ईशावास्योपनिषत् पीठिकासमुच्चयः— ಈಶಾವಾಸ್ಯೋಪನಿಷತ್ ಪೀಠಿಕಾಸಮುಚ್ಚಯ— Eeshaavaasyo'panishat Introductions

ईशावास्योपनिषत्
ಈಶಾವಾಸ್ಯೋಪನಿಷತ್ತು
प्रस्तावना
" अनन्ता वै वेदाः " इत्यस्माद् वचनाद् वेदानाम् अन्त्यं नास्ति, अर्थात् वेदाः अमिताः प्रमाणे, तथा च वेदानाम् नाशो नास्तीति अर्थद्वयं दृश्यते । तथापि वेदानामन्त्यभागभूता उपनिषदः वेदान्ताः स्मृताः । वेदानामात्यन्तिकं निर्णयात्मकं तत्त्वसारं परमार्थं वक्ष्यमाणं शास्त्रमेव वेदान्त उपनिषद्वा । अतः सान्तस्य सरलस्यास्य अध्ययनेन अनन्तानां सकलवेदानामध्ययनफलमेव प्राप्तमिव भवति । " सूक्ष्मतया महदर्थं वक्ष्यमाणः ", " त्वचामुक्तं कदलीफलमिव " इत्याख्यानवत् धर्मार्थकाममोक्षाख्यचतुर्विधपुरुषार्थेषु परमार्थं तुरीयमन्तिमभूतं शाश्वतसुखमवाप्तुमेतत् समग्रविश्वज्ञानकोषभूतानां वेदानां साररूपभूतानामुपनिषदामध्ययनाय प्रवर्तेम । तद्द्वारास्माकमुद्धारमार्गं पश्येम ननु?

ಪ್ರಸ್ತಾವನೆ

" ಅನನ್ತಾ ವೈ ವೇದಾಃ "— ಎಂಬೀ ಮಾತಿನಿಂದ ವೇದಗಳಿಗೆ ಅಂತ್ಯವಿಲ್ಲ, ಅರ್ಥಾತ್ ವೇದಗಳು ಓದಿ ಮುಗಿಯದಷ್ಟು, ಕೊನೆಗಾಣದಷ್ಟು ಇವೆ ಹಾಗೂ ಅವುಗಳಿಗೆ ಅಂತ್ಯ / ನಾಶವಿಲ್ಲವೆಂಬೆರಡು ಅರ್ಥಗಳ ಗೋಚರವಾಗುವುದು. ಆದರೂ ವೇದಗಳ ಕೊನೆಯ ಭಾಗವೆನಿಸಿದ ಉಪನಿಷತ್ತುಗಳು ವೇದಾಂತವೆನಿಸಿವೆ. ವೇದಗಳ ಆತ್ಯಂತಿಕ ನಿರ್ಣಯಾತ್ಮಕವಾದ ತತ್ತ್ವಸಾರವನ್ನು, ಪರಮಾರ್ಥವನ್ನು ಹೇಳುವ ಶಾಸ್ತ್ರವೇ ವೇದಾಂತ ಅಥವಾ ಉಪನಿಷತ್ತು. ಹಾಗಾಗಿ ಸಾಂತವಾದ, ಸರಳವಾದ, ಇದರ ಅಧ್ಯಯನದಿಂದ ಅನಂತವಾದ ಸಕಲವೇದಗಳ ಅಧ್ಯಯನದ ಫಲವೂ ದೊರೆತಂತೆಯೇ ಆಗುತ್ತದೆ. "ಕಿರಿದರೊಳ್ ಪಿರಿದರ್ಥವಂ ಪೇಳುವ ", "ಸುಲಿದ ಬಾಳೆಯ ಹಣ್ಣಿನಂದದಿ " ಎಂಬ ಮಾತುಗಳಂತೆ ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಗಳಲ್ಲಿ ಪರಮಾರ್ಥವೂ, ನಾಲ್ಕನೆಯದೂ, ಕೊನೆಯದೂ ಆಗಿರುವ ಶಾಶ್ವತಸುಖವನ್ನು ಪಡೆಯಲು ಈ ಸಮಗ್ರವಿಶ್ವಜ್ಞಾನಕೋಶವಾದ ವೇದಗಳ ಸಾರರೂಪವಾದ ಉಪನಿಷತ್ತುಗಳ ಅಧ್ಯಯನಕ್ಕೆ ತೋಡಗೋಣ. ಆ ಮೂಲಕ ನಮ್ಮ ಉದ್ಧಾರದ ದಾರಿಯನ್ನು ಕಂಡುಕೊಳ್ಳೋಣ. ಆಗದೆ? 


PROPOSITION


" Anantaa vai ve'daah"— from this statement it is evident that there is no end for the ve'das, i.e. 2 meanings— these can't be completely studied and finished off or are never ending and also it means that these are permanent and imperishable (Anta means end, ananta means no end). Still, the upanishads being the end portion of the ve'das, called as 'Ve'daanta'. That which tells final judgemental purport (impression, summary, gist, essence, main point) of the ve'das or the ultimate end is the ve'daanta or upanishat. That is why, from the study of this simple upanishat which has an end (not never-ending like ve'das), we get the benefit similar to that got with the study of whole ve'das. It is like, "Great important meaning or summary in a small collection of texts", "Eating the peeled banana"— to get the permanent bliss, the ultimate, 4th and the last aim among the 4 main aims of human life viz., dharma, artha, kaama, mOksha, let us start studying this upanishat which is a complete universal knowledge cell. In this way, let us find out the way for our upliftment. Okay?

आदौ परिमाणे अतिसूक्षम्, शुक्लयजुस्संहितायाः चत्वारिंशत्तमाध्यायरूपे वर्तमानमेव ईशावास्योपनिषदम् अधो दृश्यमाने नानाव्याख्यानरूपे दर्पणे पश्येम ।

ಮೊದಲಿಗೆ ಗಾತ್ರದಲ್ಲಿ ಅತ್ಯಂತ ಕಿರಿದೂ, ಶುಕ್ಲಯಜುಸ್ಸಂಹಿತೆಯ ೪೦ ನೆಯ ಅಧ್ಯಾಯವಾಗಿ ಇರುವುದೂ ಆದ ಈಶಾವಾಸ್ಯೋಪನಿಷತ್ತನ್ನು ಕೆಳಕಂಡ ನಾನಾ ವ್ಯಾಖ್ಯಾನರೂಪೀ ಕನ್ನಡಿಯಲ್ಲಿ ನೋಡೋಣ.


In the begining, let us see the EeshaavaasyOpanishat, which is the smallest, inclusive of 18 mantras (hymns) coming as the 40th chapter of the Shukla Yajurveda, in the mirror of various explanations given below.

१. शाङ्करभाष्यम् , श्रीश्री सच्चिदानन्देन्द्रसरस्वतीस्वामिविरचितेन ईशावास्योपनिषच्छङ्करभाष्यानुवादेन ईशावास्योपन्यासमञ्जर्या, आनन्दगिरिटीकया च समलङ्कृतम्
२. रामानुजानुयायि-नारायणकृता विशिष्टाद्वैतीय-प्रकाशिका
३. माध्वभाष्यम्— वामनपण्डिताचार्यविरचितया श्रीमद्भाष्यटीकया, डा ॥ बन्नञ्जे गोविन्दाचार्यकृतया उपनिषद्भावचन्द्रिकाख्यया तत्पञ्चिकया च समलङ्कृतम्
४. विद्यामान्यतीर्थ (द्वैत)भाष्यम्
५. पञ्चाननतर्करत्नभट्टाचार्यस्य शक्तिभाष्यम्
६. स्वामिकृष्णानन्दस्य " एसेस् आन् दि उपनिषद्स् "
७. कन्नड उपनिषत् प्रकाश (कर्णाटभाषायाम्)— रङ्गनाथ-रामचन्द्र-दिवाकरः
८. श्री अरविन्दमहर्षेः "दि उपनिषद्स् "
९. उपनिषद्वाहिनी— सत्यसाई बाबा
१०. मि । चौ । रामरायस्य अष्टोपनिषत् (कर्णाटभाषायाम्)
११.  उपनिषदां सन्देशः (कर्णाटभाषायाम्)— स्वामी रङ्गनाथानन्दः
१२. श्री देवुडु नरसिंहशास्त्रिणः व्याख्यानम्
१३. डि । वि । जि । वर्यस्य व्याख्यानम्
१४. विनोबा-वर्यस्य ईशावास्यवृत्तिः
१५. विद्वान् । यु । पद्मनाभभट्ट-वर्यस्य " ईशावास्य-उपनिषद्-विज्ञान— वस्तुनिष्ठ-मनन " (कर्णाटभाषायाम्)
१६. श्रीमान् भार्गवनरसिंहवर्यस्य " १०८ उपनिषत् सर्वस्व " (कर्णाटभाषायाम्)
१७. डा ॥ पद्माकर-विष्णु-वर्तक-महाभागस्य " दि ग्लीन्स् आफ् सयन्स् इन् दि उपनिषद्स् अण्ड् श्रीमद्भगवद्गीता " (आङ्ग्लभाषायाम्)
१८. स्वामी-चिन्मयानन्दवर्यस्य व्याख्यानम्
१९. " उपनिषद्स् "— (साक्षी /SAKSHI पब्लिकेषन्स्— श्री अरोबिन्दो कपालिशास्त्रि इन्स्टिट्यूट्) (आङ्ग्लभाषायाम्)
२०. स्वामिपरमानन्दवर्यस्य "दि उपनिषद्स्" (आङ्ग्लभाषायाम्)
२१. श्रीश्री ए । सि । भक्तिवेदान्तस्वामिप्रभुपादस्य (इस्कान् / ISCON) व्याख्यानम्
२२. उपनिषद्-ब्रह्मन्-योगिनः भाष्यम्
२३. उपनिषद्भावधारे (कर्णाटभाषायाम्) —स्वामी-सोमनाथानन्दः, श्रीरामकृष्णाश्रमः
२४. स्वामि-आदिदेवानन्दकृतभाष्यम्
२५. उवटाचार्यभाष्यम्
२६. ब्रह्मानन्दकृतम् ईशावास्यरहस्यम्
२७. शङ्करानन्दकृता ईशावास्यदीपिका
२८. रामचन्द्रपण्डितकृता ईशावास्यरहस्यविवृतिः
२९. आनन्दभट्टोपाध्यायकृतम् ईशावास्यभाष्यम्
३०. अनन्ताचार्यकृतम् ईशावास्यभाष्यम्
३१. बन्नञ्जे-गोविन्दाचार्यकृतं (द्वैत)भाष्यम्


೧. ಶಾಂಕರಭಾಷ್ಯ , ಶ್ರೀಶ್ರೀ ಸಚ್ಚಿದಾನಂದೇಂದ್ರಸರಸ್ವತೀಸ್ವಾಮಿವಿರಚಿತವಾದ ಈಶಾವಾಸ್ಯೋಪನಿಷಚ್ಛಂಕರಭಾಷ್ಯಾನುವಾದ ಹಾಗೂ ಈಶಾವಾಸ್ಯೋಪನ್ಯಾಸಮಂಜರಿಗಳ ಹಾಗೂ ಆನಂದಗಿರಿಟೀಕೆಯಿಂದ ಸಮಲಂಕೃತ
೨. ರಾಮಾನುಜಾನುಯಾಯಿ-ನಾರಾಯಣಕೃತಾ ವಿಶಿಷ್ಟಾದ್ವೈತೀಯ-ಪ್ರಕಾಶಿಕಾ
೩. ಮಾಧ್ವಭಾಷ್ಯ— ವಾಮನಪಂಡಿತಕೃತ ಶ್ರೀಮದ್ಭಾಷ್ಯಟೀಕೆ, ಡಾ| ಬನ್ನಂಜೆ ಗೋವಿಂದಾಚಾರ್ಯರ ಉಪನಿಷದ್ ಭಾವಚಂದ್ರಿಕಾ ವ್ಯಾಖ್ಯಾನಗಳಿಂದ ಸಮಲಂಕೃತ
೪. ವಿದ್ಯಾಮಾನ್ಯತೀರ್ಥ (ದ್ವೈತ)ಭಾಷ್ಯ
೫. ಪಂಚಾನನತರ್ಕರತ್ನಭಟ್ಟಾಚಾರ್ಯರ ಶಕ್ತಿಭಾಷ್ಯ
೬. ಸ್ವಾಮಿ ಕೃಷ್ಣಾನಂದರ "ಎಸ್ಸೇಸ್ ಆನ್ ದಿ ಉಪನಿಷದ್ಸ್ "
೭. ಕನ್ನಡ ಉಪನಿಷತ್ ಪ್ರಕಾಶ— ರಂಗನಾಥ ರಾಮಚಂದ್ರ ದಿವಾಕರ
೮. ಮಹರ್ಷಿ ಅರವಿಂದರ "ದಿ ಉಪನಿಷದ್ಸ್ "
೯. ಉಪನಿಷದ್ ವಾಹಿನೀ— ಸತ್ಯಸಾಯಿಬಾಬಾ
೧೦. ಮಿ.ಚೌ. ರಾಮರಾಯರ "ಅಷ್ಟೋಪನಿಷತ್"
೧೧. ಉಪನಿಷತ್ತುಗಳ ಸಂದೇಶ— ಸ್ವಾಮಿ ರಂಗನಾಥಾನಂದ
೧೨. ಶ್ರೀ ದೇವುಡು ನರಸಿಂಹಶಾಸ್ತ್ರೀ— ಇವರ ವ್ಯಾಖ್ಯಾನ
೧೩. ಡಿವಿಜಿಯವರ ವ್ಯಾಖ್ಯಾನ
೧೪. ವಿನೋಬಾರವರ ಈಶಾವಾಸ್ಯವೃತ್ತಿ
೧೫. ವಿದ್ವಾನ್ ಯು. ಪದ್ಮನಾಭ ಭಟ್ಟರ "ಈಶಾವಾಸ್ಯ ಉಪನಿಷದ್ವಿಜ್ಞಾನ (ವಸ್ತುನಿಷ್ಠ ಮನನ)"
೧೬. ಶ್ರೀಮಾನ್ ಭಾರ್ಗವ ನರಸಿಂಹರ ೧೦೮ ಉಪನಿಷತ್ ಸರ್ವಸ್ವ
೧೭. ಡಾ. ಪದ್ಮಾಕರ ವಿಷ್ಣು ವರ್ತಕರ "ದಿ ಗ್ಲೀನ್ಸ್ ಆಫ್ ಸಯನ್ಸ್ ಇನ್ ದಿ ಉಪನಿಷದ್ಸ್ ಆಂಡ್ ಶ್ರೀಮದ್ಭಗವದ್ಗೀತಾ"
೧೮. ಸ್ವಾಮಿ ಚಿನ್ಮಯಾನಂದರ ವ್ಯಾಖ್ಯಾನ
೧೯. "ಉಪನಿಷದ್ಸ್"— SAKSHI publications
೨೦. ಸ್ವಾಮಿ ಪರಮಾನಂದರ "ದಿ ಉಪನಿಷದ್ಸ್"
೨೧. ಶ್ರೀಶ್ರೀ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ (ಇಸ್ಕಾನ್) ವ್ಯಾಖ್ಯಾನ
೨೨. ಉಪನಿಷದ್-ಬ್ರಹ್ಮನ್ ಯೋಗಿಗಳ ಭಾಷ್ಯ
೨೩. ಉಪನಿಷದ್ಭಾವಧಾರೆ— ಸ್ವಾಮಿ ಸೋಮನಾಥಾನಂದ, ಶ್ರೀರಾಮಕೃಷ್ಣಾಶ್ರಮ
೨೪. ಸ್ವಾಮಿ ಆದಿದೇವಾನಂದರ ಭಾಷ್ಯ
೨೫. ಉವಟಾಚಾರ್ಯಭಾಷ್ಯ
೨೬. ಬ್ರಹ್ಮಾನಂದಕೃತಮ್ ಈಶಾವಾಸ್ಯರಹಸ್ಯಮ್
೨೭. ಶಂಕರಾನಂದಕೃತಾ ಈಶಾವಾಸ್ಯದೀಪಿಕಾ
೨೮. ರಾಮಚಂದ್ರಪಂಡಿತಕೃತಾ ಈಶಾವಾಸ್ಯರಹಸ್ಯವಿವೃತಿಃ
೨೯. ಆನಂದಭಟ್ಟೋಪಾಧ್ಯಾಯಕೃತಮ್ ಈಶಾವಾಸ್ಯಭಾಷ್ಯಮ್
೩೦. ಅನಂತಾಚಾರ್ಯಕೃತಮ್ ಈಶಾವಾಸ್ಯಭಾಷ್ಯಮ್
೩೧. ಬನ್ನಂಜೆ ಗೋವಿಂದಾಚಾರ್ಯಕೃತ (ದ್ವೈತ)ಭಾಷ್ಯ



उपरिस्थानामाकरग्रन्थानां साहाय्येन ईशावास्योपनिषत् / ईशोपनिषत् / याज्ञीयमन्त्रोपनिषत् / शुक्लयजुर्वेदीयसंहितोपनिषत्— अस्यार्थस्य नानामुखानि ज्ञातुम्, मन्तुम्, अनुष्ठातुं प्रयतामहे । अस्यां कृतौ आदौ शङ्करभाष्यं विस्तृत्य, केवलं तत्रावर्तमानान् अवश्यविचारमात्रान् अन्याकरेभ्यः स्वीकृत्य, पुनरावर्तनस्य न्यूनीकरणाय वाचकसौलभ्याय अतिविस्तारनिरोधाय च प्रयत्नं क्रियते ।

ಈ ಮೇಲಿನ ಆಕರಗ್ರಂಥಗಳ ಸಹಾಯದಿಂದ ಈಶಾವಾಸ್ಯೋಪನಿಷತ್ / ಈಶೋಪನಿಷತ್ / ಯಾಜ್ಞೀಯಮಂತ್ರೋಪನಿಷತ್ / ಶುಕ್ಲಯಜುರ್ವೇದೀಯಸಂಹಿತೋಪನಿಷತ್ ನ ಅರ್ಥದ ನಾನಾ ಮುಖಗಳನ್ನು ತಿಳಿಯಲು, ಮನನಮಾಡಲು, ಅನುಷ್ಠಾನಕ್ಕೆ ತರಲು ಪ್ರಯತ್ನಿಸೋಣ. ಈ ಕೃತಿಯಲ್ಲಿ ಮೊದಲಿಗೆ ಶಾಂಕರಭಾಷ್ಯವನ್ನು ವಿಸ್ತರಿಸಿ, ಅದರಲ್ಲಿಲ್ಲದ ಅವಶ್ಯ ವಿಚಾರಗಳನ್ನು ಮಾತ್ರ ಇತರ ಕೃತಿಗಳಿಂದ ಆಯ್ದುಕೊಂಡಿದ್ದು, ಪುನರಾವರ್ತನೆಯನ್ನು ಕಡಿಮೆಮಾಡಲು, ಓದುಗರ ಸೌಲಭ್ಯಕ್ಕಾಗಿ ಹಾಗೂ ಅತಿವಿಸ್ತಾರವನ್ನು ತಡೆಯಲು ಪ್ರಯತ್ನಿಸಲಾಗಿದೆ.

१. शाङ्करभाष्यम् 
(ईशादि नौ उपनिषद्, शाङ्करभाष्यार्थ— गीताप्रेस्, गोरखपुर— एतस्य संस्कृत-हिन्दी-ग्रन्थस्य आधारेण)

मन्त्रार्थम् , शाङ्करभाष्यम् , भाष्यार्थसहितं च

೧. ಶಾಂಕರಭಾಷ್ಯ
(ಈಶಾದಿ ನೌ ಉಪನಿಷದ್, ಶಾಂಕರಭಾಷ್ಯಾರ್ಥ— ಗೀತಾಪ್ರೆಸ್, ಗೋರಖ್ ಪುರ— ಈ ಸಂಸ್ಕೃತ-ಹಿಂದೀ ಗ್ರಂಥದ ಆಧಾರದಲ್ಲಿ)

ಮಂತ್ರಾರ್ಥ, ಶಾಂಕರಭಾಷ್ಯ ಹಾಗೂ ಭಾಷ್ಯಾರ್ಥಸಹಿತ

ईशिता सर्वभूतानां सर्वभूतमयश्च यः ।
ईशावास्येन सम्बोध्यमीश्वरं तं नमाम्यहम् ॥

ಈಶಿತಾ ಸರ್ವಭೂತಾನಾಂ ಸರ್ವಭೂತಮಯಶ್ಚ ಯಃ |
ಈಶಾವಾಸ್ಯೇನ ಸಂಬೋಧ್ಯಮೀಶ್ವರಂ ತಂ ನಮಾಮ್ಯಹಮ್ ||

यः सर्वभूतानां ईशिता (ईश्वरत्वभावयुक्तः, ईश्वरः, अधिपतिः, ऐश्वर्यवान्, ईश्वरस्य भावः— ऐश्वर्यम्), सर्वभूतमयः च, ईशावास्येन (उपनिषदा) सम्बोध्यं (सम्यक् बोध्यम्) तम् ईश्वरम् अहं नमामि ॥

ಯಾವನು ಸಕಲ ಚರಾಚರಗಳ ಈಶಿತೃವೋ / ಒಡೆಯನೋ (ಈಶ್ವರತ್ವಭಾವಯುಕ್ತನು, ಈಶ್ವರನು, ಅಧಿಪತಿಯು, ಐಶ್ವರ್ಯವುಳ್ಳವನು, ಈಶ್ವರನ ಭಾವವು ಐಶ್ವರ್ಯವು) ಹಾಗೂ ಎಲ್ಲ ಸೃಷ್ಟಿಯೊಳಗಿರುವನೋ / ಎಲ್ಲವನ್ನೊಳಗೊಂಡು ಇರುವನೋ, ಈಶಾವಾಸ್ಯ (ಉಪನಿಷತ್) ನಿಂದ ಸಂಬೋಧಿಸಲ್ಪಟ್ಟಿರುವ / ಸಂಬೋಧ್ಯನಾದ / ಚೆನ್ನಾಗಿ ತಿಳಿಯಲ್ಪಡಬೇಕಾದವನಾದ ಅಂತಹ ಈಶ ಪರಮೇಶ್ವರ ಪರಮಾತ್ಮಾ ಭಗವಂತನನ್ನು ನಾನು ನಮಿಸುತ್ತೇನೆ.

शान्तिपाठः

ॐ पूर्णमदः पूर्णमिदं पूर्णात्पूर्णमुदच्यते ।
पूर्णस्य पूर्णमादाय पूर्णमेवावशिष्यते ॥
ॐ शान्तिश्शान्तिश्शान्तिः ॥

ಶಾನ್ತಿಪಾಠಃ

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ ।
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥
ಓಂ ಶಾನ್ತಿಶ್ಶಾನ್ತಿಶ್ಶಾನ್ತಿಃ ॥

ॐ (अदः) तत् (परब्रह्म), (पूर्णम्) पूर्णमस्ति । तथैव, (इदम्) एतद् (कार्यब्रह्म) अपि, (पूर्णम्) पूर्णं वर्तते । किमर्थमिति चेत्, (पूर्णात् पूर्णम् उदच्यते) पूर्णतत्त्वात् /  पूर्णत्वात् पूर्णतत्त्वमेव / पूर्णत्वमेव उत्पद्यते खलु? तथा च (प्रलयकाले), (पूर्णस्य) कार्यब्रह्मणः, (पूर्णम् आदाय) पूर्णत्वं स्वीकृत्य (स्वस्मिन् लीनं कृत्वा / प्रलीय), (पूर्णम् एव) एकमात्रं परब्रह्मैव, (अवशिष्यते) अवशिष्टं / शेषं भवति ॥ आधिदैविक-आधिभौतिक-आध्यात्मिकाख्यानां त्रिविधतापानां (तापत्रयस्य वा) प्रशमनं कुरु ॥

ಓಮ್ (ಅದಃ) ಅದು (ಪರಬ್ರಹ್ಮವು), (ಪೂರ್ಣಮ್) ಪರಿಪೂರ್ಣವಾಗಿದೆ. ಹಾಗೆಯೇ, (ಇದಮ್) ಇದು (ಈ ಕಾರ್ಯಬ್ರಹ್ಮವೂ) ಕೂಡ, (ಪೂರ್ಣಮ್) ಪರಿಪೂರ್ಣವಾದುದಾಗಿರುವುದು. ಯಾಕೆಂದರೆ, (ಪೂರ್ಣಾತ್ ಪೂರ್ಣಮ್ ಉದಚ್ಯತೇ) ಪೂರ್ಣತತ್ತ್ವದಿಂದ / ಪೂರ್ಣತ್ವದಿಂದ ಪೂರ್ಣತತ್ತ್ವವೇ / ಪೂರ್ಣತ್ವವೇ ಉಂಟಾಗಲು ಸಾಧ್ಯ ಅಲ್ಲವೆ? ಹಾಗೆಯೇ (ಪ್ರಳಯಕಾಲದಲ್ಲಿ), (ಪೂರ್ಣಸ್ಯ) ಕಾರ್ಯಬ್ರಹ್ಮದ, (ಪೂರ್ಣಮ್ ಆದಾಯ) ಪೂರ್ಣತ್ವವನ್ನು ಸ್ವೀಕರಿಸಿ (ತನ್ನಲ್ಲೇ ವಿಲೀನಗೊಳಿಸಿ / ಐಕ್ಯಗೊಳಿಸಿ), (ಪೂರ್ಣಮ್ ಏವ) ಏಕಮಾತ್ರವಾದ ಪರಬ್ರಹ್ಮವೊಂದೇ, (ಅವಶಿಷ್ಯತೇ) ಅವಶಿಷ್ಟ / ಶೇಷವಾಗುತ್ತದೆ / ಉಳಿದುಬಿಡುತ್ತದೆ. ಆಧಿದೈವಿಕ, ಆಧಿಭೌತಿಕ, ಆಧ್ಯಾತ್ಮಿಕಗಳೆಂಬ ಮುಬ್ಬಗೆಯ ಪೀಡೆಗಳನ್ನು (ತ್ರಿವಿಧ ತಾಪಗಳನ್ನು / ತಾಪ-ತ್ರಯವನ್ನು) ಶಮನಗೊಳಿಸು / ಶಾಂತವಾಗಿಸು.

(शाङ्कर) सम्बन्ध-भाष्यम्

(ईशादिमन्त्राणां विनियोगः—) 
ईशा वास्यम् इत्यादयो मन्त्राः कर्मसु अ-विनियुक्ताः । तेषाम् अकर्म-शेषस्य आत्मनो याथात्म्य-प्रकाशकत्वात् । याथात्म्यं च आत्मनः शुद्धत्व-अपापविद्धत्व-एकत्व-नित्यत्व-अशरीरत्व-सर्वगतत्वादि-वक्ष्यमाणम् । तत् च कर्मणा विरुध्येत इति युक्तः-एव एषां कर्मसु अ-विनियोगः ।

(ಶಾಂಕರ) ಸಂಬಂಧ-ಭಾಷ್ಯ

(ಈಶಾದಿಮಂತ್ರಗಳ ವಿನಿಯೋಗ—)

" ಈಶಾ ವಾಸ್ಯಮ್ "— " ಈಶನಿಂದ ಆಚ್ಛಾದಿಸಲ್ಪಡತಕ್ಕದ್ದು " ಇತ್ಯಾದಿ  ಮಂತ್ರಗಳು (ವೇದೋಕ್ತ ಶ್ರೌತ ಹಾಗೂ ಸ್ಮೃತ್ಯುಕ್ತ ಸ್ಮಾರ್ತ) ಕರ್ಮಗಳಲ್ಲಿ ವಿನಿಯುಕ್ತವಾಗಿಲ್ಲದವುಗಳಾಗಿವೆ (ಬಳಕೆಯಲ್ಲಿಲ್ಲ). 

(ಈ ಶುಕ್ಲಯಜುಸ್ಸಂಹಿತೆಯಲ್ಲಿ  ಹಿಂದಿನ ೩೯ ಅಧ್ಯಾಯದ ಮಂತ್ರಗಳೂ ಕರ್ಮದಲ್ಲಿ ವಿನಿಯೋಗವಾಗಿರುವುವು. ಆದರೆ ೪೦ನೆಯದಾದ ಈ ಕೊನೆಯ ಅಧ್ಯಾಯ ಮಾತ್ರ ಹಾಗಲ್ಲ. ಕರ್ಮವಿನಿಯೋಗ ಮಂತ್ರಗಳೂ ೨ ಬಗೆ— (1) ಯಾವ ಮಂತ್ರವನ್ನು ಯಾವುದಕ್ಕೆ ವಿನಿಯೋಗಿಸಬೇಕೆಂದು ವೇದದಲ್ಲೇ ಹೇಳಿರುವ ಮಂತ್ರಗಳು ಹಾಗೂ (2) ಕರ್ಮದಲ್ಲಿ ಉಪಯೋಗಿಸಬೇಕಾಗುವ ದ್ರವ್ಯವನ್ನು ತಿಳಿಸುವ ಮಂತ್ರಗಳು.) 

(ಯಾಕೆಂದರೆ) ಅವುಗಳು ಕರ್ಮಶೇಷರಹಿತನಾದ (ಕರ್ಮಕ್ಕೆ ಅಂಗವಾಗದಿರುವ) ಆತ್ಮನ ಯಥಾರ್ಥ / ನಿಜವಾದ ಸ್ವರೂಪವನ್ನು ಪ್ರತಿಪಾದಿಸುವುವೂ, ಪ್ರಕಾಶನಗೊಳಿಸುವುವೂ / ತಿಳಿಸಿಕೊಡುವವೂ ಆಗಿರುವುದರಿಂದಾಗಿ. (ಅವುಗಳ ಈ ಗುಣದಿಂದಾಗಿ). ಆತ್ಮನ ಯಥಾರ್ಥ (ನಿಜವಾದ) ಸ್ವರೂಪ, ಪರಿಶುದ್ಧತೆ, ಪಾಪಲೇಪವಿಲ್ಲದಿರುವಿಕೆ, ಏಕಮೇವಾದ್ವಿತೀಯತೆ, ಸದಾ ನಾಶವಾಗದೇ ನಿತ್ಯವಾಗಿರುವಿಕೆ, ಶರೀರವಿಲ್ಲದಿರುವಿಕೆ / ಶರೀರದ ಹೊರತಾಗಿರುವಿಕೆ ಹಾಗೂ ಎಲ್ಲೆಡೆ ವ್ಯಾಪಿಸಿರುವಿಕೆ ಮುಂತಾದ ವಿಚಾರಗಳು ಮುಂದೆ (ಉಪನಿಷತ್ತಿನ ೭, ೮ನೆಯ ಮಂತ್ರಗಳಲ್ಲಿ) ಹೇಳಲಿರುವವುಗಳಾಗಿವೆ. (ಅಂತಹ ಆತ್ಮನ ಲಕ್ಷಣವು) ಅದು ಕರ್ಮದಿಂದ ಬೇರೆಯಾದುದು / ವಿರುದ್ಧವಾದುದು (ಜ್ಞಾನಸ್ವರೂಪವಾದುದು); ಆದ್ದರಿಂದ (ಆತ್ಮಪ್ರತಿಪಾದಕವಾದ ಈ ಮಂತ್ರಗಳಿಗೂ) ಇವುಗಳಿಗೂ ಕರ್ಮಗಳಲ್ಲಿ ವಿನಿಯೋಗವಿಲ್ಲ ಎಂಬುದು ಯೋಗ್ಯವೇ / ಸರಿಯಾದುದೇ / ಯುಕ್ತಿಯುಕ್ತವಾದುದೇ / ತರ್ಕಬದ್ಧವಾದುದೇ ಆಗಿದೆ.

आनन्दगिरि-टीका

येनात्मना परेणेशा व्याप्तं विश्वमशेषतः ।
सोऽहं देहद्वयीसाक्षी वर्जितो देहतद्गुणैः ॥ १ ॥

ಆನಂದಗಿರಿ-ಟೀಕಾ

ಯಾವೇಶನುಂ ತಾನು ಶಕ್ತಿಯೊಡಗೂಡ್ಯಖಿಳ ವಿಶ್ವವಂ ವ್ಯಾಪಿಸಿರ್ಪ |
ಅಂತಿರ್ಪವನೆ ನಾನು ಸಾಕ್ಷ್ಯಾತ್ಮನಾತ್ಮತನು ದೇಹಗುಣವರ್ಜಿಸಿರ್ಪ ||

(येन ईशा) ಯಾವ ಈಶನಿಂದ, (आत्मना) ಪರಮಪುರುಷನೂ ಸತ್-ತತ್ತ್ವವೂ ಆತ್ಮತತ್ತ್ವವೂ ಆದ ಸ್ವತಃ ತನ್ನಿಂದಲೂ, (परेण) ಮಾಯಾಶಕ್ತಿಪ್ರಕೃತಿಯೆನಿಸಿದ ಅಸತ್ ತತ್ತ್ವವಾದ ಅನಾತ್ಮದಿಂದಲೂ, (विश्वम् अशेषतः व्याप्तम्) ಸಮಸ್ತ ವಿಶ್ವವು ವ್ಯಾಪ್ತವಾಗಿರುವುದೋ, (सः) ಅಂತಹ, (देहद्वयी-साक्षी) ಆತ್ಮಾನಾತ್ಮತತ್ತ್ವದ್ವಯದಿಂದಾದ ದೇಹಕ್ಕೆ ಸಾಕ್ಷೀರೂಪನಾದ, (अहम्) ನಾನು, (देहतद्गुणैः) ದೇಹೇಂದ್ರಿಯಾದಿಗಳ ಗುಣಗಳಿಗೆ, (वर्जितः) ಅತೀತನಾಗಿರುವವನಾಗಿದ್ದೇನೆ.

ईशा वास्यम् इत्यादिमन्त्रान् व्याचिख्यासुः भगवान् भाष्यकारः (ಈಶಾ ವಾಸ್ಯಮ್ ಇತ್ಯಾದಿ ಮಂತ್ರಗಳನ್ನು ವ್ಯಾಖ್ಯಾನಿಸುವ ಇಚ್ಛೆಯಿಂದ ಭಾಷ್ಯಕಾರರಾದ ಭಗವತ್ಪಾದ ಶಂಕರರು), तेषां कर्मशेषत्वशङ्कां तावद् व्युदस्यति । (ಅವುಗಳ ಕರ್ಮಾಂಗತ್ವದ / ವೇದೋಕ್ತಕರ್ಮದಲ್ಲಿ ವಿನಿಯೋಗ್ಯವೆಂಬ ಶಂಕೆಯನ್ನು ಇದೀಗ ನಿರಾಕರಿಸುತ್ತಾರೆ.) तथा हि कर्मजडाः केचन मन्यन्ते स्म । ईशा वास्यम् इत्यादयो मन्त्राः कर्मशेषाः, मन्त्रत्व-अविशेषाद् इषे त्वा आदि-मन्त्रवत् । (ಹಾಗೆಯೇ, ಕರ್ಮಠರಾದ ಕೆಲವರು "ಈಶಾ ವಾಸ್ಯಮ್ " ಇತ್ಯಾದಿ ಮಂತ್ರಗಳು, "ಇಷೇ ತ್ವಾ " ಮುಂತಾದ ಮಂತ್ರಗಳಂತೆಯೇ ವೇದಗಳ ಸಂಹಿತೆ / ಮಂತ್ರಭಾಗದಲ್ಲೇ ಸಾಮಾನ್ಯವಾಗಿ / ಅವಿಶೇಷವಾಗಿ ಬರುವುದರಿಂದ ಕರ್ಮಾಂಗವಾಗಿವೆ ಎಂದು ತಿಳಿಯುತ್ತಿದ್ದರು.) अतः पृथक् प्रयोजनादि-अभावाद् अ-व्याख्येयाः, इति तान् प्रति आह— ईशा वास्यम् इत्यादयः, इति । (ಹಾಗಾದ್ದರಿಂದ, ಕರ್ಮದಲ್ಲಿ ಪ್ರತ್ಯೇಕ ವಿನಿಯೋಗ / ಪ್ರಯೋಗವಿಲ್ಲದಿರುವುದರಿಂದ, ವಿನಿಯೋಗವನ್ನು ಹೇಳಬೇಕಾದದ್ದಿಲ್ಲ ಎಂದು ಅವುಗಳನ್ನು ಕುರಿತು ಹೇಳುತ್ತಾರೆ— ಈಶಾ ವಾಸ್ಯಮ್ ಇತ್ಯಾದಿಗಳು, ಎಂದು ಮುಂತಾಗಿ.) कर्मसु अ-विनियुक्ताः, इति । (ಕರ್ಮದಲ್ಲಿ ವಿನಿಯುಕ್ತವಲ್ಲದವುಗಳು, ಎಂಬುದಾಗಿ.)  "इषे त्वा" इति शाखां छिनत्ति इत्यादिवद् विनियोजक-प्रमाण-अदर्शनात् प्रकरणान्तरत्वात् च इति अर्थः । ("ಇಷೇ ತ್ವಾ" ಎಂದು ಪಲಾಶವೃಕ್ಷದ ಗೆಲ್ಲನ್ನು ಛೇದಿಸುತ್ತಾನೆ ಇತ್ಯಾದಿಗಳಂತೆ ವಿನಿಯೋಗಿಸುವ ಪ್ರಮಾಣಗಳು ತೋರದಿರುವುದರಿಂದಾಗಿ ಹಾಗೂ ಬೇರೆ ಸಂದರ್ಭ / ಪ್ರಕರಣ ಎಂಬುದರಿಂದಾಗಿ ಎಂದರ್ಥ.)


श्रौत-विनियोग-अभावे अपि (ಶ್ರೌತಯಾಗಾದಿ ಕರ್ಮಗಳಲ್ಲಿ ವಿನಿಯೋಗಿಸಲ್ಪಡದಿದ್ದರೂ), बर्हिः देवसदनं दामि इत्यस्य (ದರ್ಭೆಹುಲ್ಲನ್ನು ದೇವಾಲಯಕ್ಕೆ ನೀಡುತ್ತೇನೆ ಎಂಬುದಕ್ಕೆ), बर्हिर्-लवन-प्रकाशन-सामर्थ्याद् (ದರ್ಭೆಯ ಕತ್ತರಿಸುವಂತಹ ಹರಿತ, ನಿಶಿತ, ತೀಕ್ಷ್ಣವಾದ ಗುಣವನ್ನು ಪ್ರಕಾಶಪಡಿಸುವ ಸಾಮರ್ಥ್ಯದಿಂದಾಗಿ), बर्हिः लवने यथा विनियोगः (ದರ್ಭೆಯು ಕತ್ತರಿಸಲೂ ಹೇಗೆ ವಿನಿಯೋಗಿಸಬಹುದೋ), तथा कर्मशेष-आत्म-प्रकाशन-सामर्थ्येन (ಹಾಗೆಯೇ, ಕರ್ಮದ ಉಳಿಕೆಯಿರುವುದನ್ನು / ಕರ್ಮಾಂಗತ್ವವನ್ನು ಆತ್ಮವು ಪ್ರಕಾಶಿಸಲು ಸಮರ್ಥವಾಗಿರುವುದರಿಂದ), कर्मसु एषां विनियोगः (ಕರ್ಮಗಳಲ್ಲಿ ಈ ಮಂತ್ರಗಳ ವಿನಿಯೋಗವಿದೆ), इति अपि न आशङ्कनीयम् इति आह— तेषाम् इति । (ಎಂದೂ ಕೂಡ ಶಂಕಿಸಬಾರದೆಂದು ಹೇಳಿದೆ— ಅವುಗಳಿಗೆ ಕರ್ಮವಿನಿಯೋಗವಿಲ್ಲದಿರುವುದು ಅಕರ್ಮಶೇಷನಾದ / ಕರ್ಮದ ಲೇಪವಿರದ ಆತ್ಮನ ಯಥಾರ್ಥಸ್ವರೂಪದ ಪ್ರಕಾಶಪಡಿಸುವಿಕೆಯಿಂದಾಗಿ ಎಂದು.) शुद्धादि-विशेषणस्य आत्मनः कर्मशेषत्वे प्रमाण-अभावात् (ಶುದ್ಧನೇ ಮೊದಲಾದ ವಿಶೇಷಣವುಳ್ಳ ಆತ್ಮನಿಗೆ ಕರ್ಮವು ಉಳಿದಿರುವುದೆಂಬುದಕ್ಕೆ ಪ್ರಮಾಣವಿಲ್ಲದಿರುವುದರಿಂದಾಗಿ),  तद् याथात्म्यं न केवलं कर्म-अनुपयोगि (ಅದರ ನಿಜಸ್ವರೂಪವು ಕೇವಲ ಕರ್ಮಕ್ಕೆ ಅನುಪಯುಕ್ತ ಮಾತ್ರವಲ್ಲ), किन्तु कर्मणा विरुध्यते च इति आह— याथात्म्यं च इति । (ಆದರೆ ಕರ್ಮಕ್ಕಿಂತ ಬೇರೆಯಾದುದೂ ಕೂಡ ಎಂದು ಹೇಳಿದೆ— ಆತ್ಮನ ನಿಜರೂಪವಾದರೋ ಶುದ್ಧತೆ, ಪಾಪಲೇಪವಿಲ್ಲದಿರುವಿಕೆ, ಏಕವಾಗಿರುವಿಕೆ, ನಿತ್ಯತೆ, ಶರೀರವಲ್ಲದಿರುವಿಕೆ, ಎಲ್ಲೆಡೆ ಇರುವಿಕೆ ಮುಂತಾಗಿ ಮುಂದೆ ಹೇಳಲಿರುವುದು ಎಂಬುದಾಗಿ.)  शुद्धो अहं स्वभावतो (ನಾನು ಸ್ವ-ಭಾವತಃ ಶುದ್ಧನೂ), अनागन्तुकेन अपि पाप्मना विद्धः (ನಿಜವಾಗಿ ಬಾರದಿರುವ ಪಾಪದಿಂದ ಲೇಪಿತನೆಂದು "पापोऽहं पापकर्माहं पापात्मा पापसम्भवः" ಇತ್ಯಾದಿಯಾಗಿ ಭಾವಿಸಿದರೂ), सर्वत्र एको अशरीरः (ಎಲ್ಲೆಡೆಯಲ್ಲೂ ಶರೀರರಹಿತನಾಗಿ ಒಬ್ಬನೇ ಇರುವ), आकाशोपमः, इति जानन् (ಆಕಾಶದಂಥವನೆಂದು ತಿಳಿದು), न कटाक्षेण अपि कर्म वीक्षते । (ಕಡೆಗಣ್ಣಿನಿಂದಲೂ ಕರ್ಮವನ್ನು ನೋಡುವುದಿಲ್ಲ.) किन्तु आपात-प्रतिपत्तिः अपि एतादृशी (ಆದರೆ, ತಾತ್ಕಾಲಿಕ, ವ್ಯಾವಹಾರಿಕ, ಪ್ರಾತಿಭಾಸಿಕವಾಗಿ ಇಂತಹ ಪ್ರವೃತ್ತಿಯು ತೋರಿಬಂದರೂ), निरुणद्धि एव कर्मप्रवृत्तिम् इति अर्थः। (ಸಹಜವಾದ ಕರ್ಮದಲ್ಲಿನ ಪ್ರವೃತ್ತಿಯನ್ನು ನಿರೋಧಿಸುತ್ತದೆಂದರ್ಥ.)


भाष्यम्
न हि एवं लक्षणम् आत्मनः- याथात्म्यम् उत्पाद्यं विकार्यम् आप्यं संस्कार्यं कर्तृ-भोक्तृ-रूपं वा येन कर्मशेषता स्यात् । 


ಇಂತಹ ಲಕ್ಷಣವಿರುವ ಆತ್ಮನ ಯಥಾರ್ಥ ಸ್ವರೂಪವು ಉತ್ಪಾದ್ಯವಾಗಲಿ (ಧಾನ್ಯಗಳ ಬೇಯಿಸುವಿಕೆಯಿಂದುಂಟಾಗುವ ಪುರೋಡಾಶ / ಚರುವೇ ಮುಂತಾದ ಹವಿರ್ದ್ರವ್ಯಗಳಂತೆ ಹೊಸದಾಗಿ ಉತ್ಪಾದಿಸಲ್ಪಡತಕ್ಕದ್ದಾಗಲಿ), ವಿಕಾರ್ಯವಾಗಲಿ (ಮೊಸರು, ಸೋಮರಸವೇ ಮುಂತಾದವುಗಳಂತೆ ಹೊತ್ತುಹೋದರೆ ವ್ಯತ್ಯಾಸವಾಗುವಂಥದ್ದಾಗಲಿ / ಮಾರ್ಪಾಡಾಗುವಂಥದ್ದಾಗಲಿ), ಆಪ್ಯವಾಗಲಿ (ಬಲವರ್ಧನೆಗೆ ಅಥವಾ ಸ್ವರ್ಗದಂತೆ ಪ್ರಾಪ್ತಿಮಾಡಿಕೊಳ್ಳಲು ಯೋಗ್ಯವಾದದ್ದಾಗಲಿ), ಸಂಸ್ಕಾರ್ಯವಾಗಲಿ (ಕುಟ್ಟಿ ಸಂಸ್ಕರಿಸತಕ್ಕ ಸಂಸ್ಕಾರಯೋಗ್ಯ / ಭತ್ತವೇ ಮುಂತಾದ ಧಾನ್ಯಾದಿಗಳಂತೆ ಸಂಸ್ಕರಣೆಗೆ ಅರ್ಹವಾಗಲಿ) ಅಥವಾ ಕರ್ತೃ (ಮಾಡುವವ, ಕರ್ಮಾಂಗ ಜೀವ) - ಭೋಕ್ತೃ (ಭೋಗಿಸುವವ, ಭೋಗಾಂಗ ಜೀವ) ರೂಪವಾಗಲಿ ಅಲ್ಲವೇ ಅಲ್ಲ; ಒಂದುವೇಳೆ ಹಾಗಿರುತ್ತಿದ್ದರೆ ಮಾತ್ರ ಅವನು ಕರ್ಮಕ್ಕೆ ಅಂಗವಾಗಿರಬಹುದಾಗಿತ್ತು. 


(ಆದರೆ, ಹಾಗಿಲ್ಲದೆ ಆತ್ಮನು ಸಿದ್ಧ, ನಿತ್ಯ, ಅವಿಕಾರ್ಯವಾದದ್ದರಿಂದ ಅವನನ್ನು ಉತ್ಪಾದಿಸಬೇಕಿಲ್ಲ, ಅವನು ವಿಕಾರ ಹೊಂದನು, ಅವನನ್ನು ಬಲಿಷ್ಠವಾಗಿಸುವಂತಿಲ್ಲ, ಯಾಕೆಂದರೆ ಅವನ ಬಲವು ಎಂದಿಗೂ ಕ್ಷಯಿಸದಂಥದ್ದು, ಅವನನ್ನು ಇನ್ನು ಪಡೆಯಬೇಕಾದ್ದಿಲ್ಲ, ಯಾಕೆಂದರೆ ಅವನು ಅನಾದ್ಯನಂತವಾಗಿ ನಿತ್ಯವಾಗಿ ಸದಾ ಇರುವವನೇ ಆಗಿರುವನು, ಹಾಗಾಗಿ ಅವನನ್ನು ಸಂಸ್ಕರಿಸಬೇಕಾದದ್ದೂ ಇಲ್ಲ, ಯಾಕೆಂದರೆ ಅವನು ನಿರ್ವಿಕಾರಿ. ಅವನು ಮಾಡುವವನೂ, ಉಣ್ಣುವವನೂ ಅಲ್ಲ, ಕೇವಲ ಶರೀರೇಂದ್ರಿಯಗಳೇ ಮಾಡುವುವೂ, ಉಣ್ಣುವುವೂ ಆಗಿರುವುದರಿಂದ ಆತ್ಮರೂಪರಾದ ನಮಗೆ ಕರ್ತೃತ್ವ, ಭೋಕ್ತೃತ್ವಗಳಿಲ್ಲ. ಉಪನಿಷತ್ತುಗಳು ಆತ್ಮಸ್ವರೂಪವನ್ನು ತಿಳಿಯಪಡಿಸಿ ಆ ತಿಳುವಳಿಕೆಯಿಂದಲೇ ಮುಕ್ತಿಯಾಗುವುದೆಂದು ಹೇಳುತ್ತವೆ; ಯಾವ ಉಪನಿಷತ್ತಿನಲ್ಲಿಯೂ ಈ ಸ್ವರೂಪವನ್ನು ಕರ್ಮಕ್ಕೆ ಅಂಗವಾಗಿ ಹೇಳಿಲ್ಲ.)


टीका
किं च यः कर्मशेषः सः, उत्पाद्यो दृष्टो यथा पुरोडाशादिः । विकार्यः सोमादिः । आप्यो मन्त्रादिः । संस्कार्यो व्रीह्यादिः, तद् उत्पाद्यादि-रूपत्वं व्यापकं व्यावर्तमानम् आत्म-याथात्म्यस्य कर्मशेषत्वम् अपि व्यावर्तयति । तथा आत्मयाथात्म्यं कर्तृ भोक्तृ च न भवति । येन मम इदं समाहित-साधनं ततो मया कर्तव्यम् इति अहंकारान्वय-पुरःसरः कर्तृ-अन्वयः स्याद् इति आह न हि एवम् इति । 


ಟೀಕೆ

ಮತ್ತೇನೆಂದರೆ, ಯಾವನು / ಯಾವುದು  ಕರ್ಮಲೇಪ ಉಳ್ಳವನೋ / ಉಳ್ಳದ್ದೋ ಅವನು / ಅದು ಹೊಸದಾಗಿ ಉತ್ಪಾದಿಸಲ್ಪಡತಕ್ಕವನು / ಪಡತಕ್ಕದ್ದು (ಸೃಷ್ಟಿಸಲ್ಪಡತಕ್ಕವನು, ಸೃಜಿಸಲ್ಪಡತಕ್ಕವನು), ಯಜ್ಞಹವಿಸ್ಸಾದ ಧಾನ್ಯವನ್ನು ಬೇಯಿಸಿ ಮಾಡಿದ ಪುರೋಡಾಶದಂತೆ (ಚರುವಿನಂತೆ);  ಸೋಮರಸದಂತೆ ಹೊತ್ತು ಕಳೆದಂತೆ ವಿಕಾರವನ್ನು ಹೊಂದಿ ಕೆಡುವುದು (ಹಾಳಾಗುವುದು); ಮಂತ್ರಗಳಂತೆ ಪ್ರಾಪ್ತಿಮಾಡಿಕೊಳ್ಳುವಂಥದ್ದು, ಸಿದ್ಧಿಸಿಕೊಳ್ಳುವಂಥದ್ದು; (ಕರ್ಮಶೇಷವಾಗಿದ್ದ ಪಕ್ಷದಲ್ಲಿ) ಧಾನ್ಯಾದಿಗಳಂತೆ ಸಂಸ್ಕರಿಸಲ್ಪಡತಕ್ಕದ್ದಾಗಿ, ಉತ್ಪಾದ್ಯಾದಿ ರೂಪತ್ವವುಳ್ಳ, ವ್ಯಾಪಕವಾಗಿ ಹಬ್ಬಿರುವ ಆತ್ಮದ ನಿಜಸ್ವರೂಪದ ಕರ್ಮಶೇಷವನ್ನೂ ಪುನರಾವರ್ತಿಸುತ್ತದೆ. (ಆದರೆ) ಹಾಗೆ ಆತ್ಮದ ನಿಜರೂಪವು ಕರ್ತೃ (ಮಾಡುವವನು) ಹಾಗೂ ಭೋಕ್ತೃ (ಅನುಭವಿಸುವವನು) ಆಗಿರುವುದಿಲ್ಲ. ಯಾವ ನನ್ನ ಈ (ಮನೋಬುದ್ಧೀಂದ್ರಿಯಗಳನ್ನು) ನಿಯಂತ್ರಿಸಿ ಮಾಡುವ ಸಾಧನೆ, (ಆತ್ಮಜ್ಞಾನವಾದ) ಬಳಿಕ ನನ್ನಿಂದ ಮಾಡಲ್ಪಡಬೇಕು ಎಂದು ಅಹಂಕಾರ (ಮಮಕಾರ) ಪೂರ್ವಕವಾಗಿ ಕರ್ತೃತ್ವವು ಅನ್ವಯಿಸಲ್ಪಡುವ ಸಾಧ್ಯತೆಯಿದೆ ಎಂಬ ಕಾರಣಕ್ಕಾಗಿ ಭಾಷ್ಯಕಾರ ಶಂಕರರು ಹೇಳಿದರು "ಈ ರೀತಿಯ (ಲಕ್ಷಣವುಳ್ಳ ಆತ್ಮನ ಯಥಾರ್ಥಸ್ವರೂಪವು ಉತ್ಪಾದ್ಯ, ವಿಕಾರ್ಯ, ಆಪ್ಯ, ಸಂಸ್ಕಾರ್ಯ ಅಥವಾ ಕರ್ತೃ-ಭೋಕ್ತೃ-ರೂಪವಾದದ್ದು, ಯಾವ ಇದರಿಂದಾಗಿ ಕರ್ಮಲೇಪ / ಮಾಡಬೇಕಾದ ಕರ್ಮದ ಉಳಿಕೆಯು ಇರಲು ಸಾಧ್ಯ) ಇಲ್ಲ " ಎಂಬುದಾಗಿ. 


भाष्यम्
सर्वासाम् उपनिषदाम् आत्म-याथात्म्य-निरूपणेन एव उपक्षयात् । गीतानां मोक्षधर्माणां च एवं-परत्वात् । तस्माद् आत्मनः- अनेकत्व-कर्तृत्व-भोक्तृत्वादि च अशुद्धत्व-पापविद्धत्वादि च उपादाय लोक-बुद्धि-सिद्धं कर्माणि विहितानि ।


ಎಲ್ಲ ಉಪವಿಷತ್ತುಗಳ ಪರಿಸಮಾಪ್ತಿಯು ಆತ್ಮನ ಯಥಾರ್ಥ ಸ್ವರೂಪದ ನಿರೂಪಣೆ ಮಾಡುವುದರಲ್ಲೇ ಇದೆ. ಭಗವದ್ಗೀತೆ ಹಾಗೂ ಮೋಕ್ಷಧರ್ಮಗಳ ತಾತ್ಪರ್ಯವೂ ಇದೇ ಆಗಿದೆ. (ಇವುಗಳಲ್ಲಿ ಕರ್ಮವನ್ನೂ ಉಪಾಸನೆಯನ್ನೂ ಹೇಳಿದ್ದರೂ ಆತ್ಮಜ್ಞಾನದಿಂದ ಮುಕ್ತಿಯಾಗುವುದೆಂಬುದನ್ನೇ ತಾತ್ಪರ್ಯದಿಂದ ಹೇಳಿರುತ್ತದೆ.) ಹಾಗಾದ್ದರಿಂದ ಆತ್ಮನ ಅನೇಕತ್ವ (ಆತ್ಮರು ಅನೇಕರು), ಕರ್ತೃತ್ವ (ಆತ್ಮನು ಕರ್ಮವನ್ನು ಮಾಡುವವನು), ಭೋಕ್ತೃತ್ವಾದಿಗಳೂ (ಫಲವನ್ನು ಅನುಭವಿಸುವವನೂ), ಅಶುದ್ಧತೆ (ಅಶುದ್ಧನು), ಪಾಪಲೇಪತ್ವಾದಿಗಳನ್ನೂ (ಪಾಪಿಯೂ ಮುಂತಾಗಿ) (ಸಾಮಾನ್ಯ) ಜನರು ತಿಳಿದುಕೊಂಡಿರುವುದನ್ನೇ ಪರಿಗಣಿಸಿ, ಅಂಥವರಿಗಾಗಿಯೇ ವೇದೋಕ್ತಕರ್ಮಾದಿಗಳು ವಿಧಿಸಲ್ಪಟ್ಟಿರುವುವು. 


(ವೇದದಲ್ಲಿ ಕರ್ಮವನ್ನು ವಿಧಿಸಿದ್ದರೂ ಆತ್ಮರು ಅನೇಕರೆಂದಾಗಲಿ ಕರ್ತೃ-ಭೋಕ್ತೃಗಳೆಂದಾಗಲಿ ಸತ್ಯವೆಂದು ಎಲ್ಲಿಯೂ ಹೇಳಿಲ್ಲ; ಸಾಮಾನ್ಯ ಜನರ ತಿಳಿವಳಿಕೆಯ ದೃಷ್ಟಿಯಿಂದ ಕರ್ಮವನ್ನು ವಿಧಿಸಿದೆ, ಅಷ್ಟೆ.)


टीका


ननु (ಅಲ್ಲವೆ?), उपनिषदां जपोपयोगित्वाद् (ಉಪನಿಷತ್ತಿನ ಜನೋಪಯೋಗಿತ್ವದಿಂದಾಗಿ), अन्यस्य च प्रमाणस्य अदर्शनात् (ಹಾಗೂ ಬೇರೆ ಪ್ರಮಾಣವು ಕಾಣದಿರುವುದರಿಂದ), नास्ति एव एतादृशम् आत्मयाथात्म्यं (ಇಂತಹ ಕರ್ಮಶೇಷವಾದ ಆತ್ಮಸ್ವರೂಪವು ಇಲ್ಲವೇ ಇಲ್ಲದ್ದರಿಂದ), तत्र आह (ಅಲ್ಲಿ ಹೇಳಿದರು ಶಂಕರರು) — सर्वासाम् इति । (ಎಲ್ಲ ಉಪನಿಷನ್ಮಂತ್ರಗಳ..ಎಂದು ಮುಂತಾಗಿ ತಮ್ಮ ಭಾಷ್ಯದಲ್ಲಿ). यत्परः शब्दः सः, शब्दार्थः, इति मीमांसा-प्रसिद्धेः (ಯಾವುದನ್ನು ಕುರಿತು ಶಬ್ದವು ಹೇಳುವುದೋ ಅದೇ ಶಬ್ದಾರ್ಥವು ಎಂದು ಮೀಮಾಂಸಾಶಾಸ್ತ್ರದಲ್ಲಿ ಪ್ರಸಿದ್ಧವಾಗಿರುವುದರಿಂದ), सर्वासाम् उपनिषदां च एकात्मे तात्पर्यदर्शनात् (ಹಾಗೂ ಎಲ್ಲ ಉಪನಿಷತ್ತುಗಳಿಗೂ ಏಕಾತ್ಮನಲ್ಲೇ ತಾತ್ಪರ್ಯವು ತೋರಿಬರುವುದರಿಂದ), न जपोपयोगित्वम् उपनिषदां शक्यं वक्तुम् । (ಉಪನಿಷತ್ತುಗಳ ಜನೋಪಯೋಗಿತ್ವವನ್ನು ಹೇಳಲು ಸಾಧ್ಯವಿಲ್ಲ, ಅರ್ಥಾತ್ ಅವಿದ್ಯೆಯುಳ್ಳ ಆತ್ಮಾನಾತ್ಮವಿವೇಕವಿಲ್ಲದ ಲೌಕಿಕ ಕಾಮನೆಗಳುಳ್ಳ ಜನಸಾಮಾನ್ಯರಿಗೆ ಉಪನಿಷತ್ತುಗಳು ಪ್ರಯೋಜನಕಾರಿಯೆನ್ನುವುದು ಕಷ್ಟಸಾಧ್ಯ.) तथाहि, (ಹಾಗಾಗಿ), ईशा वास्यम् इति उपक्रम्य (ಈಶಾವಾಸ್ಯಮ್ ಎಂದು ಆರಂಭಿಸಿ), स पर्यगाच्छुक्रम् इति उपसंहाराद् (ಸ ಪರ್ಯಗಾಚ್ಛುಕ್ರಮ್ ಎಂದು ಉಪಸಂಹರಿಸಿರುವುದರಿಂದ), अनेजदेकं, तदन्तरस्य सर्वस्य इति अभ्यासदर्शनात् (ಅನೇಜದೇಕಂ, ತದನ್ತರಸ್ಯ ಸರ್ವಸ್ಯ ಎಂದು ಅಭ್ಯಾಸಮಾಡಲು ತೋರಿಕೊಟ್ಟಿರುವುದರಿಂದ), नैनद्देवा आप्नुवन् इति अपूर्वता-सङ्कीर्तनात्मकः (ನೈನದ್ದೇವಾ ಆಪ್ನುವನ್ ಎಂದು ಅಪೂರ್ವತೆಯನ್ನು ಸಂಕೀರ್ತನೆ ಮಾಡುವುದರಿಂದ), मोहः कः शोकः, एकत्वम् अनुपश्यतः, इति फलवत्ता-सङ्कीर्तनात् (ಮೋಹಃ ಕಃ ಶೋಕಃ, ಏಕತ್ವಮ್ ಅನುಪಶ್ಯತಃ, ಎಂದು ಫಲವನ್ನು ಹೇಳಿ ಹೊಗಳಿರುವುದರಿಂದ), कुर्वन्नेवेह इति जिजीविषोः भेददर्शिनः कर्मकरण-अनुवादेन (ಕುರ್ವನ್ನೇವೇಹ ಎಂದು ಜೀವಿಸುವ ಇಚ್ಛೆಯುಳ್ಳ ಜೀವ-ಜಗತ್-ಈಶ್ವರ ಭೇದವನ್ನು ಕಾಣುವವನಿಗೆ ಕರ್ಮವನ್ನು ಮಾಡಬೇಕೆಂದು ಹೇಳುವುದರಿಂದ), असुर्या नाम ते, इति निन्दया एकात्म्य-दर्शनस्य स्तुतत्वात् (ಅಸುರ್ಯಾ ನಾಮ ತೇ, ಎಂದು ನಿಂದಿಸುವ ಮೂಲಕ ಏಕಾತ್ಮತೆಯ ದರ್ಶನವನ್ನು ಸ್ತುತಿಸುವುದರಿಂದಾಗಿ),  तस्मिन्नपो मातरिश्वा दधाति इति युक्ति-अभिदानात् च (ಹಾಗೂ ತಸ್ಮಿನ್ನಪೋ ಮಾತರಿಶ್ವಾ ದಧಾತಿ ಎಂಬುದಾಗಿ ಉಪಾಯವನ್ನು ಹೇಳಿರುವುದರಿಂದ), अस्याः, तावद् उपनिषदः, ऐकात्म्य-तात्पर्यं दृश्यते । (ಈ ಉಪನಿಷತ್ತಿಗೆ ಆತ್ಮವೊಂದೇ ಇರುವುದೆಂಬ ಏಕಾತ್ಮ್ಯವೇ ತಾತ್ಪರ್ಯವೆಂದು ಕಂಡುಬರುತ್ತದೆ.) एवम् अन्यासाम् अपि उपनिषदाम् (ಹೀಗೆಯೇ ಇತರ ಉಪನಿಷತ್ತುಗಳಿಗೂ), उपक्रम-उपसंहार-एकरूपि-आभास-अपूर्वता-फलवत्ता-अर्थवाद-युक्ति-उपपादनानि षट् तात्पर्य-लिङ्गानि विकल्पेन समुच्चयेन च अस्माभिः तत्त्व-आलोके दर्शितानि इति न इह प्रतन्यन्ते । (ಉಪಕ್ರಮ / ಪ್ರಾರಂಭ, ಉಪಸಂಹಾರ / ಮುಕ್ತಾಯ, ಏಕಾತ್ಮರೂಪತ್ವದ ಅಭಿಪ್ರಾಯ / ಆಭಾಸ, ಅಪೂರ್ವತೆ-ಫಲವತ್ತತೆ, ಅರ್ಥವಾದ / ಉಪಕಥೆ, ಯುಕ್ತಿಯುಕ್ತ ಉಪಪಾದನೆ / ಪ್ರತಿಪಾದನೆ / ಸಮರ್ಥನೆ— ಎಂಬೀ ೬ ತಾತ್ಪರ್ಯಚಿಹ್ನೆಗಳು ಬೇರೆ ಬೇರೆಯಾಗಿ ಹಾಗೂ ಸಮೂಹಾರ್ಥದಲ್ಲಿ ನಮ್ಮಿಂದ ತತ್ತ್ವದರ್ಶನದಲ್ಲಿ ತೋರಿಸಲ್ಪಟ್ಟಿವೆ ಎಂದಿಲ್ಲಿ ವಿವರಿಸುತ್ತಿಲ್ಲ.) किञ्च प्रत्यय-संवादः अपि बलवत्त्वे कारणं प्रसिद्धम् । (ಆದರೂ, ಬೇರೆ ಬೇರೆಯ ವ್ಯಕ್ತಿಗಳ ಸಂವಾದರೂಪದಲ್ಲಿ ಹೇಳುವಿಕೆಯೂ ಸಹ ಬಲವಾದ ಪ್ರತಿಪಾದನೆಯಲ್ಲಿ ಕಾರಣವಾಗುತ್ತದೆಯೆಂಬುದು ಪ್ರಸಿದ್ಧವಾದುದು.) विद्यते च उपनिषदर्थे गीतादि-संवादः (ಹಾಗೆಯೇ, ಉಪನಿಷತ್ತಿನ ಅರ್ಥವಿಸ್ತಾರಕ್ಕಾಗಿ ಭಗವದ್ಗೀತಾ ಮುಂತಾದ ಸಂವಾದವಿರುವುದು), तस्माद् उपनिषत्-पदसमन्वयेन अवगम्यमानम् ऐकात्म्यं न प्रमाणान्तर-अनुपलम्भ-विरोधेन अपलपनीयम् । (ಹಾಗಾಗಿ, ಉಪನಿಷತ್ ಪದದ ಸಮನ್ವಯದಿಂದ ತಿಳಿದುಬರುವ ಏಕಾತ್ಮತ್ವವು / ಐಕಾತ್ಮ್ಯವು ಬೇರೆ ಪ್ರಮಾಣಗಳಿಂದ ಉಪಲಬ್ಧ / ಪ್ರಾಪ್ತ ವಾಗದಿರುವ ವೈರುಧ್ಯದಿಂದಾಗಿ ಆ ಬಗ್ಗೆ ಅಪಲಾಪ / ಗೊಣಗುವಿಕೆ / ತಿರಸ್ಕಾರ / ಪ್ರಲಾಪ ಮಾಡಬಾರದು.) यथा इन्द्रियान्तरेण अन्-अवगम्यमानम् अपि रूपं (ಬೇರೆ ಇಂದ್ರಿಯಗಳಿಂದ ತಿಳಿಯಲಸಾಧ್ಯವಾದ ರೂಪವನ್ನು ಹೇಗೆ), चक्षुषा अवगम्यमानं न अपह्नूयते (/अपह्नुवते) (ಕಣ್ಣಿನಿಂದ ತಿಳಿಯಲಾಗುವುದರಿಂದ ಅಲ್ಲಗಳೆಯುವುದಿಲ್ಲವೋ) , तथा ऐकात्म्यम् अपि न अपह्नवार्हम् इति आह— गीतानाम् इति । (ಹಾಗೆಯೇ, ಐಕಾತ್ಮ್ಯ / ಜಗತ್ತಿನಲ್ಲಿ ಅನೇಕಾತ್ಮಗಳಿಲ್ಲ, ಒಂದೇ ಆತ್ಮವಿದೆಯೆಂಬುದೂ ಕೂಡ ತಿರಸ್ಕಾರಯೋಗ್ಯವಲ್ಲ ಎಂದು ಭಾಷ್ಯಕಾರ ಶಂಕರರು ಹೇಳಿರುವರು— ಗೀತೆಗಳ...ಎಂದು ಮುಂತಾಗಿ ಎಂಬುದಾಗಿ.)


"समं सर्वेषु भूतेषु तिष्ठन्तं परमेश्वरम् । 
विनश्यत्स्वविनश्यन्तं यः पश्यति स पश्यति ॥ " 
 " ವಿನಾಶಹೊಂದುವಂತಹ ಎಲ್ಲ ಚರಾಚರಗಳಲ್ಲೂ ಸಮನಾಗಿ ಇರುವ ಅವಿನಾಶಿಯಾದ ಪರಮೇಶ್ವರನನ್ನು ಯಾವನು ಕಾಣುತ್ತಾನೋ ಅವನೇ ನಿಜವಾದದ್ದನ್ನು ಕಾಣುತ್ತಾನೆ."
इत्यादि-गीतानाम् । ಮುಂತಾದ ಭಗವದ್ಗೀತಾ ಸಂದೇಶಗಳು.


"एक एव हि भूतात्मा भूते भूते व्यवस्थितः ।
एकधा बहुधा चैव दृश्यते जलचन्द्रवत् ॥"
 " ಒಬ್ಬನೇ ಒಬ್ಬ ಸಕಲ ಭೂತಾಂತರಾತ್ಮನು ಪ್ರತಿಯೊಂದು ಚರಾಚರಗಳಲ್ಲೂ ನೆಲೆಸಿದ್ದು, ಚಂದ್ರನ ಜಲಬಿಂಬದಂತೆ ಒಬ್ಬನೇ ಆಗಿಯೂ ಕೂಡ, ಅನೇಕ ವಿಧವಾಗಿಯೂ, ತೋರಿಬರುತ್ತಾನೆ. "


इत्यादि-मोक्षशास्त्राणां च ऐकात्म्य-परत्वाद् इति अर्थः । (ಇತ್ಯಾದಿ ಮೋಕ್ಷಶಾಸ್ತ್ರಗಳೂ ಏಕಾತ್ಮತತ್ತ್ವದ ಪರವಾಗಿವೆ ಎಂದರ್ಥ.)  यदि एतादृशम् आत्मतत्त्वम् (ಒಂದುವೇಳೆ ಆತ್ಮತತ್ತ್ವವು ಇಂತಹದ್ದಾದರೆ), तर्हि निरधिकारित्वात् कर्मकाण्डम् उच्छिद्येत इति अपि न आशङ्कनीयम् इति आह— तस्माद् इति । (ಹಾಗಿದ್ದರೆ, ಅಧಿಕಾರವಿಲ್ಲದಿರುವುದರಿಂದ ವೇದದ ಕರ್ಮಕಾಂಡವನ್ನು ಅಲ್ಲಗಳೆಯಬೇಕು ಎಂದೂ ಕೂಡ ಸಂದೇಹಪಡಬಾರದು ಎಂದು ಹೇಳಿದರು ಶಂಕರರು— ಆದ್ದರಿಂದ...ಎಂಬುದಾಗಿ.) औपनिषद्-आत्म-याथात्म्य-विज्ञानवतः, इष्यते, एव कर्मकाण्ड-अप्रामाण्यम् । (ಉಪನಿಷತ್ತಿನ ಆತ್ಮದ ಯಥಾರ್ಥಜ್ಞಾನವುಳ್ಳವನಿಗೇ, ಸರಿಹೊಂದುತ್ತದೆ ಕರ್ಮಕಾಂಡವು ಪ್ರಮಾಣವಲ್ಲವೆಂಬುದು.) यथा "न हिंस्यात् सर्वा भूतानि " इति निषेध-शास्त्रार्थ-निश्चयवते (ಹೇಗೆ " ಎಲ್ಲ ಜೀವಿಗಳನ್ನೂ ಹಿಂಸಿಸಬಾರದು " ಎಂಬ ನಿಷೇಧನಿಯಮವನ್ನು ನಿಶ್ಚಯಿಸಿಕೊಂಡವನಿಗೆ), इष्यते, एव श्येनादि-विधि-अप्रामाण्यम् । (ಶ್ಯೇನಾದಿ ಪ್ರಾಣಿಬಲಿಯುಕ್ತ ವಿಧಿಗಳು ಪ್ರಮಾಣವಲ್ಲವೆಂಬುದು ಸರಿಹೊಂದುತ್ತದೆ.) यथा च तीव्र-क्रोध-आक्रान्त-स्वान्तं प्रति एव श्येनादि-विधि-प्रामाण्यं, तथा मिथ्यात्मदर्शिनं प्रति एव कर्म-विधि-प्रामाण्यम् इति अर्थः । (ಹೇಗೆ ತೀವ್ರವಾದ ಕೋಪದಿಂದ ಆಕ್ರಾಂತವಾದ ಅಂತಃಕರಣವುಳ್ಳವನಿಗೇ ಶ್ಯೇನಾದಿ ವಿಧಿಗಳು ಪ್ರಾಮಾಣ್ಯವಾಗುತ್ತವೆಯೋ, ಹಾಗೆಯೇ ಅನಾತ್ಮದಲ್ಲಿ ಆತ್ಮವನ್ನು ಕಾಣುವವನಿಗೇ / ನಶ್ವರದಲ್ಲಿ ಶಾಶ್ವತತೆಯನ್ನು ಕಾಣುವವನಿಗೇ ವೇದೋಕ್ತಕರ್ಮವಿಧಿಯು ಪ್ರಾಮಾಣ್ಯವಾಗುತ್ತದೆಂದರ್ಥ.)


भाष्यम्
(कर्मणि कस्य अधिकारः—) 
यः- हि कर्मफलेन अर्थी दृष्टेन ब्रह्मवर्चस्-आदिना अदृष्टेन स्वर्गादिना च द्विजातिः अहं न काण-कुब्जत्वादि-अनधिकार-प्रयोजक-धर्मवान् इति आत्मानं मन्यते सः- अधि-क्रियते कर्मसु इति हि अधिकारविदः- वदन्ति ।


(ಕರ್ಮದಲ್ಲಿ ಯಾರಿಗೆ ಅಧಿಕಾರ?—)


ಯಾವನಾದರೋ (ಇಲ್ಲಿ) ತೋರುವ ಬ್ರಹ್ಮವರ್ಚಸಾದಿಗಳು ಹಾಗೂ ಕಾಣದ ಸ್ವರ್ಗಾದಿಗಳಂತಹ ಕರ್ಮಫಲವನ್ನು ಬಯಸುವುದರಿಂದ (ಕರ್ಮಫಲದ) ಅರ್ಥಿಯೆನಿಸಿರುವನೋ, ಯಾವನು ನಾನು ದ್ವಿಜಾತಿಯವನು (ಬ್ರಹ್ಮ, ಕ್ಷಾತ್ರ, ವೈಶ್ಯ), ಕುರುಡುತನ-ಕುಂಟತನವೇ ಮುಂತಾದ ಅನಧಿಕಾರಕ್ಕೆ ಬೇಕಾದ  ಧರ್ಮಗಳು ನನ್ನಲ್ಲಿಲ್ಲ ಎಂದು ತನ್ನನ್ನು ತಾನು ತಿಳಿಯುತ್ತಾನೋ ಅಂಥವನು ವೇದೋಕ್ತಕರ್ಮಗಳಲ್ಲಿ ಅಧಿಕಾರಿಯಾಗಿರುತ್ತಾನೆ ಎಂದಲ್ಲವೆ ಅಧಿಕಾರ (ದ ಮರ್ಮ)ವನ್ನು ಬಲ್ಲವರು / ಜ್ಞಾನಿಗಳು ಹೇಳುತ್ತಾರೆ? (ಜೈಮಿನಿಗಳ ಪೂರ್ವಮೀಮಾಂಸಾಸೂತ್ರ ೬.೧.೨೫ ರಿಂದ ೪೨ನೆಯ ಸೂತ್ರದ ವರೆಗಿನ ಶಾಬರಭಾಷ್ಯದಲ್ಲಿ ವೇದೋಕ್ತಕರ್ಮಕ್ಕೆ ಬೇಕಾದ ಯೋಗ್ಯತೆಯನ್ನು ನಿರ್ಣಯಿಸಲಾಗಿದೆ.)


टीका


अत्र जैमिनिप्रभृतीनां संमतिम् आह— यः, हि इत्यादिना । ( ಇಲ್ಲಿ / ಈ ವಿಚಾರದಲ್ಲಿ ಜೈಮಿನಿ ಮುಂತಾದ ಪೂರ್ವಮೀಮಾಂಸಕರ ಒಪ್ಪಿಗೆಯನ್ನು / ಸಹಮತವನ್ನು ಹೇಳಿದೆ— ಯಾವನಾದರೋ...ಇತ್ಯಾದಿ.) अर्थित्वादि-युक्तस्य कर्मणि अधिकारः षष्ठे अध्याये प्रतिष्ठापितः । (ಕಾಮನೆ / ಬಯಕೆಗಳಿಂದ ಕೂಡಿದವನಿಗೇ ಕರ್ಮದಲ್ಲಿ ಅಧಿಕಾರವೆಂದು ಆರನೆಯ ಅಧ್ಯಾಯದಲ್ಲಿ ಸ್ಪಷ್ಟಪಡಿಸಿದೆ.) अर्थित्वादि च मिथ्याज्ञान-निदानम् । ( ಹಾಗೆಯೇ, ಕಾಮನೆಗಳು ಮಿಥ್ಯಾಜ್ಞಾನಕ್ಕೆ ಮುಖ್ಯಕಾರಣಗಳು.) न हि नभोवत् निष्क्रियस्य स्वत एव दुःख-असंसर्गिणः (ಆಗಸದಂತೆ ನಿಷ್ಕ್ರಿಯವಾದ ಸ್ವತಃ ದುಃಖದ ಸಂಸರ್ಗವಿಲ್ಲದ), परमानन्दस्वभावस्य सुखं मे स्यात् (ಪರಮಾನಂದಸ್ವಭಾವದ ನನಗೆ ಸುಖವು ಇರಲಿ) , दुःखं मे मा भूत् (ದುಃಖವುಂಟಾಗದಿರಲಿ), इति अर्थित्वं (ಎಂಬ ಬಯಕೆಯು), शरीरेन्द्रिय-सामर्थ्येन च समर्थोऽहम् इति अभिमानित्वं (ಹಾಗೂ ಶರೀರ, ಇಂದ್ರಿಯಗಳ ಸಾಮರ್ಥ್ಯದಿಂದ ನಾನು ಸಮರ್ಥನು ಎಂಬ ಅಭಿಮಾನಿತ್ವವು),  मिथ्याज्ञानं विना सम्भवति इति अर्थः ॥ (ಮಿಥ್ಯಾಜ್ಞಾನದ ಹೊರತು ಉಂಟಾಗದು ಎಂದರ್ಥ.)


भाष्यम्
(अनुबन्ध-चतुष्टयम्—) 
तस्माद् एते मन्त्राः आत्मनः याथात्म्यप्रकाशनेन आत्मविषयं स्वाभाविकम् अज्ञानं निवर्तयन्तः शोक-मोहादि-संसारधर्म-विच्छित्ति-साधनम्-आत्मैकत्वादि-विज्ञानम् उत्पादयन्ति । इति एवम् उक्त-अधिकारि-अभिधेय-सम्बन्ध-प्रयोजनात् , मन्त्रान् संक्षेपतः- व्याख्यास्यामः ॥


(ಅನುಬಂಧಚತುಷ್ಟಯ— )


ಹಾಗಾಗಿ ಈ (ಈಶಾವಾಸ್ಯೋಪನಿಷತ್ತಿನ)  ಮಂತ್ರಗಳು ಆತ್ಮನ ಯಥಾರ್ಥ (ನಿಜವಾದ) ಸ್ವರೂಪವನ್ನು ಪ್ರಕಾಶಪಡಿಸುವ ಮೂಲಕ (ತೋರಿಸಿಕೊಟ್ಟು) ಆತ್ಮವಿಷಯದ (ಅವಿಚಾರದ ಸ್ಥಿತಿಯಲ್ಲಿ ಸ್ವಭಾವಸಹಜವಾಗಿರುವ) ಸ್ವಾಭಾವಿಕವಾದ ಅಜ್ಞಾನವನ್ನು ಪರಿಹರಿಸುತ್ತಾ (ಹಿಮ್ಮೆಟ್ಟಿಸುತ್ತಾ) ಶೋಕ (ದುಃಖ)-ಮೋಹ ಮುಂತಾದ ಸಂಸಾರ (ಸೃಷ್ಟಿ) ಧರ್ಮವನ್ನು ಛೇದಿಸುವ (ಛಿದ್ರಗೊಳಿಸುವ) ಸಾಧನವಾದ ಆತ್ಮೈಕತ್ವದ (ಆತ್ಮವೊಂದೇ ಇರುವ ಸತ್ಯ ಎಂಬ) ವಿಶೇಷ ಜ್ಞಾನವನ್ನು (ವಿಜ್ಞಾನವನ್ನು) ಉಂಟುಮಾಡುತ್ತವೆ. ಈ ರೀತಿಯಾಗಿ (ಮುಮುಕ್ಷುರೂಪವಾದ) ಅಧಿಕಾರಿ, (ಆತ್ಮೈಕರೂಪವಾದ) ಅಭಿಧೇಯ / ವಿಷಯ, (ಪ್ರತಿಪಾದ್ಯ ಆತ್ಮ- ಪ್ರತಿಪಾದಕ ಉಪನಿಷತ್ ರೂಪದ ಅಥವಾ ಕರ್ಮಕಾರಣವಾದ ಅಜ್ಞಾನನಿವಾರಣೆಯಿಂದ ಆತ್ಮಜ್ಞಾನವು ಮುಕ್ತಿಯನ್ನೀಯುವುದು ಎಂಬ) ಸಂಬಂಧ (ಹಾಗೂ ಅಜ್ಞಾನನಿವೃತ್ತಿ ಮತ್ತು ಪರಮಾನಂದಪ್ರಾಪ್ತಿರೂಪವಾದ ಮುಕ್ತಿಯೆಂಬ) ಪ್ರಯೋಜನಗಳು ಉಕ್ತವಾಗಿರುವುದರಿಂದ, ಮಂತ್ರಗಳನ್ನು ಸಂಕ್ಷೇಪವಾಗಿ ವ್ಯಾಖ್ಯಾನಿಸುತ್ತೇವೆ.


टीका


यस्माद् आत्म-याथात्म्य-प्रकाशकाः, मन्त्राः (ಯಾವ ಕಾರಣದಿಂದ ಆತ್ಮದ ಯಾಥಾತ್ಮ್ಯ / ಯಥಾರ್ಥಸ್ವರೂಪ ವನ್ನು ಪ್ರಕಾಶಪಡಿಸುವ ಮಂತ್ರಗಳು), न कर्म-विधि-शेषभूताः (ಕರ್ಮವಿಧಿಗಳಿಗೆ ಅಂಟವು), न च मानान्तर-विरुद्धाः (ಹಾಗೂ ಬೇರೆ ಅರ್ಚನಾದಿಗಳಿಗೆ ವಿರುದ್ಧವಲ್ಲದವುಗಳು), तस्मात् प्रयोजनादिमत्त्वम् अपि तेषां सिद्धम् इति आह— तस्माद् एते, इति । (ಹಾಗಾಗಿ ಅವುಗಳಿಗೆ ಪ್ರಯೋಜನಾದಿಗಳು ಸಾಧಿತವಾದವೆಂದು ಹೇಳಿದರು ಭಗವತ್ಪಾದ ಶಂಕರರು— ಹಾಗಾದ್ದರಿಂದ ಇವು...ಎಂದು.)  व्याख्येयत्वम् उक्त्वा प्रतिपदं व्याचष्टे— ईशा इति ॥ (ವ್ಯಾಖ್ಯಾನಕ್ಕೆ ಯೋಗ್ಯವಾದದ್ದೆಂದು ಹೇಳಿ, ಪ್ರತಿಯೊಂದು ಪದವನ್ನೂ ವಿವರಿಸುತ್ತಾರೆ— ಈಶನಿಂದ ಎಂದು ಮುಂತಾಗಿ.)

Preface 

https://anchor.fm/dr-krishna-moorthy-dambe/episodes/Preface-of-Shankara-bhashya-of-Ishavasyopanishad-ehtbin 

(Audio link)





२. रामानुजानुयायि-नारायणकृता विशिष्टाद्वैतीय-प्रकाशिका


अथ वाजसनेयिनां संहितान्तिमाध्यायो व्याख्यायते—


सर्वेशानः सर्वभूतान्तरात्मा दोषानर्हः सर्वविद्यैकवेद्यः ।
कर्माराध्यः साध्यभक्त्यैकलभ्यः श्रीमान् व्यक्तो वाजिनां संहितान्ते ॥


रजस्तमःप्रचुर-करण-कलेवर-सृष्टिविशिष्टत्वाद् ईश्वरो अहम् अहं भोगी इत्यादि-भगवद्-उक्त-प्रक्रियया स्वतन्त्रोऽहं देवतान्तर-परतन्त्रोऽहम् इति च भ्राम्यतः तत्त्व-बुभुत्स (?बुभुक्ष)या उपसन्नस्य शिष्यस्य स्वतन्त्रता-आत्मभ्रमादि-निवृत्त्यर्थं चिदचिदात्मकस्य प्रपञ्चस्य परमपुरुषायत्त-स्वरूप-स्थिति-प्रवृत्तित्वम् उपदिशति ॥


೨. ರಾಮಾನುಜಾನುಯಾಯಿ-ನಾರಾಯಣಕೃತಾ ವಿಶಿಷ್ಟಾದ್ವೈತೀಯ-ಪ್ರಕಾಶಿಕಾ


ಬಳಿಕ ವಾಜಸನೇಯಿಗಳ ಸಂಹಿತೆಯ ಕೊನೆಯ ಅಧ್ಯಾಯವು ವ್ಯಾಖ್ಯಾನಿಸಲ್ಪಡುತ್ತದೆ—


ಎಲ್ಲರಧಿಪತಿಯಾದ ಎಲ್ಲರಾತ್ಮನೆ ಆದ
ದೋಷವರ್ಜಿತನಾದ ವೇದವೇದ್ಯ |
ಕರ್ಮಸೇವ್ಯನೆ ಆದ ಸಾಧ್ಯಭಕ್ತರಿಗೊಲಿವ 
ಸಿರಿಯರಸ ವಾಜಸಂಹಿತೆಯ ಕಡೆಗೈತಂದ ||


ರಜೋಗುಣ, ತಮೋಗುಣಗಳ ಆಧಿಕ್ಯದಿಂದ ಇಂದ್ರಿಯ, ದೇಹಾದಿ ಸೃಷ್ಟಿವೈಶಿಷ್ಟ್ಯ-ವೈವಿಧ್ಯದಿಂದಾಗಿ, ಈಶ್ವರನು ನಾನು, ನಾನು ಭೋಗಿಸುವವನು —ಇತ್ಯಾದಿಯಾಗಿ ಭಗವದ್ರಾಮಾನುಜರಿಂದ ಹೇಳಲ್ಪಟ್ಟ ಪ್ರಕ್ರಿಯೆಯಿಂದ, ಸ್ವತಂತ್ರನು ನಾನು ಹಾಗೂ ಬೇರೆ ದೇವತೆಗಳ ಅಂಕೆಯಲ್ಲಿರುವವನು ನಾನು ಎಂದು ಭ್ರಮಿಸುವ, ತತ್ತ್ವದ ಹಸಿವೆಯಿಂದ ಬಳಿಸಾರಿದ ಶಿಷ್ಯನ ಸ್ವತಂತ್ರತೆ, ಆತ್ಮದ ಕುರಿತಾದ ಅಜ್ಞಾನಾದಿಗಳ ನಿವಾರಣೆಗಾಗಿ ಚಿತ್-ಅಚಿತ್ (ಜ್ಞಾನ-ಅಜ್ಞಾನ) ಗಳಿಂದ ಕೂಡಿದ ಪ್ರಪಂಚಕ್ಕೆ ಪರಮಪುರುಷನನ್ನಾಶ್ರಯಿಸಿದ ಸ್ವರೂಪ, ಸ್ಥಿತಿ, ಗತಿಗಳಿರುವಿಕೆಯನ್ನು ಉಪದೇಶಿಸುತ್ತದೆ.




३. माध्वभाष्यम्— वामनपण्डिताचार्यविरचितया श्रीमद्भाष्यटीकया, डा ॥ बन्नञ्जे गोविन्दाचार्यकृतया उपनिषद्भावचन्द्रिकाख्यया तत्पञ्चिकया च समलङ्कृतम्


माध्वभाष्यम्


॥ ॐ ॥ 
नित्यानित्यजगद्धात्रे नित्याय ज्ञानमूर्तये ।
पूर्णानन्दाय हरये सर्वयज्ञभुजे नमः ॥


यस्माद् ब्रह्मेन्द्ररुद्रादिदेवतानां श्रियोऽपि च ।
ज्ञानस्फूर्तिः सदा तस्मै हरये गुरवे नमः ॥


टीका— मङ्गलाचरणम्


वन्दे विष्णुं रमानाथं सम्पूर्णानन्द-चिद्-घनम् (/विग्रहम्)।
निर्दोषं सर्ववेदेड्यं सर्वेश्वरमजं सदा ॥


श्रीमदानन्द-तीर्थाख्य-(/तीर्थार्यं)त्रैलोक्याचार्यमुत्तमम् ।
सर्ववेदार्थवेत्तारं वन्दे विष्णुपरायणम् ॥


सत्तत्त्वदीपिकाचार्यान् वन्दे गुरुतमान् सदा ।
नारायणार्यांश्च गुरून् वन्दे सर्वांश्च सज्जनान् ॥


याज्ञीयोपनिषद्भाष्यं श्रीमध्वार्यकृतं शुभम् ।
व्याख्यास्यामो यथाबोधं यज्ञदेवप्रसत्तये (/यज्ञदैवप्रसक्तये)॥


स्वायम्भुवो मनुः एतैः मन्त्रैः भगवन्तम् आकूतिसूनुं यज्ञनामानं विष्णुं तुष्टाव—


"स्वायम्भुवः स्वदौहित्रं विष्णुं यज्ञाभिदं मनुः ।
ईशावास्यादिभिर्मन्त्रैस्तुष्टावावहितात्मना ॥
रक्षोभिरुग्रैः सम्प्राप्तः खादितुं मोचितस्तदा ।
स्तोत्रं श्रुत्वैव यज्ञेन तान् हत्वाऽवध्यतांं गतान् ॥
प्रादाद्धि भगवांस्तेषामवध्यत्वं हरः प्रभुः ।
तैर्वध्यत्वं तथाऽन्येषामतः कोऽन्यो हरेः प्रभुः ॥"


इति ब्रह्माण्डे । भागवते च अयम् अर्थ एव उक्तः ॥


೩. ಮಾಧ್ವಭಾಷ್ಯ— ವಾಮನಪಂಡಿತಕೃತ ಶ್ರೀಮದ್ಭಾಷ್ಯಟೀಕೆ, ಡಾ| ಬನ್ನಂಜೆ ಗೋವಿಂದಾಚಾರ್ಯರ ಉಪನಿಷದ್ ಭಾವಚಂದ್ರಿಕಾ ವ್ಯಾಖ್ಯಾನಗಳಿಂದ ಸಮಲಂಕೃತ


ಮಾಧ್ವಭಾಷ್ಯ


|| ಓಮ್ ||


ನಿತ್ಯಾನಿತ್ಯಜಗತ್ತನಾಧರಿಸಿಹ 
ನಿತ್ಯತ್ವಕೆ ಜ್ಞಾನಕೆ |
ಪೂರ್ಣಾನಂದನಿಗೆಲ್ಲ ಯಜ್ಞವುಣುವ
ಶ್ರೀಹರಿಗೆ ವಂದನೆಗಳು ||


ಆವನಿಂದಲಿ ಬೊಮ್ಮ ಇಂದ್ರಾ
ದ್ಯಖಿಳ ದೇವತೆಗಳಿಗೆ ಲಕುಮಿಗೆ
ಜ್ಞಾನಸ್ಫುರಣೆಯು ಸಂತತವು ಲಭಿಸುವುದು ಯೋಗ್ಯತೆಯೊಲ್ |
ಆ ಮಹಾಸದ್ಗುರುವಿಗಾ ಹರಿ
ವಾಸುದೇವ ಮಹಾಮಹಿಮನಿಗೆ
ಪ್ರೇಮಭಕ್ತಿಶ್ರದ್ಧೆಯಿಂದಲಿ ಕೋಟಿನಮನಗಳು ||


ಟೀಕೆಯ ಮಂಗಲಾಚರಣೆ


ವಂದಿಪೆನು ವಿಷ್ಣುವನು ಲಕುಮಿಯ
ಮಂದಿರನ ಸಂಪೂರ್ಣಸತ್ಯನ
ಸುಂದರಾನಂದೈಕಚಿದ್ಘನವಿಗ್ರಹನ ನಿರತ |
ನಿಂದನೆಗೆ ನಿಲುಕದನ ವೇದಗ
ಳಿಂದಲೆಲ್ಲೆಡೆಯಲ್ಲು ಸ್ತುತ್ಯನ
ಚಂದ್ರಸೂರ್ಯಾದ್ಯಖಿಳರೊಡೆಯನ ಜನ್ಮವಿರದವನ ||


ಮೂರು ಲೋಕಗಳಲ್ಲೂ ಶ್ರೇಷ್ಠ ಆಚಾರ್ಯರಾದ, ಸಕಲ ವೇದಾರ್ಥವೇತ್ತರಾದ, ಸದಾ ವಿಷ್ಣುಪರಾಯಣರಾದ ಶ್ರೀಮದಾನಂದತೀರ್ಥರೆಂಬವರನ್ನು ವಂದಿಸುತ್ತೇನೆ.


ತತ್ತ್ವದೀಪಿಕಾಚಾರ್ಯರ ಸಹಿತವಾಗಿ ಗುರೂತ್ತಮರನ್ನೂ, ನಾರಾಯಣಾಚಾರ್ಯಗುರುಗಳನ್ನೂ, ಎಲ್ಲ ಸಜ್ಜನರನ್ನೂ ಸದಾ ವಂದಿಸುತ್ತೇನೆ. 


ಶ್ರೀಮನ್-ಮಧ್ವಾಚಾರ್ಯವಿರಚಿತವಾದ ಶುಭಕರವಾದ ಯಾಜ್ಞೀಯೋಪನಿಷದ್ (ಯಾಜ್ಞವಲ್ಕ್ಯದೃಷ್ಟ ಶುಕ್ಲಯಜುರ್ವೇದದ ವಾಜಸನೇಯಸಂಹಿತಾಂತರ್ಗತವಾದ ಈಶಾವಾಸ್ಯೋಪನಿಷದ್ / ಈಶೋಪನಿಷದ್) ಭಾಷ್ಯವನ್ನು ಯಜ್ಞೇಶ್ವರನಾದ ಭಗವಂತನ ಪ್ರಸನ್ನತೆಗಾಗಿ ತಿಳಿದಷ್ಟುಮಟ್ಟಿಗೆ (ಅರ್ಥವಾಗುವ ರೀತಿಯಲ್ಲಿ) ವ್ಯಾಖ್ಯಾನಿಸುತ್ತೇವೆ.


ಕಲ್ಪದ ಆದಿಮನಾದ ಸ್ವಾಯಂಭುವಮನುವು ಈ ಕೆಳಗಿನ ಮಂತ್ರಗಳಿಂದ ಭಗವಂತನಾದ ಆಕೂತಿಸುತ ಯಜ್ಞನೆಂಬ ಹೆಸರಿನ ವಿಷ್ಣುವನ್ನು ತುಷ್ಟಿಗೊಳಿಸಿದನು—


"ಸ್ವಾಯಂಭುವಮನುವು ತನ್ನ ಮಗಳಾದ ಆಕೂತಿಯ ಮಗನಾದ ಯಜ್ಞನಾಮಕ ವಿಷ್ಣುವನ್ನು ಆತ್ಮನಿಯಂತ್ರಣವುಳ್ಳವನಾಗಿ (ದೇಹೇಂದ್ರಿಯಮನಬುದ್ಧ್ಯಾದಿಗಳನ್ನು ನಿಗ್ರಹಿಸಿ) ಈಶಾವಾಸ್ಯಾದಿ ಮಂತ್ರಗಳಿಂದ ಸಂತೋಷಪಡಿಸಿದನು. ಹರನಿಂದ ವಧಿಸಲ್ಪಡದಂತಹ ವರವನ್ನು ಪಡೆದಿದ್ದ ಉಗ್ರಸ್ವಭಾವದವರಾದ ರಾಕ್ಷಸರು ಮನುವನ್ನು ತಿನ್ನಲೆಂದು ಬಂದಾಗ, ಮನುವಿನ ಈ ಸ್ತುತಿಯಿಂದ ಸಂಪ್ರೀತನಾದ ಯಜ್ಞನು ಅವಧ್ಯರಾದ ಅವರನ್ನು ವಧಿಸಿ ಮನುವನ್ನು ಭಯಮುಕ್ತನನ್ನಾಗಿಸಿದನು. ಇತರರಿಂದ ಅವಧ್ಯರಾದ ಅವರು ಹರಿಯಿಂದ ವಧಿಸಲ್ಪಟ್ಟರು. ಆದ್ದರಿಂದ ಅಂತಹ ಶ್ರೀಹರಿಗೇ ಪ್ರಭುವು ಯಾರು ತಾನೇ ಇರಬಲ್ಲರು?" ಎಂಬುದಾಗಿ ಬ್ರಹ್ಮಾಂಡಪುರಾಣದಲ್ಲೂ, ಇದೇ ಅರ್ಥ ಬರುವ ವಾಕ್ಯಗಳನ್ನು ಭಾಗವತದಲ್ಲೂ ಹೇಳಿದೆ. 


೪. ವಿದ್ಯಾಮಾನ್ಯತೀರ್ಥ (ದ್ವೈತ) ಭಾಷ್ಯ (ಕನ್ನಡಮೂಲ)


ಈ ಈಶಾವಾಸ್ಯೋಪನಿಷತ್ತಿಗೆ ಸ್ವಾಯಂಭುವ ಮನುವು ಋಷಿಯು. ಯಜ್ಞ (ಈಶ) ನೆಂಬ ಹೆಸರಿನ ಪರಮಾತ್ಮನು ದೇವತೆಯು. ಅನುಷ್ಟುಪ್ ಮೊದಲಾದವು ಛಂದಸ್ಸುಗಳು. …"ಅನೇಜತ್ " ಇತ್ಯಾದಿ ಮಂತ್ರಗಳಿಂದ ತತ್ತ್ವವನ್ನು ಹೇಳುವವನಾದ ಈ ವೇದರ್ಷಿಯು, ಉಪದೇಶವಿಷಯವಾದ ತತ್ತ್ವವು ಅಧಿಕಾರಿಯಾದವನ (ಯೋಗ್ಯ ಅರ್ಹತೆಯುಳ್ಳವನ) ಮನದಲ್ಲಿ ಮಾತ್ರವೇ ಸ್ಥಿರವಾಗಿ ನೆಲೆಸುವುದೇ ಹೊರತು ಇತರರಲ್ಲಿ ನಿಲ್ಲದು ಎಂಬ ಆಶಯದಿಂದ ಈ ಉಪನಿಷತ್ತಿನ ಅಧ್ಯಯನಕ್ಕೆ ಅಧಿಕಾರ (ಯೋಗ್ಯತೆ, ಅರ್ಹತೆ) ಸಿದ್ಧಿಸಲೋಸುಗ ವಿಷಯತೃಷೆಯ ತ್ಯಾಗವನ್ನು ಈ ಮೊದಲ ಮಂತ್ರದಿಂದ ಯುಕ್ತಿಯುಕ್ತವಾಗಿ (ಸಮರ್ಥವಾಗಿ) ವಿಧಿಸುತ್ತಾನೆ(— "ಈಶಾವಾಸ್ಯಮ್ " ಎಂಬುದಾಗಿ).


४. विद्यामान्यतीर्थ-(द्वैत)-भाष्यम् (भाषान्तरितं कर्णाटभाषया)


अस्येशावास्योपनिषदः स्वायम्भुवमनू ऋषिः । यज्ञ(ईश)नामकः परमात्मा देवता । अनुष्टुभादिच्छन्दांसि । …"अनेजत् " इत्यादिमन्त्रैः तत्त्वस्य वक्ताऽयं वेदर्षिः, उपदेशविषयं तत्त्वम् अधिकारिण एव मनसि स्थास्यति नेतर इत्याशयेन एतस्या उपनिषदोऽध्ययनाधिकारसिद्ध्यर्थं, विषयतृष्णात्यागमेतयाऽऽद्यमन्त्रेण सयुक्तिकं विधत्ते(— "ईशावास्यम् " इति) ॥


4. VIDYAAMAANYA-TEERTHA(DWAITA)BHAASHYAM (Translated from Kannada)


SwAyambhuva Manu is the sage (rishi, seer) of this IshAvAsyOpanishat. Paramaatmaa by the name Yajna (Eesha) is the diety (devataa). Metres are AnuSHtup and others. …..This veda-seer, telling the tattwa (the absolute principle) in mantras like "AnEjat... ", with the hope that the teaching subject principle remains permanently only in righteous (fit) one's mind but not in others, to get the fitness or right to study this upanishat, imposes the sacrifice of subject desires by the first mantra (hymn) justifiably (— saying "Eeshaavaasyam…").

५. पञ्चाननतर्करत्नभट्टाचार्यस्य शक्तिभाष्यम्


पीठिका

https://anchor.fm/dr-krishna-moorthy-dambe/episodes/---ei511t

(Audio link)


೬. ಪ್ರಾಚಾರ್ಯ ರಾ.ದ.ರಾನಡೆಯವರ ಉಪನಿಷದ್ ರಹಸ್ಯವು


….ಈಶ ಮತ್ತು ಕೇನ ಉಪನಿಷತ್ತುಗಳು ಸ್ಕ್ಯಾಂಡಿನೇವಿಯಾದ "ಹೇಮಿಸಕ್ರಿಂಗಲಾ" ಎಂಬ ಇತಿಹಾಸಗಳಂತೆ ತಮ್ಮ ಮಂತ್ರಗಳ ಆದಿಶಬ್ದಗಳ ಹೆಸರನ್ನೇ ತಳೆದಿರುವವು. ಇದು ತೀರ ಚಿಕ್ಕದಾದರೂ ಇದರಲ್ಲಿ ಅತ್ಯಂತ ಸೂಕ್ಷ್ಮ ಜ್ಞಾನದ ಗುರುತುಗಳು ತುಂಬಿವೆ. ಹದಿನೆಂಟೇ ಮಂತ್ರಗಳಲ್ಲಿ ಆತ್ಮಸ್ವರೂಪ, ಮೋಹ-ಶೋಕಗಳನ್ನು ಲೆಕ್ಕಿಸದೆ ಶಾಂತವೃತ್ತಿಯಿಂದ ಸ್ಥಿತಪ್ರಜ್ಞನಾಗಿರುವ ಋಷಿ, ಕರ್ಮಯೋಗದ ಬೀಜಮಂತ್ರ, ಜ್ಞಾನ-ಕರ್ಮಗಳ ಸಮನ್ವಯ ಮುಂತಾದ ವಿಷಯಗಳು ಪ್ರತಿಪಾದಿಸಲ್ಪಟ್ಟಿವೆ. ಪರಸ್ಪರ ವಿರೋಧಿಯಾಗಿ ಕಾಣಿಸುವ ಜ್ಞಾನ-ಕರ್ಮಗಳ ಶ್ರೇಷ್ಠ ಸಮನ್ವಯವನ್ನು ಸುಯುಕ್ತಿಯಿಂದ ಮಾಡಲೆತ್ನಿಸುವುದು ಈ ಉಪನಿಷತ್ತಿನ ತಿರುಳು ಮತ್ತು ಮಹತ್ತ್ವದ ಮೂಲಮಂತ್ರವು. ಪರಸ್ಪರ ವಿರೋಧಿಯಾದವುಗಳಲ್ಲಿ ಈ ಬಗೆಯ ಸಯುಕ್ತಿಕ ಸಮನ್ವಯವನ್ನು ಮಾಡುವ ಮಹತ್ತ್ವದ ಪದ್ಧತಿಯ ಬಗ್ಗೆ ಭಾರತೀಯ ತತ್ತ್ವಜ್ಞಾನವು ಈಶೋಪನಿಷತ್ತಿಗೆ ಶಾಶ್ವತವಾಗಿ ಋಣಿಯಾಗಿರುವುದು.




೭. ಕನ್ನಡ ಉಪನಿಷತ್-ಪ್ರಕಾಶ
(ಶ್ರೀ ರಂಗನಾಥ ದಿವಾಕರ)
७. कन्नड-उपनिषत्-प्रकाश
(श्री रङ्गनाथ-दिवाकर)
7. Kannada Upanishat Prakaasha 
(Shree Ranganaatha Divaakara)
ಭಾಗ ೧—
please check it out

8. Sri Aurobindo's "Upanishads"


Preface 1

https://anchor.fm/dr-krishna-moorthy-dambe/episodes/The-Upanishads-Sri-Aurobindo-Preface-1-ei071r

(Audio link)


Preface 2

https://anchor.fm/dr-krishna-moorthy-dambe/episodes/Upanishads-Preface-2-Sri-Aurobindo-ei1rce

(Audio link)



9. UPANISHAD-VAAHINI (SATHYA SAI BABA)


The spread of the Vedic wisdom


The Lord, intent on the regeneration of the world, communicated 'Vedas' through 'HiraNyagarbha', who in turn passed them on to His ten mentally generated sons ('maanasa-putras') namely, Mareechi, Athri, Angeerasa, Pulaha, Pulasthya, Krathu, VasiSHTHa, Prachethasa, Bhrugu and Naarada (Shatharoopa was the only 'maanasa' daughter). 


From them, the Vedas spread among humanity, handed down from one generation to another. As time passed and ages accumulated and continents moved, some Vedas got lost or were neglected as too difficult for comprehension, and only four have survived into modern times. These four were taught in the 'Dwaapara' era (yuga) to his disciples by Ve'da Vyaasa, the greatest of the exponents of the Vedas. 


Vyaasa taught Rigveda to Paila, Yajurveda and Mahaabhaaratha to Vaishampaayana, Saamaveda to Jaimini, Atharvaveda to Sumanthu and 18 puraanas to Sootha. Once, for some reason, Vaishampaayana incurred a wrath to one of his disciples by name Yaajnavalkya. As punishment, Yaajnavalkya had to regurgitate (vomit) the Yajurveda into the custody of his guru, leave the place, and take refuge in the divine Sun (Soorya Deva), the treasure-house of the Vedas. Just then, the sages who revere the Vedas, flew into the place in the shape of partridges (thiththiri) and ate up the regurgitated Yajurveda. That particular section of the Veda is called Thaiththireeya.


Meanwhile, the Sun was pleased with the devotion and steadfastness of the unfortunate Yaajnavalkya. He assumed the form of a horse (vaaji) and blessed the sage with renewed knowledge of the Yajurveda. The version thus taught by the horse came to be called VaajasanEyi. The Yajurveda as promoted by Krishna Dwaipaayana Veda Vyaasa is called Krishna Yajurveda; that handed down by Yaajnavalkya, Shukla Yajurveda. (Krishna means black; shukla, white).


The first few sections, the Karma-kaandas of these Vedas are samhitas and braahmanas or mantras connected with physical ritual actions, the middle few sections, the Upaasanaa-kaandas are AaraNyakas connected with mental meditative actions, and the last few sections, the Jnaana-kaandas are the Upanishats which deal with spiritual wisdom.


೧೦. ಮಿ.ಚೌ.ರಾಮರಾಯರ ಅಷ್ಟೋಪನಿಷತ್


ಪೀಠಿಕೆ

https://anchor.fm/dr-krishna-moorthy-dambe/episodes/ep-ei6eja

(Audio link)


೧೧. ಉಪನಿಷತ್ತುಗಳ ಸಂದೇಶ— ಸ್ವಾಮಿ ರಂಗನಾಥಾನಂದ



ಪೀಠಿಕೆ ೧

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=OTY1MTI0OTMtOWJlNS00OGFj

(Audio link)


ಪೀಠಿಕೆ ೨

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=ZWIyYjMxMmUtNzlhMS00ZmEwLWJhOGEtYTIxYzJmNTY4ZmVj

(Audio link)


ಪೀಠಿಕೆ ೩

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=MjNhYWE2NTUtYjQyYy00NjQ0LTlmMmUtYzQ4MjY4YmMyNWYy

(Audio link)


ಪೀಠಿಕೆ ೪

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=MDg2MmQ4ZTYtOWVkNi00OGVmLWI3YTctZDY4OWM5OTk4ODcx

(Audio link)


ಪೀಠಿಕೆ ೫

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=Zjk0NmFhZWYtOGIyOS00MjQ2LWI0MWEtNDYyODhmZTg0NmY4

(Audio link)


ಪೀಠಿಕೆ ೬

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=OTA1ZjE3NWQtZGZkMC00ZWI3LWE1ZmItZGU2ZDdkNGE5MDhh

(Audio link)


ಪೀಠಿಕೆ ೭

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=YjRlYjIxNDUtZTIzNS00NWQyLWFmNTktMDZlNjM5ZjBjNDIx

(Audio link)


ಪೀಠಿಕೆ ೮

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=MTlhYTNhMDItZTJjYi00ZjI1LTgzN2QtOThjODIwOTkyZmM2


ಪೀಠಿಕೆ ೯

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=YjhmYjI5MzAtNjJkOC00NDlmLWI0MzktZWJmNzc0MGY4MDAw&pe=1&pep=0


ಪೀಠಿಕೆ ೧೦

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=YzE1Yzk1NjQtMDYzMy00NDcwLTkxMDQtOTBhMjhkMDZhOWQy&pe=1&pep=0


ಪೀಠಿಕೆ ೧೧

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=ZWFkZGM4YjUtMDc1MS00ZDIwLWE3ZDMtYWY0NTU3YTRkNDgz&pe=1&pep=0


ಪೀಠಿಕೆ ೧೨

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=ZGI1ZTdmOGYtZmMzNi00OTdlLTlhNDUtOWJjZjRhMWE1NDJl&pe=1&pep=0


ಪೀಠಿಕೆ ೧೩

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=NzE2ZjQ0MjItMDFmYy00MWRkLWI3NjctNWM5ZjEwOGY0ZDVi&pe=1&pep=0 


ಪೀಠಿಕೆ ೧೪

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=ZjllNDc2M2QtOGJlNC00ZDYyLWIyNjYtMGM4ZGRjNGEwYzRm&pe=1&pep=0 


ಪೀಠಿಕೆ ೧೫

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=NTk4ZGJiODktNmRkZS00OTQ2LTkwNDEtY2I4YTAwYzJlZjY3&pe=1&pep=0 


ಪೀಠಿಕೆ ೧೬

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=ZDgwNzhkYjItNmYyNS00NGYzLWFkNTgtYzlmMzY4YjEyOThh&pe=1&pep=0 


೧೩. ಡಿವಿಜಿಯವರ ವ್ಯಾಖ್ಯಾನ


ಈಶೋಪನಿಷತ್ ಪೀಠಿಕೆ (೧)






೧೪. ವಿನೋಬಾವರ್ಯರ ಈಶಾವಾಸ್ಯವೃತ್ತಿ
(೧) ಈಶಸ್ಮರಣಪೂರ್ವಕವಾಗಿ, ಯಥಾಶ್ರುತಿ, ಯಥಾಮತಿ, ಈಶಾವಾಸ್ಯ ಉಪನಿಷತ್ತಿನ ಮೇಲೆ ಸಣ್ಣ ವೃತ್ತಿಯನ್ನು ಬರೆಯುತ್ತಿದ್ದೇನೆ. ಅದು ಶ್ರುತಿ ಹೃದಯವನ್ನು ಅರಳಿಸುವಂತಹುದಾಗಲೆಂದು ಬಯಸುತ್ತೇನೆ. ಜೀವನದಲ್ಲಿ ತಲ್ಲೀನವಾಗಲಿ; ದೇಹಭಾವ ಸವೆಯಲಿ.


(೨) ಮೊದಲಿಗೆ ಉಪನಿಷತ್ ಶಬ್ದದ ಅರ್ಥವನ್ನು ನೋಡೋಣ. 'ಉಪ ' ಮತ್ತು 'ನಿ ' ಎಂಬ ಉಪಸರ್ಗ, 'ಸದ್ ' ಎಂಬ ಧಾತು ಸೇರಿ ಈ ಶಬ್ದ ಉತ್ಪನ್ನವಾಗಿದೆ. ಉಪನಿಷತ್ತುಗಳೇ ಸ್ವತಃ ಈ ಶಬ್ದದ ವ್ಯಾಖ್ಯೆಯನ್ನು ಹೀಗೆ ಸೂಚಿಸಿವೆ.


"ಯದಾ ವೈ ಬಲೀ ಭವತಿ, ಅಥ ಉತ್ಥಾತಾ ಭವತಿ, ಉತ್ತಿಷ್ಠನ್ ಪರಿಚರಿತಾ ಭವತಿ, ಪರಿಚರನ್ ಉಪಸತ್ತಾ ಭವತಿ, ಉಪಸೀದನ್ ದ್ರಷ್ಟಾ ಭವತಿ, ಶ್ರೋತಾ ಭವತಿ, ಮಂತಾ ಭವತಿ, ಬೋದ್ಧಾ ಭವತಿ, ಕರ್ತಾ ಭವತಿ, ವಿಜ್ಞಾತಾ ಭವತಿ "
ಛಾಂದೋಗ್ಯ ೭-೮-೧


ಯಾವಾಗ ಮನುಷ್ಯನು ಬಲವುಳ್ಳವನಾಗುತ್ತಾನೋ (ಧೈರ್ಯವುಳ್ಳವನಾಗುವನೋ), ಆಗ ಎದ್ದು ನಿಲ್ಲುತ್ತಾನೆ (ಜಾಗೃತನಾಗುತ್ತಾನೆ); ಹಾಗೆ ಎಚ್ಚರಗೊಂಡವನಾಗಿ ಗುರುಪರಿಚರ್ಯೆಯನ್ನು ಮಾಡುವವನಾಗುತ್ತಾನೆ, ಗುರುವಿನ ಸೇವೆ ಮಾಡುತ್ತಾ ಗುರುವಿನ (ಉಪ) ಸಮೀಪ ಹೋಗಿ (ಸದ್) ಕುಳಿತುಕೊಳ್ಳುತ್ತಾನೆ. ಹತ್ತಿರ ಹೋಗಿ ಕುಳಿತು ಗುರುವಿನ ಜೀವನವನ್ನು ನೋಡುತ್ತಾನೆ; ಆತನ ಉಪದೇಶ ಕೇಳುತ್ತಾನೆ, ಕೇಳಿದ್ದನ್ನು ಮನನ ಮಾಡುತ್ತಾನೆ, ಜ್ಞಾನಿಯಾಗುತ್ತಾನೆ; ಅನಂತರ ತದನುಸಾರವಾಗಿ ಕರ್ಮ ಮಾಡುತ್ತಾನೆ. ಅದರಿಂದ ಕೊನೆಗೆ ಆತನಿಗೆ ವಿಜ್ಞಾನ (ವಿಶೇಷವಾದ ತಿಳುವಳಿಕೆ) ಎಂದರೆ ಅಪರೋಕ್ಷಾನುಭೂತಿ ಉಂಟಾಗುತ್ತದೆ. ಇದೇ ಉಪನಿಷತ್ತು. 


'ನಿ ' ಎಂದರೆ 'ನಿತರಾಂ '; 'ನಿಷ್ಠೆಯಿಂದ ' ಎಂದರ್ಥ. ಈ ವ್ಯಾಖ್ಯೆಯಲ್ಲಿ ಇದು ಕಾಣದಿದ್ದರೂ ಗುರುಸೇವೆಯಲ್ಲಿ 'ನಿಷ್ಠೆ ' ಯೂ ಸೇರಿದೆ. 


(೩) ಆದರೆ ಉಪನಿಷತ್ತಿನಲ್ಲಿ ಮತ್ತೊಂದು ಕಡೆ 'ನಿ ' ಉಪಸರ್ಗಕ್ಕೆ ಸೂಚಿತವಾದ ಈ ಅರ್ಥವನ್ನು ಸ್ಪಷ್ಟಪಡಿಸುವಂಥ, 'ಸದ್ ' ಧಾತುವಿನ ಬೇರೊಂದು ಅರ್ಥವನ್ನು ತೆಗೆದುಕೊಂಡ ಬೇರೆಯದಾದ ಒಂದು ವ್ಯಾಖ್ಯೆ ಸೂಚಿಸಲ್ಪಟ್ಟಂತಿದೆ—


" ಬ್ರಹ್ಮಚಾರೀ ಆಚಾರ್ಯಕುಲವಾಸೀ ಅತ್ಯನ್ತಮ್ ಆತ್ಮಾನಮ್ ಆಚಾರ್ಯಕುಲೇ ಅವಸಾದಯನ್ "
ಛಾಂದೋಗ್ಯ ೨.೨೩.೧


ಎಂರೆ, ಬ್ರಹ್ಮಚರ್ಯವನ್ನು ಪಾಲಿಸುತ್ತಾ ಗುರುವಿನ (ಉಪ) ಸಮೀಪದಲ್ಲಿದ್ದು, ಗುರುಸೇವೆಯಲ್ಲಿ ತನ್ನನ್ನು ಅತ್ಯಂತವಾಗಿ ಎಂದರೆ (ನಿ) ನಿಃಶೇಷವಾಗಿ, ಸವೆಯಿಸಿ (ಸದ್) ಹೊಂದುವಂತಹ ರಹಸ್ಯಭೂತವಾದ ವಿದ್ಯೆಯೇ ಉಪನಿಷತ್ತು.


(೪) ಎರಡೂ ಪರ್ಯಾಯಾರ್ಥಕಗಳನ್ನು ಒಂದೆಡೆ ಸೇರಿಸಿದರೆ ಈ ರೀತಿಯಾಗಿ ಅರ್ಥ ನಿಷ್ಪತ್ತಿಯಾಗುತ್ತದೆ—


೧. ಆತ್ಮಬಲ, ೨.ಉತ್ಥಾನ, ೩. ಬ್ರಹ್ಮಚರ್ಯ, ೪. ಗುರುಸೇವೆಯಲ್ಲಿ ದೇಹವನ್ನು ನಿಃಶೇಷವಾಗಿ ಸವೆಸುವುದು, ೫. ಗುರು (ಹೃದಯ) ಸಾನ್ನಿಧ್ಯ, ೬. ಜೀವನ ನಿರೀಕ್ಷಣ, ೭. ಶ್ರವಣ, ೮. ಮನನ, ೯. ಅವಬೋಧನ (ನಿದಿಧ್ಯಾಸನ, ಯಥಾರ್ಥಜ್ಞಾನವಾಗುವಿಕೆ), ೧೦. ಆಚರಣ, ೧೧. (ಅನುಭವ) ಅನುಭೂತಿ. 


ಇಷ್ಟೆಲ್ಲಾ ಈ ಒಂದು ಸಣ್ಣ ಪದದಲ್ಲಿ ಅಡಕವಾಗಿದೆ. ಈ ಪ್ರಕಾರದಿಂದ ಉಪನಿಷತ್ ಶಬ್ದದಲ್ಲಿ ಸಮಗ್ರವಾದ ಜ್ಞಾನಮಾರ್ಗದ ಸಾಧನೆ, ಅದರಿಂದ ಲಭಿಸುವ ಜ್ಞಾನಫಲ— ಇವೆರಡೂ ಸೂಚಿತವಾಗುತ್ತವೆ. ' ಅಮಾನಿತ್ವಮ್ ', ' ಅದಂಭಿತ್ವಮ್', 'ಆಚಾರ್ಯೋಪಾಸನಮ್ ' ಇತ್ಯಾದಿ ಪ್ರಾಥಮಿಕ ಸದ್ಗುಣಗಳಿಂದ ಮೊದಲುಮಾಡಿ, ' ಅಧ್ಯಾತ್ಮಜ್ಞಾನ-ನಿತ್ಯತ್ವಂ, ತತ್ತ್ವಜ್ಞಾನಾರ್ಥದರ್ಶನಮ್ '— ಎಂಬಲ್ಲಿವರೆಗೆ ಎಲ್ಲಾ ಸಾಧ್ಯ-ಸಾಧನಗಳನ್ನೂಗೀತೆ 'ಜ್ಞಾನ ' ಶಬ್ದದಲ್ಲಿ ತುಂಬಿದೆ. ಉಪನಿಷತ್ತುಗಳಲ್ಲಿನ ವಿಷಯ-ವಿವೇಚನೆಯ ವಿಸ್ತಾರ ಈ ವ್ಯಾಖ್ಯೆಗೆ ಒಪ್ಪುವಂಥದ್ದು.


೧೩. ಡಿವಿಜಿಯವರ ವ್ಯಾಖ್ಯಾನ


ಈಶೋಪನಿಷತ್ ಪೀಠಿಕೆ (೧)

ಪೀಠಿಕೆ (೨)



೧೪. ವಿನೋಬಾವರ್ಯರ ಈಶಾವಾಸ್ಯವೃತ್ತಿ

(೧) ಈಶಸ್ಮರಣಪೂರ್ವಕವಾಗಿ, ಯಥಾಶ್ರುತಿ, ಯಥಾಮತಿ, ಈಶಾವಾಸ್ಯ ಉಪನಿಷತ್ತಿನ ಮೇಲೆ ಸಣ್ಣ ವೃತ್ತಿಯನ್ನು ಬರೆಯುತ್ತಿದ್ದೇನೆ. ಅದು ಶ್ರುತಿ ಹೃದಯವನ್ನು ಅರಳಿಸುವಂತಹುದಾಗಲೆಂದು ಬಯಸುತ್ತೇನೆ. ಜೀವನದಲ್ಲಿ ತಲ್ಲೀನವಾಗಲಿ; ದೇಹಭಾವ ಸವೆಯಲಿ.


(೨) ಮೊದಲಿಗೆ ಉಪನಿಷತ್ ಶಬ್ದದ ಅರ್ಥವನ್ನು ನೋಡೋಣ. 'ಉಪ ' ಮತ್ತು 'ನಿ ' ಎಂಬ ಉಪಸರ್ಗ, 'ಸದ್ ' ಎಂಬ ಧಾತು ಸೇರಿ ಈ ಶಬ್ದ ಉತ್ಪನ್ನವಾಗಿದೆ. ಉಪನಿಷತ್ತುಗಳೇ ಸ್ವತಃ ಈ ಶಬ್ದದ ವ್ಯಾಖ್ಯೆಯನ್ನು ಹೀಗೆ ಸೂಚಿಸಿವೆ.


"ಯದಾ ವೈ ಬಲೀ ಭವತಿ, ಅಥ ಉತ್ಥಾತಾ ಭವತಿ, ಉತ್ತಿಷ್ಠನ್ ಪರಿಚರಿತಾ ಭವತಿ, ಪರಿಚರನ್ ಉಪಸತ್ತಾ ಭವತಿ, ಉಪಸೀದನ್ ದ್ರಷ್ಟಾ ಭವತಿ, ಶ್ರೋತಾ ಭವತಿ, ಮಂತಾ ಭವತಿ, ಬೋದ್ಧಾ ಭವತಿ, ಕರ್ತಾ ಭವತಿ, ವಿಜ್ಞಾತಾ ಭವತಿ "

ಛಾಂದೋಗ್ಯ ೭-೮-೧


ಯಾವಾಗ ಮನುಷ್ಯನು ಬಲವುಳ್ಳವನಾಗುತ್ತಾನೋ (ಧೈರ್ಯವುಳ್ಳವನಾಗುವನೋ), ಆಗ ಎದ್ದು ನಿಲ್ಲುತ್ತಾನೆ (ಜಾಗೃತನಾಗುತ್ತಾನೆ); ಹಾಗೆ ಎಚ್ಚರಗೊಂಡವನಾಗಿ ಗುರುಪರಿಚರ್ಯೆಯನ್ನು ಮಾಡುವವನಾಗುತ್ತಾನೆ, ಗುರುವಿನ ಸೇವೆ ಮಾಡುತ್ತಾ ಗುರುವಿನ (ಉಪ) ಸಮೀಪ ಹೋಗಿ (ಸದ್) ಕುಳಿತುಕೊಳ್ಳುತ್ತಾನೆ. ಹತ್ತಿರ ಹೋಗಿ ಕುಳಿತು ಗುರುವಿನ ಜೀವನವನ್ನು ನೋಡುತ್ತಾನೆ; ಆತನ ಉಪದೇಶ ಕೇಳುತ್ತಾನೆ, ಕೇಳಿದ್ದನ್ನು ಮನನ ಮಾಡುತ್ತಾನೆ, ಜ್ಞಾನಿಯಾಗುತ್ತಾನೆ; ಅನಂತರ ತದನುಸಾರವಾಗಿ ಕರ್ಮ ಮಾಡುತ್ತಾನೆ. ಅದರಿಂದ ಕೊನೆಗೆ ಆತನಿಗೆ ವಿಜ್ಞಾನ (ವಿಶೇಷವಾದ ತಿಳುವಳಿಕೆ) ಎಂದರೆ ಅಪರೋಕ್ಷಾನುಭೂತಿ ಉಂಟಾಗುತ್ತದೆ. ಇದೇ ಉಪನಿಷತ್ತು. 


'ನಿ ' ಎಂದರೆ 'ನಿತರಾಂ '; 'ನಿಷ್ಠೆಯಿಂದ ' ಎಂದರ್ಥ. ಈ ವ್ಯಾಖ್ಯೆಯಲ್ಲಿ ಇದು ಕಾಣದಿದ್ದರೂ ಗುರುಸೇವೆಯಲ್ಲಿ 'ನಿಷ್ಠೆ ' ಯೂ ಸೇರಿದೆ. 


(೩) ಆದರೆ ಉಪನಿಷತ್ತಿನಲ್ಲಿ ಮತ್ತೊಂದು ಕಡೆ 'ನಿ ' ಉಪಸರ್ಗಕ್ಕೆ ಸೂಚಿತವಾದ ಈ ಅರ್ಥವನ್ನು ಸ್ಪಷ್ಟಪಡಿಸುವಂಥ, 'ಸದ್ ' ಧಾತುವಿನ ಬೇರೊಂದು ಅರ್ಥವನ್ನು ತೆಗೆದುಕೊಂಡ ಬೇರೆಯದಾದ ಒಂದು ವ್ಯಾಖ್ಯೆ ಸೂಚಿಸಲ್ಪಟ್ಟಂತಿದೆ—


" ಬ್ರಹ್ಮಚಾರೀ ಆಚಾರ್ಯಕುಲವಾಸೀ ಅತ್ಯನ್ತಮ್ ಆತ್ಮಾನಮ್ ಆಚಾರ್ಯಕುಲೇ ಅವಸಾದಯನ್ "

ಛಾಂದೋಗ್ಯ ೨.೨೩.೧


ಎಂರೆ, ಬ್ರಹ್ಮಚರ್ಯವನ್ನು ಪಾಲಿಸುತ್ತಾ ಗುರುವಿನ (ಉಪ) ಸಮೀಪದಲ್ಲಿದ್ದು, ಗುರುಸೇವೆಯಲ್ಲಿ ತನ್ನನ್ನು ಅತ್ಯಂತವಾಗಿ ಎಂದರೆ (ನಿ) ನಿಃಶೇಷವಾಗಿ, ಸವೆಯಿಸಿ (ಸದ್) ಹೊಂದುವಂತಹ ರಹಸ್ಯಭೂತವಾದ ವಿದ್ಯೆಯೇ ಉಪನಿಷತ್ತು.


(೪) ಎರಡೂ ಪರ್ಯಾಯಾರ್ಥಕಗಳನ್ನು ಒಂದೆಡೆ ಸೇರಿಸಿದರೆ ಈ ರೀತಿಯಾಗಿ ಅರ್ಥ ನಿಷ್ಪತ್ತಿಯಾಗುತ್ತದೆ—


೧. ಆತ್ಮಬಲ, ೨.ಉತ್ಥಾನ, ೩. ಬ್ರಹ್ಮಚರ್ಯ, ೪. ಗುರುಸೇವೆಯಲ್ಲಿ ದೇಹವನ್ನು ನಿಃಶೇಷವಾಗಿ ಸವೆಸುವುದು, ೫. ಗುರು (ಹೃದಯ) ಸಾನ್ನಿಧ್ಯ, ೬. ಜೀವನ ನಿರೀಕ್ಷಣ, ೭. ಶ್ರವಣ, ೮. ಮನನ, ೯. ಅವಬೋಧನ (ನಿದಿಧ್ಯಾಸನ, ಯಥಾರ್ಥಜ್ಞಾನವಾಗುವಿಕೆ), ೧೦. ಆಚರಣ, ೧೧. (ಅನುಭವ) ಅನುಭೂತಿ. 


ಇಷ್ಟೆಲ್ಲಾ ಈ ಒಂದು ಸಣ್ಣ ಪದದಲ್ಲಿ ಅಡಕವಾಗಿದೆ. ಈ ಪ್ರಕಾರದಿಂದ ಉಪನಿಷತ್ ಶಬ್ದದಲ್ಲಿ ಸಮಗ್ರವಾದ ಜ್ಞಾನಮಾರ್ಗದ ಸಾಧನೆ, ಅದರಿಂದ ಲಭಿಸುವ ಜ್ಞಾನಫಲ— ಇವೆರಡೂ ಸೂಚಿತವಾಗುತ್ತವೆ. ' ಅಮಾನಿತ್ವಮ್ ', ' ಅದಂಭಿತ್ವಮ್', 'ಆಚಾರ್ಯೋಪಾಸನಮ್ ' ಇತ್ಯಾದಿ ಪ್ರಾಥಮಿಕ ಸದ್ಗುಣಗಳಿಂದ ಮೊದಲುಮಾಡಿ, ' ಅಧ್ಯಾತ್ಮಜ್ಞಾನ-ನಿತ್ಯತ್ವಂ, ತತ್ತ್ವಜ್ಞಾನಾರ್ಥದರ್ಶನಮ್ '— ಎಂಬಲ್ಲಿವರೆಗೆ ಎಲ್ಲಾ ಸಾಧ್ಯ-ಸಾಧನಗಳನ್ನೂಗೀತೆ 'ಜ್ಞಾನ ' ಶಬ್ದದಲ್ಲಿ ತುಂಬಿದೆ. ಉಪನಿಷತ್ತುಗಳಲ್ಲಿನ ವಿಷಯ-ವಿವೇಚನೆಯ ವಿಸ್ತಾರ ಈ ವ್ಯಾಖ್ಯೆಗೆ ಒಪ್ಪುವಂಥದ್ದು.


( ೫) ಉಪನಿಷತ್ತುಗಳಿಗೆ ವೇದಾಂತವೆಂಬ ಸಂಜ್ಞೆಯೂ ಇದೆ. ಈ ಹೆಸರು ಈಶಾವಾಸ್ಯಕ್ಕೆ ಅಕ್ಷರಶಃವೇನು, ಇನ್ನೂ ವಿಶೇಷವಾಗಿಯೇ ಸಲ್ಲುತ್ತದೆ. ಕಾರಣ—ಈಶಾವಾಸ್ಯವು (ಶುಕ್ಲ)ಯಜುರ್ವೇದದ ಕಡೆಯ ಅಧ್ಯಾಯವೇ ಆಗಿದೆ. ಅಲ್ಲದೆ ವೇದಾಂತ ಶಬ್ದದಿಂದ ವೇದರಹಸ್ಯವೆಂಬ ಅರ್ಥವೂ ಅಭಿಪ್ರೇತವಾಗುತ್ತದೆ. ಈ ಅರ್ಥದಲ್ಲೂ ಈಶಾವಾಸ್ಯವು ಶಿರೋಮಣಿ ಪ್ರಾಯವಾದ ಉಪನಿಷತ್ತು , ಉತ್ತಮ ವೇದರಹಸ್ಯ. ಎಷ್ಟು ಸಣ್ಣದೋ ಅಷ್ಟೇ ಮಹತ್ತಾದ್ದು. ಜ್ಞಾನದೇವನ ಮಾತಿನಲ್ಲಿ


"ಅಂಗೇ ಸಾನೇ ಪರಿಣಾಮೇ ಥೋರ್

ಜೈಸೇ ಗುರುಮುಖೀಂಚೇ ಅಕ್ಷರ್ "


" ಆಕಾರ ಕಿರಿದು, ಪರಿಣಾಮ ಹಿರಿದು (ಮಹತ್ತಾದ್ದು); ಗುರುಮುಖದಿಂದ ಬಂದ ಅಕ್ಷರದಂತೆ (ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು)" ಎಂಬಂತೆ ಈಶಾವಾಸ್ಯದ ಆರಂಭವೂ ಯಾರೋ ಗುರು ಯಾರೋ ಶಿಷ್ಯನಿಗೆ ರಹಸ್ಯ ಜ್ಞಾನವನ್ನು ಬೋಧಿಸುತ್ತಿರುವ ಶೈಲಿಯಲ್ಲಿದೆ.


(೬) ವೈದಿಕ ವಿವೇಚನಾ ಪದ್ಧತಿಯಲ್ಲಿ ವಿಷಯದ ವಿಭಾಗವನ್ನು ತ್ರಿಕೆ, ದ್ವಿಕೆ, ಏಕಕೆಗಳಿಂದ ಮಾಡುವ ರೂಢಿಯಿತ್ತು. ಅದರಂತೆ ಇಲ್ಲೂ ಮೂರು ಮೂರು ಮಂತ್ರಗಳ ಐದು ತ್ರಿಕೆ, ಎರಡು ಮಂತ್ರಗಳ ಒಂದು ದ್ವಿಕೆ, ಒಂದು ಮಂತ್ರದ ಒಂದು ಏಕಕೆ— ಹೀಗೆ ಒಟ್ಟು ೧೮ ಮಂತ್ರಗಳನ್ನು ೭ ವಿಭಾಗ ಮಾಡಿದೆ. ಪ್ರತಿಯೊಂದು ಮಂತ್ರವೂ ಮತ್ತೊಂದು ಮಂತ್ರದ ವಿಶಿಷ್ಟ ಆಕಾಂಕ್ಷೆಯೊಂದಿಗೆ ಜೋಡಿಸಲ್ಪಟ್ಟಿದ್ದಾಗಿ, ಎಲ್ಲದರಲ್ಲೂ ಈಶ್ವರ ಭಕ್ತಿಯ ಅಖಂಡ ಸೂತ್ರ ನೇಯಲ್ಪಟ್ಟಿದೆ. 


(೭) ತತ್ತ್ವವಿಚಾರದಲ್ಲಿ ತ್ರೈಗುಣ್ಯ, ಧ್ಯಾನಯೋಗದಲ್ಲಿ ತ್ರಿಮಾತ್ರೆ, ತಾರ್ಕಿಕರ ವಾಕ್ಯತ್ರಯೀ, ಇತ್ಯಾದಿ ಕಾರಣಗಳಿಂದ ತ್ರಿಕೆಗಳು ಬಹಳ ಅನುಕೂಲತೆಯುಳ್ಳವಾಗುತ್ತವೆ. ಒಂದೇ ವಿಚಾರದಲ್ಲಿ ಪರಸ್ಪರ ವಿರುದ್ಧವಾದ, ಇಲ್ಲವೇ ಪರಸ್ಪರ ಪೂರಕವಾದ, ಅಥವಾ ಗೌಣ-ಮುಖ್ಯಗಳಾದ ಅಂಗಗಳನ್ನು ತೋರಿಸಲು ದ್ವಿಕೆಗಳು ಉಪಯುಕ್ತವಾಗುತ್ತವೆ. ಸಂಪೂರ್ಣ ವಿಚಾರವನ್ನು ಸೂತ್ರರೂಪದಲ್ಲಿ ಸಮರ್ಥಿಸಲು ಏಕಕೆಗಳು ಅನಿವಾರ್ಯ. ಇಲ್ಲಿಯ ವಿಷಯ ವಿಭಾಗದಲ್ಲೂ ಇಂತಹ ನಿರ್ದಿಷ್ಟ ವ್ಯವಸ್ಥೆ ಕಂಡುಬರುತ್ತದೆ.


(೮) ಮಂತ್ರದ ಋಷಿ, ದೇವತೆ, ಛಂದಸ್ಸುಗಳನ್ನು ತಿಳಿಯದೆ ಮಂತ್ರವನ್ನು ಪಠನಮಾಡುವವನು ನರಕದಲ್ಲಿ ಬೀಳುತ್ತಾನೆ ಎಂದು ಕರ್ಮಕಾಂಡದಲ್ಲಿ ತಿಳಿದುಬರುತ್ತದೆ. ವೇದಾಂತಕ್ಕೆ ಇಂತಹ ಭೀತಿಯೇನೂ ಇಲ್ಲವಾದರೂ ಈ ವಿಷಯ ತಿಳಿಯುವುದರಿಂದ ಉಪಯೋಗವೇ ಇದೆ. ಇಲ್ಲಿ ಋಷಿ ನಾರಾಯಣ. ಇದರ ಅರ್ಥ ಹೀಗೆ— ಇವನು ನಾರಾಯಣನ ಸ್ವರೂಪ ಹೊಂದಿದ ಒಬ್ಬ ಅಹಂ-ಶೂನ್ಯ ಋಷಿ; ಇವನ ಹೆಸರು ತಿಳಿದು ಬಂದಿಲ್ಲ. ಎಂದರೆ ಆತ ತನ್ನ ಹೆಸರನ್ನು ಅಳಿಸಿ ಹಾಕಲು ಶಕ್ತನಾಗಿದ್ದಾನೆ. ಕೆಲವರು ' ದಧ್ಯಙ್ ಅಥರ್ವಣ ' ಎಂಬವನು ಈ ಋಷಿಯೆನ್ನುತ್ತಾರೆ. ಇವನು ಮಧುವಿದ್ಯೆಯ ದ್ರಷ್ಟೃ ಎಂದು ಬೃಹದಾರಣ್ಯಕದಲ್ಲಿ ಹೇಳಿದೆ (೨.೫. ೧೬ ರಿಂದ ೧೯). ಈಶಾವಾಸ್ಯವು ಎಲ್ಲ ಉಪನಿಷತ್ತುಗಳ ಜೇನುತುಪ್ಪವಾಗಿರುವಾಗ ಈ ಕಲ್ಪನೆಯೂ ಒಪ್ಪುವುದಾಗಿದೆ. ಅಲ್ಲದೆ, ' ತ್ಯಕ್ತೇನ ಭುಂಜೀಥಾಃ ' ಎಂಬ ತಿಳಿವನ್ನು ದಧೀಚಿಯಂಥ ತ್ಯಾಗಮೂರ್ತಿಯ ಬಾಯಿಯಿಂದ ಕೇಳುವುದೂ ಹೆಚ್ಚು ಸ್ವಾರಸ್ಯವೇ ಅಹುದು. ದೇವತೆ ಪರಮಾತ್ಮಾ; ಛಂದಸ್ಸು ಅನುಷ್ಟುಪ್ ಮತ್ತು ತ್ರಿಷ್ಟುಪ್, ಆದರೆ ನ್ಯೂನವಾದದ್ದು. ೧೩ ಮಂತ್ರಗಳು ಅನುಷ್ಟುಬ್ ನಲ್ಲೂ, ೫ ತ್ರಿಷ್ಟುಬ್ ನಲ್ಲೂ ಇವೆ. ಇದರಲ್ಲಿ ೮, ೧೬ನೆಯ ಮಂತ್ರಗಳು ನ್ಯೂನವಾದ ತ್ರಿಷ್ಟುಬ್. 


( ೯) "ಪೂರ್ಣಸ್ಯ ಪೂರ್ಣಮಾದಾಯ " ಇತ್ಯಾದಿ ವಿಚಾರವನ್ನು ಮೇಲೆ ಮೇಲೆ ನೋಡಿದರೆ ವಿಚಿತ್ರವಾಗಿ ಕಾಣಬರುತ್ತದೆ. ಆದರೆ ಗಣಿತಶಾಸ್ತ್ರ ಇದನ್ನೇ ಅಕ್ಷರಶಃ ಒಪ್ಪುತ್ತದೆ. ಪೂರ್ಣಶಬ್ದದ ಬದಲು ಗಣಿತಶಾಸ್ತ್ರ 'ಅನಂತ ' ಎನ್ನುತ್ತದೆ ಅಷ್ಟೆ.


(೧೦) ವಿಶ್ವೇಶ್ವರನು ಪೂರ್ಣನು. ವಿಶ್ವವೂ ಪೂರ್ಣವು. ಪೂರ್ಣದಿಂದ ಪೂರ್ಣವು ಉತ್ಪನ್ನವಾಗಿದೆ. ಉತ್ಪತ್ತಿಯಿಂದ ಪೂರ್ಣನು ವೃದ್ಧಿಯಾಗುವುದಿಲ್ಲ. ಪ್ರಳಯದಿಂದ ಕುಗ್ಗುವುದೂ ಇಲ್ಲ. ಹೀಗೆ ಈ ಪೂರ್ಣನ ಆಟ ನಡೆದುಬಂದಿದೆ. ಇಷ್ಟು ದರ್ಶನವುಂಟಾಯಿತೆಂದರೆ ಅಶಾಂತಿಗೆ ಕಾರಣವೆ ಇರದು. ಎಂತಲೇ ಇದು ಶಾಂತಿ ಮಂತ್ರ!


(೧೧) ಪೂರ್ಣನ ಲೀಲೆಯ ದರ್ಶನವಾದ ಮೇಲೆ ಅಶಾಂತಿಯ ಕಾರಣ ನಿಲ್ಲದೆ ಹೋದರೂ, ವಿಕಾಸಕ್ಕೆ ಸಂಪೂರ್ಣವಾದ ಅವಕಾಶವಿರುತ್ತದೆ. ಹೆಚ್ಚೇನು, " ಪೂರ್ಣಾತ್ ಪೂರ್ಣಮುದಚ್ಯತೇ " ಇದು ವಿಕಾಸದ ಸೂತ್ರವೆ. ವಿಕಾಸದಲ್ಲಿ ನೂತನವಾಗಿ ಮಾಡಬೇಕಾದ್ದು ಯಾವುದೂ ಇರುವುದಿಲ್ಲ. ಒಳಗೆ ಅಡಕವಾಗಿರುವುದನ್ನು ಉತ್ ಎಂದರೆ ಹೊರಗೆ ಅಚ್ ಎಂದರೆ ವ್ಯಕ್ತಪಡಿಸುವುದೇ ವಿಕಾಸ. ಇದೇ ಶಿಕ್ಷಣಶಾಸ್ತ್ರ.


(೧೨) ಶಾಂತಿಮಂತ್ರವನ್ನು ಉಪನಿಷತ್ತಿನ ಮೊದಲಿನಲ್ಲೂ ಕೊನೆಯಲ್ಲೂ ಹೇಳುವುದು ರೂಢಿ. ಮೊದಲಿನಲ್ಲಿ ಶ್ರದ್ಧೆಯಿಂದಲೂ ಅಂತ್ಯದಲ್ಲಿ ಸಮಾಧಾನದಿಂದಲೂ ಹೇಳಬೇಕು.


(೧೩) ಉಪನಿಷತ್ತುಗಳಿಗೆ ಸೇರಿಸಿರುವ ಶಾಂತಿಮಂತ್ರಗಳನ್ನು ಉಪನಿಷತ್ ಭಾಗವೆಂದು ತಿಳಿಯುವುದಿಲ್ಲ. ಅಂತೆಯೇ ಈ ಶಾಂತಿಮಂತ್ರವೂ ಈಶಾವಾಸ್ಯದ ಹೊರಭಾಗ. ಆದರೆ ಇದು ಬೃಹದಾರಣ್ಯಕದಲ್ಲಿ ಸಮಾವಿಷ್ಟವಾಗಿದ್ದು ಉಪನಿಷದ್ಭಾಗವೇ ಆಗಿದೆ.


(೧೪) ಶಾಂತಿಮಂತ್ರದ ಉದ್ದೇಶ ಅಧ್ಯಯನಾನುಕೂಲ ಚಿತ್ತವೃತ್ತಿ ನಿರ್ಮಾಣ; ಎಂದರೆ ಪಾಠಕರಲ್ಲಿ ಪಾಠಮಾಡಲು ಅಗತ್ಯವಾದ ಮನೋಭಾವ ಉಂಟುಮಾಡುವುದಷ್ಟೇ ಇರುವುದರಿಂದ ಈ ಮಂತ್ರಕ್ಕೂ ಆ ಗ್ರಂಥದ ಪ್ರತಿಪಾದ್ಯ ವಿಷಯಕ್ಕೂ ಸಂಬಂಧವನ್ನು ಕಲ್ಪಿಸಬೇಕೆಂಬ ನಿಯಮವಿಲ್ಲ (ಬ್ರಹ್ಮಸೂತ್ರ. ೩.೩.೨೫). ಆದರೂ ಈ ಶಾಂತಿಮಂತ್ರದಲ್ಲಿ ಈಶಾವಾಸ್ಯದ ಸಕಲ ಸಾರವನ್ನೂ ಹೇಳಿದಂತಿದೆ. ಮೊದಲನೆಯ ಮಂತ್ರದಿಂದಲೇ ಇದು ತಮಗೇ ತಿಳಿದುಬರುತ್ತದೆ.


೧೫. ವಿದ್ವಾನ್ ಯು. ಪದ್ಮನಾಭ ಭಟ್ಟರ "ಈಶಾವಾಸ್ಯ ಉಪನಿಷದ್ವಿಜ್ಞಾನ (ವಸ್ತುನಿಷ್ಠ ಮನನ)"


https://anchor.fm/dr-krishna-moorthy-dambe/episodes/ep-ehnbp2 

(Audio link)



17) The Gleans of Science in the Upanishads and S'rimad Bhagavad Gita

(Dr. Padmakar Vishnu Vartak, M.B.B.S., F.U.WA.I., Ph.D. in Literature-Washington DC)


Preface Part 1

https://anchor.fm/dr-krishna-moorthy-dambe/episodes/The-Gleans-of-Science-in-the-Upanishads-Preface-1-ehnh1h

(Audio link)


Preface Part 2

https://anchor.fm/dr-krishna-moorthy-dambe/episodes/The-Gleams-of-Science-in-the-Upanishads--Preface-2-ehp8rv 

(Audio link)



೧೮. ಸ್ವಾಮಿ ಚಿನ್ಮಯಾನಂದರ ವ್ಯಾಖ್ಯಾನ


ಪೀಠಿಕೆ

https://anchor.fm/dr-krishna-moorthy-dambe/episodes/ep-ehqlgt 

(Audio link)



19. "Upanishads " — SAKSHI PUBLICATIONS


Preface 1

https://anchor.fm/dr-krishna-moorthy-dambe/episodes/Upanishads-Preface-1-ehs3pp 

(Audio link)


Preface 2

https://anchor.fm/dr-krishna-moorthy-dambe/episodes/Upanishads-Preface-2-SAKSHI-PUBLICATIONS-eht1ds 

(Audio link)


20. The Upanishads translated by Swami Paramaananda


Preface

https://anchor.fm/dr-krishna-moorthy-dambe/episodes/The-Upanishads-Preface-by-Swami-Paramaananda-ei3m58

(Audio link)


21. ISKCON commentary


Introduction

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=YjRkMWVhOGQtZDMzYy00YTYyLWE3MTItOWMwMDQzYzI1MGZj

(Audio link)


२२. उपनिषद्-ब्रह्मयोगिविरचितं भाष्यम्

(೨೨. ಉಪನಿಷದ್-ಬ್ರಹ್ಮಯೋಗಿ ವಿರಚಿತ ಭಾಷ್ಯ)


पूर्णमदः—इति शान्तिः


ॐ श्रीमद्-विश्व-अधिष्ठान-परमहंस-सद्गुरु-रामचन्द्राय नमः ।


ईशाद्यष्टोत्तरशत-वेदान्तपटलाशयम् ।

त्रैपदानन्दसाम्राज्यं कलये स्वावशेषतः ॥ १ ॥


ಮೋಕ್ಷಾನಂದಸಾಮ್ರಾಜ್ಯರೂಪವಾದ ಈಶಾದಿ ೧೦೮ ಉಪನಿಷತ್ಸಮೂಹದ ಮೂಲ ಆಶಯ / ಭಾವವನ್ನು ನನ್ನ ಬುದ್ಧಿಯ ಮಿತಿಯಲ್ಲಿ ವಿಸ್ತರಿಸುವೆನು.


नत्वा त्रिपाद्गुरुं सद्यः कैवल्यानन्दमिच्छताम् ।

ईशाद्यष्टोत्तरशत-वेदान्तार्थो निगद्यते ॥ २ ॥


ವಾಮನಾವತಾರಿಯಾಗಿ ತನ್ನ ಮೂರು ಹೆಜ್ಜೆಗಳಿಂದ ಜಗವನ್ನಳೆದು ತ್ರಿ-ವಿಕ್ರಮನೆನಿಸಿದ ಸಂಸಾರದೋಷರಹಿತನಾದ ಪರಮಪುರುಷ ಪರಬ್ರಹ್ಮವಸ್ತುವೂ ಜಗದ್ಗುರುಸ್ವರೂಪಿಯೂ ಆದ ಪರತತ್ತ್ವವನ್ನು ನಮಿಸಿ, ಕೇವಲಾದ್ವೈತಾನಂದಸ್ವರೂಪವಾದ ಕೈವಲ್ಯ / ಮೋಕ್ಷ / ಜೀವನ್ಮುಕ್ತಿಯನ್ನು ಇಚ್ಛಿಸುವವರಿಗಾಗಿ ಈಶಾದಿ ೧೦೮ ಉಪನಿಷತ್ತುಗಳ ವೇದಾಂತಪರ ಅರ್ಥವು ಹೇಳಲ್ಪಡುತ್ತದೆ.


लीलाविभूतिनिःश्वास-निगमान्त-अर्थसञ्चयम् ।

लीलया लीलाविभूति-रेव जानाति तत्त्वतः ॥ ३ ॥


ಪರಮಾತ್ಮನು ತನ್ನ ವಿಭೂತಿ / ವಿಶೇಷ ಮಹಿಮೆಯ ಲೀಲಾಮಾತ್ರದಿಂದ ನಿಃಶ್ವಾಸರೂಪವಾಗಿ ಹೊರಬಿಟ್ಟ ಶ್ರುತಿ / ವೇದ / ನಿಗಮರಾಶಿಯ ಕೊನೆಯ ಹಾಗೂ ತಾತ್ಪರ್ಯವಾದ ವೇದಾಂತ / ಉಪನಿಷತ್ತಿನ ಅರ್ಥಸಂಗ್ರಹನಿಧಿಯನ್ನು ಯಥಾರ್ಥವಾಗಿ / ತಾತ್ತ್ವಿಕವಾಗಿ / ತತ್ತ್ವನಿಷ್ಠವಾಗಿ ಆ ಲೀಲಾಮಹಿಮನೋರ್ವನೇ ತನ್ನ ಲೀಲೆಯಿಂದಲೇ ಲೀಲಾಜಾಲವಾಗಿ ಅರಿತಿರುವನು.


कृत्वा मां लेखकं लीला-भूते मय्यनुकम्पया ।

ईशाद्यष्टोत्तरशत-वेदान्तार्थं स्फुटीकुरु ॥ ४ ॥


ಅಂತಹ ಲೀಲಾವಿಭೂತಿಯುಳ್ಳ ಪರಮಾತ್ಮನೇ! ನೀನು ನನ್ನಲ್ಲಿ ಅನುಕಂಪದಿಂದ ನನ್ನನ್ನು ಲೇಖಕ / ಬರೆಯುವವನನ್ನಾಗಿ ಮಾಡಿ, ಈಶಾದಿ ೧೦೮ ಉಪನಿಷತ್ತುಗಳ ಯಥಾರ್ಥವನ್ನು ಸ್ಪಷ್ಟಗೊಳಿಸು.


इह खलु ( ಇಲ್ಲಿಯಾದರೂ), निर्हेतुजातकरुणया (ಯಾವ ಕಾರಣವೂ ಇಲ್ಲದೇ ಉಂಟಾದ ಕರುಣೆಯಿಂದ), स्वाविद्यापदगाण्डाल्यलङ्कारप्राणिपटलस्वपदप्रापकहेतुपरमदयाकळेबरेऽयं (ತನ್ನದಾದ ಅವಿದ್ಯೆ / ಅಜ್ಞಾನವೆಂಬ ಪಾದದಿಂದ ಮುನ್ನಡೆಯುತ್ತಿರುವಂತಹ ಅಲಂಕಾರಭೂಷಿತವಾದ ಪ್ರಾಣವಂತರಾಗಿ ಪ್ರಾಣಿಗಳೆನಿಸಿದ ಜೀವರ ಸಮೂಹಕ್ಕೆ ತನ್ನದಾದ ಪರಮಪದವನ್ನು ದೊರಕಿಸಿಕೊಡುವುದಕ್ಕಾಗಿ ಅತ್ಯಂತವಾದ ದಯೆಯನ್ನೇ ತನ್ನ ಶರೀರವನ್ನಾಗಿಸಿದ ಈ, (भगवती लीलाविभूतिः) ಭಗವಲ್ಲೀಲಾಮಹಿಮೆಯು, मोहभूतिपटलनवांशान् (ಮೋಹಸಂಪತ್ಸಮೂಹವನ್ನೇ ತಮ್ಮ ನವಾಂಶಚಕ್ರದಲ್ಲಿ ಹೊಂದಿರುವ), बौद्धमीमांसकद्वैत्यादिमतनैरपेक्ष्येण (ಬೌದ್ಧ-ಪೂರ್ವಮೀಮಾಂಸಕ-ದ್ವೈತಾದಿ ಮತೀಯರ ಅಪೇಕ್ಷೆಯಿರದ / ಹೊರತುಪಡಿಸಿದ), तत्तन्मतगतहेयांशापह्नवसिद्धनिष्प्रतियोगिकब्रह्ममात्रावस्थानलक्षणविकळेवरकैवल्यसत्रभाजनं करवाणीति प्रतिज्ञापूर्वकं (ಆಯಾ ಮತಗಳಲ್ಲಿನ ಗ್ರಾಹ್ಯವಲ್ಲದ ಹೇಯ ಅಂಶಗಳ ನಿರಾಕರಣೆಯಿಂದ ಸಿದ್ಧವಾದ ಪ್ರತಿವಾದವಿರದ ಬ್ರಹ್ಮಮಾತ್ರವಿರುವಿಕೆಯೆಂಬ ಲಕ್ಷಣವಾದ ದೇಹವಿರಹಿತವಾದ / ನಿರಾಕಾರ ನಿರ್ಗುಣ ಕೈವಲ್ಯಯಜ್ಞಕ್ಕೆ ಯೋಗ್ಯರನ್ನಾಗಿ / ಭಾಜನರನ್ನಾಗಿ ಮಾಡುವೆವೆಂಬ ಪ್ರತಿಜ್ಞಾಪೂರ್ವಕವಾಗಿ), " स यथार्द्रैधाग्नेरभ्याहितस्य पृथक् धूमा विनिश्चरन्ति ("ಹೇಗೆ ಒದ್ದೆ ಕಟ್ಟಿಗೆಯು ಉರಿದಾಗ ಹೊಗೆಯು ಬೇರೆಯಾಗಿ ಹೊರಬರುವುದೋ), एवं वा अरेऽस्य महतो भूतस्य निःश्वसितमेवैतदृग्वेदो यजुर्वेदः सामवेदोऽथर्वाङ्गिरस इतिहासः पुराणं विद्या उपनिषदः श्लोकाः सूत्राणि अनुव्याख्यानानि व्याख्यानानि इष्टं हुतमाशितं पायितं अयं च लोकः परश्च लोकः सर्वाणि च भूतानि अस्यैवैतानि सर्वाणि निःश्वसितानि " (ಹಾಗೆಯೋ ಎಂಬಂತೆ ಈ ಮಹತ್ತೆನಿಸಿದ ತತ್ತ್ವದ ನಿಃಶ್ವಾಸವೇ ಆದ ಈ ಋಗ್ವೇದ ಯಜುರ್ವೇದ ಸಾಮವೇದ ಅಂಗೀರಸದೃಷ್ಟ ಅಥರ್ವವೇದ ರಾಮಾಯಣ ಮಹಾಭಾರತಾದಿ ಇತಿಹಾಸ ಪುರಾಣ ವಿದ್ಯೆ ಉಪನಿಷತ್ತುಗಳು ಶ್ಲೋಕಗಳು ಸೂತ್ರಗಳು ಅನುವ್ಯಾಖ್ಯಾನಗಳು ವ್ಯಾಖ್ಯಾನಗಳು ಇಷ್ಟ (ಫಲಕಾಮನೆಗಾಗಿ), ಹುತ (ಕೇವಲ ಹವಿರ್ದಾನಕ್ಕಾಗಿ), ಆಶಿತ (ಉಣ್ಣುವುದಕ್ಕಾಗಿ), ಪಾಯಿತ (ಕುಡಿಯುವುದಕ್ಕಾಗಿ ಮಾಡುವ ಕರ್ಮಗಳೆಲ್ಲವೂ), ಹಾಗೂ ಈ ಲೋಕವೂ ಪರಲೋಕವೂ ಸರ್ವ ಚರಾಚರಗಳೂ ನಿಃಶ್ವಸಿತವಾಗಿವೆ"),    इति श्रुत्यनुरोधेन (ಎಂಬ ಶ್ರುತಿಯ ಅನುರೋಧದಿಂದ / ಆಧಾರದಿಂದ), स्वनिःश्वासवदप्रयत्नाविर्भूत-ऋग्यजुस्सामाथर्वणविभक्ताशीत्यधिकशतोत्तरसहस्रशाखामस्तकपटलसारभूतेशाद्यष्टोत्तरशतसारसङ्ग्रहायमाणमहावाक्यरत्नावलीप्रभालोचनादिपरमाद्वैतशास्त्रं (ತನ್ನ ನಿಃಶ್ವಾಸದಂತೆ ಪ್ರಯತ್ನವಿಲ್ಲದೇ ಆವಿರ್ಭವಿಸಿದ ಋಕ್-ಯಜುಸ್-ಸಾಮ-ಅಥರ್ವವೇದಗಳಲ್ಲಿ ವಿಭಕ್ತವಾದ ೧,೧೮೦ ಶಾಖೆಗಳೆಂಬ ಮಸ್ತಕಸಮೂಹದ ಸಾರವೆನಿಸಿದ ಈಶಾದಿ ೧೦೮ ಸಾರಸಂಗ್ರಹವೆನಿಸಿದ ಉಪನಿಷದ್ ಮಹಾವಾಕ್ಯಗಳೂ ರತ್ನಾವಲೀ ಪ್ರಭಾಲೋಚನಾದಿ ಪರಮಾದ್ವೈತಶಾಸ್ತ್ರವನ್ನು), प्रकटयामास । (ಪ್ರಕಟಪಡಿಸಿದನು). 



೨೩. ಉಪನಿಷದ್ಭಾವಧಾರೆ— ಸ್ವಾಮಿ ಸೋಮನಾಥಾನಂದ


ಪೀಠಿಕೆ ೧

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=NTIyY2E3ODktN2VkMy00OWJiLWFiZGItZjNhOWJlYTYyZGVl

(Audio link)


ಪೀಠಿಕೆ ೨

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=MjczOWNmMzMtNTUwOS00YTczLThmNjktMWE0NzA2ZjBjMGU5

(Audio link)


ಪೀಠಿಕೆ ೩

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=NDBjZmY5NDktODIzNS00NzkxLTgzNGMtZWY2NWYzZThhZmYw

(Audio link)


ಪೀಠಿಕೆ ೪— ಸಾಧನೆ

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=YWUwNGU3NDMtMzNlYS00MjFiLWEyNTQtNjRhYzIyYTExMmFl

(Audio link)


ಪೀಠಿಕೆ ೫— ಉಪನಿಷತ್ತಿನಲ್ಲಿ ಭಕ್ತಿ

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=ZjM3ZmM5MDQtZTY4YS00YzA4LTgzZjMtYWQ4ZTU4MTk0NjUx

(Audio link)


ಪೀಠಿಕೆ ೬— ಸಂದೇಶದ ವೈಶಿಷ್ಟ್ಯ

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=OGYzOWMwNjgtMDEzMi00ZGJhLTliM2YtOTFlYjdlMzc4MGZi 

(Audio link)


ಪೀಠಿಕೆ ೭— "ಪೂರ್ಣಮದಃ" ಶಾಂತಿಮಂತ್ರವ್ಯಾಖ್ಯಾನ

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&episode=Y2MzNDI4NmYtNjYyZi00N2M5LTkwNzgtMzJjM2VjOWQxZDRi

(Audio link)


೨೪. ಸ್ವಾಮಿ ಆದಿದೇವಾನಂದರ ಭಾಷ್ಯ

ಪೀಠಿಕೆ

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=ZDUzZjk2YjktYTQ2OC00MTBjLWFkMTMtYmQxNTRhZTIyMTZj&pe=1&pep=0 



२८. रामचन्द्रपण्डितकृता ईशावास्यरहस्यविवृतिः

೨೮. ರಾಮಚಂದ್ರಪಂಡಿತಕೃತಾ ಈಶಾವಾಸ್ಯರಹಸ್ಯವಿವೃತಿಃ

पीठिका

ಪೀಠಿಕಾ


https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=NjhhYzQ2MTEtMjE0My00MGEwLWI4MjktZjY2ZDg0MDEzYjZl&pe=1&pep=0 


೨೯. ಆನಂದಭಟ್ಟೋಪಾಧ್ಯಾಯಕೃತ ಈಶಾವಾಸ್ಯಭಾಷ್ಯ

ಪೀಠಿಕೆ

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=NTcwMWNiM2UtZjNjYi00ZDYyLWJkZDQtNzk0ZmRkZTgxMGMw&pe=1&pep=0 


೩೧. ಬನ್ನಂಜೆ ಗೋವಿಂದಾಚಾರ್ಯರ (ದ್ವೈತ)ಭಾಷ್ಯ

ಪೀಠಿಕೆ

https://podcasts.google.com/?feed=aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw&ep=14&episode=NTE0NDMwNmQtZTYyZi00Yjk4LWI0YzAtNDYyZTJjYTI1N2Yz&pe=1&pep=0 




Comments

Popular posts from this blog

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೧೩—ಲಘುನ್ಯಾಸಮನ್ತ್ರಾರ್ಥವಿಚಾರ ೮

ಲಘುನ್ಯಾಸದ ಬೆಳಕಿನಲ್ಲಿ ಶಿವದರ್ಶನ ೯—ಲಘುನ್ಯಾಸಮಂತ್ರಾರ್ಥವಿಚಾರ ೪

ತೈತ್ತಿರೀಯಕೃಷ್ಣಯಜುಸ್ಸಂಹಿತಾಭಾಷ್ಯಾರ್ಥಸಮುಚ್ಚಯಃ ೧.೧.೪