತೇ ಅನಯಾ ರಸರೂಪಯಾ ಇತಿ ಊರ್ಕ್ | ಹೇ ಪಲಾಶಶಾಖೇ! ದೇವಾನಾಂ ಭಾಗರೂಪದಧ್ಯರ್ಥಂ ತ್ವಾಮ್ ಆಚ್ಛಿನದ್ಮಿ | ತಸ್ಯ ದೇವಸ್ಯ ಬಲಪ್ರದ-ರಸಾರ್ಥಂ ತ್ವಾಮಾಚ್ಛಿನದ್ಮಿ ಇತಿ ವಾಕ್ಯಾರ್ಥ: | ಮಂತ್ರದ್ವಿತ್ವಪಕ್ಷೇ ವಿನಿಯೋಗಾನುಸಾರೇಣ ಊರ್ಜೇ ತ್ವಾಮ್ ಅನುಮಾರ್ಜ್ಮಿ ಇತಿ ಅಧ್ಯಾಹಾರ್ಯಮ್ | ಏತತ್ ಮಂತ್ರ: ತಾವಕಮ್ ಅರ್ಥವಾದಮ್ ಆಹ - ಇಷಮ್ ಏವ ಊರ್ಜಂ ಯಜಮಾನೇ ದಧಾತಿ (ತೈ.ಬ್ರಾಹ್ಮಣ, ಕಾಂಡ ೩, ಪ್ರಶ್ನ ೨, ಅಧ್ಯಾಯ ೧) ಇತಿ | ಏತನ್ಮಂತ್ರಪಾಠೇನ ಅಧ್ವರ್ಯು: ಭೋಜನಾಯ ಅನ್ನಂ ಬಲಾಯ ಚ ರಸಂ ಯಜಮಾನೇ ಸಂಪಾದಯತಿ |”
ಅನುವಾದ- ಎಲ್ಲ ಪ್ರಾಣವಂತರಿಂದ ಇಷ್ಟಪಡಲ್ಪಡುವಂಥದ್ದು ಎಂಬುದರಿಂದಾಗಿ ಇಡ್ ಅಂದರೆ ಅನ್ನ. ಊರ್ಕ್ ಎಂದರೆ ಬಲಕ್ಕೆ ಕಾರಣವಾದ ರಸ. ಊರ್ಜ ಬಲಪ್ರಾಣನಯೋ: ಎಂಬ ಧಾತು(ಕ್ರಿಯಾಪದದ ಮೂಲರೂಪ). ಈ ರಸರೂಪದಿಂದ ಬಲವು/ಊರ್ಜೆಯು ಸಂಪಾದಿಸಲ್ಪಡುವುದು, ಎಂಬುದರಿಂದಾಗಿ ಊರ್ಕ್. ಹೇ ಪಲಾಶದ ಗೆಲ್ಲೇ! ದೇವತೆಗಳ ಹವಿರ್ಭಾಗವನ್ನು ಯಜ್ಞಮುಖೇನ ಅರ್ಪಿಸಲೋಸುಗ ನಿನ್ನನ್ನು ಕತ್ತರಿಸುತ್ತೇನೆ. ಆ ದೇವನ ಬಲಪ್ರದವಾದ ರಸಪ್ರಾಪ್ತಿಗಾಗಿ ನಿನ್ನನ್ನು ತುಂಡರಿಸುತ್ತೇನೆ ಎಂದು ವಾಕ್ಯದ ಅರ್ಥ. ಇಷೇ ತ್ವೋರ್ಜೇತ್ವಾ - ಇಲ್ಲಿ ೨ ಮಂತ್ರಗಳಿವೆಯೆಂಬ ಪಕ್ಷದಲ್ಲಿ, ವಿನಿಯೋಗಾನುಸಾರವಾಗಿ ಊರ್ಜೆ/ಬಲಕ್ಕಾಗಿ ನಿನ್ನನ್ನು ತೊಳೆದು(ಮಾರ್ಜನ ಮಾಡಿಸುತ್ತೇನೆ) ಸ್ವಚ್ಛಗೊಳಿಸುತ್ತೇನೆ ಎಂದು ಅಧ್ಯಾಹಾರ ಮಾಡಿಕೊಳ್ಳಬೇಕು. ಈ ಕೆಳಗಿನ ತೈತ್ತಿರೀಯ ಬ್ರಾಹ್ಮಣದ ಮಂತ್ರವು ಅಂತಹ ಅರ್ಥವಾದವನ್ನು ಹೇಳಿದೆ- ಅನ್ನವೇ ಬಲವನ್ನು ಯಜಮಾನನಿ(ಯಜ್ಞಕರ್ತೃವಿ)ಗೆ ಕೊಡುತ್ತದೆ ಎಂದು. ಈ ಮಂತ್ರದ ಪಠಣದಿಂದ ಯಜ್ಞದ ಅಧ್ವರ್ಯುವು (ಹವಿಸ್ಸನ್ನು ಯಜುರ್ಮಂತ್ರಗಳನ್ನುಚ್ಚರಿಸುತ್ತಾ ಹೋಮಿಸುವವ) ಯಜಮಾನನಿಗೆ ಉಣ್ಣಲು ಅನ್ನ ಹಾಗೂ ಬಲಕ್ಕೆ ಪೂರಕವಾದ ರಸವನ್ನು ಸಂಪಾದಿಸಿ ಕೊಡುತ್ತಾನೆ.
ವಾಯವ: ಸ್ಥ ಉಪಾಯವ: ಸ್ಥ - ಬೋಧಾಯನರು ಹೇಳುತ್ತಾರೆ- “ತಯಾ ವತ್ಸಾನಪಾಕರೋತಿ ವಾಯವ: ಸ್ಥೋಪಾಯವ: ಸ್ಥೇತಿ” ಎಂದು. ಈ ಮಂತ್ರದಿಂದ ಗೋವುಗಳ ಕರುಗಳನ್ನು ಮೇಯಲು ಹಟ್ಟಿಯಿಂದ ಹೊರಕ್ಕೆ ಕಳುಹಿಸುತ್ತಾನೆ.
“ವಾಂತಿ ಗಚ್ಛಂತಿ ಇತಿ ವಾಯವ: ಗಂತಾರ: | ಉಪಸಮೀಪೇ ಯಜಮಾನಗೃಹೇ ಪುನರಾಯಂತಿ ಆಗಚ್ಛಂತಿ ಇತಿ ಉಪಾಯವ: |” - ಬೀಸುತ್ತವೆ, ಚಲಿಸುತ್ತವೆ, ಹೋಗುತ್ತವೆ ಎಂಬುದರಿಂದಾಗಿ ವಾಯುಗಳು ಎನ್ನಲ್ಪಡುತ್ತವೆ. ಯಜಮಾನನ ಮನೆಗೆ ಪುನ: ಬರುತ್ತವೆ ಎಂಬುದರಿಂದಾಗಿ ‘ಉಪಾಯವ:’. ಹೇ ಕರುಗಳೇ! ಹುಲ್ಲುಮೇಯಲು, ಮೊದಲು ತಾಯ ಸಾಮೀಪ್ಯವನ್ನು ತೊರೆದು ಅರಣ್ಯದಲ್ಲಿ ಸ್ವೇಚ್ಛೆಯಿಂದ ವಿಹರಿಸುವವರಾಗಿರಿ. ಸಂಜೆ ಪುನ: ಯಜಮಾನನ ಮನೆಗೆ ಬರುವವರಾಗಿರಿ ಎಂದು ಅಧ್ವರ್ಯುಗಳು ಯಜ್ಞಕರ್ತೃವಿನ ಪರವಾಗಿ ಪ್ರಾರ್ಥಿಸುತ್ತಾರೆ.
-ಅಥವಾ-
“ವಾಯವ: ಸ್ಥ ಇತಿ ಆಹ | ವಾಯು: ವಾ ಅಂತರಿಕ್ಷಸ್ಯ ಅಧ್ಯಕ್ಷಾ: | ಅಂತರಿಕ್ಷದೇವತ್ಯಾ: ಖಲು ವೈ ಪಶವ: | ವಾಯವ: ಏವ ಏನಾನ್ ಪರಿದದಾತಿ |” ಎಂಬ ತೈ.ಬ್ರಾಹ್ಮಣದ ನಿರ್ವಚನದಂತೆ, ವಾಯುವು ಅಂತರಿಕ್ಷದೆಲ್ಲೆಡೆ ಸಂಚಾರದಲ್ಲಿದ್ದು, ಸ್ಥಿತವಾಗಿರುವುದರಿಂದ, ಕರುಗಳ ಸಂಚಾರಕ್ಕೆ ಬೇಕಾದಷ್ಟು ಅವಕಾಶವನ್ನು ನೀಡುತ್ತಾನೆ. ಆದ್ದರಿಂದ, ಕರು/ಪಶುಗಳನ್ನು ವಾಯುವಿನ ಸುಪರ್ದಿಗೆ ಕೊಟ್ಟು, ಪುನ: ಮರಳುವವರೆಗೆ ಅವುಗಳನ್ನು ಕಾಪಾಡಬೇಕೆಂದು ಪ್ರಾರ್ಥಿಸಲಾಗಿದೆ. ತೈ.ಬ್ರಾಹ್ಮಣದಲ್ಲಿ ಇನ್ನೊಂದೆಡೆ ಹೀಗೆ ಹೇಳಲಾಗಿದೆ- “ಪ್ರ ವಾ ಏನಾನ್ ಏತತ್ ಆಕರೋತಿ | ಯತ್ ಆಹ | ವಾಯವ: ಸ್ಥ ಇತಿ |” - ವಾಯುವು ಈ ಪಶುಗಳನ್ನು ಕೊಂಡೊಯ್ಯುತ್ತಾನೆ. ಅಧ್ವರ್ಯುವು ಈ ಮಂತ್ರೋಚ್ಚಾರದಿಂದ ಪಶುಗಳನ್ನು ವಾಯುತಾದಾತ್ಮ್ಯಗೊಳಿಸುತ್ತಾನೆ. “ಉಪಾಯವ: ಸ್ಥ ಇತಿ ಆಹ | ಯಜಮಾನಾಯ ಏವ ಪಶೂನ್ ಉಪಾಹ್ವಯತೇ |” - ಯಜಮಾನನಿಗೇ ಪಶುಗಳನ್ನು ಪುನ: ವಾಯುವು ತಂದೊಪ್ಪಿಸುತ್ತಾನೆ. ಕರೆತರುವಂತೆ ಅಧ್ವರ್ಯುವು ವಾಯುದೇವನನ್ನು ಪ್ರಾರ್ಥಿಸುತ್ತಾನೆ.
ಹೇ ಕರುಗಳೇ ! ನೀವು ಮನೆಯಿಂದ ಕಾಡಿಗೆ ಮೇಯಲು ಹೋಗುವವುಗಳಾಗಿ; ಮರಳಿ ಸಂಜೆ ಬರುವವುಗಳೂ ಆಗಿರಿ, ಎನ್ನುವ ವಿಧ್ಯರ್ಥಕ (ವಿಧಿಲಿಙ್ ಲಕಾರಾರ್ಥಕ) ವಾಕ್ಯ ಇದಾಗಿದೆ. ಯಾಕೆಂದರೆ, ವೇದಗಳು ಪ್ರಭುಸಂಮಿತ ಗ್ರಂಥಗಳು; ರಾಜಶಾಸನದಂತೆ ಧರ್ಮಕರ್ಮಾದಿಗಳನ್ನು ಹೀಗೆಯೇ ಮಾಡಬೇಕೆಂದು ವಿಧಿಸುವ, ಬೇರೆ ಮೂಲಪ್ರಮಾಣವನ್ನು ಅಪೇಕ್ಷಿಸದ, ಇದಮಿತ್ಥಂ ಎಂಬ ಶ್ರುತಿ/ಆಗಮ ಪ್ರಮಾಣಗಳಾಗಿವೆ.
“ಉಪವ್ಯಾನೇऽನುವಾದೋ ವಾ ವಿಧಿರ್ವಾऽऽದ್ಯೋ ಯತ: ಸ್ಮೃತೌ |
ಪ್ರಾಪ್ತಂ ಮೈವಮಪೂರ್ವತ್ವಾತ್ ಕ್ರತೌ ಲೇಟಾ ವಿಧೀಯತೇ ||”
ತಲೆಬಾಗಿ ನಮಸ್ಕರಿಸುವಾಗ/ದೇವತೋಪಾಸನೆಯಲ್ಲಿ, ಮಂತ್ರಗಳ ಅನುವಾದವನ್ನು ಬ್ರಾಹ್ಮಣಾದಿಗಳಲ್ಲಿ ಮಾಡುವಾಗ, ಪ್ರಧಾನವಾದ/ಮೂಲ ಕರ್ಮವಿಧಿಗಳನ್ನು- ಯಾವುದಕ್ಕಾಗಿ ಸ್ಮೃತಿಗಳುದ್ಭವಿಸಿದವೋ ಅಂಥವುಗಳನ್ನು- ಹೇಳುವಾಗ, ಯಾವ ಯಜ್ಞಾದಿ ವಿಧಿವಿಧಾನಗಳಿಗೆ ಈ ವಿಧವಾಗಿ ಇದಕ್ಕೂ ಪೂರ್ವದಲ್ಲಿ(ಹಿಂದೆ) ಯಾವ ಬೇರೆ ಆಧಾರ ಪ್ರಮಾಣಗಳಿಲ್ಲವೋ, ಅಂತಹ ಸಂದರ್ಭಗಳಲ್ಲಿ ವೇದಗಳಲ್ಲಿ ಕ್ರಿಯಾಪದಗಳಿಗೆ ‘ಲೇಟ್ ಲಕಾರ’ರೂಪಗಳು ಬಳಸಲ್ಪಟ್ಟಿವೆ.
“ವಾಯವ: ಸ್ಥೋಪಾಯವ: ಸ್ಥ- ಇತ್ಯತ್ರ ತಸ್ಯ ಚ ವಿಧಾಯಕತ್ವಂ ಲಿಙರ್ಥೇ ಲೇಟ್ (ಪಾಣಿನೀಯಸೂತ್ರ೭, ಪಾದ ೪, ಅಧ್ಯಾಯ ೩) ಇತಿ ಸೂತ್ರಸಿದ್ಧಮ್ ||” ಇದರ ಸೂಚನೆಯು - ಲಿಙ್ ಲಕಾರಾರ್ಥಕವಾಗಿ ಲೇಟ್ ಲಕಾರ. ಆದ್ದರಿಂದ, ಸವತ್ಸ ಗೋವುಗಳು ಮೇಯಲು ಹೋಗುವವುಗಳಾಗಲಿ; ನಂತರ, ಸಂಜೆ ಮರಳಿ ಬರುವವುಗಳಾಗಲಿ- ಎಂಬ ವಿಧಿಲಿಙ್ ಅರ್ಥಕವಾದ ಲೇಟ್ ಲಕಾರವನ್ನು ಪ್ರಯೋಗಿಸಿ ‘ಸ್ಥ’ವನ್ನು ಬಳಸಲಾಗಿದೆ.(ಅಸ ಭುವಿ ಧಾತು, ಅಸ್ತಿ- ಲಟ್ ಲಕಾರರೂಪ, ಇರುವಿಕೆ, ಆಗಿರುವಿಕೆ, ಅಸ್ತಿತ್ವ ಎಂಬರ್ಥ ಸೂಚಕ).
ದೇವೋ ವ: - ಬೌಧಾಯನರು ಈ ಮಂತ್ರದ ವಿನಿಯೋಗವನ್ನು ಹೀಗೆ ಹೇಳುತ್ತಾರೆ - “ಅನಂತರ ಈ ಕರುಗಳ ಅಮ್ಮಂದಿರನ್ನು/ಗೋಮಾತೆಯರನ್ನು ಈ ಮಂತ್ರಗಳಿಂದ ಪ್ರೇರಿಸುತ್ತಾನೆ”.
ಆಪಸ್ತಂಬರಾದರೋ ಈ ಮೂರು ಮಂತ್ರಗಳಿಗೆ ಪ್ರತ್ಯೇಕವಾದ ೩ ವಿನಿಯೋಗಗಳನ್ನು ಹೇಳುತ್ತಾರೆ.
೧) “ದೇವೋ ವ: ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ |” ಎಂಬ ಮಂತ್ರದಿಂದ ಪಲಾಶಕೋಲಿನಿಂದ ಗೋವುಗಳನ್ನು ಗೋಚರ(ಗೋವುಗಳು ಮೇಯುವ/ಸಂಚರಿಸುವ ಸ್ಥಳ)ಕ್ಕೆ ಹೊರಡಿಸುತ್ತಾನೆ.
೨) “ಆಪ್ಯಾಯಧ್ವಮಘ್ನಿಯಾ ದೇವಭಾಗಮೂರ್ಜಸ್ವತೀ: ಪಯಸ್ವತೀ: ಪ್ರಜಾವತೀರನಮೀವಾ ಅಯಕ್ಷ್ಮಾ ಮಾ ವ: ಸ್ತೇನ ಈಶತ ಮಾऽಘಶಗ್ಂಸ: |” - ಈ ಮಂತ್ರದಿಂದ, ಈಗಾಗಲೇ ಹೊರಟು ನಿಂತಿರುವ ಗೋಮಾತೆಯರಲ್ಲಿ ಒಂದನ್ನು ಕರುಗಳ,ದೇವತೆಗಳ ಹಾಗೂ ಮನುಷ್ಯರ ಅಭಿವರ್ಧನೆಗಾಗಿ ಪ್ರೀತಿಯಿಂದ ವರ್ತಿಸುವಂತೆ ದರ್ಭೆಗಳಿಂದ ನಯವಾಗಿ ಸ್ಪರ್ಶಿಸುತ್ತಾನೆ.
೩) “ರುದ್ರಸ್ಯ ಹೇತಿ: ಪರಿ ವೋ ವೃಣಕ್ತು |” ಎಂಬ ಮಂತ್ರವನ್ನು, ಗೋಚರಕ್ಕೆ ಹೊರಟಿರುವ ಗೋವುಗಳು ಮನೆಯಿಂದ ದೂರಹೋದ ಬಳಿಕ, ಪಠಿಸುತ್ತಾ, ರುದ್ರನ ಆಯುಧವು ದುಷ್ಟಶಕ್ತಿಗಳಿಂದ ಗೋವುಗಳನ್ನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ.
ವಿವರಣೆ:-
೧) ಹೇ ಗೋವುಗಳೇ ! ಸಮಸ್ತ ಲೋಕದ ಪ್ರೇರಕನೂ, ದಿವ್ಯನೂ, ಅಂತರ್ಯಾಮಿಯೂ ಆದ ಪರಮೇಶ್ವರನು, ಅತ್ಯಂತ ಶ್ರೇಷ್ಠತಮವಾದ ಇಂದ್ರದಧಿರೂಪವಾದ {(ದಧಿ-ಮೊಸರು); ಇಂದ್ರಾದಿದೇವತೆಗಳಿಗೆ ಅರ್ಪಿಸಲು ಬೇಕಾದ ಯಜ್ಞಹವಿಸ್ಸಾದ ಆಜ್ಯ(ಘೃತಮ್, ಸರ್ಪಿ:, ತುಪ್ಪ)ವನ್ನು ಸಂಪಾದಿಸಿಕೊಡುವ ಹಾಲು, ಅದರಿಂದ ಮೊಸರು- ಇತ್ಯಾದಿಗಳ ಹೇರಳ ಲಭ್ಯತೆಗೆ ಪೂರಕವಾಗಿ ಹಸುಗಳು ಪುಷ್ಟಿ ಹೊಂದಲು} ಕರ್ಮಕ್ಕೋಸ್ಕರವಾಗಿ ನಿಮ್ಮನ್ನು(ವ:/ಯುಷ್ಮಾನ್, ಗೋವುಗಳನ್ನು) ಅರಣ್ಯಕ್ಕೆ ಹೋಗಿ ಗ್ರಾಸ(ಅವುಗಳ ಆಹಾರವಾದ ಹುಲ್ಲು, ಸೊಪ್ಪು ಇತ್ಯಾದಿ)ವನ್ನು ತಿನ್ನಲು/ ಮೇಯಲು ಪ್ರೇರಿಸಲಿ. “ಸವಿತಾ ಪ್ರಾರ್ಪಯತು(ಪ್ರೇರಯತು)” ಎಂಬಲ್ಲಿನ ಸವಿತೃ ಶಬ್ದದ ತಾತ್ಪರ್ಯವನ್ನು ತೈ.ಬ್ರಾಹ್ಮಣವು ಹೀಗೆ ಹೇಳುತ್ತದೆ - “ದೇವೋ ವ: ಸವಿತಾ ಪ್ರಾರ್ಪಯತು ಇತ್ಯಾಹ ಪ್ರಸೃತ್ಯೈ |” ; ಪ್ರೇರಣೆಗಾಗಿ ಎಂದರ್ಥ. “ಶ್ರೇಷ್ಠತಮಾಯ ಕರ್ಮಣ ಇತ್ಯಾಹ | ಯಜ್ಞೋ ಹಿ ಶ್ರೇಷ್ಠತಮಂ ಕರ್ಮ | ತಸ್ಮಾತ್ ಏವಮ್ ಆಹ |”(ತೈ.ಬ್ರಾ.) ಯಜ್ಞವೇ ಸರ್ವಶ್ರೇಷ್ಠವಾದ ಕರ್ಮವಷ್ಟೆ? ಆದ್ದರಿಂದ ಹೀಗೆ ಹೇಳಲಾಗಿದೆ. ಯಜ್ಞಕ್ಕೆ ಬೇಕಾದ ಘೃತವೆಂಬ ಹವಿಸ್ಸನ್ನು ಪಡೆಯಲು, ಗೋವುಗಳು ನೀಡುವ ಹಾಲೇ ಮೂಲವಾದ್ದರಿಂದ ಅವುಗಳು ಹೆಚ್ಚು ಹೆಚ್ಚು ಹಾಲು ಕೊಡಲು, ಚೆನ್ನಾಗಿ ಮೇಯಲು, ಪರಮಾತ್ಮನು ಅವುಗಳನ್ನು ಪ್ರೇರಿಸಲಿ ಎಂದರ್ಥ.
೨) ದ್ವಿತೀಯಮಂತ್ರದ ಪದವಿಭಾಗ - “ಆಪ್ಯಾಯಧ್ವಮ್ ಅಘ್ನಿಯಾ: ದೇವಭಾಗಮ್ ಊರ್ಜಸ್ವತೀ: ಪಯಸ್ವತೀ: ಪ್ರಜಾವತೀ: ಅನಮೀವಾ: ಅಯಕ್ಷ್ಮಾ: ಮಾ ವ: ಸ್ತೇನ: ಈಶತ ಮಾ ಅಘಶಂಸ: |”
(ಹೇ)ಅಘ್ನಿಯಾ:(ಗಾವ:) - ಎಲೈ ಹಿಂಸಿಸಲ್ಪಡಬಾರದ, ಹತ್ಯೆಗೊಳಪಡಬಾರದ(ಗೋವುಗಳ ಹತ್ಯೆ,ಹಿಂಸೆ ಮಾಡಲೇಬಾರದು) ಗೋವುಗಳೇ! ,
ದೇವಭಾಗಮ್ - ದೇವನಾದ ಇಂದ್ರನ ದಧಿ/ಹವಿಸ್ಸಿನ ರೂಪವಾದ ಯಜ್ಞಭಾಗವನ್ನು,
ಆಪ್ಯಾಯಧ್ವಮ್ - ಹೇರಳವಾದ ಗ್ರಾಸಭಕ್ಷಣೆಯಿಂದ ಹೆಚ್ಚುಮಾಡಿ.
ಊರ್ಜಸ್ವತೀ: - ಹೆಚ್ಚಿನ ಊರ್ಜೆ/ಶಕ್ತಿಯುತರಾಗಿರಿ.
ಪಯಸ್ವತೀ: - ಹೆಚ್ಚು ಹಾಲು(ಪಯ:)ನೀಡುವವರಾಗಿರಿ.
ಪ್ರಜಾವತೀ: - ಹೆಚ್ಚು ಕರು/ಸಂತಾನವುಳ್ಳವರಾಗಿರಿ.
ಅನಮೀವಾ: - (ಅಮ್ ರೋಗೇ+ಭಾವೇ ಘಞ್ ಮಾಂತತ್ವಾತ್ ವೃದ್ಧಭಾವ:, ಅಮೋ ರೋಗೋ ವಿದ್ಯತೇ ಅಸ್ಯ ಇನ್; ಅಮೀ-ರೋಗೀ) ಕ್ರಿಮಿರೋಗ/ಸೋಂಕುರೋಗ/ಅಂಟುಜಾಡ್ಯ(infection)ಗಳಿಂದ ಮುಕ್ತರಾಗಿರಿ.
ಅಯಕ್ಷ್ಮಾ: - ಕ್ಷಯ/ಯಕ್ಷ್ಮರೋಗ ರಹಿತರಾಗಿರಿ; ರಸಧಾತುಗಳು ಬತ್ತಿಹೋಗುವಂತಹ, ಕ್ಷಯಿಸುವಂತಹ(ಹಾಲು ಕ್ಷೀಣಿಸುವ) ಇತರ ಕಾಯಿಲೆಗಳಿಂದಲೂ ಮುಕ್ತರಾಗಿರಿ.
ಸ್ತೇನ: - ಚೋರ/ಕಳ್ಳನು,
ವ:(ಯುಷ್ಮಾನ್ ಚೋರಯಿತುಂ) - ನಿಮ್ಮನ್ನು ಕದ್ದುಕೊಂಡೊಯ್ಯಲು,
ಮಾ ಈಶತ - ಸಮರ್ಥರು/ಶಕ್ತರು ಆಗದಿರಲಿ.
ಮಾ ಅಘಶಗ್ಂಸ:(ಮಾ ಅಘಶಂಸ:) - ವ್ಯಾಘ್ರವೇ ಮುಂತಾದ ಪಾಪ(ಅಘ)ಕರ್ಮಕ, ಮಾಂಸಭಕ್ಷಕ, ಹಿಂಸ್ರ ಪ್ರಾಣಿಗಳಿಂದ/ಇತರರಿಂದಲೂ ತೊಂದರೆಗೊಳಗಾಗದಿರಲಿ. (ಅಘಮ್ ಅನಿಷ್ಟಂ ಶಂಸತಿ, ಇಚ್ಛತಿ, ಅನಿಷ್ಟಸಂಪಾದಕೇ ಚೌರೇ; ವ್ಯಸನಸೂಚನೇ)
“ದೇವಭಾಗಮ್” ಪದದ ವಿವರಣೆ:-
ಯಾಗಪೂರ್ವದಲ್ಲಿ ಹೇರಳವಾದ ಗೋಗ್ರಾಸಭಕ್ಷಣೆಯಿಂದ ಗೋವುಗಳ ಕರುಗಳಿಗೂ, ಮನುಷ್ಯರಿಗೂ ಸಾಕಷ್ಟು ಹಾಲು ಸಿಗುವುದರಿಂದ ವತ್ಸಭಾಗ ಹಾಗೂ ಮನುಷ್ಯಭಾಗಗಳು ಪ್ರವೃದ್ಧವಾಗುತ್ತವೆ. ಇದರಿಂದ ತುಪ್ಪವೂ ಅಧಿಕವಾಗಿ, ದಧಿ/ಹವಿರ್ಭಾಗವೂ ಹೆಚ್ಚಿ, ಇಂದ್ರ/ದೇವಭಾಗವೂ ಪ್ರವರ್ಧಿಸುತ್ತದೆ. ಇದರಿಂದ ತುಷ್ಟರಾದ ದೇವತೆಗಳು, ಮನುಷ್ಯರ ಇಷ್ಟಾರ್ಥಗಳನ್ನು ಸಾಕಷ್ಟು ಅನುಗ್ರಹಿಸುವುದರಿಂದ, ಪುನ: ಮನುಷ್ಯಭಾಗವೂ ವರ್ಧಿಸುವುದು.
೩) ತೃತೀಯಮಂತ್ರದ ಪದವಿಭಾಗ - “ರುದ್ರಸ್ಯ ಹೇತಿ: ಪರಿ ವ: ವೃಣಕ್ತು |”
ರುದ್ರನೆಂಬ ಕ್ರೂರದೇವನ(ರುದ್ರಸ್ಯ) ಆಯುಧವು(ಹೇತಿ:- ಹನ್ಯತೇ ಅನಯಾ ಇತಿ - ಅಸ್ತ್ರಮ್) ನಿಮ್ಮನ್ನು (ವ:/ಯುಷ್ಮಾನ್) ಎಲ್ಲೆಡೆಯಿಂದ ರಕ್ಷಿಸಲಿ( ಪರಿವೃಣಕ್ತು).
ಧ್ರುವಾ ಅಸ್ಮಿನ್ ಗೋಪತೌ ಸ್ಯಾತ ಬಹ್ವೀ: - ಬೌಧಾಯನರ ವಿನಿಯೋಗ - ಈ ಮಂತ್ರವನ್ನುಚ್ಚರಿಸುತ್ತಾ ಅಧ್ವರ್ಯುವು ಯಜಮಾನನನ್ನು ನೋಡುತ್ತಾನೆ. ಆಪಸ್ತಂಬರ ವಿನಿಯೋಗ - ಈ ಮಂತ್ರವನ್ನುಚ್ಚರಿಸುತ್ತಾ ಯಜಮಾನನ ಮನೆಯ ಮುಂದೆ ಹಾಗೂ ಸುತ್ತಲೂ ಸುತ್ತುಹಾಕಬೇಕು.
ಅರ್ಥ:- ಈ ಗೋವುಗಳು ಯಜಮಾನನಲ್ಲೇ (ಅಸ್ಮಿನ್ ಗೋಪತೌ), ಬಹುಸಂತತಿಯಿಂದ ವೃದ್ಧಿಹೊಂದಿ (ಬಹ್ವೀ:), ಶಾಶ್ವತವಾಗಿ ನೆಲೆಸಿರಿ(ಧ್ರುವಾ ಸ್ಯಾತ).
ಯಜಮಾನಸ್ಯ ಪಶೂನ್ ಪಾಹಿ - ಹೇ ಪರಮಾತ್ಮನೇ ! ಯಜಮಾನನ ಪಶು/ಗೋವುಗಳನ್ನು ಸಂರಕ್ಷಿಸು.
ವಿವರಣೆ-
“ಪಾದೇನ ಅರ್ಧ-ಋಚೇನ ಚ ಉಪೇತಾ: ವೃತ್ತಬದ್ಧಾ: ಮಂತ್ರಾ: ‘ಋಚ:’ | ಗೀತಿ-ಉಪೇತಾ: ಮಂತ್ರಾ: ಸಾಮಾನಿ | ವೃತ್ತ-ಗೀತಿ-ವರ್ಜಿತತ್ವೇನ ಪ್ರಶ್ಲಿಷ್ಠಪಠಿತಾ: ಮಂತ್ರಾ: ‘ಯಜೂಂಷಿ’ ಇತಿ ವ್ಯವಸ್ಥಿತಂ ಲಕ್ಷಣಮ್ ||”
‘ಋಚ್ಯಂತೇ ಸ್ತೂಯಂತೇ ದೇವಾ: ಅನಯಾ ಇತಿ ಋಚ್, ಋಚ ಸ್ತುತೌ ‘ಕ್ವಿಪ್’ ಪ್ರತ್ಯಯಾದೇಶ: (ಶಬ್ದಾರ್ಥಕೌಸ್ತುಭ) |’ ಇದರಿಂದ ದೇವತೆಗಳು ಸ್ತುತಿಸಲ್ಪಡುತ್ತಾರೆ ಎಂಬುದರಿಂದಾಗಿ ಋಚ್. ಪಾದವ್ಯವಸ್ಥೆಯಿಂದ ಕೂಡಿದ, ಸ್ತುತ್ಯರ್ಥಕ ವಾಕ್ಕಿನ ಅರ್ಧಾಂಶ/ ಭಾಗಮಾತ್ರವನ್ನು ಹೊಂದಿದ, ಹಾಗೂ ಛಂದೋನಿಯಮಗಳಿಗೆ ಬದ್ಧವಾಗಿರುವ ಮಂತ್ರಗಳು ‘ಋಕ್/ಋಚ’ಗಳು. ‘ಋಚ್’- ‘ಚ’ಕಾರಾಂತ ಸ್ತ್ರೀಲಿಂಗ ಶಬ್ದ. ಋಕ್, ಋಚೌ, ಋಚ: - ಇವು ಪ್ರಥಮಾ ವಿಭಕ್ತಿಯ ಏಕವಚನ, ದ್ವಿವಚನ(ಸಂಸ್ಕೃತದ ವಿಶೇಷ) ಹಾಗೂ ಬಹು-ವಚನರೂಪಗಳು. ಗಾಯನಯೋಗ್ಯ, ಗೀತರೂಪದ ಮಂತ್ರಗಳು ಸಾಮಗಳು. ವೃತ್ತ ಹಾಗೂ ಗೀತಾರಹಿತವಾಗಿ, ನಿಯಮಿತವಾದ ಪದಗಳ ಸುಂದರ ಜೋಡಣೆಯಿಂದ ಕೂಡಿ, ಗದ್ಯರೂಪದಲ್ಲಿ (ನಿಗದ) ನಿಗದಿತವಾಗಿ / ಕ್ರಮಬದ್ಧವಾಗಿ, ಸಾಮೂಹಿಕವಾಗಿ ಪಠಿಸುವಂತೆ ನಿಬದ್ಧವಾಗಿರುವ ಮಂತ್ರಗಳು ಯಜುಸ್ಸುಗಳು. ಪ್ರ+ಶ್ಲಿಷ ಆಲಿಂಗನೇ ‘ಕ್ತ:’ | ‘ಪ್ರಶ್ಲಿಷ್ಟ’- ಚೆನ್ನಾಗಿ ಒಂದಕ್ಕೊಂದು ಸೇರಿಕೊಂಡಿರುವ, ಅಂಟಿಕೊಂಡಿರುವ.
ಈ ಅನುವಾಕದಲ್ಲಿರುವ ಮಂತ್ರಗಳ ವಿನಿಯೋಗದ ಸಂಗ್ರಹಶ್ಲೋಕ -
ಇಷೇ ಶಾಖಾಂ ಛಿನತ್ತ್ಯೂರ್ಜೇ ಮಾರ್ಷ್ಟಿ ವಾಯೇತಿ ವತ್ಸಕಾನ್ |
ಅಪಾಕೃತ್ಯಾಥ ದೇವೋ ಗಾಃ ಪ್ರಸ್ಥಾಪ್ಯಾऽऽಪ್ಯೇತಿ ಗಾಃ ಸ್ಪೃಶೇತ್ ||
ರುದ್ರಸ್ಯೇತ್ಯಭಿಮಂತ್ರ್ಯೈತಾ ಧ್ರುವೇತಿ ಗೃಹಮಾವ್ರಜೇತ್ |
ಯಜೇತಿ ಶಾಖೋಪಗೂಹ ಇತ್ಯಷ್ಟಾವನುವಾಕಗಾಃ ||
||ಇತಿ ಶ್ರೀಮತ್ಸಾಯಣಾಚಾರ್ಯವಿರಚಿತ ಮಾಧವೀಯ ವೇದಾರ್ಥಪ್ರಕಾಶದಲ್ಲಿ ತೈತ್ತಿರೀಯಕೃಷ್ಣಯಜುರ್ವೇದಭಾಷ್ಯದ ಪ್ರಥಮಕಾಂಡದ ಪ್ರಥಮಪ್ರಪಾಠಕದಲ್ಲಿ ಪ್ರಥಮ ಅನುವಾಕದ ದಂಬೆಕೃಷ್ಣಮೂರ್ತಿವಿರಚಿತ ಕನ್ನಡಭಾಷಾನುವಾದವು ಮುಗಿಯಿತು||
ಭಟ್ಟಭಾಸ್ಕರಭಾಷ್ಯಾರ್ಥ(ಭ.ಭಾ.)-
“ತತ್ರ ಅಮಾವಾಸ್ಯಾಯಾಂ ಸಂನಯತ: ಶಾಖಾಮ್ ಆಚ್ಛಿನತ್ತಿ ಅಧ್ವರ್ಯು: - ಇಷೇ ತ್ವೋರ್ಜೇ ತ್ವಾ ಇತಿ | ಈ ಮಂತ್ರಪೂರ್ವಕವಾಗಿ ಯಜ್ಞದ ಅಧ್ವರ್ಯುವು ಅಮಾವಾಯಸ್ಯೆಯಂದು ಪಲಾಶವೃಕ್ಷದ ಶಾಖೆಯನ್ನು ಬಹು ನಾಜೂಕಿನಿಂದ ಛೇದಿಸುತ್ತಾನೆ. ಇಲ್ಲಿಂದ ಮುಂದೆ ಉಭಾ ವಾಮಿಂದ್ರಾಗ್ನೀ ಎಂಬಲ್ಲಿವರೆಗಿನ ಮಂತ್ರಗಳಿಗೆ ಪ್ರಜಾಪತಿಯು ಕಾಂಡ ಋಷಿಯು.
ಮಂತ್ರಾರ್ಥ- “ಇಡ್ ಅನ್ನಂ ಸರ್ವೈ: ಏಷಣೀಯತ್ವಾತ್ | ಇಹ ತು ಸಾನ್ನಾಯ್ಯಲಕ್ಷಣಂ ಗೃಹ್ಯತೇ | ಊರ್ಕ್ ರಸ: ಬಲಪ್ರಾಣಯೋ: ಉದ್ದೀಪಕ: | ಇಷು ಇಚ್ಛಾಯಾಂ, ಊರ್ಜ ಬಲಪ್ರಾಣನಯೋ: ಆಭ್ಯಾಂ ಕರ್ಮಣಿ ಕರಣೇ ಚ | ಹೇ ಶಾಖೇ! ಇಡರ್ಥಂ ತ್ವಾಂ ಛಿನದ್ಮಿ | ಊರ್ಗರ್ಥಂ ತ್ವಾಂ ಛಿನದ್ಮಿ ||”
ಇಡ್ ಅಂದರೆ ಅನ್ನ , ಎಲ್ಲರೂ ಇಷ್ಟಪಡುವುದರಿಂದಾಗಿ. ಇಲ್ಲಿ ಹೋಮಕ್ಕಾಗಿ ತಂದ ಪಾಯಸಾನ್ನವೆಂದು ಅರ್ಥ. ಊರ್ಕ್ ಅಂದರೆ ರಸ, ಬಲಪ್ರಾಣಗಳನ್ನು ಉದ್ದೀಪನಗೊಳಿಸುವಂಥದ್ದು/ ವರ್ಧಿಸುವಂಥದ್ದು. ಇಷು ಇಚ್ಛೆಯಲ್ಲಿ, ಊರ್ಜ ಬಲಪ್ರಾಣದಾಯಕ ಕರ್ಮಗಳನ್ನು ಮಾಡುವುದರಲ್ಲಿ ಬಳಸಲ್ಪಟ್ಟಿದೆ. ಎಲೈ ಪಲಾಶದ ಗೆಲ್ಲೇ! ಪರಮಾನ್ನಕ್ಕಾಗಿ ನಿನ್ನನ್ನು ಕತ್ತರಿಸುತ್ತಿದ್ದೇನೆ. ಬಲಪ್ರಾಣಗಳ ವರ್ಧನೆಗಾಗಿ ನಿನ್ನನ್ನು ತುಂಡರಿಸುತ್ತಿದ್ದೇನೆ. (ಯಜ್ಞದ್ವಾರಾ ದೇವತಾಪ್ರಸನ್ನತೆಯಿಂದ ಅನ್ನ,ಬಲ,ಪ್ರಾಣಗಳನ್ನು ಹೆಚ್ಚಿಸಿಕೊಳ್ಳಲು, ಯಜ್ಞಹವಿಸ್ಸಾದ ತುಪ್ಪವನ್ನು ಹೆಚ್ಚು ಪಡೆಯಲು ಹಸುಗಳು ಕಾಡಿನಲ್ಲಿ ಚೆನ್ನಾಗಿ ಮೇಯುವಾಗ, ಅವುಗಳ ರಕ್ಷೆಗಾಗಿ ಪಲಾಶಕೋಲನ್ನು ಭೂಮಿಯಡಿ ಹೂತಿಡಲು ಕತ್ತರಿಸುತ್ತಿದ್ದೇನೆ ಎಂದರ್ಥ.)
“ವತ್ಸಾನ್ ಅಪಾಕರೋತಿ - ವಾಯವ: ಸ್ಥೋಪಾಯವ: ಸ್ಥ - ಇತಿ | ವಾಯವ: ಗಂತಾರ: | ಉಪಾಯವ: ಉಪಗಂತಾರ: | ಸ್ಥ ಇತಿ ಅಸ್ತೇ: ಪಂಚಮಲಕಾರರೂಪಮ್ | ಹೇ ವತ್ಸಾ: ! ಮಾತೃಸಕಾಶಾದ್ ಗಂತಾರೋ ಭವತ , ಪುನ: ದೋಹಕಾಲೇ ಉಪಗಂತಾರೋ ಭವತ ಇತಿ | ವಾಯುಶಬ್ದೇನ ಏಷಾಮ್ ಅಭಿಧಾನಂ ವಾಯ್ವಧಿಷ್ಠಾತೃಕತ್ವಮ್ ಏಷಾಂ ಪ್ರದರ್ಶಯಿತುಮ್ | ‘ವಾಯುರ್ವಾ ಅಂತರಿಕ್ಷಸ್ಯ ಅಧ್ಯಕ್ಷಾ:’ ಇತಿ (ತೈ.)ಬ್ರಾಹ್ಮಣಮ್ ||”
ಈ ಮಂತ್ರದಿಂದ ಕರುಗಳನ್ನು ಕಾಡಿಗೆ ಮೇಯಲು ಬಿಡುತ್ತಾನೆ/ ದೂರಕಳುಹಿಸುತ್ತಾನೆ. ವಾಯವ: ಎಂದರೆ ಹೋಗುವವುಗಳು. ಉಪಾಯವ: ಎಂದರೆ ಹತ್ತಿರಕ್ಕೆ ಬರುವವುಗಳು. ಸ್ಥ ಎಂಬುದು ಅಸ್ತಿ ಎಂಬುದರ ೫ನೇ ಲಕಾರ(ಲೇಟ್ ಲಕಾರ)ರೂಪ .
[ ಸಂಸ್ಕೃತದಲ್ಲಿ ಕ್ರಿಯೆಯ ಕಾಲಸೂಚಕವಾದ ೧೦ ಲಕಾರರೂಪಗಳಿವೆ—
“ಲಟ್- ವರ್ತಮಾನೇ ಲೇಟ್ ವೇದೇ ಭೂತೇ ಲಙ್-ಲುಙ್-ಲಿಟಃ ತಥಾ |
ವಿಧಿ-ಆಶಿಷೋಃ ಚ ಲಿಙ್-ಲೋಟೌ ಲುಟ್-ಲೃಟ್-ಲೃಙ್ ಚ ಭವಿಷ್ಯತಿ ||”
ಹೀಗೆ ವರ್ತಮಾನಕಾಲಸೂಚಕ ಲಟ್ ಲಕಾರ, ವೇದದಲ್ಲಿ ಮಾತ್ರ ಬರುವ ಲೇಟ್ ಲಕಾರ, ಭೂತಕಾಲಾರ್ಥಕ ಲಙ್, ಲುಙ್, ಲಿಟ್ ಲಕಾರಗಳು, ಹಾಗೆಯೇ, ವಿಧಿ-ಆಶೀರ್ವಾದ/ಹಾರೈಕೆಯ ಅರ್ಥದಲ್ಲಿ ಲಿಙ್-ಲೋಟ್ ಲಕಾರಗಳು (ವಿಧಿಲಿಙ್+ಆಶೀರ್ಲಿಙ್ ಎಂದು ಲಿಙ್ ಲಕಾರ ೨ ವಿಧ), ಭವಿಷ್ಯವಾಚ್ಯವಾಗಿ ಲುಟ್, ಲೃಟ್ ಹಾಗೂ ಲೃಙ್ ಲಕಾರಗಳಿವೆ. ಹೀಗೆ ಲ-ಕಾರದ ಕಾಗುಣಿತಾನುಕ್ರಮದಲ್ಲಿ ಅಂದರೆ, ಲಟ್, ಲಿಟ್, ಲುಟ್, ಲೃಟ್, ಲೇಟ್, ಲೋಟ್, ಲಙ್, ಲಿಙ್, ಲುಙ್, ಲೃಙ್ ಎಂಬ ೧೦ ಲಕಾರಗಳಲ್ಲಿ ಲೇಟ್ ಲಕಾರವು ೫ನೆಯದಾಗಿರುವುದರಿಂದ ಬಹುಶಃ ಭಟ್ಟಭಾಸ್ಕರರು “ಸ್ಥ” ವನ್ನು ಪಂಚಮಲಕಾರರೂಪವೆಂದಿರಬಹುದು. ]
ಹೇ ಕರುಗಳೇ! ನೀವು ನಿಮ್ಮ ತಾಯಂದಿರ ಬಳಿಯಿಂದ ಹೋಗುವವರಾಗಿರಿ, ಪುನ: ಹಾಲು ಕರೆಯುವ ಕಾಲಕ್ಕೆ ಬರುವವರಾಗಿರಿ. ಇವುಗಳನ್ನು ವಾಯುಶಬ್ದದಿಂದ ಸಂಬೋಧಿಸಿರುವುದು ಇವುಗಳ ವಾಯುದೇವತಾಶ್ರಯತ್ವವನ್ನು ತೋರಿಸಲು, ಅರ್ಥಾತ್ ಕರುಗಳು ಮೇಯಲು ವಾಯುಸಂಚಾರ ಮಾಡುವಾಗ, ವಾಯುವಿನ ಅಧೀನಕ್ಕೆ ಬರುತ್ತವೆ. ‘ವಾಯುವೇ ಅಂತರಿಕ್ಷದ ಪ್ರಧಾನ ಅಧಿದೇವತೆ’ ಎಂಬುದು ತೈತ್ತಿರೀಯಬ್ರಾಹ್ಮಣದ ನಿರ್ವಚನ.
“ಗೋಚರಾಯ ಗಾ: ಪ್ರಸ್ಥಾಪಯತಿ - 1ದೇವೋ ವ: ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣ1 2ಆಪ್ಯಾಯಧ್ವಮಘ್ನಿಯಾ ದೇವಭಾಗಮೂರ್ಜಸ್ವತೀ: ಪಯಸ್ವತೀ: ಪ್ರಜಾವತೀರನಮೀವಾ ಅಯಕ್ಷ್ಮಾ ಮಾ ವ: ಸ್ತೇನ ಈಶತ ಮಾऽಘಶಗ್ಂಸೋ2 3ರುದ್ರಸ್ಯ ಹೇತಿ: ಪರಿವೋ ವೃಣಕ್ತು3 -ಇತಿ |
ಈ ೩ ಋಕ್ಕುಗಳಿಂದ ಗೋವುಗಳನ್ನು ಮನೆಯಿಂದ ಗೋಚರ/ಹುಲ್ಲುಗಾವಲು/ಕಾಡಿಗೆ ಹೊರಡಿಸುತ್ತಾನೆ. ಅವುಗಳಲ್ಲಿ 1ಮೊದಲಮಂತ್ರದಿಂದ ಸವಿತೃವನ್ನು ಪ್ರಾರ್ಥಿಸಲಾಗಿದೆ.
“ಷೂ ಪ್ರೇರಣೇ | ದೇವಸ್ಸವಿತಾ ಸರ್ವಸ್ಯ ಪ್ರೇರಕ:, ಯೇನ ವಿನಾ ತೃಣಾಗ್ರಮಪಿ ನ ಚಲತಿ , ಸ: ಯುಷ್ಮಾನ್ ಪ್ರಾರ್ಪಯತು ಪ್ರಸ್ಥಾಪಯತು | ಕಿಮರ್ಥಮ್? ಶ್ರೇಷ್ಠತಮಾಯ ಕರ್ಮಣೇ ಯಜ್ಞಾಯ | ತೃಣಾದಿಭಕ್ಷಣೇನ ಸಾನ್ನಾಯ್ಯನಿಷ್ಪತ್ತ್ಯರ್ಥತ್ವಾದ್ ಯಜ್ಞಾರ್ಥಂ ಪ್ರೇರಣಮ್ ||”
‘ಷೂ’ ಪ್ರೇರಣಾರ್ಥಕ ಧಾತು. ದೇವನಾದ ಸವಿತೃವು ಎಲ್ಲದರ ಪ್ರೇರಕ; ಅವನಿಲ್ಲದೆ ಹುಲ್ಲಿನ ತುದಿಯೂ ಚಲಿಸದು; ಅವನು ನಿಮ್ಮನ್ನು(ಗೋವುಗಳನ್ನು) ಮೇಯಲು ಹೊರಡಿಸಲಿ. ಯಾತಕ್ಕಾಗಿ? ಶ್ರೇಷ್ಠತಮವಾದ ಯಜ್ಞಕರ್ಮಕ್ಕಾಗಿ. ಹುಲ್ಲು ಮುಂತಾದ ಮೇವನ್ನು ತಿನ್ನುವ ಮೂಲಕ ಯಜ್ಞಕ್ಕೋಸ್ಕರವಾದ ಪರಮಾನ್ನರೂಪ/ಘೃತ ಹವಿಸ್ಸಿನ ಉತ್ಪತ್ತಿಗಾಗಿ ಅವುಗಳನ್ನು ಪ್ರೇರಿಸಬೇಕೆಂಬ ಪ್ರಾರ್ಥನೆ.
2ನಂತರ ಎರಡನೆಯ ಮಂತ್ರದಲ್ಲಿ ಹೊರಡಿಸಲಿರುವ ಗೋವುಗಳನ್ನೇ ಪ್ರಾರ್ಥಿಸಲಾಗಿದೆ -
“ಹೇ ಅಘ್ನಿಯಾ: ಗಾವ: ಅಹನನಾರ್ಹಾ: ! ದೇವಸ್ಯ ಇಂದ್ರಸ್ಯ ಭಾಗಂ ಸಾನ್ನಾಯ್ಯಲಕ್ಷಣಂ ಯೂಯಂ ಆಪ್ಯಾಯಧ್ವಮ್ ಆಪ್ಯಾಯಯತ | ಊರ್ಜಸ್ವತ್ತ್ವಾದಿಗುಣಯುಕ್ತಾ: ಯೂಯಮ್ ಆಪ್ಯಾಯಧ್ವಮ್ | ಯದ್ವಾ - ಊರ್ಜಸ್ವತ್ತ್ವಾದಿಗುಣಯುಕ್ತಾನ್ ಯುಷ್ಮಾನ್ ಸ್ತೇನ: ಮಾ ಈಶತ/(ಚೋರಯತು )ಇತಿ | ಊರ್ಜಸ್ವತ್ಯ: ಬಲವತ್ಯ:, ಬಹುರಸಾ: ವಾ | ಪಯಸ್ವತ್ಯ: ಬಹುಪಯಸ್ಕಾ: | ಪ್ರಜಾವತ್ಯ: ಬಹ್ವಪತ್ಯಾ:(ಬಹು+ಅಪತ್ಯಾ:) | ಅನಮೀವಾ: ಅರೋಗಾ: | ಅಮೀವಾ ಉದರವ್ಯಾಧಿ:, ತದ್ರಹಿತಾ: ಅನಮೀವಾ: | ಅಯಕ್ಷ್ಮಾ:, ಯಕ್ಷ್ಮಾ ವ್ಯಾಧಿ:, ತದ್-ರಹಿತಾ: | ಸ್ತೇನ: | ಸ್ತೇನ ಚೌರ್ಯೇ | ಅಪಹರ್ತಾ (ಚೋರ: ) | ಮಾ ಯುಷ್ಮಾಕಮ್ ಈಶತ ಈಶಿಷ್ಟ , ಸ್ವವಶಾ: ಯುಷ್ಮಾನ್ ಮಾ ಕಾರ್ಷೀತ್ | ಕಿಂ ಚ - ಅಘಂಶಸ: ಅಪಿ ಯುಷ್ಮಾನ್ ಮಾ ಈಶಿಷ್ಟ, ಮಾ ವ:(ಯುಷ್ಮಾನ್) ಜಿಘಾಂಸೀತ್ | ಅಘೇ ಪಾಪೇ ಭಕ್ಷಣಲಕ್ಷಣೇ ಶಂಸಾ ಅಭಿಲಾಷೋ ಯಸ್ಯ ನಿಯೋಗೇನ ಸ: ಅಘಶಂಸ: ಪಾಪತತ್ಪರ: | ಅಂಘತೇ ಗಚ್ಛತಿ ದಾನಾದಿನಾ ಇತಿ ಅಘ: ||”
ಅಯ್ಯಾ ವಧೆ/ಹತ್ಯೆ/ಹಿಂಸೆಗೆ ಅರ್ಹವಲ್ಲದ ಗೋವುಗಳಿರಾ ! ದೇವೇಂದ್ರನ ಪರಮಾನ್ನ(ಶ್ರೇಷ್ಠವಾದ ಅನ್ನ)ರೂಪವಾದ ಹವಿರ್ಭಾಗ(ಆಜ್ಯ/ತುಪ್ಪ)ವನ್ನು ನೀವುಗಳು ಅಧಿಕಗೊಳಿಸಿ. ಊರ್ಜಸ್ವತ್ತ್ವ ಮುಂತಾದ ಗುಣಯುತರಾದ ನೀವು ಹವಿಸ್ಸನ್ನು ವರ್ಧಿಸಿ. ಅಥವಾ - ಊರ್ಜಸ್ವತ್ತ್ವಾದಿಗುಣಯುಕ್ತರಾದ ನಿಮ್ಮನ್ನು ಕಳ್ಳನು ಕದ್ದು ಕೊಂಡೊಯ್ಯದಿರಲಿ. ಊರ್ಜಸ್ವತಿಯರೆಂದರೆ ಬಲವತಿಯರು ಅಥವಾ ಬಹುರಸವುಳ್ಳವರೆಂದರ್ಥ. ಪಯಸ್ವತಿಯರು ಅಧಿಕಹಾಲುಳ್ಳವುಗಳು. ಪ್ರಜಾವತಿಯರು ಬಹು ಸಂತಾನ/ಕರುಗಳುಳ್ಳವುಗಳು. ಅನಮೀವಾ: ಎಂದರೆ (ಅನ್+ಅಮೀವಾ:)ರೋಗವಿಲ್ಲದವುಗಳು. ಅಮೀವಾ ಎಂದರೆ ಹೊಟ್ಟೆಯ ವ್ಯಾಧಿ. ಅದಿಲ್ಲದವು ಅನಮೀವಾ: | ಅಯಕ್ಷ್ಮಾ:, ಯಕ್ಷ್ಮಾ ಎಂದರೆ ವ್ಯಾಧಿ; ವ್ಯಾಧಿರಹಿತವಾದವುಗಳು. ಸ್ತೇನ:=ಚೋರ, ಕಳ್ಳ, ಅಪಹರಿಸುವವ. ಅವನು ನಿಮ್ಮನ್ನು ಅಪಹರಿಸದಿರಲಿ, ತನ್ನ ವಶಮಾಡಿಕೊಳ್ಳದಿರಲಿ. ಹಾಗೆಯೇ, ಹಿಂಸ್ರಕರು ಕೂಡ ನಿಮ್ಮನ್ನು ಅಪಹರಿಸದಿರಲಿ, ಹಿಂಸಿಸದಿರಲಿ. ಪಾಪವುಣ್ಣುವುದರಲ್ಲಿ ಮಹದಾಸೆಯು ಯಾರಿಗಿದೆಯೋ ಅವನು ಅಘಂಶಸನು, ಪಾಪದಲ್ಲಿ ತೊಡಗಿದವನು. ದಾನಾದಿಗಳಿಂದ ಪರಿಹಾರವಾಗುತ್ತದೆಂಬುದರಿಂದಾಗಿ ಪಾಪವು ಅಘ ಎಂದೂ ಕರೆಯಲ್ಪಟ್ಟಿದೆ.
3ಅಂತೆಯೇ, ಕೇವಲ ಮನುಷ್ಯಮಾತ್ರರಲ್ಲದೆ, ದೇವನೂ ನಿಮ್ಮನ್ನು ಹಿಂಸಿಸದಿರಲೆಂದು ೩ನೇ ಮಂತ್ರಭಾಗದಿಂದ ಪ್ರಾರ್ಥಿಸಲಾಗಿದೆ. ರುದ್ರನ ಆಯುಧವು ನಿಮ್ಮನ್ನು ಸರ್ವತ:(ಎಲ್ಲೆಡೆಯಲ್ಲೂ) ವರ್ಜಿಸಲಿ, ಹಿಂಸಿಸದಿರಲಿ.
ಧ್ರುವಾ ಅಸ್ಮಿನ್ ಗೋಪತೌ ಸ್ಯಾತ ಬಹ್ವೀ: - ಎಂದು ಅಧ್ವರ್ಯುವು ಯಜಮಾನನನ್ನು ಗಮನಿಸುತ್ತಾನೆ. “ಗವಾಂ ಪತಿಃ ಗೋಪತಿಃ ಯಜಮಾನಃ । ಅಸ್ಮಿನ್ ಯಜಮಾನೇ । ಧ್ರುವಾಃ ಅವಿನಾಶಾಃ । ಸ್ಯಾತ ಭವತ । ಬಹ್ವ್ಯಃ ಚ ಸಂತಾನವೃದ್ಧ್ಯಾ ಭವತ ।”
ಯಜಮಾನಸ್ಯ ಪಶೂನ್ ಪಾಹಿ - ಎಂದು ಪಲಾಶಶಾಖೆಯನ್ನು ಬಳಿಯಲ್ಲೇ ಹೂತಿಡುತ್ತಾನೆ. ಹೇ ಶಾಖೆಯೇ! ಯಜಮಾನನ ಪಶುಗಳನ್ನು ಸಂಜೆ ಮರಳಿ ಬರುವವರೆಗೆ ರಕ್ಷಿಸು. “ತಸ್ಮಾತ್ ಸಾಯಂ ಪಶವಃ” ಇತ್ಯಾದಿಯಾಗಿ ತೈ.ಬ್ರಾ. ಹೇಳಿದೆ.
ಹೀಗೆ ಒಂದನೇ ಅನುವಾಕದಲ್ಲಿ ಒಟ್ಟು ೫ (ಬೌಧಾಯನ ಮತ) ಅಥವಾ 8 (ಆಪಸ್ತಂಬ ಮತ) ಮಂತ್ರಗಳಿವೆ.
ಇಲ್ಲಿಗೆ ದಂಬೆಕೃಷ್ಣಮೂರ್ತಿಶಾಸ್ತ್ರೀಕೃತ, ಭಟ್ಟಭಾಸ್ಕರೀಯ ತೈತ್ತಿರೀಯಭಾಷ್ಯದ ೧ನೇ ಅನುವಾಕಭಾಷ್ಯಾನುವಾದವು, ಸಂಪೂರ್ಣವಾಯಿತು.
ಆಧ್ಯಾತ್ಮಿಕಭಾಷ್ಯ(೧.೧.೧)
(೪ ಯಜುಸ್ ಗಳು; ೪ ಋಕ್ ಗಳು)
(ಛಂದಸ್ಸುಗಳು— ದ್ವಿಪದಾ ವಿರಾಟ್ ೪ನೇ ಋಕ್ ಮಂತ್ರ; ಮಧ್ಯೇಜ್ಯೋತಿಸ್ತ್ರಿಷ್ಟುಪ್ ೫ನೆಯದು; ಏಕಪದಾ ತ್ರಿಷ್ಟುಪ್ ೬,೭ನೆಯ ಋಕ್ ಮಂತ್ರಗಳು; ೧,೨,೩,೮ ಛನ್ದೋರಹಿತ ಯಜುರ್ ಗದ್ಯಗಳು)
(ಮಹರ್ಷಿ ಅರವಿಂದರ ಮಾರ್ಗದಲ್ಲಿ ಆರ್.ಎಲ್.ಕಶ್ಯಪರು ಆಂಗ್ಲಭಾಷೆಯಲ್ಲಿ ಬರೆದ ಭಾಷ್ಯಕ್ಕೆ ರ.ವಿ.ಜಹಗೀರದಾರರು ಮಾಡಿದ ಕನ್ನಡಾನುವಾದದ ಆಧಾರದಲ್ಲಿ)
ಸಾಯಣಾದಿ ಸಾಂಪ್ರದಾಯಿಕರು ಬಹಿರ್ಯಜ್ಞವನ್ನೇ ಉದ್ದೇಶಿಸಿ ಭಾಷ್ಯಬರೆದರೆ, ಪ್ರಸ್ತುತ ಭಾಷ್ಯವು ಅಂತರ್ಯಜ್ಞದ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಗೂಢಾರ್ಥ/ಪರೋಕ್ಷಾರ್ಥವನ್ನು ನೀಡಿದೆ. “ಪರೋಕ್ಷಪ್ರಿಯ ಇವ ಹಿ ದೇವಾ: ಪ್ರತ್ಯಕ್ಷದ್ವಿಷ:”(ಐತರೇಯ ಉಪನಿಷದ್ ೩.೧೪, ಬೃಹದಾರಣ್ಯಕ ಉಪನಿಷದ್ ೪.೨.೨)- ಜ್ಞಾನಿಗಳು ಮೇಲ್ಮೈ ಅರ್ಥದಲ್ಲಿ ತೃಪ್ತರಾಗುವುದಿಲ್ಲ; ಅವರು ನಿಗೂಢಾರ್ಥವನ್ನು ತಿಳಿಯಬಯಸುತ್ತಾರೆ. ಇದು ತೋರಿಕೆ ಹಾಗೂ ವಾಸ್ತವಗಳ ಅಂತರವನ್ನು ಬೊಟ್ಟುಮಾಡಿ ತೋರಿಸುತ್ತದೆ.
೧ನೇ ಅನುವಾಕದ ಮಂತ್ರಗಳು ಸಾಂಪ್ರದಾಯಿಕರಿಗೆ ವತ್ಸಾಪಕರಣಾರ್ಥಮಂತ್ರಗಳಾಗಿ ಗೋಚರಿಸಿದರೆ, ಆಧ್ಯಾತ್ಮಿಕಾರ್ಥಪ್ರಿಯರು ಇದನ್ನು “ಜ್ಞಾನಕಿರಣಗಳನ್ನು ಕ್ರಮಬದ್ಧಗೊಳಿಸುವ ಮಂತ್ರಗಳು” ಎಂಬುದಾಗಿ ಕಂಡುಕೊಂಡರು.
ಇಷೇ ತ್ವೋರ್ಜೇ ತ್ವಾ ವಾಯವ: ಸ್ಥೋಪಾಯವ: ಸ್ಥ -
ತ್ವಾ ಶಬ್ದವು ಜೀವಶಕ್ತಿಗಳಿಗೂ, ವಾಯು ಹಾಗೂ ಇತರ ದೇವತೆಗಳಿಗೂ ಅನ್ವಯಿಸುವುದು. ಜಗತ್ತಿನ ಪ್ರತಿಯೊಂದು ಕರ್ಮವೂ ಒಂದು ಯಜ್ಞ. ನಮ್ಮ ಶರೀರದಲ್ಲಿ ನಡೆಯುವ ಸಕಲ ವೈವಿಧ್ಯಮಯ ಅಂತರ್ಯಜ್ಞರೂಪೀ ಚಟುವಟಿಕೆಗಳ ಸಮಗ್ರ ಸಂಯೋಜನೆಯಿಂದ ಮಾತ್ರ ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧ್ಯ. ಇದಕ್ಕಾಗಿ, ಈ ಮಂತ್ರದಲ್ಲಿ ಪ್ರಾರ್ಥಿಸಲಾಗಿದೆ.
“ಹೇ ವಾಯುವೇ(ಜೀವಶಕ್ತಿಗಳೇ)! ಪ್ರೇರಣೆಗಾಗಿ (ಇಷೇ) ಹಾಗೂ ವರ್ಧಮಾನಶಕ್ತಿಗಾಗಿ (ಊರ್ಜೇ) ನಿನ್ನನ್ನು(ನಿಮ್ಮನ್ನು) ಆವಾಹಿಸುತ್ತೇವೆ. ನೀನು(ನೀವು) ಮನುಷ್ಯರಿಗಾಗಿ ಇದ್ದೀಯೆ(ಇದ್ದೀರಿ).”
ದೇವೋ ವ: ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣೇ -
“ಸವಿತೃದೇವನು ಅತ್ಯುತ್ಕೃಷ್ಟಕಾರ್ಯಗಳನ್ನು ಮಾಡಲು ನಿಮ್ಮನ್ನು(ಜನರನ್ನು) ಪ್ರೇರೇಪಿಸುವಂತಾಗಲಿ.”
ಆಪ್ಯಾಯಧ್ವಮಘ್ನಿಯಾ…………...ಮಾऽಘಶಗ್ಂಸ: -
“ಓ ಅವಧ್ಯನೇ! ದೇವತೆಗಳ ಪಾಲನ್ನು ಹೆಚ್ಚಿಸು. ಬಲಭರಿತನೇ, ಪ್ರೀತಿಭರಿತನೇ, ಸಂತಾನಭರಿತನೇ, ದು:ಖರಹಿತನೇ, ಸೀಮಾತೀತನೇ! ಚೋರರೂ ಪಾಪಿಗಳೂ ನಿನ್ನನ್ನು ನಿಯಂತ್ರಿಸದಿರಲಿ.”
ರುದ್ರಸ್ಯ ಹೇತಿ: ಪರಿ ವೋ ವೃಣಕ್ತು -
“ರುದ್ರನ ಈಟಿಯು ನಿಮ್ಮನ್ನು(ಜನರನ್ನು) ಇರಿಯುವಂತೆ ಆಗದಿರಲಿ.”
(ಜ್ಞಾನಕಿರಣಗಳನ್ನು ದುರುಪಯೋಗಪಡಿಸಿಕೊಳ್ಳದಂತೆ ರುದ್ರನ ಶಕ್ತಿಯು ಸಂರಕ್ಷಿಸುತ್ತದೆ.)
ಧ್ರುವಾ ಅಸ್ಮಿನ್ ಗೋಪತೌ ಸ್ಯಾತ ಬಹ್ವೀ: -
“ಬಹುಮುಖನಾದ ನೀನು ಈ ಜ್ಞಾನದ ಅಧಿದೇವತೆಯೊಂದಿಗೆ ಸದಾ ನೆಲೆಸು.”
ಯಜಮಾನಯಸ್ಯ ಪಶೂನ್ ಪಾಹಿ -
“ಯಜ್ಞಕರ್ತೃವಿನ ಜ್ಞಾನವನ್ನು (ಜ್ಯೋತಿರ್ಗೋವುಗಳನ್ನು) ಸಂರಕ್ಷಿಸು.”
ದಯಾನಂದಭಾಷ್ಯಾನುವಾದ
(ಶುಕ್ಲಯಜುರ್ವೇದೀಯ ವಾಜಸನೇಯೀಸಂಹಿತಾಧಾರಿತ)
ಇಷೇತ್ವಾ ಇತ್ಯಸ್ಯ ಪರಮೇಷ್ಠೀ ಪ್ರಜಾಪತಿಃ - ಋಷಿಃ | ಸವಿತಾ ದೇವತಾ | ಇಷೇ ತ್ವಾ ಇತ್ಯಾರಭ್ಯ ಭಾಗಪರ್ಯ್ಯಂತಸ್ಯ ಸ್ವರಾಡ್-ಬೃಹತೀಚ್ಛಂದಃ | ಮಧ್ಯಮಃ ಸ್ವರಃ | ಅಗ್ರೇ ಸರ್ವಸ್ಯ ಬ್ರಾಹ್ಮೀ-ಉಷ್ಣಿಕ್ ಛಂದಃ | ಋಷಭಃ ಸ್ವರಃ ||
ಅಥ ಉತ್ತಮಕರ್ಮಸಿದ್ಧ್ಯರ್ಥಮ್ ಈಶ್ವರಃ ಪ್ರಾರ್ಥನೀಯಃ - ಇತಿ ಉಪದಿಶ್ಯತೇ ||
“ಇಷೇ ತ್ವಾ..” ಎಂಬೀ ಮಂತ್ರಕ್ಕೆ ಪರಮೇಷ್ಠೀ ಪ್ರಜಾಪತಿಯು ದ್ರಷ್ಟಾರನು / ಋಷಿಯು. ಸವಿತೃವೇ ದೇವತೆಯು. “ಇಷೇ ತ್ವಾ” ಎಂಬಲ್ಲಿಂದ ಆರಂಭಿಸಿ “ಭಾಗಂ” ಎಂಬ ಮಂತ್ರಪರ್ಯಂತ / ಇಲ್ಲಿವರೆಗಿನ ಮಂತ್ರಕ್ಕೆ ಸ್ವರಾಡ್ - ಬೃಹತೀ ಎಂಬ ಛಂದಸ್ಸು. ಉಚ್ಚಾರಣಾ ಸ್ವರವು ಮಧ್ಯಮ (ಸರಿಗಮಾದಿ ಸಪ್ತಸ್ವರಗಳಲ್ಲಿ “ಮ”). ಈ ಮಂತ್ರದ “ಭಾಗಂ” ಎಂಬಲ್ಲಿಂದ ಮುಂದಿನ ಎಲ್ಲದಕ್ಕೆ ಬ್ರಾಹ್ಮೀ - ಉಷ್ಣಿಕ್ ಛಂದಸ್ಸು. ಸ್ವರವು ಋಷಭವು (“ರಿ”).
ಹೀಗೆ, ಉತ್-ತಮ (ಶ್ರೇಷ್ಠ)ವಾದ (ಉತ್ - positive degree, ಉತ್ತರ - comparative degree, ಉತ್ತಮ - superlative degree; 3 degrees of comparison eg., good, better, best. ತರಪ್, ತಮಪ್ ಪ್ರತ್ಯಯಗಳು ಕ್ರಮವಾಗಿ ೨ / ಕೆಲವು ವಸ್ತುಗಳ ತುಲನೆ ಹಾಗೂ ತುಂಬಾ ವಸ್ತುಗಳ ಹೋಲಿಕೆ / ಬೇರೆಲ್ಲದಕ್ಕಿಂತ ಹೆಚ್ಚಿನ / ತೀರಾ ಕಳಪೆಯ ಎಂಬರ್ಥದಲ್ಲಿ ಬಳಸಲ್ಪಡುವುದು.) ಕರ್ಮದ ಸಿದ್ಧಿಗಾಗಿ ಪರಮೇಶ್ವರನು ಪ್ರಾರ್ಥಿಸಲ್ಪಡಬೇಕು - ಎಂದು ಉಪದೇಶಿಸಲ್ಪಡುತ್ತದೆ.
ಮಂತ್ರ—
ಓ೩ಮ್ ಇಷೇ ತ್ವೋರ್ಜೇ ತ್ವಾ ವಾಯವ ಸ್ಥ ದೇವೋ ವಃ ಸವಿತಾ ಪ್ರಾರ್ಪಯತು ಶ್ರೇಷ್ಠತಮಾಯ ಕರ್ಮಣऽಆಪ್ಯಾಯಧ್ವಮಘ್ನ್ಯಾऽಇಂದ್ರಾಯ ಭಾಗಂ ಪ್ರಜಾವತೀರನಮೀವಾऽಅಯಕ್ಷ್ಮಾ ಮಾ ವ ಸ್ತೇನऽಈಶತ ಮಾಘಶಗ್ಂಸೋ ಧ್ರುವಾऽಅಸ್ಮಿನ್ ಗೋಪತೌ ಸ್ಯಾತ ಬಹ್ವೀರ್ಯಜಮಾನಸ್ಯ ಪಶೂನ್ ಪಾಹಿ || ೧ ||
ಪದಾರ್ಥಃ—
(ಇಷೇ) ಅನ್ನ-ವಿಜ್ಞಾನಯೋಃ ಪ್ರಾಪ್ತಯೇ | “ಇಷಮ್ ಇತಿ ಅನ್ನ-ನಾಮಸು ಪಠಿತಮ್” (ನಿಘಂಟು ೨.೭), “ಇಷತಿ ಇತಿ ಗತಿಕರ್ಮಸು ಪಠಿತಮ್” (ನಿಘಂಟು ೨.೧೪) |.......
ದೇಹಕ್ಕೆ ಬೇಕಾದ ಅನ್ನಾಹಾರ ಹಾಗೂ ಮನಸ್ಸಿಗೆ ಬೇಕಾದ ವಿಶೇಷವಾದ ಜ್ಞಾನಗಳ ಪ್ರಾಪ್ತಿಗಾಗಿ. ವೈದಿಕ ನಿಘಂಟುವಿನಂತೆ, ಇಷಮ್ ಎಂಬುದು ಅನ್ನದ ವಿವಿಧ ಹೆಸರುಗಳಲ್ಲೊಂದೆಂಬುದಾಗಿ ಹೇಳಲ್ಪಟ್ಟಿದೆ. ಹಾಗೆಯೇ, ಇಷತಿ ಎಂಬುದು ಗತಿ / ಗಮನಶೀಲತೆ / ಚಲನಶೀಲತೆಯೆಂಬ ಕರ್ಮದ ವಿಧಗಳಲ್ಲೊಂದು.
(ತ್ವಾ) ತ್ವಾಮ್ / ವಿಜ್ಞಾನಸ್ವರೂಪಂ ಪರಮೇಶ್ವರಂ |
ನಿನ್ನನ್ನು / ವಿಜ್ಞಾನಸ್ವರೂಪಿಯಾದ ಪರಮೇಶ್ವರನನ್ನು;
(ಊರ್ಜ್ಜೇ) ಪರಾಕ್ರಮೋತ್ತಮ-ರಸ-ಲಾಭಾಯ | “ಊರ್ಗ್ರಸಃ” (ಊರ್ಕ್+ರಸಃ) (ಶ.ಬ್ರಾ.೫.೧.೨.೮) |
ಉತ್ತಮವಾದ ಪರಾಕ್ರಮ/ ಪೌರುಷಪ್ರಾಪ್ತಿಗೆ ಅಗತ್ಯವಾದ ರಸ-ಧಾತುಗಳನ್ನು ಪಡೆಯಲು / ಅಂತಹ ದ್ರವ-ರಸ-ಸಾರವನ್ನು ಪಡೆಯಲು;
(ತ್ವಾ) ಅನಂತಪರಾಕ್ರಮ-ಆನಂದರಸಘನಮ್ |
ಅಂತ್ಯವಿಲ್ಲದ ಪರಾಕ್ರಮವುಳ್ಳ, ಸತ್-ಚಿತ್-ಆನಂದಪೂರ್ಣನನ್ನು;
(ವಾಯವಃ) ಸರ್ವಕ್ರಿಯಾಪ್ರಾಪ್ತಿಹೇತವಃ ಸ್ಪರ್ಶಗುಣಾಃ ಭೌತಿಕಾಃ ಪ್ರಾಣಾದಯಃ | “ವಾಯುರಿತಿ ಪದನಾಮಸು ಪಠಿತಮ್” (ನಿಘಂಟು ೫.೪) | ಅನೇನ ಪ್ರಾಪ್ತಿಸಾಧಕಾಃ ವಾಯವಃ ಗೃಹ್ಯಂತೇ | ವಾ ಗತಿ-ಗಂಧನಯೋಃ - ಇತ್ಯಸ್ಮಾತ್ | ಅನೇನ ಅಪಿ ಉಕ್ತಾರ್ಥೋ ಗೃಹ್ಯತೇ |
ಸಕಲ ಕ್ರಿಯೆಗಳ ಪ್ರಾಪ್ತಿಗೆ ಕಾರಣಗಳಾದ ಸ್ಪರ್ಶ ಗುಣ / ತನ್ಮಾತ್ರೆಯುಳ್ಳ ಭೌತಿಕವಾದ ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನವೆಂಬ ೫ / ಪಂಚ ಪ್ರಾಣಗಳು (ಹಾಗೂ ನಾಗ-ಕೂರ್ಮ-ಕೃಕಲ-ದೇವದತ್ತ-ಧನಂಜಯವೆಂಬ ಪಂಚ ಉಪಪ್ರಾಣಾದಿಗಳು). ವೈದಿಕ ನಿಘಂಟು, ವಾಯುವೆಂಬುದು ಪದ / ಪದವಿ / ಸ್ಥಾನಗಳ ವಿವಿಧ ಹೆಸರುಗಳಲ್ಲಿ ಬರವುದೆಂದಿದೆ. ಈ ಪದದಿಂದ ಎಲ್ಲದರ ಪ್ರಾಪ್ತಿಗೆ ಸಾಧಕವಾದ ವಾಯುಗಳು ಪರಿಗಣಿತವಾಗುತ್ತವೆ. ‘ವಾ’ ಗತಿಶೀಲತೆ ಹಾಗೂ ಸುಗಂಧಾದಿಗಳ ಪಸರಿಸುವಿಕೆ ಎಂಬರ್ಥದ ಧಾತುವಿನಿಂದಾಗಿದೆ. ಇದರಿಂದಲೂ ಮೇಲೆ ಹೇಳಿಗ ಪ್ರಾಪ್ತಿಯೆಂಬರ್ಥವು ಸ್ವೀಕೃತವಾಗುತ್ತದೆ. ಅರ್ಥಾತ್ ಗಮನಾಗಮನ / ಸದ್-ಗತಿ ಹಾಗೂ ಸುಗಂಧಾದಿ ಪ್ರಾಪ್ತಿಸಾಧಕ.
(ಸ್ಥ) ಸಂತಿ | ಅತ್ರ ಪುರುಷವ್ಯತ್ಯಯೇನ ಪ್ರಥಮಪುರುಷಸ್ಯ ಸ್ಥಾನೇ ಮಧ್ಯಮಪುರುಷಃ |
ಆಗಿವೆ. ಇಲ್ಲಿ ಪುರುಷದ ವ್ಯತ್ಯಾಸದಿಂದ ಪ್ರಥಮಪುರುಷದ ಸ್ಥಾನದಲ್ಲಿ ಮಧ್ಯಮಪುರುಷವು ಪ್ರಯುಕ್ತವಾಗಿದೆ.
(ದೇವಃ) ಸರ್ವೇಷಾಂ ಸುಖಾನಾಂ ದಾತಾ ಸರ್ವವಿದ್ಯಾದ್ಯೋತಕಃ | “ದೇವೋ ದಾನಾದ್ವಾ ದೀಪನಾದ್ವಾ ದ್ಯೋತನಾದ್ವಾ ದ್ಯುಸ್ಥಾನೋ ಭವತೀತಿ ವಾ ಯೋ ದೇವಃ ಸಾ ದೇವತಾ” (ನಿರುಕ್ತ ೭.೧೫) |
ಸರ್ವರ ಸರ್ವ ಸುಖಗಳ ದಾತೃ / ಕೊಡುವವ, ಎಲ್ಲ ವಿದ್ಯೆಗಳ ದ್ಯೋತಕ / ಪ್ರಕಾಶಕ (ದ್ಯುತಿ— ಪ್ರಕಾಶ). ನಿರುಕ್ತವು ಹೇಳಿದೆ— ದೇವಶಬ್ದವು ದಾನದಿಂದಲೋ, ದೀಪನ / ಉರಿಸುವಿಕೆಯಿಂದಲೋ, ದ್ಯೋತನ / ಬೆಳಗುವಿಕೆಯಿಂದಲೋ, ದೇವಲೋಕದಲ್ಲಿರುವುದರಿಂದಲೋ ಯಾವನು ದೇವನೋ ಅದೇ ದೇವತೆಯು. (ದೇವ=ದೇವತೆ; ಉದಾ— ಅಗ್ನಿ, ವಾಯು…)
(ವಃ) ಯುಷ್ಮಾಕಮ್ |— ನಿಮ್ಮನ್ನು;
(ಸವಿತಾ) ಸರ್ವಜಗದುತ್ಪಾದಕಃ, ಸಕಲೈಶ್ವರ್ಯವಾನ್, ಜಗದೀಶ್ವರಃ |
ಇಡಿಯ ಜಗತ್ತಿನ ಸೃಷ್ಟಿಕರ್ತ, ಎಲ್ಲ ಐಶ್ವರ್ಯ / ಸಂಪತ್ತು / ಈಶ್ವರತ್ವ / ಆಧಿಪತ್ಯವುಳ್ಳ, ಜಗದೀಶ್ವರನು.
(ಪ್ರಾರ್ಪಯತು) ಪ್ರಕೃಷ್ಟತಯಾ ಸಂಯೋಜಯತು |
ಚೆನ್ನಾಗಿ ಸಂಯೋಜಿಸಲಿ, ಸೇರಿಸಲಿ, ಹೊಂದಿಸಲಿ, ಪ್ರೇರಿಸಲಿ.
(ಶ್ರೇಷ್ಠತಮಾಯ) ಅತಿಶಯೇನ ಪ್ರಶಸ್ತಃ ಸಃ ಅತಿಶಯಿತಃ, ತಸ್ಮೈ ಯಜ್ಞಾಯ |
ಅತಿಶಯವಾಗಿ, ಬಹಳವಾಗಿ, ಅತಿಯಾಗಿ ಪ್ರಶಸ್ತವಾದ, ಯೋಗ್ಯವಾದದ್ದು ಯಜ್ಞವು; ಅಂತಹ ಯಜ್ಞಕ್ಕಾಗಿ, ಯಜ್ಞಾನುಷ್ಠಾನಕ್ಕಾಗಿ, ಯಜ್ಞವನ್ನು ಮಾಡಲು,
(ಕರ್ಮಣೇ) ಕರ್ತುಂ ಯೋಗ್ಯತ್ವೇನ ಸರ್ವೋಪಕಾರಾರ್ಥಾಯ |
ಕರ್ತುಂ ಯೋಗ್ಯಂ ಕರ್ಮ— ಮಾಡಲು ಯೋಗ್ಯವಾದದ್ದು ಕರ್ಮವು. ಅಂತಹ ಸರ್ವರಿಗೂ ಉಪಕಾರಕವಾದ ಕರ್ಮಗಳನ್ನು ಮಾಡಲು.
(ಆಪ್ಯಾಯಧ್ವಮ್) ಆಪ್ಯಾಯಾಮಹೇ ವಾ |
ಅನ್ನ/ವಿಜ್ಞಾನರೂಪನೂ ಉತ್ತಮ ರಸರೂಪನೂ (ರಸೋ ವೈ ಸಃ— ತೈ.ಉಪನಿಷತ್) ಹೀಗೆ ೨ ರೂಪಗಳಿಂದ ನೀನು ನಮ್ಮನ್ನು ಪ್ರೀತಿಯಿಂದ ಅನುಗ್ರಹಿಸು; ಅಥವಾ, ಆಪ್ಯಾಯಮಾನವಾಗಿ / ಬಹು ಆದರ-ಭಕ್ತಿಗಳಿಂದ ನಿನ್ನನ್ನು ನಮಿಸುತ್ತೇವೆ.
(ಅಘ್ನ್ಯಾಃ) ವರ್ಧಯಿತುಮ್ ಅರ್ಹಾಃ, ಹಂತುಮ್ ಅನರ್ಹಾಃ ಗಾವಃ, ಇಂದ್ರಿಯಾಣಿ, ಪೃಥಿವ್ಯಾದಯಃ, ಪಶವಃ ಚ | “ಅಘ್ನ್ಯಾಃ - ಇತಿ ಗೋನಾಮಸು ಪಠಿತಮ್” (ನಿಘಂಟು ೨.೧೧) |
ಬೆಳೆಸಲು, ಸಾಕಿ ಸಲಹಲು, ಪೋಷಿಸಲು, ಸಂತತಿವರ್ಧಿಸಲು ಯೋಗ್ಯವಾದ, ಕೊಲ್ಲಲು / ಹಿಂಸಿಸಲು ಅರ್ಹವಲ್ಲದ ಗೋವುಗಳು / ಇಂದ್ರಿಯಗಳು / ಪೃಥಿವೀ ಮುಂತಾದವು / ಹಾಗೂ ಪಶುಗಳು. “ಅಘ್ನ್ಯಾಃ” ಎಂದು ಗೋವಿನ ನಾನಾ ನಾಮಗಳಲ್ಲೊಂದೆಂದು ವೈದಿಕನಿಘಂಟಿನಲ್ಲಿ ಬರುತ್ತದೆ.
(ಇಂದ್ರಾಯ) ಪರಮೈಶ್ವರ್ಯಯೋಗಾಯ |
ಶ್ರೇಷ್ಠವಾದ ಐಶ್ವರ್ಯ / ಆಧ್ಯಾತ್ಮಿಕ ಸಂಪತ್ತಿನ ಪ್ರಾಪ್ತಿಗಾಗಿ.
(ಭಾಗಮ್) ಸೇವನೀಯಂ ಭಾಗಾನಾಂ ಧನಾನಾಂ ಜ್ಞಾನಾನಾಂ ವಾ ಭಾಜನಮ್ |
ಸೇವೆಮಾಡಲ್ಪಡಲು ಯೋಗ್ಯನಾದವನನ್ನು / ಸೇವನೀಯನಾದವನನ್ನು ಅಥವಾ ಭಾಗ =ಧನಸಂಪತ್ತುಗಳ / ಜ್ಞಾನಗಳ ನಿಧಿಯಾದವನನ್ನು,
(ಪ್ರಜಾವತೀಃ) ಭೂಯಸ್ಯಃ ಪ್ರಜಾ ವರ್ತಂತೇ ಯಾಸು ತಾಃ |....
ಬಹುಮಂದಿ ಸಂತಾನಗಳು ಯಾರಲ್ಲಿವೆಯೋ ಅಂಥವುಗಳು,
(ಅನಮೀವಾಃ) “ಅಮ ರೋಗೇ” - ಇತ್ಯಸ್ಮಾದ್ ಬಾಹುಲಕಾದ್ ಔಣಾದಿಕಃ ‘ಈವನ್’ ಪ್ರತ್ಯಯಾದ್ ಅಮೀವಃ ವ್ಯಾಧಿಃ, ನ ವಿದ್ಯತೇ ಯಾಸು ತಾಃ |
ಅಮ = ರೋಗ ಎಂಬುದರಿಂದ ನಿಷ್ಪನ್ನವಾದ ಅಮೀವಃ = ವ್ಯಾಧಿಯು ಯಾರಲ್ಲಿ ಇರುವುದಿಲ್ಲವೋ ಅಂತಹವುಗಳು,
(ಅ-ಯಕ್ಷ್ಮಾಃ) ನ ವಿದ್ಯತೇ ಯಕ್ಷ್ಮಾ ರೋಗರಾಜಃ, ಯಾಸು ತಾಃ |
ಯಕ್ಷ್ಮವೆಂದು ಕರೆಯಲ್ಪಡುವ ರೋಗಗಳ ರಾಜನೆನಿಸಿದ ರಾಜಯಕ್ಷ್ಮ / ಕ್ಷಯರೋಗವು ಯಾರಲ್ಲಿಲ್ಲವೋ ಅಂಥವುಗಳು,
(ಮಾ) ನಿಷೇಧಾರ್ಥೇ |— ನಿಷೇಧಾರ್ಥಸೂಚಕ.
(ವಃ) ತಾಃ |— ಅವುಗಳು.
(ಸ್ತೇನಃ) ಚೋರಃ |— ಕಳ್ಳ.
(ಈಶತ) ಈಷ್ಟಾಂ ಸಮರ್ಥೋ ಭವತು |
ಕದಿಯಲು ಸಮರ್ಥರಾಗಲಿ. ಇಲ್ಲಿಗೆ ಮೇಲಿನ ನಿಷೇಧಾರ್ಥಕ “ಮಾ” ಅನ್ವಯವಾದಾಗ ಕದಿಯಲು ಸಮರ್ಥರಾಗದೆ ಇರಲಿ ಎಂದಾಗುತ್ತದೆ.
(ಮಾ) ನಿಷೇಧಾರ್ಥೇ |— ನಿಷೇಧವಾಚಕ.
( ಅಘಶಗ್ಂಸಃ) ಯಃ, ಅಘಂ ಪಾಪಂ ಶಂಸತಿ ಸಃ |
ಯಾವನು ಅಘ / ಪಾಪವನ್ನು ಹೊಗಳುತ್ತಾನೋ / ಪ್ರಶಂಸಿಸಿ ಪ್ರೋತ್ಸಾಹಿಸುತ್ತಾನೋ ಅಂಥವನು.
(ಧ್ರುವಾಃ) ನಿಶ್ಚಲಸುಖಹೇತವಃ |— ಸ್ಥಿರವಾದ ಸುಖಕ್ಕೆ ಕಾರಣವಾದವುಗಳು.
(ಅಸ್ಮಿನ್) ವರ್ತಮಾನೇ ಪ್ರತ್ಯಕ್ಷೇ |— ಈ ಕಣ್ಣೆದುರಿಗೆ ಕಾಣಿಸುತ್ತಿರುವ,
(ಗೋಪತೌ) ಯೋ ಗವಾಂ ಪತಿಃ ಸ್ವಾಮೀ, ತಸ್ಮಿನ್ |— ಯಾವ ಗೋವುಗಳ ಪಾಲಕ / ಸ್ವಾಮಿ / ಒಡೆಯನಿರುವನೋ ಅವನಲ್ಲಿ,
(ಸ್ಯಾತ) ಭವೇಯುಃ |— ಇರಲಿ.
(ಬಹ್ವೀಃ) ಬಹ್ವಯಃ, ಅತ್ರ |— ಇಲ್ಲಿ ಬಹುಸಂಖ್ಯೆಯಲ್ಲಿ.
(ಯಜಮಾನಸ್ಯ) ಯಃ ಪರಮೇಶ್ವರಂ ಸರ್ವೋಪಕಾರಂ ಧರ್ಮಂ ಚ ಯಜತಿ, ತಸ್ಯ ವಿದುಷಃ |
ಯಾವನು ಪರಮೇಶ್ವರನನ್ನೂ, ಸರ್ವಹಿತಕಾರಕ ಧರ್ಮವನ್ನೂ ಕುರಿತು ತಪೋಯಜ್ಞಾದಿ ಅನುಷ್ಠಾನ, ಆಚರಣೆಗಳನ್ನು ಮಾಡುವನೋ, ಅಂತಹ ಜ್ಞಾನಿಯ,
(ಪಶೂನ್) ಗೋ-ಅಶ್ವ-ಹಸ್ತ್ಯಾದೀನ್ ಶ್ರಿಯಃ ಪ್ರಜಾಃ ವಾ | “ಶ್ರೀಃ ಹಿ ಪಶವಃ” (ಶ.ಬ್ರಾ. ೧.೬.೩.೩೬), “ಪ್ರಜಾಃ ವೈ ಪಶವಃ” (ಶ.ಬ್ರಾ. ೧.೪.೬.೧೭) |
ಗೋವು, ಕುದುರೆ, ಆನೆ ಮುಂತಾದ ಸಾಕುಪ್ರಾಣಿಗಳನ್ನು ಅಥವಾ ಸಂತಾನವನ್ನು; ಶತಪಥ ಬ್ರಾಹ್ಮಣವು ಹೇಳಿದೆ— “ಪಶುಗಳೆಂದರೆ ಸಂಪತ್ತು / ಶ್ರೀ / ಸಿರಿ”, “ಪ್ರಜೆಗಳು / ಮಕ್ಕಳು ಪಶುಗಳು”.
(ಪಾಹಿ) ರಕ್ಷ ||— ರಕ್ಷಿಸು / ಪಾಲಿಸು.
ಅಯಂ ಮಂತ್ರಃ ಶತಪಥಬ್ರಾಹ್ಮಣೇ (೧.೫.೪.೧-೮) ವ್ಯಾಖ್ಯಾತಃ || ೧ ||
ಈ ಮಂತ್ರವು ಶತಪಥ ಬ್ರಾಹ್ಮಣದಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ.
ಅನ್ವಯಃ—
ಹೇ ಮನುಷ್ಯಾಃ! (ಎಲೈ ಮನುಜರೇ!), ಅಯಂ ಸವಿತಾ ದೇವಃ (ಈ ಜಗತ್ಕರ್ತನೂ, ಸಕಲೈಶ್ವರ್ಯಯುಕ್ತನೂ, ಸಕಲರಿಗೆ ಸರ್ವಸುಖಗಳ ದಾತೃವೂ ಆದ ಜಗದೀಶ್ವರನು), ಭಗವಾನ್ (ಭಗವಂತನು), ವಾಯವಃ ಸ್ಥ ಯಾನ್ಯಸ್ಮಾಕಂ ವಃ, ಯುಷ್ಮಾಕಂ ಪ್ರಾಣಾಂತಃಕರಣೇಂದ್ರಿಯಾಣಿ ಸಂತಿ (ಯಾವ ನಮ್ಮ ನಿಮ್ಮ ಪ್ರಾಣ-ಅಂತಃಕರಣ-ಇಂದ್ರಿಯಗಳಿವೆಯೋ), ತಾನಿ ಶ್ರೇಷ್ಠತಮಾಯ ಕರ್ಮಣೇ ಪ್ರಾರ್ಪಯತು (ಅವುಗಳನ್ನು ಶ್ರೇಷ್ಠತಮವಾದ ಕರ್ಮಗಳಲ್ಲಿ ತೊಡಗಿಸಲಿ / ಸಂಯೋಜಿಸಲಿ.)|
ವಯಮ್ ಇಷೇ, ಅನ್ನಾಯ ಉತ್ತಮೇಚ್ಛಾಯೈ (ನಾವು ಅನ್ನಕ್ಕಾಗಿ, ಉತ್ತಮ ಇಚ್ಛಾಶಕ್ತಿಗಾಗಿ, ಜ್ಞಾನಕ್ಕಾಗಿ), ಸವಿತಾರಂ ದೇವಂ ತ್ವಾ ತ್ವಾಂ ತಥಾ (ಜಗತ್ತಿನ ಪ್ರಸವಕ್ಕೆ ಕಾರಣನಾಗಿ ಸವಿತೃವೆನಿಸಿದ ದೇವನಾದ ನಿನ್ನನ್ನು), ಊರ್ಜ್ಜೇ ಪರಾಕ್ರಮ-ಉತ್ತಮ-ರಸಪ್ರಾಪ್ತಯೇ ಭಾಗಂ ಭಜನೀಯಂ ತ್ವಾ ತ್ವಾಂ ಸತತಮ್ ಆಶ್ರಯಾಮಃ (ಉತ್ತಮ ಶಕ್ತಿಪರಾಕ್ರಮಗಳಿಗಾಗಿ ಬೇಕಾದ ಶ್ರೇಷ್ಠ ರಸಧಾತುಗಳ ಪ್ರಾಪ್ತಿಗಾಗಿ ಭಜಿಸಲ್ಪಡಲು ಯೋಗ್ಯನಾದ ನಿನ್ನನ್ನು ಸತತವೂ ಆಶ್ರಯಿಸುತ್ತೇವೆ.);
ಏವಂ ಭೂತ್ವಾ ಯೂಯಮ್ ಆಪ್ಯಾಯಧ್ವಮ್ ವಯಂ ಚ ಆಪ್ಯಾಯಾಮಹೇ (ಈ ರೀತಿಯಾಗಿ ನೀವುಗಳು / ಶಿಷ್ಯರು ಭಗವಂತನನ್ನು ಪ್ರೇಮದಿಂದ ಕಾಣಿರಿ ಹಾಗೂ ನಾವೂ /ಗುರುಗಳೂ ಸಹ ಆತನನ್ನು ಸಾದರಾತಿಶಯದಿಂದ ಭಜಿಸುತ್ತೇವೆ. - ಅಥವಾ - ಹೀಗೆ ಮಾನವರಾದ ನೀವು ಭಗವಂತನನ್ನು ಅತಿಶಯ ಭಕ್ತಿಯಿಂದ ಕಾಣಿರಿ; ಭಗವತ್ಸ್ವರೂಪರಾದ ದೇವತೆಗಳಾದ ನಾವೂ ಅಂತೆಯೇ ನಿಮ್ಮನ್ನು ಆಪ್ಯಾಯತೆಯಿಂದ ನೋಡಿಕೊಳ್ಳುವೆವು / ಯೋಗಕ್ಷೇಮವನ್ನು ನಿರ್ವಹಿಸುವೆವು.) |
ಹೇ ಪರಮೇಶ್ವರ! ಭವಾನ್ ಕೃಪಯಾ ಅಸ್ಮಾಕಮ್ ಇಂದ್ರಾಯ ಪರಮೈಶ್ವರ್ಯಪ್ರಾಪ್ತಯೇ ಶ್ರೇಷ್ಠತಮಾಯ ಕರ್ಮಣೇ ಚ ಇಮಾಃ, ಪ್ರಜಾವತೀಃ ಅನಮೀವಾಃ, ಅಯಕ್ಷ್ಮಾಃ, ಗಾಃ ಸದಾ ಏವ ಪ್ರಾರ್ಪಯತು (ಅಯ್ಯಾ ಪರಮೇಶ್ವರನಾದ ಭಗವಂತನೇ! ನೀನು ಕೃಪೆಯಿಂದ ನಮಗೆ ಪರಮೈಶ್ವರ್ಯ ಪ್ರಾಪ್ತಿಯಾಗಲು ಶ್ರೇಷ್ಠತಮವಾದ ಯಜ್ಞಾದಿ ಕರ್ಮಗಳನ್ನು ಮಾಡಲನುವಾಗುವಂತೆ, ಅದಕ್ಕೆ ಬೇಕಾದ ತುಪ್ಪ ಮುಂತಾದ ಸುವಸ್ತುಗಳನ್ನೂ, ಉತ್ತಮ ಬುದ್ಧಿಯನ್ನೂ ನೀಡು ಹಾಗೂ ಅದಕ್ಕಾಗಿ ಈ ಬಹುಸಂತತಿಯುಳ್ಳ, ರೋಗರಹಿತರಾದ, ಕ್ಷಯರಹಿತರಾದ ಗೋವುಗಳನ್ನು ಸದಾ ಪ್ರೇರಿಸು.) |
ಹೇ ಪರಮಾತ್ಮನ್! ಭವತ್ಕೃಪಯಾ ಅಸ್ಮಾಕಂ ಮಧ್ಯೇ ಕಶ್ಚಿದ್ ಅಘಶಂಸಃ ಪಾಪೀ ಸ್ತೇನಃ ಚೋರಃ ಚ ಮಾ ಈಶತ, ಕದಾಚಿತ್ ಮಾ ಉತ್ಪದ್ಯತಾಮ್ (ಹೇ ಪರಮಾತ್ಮನೇ! ನಿನ್ನ ದಯೆಯಿಂದ ನಮ್ಮ ನಡುವೆ ಸಮಾಜದಲ್ಲಿ ಯಾವನೇ ಪಾಪಬುದ್ಧಿಯ ಕಳ್ಳನು ಉಂಟಾಗದಿರಲಿ / ಯಾವನೂ ಕೂಡ ಪಾಪಿಯೂ, ಕಳ್ಳನೂ ಆಗದಿರಲಿ.) |
ತಥಾ, ತ್ವಮ್ ಅಸ್ಯ ಯಜಮಾನಸ್ಯ ಜೀವಸ್ಯ ಪಶೂನ್ ಪಾಹಿ ಸತತಂ ರಕ್ಷ (ಹಾಗೆಯೇ, ನೀನು ಈ ಯಜಮಾನನಾದ ಜೀವಾತ್ಮನ ಸಂತತಿಯನ್ನೂ, ಗೌ, ಹಸ್ತಿ, ಅಶ್ವಾದಿ ಸಾಕುಪ್ರಾಣಿಗಳನ್ನೂ, ಸಕಲ ಸಿರಿಸಂಪದವನ್ನೂ ಎಡೆಬಿಡದೆ ಸದಾಕಾಲವೂ ರಕ್ಷಿಸು.)|
ಯತಃ, ವಃ, ತಾಃ ಗಾಃ, ಇಮಾನ್ ಪಶೂನ್, ಚ ಅಘಶಂಸಃ ಸ್ತೇನಃ ಮಾ ಈಶತ (ಹೀಗೆ ನೀನು ರಕ್ಷಿಸಿದರೆ, ಇವುಗಳನ್ನು ಪಾಪೀ ಚೋರನು ಕದ್ದೊಯ್ಯಲಾರನು.) |
ಹರ್ತುಂ ಸಮರ್ಥಃ, ನ ಭವೇತ್ ಯತಃ, ಅಸ್ಮಿನ್ ಗೋಪತೌ ಪೃಥಿವ್ಯಾದಿ-ರಕ್ಷಣಮ್ ಇಚ್ಛುಕಸ್ಯ ಧಾರ್ಮಿಕಮನುಷ್ಯಸ್ಯ ಬಹ್ವೀಃ, ಬಹ್ವ್ಯಃ ಗಾವಃ ಧ್ರುವಾಃ ಸ್ಯಾತ ಭವೇಯುಃ (ಹೀಗೆ ಚೋರನು ಅಪಹರಿಸಲು ಸಮರ್ಥನಾಗದಿದ್ದರೆ, ಇದರಿಂದಾಗಿ ಈ ಗೋಪಾಲಕನಾದ ಯಜಮಾನನಲ್ಲಿ / ಭೂಮಿಯೇ ಮುಂತಾದ ಸಂಪತ್ತನ್ನು ರಕ್ಷಿಸಲು ಇಚ್ಛೆಯುಳ್ಳ ಧಾರ್ಮಿಕನಾದ ನರನಿಗೆ ಬಹುಸಂಖ್ಯೆಯ ಗೋವುಗಳು / ಅತುಲವಾದ ಧಾರ್ಮಿಕ ಪರಮೈಶ್ವರ್ಯವು / ಅತಿಶಯವಾದ ಭೂಮ್ಯಾದಿ ಸಕಲ ಸಿರಿಸಂಪದವು ಒದಗಿಬರಲಿ.) || ೧ ||
ಭಾವಾರ್ಥಃ—
ಮನುಷ್ಯೈಃ ಸದಾ ಏವ ಧರ್ಮ್ಯಂ ಪುರುಷಾರ್ಥಮ್ ಆಶ್ರಿತ್ಯ, ಋಗ್ವೇದಾಧ್ಯಯನೇನ ಗುಣಗುಣಿನೌ ಜ್ಞಾತ್ವಾ, ಸರ್ವಪದಾರ್ಥಾನಾಂ ಸಂಪ್ರಯೋಗೇಣ ಪುರುಷಾರ್ಥಸಿದ್ಧಯೇ ಶ್ರೇಷ್ಠತಮಾಭಿಃ ಕ್ರಿಯಾಭಿಃ ಸಂಯುಕ್ತೈಃ ಭವಿತವ್ಯಮ್ (ಮನುಷ್ಯರಿಂದ ಯಾವಾಗಲೂ ಧರ್ಮಯುಕ್ತವಾದ ಅರ್ಥ-ಕಾಮಾದಿ ಪುರುಷಾರ್ಥಗಳನ್ನು ಆಶ್ರಯಿಸಿ, ಋಗ್ವೇದದ ಅಧ್ಯಯನದಿಂದ ಪರಮಾತ್ಮನ ಗುಣಗಳನ್ನೂ, ಗುಣಯುಕ್ತನಾದ ಪರಮಾತ್ಮನನ್ನೂ ತಿಳಿದು, ಸಕಲ ಸುವಸ್ತುಗಳ / ಸೂಕ್ತ-ಮಂತ್ರಾದಿಗಳ ಸದ್ಬಳಕೆಯಿಂದ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಸಿದ್ಧಿಗಾಗಿ, ಶ್ರೇಷ್ಠತಮವಾದ ಕ್ರಿಯೆಗಳಿಂದ ಕೂಡಿರಲ್ಪಡತಕ್ಕದ್ದು.) |
ಯತಃ, ಈಶ್ವರಾನುಗ್ರಹೇಣ ಸರ್ವೇಷಾಂ ಸುಖೈಶ್ವರ್ಯಸ್ಯ ವೃದ್ಧಿಃ ಸ್ಯಾತ್ (ಯಾಕೆಂದರೆ / ಯಾವ ಇದರಿಂದ / ಹೀಗೆ ಮಾಡುವುದರಿಂದ, ಪರಮೇಶ್ವರನ ಅನುಗ್ರಹವುಂಟಾಗಿ ಎಲ್ಲರ ಸುಖ-ಸಂಪತ್ತುಗಳ ವೃದ್ಧಿ / ಹೆಚ್ಚಳವಾಗುವುದು.) |
ತಥಾ ಸಮ್ಯಕ್ ಕ್ರಿಯಯಾ ಪ್ರಜಾಯಾಃ, ರಕ್ಷಣ-ಶಿಕ್ಷಣೇ ಸದಾ ಏವ ಕರ್ತವ್ಯೇ (ಹಾಗೆಯೇ, ಇಂತಹ ಒಳ್ಳೆಯ / ಸರಿಯಾದ ಕ್ರಿಯಾಕರ್ಮಗಳಿಂದ ಸತ್ಪ್ರಜೆಗಳ / ಸತ್ಸಂತತಿಯ / ಮಕ್ಕಳ ಪಾಲನೆ-ಶಿಕ್ಷಣಾದಿಗಳು ಸರ್ವದಾ ಮಾಡಲ್ಪಡಬೇಕಾದುದು / ಕರ್ತವ್ಯವು.) |
ಯತಃ, ನೈವ ಕಶ್ಚಿತ್ ರೋಗಾಖ್ಯಃ, ವಿಘ್ನಃ ಚೋರಃ ಚ ಪ್ರಬಲಃ ಕದಾಚಿದ್ ಭವೇತ್, ಪ್ರಜಾಃ ಚ ಸರ್ವಾಣಿ ಸುಖಾನಿ ಪ್ರಾಪ್ನುಯುಃ (ಯಾಕೆಂದರೆ, ಹೀಗಿದ್ದರೆ ಭಗವದನುಗ್ರಹದಿಂದ ಎಂದಿಗೂ ಯಾವುದೇ ರೋಗವೆಂಬ ಹಾಗೂ ಚೋರನೆಂಬ ಪ್ರಬಲವಾದ ವಿಘ್ನವು ಎಂದಿಗೂ ಉಂಟಾಗಲಾರದು; ಸಕಲ ಪ್ರಜೆಗಳೂ / ಮಕ್ಕಳೂ ಎಲ್ಲರೀತಿಯ ಧರ್ಮಯುಕ್ತ ಸುಖವನ್ನು ಹೊಂದುವರು.) |
ಯೇನ ಇಯಂ ವಿಚಿತ್ರಾ ಸೃಷ್ಟಿಃ-ರಚಿತಾ, ತಸ್ಮೈ ಜಗದೀಶ್ವರಾಯ ಸದಾ ಏವ ಧನ್ಯವಾದಾಃ, ವಾಚ್ಯಾಃ (ಯಾವನಿಂದ ಈ ಚಿತ್ರ-ವಿಚಿತ್ರವಾದ / ವೈವಿಧ್ಯಮಯವೂ ಅದ್ಭುತವೂ ಆದ ಸೃಷ್ಟಿಯು ರಚಿಸಲ್ಪಟ್ಟಿತೋ, ಅಂತಹ ಜಗತ್ತಿನ ಒಡೆಯನಿಗೆ ಯಾವಾಗಲೂ ಧನ್ಯವಾದಗಳು ಹೇಳಲ್ಪಡಬೇಕು.) |
ಏವಂ ಕುರ್ವತಃ, ಭವತಃ, ಪರಮದಯಾಲುಃ ಈಶ್ವರಃ ಕೃಪಯಾ ಸದೈವ ರಕ್ಷಯಿಷ್ಯತಿ ಇತಿ ಮಂತವ್ಯಮ್ (ಹೀಗೆ ಮಾಡುವುದರಿಂದ ತಮ್ಮನ್ನೆಲ್ಲ ಪರಮದಯಾಳುವಾದ ಪರಮಾತ್ಮನು ಕೃಪೆಯಿಂದ ಯಾವಾಗಲೂ ಕೂಡ ರಕ್ಷಿಸುವನೆಂದು ತಿಳಿಯಬೇಕು.)|| ೧ ||
ಜಯದೇವಶರ್ಮಕೃತಭಾಷ್ಯಾನುವಾದ
(ಶುಕ್ಲಯಜುರ್ವೇದೀಯ ವಾಜಸನೇಯೀಸಂಹಿತಾಧಾರಿತ)
ಹೇ ಪರಮೇಶ್ವರನೇ!, (ಇಷೇ) ಅನ್ನ, ಉತ್ತಮ ವೃಷ್ಟಿ / ಮಳೆ ಮುಂತಾದವುಗಳ ಪ್ರಾಪ್ತಿಗಾಗಿ ಹಾಗೂ, (ಊರ್ಜೇ) ಸರ್ವೋತ್ತಮವಾದ ಪುಷ್ಟಿಕಾರಕ ರಸದ ಪ್ರಾಪ್ತಿಗಾಗಿ, (ತ್ವಾ ತ್ವಾ) ನಿನ್ನ ಉಪಾಸನೆಯನ್ನು ಮಾಡುತ್ತೇವೆ. ಹೇ ಪ್ರಾಣಗಳೇ (ಪಂಚಪ್ರಾಣಾದಿಗಳು) ಹಾಗೂ ಪ್ರಾಣಿಗಳೇ (ಪ್ರಾಣವಿರುವ ಸಕಲ ಜೀವರೇ)! ನೀವು, (ವಾಯವಃ ಸ್ಥ) ಎಲ್ಲರೂ ವಾಯುಸ್ವರೂಪರಾಗಿರುವಿರಿ; ಪ್ರಾಣವಾಯುವಿನ ಮೂಲಕವೇ ತಮ್ಮ ತಮ್ಮ ಪ್ರಾಣಗಳನ್ನು ಶರೀರದಲ್ಲಿ ಹಿಡಿದಿಟ್ಟುಕೊಂಡಿರುವಿರಿ / ಧರಿಸಿರುವಿರಿ. (ವಃ / ಯುಷ್ಮಾಕಮ್) ನಿಮ್ಮೆಲ್ಲರ, (ಸವಿತಾ) ಪ್ರಸವಿತೃ / ಪ್ರಸವಿಸಿದ / ಹೆತ್ತ ಸೃಷ್ಟಿಕರ್ತನಾದ ಪರಮೇಶ್ವರನಾದರೋ, (ದೇವಃ) ಸರ್ವಶ್ರೇಷ್ಠ ದೇವನಾಗಿ, ಸಕಲ ಸುಖ ಹಾಗೂ ಸುವಸ್ತುಗಳ ಪ್ರಕಾಶಕನೂ, ಪ್ರದಾಯಕನೂ ಆಗಿದ್ದಾನೆ. ಅವನು ನಿಮ್ಮನ್ನು, (ಶ್ರೇಷ್ಠತಮಾಯ) ಅತ್ಯಂತ ಶ್ರೇಷ್ಠವಾದ, ಎಲ್ಲಕ್ಕಿಂತ ಉತ್ತಮವಾದ, (ಕರ್ಮಣೇ) ಮೋಕ್ಷದಾಯಕ ಕರ್ಮಾಚರಣೆಗೆ, (ಪ್ರಾರ್ಪಯತು) ಪ್ರೇರಿಸಲಿ. ಅಂತೆಯೇ, (ಅಘ್ನ್ಯಾಃ) ಎಂದೂ ವಧಾರ್ಹವಲ್ಲದ ಇಂದ್ರಿಯಗಳಲ್ಲಿನ ಪ್ರಾಣಗಳೇ! ಯಜ್ಞಯೋಗ್ಯವಾದ ಗೋವುಗಳೇ! ಪೃಥಿವಿಯೇ ಮುಂತಾದ ಲೋಕಗಳೇ! ನೀವೆಲ್ಲರೂ, (ಆಪ್ಯಾಯಧ್ವಮ್) ಚೆನ್ನಾಗಿ ಬಲ-ಪುಷ್ಟಿಯುತರಾಗಿರಿ. ನೀವು, (ಇಂದ್ರಾಯ) ಐಶ್ವರ್ಯವಂತ ಪುರುಷ / ರಾಜನಿಗಾಗಿ, (ಭಾಗಮ್) ಭಜನೆ / ಸೇವೆ ಮಾಡಲು / ಸಮರ್ಪಿಸಲು ಯೋಗ್ಯವಾದ ಭಾಗವಾಗಿರಿ. ನೀವು, (ಪ್ರಜಾವತೀಃ) ಪ್ರಜಾಜನರ, ಕರುಗಳ, ಮಕ್ಕಳೇ ಮುಂತಾದವರ ಸಹಿತ, (ಅನಮೀವಾಃ) ರೋಗರಹಿತರಾಗಿ, (ಅಯಕ್ಷ್ಮಾಃ) ರಾಜಯಕ್ಷ್ಮಾದಿರಹಿತರಾಗಿರಿ. (ವಃ / ಯುಷ್ಮಾನ್ / ಯುಷ್ಮಾಕಮ್ ಉಪರಿ) ನಿಮ್ಮ ಮೇಲೆ, (ಸ್ತೇನಃ) ಕಳ್ಳಕಾಕರು, (ಮಾ ಈಶತ) ಈಶತ್ವ / ಪ್ರಭುತ್ವ / ಗೆಲುವನ್ನು ಹೊಂದದಿರಲಿ; ನಿಮ್ಮನ್ನು ಚೋರರು ಆಳದಿರಲಿ / ಸೋಲಿಸದಿರಲಿ / ಹೊಂದದಿರಲಿ. (ಅಘಶಂಸಃ) ಸದಾ ಪಾಪಕರ್ಮದ ಬಗ್ಗೆಯೇ ಚರ್ಚಿಸುತ್ತಿರುವ, ಇತರರನ್ನೂ ಪಾಪಕಾರ್ಯಗಳಿಗೆ ಪ್ರಚೋದಿಸುವ ನೀಚರು, (ವಃ ಮಾ ಈಶತ) ನಿಮ್ಮನ್ನು ಗೆಲ್ಲದಿರಲಿ. ಹೇ ಗೋವುಗಳೇ! ನೀವು, (ಗೋಪತೌ) ಗೋಪಾಲಕರ, ಭೂಪಾಲಕರ ಅಧೀನದಲ್ಲಿ, (ಧ್ರುವಾಃ) ಸ್ಥಿರವಾಗಿ / ಶಾಶ್ವತವಾಗಿ, (ಬಹ್ವೀಃ) ಬಹುಸಂಖ್ಯೆಯಲ್ಲಿ, (ಸ್ಯಾತ) ವಾಸವಾಗಿರಿ / ನೆಲೆಸಿರಿ. ಹೇ ವಿದ್ವಾನ್ ಪುರುಷನೇ! ಸೇನಾಪತಿಯೇ! ಮಂತ್ರಿಯೇ! ನೀನೂ, (ಯಜಮಾನಸ್ಯ) ಯಜ್ಞಮಾಡುವ, ದಾನಾದಿಗಳನ್ನಾಚರಿಸುವ ಶ್ರೇಷ್ಠ ವ್ಯಕ್ತಿಗಳ, (ಪಶೂನ್ ಪಾಹಿ) ಪಶುಗಳನ್ನು ಪಾಲಿಸು. (ಶತಪಥ ಬ್ರಾಹ್ಮಣ ೧.೭.೧. ೧-೭)
Comments
Post a Comment