ವೇದಸಾರ-ವರುಣಸ್ತೋತ್ರಮ್ ೪

( ಅವ ತೇ ಹೇಡೋ ವರುಣ ನಮೋಭಿರವ ಯಜ್ಞೇಭಿರೀಮಹೇ ಹವಿರ್ಭಿಃ | ಕ್ಷಯನ್ನಸ್ಮಭ್ಯಮಸುರ ಪ್ರಚೇತೋ ರಾಜನ್ನೇನಾಗ್ಂಸಿ ಶಿಶ್ರಥಃ ಕೃತಾನಿ ||— ತೈ.ಯ.ಸಂ.೧.೫.೧೧.೯)

ಹೇ ವರುಣ! ತವ ಕ್ರೋಧ|ಮಭಿಶಸ್ತ್ಯಾದಿಕಾರಣಮ್ |
ಹೇಡಸ್ತೇ ಶಮಯಾಮೋ ನೋ ನಮಸ್ಕಾರೈರ್ನಮೋಭಿಃ || ೪೬ ||

ಹೇ ವರುಣದೇವನೆ!! ಲೋಕದವರು ನಿನ್ನ ಮೇಲೆ ಅನಾವೃಷ್ಟಿಯ ಆಪಾದನೆ ಮಾಡುವಂತಹ (ಅಭಿಶಸ್ತಿಃ— ಲೋಕಾಪವಾದ) ಯಾವ ನಿನ್ನ ಕ್ರೋಧವಿದೆಯೋ ಅದನ್ನು ನಾವು ನಮಸ್ಕಾರಗಳಿಂದಲೂ, ಹವಿಷ್ಯಾನ್ನವನ್ನು (ನಮಃ— ನಮಸ್ಕಾರ, ಅನ್ನ) ಯಜ್ಞಾಗ್ನಿಯಲ್ಲಿ ಹೋಮಿಸುವ ಮೂಲಕ ನಿನಗೆ ಸಮರ್ಪಿಸುವುದರಿಂದಲೂ ಶಮನಗೊಳಿಸುತ್ತೇವೆ.

ಯಜ್ಞೇಭಿಶ್ಚ ಹವಿರ್ಭಿಶ್ಚ ಪೂಜಾಮನ್ತ್ರೈರ್ಅವೇಮಹೇ |
ನಾನಾಯಜ್ಞೈಃ ಪುರೋಡಾಶಾ|ದಿಭಿರಪನಯಾಮ ವೈ || ೪೭ ||

ನಾನಾಯಜ್ಞಗಳಿಂದಲೂ, ಪುರೋಡಾಶ / ಚರು ಮುಂತಾದ ಹವಿಸ್ಸುಗಳಿಂದಲೂ, ಪೂಜಾಮಂತ್ರಗಳಿಂದಲೂ ಹೇ ವರುಣದೇವ!! ನಿನ್ನನ್ನು ಪ್ರಸನ್ನೀಕರಿಸಿ, ನಿನ್ನ ಅನುಗ್ರಹದಿಂದ ಸುವೃಷ್ಟಿಯಾಗಿ, ತನ್ಮೂಲಕ ನಿನ್ನ ಮೇಲಿನ ಬರಗಾಲವುಂಟುಮಾಡಿದಿಯೆಂಬ ಜನಾಪವಾದವನ್ನು ಹೋಗಲಾಡಿಸುವೆವು (ಅಪ-ನಯಾಮ).

ಶತ್ರುನಿರಸನಕ್ಷಮ! ಹೇ ಅಸುರ ಪ್ರಚೇತ ವೈ |
ಪ್ರಕೃಷ್ಟಚಿತ್ತ! ಹೇ ರಾಜನ್! ಹೇ ಸದಾ ದೀಪ್ಯಮಾನ ಭೋಃ || ೪೮ ||

ಶತ್ರುಗಳನ್ನು ನಿವಾರಿಸಬಲ್ಲವನಾಗಿ ಅಸುರಪ್ರಚೇತನೆನಿಸಿದವನೆ! ಶ್ರೇಷ್ಠವಾದ ಚಿತ್ತವುಳ್ಳವನೆ! ಕೃಪಾಮನನೆ!! ಹೇ ಲೋಕರಾಜನೆ!!! ಅಯ್ಯಾ, ನೀನು ಜಗದಲ್ಲಿ ಸದಾ ದಿವ್ಯಪ್ರಕಾಶದಿಂದ ಬೆಳಗುತ್ತಿರುವೆ.

ಅಸ್ಮಭ್ಯಮ್ಅಸ್ಮದರ್ಥಂ ತ್ವಂ ಕ್ಷಯಂಶ್ಚ ನಿವಸನ್ನುತ |
ಕೃತಾನ್ಯಸ್ಮಾಭಿರ್ಏನಾಂಸಿ ಶಿಶ್ರಥಃ ಶ್ರಥಯ ಪ್ರಭೋ || ೪೯ ||

ನಮಗಾಗಿ ನೀನು ನಮ್ಮಲ್ಲಿ ಹಾಗೂ ಜಗತ್ತಿನಲ್ಲಿ ನೆಲೆಸಿ, ನಾವು ಮಾಡಿದ ಪಾಪಗಳನ್ನು ಶಿಥಿಲಗೊಳಿಸು, ನಾಶಗೊಳಿಸು ಹೇ ಜಗತ್ಪ್ರಭುವೆ! ವರುಣದೇವನೆ!!

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪