ವೇದಸಾರ-ವರುಣಸ್ತೋತ್ರಮ್ ೨

ಋಷಭಃ ಶ್ರೇಷ್ಠಸೋಮಸ್ತು  ದ್ಯುಲೋಕಸ್ತಂಭಕಃ ಸದಾ |
ಸುಸ್ಥಿರತ್ವೇ ಯಥಾ ನೈಷಃ ಪತತ್ಯಧಸ್ತು ವೈ ತಥಾ || ೨೦ ||

ವರುಣನಾಮಕ ಭಗವಂತ ಸೋಮನು ದೇವಶ್ರೇಷ್ಠನು. ಯಾವಾಗಲೂ ಅಂತರಿಕ್ಷವನ್ನು ಕೆಳಕ್ಕೆ ಬೀಳದಂತೆ ಸುಸ್ಥಿರವಾಗಿ ಎತ್ತಿಹಿಡಿದಿರುವ ಸ್ತಂಭಕಶಕ್ತಿಯೂ ಆತನೇ.

ಅಮಿಮೀತಾನ್ತರಿಕ್ಷಂ ಚೈ|ತಾವದಿತ್ಯದಿತೇಃ ಸುತಃ |
ವರಿಮಾಣಂ ಪೃಥಿವ್ಯಾಶ್ಚ ಗುರುತ್ವಮಮಿಮೀತ ಸಃ || ೨೧ ||

ಅಂತರಿಕ್ಷವನ್ನು ಹೀಗೆ ಆ ಅದಿತಿದೇವಿಯ ಸುತ ಆದಿತ್ಯ ವರುಣನು ನಿರ್ಮಿಸಿದನು. ಆತನೇ ಪೃಥಿವಿಗೆ ಶ್ರೇಷ್ಠವಾದ ಗುರುತ್ವಬಲವನ್ನೂ ಉಂಟುಮಾಡಿದನು.

ಸ್ವಮಹಿಮ್ನಾ ಸ್ವದೀಪ್ತ್ಯಾ ಸ|ಮ್ಯಗ್ರಾಜಮಾನ ವಿಶ್ವತಃ |
ಸರ್ವಾಣ್ಯೇವೋಕ್ತಕರ್ಮಾಣಿ ವಿಶ್ವೇತ್ತಾನಿ ಮಹಾತ್ಮನಃ || ೨೨ ||

ಈ ವರುಣದೇವನು ತನ್ನ ಮಹಿಮೆಯಿಂದ, ತನ್ನ ಸ್ವಯಂಜ್ಯೋತಿಯಿಂದ ಚೆನ್ನಾಗಿ ವಿರಾಜಮಾನನಾಗಿ ವಿಶ್ವದೆಲ್ಲೆಡೆ ಬೆಳಗುವ ಮೂಲಜ್ಯೋತಿಸ್ವರೂಪನು. ಹೀಗೆ ಮೇಲೆ ಉಕ್ತವಾದ / ಹೇಳಲ್ಪಟ್ಟ ಜಗತ್ತಿನ ಸೃಷ್ಟ್ಯಾದಿ ಎಲ್ಲ ಕರ್ಮಗಳೂ ಈ ಮಹಾತ್ಮನ ಮಹಿಮಾವಿಶೇಷವೇ ಆಗಿರುವುದು.

ವರುಣಾಖ್ಯಸ್ಯ ಸೋಮಸ್ಯ ಸರ್ವಾವರಕತಾ ಶುಭಾ |
ತದ್ವ್ರತಾನಿ ತು ತೇನೈವ ವ್ರತವನ್ನಿಯತಾನಿ ವೈ || ೨೩ ||

ವರುಣನಾಮಕ ಸೋಮನ ವಿಶ್ವವನ್ನೆಲ್ಲ ಆವರಿಸುವ, ವ್ಯಾಪಿಸುವ ಗುಣವು ಪರಮಾತ್ಮನ ವಿಶ್ವವ್ಯಾಪಕವಾದ ಶುಭತಮವಾದ ವಿಷ್ಣುತತ್ತ್ವವೇ ಆಗಿರುವುದು. ಆತನ ವ್ರತಸ್ವರೂಪವಾದ ಪರಮಾದ್ಭುತ ಕಾರ್ಯಗಳು, ಕಾಲನ ಗತಿಯಂತೆ ಎಲ್ಲವೂ ಒಂದು ನಿಯಮದಂತೆ ನಿಯಮಿತವಾಗಿ ನಡೆಯುತ್ತಿರುವುವು.

(— ವನೇಷು ವ್ಯನ್ತರಿಕ್ಷಂ ತತಾನ ವಾಜಮರ್ವತ್ಸು ಪಯೋ ಅಘ್ನಿಯಾಸು ಹೃತ್ಸು | ಕ್ರತುಂ ವರುಣೋ ವಿಕ್ಷ್ವಗ್ನಿಂ ದಿವಿ ಸೂರ್ಯಮದಧಾತ್ಸೋಮಮದ್ರೌ |)

ವನೇಷು ವೃಕ್ಷಮಧ್ಯೇಷು|ಅನ್ತರಿಕ್ಷಂ ವಿತತಾನ ಸಃ |
ಅವಕಾಶಂ ತಥಾ ವಾಜಂ ವೇಗಮ್-ಅರ್ವತ್ಸು ವಾಜಿಷು || ೨೪ ||

ಕಾಡುಗಳಲ್ಲಿ, ಮರಗಳ ನಡುವೆ ಅಂತರಿಕ್ಷ / ಅವಕಾಶ ವನ್ನು ಆತನು ನಿರ್ಮಿಸಿದನು. ಅಂತೆಯೇ, ಕುದುರೆಗಳಲ್ಲಿ ವೇಗವನ್ನು ಉಂಟುಮಾಡಿದನು.

ಪಯೋऽಘ್ನಿಯಾಸು ವಾ ಗೋಷು ಕ್ರತುಂ ಸಂಕಲ್ಪಮೇವ ಚ |
ಹೃತ್ಸು ವಾ ಹೃದಯೇಷ್ವೇವಂ ವಿಕ್ಷು ಪ್ರಜಾಸು ಜಾಠರಮ್ || ೨೫ ||

ಹಿಂಸಿಸಬಾರದ ಮಾತೃತುಲ್ಯವಾದ ಗೋವುಗಳ ಕೆಚ್ಚಲಲ್ಲಿ ಅಮೃತಸದೃಶವಾದ ಹಾಲನ್ನೂ, ಸರ್ವರ ಹೃದಯ / ಮನಸ್ಸು ಗಳಲ್ಲಿ ಕ್ರತುಶಕ್ತಿ / ಸಂಕಲ್ಪಶಕ್ತಿ / ಇಚ್ಛಾಶಕ್ತಿ ಯನ್ನೂ, ಹಾಗೆಯೇ ಸಕಲ ಜೀವರಲ್ಲಿ ಜಠರಾಗ್ನಿಯನ್ನೂ,

ದಿವಿ ಸೂರ್ಯಂ ಸೋಮವಲ್ಲೀಂ ಪಾಷಾಣಬಹುಲೇಷು ಚ |
ಅದಧಾತ್-ಪರ್ವತೇऽಸ್ಥಾಪ|ಯತ್ಸೋಮೋ ವರುಣಾಭಿಧಃ || ೨೬ ||

ದೇವಲೋಕದಲ್ಲಿ ಸೂರ್ಯನನ್ನೂ, ಬಹುಕಠಿನವಾದ ಕಲ್ಲುಗಳಿಂದ ಕೂಡಿದ ಪರ್ವತಶಿಖರಗಳಲ್ಲಿ ಸೋಮಲತೆಗಳನ್ನೂ ವರುಣನೆಂಬ ಹೆಸರುಳ್ಳ ಭಗವಂತ ಸೋಮನು (ಸ+ಉ+ಮ— ಸೋಮ; ಸ— ಸಮೇತ, ಉ— ನಿಶ್ಚಯವಾಗಿ, ಮ— ಮಾ, ಲಕ್ಷ್ಮೀ; ಲಕ್ಷ್ಮೀಸಮೇತ ಶ್ರೀಮನ್ನಾರಾಯಣನು. ಸ+ಉಮಾ— ಉಮಾಸಹಿತ ಪರಶಿವನು) ಸ್ಥಾಪಿಸಿದನು.

ವೃಕ್ಷೇಷು ವೃಕ್ಷಷಣ್ಡೇಷು ಭೂತಾಕಾಶಂ ವಿತತ್ಯ ಸಃ |
ಗತಿವಿಶೇಷಮಶ್ವೇಷು ದುಗ್ಧಂ ಗೋಷು ತಥೈವ ಚ || ೨೭ ||

ಕಾಡಿನ ಮರಗಳಲ್ಲಿ, ಮರಗಳೊಳಗಿನ / ಕಾಂಡಗಳೊಳಗಿನ ಸ್ಥಳದಲ್ಲಿ ಭೂತಾಕಾಶ (ಭೂತದೊಳಗಿನ ಆಕಾಶ, ಅವಕಾಶ)ವನ್ನು ಆತನು ವಿಸ್ತರಿಸಿ, ಅಶ್ವಗಳಲ್ಲಿ ವೇಗವಾದ ಗತಿಶೀಲತೆಯನ್ನೂ, ಗೋವುಗಳಲ್ಲಿ ವಿಶೇಷವಾಗಿ ಹಾಲನ್ನೂ, ಹಾಗೆಯೇ,

ವಿಜ್ಞಾನಂ ವಿತತಂ ಹೃತ್ಸು ಮರ್ತ್ಯೇಷ್ವಗ್ನಿಂ ರವಿಂ ದಿವಿ |
ಅದಧಾತ್ಸೋಮಮಾತ್ಮಾನಂ ಲತಾರೂಪಂ ಗಿರೌ ಸ್ವಯಮ್ || ೨೮ ||

ಸಕಲ ಜೀವರ ಹೃದಯಾಂತರಾಳದಲ್ಲಿ ವಿಶೇಷವಾದ ಜ್ಞಾನವನ್ನೂ, ಮರ್ತ್ಯಲೋಕದ ಜನನಮರಣವಿರುವ ಸಕಲ ಪ್ರಾಣವಂತರಲ್ಲಿ ಶರೀರವನ್ನು ಬೆಚ್ಚಗಿಡುವ ವೈಶ್ವಾನರಾಗ್ನಿಯನ್ನೂ, ತಿಂದದ್ದನ್ನು ಪಚನಮಾಡುವ ಜಠರಾಗ್ನಿಯನ್ನೂ, ನಭೋಮಂಡಲದಲ್ಲಿ ಭಾಸ್ಕರನನ್ನೂ, ಗಿರಿಗಳಲ್ಲಿ ಸೋಮನು ತನ್ನನ್ನೇ ಲತಾರೂಪವಾಗಿ ಸೋಮಲತೆಯಾಗಿ ಪ್ರತಿಷ್ಠಾಪಿಸಿದನು.

ಇತ್ಥಂ ಸ ನಿರ್ಮಮೇ ಸರ್ವಾ|ನಿಮಾನ್ ವರುಣಾಖ್ಯ ಏವ ಹಿ |
ಲೋಕೇಶಾಭಿನ್ನ ಅಸ್ತ್ಯೇಷಃ ಸೋಮದೇವೋ ಜಗತ್ಪ್ರಭುಃ || ೨೯ ||

ಹೀಗೆ, ಪರಮಾತ್ಮ, ಪರಮೇಶ್ವರ, ಮಹಾವಿಷ್ಣುವಿಗಿಂತ ಬೇರೆಯಲ್ಲದ ಜಗತ್ಪ್ರಭುವಾದ ವರುಣನಾಮಕ ಸೋಮದೇವನು ಈ ಸಮಗ್ರ ಸೃಷ್ಟಿಯೆಲ್ಲವನ್ನೂ ನಿರ್ಮಿಸಿದನು.

(ತೈ.ಯ.ಸಂ.೩.೪.೧೧.೧೮— ಯಚ್ಛಿದ್ಧಿ ತೇ ವಿಶೋ ಯಥಾ ಪ್ರ ದೇವ ವರುಣ ವ್ರತಮ್ | ಮಿನೀಮಸಿ ದ್ಯವಿದ್ಯವಿ |)

ವರುಣದೇವ ಯತ್-ಕಿಂಚಿತ್|ತ್ವದೀಯಂ ತೇ ವ್ರತಂ ತಥಾ |
ಯಚ್ಚಿದ್ದಿನೇ ದಿನೇ ಕರ್ಮ ಪ್ರಕರ್ಷೇಣ ದ್ಯವಿ ದ್ಯವಿ || ೩೦ ||

ಹೇ ವರುಣದೇವನೆ! ನಾವು ಪ್ರತಿದಿನವೂ ಪ್ರಕೃಷ್ಟವಾಗಿ ಮಾಡುವ ಯಾವ್ಯಾವ ಕ್ರಿಯೆಗಳಿವೆಯೋ ಅವೆಲ್ಲವೂ ನಿನ್ನ ಪೂಜೆ, ವ್ರತ, ಉಪಾಸನೆಗಳೇ ಆಗಿವೆ.

ಮಿನೀಮಸಿ ಹಿ ಯಾಗಾದೀನ್ ತರ್ಕಯಾಮೋ ನಿರನ್ತರಮ್ |
ಯಥಾ ವಿಶಃ ಪ್ರಜಾಸ್ಸರ್ವಾಃ ಸ್ವವ್ಯಾಪಾರಂ ವಹನ್ತಿ ತು || ೩೧ ||

ನಮ್ಮೆಲ್ಲಾ ಕರ್ಮಗಳನ್ನೂ ಯಾಗಾದಿಗಳಲ್ಲಿ ನಿನಗರ್ಪಿಸುವ ಹವಿಸ್ಸೆಂದೇ ಕಲ್ಪಿಸುವೆವು, ಭಾವಿಸುವೆವು. ಹೇಗೆ, ಜನರೆಲ್ಲರೂ ಅವರವರ ದೈನಂದಿನ ವ್ಯವಹಾರಗಳನ್ನಾಚರಿಸುವರೋ ಅಂತೆಯೇ ನಾವು ನಿನ್ನ ಸೇವೆಯನ್ನು ಅನುದಿನವೂ ಅನುಷ್ಠಾನಿಸುತ್ತೇವೆ.

ತದ್ವದಾಚರಮಾಣಾಸ್ತು ವಯಂ ಕರ್ಮ ತ್ವದೀಯಕಮ್ |
ಯಸ್ಮಾತ್ತ್ವಾಂ ಸರ್ವಕಾಲೇಷು ತಸ್ಮಾದ್ಧಿ ತರ್ಕಯಾಮಹೇ || ೩೨ ||

ನಾವಾಚರಿಸುವ ಕರ್ಮಾನುಷ್ಠಾನಗಳೆಲ್ಲವೂ ನಿನ್ನ ಪ್ರೇರಣೆಯಿಂದ, ನಿನ್ನದೇ ಕರ್ಮಗಳೆಂದು ತಿಳಿದು ನಡೆಸುವೆವು. ನೀನು ಸರ್ವಕಾಲಗಳಲ್ಲೂ ನಿರಂತರ ಕ್ರಿಯಾಶೀಲತೆಯಿಂದ ಕೂಡಿರುವುದು ಜೀವರಾದ ನಮ್ಮ ಮೂಲಕವೇ, ನಮ್ಮ ಅಂತರ್ಯಾಮಿಯಾಗಿ ನೀನಿರುವುದರಿಂದಲೇ, ವ್ಯಕ್ತವಾಗಿ ನಮ್ಮ ಕ್ರಿಯೆಗಳ ಮೂಲಕ ಅವ್ಯಕ್ತನಾದ ನಿನ್ನ ಕ್ರಿಯೆಗಳು ಗೋಚರಿಸುವುದೆಂದು ನಾವು ಭಾವಿಸುವೆವು. ಎಲ್ಲವನ್ನೂ ಮಾಡುತ್ತಿರುವವನೂ ನೀನೇ, ಮಾಡಿಸುತ್ತಿರುವವನೂ ನೀನೇ. ನಾವು ನೆಪಮಾತ್ರ, ಕೇವಲ ನಿನ್ನ ಕೈಗಳ ಉಪಕರಣಗಳಂತೆ.

(— ಯತ್ಕಿಂ ಚೇದಂ ವರುಣ ದೈವ್ಯೇ ಜನೇऽಭಿದ್ರೋಹಂ ಮನುಷ್ಯಾಶ್ಚರಾಮಸಿ | ಅಚಿತ್ತೀ ಯತ್ತವ ಧರ್ಮಾ ಯುಯೋಪಿಮ ಮಾ ನಸ್ತಸ್ಮಾದೇನಸೋ ದೇವ ರೀರಿಷಃ |)

ಹೇ ವರುಣ ವಯಂ ದೈವ್ಯೇ ಜನೇ ದ್ಯುಃಸ್ಥೇ ಚ ದೇವಜೇ |
ತದ್ವಿಷಯೇ ತು ಯತ್ಕಿಂಚಿದಭಿತೋ ದ್ರೋಹಮಪ್ಯುತ || ೩೩ ||

ಹೇ ವರುಣದೇವ! ನಾವು ಸ್ವರ್ಗಲೋಕದ ದೇವತೆಗಳಿಗೆ ಯಾವುದಾದರೂ ರೀತಿಯಲ್ಲಿ ದ್ರೋಹವನ್ನೋ, ಅಪಚಾರವನ್ನೋ,

ಅಭಿದ್ರೋಹಂ ಮನುಷ್ಯಾಸ್ತು ಸ್ವಲ್ಪಮಪ್ಯಧಿಕಂ ತಥಾ |
ಅಚಿಂತ್ಯಜ್ಞಾನತೋ-ಅಚಿತ್ತೀ ಚರಾಮಸ್ತು ಚರಾಮಸಿ || ೩೪ ||

ಮನುಷ್ಯರಾದ ನಾವು ಸಣ್ಣ-ದೊಡ್ಡ ತಪ್ಪುಗಳನ್ನೋ ತಿಳಿಯದೇ ಆಚರಿಸಿರುವೆವೋ,

ಯದ್-ಇದಂ ತವ ಧರ್ಮಾ ಚ ಕರ್ಮಾಣಿ ತು ಯುಯೋಪಿಮ |
ವಿನಾಶಯಾಮ ಅಸ್ಮಾನ್ ಮಾ ರೀರಿಷೋ ದೇವ ಹಿನ್ಧಿ ನಃ |
ತಸ್ಮಾತ್ ಪಾಪಾತ್ಪ್ರಮುಂಚ ತ್ವಂ ನೋऽನುಗೃಹಾಣ ಚ-ಏನಸಃ || ೩೫ ||

ನಿನ್ನ ಕರ್ಮಗಳಿಗೆ ತೊಂದರೆಯುಂಟುಮಾಡಿ, ವಿನಾಶಕಾರಣರಾಗಿ ಒಂದೊಮ್ಮೆ ನಾವು ತಿಳಿಯದೇ ವರ್ತಿಸಿದರೂ, ನಮ್ಮನ್ನು ಹೇ ದೇವನೆ!! ಆ ಪಾಪದಿಂದ ವಿಮುಕ್ತರನ್ನಾಗಿಸಿ, ನಮ್ಮ ಮೇಲೆ ದಯೆದೋರಿ ಅನುಗ್ರಹಿಸು ವರುಣದೇವ!!! ಕೃಪೆದೋರು!!! ನಮ್ಮನ್ನು ದಯವಿಟ್ಟು ನೋಯಿಸದಿರು, ಹಿಂಸಿಸದಿರು.

Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪