ಪುರುಷಸೂಕ್ತಭಾಷ್ಯಮ್ ೬
ಪುರುಷಸೂಕ್ತಭಾಷ್ಯಮ್ ೬
ಅಥರ್ವಣವೇದೀಯೇ ಸಾಯಣಭಾಷ್ಯೇ—
"ಸಹಸ್ರಬಾಹುಃ ಪುರುಷಃ" ಇತಿ ಸೂಕ್ತದ್ವಯಂ ಪುರುಷಮೇಧೇ ಕ್ರತೌ ಪುರುಷಪಶು-ಅನುಮನ್ತ್ರಣೇ ವಿನಿಯುಕ್ತಮ್ | "ಪುರುಷಮೇಧೋऽಶ್ವಮೇಧವಚ್ಚೈತ್ರ್ಯಾಃ ಪುರಸ್ತಾತ್" ಇತಿ ಪ್ರಕ್ರಮ್ಯ ವೈತಾನೇ ಸೂತ್ರಿತಮ್ | "ಸ್ನಾತಮ್ ಅಲಂಕೃತಮ್ ಉತ್ಸೃಜ್ಯಮಾನಂ ಸಹಸ್ರಬಾಹುಃ ಪುರುಷಃ (೧೯.೬) ಕೇನ ಪಾರ್ಷ್ಣೀ (೧೦.೨) ಇತಿ ಅನುಮನ್ತ್ರಯತೇ" ಇತಿ (ವೈತಾನಸೂತ್ರಮ್ ೭.೨) ||
" ಸಹಸ್ರಬಾಹುಃ ಪುರುಷಃ" ಎಂಬೆರಡು ಸೂಕ್ತಗಳು ಪುರುಷಮೇಧವೆಂಬ ಕ್ರತುವಿನಲ್ಲಿ (ಯಾಗದಲ್ಲಿ) ಪುರುಷನೆಂಬ ಯಾಗಪಶುವಿನ ಕುರಿತಾಗಿ ಅನುಮಂತ್ರಿಸುವುದರಲ್ಲಿ (ಆಮಂತ್ರಿಸುವುದರಲ್ಲಿ, ಬರುವವನನ್ನು ಅನುಸರಿಸಿ ಮಂತ್ರಿಸುವುದರಲ್ಲಿ) ವಿನಿಯೋಗವಾಗುತ್ತದೆ. ಪುರುಷಮೇಧವು ಅಶ್ವಮೇಧದಂತೆ ಚಿತ್ರಾನಕ್ಷತ್ರಯುಕ್ತ ಪೌರ್ಣಮಿಯಾದ ಚೈತ್ರಮಾಸಾರಂಭದಿನದ ಬಳಿಕ" ಎಂದು ತೊಡಗಿ ವೈತಾನಸೂತ್ರದಲ್ಲಿ ಹೇಳಿದೆ. "ಸ್ನಾನವಾಗಿ ಅಲಂಕೃತನಾಗಿ ಹವಿಸ್ಸಮರ್ಪಣೆಯನ್ನು ಮಾಡುತ್ತಿರುವ ಪುರುಷಪಶುವನ್ನು, "ಸಹಸ್ರಬಾಹುಃ ಪುರುಷಃ", "ಕೇನ ಪಾರ್ಷ್ಣೀ" ಎಂಬ ಮಂತ್ರಗಳಿಂದ ಆಮಂತ್ರಿಸಿ, ಸ್ತುತಿಸುತ್ತಾ ಬರಮಾಡಿಕೊಳ್ಳುತ್ತಾನೆ" ಎಂದು.
ತಥಾ ಏತಸ್ಯ ಸೂಕ್ತದ್ವಯಸ್ಯ ಶನೈಶ್ಚರಗ್ರಹದೇವತ್ಯ-ಹವಿರ್-ಆಜ್ಯಹೋಮೇ ಸಮಿತ್-ಆಧಾನ-ಉಪಸ್ಥಾನಯೋಃ ಚ ವಿನಿಯೋಗಃ | "ಅಥಾಜ್ಯಭಾಗಾನ್ತೇ ವಿಷಾಸಹಿಮ್ ಇತ್ಯಾದಿತ್ಯಾಯ ಹವಿಷೋ ಹುತ್ವಾಜ್ಯಂ ಜುಹುಯಾತ್ ಸಮಿಧ ಆಧಾಯೋಪತಿಷ್ಠತೇ" ಇತಿ ಪ್ರಕ್ರಮ್ಯ ಶಾನ್ತಿಕಲ್ಪೇ (೧೭.೧) ಸೂತ್ರಿತಮ್ | "ಸಹಸ್ರಬಾಹುಃ ಪುರುಷಃ (೧೯.೬) ಕೇನ ಪಾರ್ಷ್ಣೀ (೧೦.೨) ಪ್ರಾಣಾಯ ನಮಃ (೧೧.೪) ಇತಿ ಶನೈಶ್ಚರಾಯ" ಇತಿ (ಶಾ.ಕ.೧೫) |
ಹಾಗೆಯೇ, ಈ ಎರಡು ಸೂಕ್ತಗಳಿಗೆ, ಶನೈಶ್ಚರಗ್ರಹದೇವತೆಯ ಹವಿರ್ ಆಜ್ಯ ಹೋಮದಲ್ಲಿ ಸಮಿತ್ತುಗಳ ಸ್ವೀಕಾರ (ಆಧಾನ, ಪರಿಗ್ರಹ) ಹಾಗೂ ಯಾಗಕುಂಡದ ಹತ್ತಿರ ತಂದಿಡುವಿಕೆಗಳಲ್ಲಿ ವಿನಿಯೋಗ. ಶಾಂತಿಕಲ್ಪದಲ್ಲಿ, "ಬಳಿಕ ಆಜ್ಯಭಾಗಸಮರ್ಪಣೆಯ ಕೊನೆಗೆ ವಿಷಾಸಹಿಮ್ — ಎಂದು ಆದಿತ್ಯನಿಗೆ ಹವಿಸ್ಸನ್ನು ಹೋಮಿಸಿ ಆಜ್ಯ / ತುಪ್ಪವನ್ನು ಸಮರ್ಪಿಸಬೇಕು, ಸಮಿತ್ತನ್ನು ಪಡೆದು ಯಾಗಕುಂಡದ ಬಳಿ ನಿಲ್ಲುತ್ತಾನೆ" ಎಂದು ಮುಂತಾಗಿ ಸೂತ್ರಿತವಾಗಿದೆ. "ಸಹಸ್ರಬಾಹುಃ ಪುರುಷಃ", "ಕೇನ ಪಾರ್ಷ್ಣೀ", "ಪ್ರಾಣಾಯ ನಮಃ" ಎಂದು ಶನೈಶ್ಚರನಿಗೆ " ಎಂಬುದಾಗಿ.
ಸೌವರ್ಣಭೂಮಿದಾನೇ ಅಪಿ ಏತತ್ ಸೂಕ್ತದ್ವಯಮ್ ಆಜ್ಯಹೋಮೇ ವಿನಿಯುಕ್ತಮ್ | "ಅಥ ರೋಹಿಣ್ಯಾಮ್ ಉಪೋಷಿತೋ ಬ್ರಹ್ಮಾ" (ಅಥರ್ವಪರಿಶಿಷ್ಟಮ್ ೧೦.೨) ಇತಿ ಪ್ರಕ್ರಮ್ಯ ಪರಿಶಿಷ್ಟೇ ಅಭಿಹಿತಮ್ | "ಅನ್ವಾರಭ್ಯಾಥ ಜುಹುಯಾತ್ ಕಾಮಸೂಕ್ತಂ ಕಾಲಸೂಕ್ತಂ ಪುರುಷಸೂಕ್ತಮ್ ಇತ್ಯಥ ಸುವರ್ಣಮಯೀಂ ಭೂಮಿಮ್ ಇತ್ಯಾದಿ" (ಅ.ಪ.೧೦.೧) |
ಚಿನ್ನದ ಅಂಶವಿರುವ ಭೂಮಿಯ ದಾನದಲ್ಲಿಯೂ ಈ ಎರಡು ಸೂಕ್ತಗಳು ಆಜ್ಯಹೋಮದಲ್ಲಿ ವಿನಿಯೋಗಿಸಲ್ಪಡುತ್ತವೆ. "ಬಳಿಕ ರೋಹಿಣೀನಕ್ಷತ್ರದಂದು ಉಪವಾಸ ಮಾಡಿದ ಯಾಗದ ಬ್ರಹ್ಮಸ್ಥಾನೀಯನು" ಎಂದು ಮುಂತಾಗಿ ಅಥರ್ವಪರಿಶಿಷ್ಟದಲ್ಲಿ ಹೇಳಿದೆ. "ಬಳಿಕ ಹಿಂದಿನಿಂದಲೇ ತೊಡಗಿ (ಅನುಕ್ರಮವಾಗಿ) ಸಮರ್ಪಿಸಬೇಕು (ದಾನಮಾಡಬೇಕು) ಕಾಮಸೂಕ್ತ, ಕಾಲಸೂಕ್ತ, ಪುರುಷಸೂಕ್ತಗಳ ಮೂಲಕ ಸುವರ್ಣಮಯಿಯಾದ ಭೂಮಿಯನ್ನು ಮುಂತಾಗಿ".
ಸರ್ವಾತಿಶಾಯಿತ್ವ-ಸರ್ವಭೂತಾತ್ಮಕತ್ವ-ಕಾಮೇನ ನಾರಾಯಣಾಖ್ಯೇನ ಪುರುಷೇಣ ಅನುಷ್ಠಿತಸ್ಯ ಪುರುಷಮೇಧಕ್ರತೋಃ ಪ್ರತಿಪಾದಕತ್ವಾತ್ ಜಗತ್ಕಾರಣಸ್ಯ ಆದಿನಾರಾಯಣಪುರುಷಸ್ಯ ಪ್ರತಿಪಾದಕತ್ವಾದ್ ವಾ ಏತತ್ ಪುರುಷಸೂಕ್ತಮ್ ಇತಿ ಉಚ್ಯತೇ | ಅತಃ, ಅಸ್ಯ ಸೂಕ್ತಸ್ಯ ದ್ವಿವಿಧೋ ಅರ್ಥಃ ಆಧಿಯಜ್ಞಿಕಃ-ಏಕಃ, ಆಧ್ಯಾತ್ಮಿಕೋ ಅಪರಃ | ಪುರುಷಮೇಧವಿಧಾಯಕಂ ವಾಜಸನೇಯಕಬ್ರಾಹ್ಮಣಮ್ ಏವಮ್ ಆಮ್ನಾಯತೇ | "ಪುರುಷೋ ಹ ವೈ ನಾರಾಯಣೋಕಾಮಯತ | ಅತಿತಿಷ್ಠೇಯಂ ಸರ್ವಾಣಿ ಭೂತಾನಿ ಅಹಮೇವೇದಂ ಸರ್ವಂ ಸ್ಯಾಮ್ ಇತಿ | ಸ ಏತಂ ಪುರುಷಮೇಧಂ ಪಞ್ಚರಾತ್ರಂ ಯಜ್ಞಕ್ರತುಮ್ ಅಪಶ್ಯತ್ | ತಮ್ ಆಹರತ್ | ತೇನ ಅಯಜತ | ತೇನೇಷ್ಟ್ವಾತ್ಯತಿಷ್ಠತ್ ಸರ್ವಾಣಿ ಭೂತಾನಿ | ಇದಂ ಸರ್ವಮ್ ಅಭವತ್" ಇತಿ (ಶತಪಥಬ್ರಾಹ್ಮಣಮ್ ೧೩.೬.೧.೧) |
ಎಲ್ಲರಿಗಿಂತ ಅತಿಶಯವಾಗಿರುವಿಕೆ (ಹೆಚ್ಚುತನ, ಮೇಲಾಗಿರುವಿಕೆ), ಎಲ್ಲರೊಳಗೊಂದಾಗಿರುವಿಕೆ— ಈ ಕಾಮನೆಯಿಂದ ನಾರಾಯಣನೆಂಬ ಪುರುಷನಿಂದ ಅನುಷ್ಠಿತವಾದ ಪುರುಷಮೇಧವೆಂಬ ಕ್ರತು (ಯಾಗ)ದ ಪ್ರತಿಪಾದಕತ್ವದಿಂದಾಗಿ ಅಥವಾ, ಜಗತ್ಕಾರಣನಾದ ಆದಿನಾರಾಯಣಪುರುಷನ ಪ್ರತಿಪಾದಕತ್ವದಿಂದಾಗಿ ಇದು ಪುರುಷಸೂಕ್ತವನ್ನಲ್ಪಡುತ್ತದೆ. ಹೀಗಾಗಿ, ಈ ಸೂಕ್ತಕ್ಕೆ ೨ ವಿಧವಾದ ಅರ್ಥವಿದೆ— ಒಂದು ಆಧಿಯಜ್ಞಿಕ (ಅಧಿಯಜ್ಞಕ್ಕೆ ಸಂಬಂಧಿಸಿದ್ದು), ಇನ್ನೊಂದು ಆಧ್ಯಾತ್ಮಿಕ (ಅಧಿ-ಆತ್ಮ / ಅಧ್ಯಾತ್ಮಕ್ಕೆ ಸಂಬಂಧಿಸಿದ್ದು). ಪುರುಷಮೇಧದ ವಿಧಿಯನ್ನು ಹೇಳುವ (ವಿಧಾಯಕವಾದ) ಶುಕ್ಲಯಜುರ್ವೇದದ ವಾಜಸನೇಯಸಂಹಿತೆಯ ಬ್ರಾಹ್ಮಣವು (ಶತಪಥಬ್ರಾಹ್ಮಣವು) ಹೀಗೆ ಹೇಳುತ್ತದೆ— "ಪುರುಷನೇ ಆದ ನಾರಾಯಣನು ಬಯಸಿದನು. ಸಕಲ ಚರಾಚರಗಳನ್ನು ಮೀರಿ ನಿಲ್ಲುವೆನು, ನಾನೇ ಇದೆಲ್ಲವೂ ಆಗುವೆನು ಎಂಬುದಾಗಿ. ಆತನು ಈ ಪುರುಷಮೇಧವನ್ನು ೫ ರಾತ್ರಿಗಳ (ಪಾಂಚರಾತ್ರ) ಯಜ್ಞಕ್ರತುವಾಗಿ ಕಂಡನು. ಅದನ್ನು ಸ್ವೀಕರಿಸಿದನು. ಅದರಿಂದ ಯಜನಗೈದನು. ಅದನ್ನು (ಆ ಇಷ್ಟಿಯನ್ನು) ಆಚರಿಸಿ ಸರ್ವ ಭೂತಗಳನ್ನೂ (ಚರಾಚರಗಳನ್ನೂ) ಮೀರಿದವನಾದನು. ಇದೆಲ್ಲವೂ (ಅವನೇ) ಆದನು" ಎಂಬುದಾಗಿ.
ಸಹಸ್ರಬಾಹುಃ ಪುರುಷಃ
ಸಹಸ್ರಾಕ್ಷಃ ಸಹಸ್ರಪಾತ್ |
ಸ ಭೂಮಿಂ ವಿಶ್ವತೋ ವೃತ್ವಾ
-ತ್ಯತಿಷ್ಠದ್ ದಶಾಙ್ಗುಲಮ್ || ೧ ||
ಪುರುಷಸಂಜ್ಞಾಪೇಕ್ಷಿತ-ಆವರಣ-ಸ್ಥಾನೀಯೋ ದೇಹವಿಶೇಷೋ ಯಜ್ಞ-ಅನುಷ್ಠಾತುಃ ನಾರಾಯಣಪುರುಷಸ್ಯ ರೂಪ್ಯತೇ | ಯಥಾ ಪರೋಕ್ಷಸ್ಯ ಅಗ್ನೇಃ ಪ್ರತ್ಯಕ್ಷೈಃ ಅಗ್ನಿಭಿಃ ಸ್ತವಃ, ತದ್ವತ್ ಪರೋಕ್ಷಸ್ಯ ಆದಿಪುರುಷಸ್ಯ ಲೌಕಿಕೈಃ ಸಹಸ್ರಬಾಹುತ್ವಂ ಬಹು-ಅಕ್ಷಿ-ಪಾದತ್ವಂ ಚ ಉಚ್ಯತೇ |
ಪುರುಷನೆಂಬ ಸಂಜ್ಞೆಯನ್ನು ಅಪೇಕ್ಷಿಸುವ ಆವರಣ (ಸ್ಥಾನ) ದಲ್ಲಿರುವ ದೇಹವಿಶೇಷವು ಯಜ್ಞಾನುಷ್ಠಾನಗೈವ ನಾರಾಯಣಪುರುಷನ ರೂಪವನ್ನು ರೂಪಿಸುತ್ತದೆ. ಹೇಗೆ ಪರೋಕ್ಷವಾದ (ಪ್ರತ್ಯಕ್ಷವಲ್ಲದ ಸ್ವರ್ಗದಲ್ಲಿನ) ಅಗ್ನಿದೇವನಿಗೆ ಪ್ರತ್ಯಕ್ಷಗೋಚರವಾದ (ಭೂಮಿಯಲ್ಲಿನ) ಯಜ್ಞಾಗ್ನಿಗಳಿಂದ ಸ್ತುತಿಮಾಡಲ್ಪಡುವುದೋ, ಅಂತೆಯೇ ಪರೋಕ್ಷ (ಅಪ್ರತ್ಯಕ್ಷ)ನಾದ ಆದಿಪುರುಷನಿಗೆ ಲೌಕಿಕರಿಂದ (ಲೋಕದಲ್ಲಿ ಸಕಲ ಚರಾಚರರೂಪದಲ್ಲಿ ಪ್ರತ್ಯಕ್ಷಗೋಚರವಾದ) ಸಾವಿರಾರು (ಅನಂತ) ಬಾಹುಗಳೂ, ಬಹುಸಂಖ್ಯೆಯ ಕಣ್ಣು-ಪಾದಗಳೂ ಇರುವುದನ್ನು ಹೇಳಿದೆ.
ಸಹಸ್ರಬಾಹುಃ— ಸಹಸ್ರಶಬ್ದಸ್ಯ ಉಪಲಕ್ಷಣತ್ವಾತ್ ಅನನ್ತೈಃ ಬಹುಭಿಃ ಯುಕ್ತಃ ಸಹಸ್ರಾಕ್ಷಃ— ಬಹುಭಿಃ ಅಕ್ಷಿಭಿಃ ಉಪೇತಃ |....| …..| ಸಹಸ್ರಪಾತ್— ಅನೇಕಚರಣಃ | "ಸಂಖ್ಯಾಸುಪೂರ್ವಸ್ಯ" (ಪಾಣಿನೀಯಸೂತ್ರೇ ೫.೪.೧೪೦) ಇತಿ ಪಾದಸ್ಯ ಲೋಪಃ ಸಮಾಸಾನ್ತಃ | ಏವಂ-ರೂಪೋ ಯಃ ಪುರುಷಃ ಯಜ್ಞಾನುಷ್ಠಾತಾ ನಾರಾಯಣಾಖ್ಯಃ ಪುರುಷೋ ವರ್ತತೇ, ಸ ಪುರುಷಃ ಭೂಮಿಂ ಸಪ್ತಸಮುದ್ರದ್ವೀಪಾಂ ವಿಶ್ವತಃ ಸರ್ವತೋ ವೃತ್ವಾ ಮಹಿಮ್ನಾ ವ್ಯಾಪ್ಯ ದಶಾಙ್ಗುಲಂ ದಶಾಙ್ಗುಲಿಪ್ರಮಾಣಂ ಯಸ್ಯ ಇತಿ |.....| ….| ಅತ್ರ ದಶಾಙ್ಗುಲಶಬ್ದೇನ ಹೃದಯಾಕಾಶಮ್ ಉಚ್ಯತೇ | ತದ್ ಅತ್ಯತಿಷ್ಠತ್ | ಪೂರ್ವಂ ಹೃದಯಾಕಾಶೇ ಪರಿಚ್ಛಿನ್ನಸ್ವರೂಪಃ ಸನ್ ಸ್ವ-ಅನುಷ್ಠಿತ-ಕ್ರತು-ಸಾಮರ್ಥ್ಯಾತ್ ಪರಿಚ್ಛಿನ್ನಾಕಾರತಾಂ ಪರಿತ್ಯಜ್ಯ, ಸರ್ವಾತಿಶಾಯಿಸ್ವರೂಪೋ ಅಭವತ್, ಇತ್ಯರ್ಥಃ |
ಸಹಸ್ರಬಾಹುಃ— ಸಹಸ್ರಶಬ್ದದ ಉಪಲಕ್ಷಣತ್ವ (ಧ್ವನಿ, ಭಾವ, ಇತರ ಅರ್ಥಗಳು) ದಿಂದಾಗಿ, ಅನಂತವಾಗಿ ಬಹುಸಂಖ್ಯೆಯ ಬಾಹುಗಳಿಂದ ಯುಕ್ತನಾದ (ಕೂಡಿದ), ಸಹಸ್ರಾಕ್ಷಃ— ಬಹಳಷ್ಟು ಕಣ್ಣುಗಳಿಂದ ಉಪೇತನಾದ (ಕೂಡಿದ),.....ಸಹಸ್ರಪಾತ್— ಅನೇಕಚರಣಯುಕ್ತನಾದ. "ಹಿಂದೆ ಸಂಖ್ಯೆಗಳಿದ್ದಲ್ಲಿ" ಎಂಬ ಪಾಣಿನೀಯಸೂತ್ರದಂತೆ ಸಮಾಸಾಂತದಲ್ಲಿ (ಸಮಾಸದ ಕೊನೆಗೆ) "ಪಾದ" ಎಂಬುದಕ್ಕೆ ಲೋಪವಾಗಿ "ಪಾತ್ " ಎಂದಾಯಿತು. ಇಂತಹ ರೂಪದ ಯಾವ ಪುರುಷಃ— ಯಜ್ಞಾನುಷ್ಠಾತೃವಾದ ನಾರಾಯಣನೆಂಬ ಪುರುಷನಿರುವನೋ, ಸ— ಆ ಪುರುಷನು, ಭೂಮಿಂ— ಸಪ್ತಸಮುದ್ರಯುತವಾದ ದ್ವೀಪವನ್ನು, ವಿಶ್ವತಃ— ಎಲ್ಲೆಡೆಯಿಂದ, ವೃತ್ವಾ— ತನ್ನ ಮಹಿಮೆಯಿಂದ ವ್ಯಾಪಿಸಿ, ದಶಾಙ್ಗುಲಂ— ಹತ್ತು ಬೆರಳುಗಳ ಪ್ರಮಾಣವು ಯಾವನದೋ ಅವನು ಎಂಬುದಾಗಿ…..ಇಲ್ಲಿ ದವಾಂಗುಲಶಬ್ದದಿಂದ ಹೃದಯಾಕಾಶವು ಹೇಳಲ್ಪಡುತ್ತದೆ. ಅದನ್ನು ಅತ್ಯತಿಷ್ಠತ್— ಮೊದಲು ಜೀವರ ಹೃದಯಾಕಾಶದಲ್ಲಿ ಪ್ರತ್ಯೇಕಸ್ವರೂಪನಾಗಿ, ತಾನು ಅನುಷ್ಠಾನಿಸಿದ ಯಾಗದ ಬಲದಿಂದಾಗಿ ವ್ಯಷ್ಟಿರೂಪವನ್ನು ತೊರೆದು, ಸರ್ವಾತಿಶಯವಾದ (ಎಲ್ಲಕ್ಕಿಂತಲೂ ಮಿಗಿಲಾದ) ಸಮಷ್ಟಿರೂಪವನ್ನು (ಸರ್ವವ್ಯಾಪಕತ್ವವನ್ನೂ, ಸರ್ವಾತರ್ಯಾಮಿತ್ವವನ್ನೂ) ಹೊಂದಿದವನಾದನು ಎಂದರ್ಥ.
ಆಧ್ಯಾತ್ಮಪಕ್ಷೇ— ಸರ್ವಪ್ರಾಣಿ-ಸಮಷ್ಟಿರೂಪಃ ಸೂತ್ರಾತ್ಮಾ ಪ್ರತಿಪಾದ್ಯತೇ | ಸಹಸ್ರಬಾಹುಃ ಯೇ ವ್ಯಷ್ಟಿಭೂತ-ಸರ್ವಪ್ರಾಣಿನಾಂ ಬಾಹವಃ ತೇ ಸರ್ವೇ ಸೂತ್ರಾತ್ಮದೇಹಾನ್ತಃಪಾತಿತ್ವಾತ್ ತದೀಯಾಃ, ಏವ, ಇತಿ ಸಹಸ್ರಬಾಹುತ್ವಮ್ | ಏವಮ್ ಅಕ್ಷಿಷು ಪಾದೇಷ್ವಪಿ ಯೋಜನೀಯಮ್ |
ಅಧ್ಯಾತ್ಮಪರವಾಗಿ (ಆಧ್ಯಾತ್ಮಿಕಾರ್ಥ)— ಎಲ್ಲಪ್ರಾಣಿಗಳ ಸಮಷ್ಟಿರೂಪನಾಗಿ, ಮಣಿಗಳನ್ನು ಸೂತ್ರ (ದಾರ) ದಲ್ಲಿ ಪೋಣಿಸಿ ಹಾರವನ್ನು ಮಾಡಿದಂತೆಯೇ (ಸೂತ್ರವು ಹಾರಕ್ಕೆ ಮೂಲಾಧಾರಶಕ್ತಿಯಾದಂತೆಯೇ), ಸಕಲ ಜೀವರನ್ನು ಪೋಣಿಸಿದ ಸೂತ್ರಾತ್ಮನೆಂದು (ಸಕಲ ಜೀವರ ಮೂಲಾಧಾರನೆಂದು) ಪ್ರತಿಪಾದಿಸಲಾಗಿದೆ. ಸಹಸ್ರಬಾಹುಃ— ಪ್ರತ್ಯೇಕವಾದ ಎಲ್ಲ ಪ್ರಾಣವಂತರ ಯಾವ ಬಾಹು (ತೋಳು) ಗಳಿವೆಯೋ ಅವೆಲ್ಲವೂ— ಸೂತ್ರಾತ್ಮನಾಗಿ ಪುರುಷನು ಎಲ್ಲರೊಳಗಿರುವುದರಿಂದಾಗಿ— ಅವನವೇ (ಪುರುಷನವೇ) ಬಾಹುಗಳು ಎಂಬುದರಿಂದಾಗಿ ಸಹಸ್ರಬಾಹುತ್ವವು (ಸಿದ್ಧಿಸುತ್ತದೆ). ಹೀಗೆಯೇ ಕಣ್ಣುಗಳಲ್ಲೂ, ಪಾದಗಳಲ್ಲೂ ಅರ್ಥೈಸಬೇಕು.
ಯದ್ವಾ, ಸರ್ವತ್ರ-ಬಾಹ್ವಾದಿಸಾಧ್ಯ-ಬಹುಕಾರ್ಯ-ಸಂಭವಾತ್ ತೇಷಾಂ ಸಹಸ್ರತ್ವ-ವ್ಯಪದೇಶಃ | ಅತ ಏವ ಇಮಮ್ ಅರ್ಥಮ್ ಅಭಿಪ್ರೇತ್ಯ ಅನ್ಯತ್ರ ಆಮ್ನಾಯತೇ | "ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್" ಇತಿ (ಋಗ್ವೇದಸಂಹಿತಾ ೧೦.೮.೧.೩) | ಪುರುಷಃ ಪುರಿ ದೇಹೇ ಶೇತೇ-ಇತಿ | ಪೃಷೋದರಾದಿಃ |
ಅಥವಾ— ಎಲ್ಲೆಡೆಯಲ್ಲಿಯೂ ಬಾಹು-ಅಕ್ಷಿ-ಪಾದಾದಿಗಳಿಂದ ಬಹಳಷ್ಟು ಕಾರ್ಯಗಳ ಸಂಭವನೀಯತೆ (ಸಾಧ್ಯತೆ) ಇರುವುದರಿಂದ, ಅಷ್ಟನ್ನೂ ಮಾಡಬಲ್ಲವನೆಂಬ ಕ್ರಿಯಾತ್ಮಕತೆಯ ಬಾಹುಳ್ಯದ ಸಾಮರ್ಥ್ಯದಿಂದ (ಕೇವಲ ರಚನಾತ್ಮಕ / ರೂಪಾತ್ಮಕವಾಗಿರದೆ) ಸಹಸ್ರತ್ವವು ನಿರ್ದೇಶಿತವಾಗಿದೆ. ಹೀಗಾಗಿಯೇ, ಈ ಅರ್ಥವನ್ನು ಅಭಿಪ್ರಾಯಿಸಿ ಬೇರೆಡೆ ಹೇಳಲಾಗಿದೆ— "ವಿಶ್ವದೆಲ್ಲೆಡೆ ಕಣ್ಣು ವಿಶ್ವದೆಲ್ಲೆಡೆ ಬಾಯಿ ವಿಶ್ವದೆಲ್ಲೆಡೆ ತೋಳು ವಿಶ್ವಪಾದ" ಎಂಬುದಾಗಿ (ಋಗ್ವೇದಸಂಹಿತೆ). ಪುರುಷಃ— ನವದ್ವಾರಗಳ ಪುರವೆನಿಸಿದ ದೇಹದಲ್ಲಿ ಶಯನಿಸಿದ್ದಾನೆ ಎಂಬುದರಿಂದಾಗಿ. ಹಾಗೆಯೇ, ಪೃಷೋದರಾದಿ ಹವಿಸ್ಸುಗಳಿಂದ ಕೂಡಿದ ಯಜ್ಞಸ್ವರೂಪನು, ಯಜ್ಞಪ್ರಿಯನು ಎಂಬುದರಿಂದಾಗಿ. ಪೃಷದುದರನೆಂದರೆ ವಿಶಾಲವಾದ ಉದರ— ಬ್ರಹ್ಮಾಂಡೋದರತ್ವದಿಂದಾಗಿ. ಪೃಷೋದರವೆಂಬುದು ಹವಿಷ್ಯ ಅನ್ನವಾದ್ದರಿಂದ, ಅನ್ನಬ್ರಹ್ಮಸ್ವರೂಪಿ. ಜಗತ್ತೇ ಅನ್ನಮಯ. ಹೀಗಾಗಿ ವಿಶ್ವರೂಪಿ ಅನ್ನಬ್ರಹ್ಮ ವಿರಾಡ್ರೂಪ.
ಸರ್ವಪ್ರಾಣಿ-ದೇಹ-ಅವಸ್ಥಿತಃ ಪೂರ್ಣೋ ವಾ ಸಹಸ್ರಾಕ್ಷಃ ಸಹಸ್ರಪಾತ್ | ಏವಂರೂಪೋ ಯೋ ವರ್ತತೇ ಸ ಪುರುಷಃ ಭೂಮಿಮ್ | ಉಪಲಕ್ಷಣಮ್ ಏತತ್ ಅಪ್-ಆದೀನಾಂ ಭೂತಾನಾಮ್ | ಸಕಲಭೂತಕಾರ್ಯಬ್ರಹ್ಮಾಣ್ಡಂ ತದನ್ತರ್ಗತಾನ್ ಭೂಮ್ಯಾದೀನ್ ವಿಕಾರಾನ್ ವಾ ವಿಶ್ವತಃ ಸರ್ವತೋ ವೃತ್ವಾ ಮೃದಿವ ಘಟಾದೀನ್ ವ್ಯಾಪ್ಯ ದಶಾಙ್ಗುಲಂ ದಶಾಙ್ಗುಲಪ್ರಮಾಣಂ ದೇಶಮ್ ಅತ್ಯತಿಷ್ಠತ್ ಅತಿಕ್ರಮ್ಯ ಅವಸ್ಥಿತಃ | ದಶಾಙ್ಗುಲಮ್ ಇತಿ ಉಪಲಕ್ಷಣಮ್ | ಬ್ರಹ್ಮಾಣ್ಡಾದ್ ಬಹಿರಪಿ ಸರ್ವತೋ ವ್ಯಾಪ್ಯ ಅವಸ್ಥಿತಃ | ಏಕೇನ ಅಂಶೇನ ಬ್ರಹ್ಮಾಣ್ಡಂ ವ್ಯಾಪ್ಯ ದಶಭಿಃ ಅಂಶೈಃ ಕಾರ್ಯಪ್ರಪಞ್ಚ-ಅಸಂಸ್ಪೃಷ್ಟಃ ಸ್ವಪ್ರತಿಷ್ಠೋ ವರ್ತತೇ-ಇತ್ಯರ್ಥಃ || ೧ ||
ಎಲ್ಲ ಪ್ರಾಣವಂತರ ದೇಹದೊಳಗಿರುವ ಅತವಾ ದೇಹದಲ್ಲೆಲ್ಲಾ ವ್ಯಾಪಿಸಿ ಅದನ್ನು ಪೂರ್ಣಮಾಡಿದ (ತುಂಬಿದ, ಸಚೇತನಗೊಳಿಸಿದ) ಸಹಸ್ರಾಕ್ಷಃ ಸಹಸ್ರಪಾತ್. ಈ ರೂಪದವನಾಗಿ ಯಾವನಿರುವನೋ ಸಃ— ಅಂತಹ ಪುರುಷನು ಭೂಮಿಮ್— ಜಲಾದಿ ಪಂಚಭೂತಗಳ ಉಪಲಕ್ಷಣವಿದು. ಸಕಲ ಭೂತಗಳ (ಪೃಥ್ವಿ-ಅಪ್-ತೇಜ-ವಾಯು-ಆಕಾಶಗಳೆಂಬ ಪಂಚಮಹಾಭೂತಗಳ) ಕಾರ್ಯವಾದ ಈ ಬ್ರಹ್ಮಾಂಡವನ್ನು ಅಥವಾ ಅದರೊಳಗಿನ ಭೂಮಿಯೇ ಮೊದಲಾದ ಆಕಾರ (ವಿಕಾರ)ಗಳನ್ನು ವಿಶ್ವತಃ— ಎಲ್ಲೆಡೆಯಿಂದ ವೃತ್ವಾ— ಮಡಕೆಯನ್ನು ಮಣ್ಣು ವ್ಯಾಪಿಸಿದಂತೆಯೇ ಸರ್ವಮೂಲವಸ್ತುವಾಗಿ ವ್ಯಾಪಿಸಿ, ದಶಾಙ್ಗುಲಂ— ಹತ್ತಂಗುಲ ಪ್ರಮಾಣದ (ಅಳತೆಯ) ಪ್ರದೇಶವನ್ನು, ಅತ್ಯತಿಷ್ಠತ್— ಅತಿಕ್ರಮಿಸಿ (ಮೀರಿ) ನೆಲೆಸಿರುವನು. ದಶಾಂಗುಲವೆಂಬುದೂ ಉಪಲಕ್ಷಣ. ಬ್ರಹ್ಮಾಂಡದ ಹೊರಗೂ ಎಲ್ಲೆಡೆಯಿಂದ ವ್ಯಾಪಿಸಿರುವನು. (ಕೇವಲ ತನ್ನ) ಒಂದಂಶದಿಂದ ಬ್ರಹ್ಮಾಂಡವನ್ನು ವ್ಯಾಪಿಸಿ, ಹತ್ತು ಅಂಶಗಳಿಂದ (ಭಾಗಗಳಿಂದ ಈ) ಕಾರ್ಯಪ್ರಪಂಚವನ್ನು ಸ್ಪರ್ಶಿಸದವನಾಗಿ ತನ್ನದಾದ ಕಾರಣಪ್ರಪಂಚದಲ್ಲೇ ಪ್ರತಿಷ್ಠಿತನಾಗಿರುವನು ಎಂದರ್ಥ.
ರಾಮಭದ್ರಾಚಾರ್ಯಭಾಷ್ಯದಿಂದ—
ಪುರುಷಃ— ಬ್ರಹ್ಮಾಂಡೇ ಪಿಂಡಾಂಡೇ ಚ ಬ್ರಹ್ಮಪುರೇ ಗೂಢಃ, ಅವತಿಷ್ಠಮಾನಃ, ಆದಿನಾರಾಯಣಃ, ಭಗವಾನ್ ವಾಸುದೇವಃ,
ಸಹಸ್ರಶೀರ್ಷಾ— ಅನಂತಶಿರಾಃ,
ಸಹಸ್ರಾಕ್ಷಃ— ಅನಂತ-ಅನಂತ-ನಯನಃ,
ಸಹಸ್ರಪಾತ್— ಅನಂತ-ಅಸಂಖ್ಯ-ಪಾದಃ ಚ ಸನ್, ವಿಜೃಂಭಮಾಣಃ,
ಸಃ— ತಾದೃಶಃ ಪುರುಷಭೂತಃ, ಭಗವಾನ್ ನಾರಾಯಣಃ,
ಭೂಮಿಮ್— ವಿವಿಧ-ವಿಚಿತ್ರ-ಕಾರ್ಯಜಾತಸ್ಯ ಭವನಂ ಪ್ರತಿ-ಆಧಾರಂ ತಾಂ ಪ್ರಕೃತಿಮ್, ತತ್ಕಾರ್ಯವರ್ಗಮ್ ಅಪಿ ಚ,
ವಿಶ್ವತಃ— ಅಂತರ್ಬಾಹ್ಯ-ಅವಿಭಾಗೇನ ಸರ್ವಾಂಶತಃ,
ವೃತ್ವಾ— ಆತ್ಮನಾ ವೃತಾಂ ಕೃತ್ವಾ, (ತಾವತಿ ಏವ ಅವಿಶ್ರಮ್ಯ),
ದಶಾಂಗುಲಮ್— ಅನಂತ-ಯೋಜನ-ಪರಿಮಿತಂ ಚತುರ್ದಶ-ಭುವನಜಾತಮ್ ಅಪಿ,
ಅತಿ— (ಸ್ವರೂಪೇಣ ಸ್ವಗುಣೈಃ ಚ) ಅತಿಕ್ರಮ್ಯ, (ಪರೇ ವ್ಯೋಮನಿ),
ಅತಿಷ್ಠತ್— ಅನ್ಯವಿಲಕ್ಷಣಃ ಅಭವತ್ (ಅವತಿಷ್ಠತೇ) |
ಹೊರಗೆ ಕಾಣುವ ಸಮಸ್ತ ಬ್ರಹ್ಮಾಂಡದಲ್ಲಿಯೂ, ಎಲ್ಲ ಜೀವಿಗಳ ಶರೀರಗಳಾದ ಪಿಂಡಾಂಡಗಳಲ್ಲಿಯೂ, ಬ್ರಹ್ಮಪುರ (ಪರಮಾತ್ಮನ ಪಟ್ಟಣ, ನಿವಾಸಸ್ಥಾನ) ವೆಂಬ ಹೃದಯಗುಹೆಯಲ್ಲೂ (ಹೃದಯಾಕಾಶದಲ್ಲೂ), ಅತ್ಯಂತ ನಿಗೂಢವಾಗಿ (ಗುಪ್ತವಾಗಿ, ಅವ್ಯಕ್ತವಾಗಿ, ಇಂದ್ರಿಯಗೋಚರನಾಗದಂತೆ) ವಾಸವಾಗಿರುವ ಆದಿನಾರಾಯಣ ಭಗವಾನ್ ವಾಸುದೇವನು, ಅಂತ್ಯವಿಲ್ಲದಷ್ಟು ತಲೆಗಳು, ಕಣ್ಣುಗಳು ಹಾಗೂ ಪಾದಗಳಿಂದ ಕೂಡಿ ವಿಜೃಂಭಿಸುತ್ತಿರುವವನಾಗಿ, ಅಂತಹ ಪರಮಪುರುಷನಾದ ಶ್ರೀಮನ್ನಾರಾಯಣನು, ನಾನಾ ವಿಧವಾದ ಚಿತ್ರ-ವಿಚಿತ್ರವಾದ ಕಾರ್ಯಗಳಿಂದ ಕೂಡಿದ ಈ ಸಮಗ್ರ ಅಸ್ತಿತ್ವಕ್ಕೆ ಆಧಾರವಾದ ಆ ಪ್ರಕೃತಿಯನ್ನೂ ಅದರ ಸಮಸ್ತ ಅಂಗೋಪಾಂಗಗಳನ್ನೂ ಸಹ ಒಳ-ಹೊರಗೆಂಬ ಭೇದವಿಲ್ಲದೆ ಎಲ್ಲೆಡೆಯಿಂದಲೂ ತಾನೇ ಆವರಿಸಿಕೊಂಡು (ವ್ಯಾಪಿಸಿ, ಹರಡಿ, ಹಬ್ಬಿ, ಸುತ್ತುವರಿದು, ಅಷ್ಟಕ್ಕೇ ಸುಮ್ಮನಾಗದೆ), ಅನಂತಯೋಜನಗಳ ಪರಿಮಾಣದ (ವ್ಯಾಪ್ತಿಯ) ಹದಿನಾಲ್ಕುಲೋಕಗಳನ್ನೂ ತನ್ನ ರೂಪ-ಗುಣ-ಕಾರ್ಯಾದಿಗಳಿಂದ ಅತಿಕ್ರಮಿಸಿ (ಆಕ್ರಮಿಸಿ, ವ್ಯಾಪಿಸಿ), ಪರಮಾಕಾಶದಲ್ಲಿ (ವೈಕುಂಠದಲ್ಲಿ, ಪರಮಧಾಮದಲ್ಲಿ, ಮೋಕ್ಷಸ್ಥಾನದಲ್ಲಿ), ಸೃಷ್ಟಿಯಲ್ಲಿನ ಎಲ್ಲಕ್ಕಿಂತಲೂ ವಿಭಿನ್ನಲಕ್ಷಣವುಳ್ಳವನಾಗಿ ನೆಲೆಸಿರುವನು.
ಸಾ.ಕೃ.ರಾಮಚಂದ್ರ ರಾಯರ ಭಾಷ್ಯದಿಂದ—
ಸಹಸ್ರಶೀರ್ಷಾ ಪುರುಷಸ್ಸಹಸ್ರಾಕ್ಷಸ್ಸಹಸ್ರಪಾತ್ |
ಸಹಸ್ರ ಎಂಬುದಕ್ಕೆ ಇಲ್ಲಿ ಅಸಂಖ್ಯಾತ, ಹಲವಾರು ಎಂದರ್ಥ. "ಸಹಸ್ರಾಯತ್ವೇತಿ ಸರ್ವಂ ವೈ ಸಹಸ್ರಂ ಸರ್ವಮ್ ಅಸಿ" (ಶತಪಥಬ್ರಾಹ್ಮಣ ೮.೭.೪.೧೧)— ಇದರ ಪ್ರಕಾರ ಸರ್ವ, ಸಂಪೂರ್ಣವಾಗಿ ಎಂದರ್ಥ. ಗೂಢಾರ್ಥದಲ್ಲಿ ಸಕಲ ಜೀವರ ದೇಹದ ಭಾಗಗಳೆಲ್ಲವೂ ಪುರುಷನ ಶರೀರ (ಆಕಾರ)ದಲ್ಲಿ ಒಳಗೊಂಡಿವೆ.
ಋಗ್ವೇದದಲ್ಲಿ 'ಸಹಸ್ರ' ಪದವನ್ನು 'ಅಸಂಖ್ಯಾತ ' ಎಂಬರ್ಥದಲ್ಲಿ ಬಳಸಿದ ಕೆಲವು ದೃಷ್ಟಾಂತಗಳು—
೧) ಸಹಸ್ರ-ಶೃಂಗ-ವೃಷಭ (ಸಾವಿರ ಕೊಂಬುಳ್ಳ ಎತ್ತು) (೭.೫೫.೭)
೨) ಸಹಸ್ರಧಾರ (ಸಾವಿರ ನದಿಗಳು) ೯.೧೦೧.೬)
೩) ಸಹಸ್ರಧಾ ಮಹಿಮಾನಃ (ಸಾವಿರಪಟ್ಟು ಭವ್ಯತೆ) (೧೦.೧೧೪.೮)
೪) ಸಹಸ್ರ-ದಾನ (ಸಾವಿರ ಉಡುಗೊರೆಗಳು) (೯.೫೮.೪)
೫) ಸಹಸ್ರ-ರಾತಯಃ (ಸಾವಿರದಷ್ಟು ಧನಸಂಪತ್ತಿನ ನಿಧಿ) (೧.೧೧.೮)
೬) ಸಹಸ್ರ-ಅಯುತಾ ದಾತಾ (ಸಾವಿರ, ಹತ್ತುಸಾವಿರಾರು ದಯಪಾಲಿಸುವವನು)
೭) ಸಹಸ್ರ-ಚೇತಃ (ಸಾವಿರಾರು ಆತ್ಮಗಳು)
ಇತ್ಯಾದಿ.
ಶುಕ್ಲಯಜುರ್ವೇದದ ವಾಜಸನೇಯ ಸಂಹಿತೆ (೧೭.೭.೧)ಯಲ್ಲಿ, ಅಗ್ನಿಯು ಸಾವಿರಾರು ಕಣ್ಣುಗಳುಳ್ಳ, ನೂರಾರು ಪ್ರಾಣಶಕ್ತಿಯುಳ್ಳ ಮತ್ತು ಸಾವಿರಾರು ಉಸಿರುಳ್ಳ ಹಾಗೂ ವಿಶ್ವದ ಸಾವಿರಾರು ಜೀವಿಗಳ ಆಧಾರವಾಗಿರುವ ಶಕ್ತಿಯೆಂದು ವರ್ಣಿಸಲ್ಪಟ್ಟಿರುವನು.
ಶ್ವೇತಾಶ್ವತರ ಉಪನಿಷತ್ತಿನಲ್ಲಿ (೩. ೧೪,೧೫)— ಪುರುಷಸೂಕ್ತದ ಮೊದಲೆರಡು ಮಂತ್ರಗಳು ಅಕ್ಷರಶಃ ಪುನರಾವೃತ್ತಿಯಾಗಿವೆ. ಅಲ್ಲದೆ, ಕೆಳಗಿನ ಮಂತ್ರಗಳೂ ಪುರುಷಪರವಾಗಿವೆ.
೧) ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾತ್ | (೩.೩)
(ಜಗದಗಲ ಕಣ್ಣುಗಳು ಜಗದಗಲ ಬಾಯಿಗಳು ಜಗದಗಲ ತೋಳುಗಳು ಜಗದಗಲಪಾದ)
೨) ಸರ್ವಾನನ-ಶಿರೋ-ಗ್ರೀವಃ ಸರ್ವಭೂತಗುಹಾಶಯಃ |
ಸರ್ವವ್ಯಾಪೀ ಸ ಭಗವಾನ್ ತಸ್ಮಾತ್ ಸರ್ವಗತಃ ಶಿವಃ || (೩.೧೧)
(ಎಲ್ಲ ಜೀವರ ಮುಖವು ಎಲ್ಲ ಜೀವರ ತಲೆಯು ಎಲ್ಲ ಜೀವರ ಕೊರಳು ಎಲ್ಲರೊಳಗಿಹನ |
ಎಲ್ಲೆಡೆಯು ಹಬ್ಬಿರುವ ಎಲ್ಲೆಡೆಯಲೂ ಇರುವ ಅದರಿಂದಲೇ ಶಿವನು ಭಗವಂತನವನೇ ||)
೩) ಅಂಗುಷ್ಠಮಾತ್ರಃ ಪುರುಷೋ ಅಂತರಾತ್ಮಾ ಸದಾ ಜನಾನಾಂ
ಹೃದಯೇ ಸಂನಿವಿಷ್ಟಃ || (೩.೧೩)
(ಹೆಬ್ಬೆರಳಗಾತ್ರದ ಪುರುಷನು ಅಂತರಾತ್ಮನಾಗಿ ಯಾವಾಗಲೂ ಜನರ ಹೃದಯಗುಹೆಯಲ್ಲಿ ಕುಳಿತಿರುವನು)
ಶತಪಥ ಬ್ರಾಹ್ಮಣವು (೮.೭.೪.೧೧) 'ಸಹಸ್ರ' ಪದದ ಅರ್ಥವನ್ನು ಪರಮ ಆತ್ಮನ ಅಂಕಿತ, ಪ್ರತಿಬಿಂಬ ಮತ್ತು ಪರಿಮಾಣವೆಂಬಂತೆ ಹೇಳಿದೆ.
ಈ ಸಂದರ್ಭದಲ್ಲಿ ಪ್ರಸ್ತಾಪಿತವಾದ ೩ ಪ್ರಮುಖ ಅಂಗಗಳು ಶಿರಸ್ಸು (ಸಂಕಲ್ಪಶಕ್ತಿ / ಇಚ್ಛಾಶಕ್ತಿ), ಕಣ್ಣುಗಳು (ದೃಷ್ಟಿ, ದರ್ಶನ, ಅರಿವು / ಜ್ಞಾನಶಕ್ತಿ) ಮತ್ತು ಕಾಲುಗಳು (ಚಲನೆ, ಕ್ರಿಯೆ, ವ್ಯವಹಾರ / ಕ್ರಿಯಾಶಕ್ತಿ). ಇದರ ಸಂಕೇತವೆಂದರೆ— ವಿಶ್ವದಲ್ಲಿನ ಸಕಲ ಸಂಕಲ್ಪಗಳು, ತಿಳಿವಳಿಕೆ ಮತ್ತು ಕಾರ್ಯಾಚರಣೆಗಳು ಪುರುಷನ (ಸರ್ವಸಾಕ್ಷಿಯ) ಸಮ್ಮುಖದಲ್ಲೇ ನಿಜವಾಗಿ ಮಾಡಲ್ಪಡುತ್ತವೆ.
ಸಹಸ್ರಶೀರ್ಷ ಪದವು ಪುರುಷಸೂಕ್ತವಲ್ಲದೆ ಋಗ್ವೇದದಲ್ಲಿ ಬೇರೆಲ್ಲೂ ಕಾಣಬರುವುದಿಲ್ಲ. ಹೀಗಾಗಿ ಇದು ಪುರುಷವಾಚಕ. ಸಹಸ್ರಪಾತ್ ಪದವು ಪುರುಷಸೂಕ್ತವನ್ನುಳಿದು ಋಗ್ವೇದದಲ್ಲಿ (೮.೬೯.೧೬)— ಮತ್ತೊಂದು ಕಡೆ ಮಾತ್ರ ಸೂರ್ಯನ ಸ್ತುತಿಗೆ ಸಂಬಂಧಿಸಿ ಕಂಡುಬರುತ್ತದೆ. ಅಲ್ಲಿ 'ಪಾದ ' ಎಂದರೆ ಬೆಳಕಿನ ಕಿರಣ (ರಶ್ಮಿ) ಎಂಬರ್ಥ. ಸಾವಿರಾರು ಕಿರಣಗಳೆಂಬ ಪಾದಗಳ ಮೂಲಕ ಸೂರ್ಯನು ಜಗತ್ತನ್ನೆಲ್ಲ ಸುತ್ತಾಡುತ್ತಾನೆ. ಹಾಗಾಗಿ ಇದು ಸೂರ್ಯವಾಚಕವೂ ಹೌದು. ಆದರೆ, ಸಹಸ್ರಾಕ್ಷ ಪದವು ಬೇರೆ ೪ ಕಡೆಗಳಲ್ಲಿ ಬರುತ್ತದೆ—
೧) ಸಹಸ್ರಾಕ್ಷಾ ಧಿಯಾಸ್ಪತೀ (೧.೨೩.೩)—
ವಾಯು-ಇಂದ್ರಯುಗಳವಾಚಕ.
೨) ಸಹಸ್ರಾಕ್ಷೋ ವಿಚರ್-ಷಣಿಃ (೧.೭೯.೧೨)— ಅಗ್ನಿವಾಚಕ.
೩) ತಸ್ಮೈ ಸಹಸ್ರಮ್ ಅಕ್ಷಿಭಿರ್ ವಿ ಚಕ್ಷೇ (೧೦.೭೯.೫)— ಅಗ್ನಿವಾಚಕ.
೪) ಸಹಸ್ರಾಕ್ಷೇಣ ಶತ-ಶಾರದೇನ (೧೦.೧೬೧.೩)— ಇಂದ್ರ / ಹವಿಸ್ಸಿನ ವಾಚಕ ಅಥವಾ ರಾಜಯಕ್ಷ್ಮನಾಶಕ ದೇವತಾವಾಚಕ.
ಈ ಮೇಲಿನ ಆಧಾರಗಳಿಂದ, ಪುರುಷತತ್ತ್ವವು ಅಗ್ನಿ (ಅಧೋವಲಯದ ಭೂಸ್ಥಾನೀಯ ದೇವತೆ), ಇಂದ್ರ, ವಾಯು (ಮಧ್ಯವಲಯದ ಅಂತರಿಕ್ಷಸ್ಥಾನೀಯ ದೇವತೆಗಳು) ಮತ್ತು ಸೂರ್ಯರ (ಊರ್ಧ್ವವಲಯದ ಸ್ವರ್ಗ / ದ್ಯು-ಸ್ಥಾನೀಯ ದೇವತಾ)ಪರಿಕಲ್ಪನೆಗಳನ್ನೂ ಒಳಗೊಳ್ಳುತ್ತದೆ. ಹೀಗೆ ಮೂರೂ ಸ್ಥಾನಗಳ ದೇವತಾತತ್ತ್ವಗಳನ್ನೊಳಗೊಂಡ, ಉರುಕ್ರಮನಾದ, ದೊಡ್ಡ ೩ ಹೆಜ್ಜೆಗಳನ್ನು ಪ್ರಾತಃಕಾಲ, ಮಧ್ಯಾಹ್ನ ಹಾಗೂ ಸಾಯಂಕಾಲಗಳಲ್ಲಿ ಭೂಮ್ಯಂತರಿಕ್ಷವ್ಯೋಮಗಳಲ್ಲಿಟ್ಟು ತ್ರಿವಿಕ್ರಮನಾಗಿ, ತ್ರಿಪಾತ್ ಎನಿಸಿದ ವಿಷ್ಣುವಿನ ಸ್ತುತಿಯೆಂದು ಪುರುಷಸೂಕ್ತವನ್ನು ಭಾವಿಸಲಾಗಿದೆ. ಈ ಅರ್ಥದಲ್ಲಿ ಅವನು ಸಮಗ್ರ ಅಸ್ತಿತ್ವದ ಸತ್ವ (ರಸ— "ರಸೋ ವೈ ಸಃ") ದ ಸಂಕೇತವಾಗಿದ್ದಾನೆ. ಹೀಗಾಗಿ, ದ್ವೈತದೃಷ್ಟಿಯಲ್ಲಿ ಅಗ್ನಿ, ಇಂದ್ರ, ವಾಯು, ಸೂರ್ಯರು ಈ ಅಸ್ತಿತ್ವದ ಮೂಲತತ್ತ್ವವಾದ ಪರಮಪುರುಷನೆನಿಸಿದ ವಿಷ್ಣುವಿನ ಅಂಶಗಳಷ್ಟೇ ಆಗಿರುವರು. ಆದರೆ, ಅದ್ವೈತದೃಷ್ಟಿಯಲ್ಲಿ ಏಕಮೇವಾದ್ವಿತೀಯವಾದ ಪರತತ್ತ್ವವೇ ಅಗ್ನಿ, ಇಂದ್ರ, ವಾಯು, ಸೂರ್ಯಾದಿ ವಿಶ್ವರೂಪ ತಾಳಿ ವಿರಾಟ್ಪುರುಷನೆನಿಸಿದನು.
ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ದಶಾಂಗುಲಮ್ ||
ಪೂರಯತಿ, ಪೃಣಾತಿ, ವ್ಯಾಪ್ನೋತಿ— ತನ್ನ ಶಕ್ತಿ-ಮಹಿಮೆಗಳಿಂದ ಬ್ರಹ್ಮಾಂಡದ ಅಣು ಅಣುವನ್ನೂ ವ್ಯಾಪಿಸಿ ಸಮಗ್ರ ಅಸ್ತಿತ್ವದಲ್ಲಿ ತುಂಬಿಕೊಳ್ಳುವುದರಿಂದ ಪರಮಾತ್ಮನು ಪುರುಷನೆನಿಸಿರುವನು. ಒಂದು ಅಂಗುಲವೆಂದರೆ ೨ ಬೆರಳಿನ ದಪ್ಪದಷ್ಟು / ೧ ಇಂಚು.
ದಶಾಂಗುಲ ಪದವು ಒಂದು ದೃಷ್ಟಿಯಿಂದ ದೇವಲೋಕವಲಯವನ್ನು ಉದ್ದೇಶಿಸುತ್ತದೆ. ಏಕೆಂದರೆ, ಪುರುಷನು ಭೂವಲಯವನ್ನು ಹತ್ತಂಗುಲಗಳಿಂದ ಅತಿಶಯಿಸಿ ಉನ್ನತವಾದ ದೇವಲೋಕಗಳಲ್ಲಿ ತನ್ನನ್ನು ವಿಶೇಷವಾಗಿ (ಅತಿಶಯವಾಗಿ, ಪ್ರಧಾನವಾಗಿ) ಸ್ಥಾಪಿಸಿಕೊಳ್ಳುತ್ತಾನೆಯೇ ಹೊರತು ಭೂಮೇಲ್ಮೈಯಿಂದ ಹತ್ತಂಗುಲಗಳ ಕೆಳಗೆ (ಒಳಕ್ಕೆ, ಬೀಜಗಳೂ ಮೊಳಕೆಯೊಡೆಯಲಾರದ, ಸೃಷ್ಟಿಪ್ರಕ್ರಿಯೆಯಿರದ ನೆಲದಾಳದಲ್ಲಿ) ವಿಶೇಷವಾಗಿ ಸ್ಥಾಪಿತನಾಗಿಲ್ಲ.
ಇನ್ನೊಂದು ಮತದಂತೆ, ದಶಾಂಗುಲ ಪದವು ಬಾಯಿಯೊಳಗಿನ ಮೇಲ್ದವಡೆ-ಕೆಳದವಡೆಗಳ ಗರಿಷ್ಠ ಅಂತರವನ್ನು ಸೂಚಿಸುವುದು; ಬ್ರಹ್ಮಾಂಡದೊಳಗಿನ ಪ್ರದೇಶವನ್ನು ಪ್ರತಿನಿಧಿಸುವುದು; (ಅಧರಾ ಹನುಃ ಪೂರ್ವರೂಪಮ್ | ಉತ್ತರಾ ಹನುರುತ್ತರರೂಪಮ್ | ವಾಕ್ ಸನ್ಧಿಃ | ಜಿಹ್ವಾ ಸನ್ಧಾನಮ್ | ಇತ್ಯಧ್ಯಾತ್ಮಮ್ ||— ತೈತ್ತಿರೀಯಾರಣ್ಯಕ ಪ್ರಪಾಠಕ ೭) ಕೆಳದವಡೆಯು ಅಧ್ಯಾತ್ಮದ (ಆತ್ಮದ ಮೂಲಸ್ಥಾನದ) ಮೊದಲಸೀಮೆ. ಮೇಲ್ದವಡೆಯು ಚರಮಸೀಮೆ. ಪ್ರಣವಜನ್ಯ ಪರಾವಾಕ್ ನಾಭಿಯಿಂದುದಿಸಿ ಹೃದಯಚಕ್ರದಲ್ಲಿ ಪಶ್ಯಂತೀ ಆಗಿ, ಕಂಠಚಕ್ರದಲ್ಲಿ ಮಧ್ಯಮಾವಾಕ್ ಆಗಿ, ಈ ದವಡೆಗಳ ನಡುವಿನ ಮುಖ / ಬಾಯಿಯಿಂದಲೇ ಜಿಹ್ವೆಯ ಸಂಧಾನ / ಸೇರುವಿಕೆಯ ಮೂಲಕ ವೈಖರೀವಾಣಿಯಾಗಿ ಸಕಲಶ್ರುತಿಗೋಚರವಾಗಿ ಹೊರಹೊಮ್ಮುತ್ತದೆ; ಆಧ್ಯಾತ್ಮಿಕಾಯಾಮದಲ್ಲಿ, ಪುರುಷಾತ್ಮನ ವಾಗ್ರೂಪಾವತರಣದ ದ್ವಾರವೇ ಈ ದಶಾಂಗುಲಪರಿಮಾಣದ್ದೆಂದೂ ತೋರಬಹುದು.
Comments
Post a Comment